Friday 31 August 2018

ಹಾಗೇ ಸುಮ್ಮನೇ....

               ಒಬ್ಬ ಬಾಲಕ ಹದಿಮೂರು ವರ್ಷದವನಾದಾಗ ಅವನ ತಂದೆ ಅವನ ಕೈಗೆ
ಒಂದು ಮಲಿನವಾದ ಬಟ್ಟೆ ಕೊಟ್ಟು ಹೇಗಾದರೂ ಅದನ್ನು ಮಾರಿ ರೂ,200/- ತರಲು ಹೇಳಿದ.ಆ
ಬಾಲಕ ಒಂದು ಗಂಟೆ ಸ್ವಚ್ಛ ಗೊಳಿಸಿ,ಇಸ್ತ್ರಿ ತೀಡಿ ಒಂದು plastic coverನಲ್ಲಿ pack ಮಾಡಿ ರೇಲ್ವೇ ನಿಲ್ದಾಣ ಬಳಿ ಒಂದೆರಡು ಗಂಟೆ ನಿಂತು ಆ ಬಟ್ಟೆಯನ್ನು ಎರಡುನೂರು ರೂಪಾಯಿಗೆ ಮಾರಿದ..
               ಮರುದಿನವೂ ಅವನ ತಂದೆ ಅಂತಹದೇ ಇನ್ನೊಂದು ಬಟ್ಟೆ ಕೊಟ್ಟು ರೂ,೫೦೦/- ತರಲು ಹೇಳಿದ...ಚತುರ ಮಗ ಅದನ್ನು ಸ್ವಚ್ಛ ಗೊಳಿಸಿ ತನ್ನೊಬ್ಬ ಬಣ್ಣಗಾರನ ಮಗನ ಸ್ನೇಹದ ಸಹಾಯದಿಂದ ಅದಕ್ಕೆ ಬಣ್ಣಹಾಕಿಸಿ ಕಲಾಕಾರನಾದ ಇನ್ನೊಬ್ಬ ಗೆಳೆಯನ
ಸಹಾಯದಿಂದ ಒಂದು ಅತ್ಯಂತ ಸುಂದರ ಚಿತ್ರ ಬಿಡಿಸಿ ಅದಕ್ಕೆ    ಬೇರೆಯೇ ರೂಪ ಕೊಟ್ಟಾಗ ಸಹಜವಾಗಿ ರೂ,೫೦೦ ಕ್ಕೆಮಾರಾಟವಾಯಿತು..
                      ಅವನ ತಂದೆಗೆ ಖುಶಿಯಾದರೂ ತೋರಗೊಡದೇ ಮೂರನೇ ದಿನವೂ ಅಂತಹದೇ ಇನ್ನೊಂದು ಬಟ್ಟೆ ಕೊಟ್ಟು ರೂ,೨೦೦೦/- ತರಲು ಹೇಳಿದ...ಅದು ಅಷ್ಟು ಸುಲಭವಲ್ಲ ಅಂದುಕೊಂಡ ಬಾಲಕ ಅರ್ಧ ದಿನಯೋಚನೆ ಮಾಡಿ film shootingನಲ್ಲಿ ಚಿಲ್ಲರೆ ಕೆಲಸ ಮಾಡಿಕೊಂಡಿದ್ದ ಗೆಳೆಯನೊಂದಿಗೆ shooting spot ಗೆ ಹೋಗಿ ತನ್ನ ನಡತೆ,ಮಾತುಗಳಿಂದ ನಾಯಕಿಯ ವಿಶ್ವಾಸಗಳಿಸಿ ಆ ಬಟ್ಟೆಯ ಮೇಲೆ ಅವಳ ಅಂದದ autograph  ಪಡೆದ.ನಂತರ ಅದನ್ನು ಇನ್ನಷ್ಟು ಅಂದಗೊಳಿಸಿ ಹರಾಜಿಗೆ ಹಾಕಿದ.ಬೆಲೆ ಏರುತ್ತ ಏರುತ್ತ    ರೂ,೧೦,೦೦೦ ಕ್ಕೆ ಏರಿದಾಗ ತಂದೆಗೆ ಹೇಳುವದೇನೂ ಉಳಿಯಲಿಲ್ಲ..
     ‌           " ಈ ಮೂರುದಿನಗಳಲ್ಲಿ ನೀನು ಏನನ್ನು ಕಲಿತೆ?"
   ‌‌‌             ‌‌‌‌  ಇದು ತಂದೆಯ ಪ್ರಶ್ನೆ ಮಗನಿಗೆ...
ಮಗ ಹೇಳಿದ..
      " ಉದ್ದೇಶವಿಲ್ಲದೇ ನನಗೆ ಈ ಕೆಲಸ ಹೇಳಿಲ್ಲ ಎಂಬುದು ತಿಳಿದಾಗ ಅದರ ಅನುಷ್ಠಾನವನ್ನೇ ಗುರಿಯಾಗಿಸಿ ಪ್ರಾಮಾಣಿಕ ಪ್ರಯತ್ನ  ಮಾಡಿದೆ..ಫಲಸಿಕ್ಕಿತು...ಎಂದ ಮಗ..
       ‌‌‌        ಹಾಗೆಯೇ ನಮ್ಮ ಬದುಕು ಕೂಡ...ಆ ದೇವರು ಒಂದು ಉದ್ದೇಶ ಇಟ್ಟುಕೊಂಡೇ ಎಲ್ಲರಿಗೂ ಒಂದು ಕಚ್ಚಾ ಬದುಕನ್ನು(ಒಂದು ಹಳೆಯ ಬಟ್ಟೆಯನ್ನು) ಕೊಟ್ಟಿರುತ್ತಾನೆ...ಅದನ್ನು ನಮ್ಮ ವಿವೇಕ ಬಳಸಿ, ಸಾಣೆ ಹಿಡಿದು ,ಹೊಳಪು ತರಿಸಿ,ಮೌಲ್ಯಹೆಚ್ಚಿಸಿಕೊಳ್ಳುವದು ನಮಗೆ ಬಿಟ್ಟ ವಿಷಯ..

