Wednesday 8 May 2024

      ನಿನ್ನೆ ರಾಜಾಜಿನಗರದ 'ಲುಲು'
ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ.
ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ 
Software ಉದ್ಯೋಗದಲ್ಲಿದ್ದ
ಆನಂದ ಮುಗದ- ಇವರ ಬಹುದಿನಗಳ
ಕನಸೊಂದು ಸಾಕಾರಗೊಂಡ ದಿನ.
ಅವರ 'ಮೊದಲ ಪ್ರಯತ್ನ'ದ ಸಿನೆಮಾ ಎಂಬುದನ್ನು ನಂಬಲಾಗದ ರೀತಿಯಲ್ಲಿ
GRAY GAMES ಅದ್ಧೂರಿಯಾಗಿ ನಿರ್ಮಾಣಗೊಂಡು ಯುವಕರಾದಿಯಾ ಗಿ ಎಲ್ಲರನ್ನೂ  ರಂಜಿಸುವ/ ಪಾಲಕರಿಗೆ ಪಾಠವಾಗಬಲ್ಲ/ಸಮಾಜದ ಬಹಳಷ್ಟು ಸಮಸ್ಯೆಗಳಿಗೆ ಪರ್ಯಾಯವಾಗಿ ಜೊತೆ ಜೊತೆಗೆ ಪರಿಹಾರವನ್ನೂ ಸೂಚಿಸುವ ಒಂದು ಸಮರ್ಥ ಚಲನಚಿತ್ರ ರೂಪು ಗೊಂಡಿದ್ದನ್ನು ಕಣ್ಣಾರೆ ಕಂಡು ಆನಂದಿ ಸಿದ ದಿನ.ಅದರ ಬಗ್ಗೆ ಹೆಚ್ಚು ಬರೆದು
ನೋಡಬೇಕೆನ್ನುವವರ ಕುತೂಹಲಕ್ಕೆ
ಭಂಗ ತರುವುದು ನನಗೆ ಮನಸ್ಸಿಲ್ಲ.
             ಇಂದೇ ಬಿಡುಗಡೆಯಾಗುತ್ತಿದೆ.
ಪ್ರೇಕ್ಷಕರಿಗೆ ನಿರಾಶೆಯಾಗುವುದಿಲ್ಲ ಎಂಬ ಒಂದು ಮಾತನ್ನು ಮಾತ್ರ ಧೈರ್ಯದಿಂದ ಹೇಳುತ್ತೇನೆ. ಸಾಮಾನ್ಯ ವಾಗಿ ಬರುವ ಎಲ್ಲ ಚಿತ್ರಗಳಿಗಿಂತ ಭಿನ್ನವಾಗಿದೆ, ಸಹಕುಟುಂಬ ಸಮೇತ ರಾಗಿ ನೋಡಬಹುದು. ಅಷ್ಟು ಗ್ಯಾರಂಟಿ ಮಾತ್ರ ಖಂಡಿತವಾಗಿ 
ಕೊಡಬಲ್ಲೆ...
              

