Saturday 29 September 2018

ಹಾಗೇ ಸುಮ್ಮನೇ....

ಹಿಂದಿರುಗಿ ಒಮ್ಮೆ ನೋಡಿದರೆ ೧೯೪೦ ರಿಂದ ೧೯೮೫ ರ ನಡುವೆ ಹುಟ್ಟಿದವರೆಲ್ಲ ನಿಜವಾಗಿ ಪುಣ್ಯವಂತರೆಂದೇ ಹೇಳಬೇಕು...ನಾವು ಬದುಕಿದ ರೀತಿಯೆ ಅದಕ್ಕೆ ದೊಡ್ಡ ಪುರಾವೆ...

  * ಹೊರಗೆ ಬಯಲಿನಲ್ಲಿ ಆಡುವಾಗ ಆಗಲಿ,ಗೊತ್ತು ಗುರಿಯಿಲ್ಲದೇ ಸೈಕಲ್ ತುಳಿಯುವಾಗ ಆಗಲೀ ಎಂದೂ helmet ಧರಿಸುವ ಪ್ರಮೇಯ ಬರಲಿಲ್ಲ.

*ಶಾಲೆ ಬಿಟ್ಟ ಮೇಲೆ ಕತ್ತಲು ಕವಿಯುವವರೆಗೂ ಬಟಾಬಯಲಿನಲ್ಲಿಯೇ ಆಟ...ಒಬ್ಬರಿಗೊಬ್ಬರು ಕಾಣದಷ್ಟು ಕತ್ತಲಾವರಿಸಿದ ಮೇಲೇಯೇ ಮನೆಯ ಧ್ಯಾನ....

* ನಮ್ಮ ಸಹವಾಸ ನಿಜವಾದ ಸ್ನೇಹಿತರ ಜೊತೆಗೆ...Internet friends ಜೊತೆಗಲ್ಲ..

*ನೀರಡಿಕೆಯಾದಾಗಲೆಲ್ಲ ನಳಕ್ಕೆ ಬೊಗಸೆಯೊಡ್ಡಿ ನೀರು ಕುಡಿದವರು ನಾವು..ಬಾಟಲಿ ಕಂಡವರಲ್ಲ..

*ಒಂದು glass juiceನ್ನು ನಾಲ್ವರು ಹಂಚಿ ಕುಡಿಯುವದು ಏನೂ ವಿಶೇಷವಾಗಿರಲಿಲ್ಲ ನಮಗೆ...

*ಮೂರು ಹೊತ್ತೂ ಅನ್ನ ಉಂಡೂ ಸಪೂರವಾಗಿದ್ದವರು..

*ಕಾಲಲ್ಲಿ ಚಪ್ಪಲ್ ಇಲ್ಲದೇ ಎಷ್ಟೋ ಮೈಲು ನಡೆಯುವದೆಂದೂ ನಮಗೆ ಸಮಸ್ಯೆಯೆನಿಸಿದ್ದೇಯಿಲ್ಲ...

*ಆರೋಗ್ಯ ವರ್ಧಕ ಪೇಯಗಳ ಕಲ್ಪನೆಯಿರದ ಕಾಲವದು...ಮತ್ತೊಂದು ಕಪ್ ಚಹಕ್ಕೂ ತತ್ವಾರ...

* ನಮ್ಮ ಆಟಿಕೆಗಳೆಂದೂ ಪೇಟೆಯಿಂದ ಬಂದವುಗಳಲ್ಲ...ಮಣ್ಣು,ಕಲ್ಲು,ಬೆಂಡು,ದಂಟು ಮುಂತಾದವುಗಳಿಂದ ನಾವೇ ಮಾಡಿಕೊಂಡ ಆಟಿಗೆಗಳದ್ದೇ ಸಾಮ್ರಾಜ್ಯ...

*ನಮ್ಮ ಪಾಲಕರಿಗೆ ಕೊಡಲು ದುಡ್ಡಿರಲಿಲ್ಲ..ಆದರೆ ಯಥೇಚ್ಛ ಪ್ರೀತಿಯಿತ್ತು...

*ಯಾವುದೇ ಗೆಳೆಯ, ಗೆಳತಿಯ ಮನೆಗೆ ಹೇಳಿ ಕೇಳಿ ಹೋಗುವ ಪರಿಪಾಠವಿರಲಿಲ್ಲ.ಎಲ್ಲರ ಮನೆಯ ಬಾಗಿಲು ಎಲ್ಲರಿಗೂ ಮುಕ್ತ...
*
ಯಾರೊಬ್ಬರ ಸುಖವೇ ಇರಲಿ ದುಃಖವೇ ಇರಲಿ ಅದು ಎಲ್ಲರದೂ...ಸಂಪೂರ್ಣ ಸಾರ್ವತ್ರಿಕ...

*ಆಗ ಫೋಟೋಗಳು ಅಪರೂಪ..ಇದ್ದರೂ ಕಪ್ಪು ಬಿಳುಪು ಚಿತ್ರಗಳು ಆದರೆ ಅನುಭವಗಳು ಸಂಪೂರ್ಣ ವರ್ಣಮಯ...

*ನಮ್ಮದು ವಿಶಿಷ್ಟ ತಲೆಮಾರು...ನಾವು ನಮ್ಮ ಹಿರಿಯರ ಮಾತನ್ನೂ ಪಾಲಿಸುತ್ತಿದ್ದೆವು.

*ಈಗ ಮಕ್ಕಳನ್ನೂ ಅನುಸರಿಸಿಕೊಂಡು ಹೋಗುತ್ತಿದ್ದೇವೆ...

*ನಮ್ಮ ಕಾಲಕ್ಕೆ ಸಂಪೂರ್ಣ ಅಪರಿಚಿತವಾಗಿದ್ದ ತಂತ್ರಜ್ಞಾನ ಕ್ಕೆ ಹೊಂದಿಕೊಂಡು,ವೇಗದ ಬದುಕನ್ನು ಬಾಚಿಕೊಂಡು ನಿಮ್ಮೊಂದಿಗೆ ಪಯಣಿಸುತ್ತಿದ್ದೇವೆ..

* ಬೇಕೆಂದವರಿಗೆ ಬದುಕಿನ ಸಮರ್ಥ ದಾರಿಯನ್ನು ತೋರಿಸುತ್ತಿದ್ದೇವೆ...

* ಬಹುಶಃ ಇಂಥದೊಂದು ತಲೆಮಾರು ಉಳಿದವರಿಗಿನ್ನು ಕೇವಲ ನೆನಪು ಮಾತ್ರ..

(ಇಂಗ್ಲಿಷ ಸಂದೇಶದ ಅನುವಾದ- ಕೃಷ್ಣಾ ಕೌಲಗಿ...)

Friday 28 September 2018

ಹಾಗೇ ಸುಮ್ಮನೇ_

( ಮಹಿಳೆಯರಿಗಾಗಿ ವಿಶೇಷ...)

So nice of this person to post recipes for all the powders- rasam, saaru, sambar, palya, puliyogare, bisibele bhat, pickle etc etc. Haven't tried them. It was in a group. Pasting them here-

Rathna Nagaraj
#ಮನೆಯಲ್ಲೇ ಪುಡಿ ಮಾಡಿ ಮೋಡಿ ನೋಡಿ🙂👌

ರಸಂ ಪೌಡರ್
ಒಂದು ಪಾವು ಜೇರಿಗೆ, ಕಾಲು ಪಾವು ಕಾಳು ಮೆಣಸು, ತಲಾ ಒಂದು ಚಮಚ ಸಾಸಿವೆ, ಮೆಂತ್ಯ, 25 ಬ್ಯಾಡಗಿ ಒಣಮೆಣಸಿನಕಾಯಿ, ಕಾಲು ಚಮಚ ಇಂಗು, ಅರ್ಧ ಇಂಚು ಚಕ್ಕೆ ಇವಿಷ್ಟನ್ನೂ ಹರಿದು ಪುಡಿ ಮಾಡಿ. (ಮೂರರಿಂದ ನಾಲ್ಕು ಜನಕ್ಕೆ ಅಡಿಗೆ ತಯಾರಿಸುವಾಗ ಈ ಪುಡಿಯಲ್ಲಿ ಎರಡು ಚಮಚ ತೆಗೆದುಕೊಳ್ಳಿ)

***
ಸಾರಿನ ಪುಡಿ

250 ಗ್ರಾಂ ಧನಿಯಾ, 100 ಗ್ರಾಂ ಬ್ಯಾಡಗಿ ಮೆಣಸಿನಕಾಯಿ, 100 ಗ್ರಾಂ ಗುಂಟೂರು ಮೆಣಸಿನಕಾಯಿ, ಅರ್ಧ ಪಾವು ಜೀರಿಗೆ, ಕಾಲು ಪಾವು ಮೆಂತ್ಯೆ, ನಾಲ್ಕು ಚಮಚ ಸಾಸಿವೆ, ಒಂದು ಚಮಚ ಕರಿ ಮೆಣಸು, ಕಾಲು ಚಮಚ ಇಂಗು, ತೊಳೆದು ಒಣಗಿಸಿದ ಒಂದು ಕಟ್ಟು ಕೆರಿಬೇವು ಎಲ್ಲವನ್ನು ಚೆನ್ನಾಗಿ ಹುರಿದು ಪುಡಿ ಮಾಡಿ.
ಹೀಗೂ ಮಾಡಬಹುದು
250 ಗ್ರಾಂ ಧನಿಯಾ, 100 ಗ್ರಾಂ ಬ್ಯಾಡಗಿ ಮೆಣಸಿನಕಾಯಿ, 100 ಗ್ರಾಂ ಜೀರಿಗೆ, 50 ಗ್ರಾಂ ಮೆಂತ್ಯೆ, 25 ಗ್ರಾಂ ಸಾಸಿವೆ, ಒಣಗಿದ ಕರಿಬೇವು, ಚಿಟಿಕೆ ಇಂಗು ಇವಿಷ್ಟನ್ನೂ ಹುರಿದು ಪುಡಿ ಮಾಡಿ.