( WhatsApp ಸಂದೇಶದ ಕನ್ನಡ ಅನುವಾದ )

Tuesday 28 August 2018

ಚಲುವು...

" ಇನ್ನೆಷ್ಟು ದಿನ ವಿದ್ದೀತು ನನ್ನ ಚಲುವು?.. ನನ್ನವಳು ಕೇಳಿದಳು ಇವತ್ತು.. " ನಿನಗೆಷ್ಟು ವರ್ಷ ಬೇಕು?.. ಮೂವತ್ತು? ಇಲ್ಲವೇ ಐವತ್ತು..?  ನಿನಗೆ ಎಂಬತ್ತಾಗಲಿ..ಆಗ ನೋಡು ನಿನ್ನ ಚಲುವಿನ ಗತ್ತು...  ನಿನ್ನಾಯ್ಕೆಯ, ನಿನ್ನೊಲುಮೆಯ ಬದುಕು ನಿನಗಿತ್ತ   ಗಟ್ಟಿ ಮೈಮೆರಗು... ಕಾಂತಿಯುತ ಪಕ್ವ ಸೊಬಗು...  ಮಾಗಿಯ ಮೆರಗಿಗೆ ಬೆಳ್ಳಿ ಕೂದಲು... ದಶಕಗಳ ಕಲಿಕೆ, ಕೊಡುಕೊಳ್ಳುವಿಕೆ ನಿನ್ನ ಕಣ್ಣಂಚಿನಲ್ಲಿ ಮೂಡಿಸಿದ ಮಿಂಚು ಮಂದಹಾಸ... ಎಂದಾದರೊಮ್ಮೆ ನಿನ್ನ ನೋಡಲು ಬರುವ ಮಕ್ಕಳು ಕಂಡಾರು ತಮ್ಮ ಇತಿಹಾಸ....  ನಿನಗೀಗ ಕಿಂಚಿತ್ತು ಭಯವಿಲ್ಲ....ನಿನಗೆ ಗೊತ್ತು...ಎಂಥ ಆಳಕ್ಕೆ ಬಿದ್ದರೂ ಮೇಲೆದ್ದು  ಬರುವ ಗತ್ತು...  ಇಡಿಯಾಗಿ ನುಂಗುವ ಏಕಾಂತದಲ್ಲೊಂದು  ಬಿಸಿ ಚಹಾದ ಕಪ್ಪು, ಸದ್ದಿಲ್ಲದೇ ಹೃದಯದಲ್ಲೊಂದು  ಹಾಡು ಹುಟ್ಟಿಸಬಹುದು... ನಿನ್ನ ಬೆಚ್ಚನ್ನ ಹೊದಿಕೆಯಡಿಯಲ್ಲಿ ಪುಟ್ಟ ಹಕ್ಕಿಯೊಂದು ಪ್ರೀತಿಗೆ ಚಡಪಡಿಸಬಹುದು....  ನಿನಗೆ ನೆನಪುಂಟೇ?? ಅಲ್ಲಿಯೇ, ಅದೇ ಬೆಚ್ಚನ್ನ  ಗೂಡಿನಲ್ಲಿಯೇ ನಿನ್ನ ಪ್ರೇಮದ ಹಕ್ಕಿ ಗುಟುಕು ಪಡೆದದ್ದು...ಅದನ್ನು  ನಿನ್ನೆದೆಗೆ ತಬ್ಬಿಕೊಂಡಾಗಲೇ ನಿನ್ನ ಧೀರ ,ಉದಾತ್ತ ಬದುಕೊಂದು ನೆಲೆಕಂಡದ್ದು.. ಇಲ್ಲಿ ಕೇಳು...ನಿನ್ನ ಚಲುವು..ಚರ್ಮದಾಳದ್ದಲ್ಲ( skin deep)ಅದರೊಳಗಿನ, ಹೃದಯಾಂತರಾಳದ್ದು.....  Trans-creation_Krishna koulagi  (    English ಮೂಲ__Jeannette Encinias)  _ಕವನ / ಚಿತ್ರ ಕೃಪೆ_ ಮನೋಹರ ನಾಯಕ...ಬಾಂಬೆ.