   ‌           
 



Sunday 7 April 2024

      ನಮಗೆ 'ಅನಾರೋಗ್ಯ'- ಅನ್ನೋ ಶಬ್ದಾನೂ ಹೊಸದೆನಿಸಿದ ಕಾಲ ವೊಂದಿತ್ತು.' ಆರಾಮಿಲ್ಲಾ'-ಅನ್ನೋದು
ಮಾಮೂಲು ಹೇಳಿಕೆ...ಅಂದ್ರೆ ಸ್ವಲ್ಪು ಮೈ ಬಿಸಿ/ ಊಟ ಹೋಗ್ತಿಲ್ಲ/ ಕಫ ಕಟ್ಟಿದ ಹಾಗಿದೆ /ಸತತವಾಗಿ ಸೀನು ಬರುತ್ತಿವೆ/ಎಲ್ಲೋ ಬಿದ್ದು ಹಣೆ- ಮಂಡಿ ತರಚು, ಹೀಗೇ...ಇಂಥವೇ...
               ಅದು ಎಷ್ಟು ಮಾಮೂಲು
ಅಂದರೆ ಅಕ್ಕ ಬಾಟಲಿ ಹಿಡಿದು ಪಕ್ಕದ
ಆಯುರ್ವೇದ cum ಸಕಲ ವಿದ್ಯಾ ಪಾರಂಗತ ಡಾಕ್ಟರ್ ಅನಿಸಿಕೊಂಡವರ ಬಳಿ ಔಷಧಿ ತರುವುದು/ ಅಜ್ಜಿಯ ಮೆಣಸು, ಜೀರಿಗೆ ಮರಳಿಸಿ 'ಕಾಡೆ'-
ಊಟಕ್ಕೆ ಗಂಜಿಯಂಥ ಅಳ್ಳಕ ಅನ್ನ/ತಿಳಿ ಮೆಣಸಿನ ' ಗೊಡ್ಡು ಸಾರು' -ಊಟ, ಒಂದು ಮೂಲೆಯಲ್ಲಿ ಹಾಸಿಗೆ ಹಾಸಿ"ಹೊದ್ದು  ಗಡದ್ದು ಮಲಗು, ಬೆವರು ಬಿಟ್ಟು ಹುಶಾರಾಗ್ತೀಯಾ"- ಅಂತನ್ನುವ ಅವ್ವ, ಹೀಗೆ ನೂರಕ್ಕೆ ನೂರು, organic treatment...
ಅದೇ ಸರಿಯಾಗಿತ್ತೋ/ ಜಡ್ಡಿಗೇನೇ
ಮಜಾ ಸಿಗ್ತಿರ್ಲಿಲ್ವೋ/ ಮಕ್ಕಳೇ ಅದನ್ನು 'ಇಲ್ಲ' ಅನಿಸಿ ಓಡಿಬಿಡುತ್ತಿದ್ದ ರೋ ಅಂತೂ ಅದು ಎಂದಿಗೂ ದೊಡ್ಡ
ಸಂಗತಿಯಂತಾಗುತ್ತಿರಲೇ ಇಲ್ಲ.
ಆರ್ಥಿಕ ಸಧೃಡತೆ ಇಲ್ಲದ ಕುಟುಂಬ ಗಳೆಂದೋ/ ಹೆಚ್ಚು ಮಕ್ಕಳು, ಇಂಥವು‌ ಒಂದರ ಹಿಂದೆ ಒಂದು ಬಂದೇ ಬರು ತ್ತವೆ ಎಂಬ ಸಾಮಾನ್ಯ ಅನಿಸಿಕೆಯೋ/ ಅದೇ ಸಾರ್ವತ್ರಿಕವಾಗಿ ರೂಢಿಯಲ್ಲಿ ತ್ತೆಂದೋ ಯಾರೂ ವಿಶೇಷ ಸಂದರ್ಭ ಗಳನ್ನು ಹೊರತು ಪಡಿಸಿ ಆತಂಕಿತರಾ ಗುತ್ತಿರಲಿಲ್ಲ ಎಂದು ನನ್ನ ಅನಿಸಿಕೆ.
               ಧಾರವಾಡಕ್ಕೆ ಬಂದ ನಂತರವೂ ನಮ್ಮ ಮಕ್ಕಳ ಕಾಲಕ್ಕೂ
ಹೇಳಿಕೊಳ್ಳುವಂಥ ವ್ಯತ್ಯಾಸ ಕಂಡಿರ ಲಿಲ್ಲ.ಒಬ್ಬ MBBS ಡಾಕ್ಟರೊಬ್ಬರು- ಕೆಲವೊಮ್ಮೆ ಇಬ್ಬರು- ಕುಟುಂಬ ವೈದ್ಯರ ದರ್ಜೆಯಲ್ಲಿರುತ್ತಿದ್ದುದು ಮಾಮೂಲು. ಅವರು ಹೇಳಿದ್ದೇ ವೇದ, ಅಪ್ಪಿತಪ್ಪಿಯೂ ಅಪನಂಬಿಕೆಗಳು ಅವರ ಕುರಿತಾಗಿ ಇರುತ್ತಿರಲಿಲ್ಲ. ಔಷಧಿಗಳಿಗಿಂತಲೂ ಅವರ ಮೇಲಿನ ನಂಬಿಕೆಯೇ ಕೆಲಸಮಾಡುತ್ತಿತ್ತು
ಅಕಸ್ಮಾತ್ ಸ್ವಲ್ಪಮಟ್ಟಿಗೆ ಗಂಭೀರ ಅನಿಸಿದರೆ ಸ್ವತಃ ತಾವೇ ಫೋನು
ಮಾಡಿಯೋ/ ಪತ್ರ ಬರೆದೋ ಬೇರೊಬ್ಬರ ಬಳಿ ಕಳಿಸುತ್ತಿದ್ದರು. ನಂತರದ್ದು ದೇವರಿಗೆ ಬಿಟ್ಟದ್ದು...
   ‌ ‌           ಮೊಮ್ಮಕ್ಕಳ ಹೊತ್ತಿಗೆ Medical field ಹೆಚ್ಚು ಹೆಚ್ಚು organized/ commercialised
 ಆಯಿತು ಎನ್ನಬಹುದೇನೋ!ಆರೋಗ್ಯ ವಿಮಾ - ಎಂಬುದು ಎಷ್ಟರ ಮಟ್ಟಿಗೆ ಸಾರ್ವಜನಿಕರಿಗೆ ಸಹಾಯವಾ ಯಿತೋ, ಅಷ್ಟೇ ವಿಮಾಧಾರಿತ treatment  ಕೂಡ ಸುರುವಾಯಿತು
ಎಂಬುದು ನಿಜವಾ, ಗೊತ್ತಿಲ್ಲ...
              ಈಗಂತೂ ಪ್ರತಿಯೊಂದಕ್ಕೂ
specialist ಗಳು ಇದ್ದು ಯಾರಿಗೂ
ಏನೂ ತಿಳಿಯದ ಅಯೋಮಯತೆ...
ಒಮ್ಮೆ ದಾಖಲಾಗಿ/ Insurance ನ ವಿವರ ಕೊಟ್ಟರೆ ಅದು ನೆಗಡಿಯೇ ಇರಲಿ, ಅಷ್ಟು ಮೊತ್ತ ಖರ್ಚಾಗಲೇ ಬೇಕು.ನೀವು ಅನಾರೋಗ್ಯದಿಂದ ಹೊರ ಬರುವುದಿಲ್ಲ ಅಂತಲ್ಲ, ಆ ಮೊತ್ತಕ್ಕೆ ಆಗಬಹುದಾದ ಎಲ್ಲ test
Report ಗಳು ಆಗಿ/ ಎಲ್ಲ ಮಾಮೂಲಿ ಯಾಗಿದೆ ಎಂದು ಅನಿಸಿಕೊಂಡು ಮನೆಗೆ ಬರಬೇಕು...
           ಒಟ್ಟಿನಲ್ಲಿ ಇತ್ತೀಚೆಗೆ ಸಾಮಾನ್ಯ ಮಧ್ಯಮ ವರ್ಗದ ಜನರ ಅನಾರೋಗ್ಯ ಅವರಿಗೆ ಅಪಾಯಕಾರಿ...ಆತಂಕ ಕಾರಿ...