***
ಮಸಾಲೆ ಸಾರಿನ ಪುಡಿ

250 ಗ್ರಾಂ ಧನಿಯಾ, 25 ಗ್ರಾಂ ಬ್ಯಾಡಗಿ ಮೆಣಸಿನಕಾಯಿ, 100 ಗ್ರಾಂ ಜೀರಿಗೆ, 50 ಗ್ರಾಂ ಮೆಂತ್ಯೆ, 25 ಗ್ರಾಂ ಸಾಸಿವೆ, ಕಡಲೇಕಾಯಿ ಬೀಜದ ಗಾತ್ರದ ಇಂಗು, ಒಂದು ಕಟ್ಟು ಕರಿಬೇವು, ಒಂದು ಚಮಚ ಕರಿಮೆಣಸು, ಒಂದಿಂಚು ಉದ್ದದ ಚಕ್ಕೆ, ಒಂದು ಲವಂಗ, ಒಂದು ಮೊಗ್ಗು, ಒಂದು ಏಲಕ್ಕಿ – ಎಲ್ಲವನ್ನು ಬೇರೆ ಬೇರೆಯಾಗಿ ಘಮ್ಮೆನ್ನುವಂತೆ ಹುರಿದು ನಂತರ ಪುಡಿ ಮಾಡಿ.

***

ಪುಳಿಯೋಗರೆ ಗೊಜ್ಜಿಗೆ ಪುಡಿ

100 ಗ್ರಾಂ ಧನಿಯಾ, 100 ಗ್ರಾಂ ಬ್ಯಾಡಗಿ ಒಣಮೆಣಸಿನಕಾಯಿ, ನಾಲ್ಕು ಚಮಚ ಜೀರಿಗೆ, ಮೂರು ಚಮಚ ಮೆಂತ್ಯೆ, ಎರಡು ಚಮಚ ಕರಿಮೆಣಸು, ಎರಡು ಚಿಟಿಕೆ ಇಂಗು, ಮೂರು ಚಮಚ ಸಾಸಿವೆ, ಒಂದು ಚಮಚ ಕರಿಬೇವು. ಈ ಎಲ್ಲಾ ಪದಾರ್ಥಗಳನ್ನು ಬೇರೆ ಬೇರೆಯಾಗಿ ಹುರಿದು ನಂತರ ಬೆರೆಸಿಕೊಂಡು ಪುಡಿ ಮಾಡಿಕೊಂಡರೆ, ಸಾರಿನ ಪುಡಿ ಸಿದ್ಧ. (ಮೆಣಸಿನಕಾಯಿ ಹುರಿಯುವಾಗ ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಕಾದ ನಂತರ ಮೆಣಸಿನಕಾಯಿ ಹಾಕಿದರೆ ಘಾಟು ಬರುವುದಿಲ್ಲ.)

***

ಹುಳಿ ಪುಡಿ

ಅರ್ಧ ಪಾಪು ಧನಿಯಾ, ಅರ್ಧ ಪಾವಿಗಿಂತ ಕೊಂಚ ಕಮ್ಮಿ ಉದ್ದಿನಬೇಳೆ, ಕಾಲು ಪಾವು ಕಡಲೆಬೇಳೆ, ತಲಾ ಒಂದು ಚಿಕ್ಕ ಚಮಚ ಸಾಸಿವೆ, ಜೀರಿಗೆ, ಅರ್ಧ ಚಮಚ ಮೆಂತ್ಯೆ, 100 ಗ್ರಾಂ ಒಣಬ್ಯಾಡಗಿ ಮೆಣಸಿನಕಾಯಿ, ಚಿಟಿಕೆ ಇಂಗು, ಇವಿಷ್ಟನ್ನು ಚನ್ನಾಗಿ ಹುರಿದು ಪುಡಿ ಮಾಡಿಕೊಳ್ಳಿ.

***

ಪಲ್ಯದ ಪುಡಿ

100 ಗ್ರಾಂ ಬ್ಯಾಡಗಿ ಒಣಮೆಣಸಿನಕಾಯಿ, ತಲಾ ಕಾಲು ಪಾವು ಉದ್ದಿನಬೇಳೆ, ಕಡಲೇಬೇಳೆ, ಧನಿಯಾ – ಇವು ನಾಲ್ಕನ್ನೂ ಹುರಿದು ಪುಡಿ ಮಾಡಿಕೊಳ್ಳಿ. ಯಾವುದೇ ತರಕಾರಿ ಪಲ್ಯಕ್ಕೂ, ಪಾಳಿನ ಪಲ್ಯಕ್ಕೂ ಇದನ್ನು ಬಳಸಿಕೊಳ್ಳಬಹುದು.

***

ಮಸಾಲೆ ಪಲ್ಯದ ಪುಡಿ

ಇದೇ ಮಸಾಲೆಗೆ ಉದ್ದ ಅಗಲದ ಚಕ್ಕೆ, ಒಂದು ಲವಂಗ, ಒಂದು ಮೊಗ್ಗು, ಒಂದು ಏಲಕ್ಕೆ ಸೇರಿಸಿ ಹುರಿದು ಪುಡಿ ಮಾಡಿದರೆ, ಮಸಾಲೆ ಪಲ್ಯದ ಪುಡಿ ಸಿದ್ದ. ಈ ಪುಡಿಯೊಂದಿಗೆ ಒಂದು ಚಮಚ ಹುರಿಗಡಲೆ ಪುಡಿಯನ್ನು ಬಳಸಿದರೆ ಪಲ್ಯದ ರುಚಿ ಹೆಚ್ಚುತ್ತದೆ.

***

ಪೊಂಗಲ್ ಪುಡಿ

ಅರ್ಧ ಪಾವು ಜೀರಿಗೆ, ನಾಲ್ಕು ಚಮಚ ಕರಿಮೆಣಸು, ಎರಡನ್ನು ಚೆನ್ನಾಗಿ ಹುರಿದುಕೊಂಡು ಪುಡಿ ಮಾಡಿ. ಅರ್ಧ ಕಪ್ ಒಣ ಕೊಬ್ಬರಿ ತುರಿ ಬೆಚ್ಚಗೆ ಮಾಡಿ ಇದರೊಂದಿಗೆ ಸೇರಿಸಿ ಇಡಿ. ನಾಲ್ಕು ಜನಕ್ಕೆ ಪೊಂಗಲ್ ಮಾಡುವಾಗ ಎರಡು ಚಮಚ ಈ ಪುಡಿಯನ್ನು ಸೇರಿಸಿದರೆ ಆಯಿತು. (ಪುಡಿ ತರಿತರಿಯಾಗಿರಲಿ)

***

ವಾಂಗಿಬಾತ್ ಪುಡಿ

ಅರ್ಧ ಪಾವು ಉದ್ದಿನ ಬೇಳೆ, ಅರ್ಧ ಪಾವು ಕಡಲೇಬೇಳೆ, ಕಾಲು ಪಾವು ಧನಿಯಾ, 100 ಗ್ರಾಂ ಬ್ಯಾಡಗಿ ಒಣಮೆಣಸಿನಕಾಯಿ, ಕಾಲು ಚಮಚ ಮೆಂತ್ಯೆ, ಒಂದು ಇಂಚು ಅಗಲ ಉದ್ದದ ಚಕ್ಕೆ, ನಾಲ್ಕು ಮೊಗ್ಗು, ಎರಡು ಲವಂಗ, ಎರಡು ಏಲಕ್ಕಿ, ಎರಡು ಬಿಡಿಸಿದ ಅನಾನಸ್ ಹೂ – ಇವೆಲ್ಲವನ್ನೂ ಹುರಿದು ಪುಡಿ ಮಾಡಿ.