ಅಪ್ಪ ನಕ್ಕ.....

ನನ್ನ ಕರುಳಿನ ಕುಡಿ
ನನ್ನವಳ ಗರ್ಭದಲಿ
ಮೊಳಕೆಯೊಡೆದಿತ್ತು...
"ಹೆರಿಗೆಯಾದರೆ..ಗೆದ್ದೆ..."

ಅಪ್ಪ  ಹಿಂದಿನಿಂದ ನಕ್ಕ...

ಮಗ ಹುಟ್ಟಿ ತೊದಲುಮಾತು,
ತೊಡರು ಗಾಲು..
ಸದಾ ಬೇಕಿತ್ತು ಬೆಂಗಾವಲು..
"ವರ್ಷಗಳೈದು
ಕಳೆದರೆ...ಗೆದ್ದ ಹಾಗೆ..."

ಕೇಳಿತು ಅಪ್ಪ ನಕ್ಕ ಹಾಗೆ...

ಮಗನ ಸ್ಕೂಲು,ಕಾಲೇಜು...
ಅವನಿಗೇನೋ ಮೋಜು..
ನನಗೆ ಪರೀಕ್ಷೆ...ಇನ್ನಿಲ್ಲದ ನಿರೀಕ್ಷೆ...
ಯಾವಾಗ ಮುಗಿದೀತೋ...ಅನಿಸಿತ್ತು

ಅಪ್ಪ ನಕ್ಕಿದ್ದು  ಕಿವಿಗೆ ಬಿತ್ತು....

ಈಗ ಮಗನ ನೌಕರಿ..
ವಧುವಿನ ಹುಡುಕಾಟ...
ಮದುವೆ ಮುಗಿದರೆ
ಮುಗಿದಂತೆ ಹೋರಾಟ...ಅಂದುಕೊಂಡೆ..

ಅಪ್ಪ ಹುಸಿನಗೆ ನಕ್ಕದ್ದು ಕಂಡೆ...

ಕಳೆಯಿತು ಮತ್ತೊಂದು ದಶಕ...
ಈಗ ನನ್ನ ಮಗ ನನ್ನ ತೂಕ..
ಕಾಯುತ್ತಿದ್ದಾನೆ ' ಮುಕ್ತನಾಗುವ ದಾರಿ..'.
ಕೇಳಿತಾ ಯಾರೋ ನಕ್ಕ ಹಾಗೆ...?