Monday 1 April 2024

You may like the song
Song by Johnny Stimson

    Lyrics
  ads is full of questions
And the sky is full of rain
When I'm worrying about what I can't change
I take a look in my reflection
And try to make a funny face
And for a second all my sorrows melt away
'Cause if we just smile
We can forget all of our troubles for a while
We can just live inside this moment
You and I get through the darkness
Knowing we'll find the light
If we just smile
If we just, if we just
If we just smile
Yeah, if we just smile
Maybe we focus on the future
No use in living in the past
Try to remember that the bad times never last
And if we take one step
One step at a time
We're gonna make it
Gonna make it alright
If we stick together we'll be fine
'Cause if we just smile
We can forget all of our troubles for a while
We can just live inside this moment
You and I get through the darkness
Knowing we'll find the light
If we just smile
If we just, if we just
If we just smile when the sky is falling
Smile, when the love comes calling
We can take tomorrow on with style
If we just smile
We can forget all of our troubles for a while
Yeah, we can just live inside this moment
You and I get through the darkness
Knowing we'll find the light
If we just smile
If we just, if we just
If we just smile
Yeah, if we just smile
If we just smile
Yeah, if we just smile
If we just smile                                                                       
With best wishes
Suri Shiva Kumar
ತಲೆ ತುಂಬಾ ಪ್ರಶ್ನೆಗಳು ಎದ್ದಾಗ,
ಮನದ ಮುಗಿಲಲ್ಲಿ ಮೋಡಗಳು 
ಗರ್ಭ ಕಟ್ಟಿದಾಗ,
ನಾನೇನನ್ನೂ ಬದಲಿಸಲಾರೆನೆಂದು
ಹತಾಶನಾ(ಳಾ)ದಾಗ,
ನನ್ನದೇ ಪ್ರತಿರೂಪ ನೋಡಿಕೊಂಡು
ತರತರಹದ ತಮಾಷೆಯ 
ಮುಖ ಮಾಡುತ್ತೇನೆ...
ಕ್ಷಣಮಾತ್ರದಲ್ಲಿ ನನ್ನೆಲ್ಲ ಕ್ಲೇಶಗಳು ಮಾಯವಾಗಿ ಮುಖದಲ್ಲಿ 
ಮುಗುಳ್ನಗೆ ಮೂಡುತ್ತದೆ...

ಈ ಸಂತಸ ಗಳಿಗೆಯಲ್ಲಿ
ನಾನು ಕಳೆದು ಹೋಗಿ, 
ಕತ್ತಲೆಯಿಂದ ಹೊರಬರುತ್ತೇನೆ...
ನಕ್ಕಾಗ 'ಭೂತ' ಕರಗುತ್ತದೆ,
'ಭವಿಷ್ಯ' ಭಯಹುಟ್ಟಿಸುವುದಿಲ್ಲ...
'ಕೆಟ್ಟ ಗಳಿಗೆಗಳು'- ನಿರಂತರವಲ್ಲ...
ಎಂಬ ಅರಿವಾಗುತ್ತದೆ...

ಒಂದು ಸಲಕ್ಕೆ ಒಂದೇ ಹೆಜ್ಜೆ,
ಆದರೆ ಸರಿಯಾದ ಹೆಜ್ಜೆ,
ಸರಿಯಾದ ರೀತಿಯಲ್ಲಿ ಇಟ್ಟರೆ
ಖಂಡಿತ ಏನನ್ನೂ ಸಾಧಿಸಬಲ್ಲೆವು,
ಗುರಿ ಮುಟ್ಟಿ ಕತ್ತಲೆ ಕರಗಿಸಬಲ್ಲೆವು.
ಮನಸಾರೆ ನಗಲು ಕಲಿತರೆ
ಕಷ್ಟಗಳನ್ನೂ ಕಡೆಗಣಿಸಬಲ್ಲೆವು.
ಯಶಸ್ಸು ನಮ್ಮದಾಗಿಸಬಲ್ಲೆವು...

ಆಕಾಶವೇ ಬೀಳಲಿ, ಕಳಚಿ-
ಪ್ರೀತಿಯ ಆಸರೆಯೊಂದಿದ್ದರೆ
ನಾವು ಮತ್ತೆ ನಗಬಲ್ಲೆವು...
ಸುತ್ತಲಿನ  ಕತ್ತಲೆಯ ಭೇದಿಸಿ
ಮುಂದೆ ಮುಂದೆ ಸಾಗಬಲ್ಲೆವು...

Johnny Stimson...






