Monday, 27 August 2018

ಈ mobile

ಹಾಗೇ ಸೊಕ್ಕಿಲ್ಲ..
ಏನೆಲ್ಲವನ್ನೂ ತಿಂದು ಸೊಕ್ಕಿದೆ...
ಏನೆಲ್ಲವನ್ನೂ ನುಂಗಿ
ನೀರು ಕುಡಿದಿದೆ...

ಕೈಯ ಗಡಿಯಾರ..
ಟಾರ್ಚ ಲೈಟ್...
ಪತ್ರಿಕೆಗಳನ್ನು...
ಪುಸ್ತಕಗಳನ್ನು...
ತಿಂದಿದೆ..

ರೆಡಿಯೋವನ್ನು...
ಟೇಪ್ ರಿಕಾರ್ಡರ್ ಅನ್ನು..
ಕ್ಯಾಮರಾವನ್ನು..
ಕ್ಯಾಲ್ಕುಲೇಟರನ್ನು...
ತಿಂದಿದೆ...

ನೆರೆಹೊರೆಯವರ ಗೆಳೆತನವನ್ನು...
ಜನರ ಸಂಪರ್ಕವನ್ನು..
ನಮ್ಮೆಲ್ಲರ ಸಮಯವನ್ನು..
ಮನಸ್ಸಿನ ಶಾಂತಿಯನ್ನು
ತಿಂದಿದೆ...

ಗಳಿಸಿದ ಹಣವನ್ನು..
ಉಳಿಸಿಕೊಂಡ ಸಂಬಂಧಗಳನ್ನು...
ನೆನಪಿನ ಶಕ್ತಿಯನ್ನು...
ಆರೋಗ್ಯದ ಯುಕ್ತಿಯನ್ನು...
ತಿಂದಿದೆ...

ಇಷ್ಟೆಲ್ಲ ತಿಂದೂ
ತಾನು ಮಾತ್ರ
Smart ಆಗಿಯೇ
ಉಳಿದಿದೆ...
ಜಗತ್ತನ್ನೇ
ಹುಚ್ಚಾಗಿಸಿದೆ...

ಎಲ್ಲಿಯವರೆಗೆ
ಫೋನು wireಗಳಿಗೆ
ಬಿಗಿಯಲ್ಪಟ್ಟಿತ್ತೋ
ಮನುಷ್ಯ ಸ್ವತಂತ್ರನಾಗಿದ್ದ...
ಈಗ..
ಫೋನ್ ಸ್ವತಂತ್ರವಾಗಿದೆ..
ಮನುಷ್ಯ ಅದರಿಂದ
ಬಂಧಿಸಲ್ಪಟ್ಟಿದ್ದಾನೆ..

ಈಗೀಗ ಮಾತುಗಳಲ್ಲ,..
ಬೆರಳುಗಳೇ
ಸಂಬಂಧಗಳನ್ನು
ನಿಭಾಯಿಸುತ್ತವೆ...
touch screen
ನಲ್ಲಿ...
ಆದರೆ touch ನಲ್ಲಿ
ಮಾತ್ರ
ಯಾರೂ ಇಲ್ಲ...

( ಹಿಂದಿಯಿಂದ_ Trans- creation)

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...