ನಾನೇ ನಕ್ಕಿದ್ದು ಈ ಬಾರಿ...

Monday 27 August 2018

ಚಮಚ- ಗಜಿಬಿಜಿ- ಸ್ಮಾರಕ- ನಿಮ್ಮಿಷ್ಟ

"ಬೇಂದ್ರೆ ಪುಣ್ಯತಿಥಿಯಂದು
ಬೇಂದ್ರೆ ಸ್ಮಾರಕ ಕಾವ್ಯ ಗಾಯನ
ಕಾರ್ಯಕ್ರಮದ ಆಯೋಜನವಾಗಬೇಕು..
ನಿಮ್ಮದೇ  ಜವಾಬ್ದಾರಿ.ನಿಮ್ಮದೇ ಇಷ್ಟ..
ಆದರೆ ಕಾರ್ಯಕ್ರಮ ಸ್ಮರಣೀಯವಾಗಬೇಕು."
 ಬಿಸಿಬಿಸಿ ಉಪ್ಪಿಟ್ಟು ಆರಿಸಲು plateನಲ್ಲಿ
ಚಮಚ ಆಡಿಸುತ್ತ ಕುಳಿತ ನನಗೆ boss phone..
..... ಅನ್ನುವ ಮೊದಲೇ cut ಆಯ್ತು...

ತಲೆತುಂಬಾ ಗಜಿಬಿಜಿ..ಧಿಡೀರ್ ಹೇಳಿದರೆ....
ನನ್ನಕಡೆ ಮಾಯಾದಂಡವಿಲ್ಲ...ಆದರೆ
Boss ಗೆ NO ಕೇಳಿ ಗೊತ್ತಿಲ್ಲ..
ನಾನೂ ಬೇಂದ್ರೆಯವರಂತೆ ಪ್ರಾರ್ಥಿಸಬೇಕಷ್ಟೇ..
ಸ್ಫೂರ್ತಿ ಗಂಗೆ ಯನ್ನ...

" ಇಳಿದು ಬಾ ತಾಯೆ ಇಳಿದು ಬಾ...
ಸತ್ತ ನರಗಳಲಿ ಶಕ್ತಿ ತುಂಬು ಬಾ....
ಮತ್ತ boss ನನು ಮಣಿಸೆ ಬಾ...
ಕುತ್ತು ಬಂದಂತೆಯೇ ವಾಪಸ್ ಕಳಿಸ ಬಾ...
ಸುತ್ತು ಜನರೆಲ್ಲರ ಮನವ ತಣಿಸು ಬಾ..

ಬಾರೆ ಬಾ...ಬಾ ಬಾರೆ ಬಾ ಆಆಆಆಆ

ಸಲಿಗೆ- ಜೀವ - ಕಡಲು- ಚಿನಕುರುಳಿ

ಜೀವಕ್ಕೆ ಜೀವಕೊಡುವ
ಸಲಿಗೆಯಿದ್ದರೂ ಸಂಬಂಧಗಳಿಗೆ
ಒಂದು L.O.C .ಇರಲೇಬೇಕು....

ಸ್ನೇಹದ ಹಾಲುಗಡಲಲ್ಲಿ
ಹುಳಿಹಿಂಡಿ ಬದುಕು
ಭಂಗವಾಗಿಸುವದಕ್ಕೆ
ಮಹಾ-ಕಲಹವೇನೂ
ಬೇಕಾಗಿಲ್ಲ..

ಒಂದು ಚಿನಕುರುಳಿಯಂಥ
ಅಸಭ್ಯ,ಅನುಚಿತ,ಅಗೌರವದ

Joku ಸಾಕಾದೀತು..... 

ಸಿಗ್ನಲ್- ಭಾವನೆ- ಅರ್ಚನೆ-ಕಂಡರಾಗದು

" ಅರ್ಥವಿಲ್ಲದ ಅರ್ಚನೆ -ಆರಾಧನೆ-
ಗಳನ್ನು ಕಂಡರಾಗದು ನನಗೆ...ಅಂತರಂಗದ
ಭಾವನೆಗಳು ಶುದ್ಧವಾಗಿರಬೇಕು..
ಬಾಹ್ಯದ ಬಡಿವಾರ ಬಿಲ್ಕುಲ್ ಕೂಡದು..."