Sunday 24 March 2024


        ‌ನಾನು ಬೆಂಗಳೂರಿಗೆ ಬಂದಾಗ ನನ್ನನ್ನು ಮೂಲೆ ಮೂಲೆ ಸುತ್ತಾಡಿಸಿ
ರೂಢಿ ಮಾಡಿಸಿದ್ದು ಶಾಲಿನಿ...ನಾನು ಅವರನ್ನು ಅಂತಃಪುರಕ್ಕೆ ಪರಿಚಯಿಸಿ ದಾಗ ಇಬ್ಬರೂ ಅದರ ಕಾರ್ಯಕ್ರಮಗ ಳಿಗೆ ಭೇಟಿ ನೀಡುತ್ತಾ, ಸ್ನೇಹಿತರ ವಲಯದ ವಿಸ್ತಾರ ಹೆಚ್ಚಿಸುತ್ತಾ ಹೊಸ ಹೊಸ ಗೆಳತಿಯರನ್ನು ತೆಕ್ಕೆಗೆ ಸೇರಿಸುತ್ತ
ಬದುಕು ವರ್ಣಮಯ ಮಾಡಿಕೊಂಡ ದ್ದಾಯಿತು...ಅದರ ರಂಗು ಏರುತ್ತಿದ್ದಾಗ ಲೇ ಬಂದ ಎರಡು ಕೋವಿಡ್ ಅವಧಿ
ಗಳು ನಮ್ಮ ಭೇಟಿಗಳನ್ನು ಕಿರಿದು ಗೊಳಿಸುತ್ತಾ/ಸಂಖ್ಯೆಗಳನ್ನು ಇಳಿಸುತ್ತಾ
ಹೋಗಿ, ಅದೂ ಒಂದು ರೂಢಿಯಾಗಿ
ಭೇಟಿಗಳು fb /WA/ messenger
ಮೂಲಕ ಮಾತ್ರ ಉಳಿದು ಪರಸ್ಪರ ಭೇಟಿಗಳೂ ತುಟ್ಟಿಯಾಗತೊಡಗಿದವು.
ನನ್ನಂಥ ಹಿರಿಯ ನಾಗರಿಕರಿಗಂತೂ
ಒಂದೊಂದು ಭೇಟಿಯೂ ಒಂದೊಂದು
ಸವಾಲು...
             ಇಂಥದರಲ್ಲಿ ಜಯಲಕ್ಷ್ಮಿ
ಪಾಟೀಲರ 'ಈ ಹೊತ್ತಿಗೆ'ಕಾರ್ಯಕ್ರಮ ಒಂದು Oasis...ಮೂರೂವರೆ ತಾಸಿನ
ಈ ಸುಂದರ ಕಾರ್ಯಕ್ರಮದಿಂದ ಆದ
ಪ್ರಾಪ್ತಿ ಬಹಳಷ್ಟು.ಜಯಶ್ರೀ ದೇಶಪಾಂಡೆ, ಮೀರಾ, ಸಂಗೀತಾ, ಪೂರ್ಣಿಮಾ, ರೇಖಾ,ಇನ್ನೂ ಅನೇಕರ
ಜೊತೆಗೆ ಕಳೆದ ಒಂದು ದಿನ ನಮಗಿನ್ನೂ
ಒಂದು ತಿಂಗಳ ಮೆಲುಕಿಗೆ ಆಹಾರ. ಅಚ್ಚುಕಟ್ಟಾಗಿ ನಡೆದ ಈ ಕಾರ್ಯಕ್ರಮ ದಲ್ಲಿ ವಿದ್ವತ್ಪೂರ್ಣ ಭಾಷಣ/ವಿವಿಧ ವಿಷಯಗಳ ಕುರಿತು ಚರ್ಚೆ/ ಸಂವಾದ
ರುಚಿಕಟ್ಟಾದ ಭೋಜನ/ಎಷ್ಟೇ ದಣಿವು
ಮುಖದ ಮೇಲಿದ್ದರೂ ಪಾದರಸದಂತೆ 
ಓಡಾಡಿ ಎಲ್ಲವನ್ನೂ ಅಚ್ಚುಕಟ್ಟಾಗಿ
ನಿರ್ವಹಿಸುತ್ತಿದ್ದ ಜಯಲಕ್ಷ್ಮಿ/ವೇದಿಕೆಗೆ
ಭೂಷಣಪ್ರಾಯರಾದ  ದೇವೂ ಪತ್ತಾರ/ ಜಯಶ್ರೀ ದೇಶಪಾಂಡೆ/ ಶಶಿಕಲಾ ವಸ್ತ್ರದ/ಆಶಾದೇವಿಯಂಥ
ಹಿರಿಯರ ಉಪಸ್ಥಿತಿಯ ಮೆರುಗು -
ಇವುಗಳಿಂದಾಗಿ ಮೂರು ತಾಸು ಕಳೆದದ್ದೇ ತಿಳಿಯಲಿಲ್ಲ...
           ‌ ನನಗೆ ನನ್ನ ಕಾಲುನೋವಿನ 
ಸಮಸ್ಯೆ ಇತ್ತೀಚೆಗೆ ಹೆಚ್ಚಾಗಿದ್ದು ಹತ್ತು
ಬಾರಿ ಯೋಚಿಸಿ, ಜಯಶ್ರೀಯವರ 
ಬೆಂಬಲದ ಭರವಸೆಯ ಮೇಲೆ ಹೋಗಿದ್ದು ಸಾರ್ಥಕವಾಗಿದ್ದಲ್ಲದೇ ಅನೇಕ ಗೆಳತಿಯರ ಭೇಟಿ ಒಂದು
ಅಲಭ್ಯ ಲಾಭವೇ!!!


