ನಿನ್ನೆ ತಿಂಗಳ ರೂಢಿಯಂತೆ ನನ್ನ cupboard neat ಮಾಡಿಕೊಳ್ಳುತ್ತಿದ್ದೆ.ಅದರಲ್ಲಿ ಎರಡು ಹಳೆಯ ಫೋಟೋಗಳು ಸಿಕ್ಕವು..೧೯೮೫_೯೫ ರ ಮಧ್ಯದಲ್ಲಿ ತೆಗೆದದ್ದು ಇರಬಹುದು .K.E.B' s ಮಾಳಮಡ್ಡಿ ಶಾಲೆಯ ಕ್ರೀಡಾಕೂಟದ ಫೋಟೋಗಳವು...ನೋಡನೋಡುತ್ತಿದ್ದಂತೆ ಆ ಕಾಲಕ್ಕೆ ಹೋಗಿಯಾಗಿತ್ತು ನಾನು...ಅಂದಿನ ದಿನಗಳ ಶಾಲಾ ದಿನಚರಿ,ಶಿಕ್ಷಕರು,ಕೂಡಿ ಕಳೆದ ಗಳಿಗೆಗಳು,ಶ್ರೀಮಂತ ಅನುಭವಗಳು ಮನಸ್ಸಿನ ಪರದೆಯ ಮೇಲೆ 'ಮಧ್ಯಂತರ'ವಿಲ್ಲದೇ ಓಡಿ ಸಧ್ಯದ ಜಗತ್ತಿನಿಂದ ದೂರ,ಬಹಳೇ ದೂರ ಕೊಂಡೊಯ್ದವು...ನಾನು ನಿವೃತ್ತಳಾಗಿ ಹದಿನೈದು ವರ್ಷಗಳಾಗುತ್ತವೆ.ನನಗೇ ಇಷ್ಟು ಗುಂಗು ಹಿಡಿಸಿವೆ ಅಂದರೆ ಬಾಕಿಯವರೂ ಯಥಾಶಕ್ತಿ enjoy ಮಾಡಲಿಯೆಂದು post ಮಾಡಿದೆ..
MY GOD!!! ನಾನು ಊಹೆ ಕೂಡ ಮಾಡದಷ್ಟು ಪ್ರತಿಕ್ರಿಯೆಗಳ ಸುರಿಮಳೆ ...ಒಂದೇಸವನೇ...ಮನಸ್ಸೆಲ್ಲ ಆರ್ದ್ರ....
ನಾನು face book ಗೆ ಬಂದು ಐದನೇವರ್ಷ...ಅವರಿವರಿಂದ ಕಾಲಕಾಲಕ್ಕೆ ಅಷ್ಟಿಷ್ಟು ಕಲಿತು ಅದೂ ,ಇದೂ ಬರೆಯುತ್ತಿದ್ದೇನೆ...ಕವನಗಳು,ಅಂಕಣಗಳು,ಅನುವಾದಿತ ಸಾಹಿತ್ಯ ನನ್ನ ಆಯ್ಕೆ..ಆ ಭಾಷೆ,ಈ ಭಾಷೆ ಮಡಿವಂತಿಕೆ ಇಲ್ಲ...ಅವರದು,ಇವರದು,ಭೇದವಿಲ್ಲ...ಜನರಿಗೆ ತಲುಪಲು ಯೋಗ್ಯವೆನಿಸಿದ್ದೆಲ್ಲವನ್ನೂ ಇಂಗ್ಲಿಷ/ ಹಿಂದಿ/ ಕನ್ನಡ/ ಲೇಖನಗಳ ಮೂಲಗಳಿಂದಾಯ್ದು ಕೊಡುತ್ತಿದ್ದೇನೆ..ಸಿಕ್ಕರೆ ಮೂಲವನ್ನೂ ಉಲ್ಲೇಖಿಸುತ್ತೇನೆ..