ಇದು ಇತ್ತೀಚೆಗೆ ಕೇಳಿ ಬರುವ ಸೊಲ್ಲು...

ಹಾ .....ಭಾಯಿ ...ಹಾ..
ಇಲ್ಲವೆಂದವರಾರು???
ಆದರೆ ಬಾಹ್ಯ ಕಂಡಂತೆ ಅಂತರಂಗ
ಕಾಣುವದಿಲ್ಲವಲ್ಲ...
ಅಂತೆಯೇ ದಯೆ, ಸಹನೆ, ಭಕ್ತಿ,
ಸಹಾನುಭೂತಿಯಂಥ ಅಂತಸತ್ವ-
ಗಳೇ ಮಾನವತೆಯ ದ್ಯೋತಕಗಳು...

ಪ್ರೀತಿ ಪ್ರೇಮಕ್ಕೆ ಚುಂಬನವಿದ್ದಂತೆ....
ಕರುಣೆಗೆ ದಾನವಿದ್ದಂತೆ....
ವಿರಕ್ತಿಗೆ ತ್ಯಾಗವಿದ್ದಂತೆ.....
ಶಕ್ತಿಗೆ ತೋಳ್ಬಲವಿದ್ದಂತೆ...
ನೋವಿಗೆ ಕಂಬನಿಯಿದ್ದಂತೆ...
ಅಮೂರ್ತ ಭಕ್ತಿಗೆ  
ಅರ್ಚನೆ.. ಆರಾಧನೆಗಳೇ

Signal  ಗಳು ......

ಚಲ್ಲಾಟ- ಮಾಯಕ- ಬಿರುಕು-ನಿಜನಾಮಧೇಯ

ಬದುಕಿನ ಪ್ರೀತಿ, ಪ್ರೇಮ
ಪ್ರಣಯಭರಿತ
ಚಲ್ಲಾಟಗಳ ಭರದಲ್ಲಿ
ಅಷ್ಟು ಇಷ್ಟು ಬಿರುಕುಗಳನ್ನು 
ಅವಗಣಿಸಿ ಹೇಗೋ ಎಂತೋ
ಓಡುತ್ತಿರುತ್ತದೆ ಬದುಕಿನ
ಜಟಕಾ ಬಂಡಿ.....

 ಅದನ್ನು ಕೊಂಚ 
ಗಂಭೀರವಾಗಿ
ಸೂಕ್ಮ್ಮ ಕೋನಗಳಿಂದ
ಅವಲೋಕಿಸಿದರೂ
ಎಂಥವರಿಗೂ
ತಿಳಿಯುತ್ತದೆ
ಬದುಕಿನ ಇನ್ನೊಂದು
ನಿಜನಾಮಧೇಯ
' ಮಾಯಕವೆಂದು...'

ತಡಬಡಾಯಿಸು- ಲೇಟೆಸ್ಟು- ತಾಳ್ಮೆ-ಕಾಯ್ದಿರಿಸು

ಉದ್ದೇಶ ಪೂರ್ವಕವಾಗಿ,
ಬಹಿರಂಗ ಪಡಿಸದೇ
ಕಾಯ್ದಿರಿಸಿದ ಸುದ್ದಿಯೊಂದನ್ನು 
ತಿಳಿಯಲೇಬೇಕೆಂಬ
ಕದನಕುತೂಹಲ
ಲೇಟೆಸ್ಟ trend ಏನೂಅಲ್ಲ...

ಹೇಗೊ ದ್ರಾವಿಡ ಪ್ರಾಣಾಯಾಮ
ಮಾಡಿ ,ವಿಷಯ ಮೂಲವನ್ನು ಶೋಧಿಸಿ,
ಅದನ್ನು ತಾಳ್ಮೆಯಿಂದ ಹತ್ತಿಕ್ಕಿ
ಇಟ್ಟುಕೊಳ್ಳದ ಚಡಪಡಿಕೆಯಿಂದ 
ಇತರರೆದುರುತಡಬಡಾಯಿಸುವದು

ಯಾರಿಗೂ ಹೊಸದೂ ಅಲ್ಲ.....