Thursday 21 March 2024

"International Day of Happiness..." 

ಇಂದು ಅಂತರ್ರಾಷ್ಟ್ರೀಯ ಆನಂದದ ದಿನವಂತೆ.Happiness - ಸಂತೋಷ- ಆನಂದ- ಖುಶಿ...ಏನೆಲ್ಲ ಹೆಸರಿನಿಂದ ಕರೆದರೂ ಹಿಂದಿನ ಭಾವವೊಂದೇ...
Happiness is a state of mind.- 
ಅದು ಸ್ಥಿರವಿರುವುದಿಲ್ಲ, ಸದಾ ಬದಲಾ ಗುತ್ತಿರುತ್ತದೆ.ಚಳಿಗಾಲದಲ್ಲಿ ಒಂದು ಕಪ್ ಬಿಸಿ ಚಹದಲ್ಲಿ/ಬೇಸಿಗೆಯಲ್ಲಿ ಐಸ್ಕ್ರೀಮ್ನಲ್ಲಿ/ಮಳೆಗಾಲದಲ್ಲಿ ಸಕಾಲಕ್ಕೆ ದೊರಕುವ ಸೂರಿನಡಿಯಲ್ಲಿ ಕಾಣುವ ಆನಂದ ಕೆಲವೊಮ್ಮೆ ಬದುಕಿಡೀ  ಕಾಯಂ 'ಮರೀಚಿಕೆ'ಯಾಗಿ ಕಾಡುತ್ತದೆ. ಅದಕ್ಕೆ ಒಂದು ಸರ್ವ ಸಮ್ಮತವಾದ ವ್ಯಾಖ್ಯಾನ ಇಲ್ಲದಿರುವುದೇ ದುರಂತ...

ನನಗೆ ಹೊಳೆದ ವ್ಯಾಖ್ಯೆಗಳು:
ಮೇಲೆ ಮೇಲೆ ಹೊಳೆದವುಗಳು...
ಭಿನ್ನಾಭಿಪ್ರಾಯಕ್ಕೆ ಯಾವುದೇ ಅಭ್ಯಂತರವಿಲ್ಲ...

*ಅ-ಅದೊಂದು ಮನಸ್ಥಿತಿ ಮಾತ್ರ.ಇದೆ ಅಂದ್ರೆ ಇದೆ, ಇಲ್ಲ ಅಂದ್ಕೊಂಡ್ರೆ ಇಲ್ಲ...
*ಆ- ಆರೋಗ್ಯವೇ ಆನಂದ...
*ಇ- ಇಚ್ಛೆ ಪಟ್ಟದ್ದು ದಕ್ಕಿದ ಖುಶಿ.
*ಈ- ಈರ್ಷೆಯಿಲ್ಲದ ಸರಳ ಜೀವನ.
*ಉ-ಉಂಡುಟ್ಟು ಕಳೆವ ಸ್ವಸ್ಥ ಬದುಕು.
*ಊ-ಊರು ಉಸಾಬರಿ ಇಲ್ಲದ ಬಾಳು. 
*ಋ- ಋಣವಿಲ್ಲದ ಬಾಳು...
*ಎ-ಎಷ್ಟಿದೆಯೋ, ಅಷ್ಟರದೇ- ಖುಶಿ...
*ಏ- ಏನಿದೆಯೋ ಅದರಲ್ಲಿ ತೃಪ್ತಿ...
*ಐ-ಐಬುಗಳಿಲ್ಲದ ಇರುವಿಕೆ.
*ಒ- ಒಲವು ತುಂಬಿದ ಜೀವನ.
*ಓ-ಓಟದ ರೇಸಿನಲ್ಲಿ ಇರದಿರುವುದು.
* ಔ- ಔಷಧಿ ಮುಕ್ತ ಆರೋಗ್ಯ.
* ಅಂ-ಅಂದುಕೊಂಡದ್ದರ ಸಾಧನೆ...    
*ಅಃ- 'ಅಹಮಿಕೆ'ಯ - ನಿಯಂತ್ರಣ.

Tuesday 19 March 2024

ಯಾವಾಗಲಾದರೂ  ‌‌‌‌ನಿಮಗೂ ಹೀಗಾಗುತ್ತ?
  
      ನನಗೆ likes/comments ಬಗ್ಗೆ
ಅತಿ ಅನ್ನುವಷ್ಟು ಓಲೈಕೆಯಿಲ್ಲ.ಹಾ! ಬಂದರೆ ಖುಶಿಯಿದೆ,ಬರದಿದ್ದರೆ ವ್ಯಸನವಿಲ್ಲ...ಯಾರಾದರೂ ನಾವು ಬರೆದದ್ದನ್ನು ಮೆಚ್ಚಿದರೆ ಖುಶಿಯನಿಸು ವುದು ಸಹಜ ಕೂಡ...

           ಅನೇಕರು ನನಗೆ ಅನೇಕ ಬಾರಿ
" ನಾವು ನಿಮ್ಮನ್ನು follow ಮಾಡುತ್ತೇವೆ.ಆದರೆ comment ಹಾಕಲು ತಿಳಿಯುವುದಿಲ್ಲ.ಆ ಕಾರಣಕ್ಕೆ
ಏನೂ ಹಾಕಿರುವುದಿಲ್ಲ"- ಎಂದು ಅನೇಕ ಬಾರಿ ಹೇಳಿದ್ದಿದೆ...