***

ಬಿಸಿ ಬೇಳೆ ಬಾತ್ ಪುಡಿ

ಅರ್ಧ ಪಾವು ಉದ್ದಿನ ಬೇಳೆ, ಅರ್ಧ ಪಾವು ಕಡಲೇಬೇಳೆ, ಅರ್ಧ ಪಾವು ಧನಿಯಾ, ಒಂದು ಇಂಚು ಅಗಲ ಉದ್ದದ ಚಕ್ಕೆ, ನಾಲ್ಕು ಮೊಗ್ಗು, ಮೂರು ಲವಂಗ, ಎರಡು ಏಲಕ್ಕಿ, 50 ಗ್ರಾಂ ಬ್ಯಾಡಗಿ ಒಣಮೆಣಸಿನಕಾಯಿ, ಎರಡ ಎಸಳು ಅನಾನಸ್ ಹೂವು, ತಲಾ ಒಂದೊಂದು ಚಿಟಿಕೆ ಸಾಸಿವೆ, ಜೀರಿಗೆ, ಕರೆಮೇಣಸು, ಮೆಂತ್ಯೆ, ಒಂದು ಚಮಚ ಗಸಗಸೆ – ಇವೆಲ್ಲವನ್ನೂ ಚೆನ್ನಾಗಿ ಹುರಿದು ಪುಡಿ ಮಾಡಿ.

***

ಗ್ರೇವಿ ಪುಡಿ –4 ಜನಕ್ಕೆ ತರಕಾರಿ ಗ್ರೇವಿ

ಕಾಲು ಚಮಚ ಜೀರಿಗೆ, ನಾಲ್ಕು ಕರಿಮೆಣಸು, , ಚಿಟಿಕೆ ಧನಿಯಾ, ಅರ್ಧ ಚಮಚ ಗರಂ ಮಸಾಲ ಪುಡಿ, ಅರ್ಧ ಚಮಚ ಅಚ್ಚ ಮೆಣಸಿದ ಪುಡಿ, ನಾಲ್ಕು ಗೊಡಂಬಿ, ಅರ್ಧ ಚಮಚ ಗಸಗಸೆ, ಚಿಟಿಕೆ ಸೋಂಪು, ಚಿಟಿಕೆ ಹುರಿಗಡಲೆ, ಇವಿಷ್ಟನ್ನೂ ಹುರಿದು ಪುಡಿ ಮಾಡಿ.

***

ಉಪ್ಪಿನಕಾಯಿ ಪುಡಿ

100 ಗ್ರಾಂ ಬ್ಯಾಡಗಿ ಒಣಮೆಣಸಿನಕಾಯಿ, ಒಂದು ಚಮಚ ಸಾಸಿವೆ, ಅರ್ಧ ಚಮಚ ಮೆಂತ್ಯೆ ಇವಿಷ್ಟನ್ನೂ ಕೆಂಪಗೆ ಹುರಿದು ಪುಡಿ ಮಾಡಿ, ಚಿಟಿಕೆ ಅರಿಶಿನ ಪುಡಿ, ಕಾಲು ಚಮಚ ಪುಡಿ ಇಂಗು ಸೇರಿಸಿಟ್ಟರೆ, ಕಾಲು ಕೆಜಿ ತರಕಾರಿಯ ಉಪ್ಪಿನಕಾಯಿಗೆ ಖಾರ ಮಸಾಲೆ ಸಿದ್ದವಾಗುತ್ತದೆ.
(ಕೆಂಪು ಬ್ಯಾಡಗಿ ಮೆಣಸಿನಕಾಯಿ ಬದಲು ಹಸಿಮೆಣಸಿನಕಾಯಿ ಬಳಸಿದರೆ ಹಳದಿ ಖಾರದ ಉಪ್ಪಿನಕಾಯಿ ಸಿದ್ದ ಮಾಡಬಹುದು.)

(ಗೆಳತಿಯೊಬ್ಬರ  post ನಿಂದ ಎರವಲು...ಉದ್ದೇಶ- ಬಹುಜನ ಸುಖಾಯ ಬಹುಜನ ಹಿತಾಯ...ಉಪಯೋಗ ಬಿದ್ದರೆ
ನಿಮ್ಮ THANKS ಅವರಿಗೆ...ನನಗಲ್ಲ...)

Thursday 27 September 2018

ಹಾಗೇ ಸುಮ್ಮನೆ...

ಹಾಗೇ ಸುಮ್ಮನೆ ಒಂದು ದೃಶ್ಯ ಕಲ್ಪಿಸಿಕೊಳ್ಳಿ..ಮೂರು ನೀರು ತುಂಬಿದ ಗಾಜಿನ ತೊಟ್ಟಿಗಳು..ಅವುಗಳಲ್ಲಿ ಅರ್ಧಕ್ಕೂ ಮಿಕ್ಕಿ ನೀರು ತುಂಬಿದೆ..ಮೂರೂ ತೊಟ್ಟಿಗಳಲ್ಲಿ   ಹತ್ತು, ಹತ್ತು ಮೀನುಗಳು ಇವೆ.ಅವೆಲ್ಲವಕ್ಕೂ ವಿದ್ಯುತ್ ತಂತಿಗಳಿಂದ ವಿದ್ಯುತ್ ಹರಿಸಿ ತೀವೃ ಕಂಪನಗಳನ್ನು ಉಂಟು ಮಾಡಬಹುದು...

ಮೊದಲ ತೊಟ್ಟಿಯ ಮೀನುಗಳಿಗೆ ಸತತ ವಿದ್ಯುತ್ ಹರಿಸುತ್ತ ಸದಾ vibrations ಉಂಟು ಮಾಡಿ disturb ಮಾಡಲಾಗುತ್ತಿದೆ...

ಎರಡನೇ ತೊಟ್ಟಿಯ ಮೀನುಗಳಿಗೆ ಒಂದು ಗಂಟೆಯವರೆಗೆ ವಿದ್ಯುತ್ ಹರಿಸಿ ಮುಂದಿನ ಒಂದು ಗಂಟೆ ಬಿಡುವು..ಮತ್ತೆ ವಿದ್ಯುತ್...ಮತ್ತೆ gap...

ಮೂರನೇ ತೊಟ್ಟಿಯ ಮೀನುಗಳಿಗಿನ್ನೂ ಪ್ರಯೋಗ  ಮಾಡಿಯೇಯಿಲ್ಲ... ಯಾವಾಗ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ...
ಈಗ ಹೇಳಿ..ಯಾವ ತೊಟ್ಟಿಯ ಮೀನುಗಳು ಅತಿ ಹೆಚ್ಚು ಒತ್ತಡಸ್ಥಿತಿಯಲ್ಲಿವೆ?

ಮೊದಲನೇಯ ತೊಟ್ಟಿಯ ಮೀನುಗಳು ಮೊದಮೊದಲಿಗೆ ಗಾಬರಿಯಾದರೂ ನಂತರ ಪರಿಸ್ಥಿತಿಗೆ ಹೊಂದಿಕೊಂಡು ' ಇದೇ ಜೀವನ  ಇದರಿಂದ ಬಹುಶಃ ಬಿಡುಗಡೆ ಇಲ್ಲ' ಎಂಬ ನಿರ್ಧಾರಕ್ಕೆ ಬರುತ್ತವೆ...

ಎರಡನೆ ತೊಟ್ಟಿಯ ಮೀನುಗಳು,' "ಒಂದು ಗಂಟೆಯ ನಂತರ ಮತ್ತೆ ಒಂದು ಗಂಟೆಯಾದರೂ ನಿರಾಳ ವಾಗಿರ ಬಹುದು..ದೇವರೇ ಅಂದಾವು...

ಆದರೆ ಮೂರನೇ ತೊಟ್ಟಿಯ ಮೀನುಗಳದು  ಅತಂತ್ರ ಸ್ಥಿತಿ,ತಮಗೂ ವಿದ್ಯುತ್ ಹಾಯಿಸಿ ಕಂಪನ ಉಂಟು ಮಾಡಬಹುದೇ? ಮಾಡಿದರೆ ಪ್ರಮಾಣ ಎಷ್ಟು? ಎಷ್ಟು ಹೊತ್ತಿನ ವರೆಗೆ? ಅದನ್ನು ನಾವು ತಾಳಿಕೊಳ್ಳಬಹುದೆ? ಸಹಿಸಲಾಗದಿದ್ದರೆ ನಮ್ಮ ನಡೆಯೇನು? ಏನೆಲ್ಲ ಪ್ರಶ್ನೆಗಳಿಂದಾಗಿ ಅವಕ್ಕೆ ಎಲ್ಲಿಲ್ಲದ ಮಾನಸಿಕ ಒತ್ತಡ....

