Monday, 27 August 2018

ಹೀಗೊಂದು ಸಂವಾದ

ಹೀಗೊಂದು ಸಂವಾದ...
ನಾನು ದೇವರಿಗೆ ಅಂದೆ,
"ನನ್ನೆಲ್ಲ ಜನರನ್ನು
ಸುಖವಾಗಿಡು ತಂದೆ..."
"ಆಯ್ತು, ಆದರೆ ಒಂದು ಶರ್ತು..
ಕೇವಲ ನಾಲ್ಕು ದಿನ ಮಾತ್ರ..
ನನ್ನದಿದು ಸಿದ್ಧ ಸೂತ್ರ..."
"ಸರಿ, ಕೇಳು,
ಬೇಸಿಗೆಯ ದಿನ
ಚಳಿಗಾಲದ ದಿನ
ಮಳೆಗಾಲದ ದಿನ..
ಇವಾವೂ ಅಲ್ಲದೊಂದು
ಸಾದಾದಿನ..."
"ಗೊಂದಲದಲ್ಲಿ
ದೇವ ಹೇಳಿದ,
ಇಲ್ಲ.ಇಲ್ಲ..ಕೇವಲ ಮೂರೇ ದಿನ.."
"ಆಯ್ತು,
ಕೇಳು..
ನಿನ್ನೆ,ಇಂದು, ನಾಳೆ..."
"ದೇವನಿಗೇ ಏನೂ
ತಿಳಿಯದ ಭಾವ..
ಮರೆತಿದ್ದೆ..
ಎರಡೇ ದಿನ
ದಿನ ಅನ್ನುವವನಿದ್ದೆ..."
"ಸರಿ, ಹಾಗಾದರೆ..
ಇಂದು ಮತ್ತು ನಾಳೆ.."
ದೇವನಿಗೆ ಫಜೀತಿ..
ಬದಲಿಸಿದ ಮತ್ತೆ ನೀತಿ...
"ಒಂದೇ ದಿನ..
ಉಳಿಸು ನನ್ನ ಮಾನ..."
"ಆಯ್ತು..ಹಾಗಾದರೆ
ಪ್ರತಿದಿನ..."
ದೇವ ಸೋತು ಹೋದ...
ಹೇಳಿದ...
ಆಯ್ತು, ಮಹಾಶಯ..
ನೀನು ಛಲ ಬಿಡದ ತ್ರಿವಿಕ್ರಮ..
ಹೋಗು,ಫಲಿಸುತ್ತದೆ
ನಿನ್ನ ಆಶಯ...
"ತಥಾಸ್ತು.."

No comments:

Post a Comment

*Lovely poem* When wrinkles bloom and joints protest,   Don’t teach the world—just give it rest.   Even if you're right (and you often a...