               ಇಷ್ಟಾದರೂ ನನಗೊಂದು
ಹುಚ್ಚು ರೂಢಿಯಿದೆ.ಒಂದು ಲೇಖನಕ್ಕೆ
ಹತ್ತು likes-comments ಬಂದರೆ ಕೆಡುಕೆನಿಸುವದಿಲ್ಲ.ಆದರೆ 48 ಬಂದರೆ, 98  ಬಂದರೆ, ತೆಂಡೂಲ್ಕರ್ ನ batting ನೆನಪಾಗಿ Out ಆಗುವ ಭಯವಾಗು ತ್ತದೆ.ಎರಡು ಹೆಚ್ಚಿಗೆ ಬರಬಾರದೇ ಎಂಬ half century/full century ಗಳ ನಿರೀಕ್ಷೆ ಶುರುವಾಗುತ್ತದೆ.ಅದೇ ನನಗೆ ಮಜಾ ಅನಿಸುವುದು.

            ‌‌      ಬಹುಶಃ ಇದು ನನ್ನ  'ಪೂರ್ವಾಶ್ರಮ'-ದ ಕರ್ಮ 
ಶೇಷವಿರಬೇಕು... ಶಾಲೆಯಲ್ಲಿ ಕಲಿಯುವಾಗ/ನಂತರ ಕಲಿಸುವಾಗ
ಹೀಗೇ ಮಾರ್ಕ್ಸಗಳ ಬಗೆಗಾದ ಯುದ್ಧಗಳೆಲ್ಲ ಇದೇ ಪೂರ್ಣಾಂಕದ
ಕಾರಣಕ್ಕಾಗಿಯೇ.passing/ first class/ Rank ಇಂಥವುಗಳು ಒಂದೆರಡು ಗುಣಗಳಿಂದ ತಪ್ಪುತ್ತಿದ್ದರೆ
ಶಿಕ್ಷಕಿಯರ ಬಳಿ ಬಂದು ದೀನರಾಗಿ, ಕೈ ಜೋಡಿಸಿ ಮಾಡುವ ಪ್ರಾರ್ಥನೆಗೆ
ನಿಂತರೆ ಎಂಥ ದೇವನಿಗೂ ದಿಗಿಲಾಗು ವ ಹೊತ್ತು.ಹೋಗಲಿ ಎಂದು ಆಚೀಚೆ
ನೋಡಿ ಮಾರ್ಕ್ಸ ಕೊಟ್ಟದ್ದೇ ಆದರೆ
ಉಳಿದವರ ಬಳಿಯಲ್ಲಿ ಹೋಗಿ ಡಂಗುರ ಸಾರಿ ತಾವು ವಿಜೇತರಾದ 
ಸುದ್ದಿ ತಲುಪಿಸಿದರೆ, ಉಳಿದೆಲ್ಲ ವಿದ್ಯಾರ್ಥಿಗಳು ಅನಿರೀಕ್ಷಿತ ಮುತ್ತಿಗೆ
ಹಾಕಿ, ಗಲಾಟೆ ನಡೆದು, ಮುಖ್ಯಾಧ್ಯಾಪಕರ ಗಮನಕ್ಕದು ಬಂದು ನಮ್ಮ ಪರೀಕ್ಷೆಯಾಗುವದು
ಖಂಡಿತ...

              ಇದೀಗ fb ತೆಗೆದಾಗ  ನನ್ನ ಹಲವು post ಗಳು 48/99/09/39
ಅಂತ likes ಗಳ ಸಂಖ್ಯೆ ನೋಡಿ
ಇಷ್ಟೆಲ್ಲ ನೆನಪಾಯ್ತು ನೋಡಿ...
 






     ‌          

Monday 18 March 2024

ಅಮ್ಮನಿಲ್ಲದ ಮನೆ...

"ನಿಂತುಕೊಂಡು ಹಾಲು
ಕುಡಿಯಬೇಡ.
ಪಚನವಾಗುವುದಿಲ್ಲ- ಉಸಿರೆಳೆದುಕೊಂಡು
ನಿಧಾನವಾಗಿ ಕುಡಿ"
ಇಷ್ಟೊಂದು ಥಂಡಿಯಿದೆ,
ಕೋಟ್ ಹಾಕಿಕೊಂಡು ಹೋಗು"

ಇದು ಅಮ್ಮಂದೇ ದನಿ, 
ಇದೀಗ 
ಅಡಿಗೆ ಮನೆಯಿಂದ 
ಹಿಟ್ಟು ನಾದಿದ ಕೈಯಿಂದಲೇ
ಹೊರಗೆ ಬರುತ್ತಾಳೆ...

ತಿರುಗಿ ನೋಡಿದೆ,
ಅಲ್ಲಿತ್ತು ಬರೀ ಮೌನ...
ಒಬ್ಬನೇ ಇದ್ದಾಗಲೆಲ್ಲ
ಸುತ್ತಲ ಗಾಳಿಯೊಡನೆ
ಮಾತಾಡುವ ನನ್ನ ಹುಚ್ಚು ಮನ -

"ಹೊರಗೆ ಕೆಲಸದ ಮೇಲೆ ಹೋಗುತ್ತಿದ್ದರೆ 
ಒಂದು ಚಮಚ ಮೊಸರು ತಿನ್ನು,
ಒಂದು ತುಂಡು ಬೆಲ್ಲ ಬಾಯಿಗೆ ಹಾಕಿಕೋ"-ಒಳ್ಳೆಯ ಲಕ್ಷಣ..."
ಎಂದಂತೆ ಭಾಸವಾಗುತ್ತದೆ...