ಬದುಕಿನಲ್ಲೂ ಥೇಟ್ ಹೀಗೆ....ಕಷ್ಟಗಳನ್ನು ನಿರಂತರವಾಗಿ ಒಂದರ ಮೇಲೆ ಒಂದು ಅನುಭವಿಸುತ್ತ ಬಂದವರು ಅದನ್ನು ಒಗ್ಗಿಸಿಕೊಂಡು ಬದುಕಿನ ಭಾಗವಾಗಿಸಿ ದಿನಗಳನ್ನು ದೂಡುತ್ತಿರುತ್ತಾರೆ...ಅವರದು ಮೊದಲ ತೊಟ್ಟಿ...

ಕಷ್ಟ ಸುಖ ಗಳೆರಡನ್ನೂ ಕಂಡವರು This also passes ಎಂಬ ಆಶಾಭಾವದೊಂದಿಗೆ ಒಳ್ಳೆಯ ದಿನಗಳ ನಿರೀಕ್ಷಣೆಯಲ್ಲಿ ಕಾಲವನ್ನು ಸಹ್ಯವಾಗಿಸಿಕೊಂಡು ದಿನಗಳನ್ನು ದೂಡುತ್ತಾರೆ...ಇವರದು ಎರಡನೇ ತೊಟ್ಟಿ...

"ಹಚ್ಚಗಿದ್ದಲ್ಲಿ ಮೇದು, ಬೆಚ್ಚಗಿದ್ದಲ್ಲಿ  ಮಲಗಿ ತಮ್ಮ ಸುಖದ ಕಡೆಗೆ ಮಾತ್ರ ಲಕ್ಷಕೊಡುವ ,ಒಂದು ಗುಂಪು ಮೂರನೇ ತೊಟ್ಟಿಯದು..ಆದರೂ ಅವರಿಗೂ ಒಂದು ಅಭದ್ರತೆಯ ಭಾವ ಇದ್ದೇ ಇರುತ್ತದೆ..ದಕ್ಕಿದ ಸುಖ ಕಾಯಮ್ಮೇ,? ಇದನ್ನಾರೂ ಕಸಿಯುವದಿಲ್ಲ ತಾನೇ? ಒಂದು ವೇಳೆ ಏನಾದರೂ ಅನಾಹುತವಾದರೆ? ಎಂಬ ದುಗುಡ,ಒತ್ತಡ,ಅವರನ್ನೂ ನೆಮ್ಮದಿಯಾಗಿರಲು ಬಿಡದೇ ಒಂದು ವಿಲಕ್ಷಣ ಮಾನಸಿಕ ಒತ್ತಡವನ್ನುಂಡು ಮಾಡುತ್ತದೆ...ಇಂಥವರದು ಮೂರನೇ ತೊಟ್ಟಿ....
ಈಗ ನಿಮ್ಮ ತೊಟ್ಟಿ ನೀವು ಕಂಡುಕೊಳ್ಳಿ...

(ಹಿಂದೆ ಎಲ್ಲೋ ಕೇಳಿದ್ದು... ಎಲ್ಲಿ ನೆನಪಿಲ್ಲ...)
  
       ‌           
           ‌‌‌‌
                ‌

Wednesday 26 September 2018

ಹಾಗೇ ಸುಮ್ಮನೆ

ಹಾಗೇ ಸುಮ್ಮನೇ....
ನಾನೇಕೆ fb ಗೆ ಬಂದೆ...?
* ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳಲು...
* ಮಮ್ಮಕ್ಕಳು ದೊಡ್ಡವರಾಗಿ ವಿಪುಲವಾಗಿ ಸಿಗುತ್ತಿರುವ ವೇಳೆಯ ಸದುಪಯೋಗ...
* ಮಿದುಳನ್ನು engage ಇಟ್ಟು ವೃಧ್ಯಾಪ್ಯದ ಲಕ್ಷಣವಾದ ಮರೆವಿನ ರೋಗದಿಂದ ದೂರವಿರಲು....
* ಹೊಸದಾದ ವಿದ್ಯೆಯೊಂದನ್ನು ಕಲಿತು ದೂರದಲ್ಲಿರುವವರ,ಹತ್ತಿರವಿದ್ದೂ busy ಇದ್ದವರೊಂದಿಗೆ ಸಂಪರ್ಕದಲ್ಲಿರಲು...
* fb ಯಲ್ಲಿ ಕಾಣಸಿಗುವ ವಿವಿಧ ಕ್ಷೇತ್ರಜ್ಞರ, ಸಾಹಿತಿಗಳ, ಕಲಾವಿದರ, ವಿದ್ವಾಂಸರ ಕೆಲಸ, ಕಾರ್ಯಗಳ link ಗಾಗಿ...
* ಎಲ್ಲರಿಗೂ ಎಲ್ಲಭಾಷೆ ಗೊತ್ತಿರುವದಿಲ್ಲ...ಬೇರೆ ಭಾಷೆಗಳ ಉತ್ತಮ ಕೃತಿಗಳ ಅನುವಾದ ವಿದ್ದರೆ ಓದುವದು...ಅನುವಾದಿಸಿ ಇತರರಿಗೂ ತಲುಪಿಸುವದು...
*ಧಾರವಾಡ ಬೆಸುಗೆ, ಪದ- ಚಿಂತಾಮಣಿ, ಅಡುಗೆ ಅರಮನೆ, ಸಲ್ಲಾಪ, ಇನ್ನೂ ಅನೇಕ online ಸಂಘಟನೆಗಳ ಸಂಪರ್ಕಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ...
* ಸಮಾನ ಆಸಕ್ತರ ಗೆಳೆತನದಲ್ಲಿ ಲಭ್ಯವಾಗಬಹುದಾದ ಒಂದೇ ಕಲೆಯ ಉದಾ_ ಕವನಗಳ _ ತುಲನಾತ್ಮಕ ಅಧ್ಯಯನ....
* YouTube ಬಳಕೆಯಿಂದ ಬೇಕಾದಾಗ ಬೇಕೆನಿಸಿದ ವೀಡಿಯೋಗಳ ವೀಕ್ಷಣೆ...
* ಬರಹಕ್ಕೆ ಅವಶ್ಯಕ ಶಬ್ದ ಬಳಕೆಯಲ್ಲಿ ಗೊಂದಲವಾದರೆ ಅಂಗೈಯಲ್ಲೇ ಇರುವ dictionary ಬಳಕೆ...
* ಬೇಕೆನಿಸಿದ ಬರಹ, ಫೋಟೋಗಳು, ಚಿತ್ರಗಳು, ಲಭ್ಯವಾದಾಗಲೇ ಒಂದೆಡೆ ಸಂಗ್ರಹಿಸಲು....
* ಬೇಕೆಂದಾಗ ಬೇಕಾದ site ಗೆ ಹೋಗಿ ಕಳೆದುಹೋದ,ಮರಳಿ ಎಂದೂ ಬಾರದ ಅಮೂಲ್ಯ ಗಳಿಗೆಗಳನ್ನು ಮೆಲುಕು ಹಾಕಿ
ಪುನಃಶ್ಚೇತನ ಪಡೆದು fresh ಆಗಲು...

ನೋಡಿ, ಹದವರಿತು, ಎಷ್ಟುಬೇಕೋ ಅಷ್ಟೇ, ಎಲ್ಲಿಬೇಕೋ ಅಲ್ಲಿ, ಹೇಗೆ ಬೇಕೋ ಹಾಗೆ ಬಳಸಿದ್ದೇ ಆದರೆ fb ಯೂ ನಮ್ಮ all time favorite friend....

ಒಪ್ಪುವಿರಲ್ಲವೇ..?

Sunday 23 September 2018

ಹಾಗೇ ಸುಮ್ಮನೇ...

