Monday, 27 August 2018

Chutukugalu - 2

11.     ದೇವಮಾನವ
ಬಹಳಷ್ಟು ಪಾಪಗಳ ಮಾಡಿರುವೆ ನಾನು,
ಪ್ರಯಶ್ಚಿತಕೆ ಪ್ರಯಾಗಕ್ಕೆ ನೀವ್ ಬರುವಿರೇನು?
ಇದ ನಂಬಿಬಂದೆಲ್ಲಾ ಇಲಿಗಳನು ನುಂಗಿ...
ತೇಗಿರುವ ಬೇಕ್ಕುಗಳೇ "ದೇವಮಾನವರುತಂಗಿ


12.    ಸ್ವಚ್ಚತಾ ಅಭಿಯಾನ
"ಸ್ವಚ್ಚತಾ ಅಭಿಯಾನಮನದನ್ಗಳಕೂ ಬೇಕು
ಒಳಗುದಿಗಳನೆಲ್ಲ ಗುಡಿಸಿಬಿಡಬೇಕು...
ಪರಿಶೂದ್ಧವಾದರೆ, ನಮ್ಮಂತರಂಗ...
ಶಾನ್ತಿ ನೆಮ್ಮದಿಗಳಿಗೆ ಬರದೆಂದು ಭಂಗ...


13.    ಪೋಷಣೆ 
ಮಕ್ಕಳನು ಬೆಳೆಸುವದು ಇಂದು ಬಲು ಕಷ್ಟ...ನೂರೆಂಟು ಸೆಳೆತಗಳುಎಲ್ಲಾ ಅವರಿಷ್ಟ...ಆನೆ ನಡೆದದ್ದೇ ದಾರಿ... ತಡೆಯುವವರಾರುತಡೆಯದಿದ್ದರೆ ಮಾತ್ರ ಅಪಾಯ ಹಲವಾರು...


14.    ಅಂದು -  ಇಂದು 
ಸತ್ಯವಾಕ್ಯಕೆ ಮೆಚ್ಚಿ ಅಂದು ಹುಲಿರಾಯ
ಪುಣ್ಯಕೋಟಿಯ  ಉಳಿಸಿ ಮಾಡಿದನು ಸಹಾಯ...
ಸತ್ಯ ನುಡಿದರೆ  ಇಂದು  ಏನಾಗಬಹುದು?
ಬಾಪುಜಿಯವರಂತೆ  ಬಲಿಯಾಗಬಹುದು!


15. ಹಣ 
ಹಣವಿರುವದು ನಮಗಾಗಿನಾವು ಹಣಕ್ಕಲ್ಲಬಾಲವೇ ದೇಹವನು ಎಳೆಯುತಿಹುದಲ್ಲ!ಹಣವು ಬೇಕೇಬೇಕು ಒಂದು ಮಿತಿಯಲ್ಲಿ...ಅದರ ಸುಳಿಯಲ್ಲಿ ಸಿಲುಕಿದರೆ ಬೇರೆ ಬದುಕೆಲ್ಲಿ!?


16. ಸಂಸತ್ತು 
ದಿನಕ್ಕೊಂದು ಹೇಳಿಕೆಮರುದಿನ ವಾಪಸಾತಿ...ವಾದಪ್ರತಿವಾದಗಳಲ್ಲಿ ಕಲಾಪಗಳ ಆಹುತಿ...ಪ್ರತಿ ಸಂಸದಗೂ ತಾ ಹಿಡಿದದ್ದೇ ಹಾದಿ...ಒಟ್ಟಿನಲ್ಲಿ ಎಲ್ಲರೂ ಅವಕಾಶವಾದಿ...


17. ಭಯೋತ್ಪಾದನೆ ಭಯೋತ್ಪಾದನೆ ಒಂದು ಬಹು ದೊಡ್ಡ ಪಿಡುಗುಜನಮಾನಸದಲ್ಲಿ - ಸದಾಕಾಲ - ನಡುಗುಮತಾಂಧತೆಯ ಕಿಚ್ಚಿಗೆ ಮುಗ್ಧ ಮಕ್ಕಳೂ ಬಲಿ...ಮಾನವನ ಕ್ರೌರ್ಯಕ್ಕೆ ಎಲ್ಲಿದೆ ಅಂತ್ಯ ಹೇಳಿ?


18. ಶಿಕ್ಷಣ
ಎಲ್ಲೆಡೆಗೆ ಶಿಕ್ಷಣದ ವ್ಯಾಪಾರೀಕರಣ...
ಹಣಗಳಿಕೆಯ ಭರದಲ್ಲಿ ಮೂಲೋದ್ಯೇಶ ಹರಣ...
ನಾವೇ ಬೆಳೆದದ್ದು - ಮುಂದೆ - ನಾವುಣ್ಣಬೇಕು
ಬೇಡವೆಂದಾದರೆ - ಈಗಲೇ - ಕಣ್ತೆರೆಯಬೇಕು


19. ಬದುಕು
"ಬಾಲ್ಯದಲಿ ಹುಡುಗಾಟಯೌವನದಿ 'ಮತ್ತು'
ಮುಪ್ಪಿನಲಿ ತೊಳಲಾಟಬೇರೆ ಏನಿತ್ತು?
ಎಂದು ಕೊರಗುವ ಮೊದಲೇ ಒಂದಿಷ್ಟು ಬಾಳು...
ಪಕ್ಕಕ್ಕೆ ಸರಿಸಿಬಿಡು ಪ್ರತಿದಿನದ ಗೋಳು...


20. ಸ್ವಗತ
"ಶೋಷಣೆಯ ಜಗತ್ತಿಗೆ ನಾನೇಕೆ ಬಂದೆ?
ಎಲ್ಲಾ ಗೊತ್ತಿದ್ದವನು ' ನೀನೇಕೆ ತಂದೆ?
ಬಹಳಷ್ಟು ಹೆಣ್ಣುಗಳು ಹಲುಬುತಿರಬಹುದು...
ಮರಳಿ ಸೇರಲು ' ಗರ್ಭಹುಡುಕುತಿರಬಹುದು!

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...