ಈ ಸ್ವಾತಂತ್ರ್ಯಕ್ಕಾಗಿ
ಬದುಕಿಡೀ ಬಯಸಿದ್ದೆ,
ಇದೀಗ ನನ್ನ ಬಳಿ ಸ್ವಾತಂತ್ರ್ಯವಿದೆ. ಏನಾದರೂ ಒಂದು ಹೇಳಿ ತಡೆಯುವರಾರೂ ಈಗ ನನಗಿಲ್ಲ...
ಬೆಳಿಗ್ಗೆ ಯಾವಾಗಲೇ ಏಳಲಿ,
ರಾತ್ರಿ ತಡವಾಗಿ ಮಲಗಲಿ
ಏಕೆಂದು ಕೇಳುವವರಿಲ್ಲ...

"ಎಲ್ಲಿಗೆ ಹೋಗಿದ್ದೆ?
ಏಕೆ ತಡವಾಯಿತು?
ನೀನು ಎಂದು ಸುಧಾರಿಸುವವ?
ನಾ ಕೊಟ್ಟ ದುಡ್ಡು ಏನು ಮಾಡಿದೆ?
ರಾತ್ರಿ ಏಕೆ ಇಷ್ಟು ಲೇಟು?
ಎಷ್ಟೂಂತ ನಿನ್ನ ದಾರಿ ಕಾಯುತ್ತಿರಲಿ?
ನಿನ್ನ ಹಿಂದೆಯೇ ಓಡುತ್ತಿರಲಿ?

ಇವಕ್ಕೆಲ್ಲ ಸುಳ್ಳು ನೆಪ ಹೇಳುವ ಕಾರಣವೀಗ ಇಲ್ಲವೇ ಇಲ್ಲ...
ಏನು ಮಾಡಿದರೂ ಕೇಳುವವರಿಲ್ಲ...
ನನಗೀಗ ಏನೂ ಕಡಿಮೆಯಿಲ್ಲ,
ಅಂದುಕೊಂಡದ್ದೆಲ್ಲವೂ ಇದೆ...
ಆದರೆ 
ನೂರು ಪ್ರಶ್ನೆ ಕೇಳಿ ನನ್ನನ್ನು
ಸತಾಯಿಸುವ ಅಮ್ಮನೇ ಇಲ್ಲ...

ದಣಿದು ಬಂದರೆ ದಣಿದೆಯಾ?
ಎನ್ನುವವರಿಲ್ಲ...
ತಲೆಗೆ ಬಾಮ್ ಹಚ್ಚಿ ಹಣೆ ನೇವರಿಸುವವರಿಲ್ಲ...
"ದೀಪಾವಳಿಗೆ ಹಣೆಗೆ ತಿಲಕ ಇಟ್ಟು,
ಹಿರಿಯರಿಗೆ ನಮಿಸು-
ಆಶೀರ್ವಾದ ಸಿಗುತ್ತದೆ"
ಎನ್ನುವವರಿಲ್ಲ...
ಅಪ್ಪನ ಬೈಗಳ ಹೆದರಿಕೆ ಹುಟ್ಟಿಸುವವರಿಲ್ಲ...
"ಇನ್ನು ಹೊಸ ಅಂಗಿ
ಮುಂದಿನ ದೀಪಾವಳಿಗೇನೇ-"
ಎಂದು ಎಚ್ಚರಿಸುವವಳಿಲ್ಲ...

ನನ್ನ ಏಳ್ಗೆಗಾಗಿ ಹರಕೆ ಹೊರುವುದು,
ಅದು ಫಲಿಸಿದರೆ, 
ಎಲ್ಲಿ ದೂರ ಹೋಗುತ್ತೇನೋ 
ಎಂದು ಬಾಗಿಲ ಹಿಂದೆ
ನಿಂತು ಅಳುವುದು...
ಪರೀಕ್ಷೆ ಮುಗಿಸಿ ಬಂದರೆ 
ಕಾದು ಕುಳಿತು ಊಟಕ್ಕಿಡುವುದು...
ಯಾವುದೂ ಇಲ್ಲ ಈಗ...

ಈಗ
ನಾನು-ನೀನು ಅಂದುಕೊಂಡ 
ಎಲ್ಲವೂ ದಕ್ಕಿದೆ.
ಅದೆಲ್ಲ ಸಾಧಿಸಿದ ಖುಶಿಯೂ ಇದೆ.
ಆದರೆ ನೀನೇ ಇಲ್ಲವಲ್ಲ ಎಂಬ
ಅಗಾಧ ನೋವೊಂದು
ಸದಾಕಾಲ ಕಾಡುತ್ತಿದೆ...


Saturday 16 March 2024

 ‌‌‌ದೇವರೇ! ಈ ಬಾರಿ ನಿನ್ನನ್ನು ಕ್ಷಮಿಸಿವುದಿಲ್ಲ...
      