(ಅನಾಮಿಕರೊಬ್ಬರ ಡೈರಿಯಿಂದ..)" ತಂದೆಯವರ ಕಾಲಿಗೆ ಏಟು ಬಿದ್ದಿತ್ತು..ಕೆಲವು ದಿನಗಳಿಂದ ಕುಂಟಿ ನಡೆಯುತ್ತಿದ್ದರು..ಆಗನಾನಿನ್ನೂ ತುಂಬಾ ಚಿಕ್ಕವ..ಗಣೇಶ ವಿಸರ್ಜನೆಯಾಗಬೇಕಿತ್ತು.ಎಷ್ಟೇ ಪ್ರಯತ್ನಿಸಿದರೂ ಒಂದು ಗಾಡಿಯ ವ್ಯವಸ್ಥೆ ಯಾಗಲಿಲ್ಲ.ತಂದೆಯವರು ನಮ್ಮ ಮೇಲಿನ ಮಹಡಿಯಲ್ಲಿ ವಾಸವಾಗಿದ್ದ ಜಾವೇದ್ ಭಾಯಿಯ ಸಹಾಯ ಕೇಳಿದರು.ನಮ್ಮಮ್ಮನಿಗೆ ಸರಿಬರದೇ ವಿರೋಧಿಸಿದರೂ ಅನ್ಯ ಮಾರ್ಗಕಾಣದೇ ಸುಮ್ಮನಾಗಬೇಕಾಯಿತು..ಅಷ್ಟರಲ್ಲಿ ಪ್ರತ್ಯಕ್ಷನಾದ ಜಾವೇದ ಭಾಯಿ," ಅರೆ ಸಾಬ್,  ಗಾಡಿ ಇಲ್ಲ ಅಂದ್ರೂ ಹೆಗಲಮೇಲೆ ಹೊತ್ತೊಯ್ಯುತ್ತೇನೆ.ಕಾಳಜಿ ಬಿಡಿ.ನೀವು 'ಹೂ:' ಅನ್ನಿ ಸಾಕು ಅಂದವ ಕೈಯಲ್ಲಿ ಚಾವಿ ತಿರುಗಿಸುತ್ತ ಹಾಜರಾದ..ನಿರ್ವಿಘ್ನವಾಗಿ ವಿಸರ್ಜನೆ ಯಾಯಿತು.ಮರಳಿ ಬಂದ ಮೇಲೇ ಎಷ್ಟೇ ಅಂಗಲಾಚಿದರೂ ಟೆಂಪೋದ ಬಾಡಿಗೆ ಸ್ವೀಕರಿಸಲಿಲ್ಲ.ಕೊಟ್ಟ ಮೋದಕವನ್ನು ಕಣ್ಣಿಗೊತ್ತಿ ಸ್ವೀಕರಿಸಿ ಮನೆಗಿಷ್ಟು ಕೊಂಡೊಯ್ದ..ಅಂದಿನಿಂದ ಗಣಪತಿ ಸ್ಥಾಪನೆ,ಪೂಜೆ,ನಮ್ಮದು,ವಿಸರ್ಜನೆ ಜಾವೇದ್ ಭಾಯಿದು ಎಂಬುದು ಅಲಿಖಿತ ಒಪ್ಪಂದವಾಯ್ತು..  ನಂತರದಲ್ಲಿ ನಾವು ಬಸ್ತಿ ಬದಲಾಯಿಸಿದೆವು...ಚಾಳ್ ಬದಲಾಯಿತು..ಮನೆ ಬದಲಾಯಿತು..ಜಾವೇದನ ಗಾಡಿಗಳು ಬದಲಾದವು..ಆದರೆ ವಿಸರ್ಜನೆಯ ಹೊಣೆಯಿಂದ ಜಾವೇದ ನುಣುಚಿಕೊಳ್ಳುವ ಪ್ರಯತ್ನ ಮಾಡಲಿಲ್ಲ..ನಾವೂ ಅದನ್ನು ಬಯಸಲಿಲ್ಲ..ಆದಿನ ಎಲ್ಲೇ ಇರಲಿ,ಹೇಗೇ ಇರಲಿ, ಹೊತ್ತಿಗೆ ಸರಿಯಾಗಿ ಹಾಜರಾಗುತ್ತಿದ್ದ.ಅಪ್ಪ ಅಮ್ಮನಿಗೆ ಸತಾಯಿಸುತ್ತಿದ್ದರು.."ನಿನ್ನ ಸ್ವಾದಿಷ್ಟ ಮೋದಕಕ್ಕೆಂದೇ ಅವನು ಬರುವದೆಂದು...".." ನಿಮ್ಮ ಗಣಪನಿಂದಲೇ ನಾನಿರುವದು..ಉಣ್ಣುವದು.ತಿನ್ನುವದು...ಅವನಿಗೆ ಇಷ್ಟೂ ಮಾಡದಿದ್ದರೆ ಹೇಗೆ" - ಜಾವೇದ ಕೈ ಮುಗಿದು ಹೇಳುತ್ತಿದ್ದ...ಅಖಂಡ ಇಪ್ಪತ್ತಾರು ವರ್ಷ ಹೀಗೆಯೇ ನಡೆಯಿತು..ಈ ನಡುವೆ ತಂದೆಯ ದೇಹಾಂತ ವಾಯಿತು..ಆದರೆ ಜಾವೇದ ಭಾಯಿ ಪರಂಪರೆ ನಿಲ್ಲಿಸದೇ ಮುಂದುವರಿಸಿಕೊಂಡು ಹೋದರು.ಮೊದಲಿನಂತೆ ಊಟ ಮಾಡುತ್ತಿರಲಿಲ್ಲ.ಬರಿ ಮೋದಕ ಮನೆಗೆ ಕೊಂಡೊಯ್ಯುತ್ತಿದ್ದರು...ಇಂದಿಗೂ ಒಂದು ಬಾರಿಯೂ ಗಾಡಿಯ ಬಾಡಿಗೆ ಕೇಳುವ ಧೈರ್ಯ ನನಗಾಗುತ್ತಿರಲಿಲ್ಲ....    ಈ ವರ್ಷ ಮಾರ್ಚ ತಿಂಗಳಲ್ಲಿ ಜಾವೇದ ಭಾಯಿ ತೀರಿಕೊಂಡ ಸುದ್ದಿ ಬಂತು.ಈ ದಿನ ವಿಸರ್ಜನೆಯಾಗಬೇಕು...ಏನು ಮಾಡಬೇಕೆಂಬ ವಿಚಾರ ತಲೆ ತಿನ್ನುತ್ತಿತ್ತು..ನನ್ನ ಬಳಿ ಈಗ ಗಾಡಿಯಿದೆ.ಆದರೆ ಜಾವೇದನ ಗಾಡಿ ಬಪ್ಪನಿಗೆ ಬೇಕು..ಅಮ್ಮನ ಧ್ವನಿ ಕೇಳಿತು.ಆರತಿ ಮುಗಿಸಿ ನೊಡುತ್ತೇನೆ.ಮನೆಬಾಗಲಿಲ್ಲೊಬ್ಬ ಅಪರಿಚಿತ ಯುವಕ," ಅಮ್ಮಾ,ಗಣಪತಿ ವಿಸರ್ಜನೆಗೆ ಗಾಡಿ ತಂದಿದ್ದೇನೆ.ನಾನು ಜಾವೇದ ಭಾಯಿಯ ದೊಡ್ಡ ಮಗ. ಅಬ್ಬಾಜಾನ್ ಹೇಳಿ ಸತ್ತಿದ್ದಾರೆ..ನಿಮ್ಮ ಗಣಪ ನಮ್ಮ ಗಾಡಿಯಲ್ಲೇ ಹೋಗಿ ವಿಸರ್ಜನೆಯಾಗತಕ್ಕದ್ದು..ಅದು ಪರಂಪರೆಯಷ್ಟೇ ಅಲ್ಲ ..ನಮಗೆ ಶ್ರೇಯಸ್ಸು ಕೂಡ ಎಂದು..ಅದಕ್ಕೇ ಬಂದಿದ್ದೇನೆ.." ಅಮ್ಮನ ಕಣ್ಣು ತುಂಬಿ ಬಂದವು...ಅಂದು ಕೊಟ್ಟ ಮೋದಕಗಳಲ್ಲಿ ಎರಡು ಹೆಚ್ಚು ಕೊಟ್ಟದ್ದು ಜಾವೇದ ಭಾಯಿಗಾಗಿ.......ಅಂದು ನಾನೆಂದುಕೊಂಡೆ," ದೇವರು ಯಾವುದೇ ಧರ್ಮಕ್ಕೆ ಸೇರಿರಲಿ ,'ಉತ್ಸವ' ಮಾತ್ರ    ಆತ್ಮೀಯ ಸಂಬಂಧಗಳದ್ದು..ಆ ಸಂಬಂಧಗಳಲ್ಲಿರುವ ಮಾನವೀಯತೆಯದು"..( ಮರಾಠಿ ಮೂಲ...)

Saturday 22 September 2018

ಹಾಗೇ ಸುಮ್ಮನೇ...

ಕಹಿ ಸತ್ಯ

(ಮುಂಬರುವ ಹತ್ತು- ಹದಿನೈದು ವರ್ಷಗಳಲ್ಲಿ ಒಂದು ತಲೆಮಾರಿನ ಜನ ಸಂಪೂರ್ಣವಾಗಿ ಕಾಣೆಯಾಗುವವರಿದ್ದಾರೆ...)

ರಾತ್ರಿ   ಬೇಗ ಮಲಗುವವರು..
ಬೆಳಿಗ್ಗೆ ಬೇಗ ಏಳುವವರು...
ನಸುಕಿನಲಿ
ವಾಯುವಿಹಾರ
ಮಾಡುವವರು..

ಅಂಗಳ ಹಾಗೂ
ಗಿಡಗಳಿಗೆ
ನೀರುಣಿಸುವವರು...
ದೇವರ ಪೂಜೆಗೆ
ಹೂ ಹರಿಯುವವರು..
ಪ್ರತಿದಿನ ಮಂದಿರಕ್ಕೆ
ಹೋಗುವವರು...

