Monday, 27 August 2018

ಕರಿ- ಲಡಕಾಸಿ- ಹಟ- ಬಿಂಕ

ಮುಖದ ಬಣ್ಣ ಬಿಳಿ
ಹೃದಯದ್ದು ಕರಿ...

ಸ್ವಭಾವದಲ್ಲಿ ಸಲ್ಲದ ಬಿಂಕ..
ಧ್ವನಿ ಪಾಂಚಜನ್ಯ ಶಂಖ.....

ಹಟಯೋಗದಲ್ಲಿ ಚಂಡಿ...
ಎಲ್ಲರೂ ಊರಲೇಬೇಕು ಮಂಡಿ.....

ಇಂಥ ಲಡಕಾಸಿ ಹುಡುಗಿಗೆ
ಶ್ರೀರಾಮನಂಥ ಗಂಡ....

ಕಾದು ನೋಡಬೇಕಾಗಿದೆ...

ವನವಾಸ ಅವನಿಗೋ...

ಋಷ್ಯಾಶ್ರಮ ಅವಳಿಗೋ....

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...