ನನ್ನ ಕೆಲ ನಿಯಮಿತ ಓದುಗ ಮಿತ್ರರ ಪ್ರೋತ್ಸಾಹಕ್ಕೆ ಬರವೂ ಇಲ್ಲ..ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನ ಬರಹಗಳಿಗೆ ಬರುವ ಮೆಚ್ಚುಗೆ, comments ಗಳು ಅಪರೂಪಕ್ಕೆ ನೂರರ ಸಂಖ್ಯೆ ದಾಟಿವೆ..
ಅದೂ ವಿಷಯವಲ್ಲ....ಕೆಲವರು ಓದಿ ಪ್ರತಿಕ್ರಯಿಸದೇ ಇರಬಹುದು...ಇನ್ನು ಕೆಲವರು ಯಾಂತ್ರಿಕವಾಗಿ ಓದದೆಯೂ like ಒತ್ತಿ ಮುಂದೆ ಸಾಗಬಹುದು...ಅದು ಓದುಗರಿಗೆ ಸಂಬಂಧಿಸಿದ ವಿಷಯ....ಅದನ್ನು ಬಿಟ್ಟು ಬಿಡೋಣ...
ಈಗ ಮುಖ್ಯಮಾತಿಗೆ ಬರುತ್ತೇನೆ...ಶಿಕ್ಷಕಿಯರ ಫೋಟೋಗಳಿಗೆ ಬಂದದ್ದು ಐನೂರಕ್ಕೆ ಮೀರಿ responses...ಅದೂ ದೇಶ ವಿದೇಶಗಳಿಂದ....ನೋಡಿ ಮೂಕಳಾಗಿಹೋದೆ...
ಕಲಿಸುವಾಗ ( ಕಲಿಯುವಾಗ) 'ಹದಿ ಹರಯ' ದಾಟದ ಮಕ್ಕಳವು...ಈಗಾಗಲೇ ಮೊಮ್ಮಕ್ಕಳನ್ನೂ ಕಂಡಿರಬಹುದಾದಷ್ಟು ಕಾಲ ಉರುಳಿಯಾಗಿದೆ...ಅವರ ತಕ್ಷಣದ ಪ್ರಾಮಾಣಿಕ ಅನಿಸಿಕೆಗಳು ಅವರ ಮನದಾಳಕ್ಕೆ ಹಿಡಿದ ಕನ್ನಡಿ...ಬದುಕು ಏನೆಲ್ಲವನ್ನೂ ಕಲಿಸುತ್ತದೆ...ಪಾಲಕರಾಗಿ,ಮನೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಕರೂ ಆಗಿ ಉಭಯಪಾತ್ರ ನಿರ್ವಹಣೆ ವಹಿಸುತ್ತಿರುವ ಅವರೆಲ್ಲರಿಗೆ ಈಗ ತಮ್ಮೆಲ್ಲ ಶಿಕ್ಷಕರ ನೆನಪು ಇನ್ನಿಲ್ಲದಂತೆ ಕಾಡಿರಬಹುದು...ನನ್ನಂತೆ ಅವರನ್ನೂ ಆ ಸುವರ್ಣ ಬಾಲ್ಯಕ್ಕೆ ಕರೆದೊಯ್ದು ಬಿಟ್ಟಿರಬಹುದು.
ಕಾರ್ಯ,ಕಾರಣ ಏನೇ ಇರಲಿ ಅವರೆಲ್ಲರಿಗೂ ,ಇನ್ನುಳಿದ ಸಕಲ ಶಿಷ್ಯವರ್ಗಕ್ಕೂ ನನ್ನ, ಹಾಗೂ ಇನ್ನಿತರ ಎಲ್ಲಾಆಆಆಆಆ ಶಿಕ್ಷಕರ ವತಿಯಿಂದ ಹೃದಯಾಂತರಾಳದ ಶುಭ ಹಾರೈಕೆಗಳು....
ನನ್ನ ( ಹಿಂದಿನ ) ಈಗಿನ ವಿದ್ಯಾರ್ಥಿ ಶಿಕ್ಷಕ ಶಿಕ್ಷಕಿಯರ ಮಿತ್ರ ವೃಂದಕ್ಕೆ ಹಾರ್ದಿಕ " HAPPY TEACHERS' DAY..."
No comments:
Post a Comment