ದಾರಿಯಲ್ಲಿ ಕಂಡು
ಮುಗುಳ್ನಗುವವರು...
ಜನರ ಸುಖ ದುಃಖ
ವಿಚಾರಿಸುವವರು..
ಎರಡೂ ಕೈಯತ್ತಿ
ನಮಸ್ಕರಿಸುವವರು...

ಹಳೆಯ ಟೆಲಿಫೋನ್
ಬಳಸುವವರು....
ದಿನಚರಿ ಬರೆಯುವವರು...
Wrong ನಂಬರ್
ಬಂದರೂ ಒಂದೆರಡು
ಮಾತಾಡುವವರು...
ವರ್ತಮಾನ ಪತ್ರಿಕೆ
ಎರಡೆರಡು ಬಾರಿ
ಓದುವವರು...

ವೃತ ನಿಯಮ
ಪಾಲಿಸುವವರು...
ಸಮಾಜಕ್ಕೆ
ಹೆದರುವವರು..
ಹಳೆಯ ಚಪ್ಪಲಿ,
ಬನಿಯನ್ ಧರಿಸುವವರು..

ಉಪ್ಪಿನಕಾಯಿ,ಹಪ್ಪಳ
ಮಾಡುವವರು..
ಮನೆ ಮಸಾಲೆ
ಕುಟ್ಟುವವರು....
ದೃಷ್ಟಿ ತೆಗೆಯುವವರು..
ಬೀದಿ ವ್ಯಾಪಾರದವರೊಡನೆ ಎರಡಾಣೆಗೆ
ಜಿಕೇರಿ ಮಾಡುವವರು..
            **********
__ ಇಂಥವರು ಇನ್ನು ಹೆಚ್ಚು
ವರ್ಷ ನಮ್ಮೊಂದಿಗಿರುವದಿಲ್ಲ...

ಅವರೊಂದಿಗೆ ಮುಖ್ಯವಾದ ಜೀವನಪಾಠಗಳೂ ಇಲ್ಲವಾಗುತ್ತವೆ..
.ಅವರ ಜೊತೆಜೊತೆಗೆ ,

ಸರಳ ಸುಂದರ ಬದುಕು,...
ಪ್ರೇರಣೆ ತುಂಬುವ ಬದುಕು..
ನಾಟಕೀಯತೆಯಿಲ್ಲದ ಬದುಕು,
ಧರ್ಮದ ದಾರಿ ತೋರುವ ಬದುಕು,
ಇತರರಿಗಾಗಿಯೂ ಸ್ಪಂದಿಸುವವರ ಬದುಕು ಸಹ...😒😒😒
( ಹಿಂದಿಯಿಂದ)

Thursday 20 September 2018

ಹಾಗೇ ಸುಮ್ಮನೇ( ಅಲ್ಲ.....)

ಮೌನ ಗೀತೆ..

ಆಗಲೇ  ೮-೩೦..
ಕೆಲಸದವಳಿನ್ನೂ ಬಂದಿಲ್ಲ..
ತಿಂಡಿಯ ತಯಾರಿಯಾಗಬೇಕು..ಮಕ್ಕಳಿಗೆ ಡಬ್ಬಿ ready ಮಾಡಬೇಕು..
ಮಾಸಿದ ಬಟ್ಟೆಗಳ ಗುಡ್ಡೆ
ಬಿದ್ದಿದೆ...
ನಿನ್ನೆ ತಂದ ಸಾಮಾನುಗಳಿಗೆ ಗತಿಗಾಣಿಸಬೇಕು...

ದೊಡ್ಡ ಮಗನ home- work ಅರ್ಧಕ್ಕೆ ನಿಂತಿದೆ...
ಸಣ್ಣವನಿಗಿನ್ನೂ ನಿದ್ದೆಗಣ್ಣು...
ಮನೆಯಲ್ಲಿ  bread ತೀರಿದ ಹಾಗಿದೆ...
ಅಯ್ಯೋ ದೇವರೇ!
ಹಾಲು ಉಕ್ಕಿತೋ ಏನೋ!...
My God! Parents' meet ಮರೆತೇ ಬಿಟ್ಟಿದ್ದೆ...

ನನ್ನ ಬಟ್ಟೆಗಳ ironing
ಆಗಬೇಕು..
ಅತ್ತೆಯವರ ಬೆನ್ನು ನೋವಿನ ಔಷಧಿ ಎಲ್ಲಿಟ್ಟೆ
ದೇವರೇ..!
"ಟಾವೆಲ್ ಮರೆಯದೇ ಇಟ್ಟುಕೊಳ್ಳಬಾರದೇ?"
ಹೊರಗೆ ನಾಯಿ
ಹಸಿವೆಯಿಂದ ಬೊಗಳುತ್ತಿದೆ...
ಗಿಡಗಳಿಗೆ ನಿನ್ನೆಯೂ
ನೀರುಣಿಸಿಲ್ಲ...

ಅಯ್ಯೋ! ಫೋನ್ ring ಆಗ್ತಾಯಿದೆ..ಖಂಡಿತವಾಗ್ಲೂ ಬಾಕಿ ಉಳಿದ project work ಮುಗಿಸಲು ಹೇಳಲೆಂದೆ ಇರಬೇಕು..
ಭುಜಗಳು ನೋಯುತ್ತಿವೆ..
ಕಣ್ಣು ನಿದ್ದೆಯಿಲ್ಲದೇ
ತೂಗುತ್ತಿವೆ...

ಬಟ್ಟೆಗಳು ಕೈಗೆ ತಕ್ಷಣ ಸಿಗುವದೇ ಇಲ್ಲ..ಇನ್ನೊಮ್ಮೆ ಜೋಡಿಸಿಟ್ಟುಕೊಳ್ಳಬೇಕು...
ಅಮ್ಮ,ಅಣ್ಣನಿಗೆ ಫೋನ್ ಮಾಡಿ ಯಾವ ಕಾಲವಾಯಿತು..

ನಾನು ಸ್ತ್ರೀ ವಾದಿಯಲ್ಲ...
ಮನೆಯನ್ನು ನಿಭಾಯಿಸುವದನ್ನು
ಬಿಟ್ಟು ಏನೂ ಮಾಡಲಾಗುತ್ತಿಲ್ಲ...

ನಾನೂ
ಭಾಷಣಕಾರಳೋ, ಕಲಾವಿದೆಯೋ
ಹಾಡುಗಾರ್ತಿಯೋ
ಕವಯಿತ್ರಿಯೊ
ಲೇಖಕಿಯೋ
ಆಗುವ ಅರ್ಹತೆ
ಇದ್ದಿರಲೂ ಬಹುದು...

ಕಳೆದಸಲ ಮಗಳು
Gold medal ತಂದಾಗ
ಎಲ್ಲರೂ" ಅಪ್ಪನ ಮಗಳು" ಎಂದರು.
ನನಗೆ ಬಂದ,ಯಾರೂ ಗಮನಕೊಡದ ಸಾಲು ಸಾಲು trophy ಗಳ ನೆನಪಾಗಿ ಕಣ್ಣು ಒದ್ದೆಯಾಯಿತು.

ನನ್ನ ಮಗಳು ಬೆಳೆದು ಏನಾಗುತ್ತಾಳೋ ನನಗೆ ಗೊತ್ತಿಲ್ಲ..ಆದರೆ ಅವಳೂ ಈಎಲ್ಲ ಹೊಣೆ ಹೊರಲೇ ಬೇಕೆಂದು ತಿಳಿದಿದೆ...

ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ.."
ಬದುಕೊಂದು ಸುಂದರ ಕಥೆ.."- ಇರಬಹುದು...
ಬೇರೆ ಯಾರಿಗೋ..

ಆದರೆ ದುಡಿಯುವ ಹೆಣ್ಣನ್ನೊಮ್ಮೆ ಮಾತನಾಡಿಸಿ ನೋಡಿ..
ಅವಳ ಕಥೆ ಬೇರೆಯೇ...

ಕಾರಣ ಚಂದದ ಅಚ್ಚುಕಟ್ಟಿನ ಮನೆ ಕಂಡರೆ,
ಮಕ್ಕಳು ಖುಶಿ ಖುಶಿ ಇದ್ದರೆ,
ಅವರು ಆರೋಗ್ಯದಿಂದ ನಳನಳಿಸುತ್ತಿದ್ದರೆ,
ನೆನಪಿಡಿ,

ಅದರ ಹಿಂದೆ
ಒಬ್ಬ ಹೆಣ್ಣುಮಗಳ
ನಿದ್ರೆಯಿಲ್ಲದ ರಾತ್ರಿಗಳಿವೆ,
ಒಳಗೊಳಗೇ ಬಿಕ್ಕುವ ಕನಸುಗಳಿವೆ,
ಅರೆಬೆಂದ ಮಹಾತ್ವಾಕಾಂಕ್ಷೆಗಳಿವೆ,
ಉಸಿರು ಬಿಗಿಹಿಡಿದ
'ನಿಟ್ಟುಸಿರು'ಗಳಿವೆ

ಅವಳಿಗೆ ಮೆಚ್ಚುಗೆ ಕೊಡಿ,
ಬೆನ್ನು ಚಪ್ಪರಿಸಿ,
ಅವಳ ಮಾತುಗಳಿಗೆ ಕಿವಿಯಾಗಿ,
ಮನೆಯನ್ನೊಂದು ನಂದನವನ್ನಾಗಿಸುವ ಅರ್ಹತೆ ಹೆಣ್ಣಿಗೆ ಮಾತ್ರ ಉಂಟು..
ಅವಳಿಗೆ " ಇದು ನನ್ನ ಮನೆ " ಅನಿಸುವಂಥ ಮಾನಸಿಕ ನೆಮ್ಮದಿ ಕೊಡಿ..