ಸುಖಾಂತ್ಯ- ಹೆಚ್ಚು ಕಡಿಮೆ- ಹಿತ್ತಲು- powderಡಬ್ಬಿ

ಹೆಚ್ಚು ಕಡಿಮೆ ಎಲ್ಲ
ನಾಟಕ ಸಿನೇಮಾಗಳು
ಸುಖಾಂತ್ಯ ಗೊಳ್ಳುವದು
ಅಲಿಖಿತ ಒಪ್ಪಂದವಿದ್ದಂತೆ....
ಕೊನೆಯಲ್ಲಿ ಒಂದು 
Group photo..... 
ಇಲ್ಲದೇ The End ಇಲ್ಲ....

ಇದು ನಾವು ಚಿಕ್ಕವರಿದ್ದಾಗಿನ
ಸಿನೇಮಾಗಳು...
ಮನೆಮಂದಿಗೆ ಹೇಳಿ
ಒಂದುಸಲ....
ಹೇಳದೇ ಹಲವಾರುಸಲ
ಹೋದದ್ದೆಷ್ಟೋ ನೆನಪಿಲ್ಲ...

ಬಂದಮೇಲೆ ಹಿತ್ತಲಲ್ಲಿ
ಅಡಗಿ ಮುಖಕ್ಕೆ
ಡಬ್ಬದಲ್ಲಿಯ
Powder ಮೆತ್ತಿಕೊಂಡು
ಕದ್ದು ಕದ್ದು ಕನ್ನಡಿ
ನೋಡಿ ನಾವೇ 
ಲೀಲಾವತಿ, ಮೈನಾವತಿ
ಎಂಬಂತೆ ಭ್ರಮಿಸಿ
ಸಂಭ್ರಮಿಸಿದ್ದು...
ಅದೆಷ್ಟು ಸಲವೋ
ಲೆಕ್ಕವಿಲ್ಲ.....

ಓಹ್....ಬಾಲ್ಯದ 
ಮುಗ್ಧ ದಿನಗಳೇ
ಒಮ್ಮೆ..ಕೇವಲ
ಒಮ್ಮೆ ಮಾತ್ರ ಮತ್ತೆ
ಬರಲಾರಿರಾ....??!
ದೇವರಾಣೆ ಇನ್ನೊಮ್ಮೆ
ಕೇಳುವದಿಲ್ಲ.....

ಕರ್ಮಕಾಂಡ- ಹಣ್ಣುಹಣ್ಣು- ತಾಯಿಬೇರು-ಎಲೆಲೆ

ತಮ್ಮೆಲ್ಲ ಉತ್ಥಾನ - ಉಡಾನಗಳಿಗೆ
ತಾಯಿಬೇರೇ ಕಾರಣವೆಂದು
ಊರ್ಧ್ವ ಶಾಖೆಗಳಿಗೆ
ಯಾರು ತಿಳಿಹೇಳಬೇಕು???

ಏನೇ  ಹೇಗೇ ಹೇಳಿದರೂ
ಹಣ್ಣುಹಣ್ಣು ಮುದುಕ- ಮುದುಕಿಯರ
ವ್ಯರ್ಥಾಲಾಪದ labelಅಂಟಿಸಿದರೆ
ಸಹಿಸುವದಾದರೂ ಹೇಗೇ??

ಇದು ನಮ್ಮ ಕರ್ಮಕಾಂಡ
ನಾವೇ ಅನುಭವಿಸಬೇಕು ಎಂದುಕೊಂಡರೂ
ಮೈಯಲ್ಲಿ ಹರಿಯುವದು ರಕ್ತ ಅಂದಮೇಲೆ
ಭಾವನೆಗಳಿಗೆ ಅಂಕುಶ ಸಾಧ್ಯವೇ....????

ಎಲೆಲೆ ಭಾವನೆಗಳೇ,  
ಹಣ್ಣಾಗಿರುವ ದೇಹಗಳಲ್ಲಿಯೇ
 ಇಷ್ಟು ಮಿಡಿಯುವ ನೀವು

ಹದಿ- ಹೃದಯಗಳಲ್ಲೇಕೆ ಕಲ್ಲಾಗುತ್ತೀರಾ???

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...