Monday, 27 August 2018

ಬಡವರು...

ಹಾಗೇ ಸುಮ್ಮನೇ....
_" ವೈನಿ,ನಿಮ್ಮ ಮಗಳ ಮದುವಿಗೆ ಏನ್ ಉಡುಗೊರೆ ತಗೊಳ್ಳಿ?
_ ನಿಂದss ನಿನಗ ಹಾಸಿ ಹೊದಿಯೋಅಷ್ಟ ಅದ, ಏನೂ ಬ್ಯಾಡಾ..ಬಂದು ಎರಡ ದಿನ ನಿಂತು ಆಶೀರ್ವಾದ ಮಾಡಿ ಹೋಗು...
                **********
_" ಏಳಬೇ ಅತ್ತಿ,ಯಾವಾಗಿಂದ ಕುಂತು ಹೋಳಿಗಿ ಮಾಡಾಕ್ಹತ್ತಿ...ಬೆನ್ ಎದಕ್ಕ ಬರ್ಬೇಕು..ಏಳು...ನಾಯಿಷ್ಟ ಮಾಡ್ತೇನಿ...
_ ನೀ ಏನ್ ಖಾಲಿ ಇದ್ದೀ ಏನು...ಮುಂಜಾನಿಂದ ಏನೆಲ್ಲ ಮಾಡಾಕ್ಹತ್ತಿ..ದಿನಾ ಯೇನ್ ಇರೂದಿಲ್ಲ..ಒಂದೊಂದ್ ದಿನಾ ಆಗೋದ ಮತ್ತ...ನಾಳೇನದ.ಆರಾಮ ತಗೊಂಡ್ರಾತು...
                ***********
-" ಏ ಮುಗೀತಿಲ್ಲೋ ,ನಡೀ ಕೆಲಸಕ್ಕ..ಕೆಲಸಕ್ಕ ಹಚ್ಗೊಂಡವರನ್ನ ಕಾಯಸ್ಬಾರ್ದು..ಹರಕತ್ ಇರ್ತದ ಅಂತ ಇಟ್ಗೊಂಡಿರ್ತಾರ...ಲಗೂ ನಡಿ..ಬಂದಮ್ಯಾಲ ಬಾಕೀದು ಮಾಡ್ಕೊಂಬೀಯಂತಿ..."
     ‌‌‌       ‌‌‌‌‌      ‌************
" _ಯಪ್ಪ,ಅಕ್ಕಗ ಮಾಡೇವಿ, ತಂಗಿಗೆ ಹೆಂಗ ಬಿಡೂದಂತ ಹುಯ್ ಅಂತ ಸಾಲಾಮಾಡಿ ನನಗ ಮದಿವ್ಯಾಗ ಏನೂ ಕೊಡಬ್ಯಾಡ್ರಿ..ಆದಷ್ಟು simple ಆಗಿ ಮಾಡ್ರಿ.ಬೇಕಂದ್ರ ಸಾಲೆಲ್ಲ ತೀರಿದ್ಮ್ಯಾಲ ಕೊಟ್ಟಿರಂತ..."
- ಹಂಗೆಂಗ ಮಾಡ್ಲಿಕ್ಕೆ ಬರ್ತದವ್ವಾ..ಹತ್ತಿಪ್ಪತ್ ಸಾವಿರ ಉಳಿಸ್ಗೊಂಡ್ರ ನಮ್ಮ ಬರಾ ಏನ್ ಹರೀಯೂದಿಲ್ಲ ನೀನೇನೂ ಚಿಂತಿ ಮಾಡಬ್ಯಾಡ..ನಾವು ದೊಡ್ಡವರಿದ್ದೇವಿ ವಿಚಾರ ಮಾಡಾಕ."
   ‌  ‌    ‌ ‌      ***********
            ‌‌    ಇವು,ಒಂದ ಕಾಲಕ್ಕ ಆಳು- ಕಾಳು ಕೆಲಸಕ್ಕ ಇಟ್ಗೊಂಡು ನೆಮ್ಮದಿಯಿಂದ ಬದುಕಿದ ಕೂಡು ಕುಟುಂಬವೊಂದು ಬರಗಾಲಕ್ಕ ಸಿಕ್ಕು ಬೆಂಗಳೂರಿಗೆ ಗುಳೆಯೆದ್ದು ಬಂದು ಒಂದು ಕೋಣೆಯ ಮನೆಯಲ್ಲಿ ೯-೧೦ ಜನ ಹೇಗೋ ಹೊಂದಿಕೊಂಡು ಇದ್ದು ಒಬ್ಬರಿಗೊಬ್ಬರು ಮಿಡಿಯುವ ಹೃದಯಗಳು...
       ‌‌       
ನನ್ನದೊಂದೇ ಆಸೆ..ಇಂಥ ಹೃದಯಮಿಡಿತದ ಮಾತುಗಳು ಬಹುಮಹಡಿ  ಕಟ್ಟಡಗಳಲ್ಲೂ ಆಗಾಗ ಎಂಬಂತಾದರೂ ಕೇಳಿಬರಲಿ ಎಂಬುದು....

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...