( ಮೂಲ- ಇಂಗ್ಲಿಷಿನಿಂದ_ ಅನುವಾದ- ನನ್ನಿಂದ)

Monday 10 September 2018

ಅರಿವು..

ಇದುವರೆಗೆ ಕಳೆದ ವರ್ಷಗಳನ್ನು
ನೆನೆದಾಗಲೇ ' ಉಳಿದುದು ಅತ್ಯಲ್ಪ'
ಎಂದು ಗೊತ್ತಾದದ್ದು...

ಕೈಯ ಪುಡಿಕೆಯಲ್ಲಿ ಪೇರಿಸಿಕೊಟ್ಟ
ಪೆಪ್ಪರಮೆಂಟಗಳನ್ನು ಖುಶಿ ಖುಶಿ ತಿಂದು
ಖಾಲಿಯಾಗುತ್ತ ಬಂದಾಗಲೇ
ಉಳಿದದ್ದು ಕೆಲವೇ ಎಂದು ಹೌಹಾರಿದ್ದು....

ಅರ್ಥರಹಿತ ನಿಯಮ- ನಿಬಂಧನೆಗಳು
ಕಾನೂನು- ಕಾಯದೆಗಳು ಹೆಸರಿಗಷ್ಟೇ...
ಬದುಕಿಗಲ್ಲ ಎಂದು ಅರಿವಾದದ್ದು...

ಬೆಳೆಯುವ ಆಯುಷ್ಯಕ್ಕೂ ಮಾಗುವ
ಬುದ್ಧಿಗೂ ಸಂಬಂಧವಿಲ್ಲದವರ ಜೊತೆ
ಬದುಕುವದು ವ್ಯರ್ಥವೆಂದು ತಿಳಿದದ್ದು...

ನನಗೀಗ ವೇಳೆಯಿಲ್ಲ..ಪುಡಿಕೆಯೊಳಗಿನ
ಸಿಹಿಗಳನ್ನು ತಳಸೋಸಿ ಆಸ್ವಾದಿಸುವದೇ
ಬುದ್ಧಿವಂತಿಕೆ ಎಂಬ ಸತ್ಯದ ಸಾಕ್ಷಾತ್ಕಾರವಾದದ್ದು...

ವಾಸ್ತವ ಜಗತ್ತಿನಲ್ಲಿ ತಮ್ಮ ತಪ್ಪಿಗೆ ತಾವೇ ನಗುವ,
ತಮ್ಮ ಸಂಭ್ರಮಕ್ಕೆ ತಾವೇ ಮನಸಾರೆ ಹಿಗ್ಗುವ,
ತಮ್ಮ  ಕರ್ಮಗಳಿಗೆ ತಾವೇ ಹೊಣೆ ಎಂದನ್ನುವ,

ಬದುಕು- ಬವಣೆಗಳೆರಡನ್ನೂ
ಸಮ ಪರಡಿಯಲ್ಲಿ ತೂಗುವ,ಜನರ
ಮಧ್ಯೆ ಬದುಕಬೇಕು ಎಂಬ ಜ್ಞಾನೋದಯವಾದದ್ದು...

ನಮ್ಮ ಬಳಿ ಬದುಕಿನ ಎರಡು ಆಯಾಮಗಳಿವೆ..
ಒಂದು ಕಳೆದದ್ದು__ ಇನ್ನೊಂದು ಕಳೆಯಬಹುದಾದದ್ದು....

ಕಳೆದದ್ದು ಕಳೆದು ಹೋದ ಮೇಲೆಯೇ
ಕಳೆಯಬಹುದಾದದ್ದರ ಅರಿವಾಗುವದು
ಎಂಬ ಸತ್ಯ ದರ್ಶನವಾದದ್ದು...

( Mario de Andrade ಇವರ "My soul has a hat" ಇಂಗ್ಲಿಷ ಕವನದ ಕನ್ನಡ ರೂಪಾಂತರ_ ನನ್ನಿಂದ)

Friday 7 September 2018

ಹಾಗೇ ಸುಮ್ಮನೆ...

* ಸ್ವಂತ ದುಡಿಮೆಗಿಂತ ಯಾವಾಗಲೂ ಖರ್ಚು ಕಡಿಮೆಯಿರಲಿ...

*ದಿನವೊಂದಕ್ಕೆ ಕನಿಷ್ಠ ಇಬ್ಬರದಾದರೂ ಒಳ್ಳೆ ಗುಣ ಸ್ಮರಿಸು...

*ತಪ್ಪು ಮಾಡಿದರೆ ಒಪ್ಪಿಕೊಳ್ಳಲು ಹಿಂಜರಿಕೆ ಸರ್ವಥಾ ಕೂಡದು...

* ಮತ್ತೊಬ್ಬರ ಕನಸು, ವಿಚಾರಗಳ ಅವಹೇಳನ ಬೇಡ....

* ಕೆಲವೊಮ್ಮೆ ನೀನು ಹಿಂದೆ ಸರಿದು ನಿನ್ನ ಹಿಂದೆ ಇರುವವರಿಗೆ ಮುಂದೆ ಬರಲು ಅವಕಾಶ ಮಾಡಿಕೊಡು...

*ಆಗಾಗ ಉದಯಿಸುತ್ತಿರುವ ಸೂರ್ಯನ ದರ್ಶನ ಮಾಡಲು ಮರೆಯಬೇಡ...

*ಅನಿವಾರ್ಯವೆನಿಸುವವರೆಗೂ ಯಾರೊಡನೆಯೂ ಏನನ್ನೂ ಬೇಡಬೇಡ..

*ಯಾರಿಂದಲಾದರೂ ಏನನ್ನಾದರೂ ತಿಳಿದುಕೊಳ್ಳುವದಿದ್ದರೆ ಗಡಿಬಿಡಿ ಮಾಡದೇ ನಿಧಾನವಾಗಿ ಎರಡೆರಡು ಸಲ ಕೇಳಿ ಖಾತ್ರಿ ಪಡಿಸಿಕೊ...

*ಋಣ ಹಾಗೂ ವೈರಿಗಳನ್ನು ಎಂದಿಗೂ ಬೆಳೆಯಗೊಡಬೇಡ...

*ನಿನ್ನ ಮೇಲೆ ನಿನಗೆ ಸದಾ ವಿಶ್ವಾಸವಿರಲಿ...

*ಯಾವರೀತಿ ಮುಖ್ಯವಲ್ಲ....ಪ್ರಾರ್ಥನೆ ಮಾಡುವದನ್ನು ಬಿಡಕೂಡದು..ಅದರಲ್ಲಿ ಅಪಾರ ಶಕ್ತಿಯಿದೆ..

* ಎಂಥ ಪರಿಸ್ಥಿತಿಯಲ್ಲೂ ನಿನ್ನ ಕೆಲಸಗಳ ಮೇಲೆಯೇ ನಿನ್ನ ಗಮನವಿರಲಿ...

*ಸಮಯ ಅತ್ಯಮೂಲ್ಯ..ಅದರ ಅನಾದರ  ಖಂಡಿತ ಕೂಡದು..

*ಇದ್ದುದರಲ್ಲಿ ಸಂತೃಪ್ತಿಯಿರಲಿ..

*ಕೆಟ್ಟ ಯೋಚನೆ ಎಂದಿಗೂ ಮಾಡಕೂಡದು...ಪಯಣಿಸುವ ದೋಣಿಯಲ್ಲಿಯ ರಂಧ್ರವಿದ್ದಂತೆ ಅದು...ಮುಂದೊಂದು ದಿನ ನಿನ್ನನ್ನೇ ಮುಳುಗಿಸುತ್ತದೆ...

* ಸದಾ ಧನಾತ್ಮಕ ವಿಚಾರವಿರಲಿ...

*ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಿಲ್ಲೊಂದು ಕೌಶಲ್ಯವಿರುತ್ತದೆ..ಅದನ್ನು ಪೋಷಿಸು...

* ಭಗವಂತನ ಲೆಕ್ಕದಲ್ಲಿ ಯಾವ ಕೆಲಸವೂ ಕೀಳಲ್ಲ...

