ಹಾಗೇ ಸುಮ್ಮನೇ....
ಹಿಂದಿರುಗಿ ಒಮ್ಮೆ ನೋಡಿದರೆ ೧೯೪೦ ರಿಂದ ೧೯೮೫ ರ ನಡುವೆ ಹುಟ್ಟಿದವರೆಲ್ಲ ನಿಜವಾಗಿ ಪುಣ್ಯವಂತರೆಂದೇ ಹೇಳಬೇಕು...ನಾವು ಬದುಕಿದ ರೀತಿಯೆ ಅದಕ್ಕೆ ದೊಡ್ಡ ಪುರಾವೆ...
* ಹೊರಗೆ ಬಯಲಿನಲ್ಲಿ ಆಡುವಾಗ ಆಗಲಿ,ಗೊತ್ತು ಗುರಿಯಿಲ್ಲದೇ ಸೈಕಲ್ ತುಳಿಯುವಾಗ ಆಗಲೀ ಎಂದೂ helmet ಧರಿಸುವ ಪ್ರಮೇಯ ಬರಲಿಲ್ಲ.
*ಶಾಲೆ ಬಿಟ್ಟ ಮೇಲೆ ಕತ್ತಲು ಕವಿಯುವವರೆಗೂ ಬಟಾಬಯಲಿನಲ್ಲಿಯೇ ಆಟ...ಒಬ್ಬರಿಗೊಬ್ಬರು ಕಾಣದಷ್ಟು ಕತ್ತಲಾವರಿಸಿದ ಮೇಲೇಯೇ ಮನೆಯ ಧ್ಯಾನ....
* ನಮ್ಮ ಸಹವಾಸ ನಿಜವಾದ ಸ್ನೇಹಿತರ ಜೊತೆಗೆ...Internet friends ಜೊತೆಗಲ್ಲ..
*ನೀರಡಿಕೆಯಾದಾಗಲೆಲ್ಲ ನಳಕ್ಕೆ ಬೊಗಸೆಯೊಡ್ಡಿ ನೀರು ಕುಡಿದವರು ನಾವು..ಬಾಟಲಿ ಕಂಡವರಲ್ಲ..
*ಒಂದು glass juiceನ್ನು ನಾಲ್ವರು ಹಂಚಿ ಕುಡಿಯುವದು ಏನೂ ವಿಶೇಷವಾಗಿರಲಿಲ್ಲ ನಮಗೆ...
*ಮೂರು ಹೊತ್ತೂ ಅನ್ನ ಉಂಡೂ ಸಪೂರವಾಗಿದ್ದವರು..
*ಕಾಲಲ್ಲಿ ಚಪ್ಪಲ್ ಇಲ್ಲದೇ ಎಷ್ಟೋ ಮೈಲು ನಡೆಯುವದೆಂದೂ ನಮಗೆ ಸಮಸ್ಯೆಯೆನಿಸಿದ್ದೇಯಿಲ್ಲ...
*ಆರೋಗ್ಯ ವರ್ಧಕ ಪೇಯಗಳ ಕಲ್ಪನೆಯಿರದ ಕಾಲವದು...ಮತ್ತೊಂದು ಕಪ್ ಚಹಕ್ಕೂ ತತ್ವಾರ...
* ನಮ್ಮ ಆಟಿಕೆಗಳೆಂದೂ ಪೇಟೆಯಿಂದ ಬಂದವುಗಳಲ್ಲ...ಮಣ್ಣು,ಕಲ್ಲು,ಬೆಂಡು,ದಂಟು ಮುಂತಾದವುಗಳಿಂದ ನಾವೇ ಮಾಡಿಕೊಂಡ ಆಟಿಗೆಗಳದ್ದೇ ಸಾಮ್ರಾಜ್ಯ...
*ನಮ್ಮ ಪಾಲಕರಿಗೆ ಕೊಡಲು ದುಡ್ಡಿರಲಿಲ್ಲ..ಆದರೆ ಯಥೇಚ್ಛ ಪ್ರೀತಿಯಿತ್ತು...
*ಯಾವುದೇ ಗೆಳೆಯ, ಗೆಳತಿಯ ಮನೆಗೆ ಹೇಳಿ ಕೇಳಿ ಹೋಗುವ ಪರಿಪಾಠವಿರಲಿಲ್ಲ.ಎಲ್ಲರ ಮನೆಯ ಬಾಗಿಲು ಎಲ್ಲರಿಗೂ ಮುಕ್ತ...
*
ಯಾರೊಬ್ಬರ ಸುಖವೇ ಇರಲಿ ದುಃಖವೇ ಇರಲಿ ಅದು ಎಲ್ಲರದೂ...ಸಂಪೂರ್ಣ ಸಾರ್ವತ್ರಿಕ...
*ಆಗ ಫೋಟೋಗಳು ಅಪರೂಪ..ಇದ್ದರೂ ಕಪ್ಪು ಬಿಳುಪು ಚಿತ್ರಗಳು ಆದರೆ ಅನುಭವಗಳು ಸಂಪೂರ್ಣ ವರ್ಣಮಯ...
*ನಮ್ಮದು ವಿಶಿಷ್ಟ ತಲೆಮಾರು...ನಾವು ನಮ್ಮ ಹಿರಿಯರ ಮಾತನ್ನೂ ಪಾಲಿಸುತ್ತಿದ್ದೆವು.
*ಈಗ ಮಕ್ಕಳನ್ನೂ ಅನುಸರಿಸಿಕೊಂಡು ಹೋಗುತ್ತಿದ್ದೇವೆ...
*ನಮ್ಮ ಕಾಲಕ್ಕೆ ಸಂಪೂರ್ಣ ಅಪರಿಚಿತವಾಗಿದ್ದ ತಂತ್ರಜ್ಞಾನ ಕ್ಕೆ ಹೊಂದಿಕೊಂಡು,ವೇಗದ ಬದುಕನ್ನು ಬಾಚಿಕೊಂಡು ನಿಮ್ಮೊಂದಿಗೆ ಪಯಣಿಸುತ್ತಿದ್ದೇವೆ..
* ಬೇಕೆಂದವರಿಗೆ ಬದುಕಿನ ಸಮರ್ಥ ದಾರಿಯನ್ನು ತೋರಿಸುತ್ತಿದ್ದೇವೆ...
* ಬಹುಶಃ ಇಂಥದೊಂದು ತಲೆಮಾರು ಉಳಿದವರಿಗಿನ್ನು ಕೇವಲ ನೆನಪು ಮಾತ್ರ..
(ಇಂಗ್ಲಿಷ ಸಂದೇಶದ ಅನುವಾದ- ಕೃಷ್ಣಾ ಕೌಲಗಿ...)
No comments:
Post a Comment