ಆ ಕಾಗಜ ಕೀ ಕಸ್ತೀ...ಬಾರಿಷ್ ಕಾ ಪಾನೀ...
ನಮ್ಮ ಬಾಲ್ಯ- ಮೊಬೈಲ್/ computer/ I pad ಗಳಲ್ಲಿ ಕಳೆದಿಲ್ಲ...ನಮ್ಮ ಗುರುತು ಯಾವುದೇ generation ದಿಂದ ಅಲ್ಲ- ನಮ್ಮ ನೆನಪುಗಳಿಂದ ಆಗುತ್ತದೆ.ಒಂದು ರೂಪಾಯಿ/ಎರಡು ರೂಪಾಯಿಗಳಿಂದ ಲೇ ಜಗತ್ತಿನ ಸುಖಗಳನ್ನೆಲ್ಲ ಸೂರೆಹೊಡೆ ದವರು ನಾವು...ಲಾಲಿಪಾಪ್/ಸುಂಟಿ ಪೆಪರ್ಮೆಂಟ/ ಹುಣಚಿಯ ಚಿಗಳಿ/ ಏನೆಲ್ಲಾ ನಮ್ಮದಾಗುತ್ತಿತ್ತು.ಎಂದಾದರೂ ಕೈಗೆ ಹತ್ತರ ನೋಟು ಹತ್ತಿತೋ ನಾವೇ ಅಂಬಾನಿ ಎಂಬ ಭಾವ...ಒಂದು ರೂಪಾಯಿ ಸಣ್ಣದಿರಬಹುದು-
ಆದರೆ ನಮಗದರ ಮೌಲ್ಯ ತುಂಬಾನೇ ಇತ್ತು.ಶಾಲೆಯ ಮಧ್ಯಾನ್ಹ ದ ಬಿಡುವು ಬರಿ ಊಟಕ್ಕಲ್ಲ-ಗೆಳೆತನವನ್ನು ಬೆಳೆಸಿ ಪಕ್ಕಾಗಿಸುವುದಕ್ಕಾಗಿ ಇರುತ್ತಿತ್ತು.ನಾವು ಒಯ್ದ ಊಟ ನಮ್ಮದೇ ಆದರೂ ಅದರ ಮೇಲೆ ನಮ್ಮ ಬೆಂಚಿನ ಎಲ್ಲರದೂ ಹಕ್ಕು ಇರುತ್ತಿತ್ತು...ಇಂದು ಊಟದ ಡಬ್ಬಿಗಳು ತುಟ್ಟಿಯಾಗಿವೆ.ನಿಜ- ಆದರೆ ಅದರಲ್ಲಿ ಕೈಹಾಕುವ ಗೆಳೆಯರು ಮಾತ್ರ ಅತಿ ಸಸ್ತಾ ಅನಿಸಿಕೊಳ್ಳುತ್ತಾರೆ.ಶಾಲೆಯ ಕೊನೆಯ ಗಂಟೆಯಾಗುತ್ತಲೇ ಪಾಟಿಚೀಲಗಳನ್ನು ಒಗೆದು ಹೊರಗೆಓಡುತ್ತಿದ್ದೆವು-ಏಕೆಂದರೆ ನಂತರ ಶಾಲೆಯಿಲ್ಲ/ ಹೆಚ್ಚು ಓದಿಲ್ಲ/ TV ಕೂಡ ಇರಲಿಲ್ಲ.Followers ಈಗಿನಂತೆ ಇರಲಿಲ್ಲ- ಆದರೆ ರಸ್ತೆಯಲ್ಲಿ ನಿಂತು ಆಟಕ್ಕೆಂದು ' ಕರೆ' ಕೊಡುವ ಗೆಳೆಯ- ಗೆಳತಿಯರಿದ್ದರು.ಯಾರದಾದರೂ ಒಂದು cycle ಖರೀದಿಯಾದರೂ ಇಡೀ ಗೆಳೆಯರ/ಗೆಳತಿಯರ test driving ಆಗುತ್ತಿತ್ತು.ಯಾರಲ್ಲಿಯೂ ಬಹು ದೊಡ್ಡ ಅಹಂಕಾರವಾಗಲೀ/ಗೆಳೆತನವೇನು ಎಂಬ ಅಸಡ್ಡೆಯಾಗಲೀ ಇರುತ್ತಿರಲಿಲ್ಲ.
ಹಿಂದಿನ ಸಂಜೆ ಕಲಹವಾದರೆ ಮಾರನೇ ಬೆಳಿಗ್ಗೆ ಸಂಧಾನ...ಅಷ್ಟೇ ಏಕೆ- ಅವೇ ದಿನಗಳು ಸುಂದರ ಸವಿನೆನಪುಗಳಾಗಿ
ಮುಂದೊಂದು ದಿನ ಕಣ್ಣೀರಿಗೆ ಕಾರಣ ವಾಗಬಹುದು ಎಂಬುದೂ ಕೂಡ ಗೊತ್ತಿರಲಿಲ್ಲ...ಆ ಮಳೆ/ ಮುರಿದ ಸೈಕಲ್/ ಮಣ್ಣು ಮಣ್ಣು ಮೇಲಂಗಿ/
ಕಿತ್ತಳೆ ತೊಳೆಯ ಪೆಪ್ಪರಮೆಂಟ್/ಕಿಟಕಿಯಿಂದ ಒಳ ತೂರಿ ಬರುವ ತುಂತುರ ಹನಿಗಳು/ಚಪ್ಪಲ್ಲಿಲ್ಲದ ಬರಿಗಾಲು/ಕಾಗದದ ದೋಣಿಗಳು/
ಜೋರು ಮಳೆಯಲ್ಲಿ ನೆನೆಯಲೆಂದೇ ಹೊರಬಿದ್ದು ಬೈಸಿಕೊಳ್ಳುವುದು ಎಲ್ಲವೂ ನೆನಪಾಗುತ್ತಿವೆ.ಆದರೆ ನಾವೀಗ ಬಹು ದೊಡ್ಡವರಾಗಿದ್ದೇವೆ...ಬಾಕಿಯದೆಲ್ಲವೂ ಬದಲಾಗಿದೆ...ನಮಗೆ ಉಳಿದುದು ಇರಲಿ/ಬಿಡಲಿ "ಬರ್ತೇನಿ ಅಮ್ಮ, ಕೇವಲ ಇನ್ನೈದೇ ನಿಮಿಷ"-ಎಂಬ ಪ್ರತಿದಿನದ ಸಂಜೆಯ ಕೊನೆಯ ಬೇಡಿಕೆ- ಆ ಐದು ನಿಮಿಷ ಇದ್ದರೆ ಸಾಕು..
No comments:
Post a Comment