* ಪ್ರಾಮಾಣಿಕ ಪ್ರಯತ್ನಕ್ಕೆ ಫಲ ಖಂಡಿತಾಯಿದೆ...

* ಜೀವನದಲ್ಲಿ ಏನನ್ನಾದರೂ ಸಾಧಿಸಲು ಮನುಷ್ಯ ಪ್ರಯತ್ನ ಅತಿ ಅವಶ್ಯಕ...

(ಜೈನಮುನಿ ಶ್ರೀ ತರುಣ ಸಾಗರಜೀ ಇವರ ಪ್ರವಚನದ ಮುಖ್ಯಾಂಶಗಳು)

Tuesday 4 September 2018

ಹಾಗೇ ಸುಮ್ಮನೇ...


         
             ನಿನ್ನೆ ತಿಂಗಳ ರೂಢಿಯಂತೆ ನನ್ನ cupboard neat ಮಾಡಿಕೊಳ್ಳುತ್ತಿದ್ದೆ.ಅದರಲ್ಲಿ ಎರಡು ಹಳೆಯ ಫೋಟೋಗಳು ಸಿಕ್ಕವು..೧೯೮೫_೯೫ ರ ಮಧ್ಯದಲ್ಲಿ ತೆಗೆದದ್ದು ಇರಬಹುದು .K.E.B' s ಮಾಳಮಡ್ಡಿ ಶಾಲೆಯ ಕ್ರೀಡಾಕೂಟದ ಫೋಟೋಗಳವು...ನೋಡನೋಡುತ್ತಿದ್ದಂತೆ ಆ ಕಾಲಕ್ಕೆ ಹೋಗಿಯಾಗಿತ್ತು ನಾನು...ಅಂದಿನ ದಿನಗಳ ಶಾಲಾ ದಿನಚರಿ,ಶಿಕ್ಷಕರು,ಕೂಡಿ ಕಳೆದ ಗಳಿಗೆಗಳು,ಶ್ರೀಮಂತ ಅನುಭವಗಳು ಮನಸ್ಸಿನ ಪರದೆಯ ಮೇಲೆ 'ಮಧ್ಯಂತರ'ವಿಲ್ಲದೇ  ಓಡಿ ಸಧ್ಯದ ಜಗತ್ತಿನಿಂದ ದೂರ,ಬಹಳೇ ದೂರ ಕೊಂಡೊಯ್ದವು...ನಾನು ನಿವೃತ್ತಳಾಗಿ ಹದಿನೈದು ವರ್ಷಗಳಾಗುತ್ತವೆ‌.ನನಗೇ ಇಷ್ಟು ಗುಂಗು ಹಿಡಿಸಿವೆ ಅಂದರೆ ಬಾಕಿಯವರೂ ಯಥಾಶಕ್ತಿ enjoy ಮಾಡಲಿಯೆಂದು post ಮಾಡಿದೆ..
      ‌‌              MY GOD!!! ನಾನು ಊಹೆ ಕೂಡ ಮಾಡದಷ್ಟು ಪ್ರತಿಕ್ರಿಯೆಗಳ ಸುರಿಮಳೆ ...ಒಂದೇಸವನೇ...ಮನಸ್ಸೆಲ್ಲ ಆರ್ದ್ರ....
                   ನಾನು face book ಗೆ ಬಂದು ಐದನೇವರ್ಷ...ಅವರಿವರಿಂದ ಕಾಲಕಾಲಕ್ಕೆ ಅಷ್ಟಿಷ್ಟು ಕಲಿತು ಅದೂ ,ಇದೂ ಬರೆಯುತ್ತಿದ್ದೇನೆ...ಕವನಗಳು,ಅಂಕಣಗಳು,ಅನುವಾದಿತ ಸಾಹಿತ್ಯ   ನನ್ನ ಆಯ್ಕೆ..ಆ ಭಾಷೆ,ಈ ಭಾಷೆ ಮಡಿವಂತಿಕೆ ಇಲ್ಲ...ಅವರದು,ಇವರದು,ಭೇದವಿಲ್ಲ...ಜನರಿಗೆ ತಲುಪಲು ಯೋಗ್ಯವೆನಿಸಿದ್ದೆಲ್ಲವನ್ನೂ ಇಂಗ್ಲಿಷ/ ಹಿಂದಿ/ ಕನ್ನಡ/ ಲೇಖನಗಳ ಮೂಲಗಳಿಂದಾಯ್ದು ಕೊಡುತ್ತಿದ್ದೇನೆ..ಸಿಕ್ಕರೆ ಮೂಲವನ್ನೂ ಉಲ್ಲೇಖಿಸುತ್ತೇನೆ..
                   ನನ್ನ ಕೆಲ ನಿಯಮಿತ ಓದುಗ ಮಿತ್ರರ ಪ್ರೋತ್ಸಾಹಕ್ಕೆ ಬರವೂ ಇಲ್ಲ..ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನ ಬರಹಗಳಿಗೆ ಬರುವ ಮೆಚ್ಚುಗೆ, comments ಗಳು ಅಪರೂಪಕ್ಕೆ ನೂರರ ಸಂಖ್ಯೆ ದಾಟಿವೆ..
ಅದೂ ವಿಷಯವಲ್ಲ....ಕೆಲವರು ಓದಿ ಪ್ರತಿಕ್ರಯಿಸದೇ ಇರಬಹುದು...ಇನ್ನು ಕೆಲವರು ಯಾಂತ್ರಿಕವಾಗಿ ಓದದೆಯೂ like ಒತ್ತಿ ಮುಂದೆ ಸಾಗಬಹುದು...ಅದು ಓದುಗರಿಗೆ ಸಂಬಂಧಿಸಿದ ವಿಷಯ....ಅದನ್ನು ಬಿಟ್ಟು ಬಿಡೋಣ...
           ‌     ಈಗ ಮುಖ್ಯಮಾತಿಗೆ ಬರುತ್ತೇನೆ...ಶಿಕ್ಷಕಿಯರ ಫೋಟೋಗಳಿಗೆ ಬಂದದ್ದು ಐನೂರಕ್ಕೆ ಮೀರಿ responses...ಅದೂ ದೇಶ ವಿದೇಶಗಳಿಂದ....ನೋಡಿ ಮೂಕಳಾಗಿಹೋದೆ...
ಕಲಿಸುವಾಗ ( ಕಲಿಯುವಾಗ) 'ಹದಿ ಹರಯ' ದಾಟದ ಮಕ್ಕಳವು...ಈಗಾಗಲೇ ಮೊಮ್ಮಕ್ಕಳನ್ನೂ ಕಂಡಿರಬಹುದಾದಷ್ಟು ಕಾಲ ಉರುಳಿಯಾಗಿದೆ...ಅವರ ತಕ್ಷಣದ ಪ್ರಾಮಾಣಿಕ ಅನಿಸಿಕೆಗಳು ಅವರ ಮನದಾಳಕ್ಕೆ ಹಿಡಿದ ಕನ್ನಡಿ...ಬದುಕು ಏನೆಲ್ಲವನ್ನೂ ಕಲಿಸುತ್ತದೆ...ಪಾಲಕರಾಗಿ,ಮನೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಕರೂ ಆಗಿ ಉಭಯಪಾತ್ರ ನಿರ್ವಹಣೆ ವಹಿಸುತ್ತಿರುವ ಅವರೆಲ್ಲರಿಗೆ ಈಗ ತಮ್ಮೆಲ್ಲ ಶಿಕ್ಷಕರ ನೆನಪು ಇನ್ನಿಲ್ಲದಂತೆ ಕಾಡಿರಬಹುದು...ನನ್ನಂತೆ ಅವರನ್ನೂ ಆ ಸುವರ್ಣ ಬಾಲ್ಯಕ್ಕೆ ಕರೆದೊಯ್ದು ಬಿಟ್ಟಿರಬಹುದು.

              ಕಾರ್ಯ,ಕಾರಣ ಏನೇ ಇರಲಿ ಅವರೆಲ್ಲರಿಗೂ ,ಇನ್ನುಳಿದ ಸಕಲ ಶಿಷ್ಯವರ್ಗಕ್ಕೂ  ನನ್ನ, ಹಾಗೂ ಇನ್ನಿತರ ಎಲ್ಲಾಆಆಆಆಆ ಶಿಕ್ಷಕರ ವತಿಯಿಂದ ಹೃದಯಾಂತರಾಳದ ಶುಭ ಹಾರೈಕೆಗಳು....
     ‌‌ ‌‌‌     ನನ್ನ ( ಹಿಂದಿನ ) ಈಗಿನ ವಿದ್ಯಾರ್ಥಿ ಶಿಕ್ಷಕ ಶಿಕ್ಷಕಿಯರ ಮಿತ್ರ ವೃಂದಕ್ಕೆ ಹಾರ್ದಿಕ "  HAPPY  TEACHERS' DAY..."

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...