     ‌ಅದು 1999 ನೇ ಇಸ್ವಿ.ಸರಿಯಾಗಿ ಇಪ್ಮತೈದು ವರ್ಷಗಳ ಹಿಂದಿನ ಮಾತು. ಮೊದಲ ಬಾರಿಗೆ ಅಮೇರಿಕಾದ Boston ಗೆ ಹೊರಟಿದ್ದೆ. ಎದೆಯಲ್ಲಿ ಡವಡವ. ಹೇಗೋ ಏನೋ ಎಂಬ ಆತಂಕವಿತ್ತು. ಆ ಪ್ರವಾಸವನ್ನು ಬದುಕಿನಲ್ಲಿಯೇ ಅತ್ಯಂತ ಸುಂದರ ನೆನಪಾಗಿ ಪರಿವರ್ತಿಸಿದ ಹಲವಾರು ಜನ ನನಗಲ್ಲಿ ಸಿಕ್ಕರು.ಅವರಲ್ಲಿ ನನ್ನ ಮಗನ ಗೆಳೆಯರ ಪಾತ್ರ ದೊಡ್ಡದು. ಆಗ  ಈಗಿನ ಪ್ರಮಾಣದಲ್ಲಿ ಜನ ವಲಸೆ ಹೋಗುತ್ತಿರಲಿಲ್ಲ.ಹೋದವರಿ ಗೂ ಏನೋ ಅನಾಥ ಭಾವ ಕಾಡುತ್ತಿದ್ದ ದಿನಗಳವು.ಹೀಗಾಗಿ ಅವರೂ ಮೇಲಿಂದ ಮೇಲೆ ಭೇಟಿಯಾಗುವುದು
ಸಾಮಾನ್ಯವಾಗಿ,ಮನೆಯವರೇ ಆಗಿ
ಬಿಡುತ್ತಿದ್ದರು.ಬಹುಶಃ ಎಲ್ಲರೂ ಭಾವನಾತ್ಮಕ ಅವಲಂಬನೆಗೆ ಹಪಹಪಿಸುತ್ತಿದ್ದ ಕಾಲವದು...
             ಹೇಮಂತ ನಾಡ್ಗಿರ್ - ಅಂಥವರಲ್ಲಿ ಒಬ್ಬ.ಒಬ್ಬನೇ ಮಗ, ಎಲ್ಲರನ್ನೂ ಹಿಂದೆ ಬಿಟ್ಟು ಅಮೇರಿಕಾ
ಸೇರಿದವರಲ್ಲಿ ಒಬ್ಬ.ನನ್ನ ಮಗನನ್ನೊಬ್ಬ ನನ್ನು ಬಿಟ್ಟು ಇನ್ನೂ ಯಾರದೂ ಮದುವೆಯಾಗಿರಲಿಲ್ಲ.ಹೀಗಾಗಿ ಆಂಟಿ, ಆಂಟಿ ಎನ್ನುತ್ತ, ಬಗಲಿಗೆಗೊಂದ ಕೆಮರಾ ಇಳಿಬಿಟ್ಟು ನನ್ನ ಜೊತೆ ಹೆಜ್ಜೆ ಹಾಕುತ್ತಾ ,ತನಗೆ- ನನಗೆ ಬೇಕಾದಲ್ಲಿ
ನಿಂತು ಫೋಟೋ ತೆಗೆಯುತ್ತ ಖುಶಿಯನ್ನು ಸಮೃದ್ಧವಾಗಿ ಹಂಚಿದವ. ಅವೆಲ್ಲ ಸೇರಿಸಿ ಒಂದು ಪ್ರವಾಸದ ಸೋವಿನಿಯರ್ ಬರೆದಾಗ ನನಗಿಂತ ಲೂ ಖುಶಿ ಪಟ್ಟವ. ಧಾರವಾಡದ ಹುಡುಗರೆಂದರೆ ಸುಮ್ಮನೆಯೇ! ಅದರಲ್ಲೂ ನನ್ನ ಮಗನ ಖಾಸ ಗೆಳೆಯ.ನಮ್ಮದೇ ಶಾಲೆಯ ವಿದ್ಯಾರ್ಥಿ.
ಪುಟ್ಟ ನಗರವೊಂದರ ' ಗೆಳೆಯರ ಗುಂಪೆಂ'ದರೆ- ಅದರ ಸೊಗಸು/ ಸೊಗಡು ಬೇರೆಯೇ!!!
     ‌      2005 ರಲ್ಲಿ ಎರಡನೇ ಬಾರಿಗೆ
California ದಲ್ಲಿ ಮಗ ಇದ್ದಾಗ ಮತ್ತೊಮ್ಮೆ ಹೋಗಿದ್ದೆ.ಅದಾಗಲೇ  ಹೇಮಂತನಿಗೆ ಮದುವೆಯಾಗಿತ್ತು. ನಾವು ಕುಟುಂಬ ಸಮೇತ ಹೋಗಿದ್ದರೂ ಎಲ್ಲರನ್ನೂ ಕರೆಸಿಕೊಂಡು ತಾನೇ ' ರುಚಿ ರುಚಿ ಪಾವ್ಭಾಜಿ' ತಯಾರಿಸಿ ರಾಜಾತಿಥ್ಯ ಮಾಡಿದ್ದು ನಿನ್ನೆ ಎಂಬಂತೆ ನೆನಪಿದೆ.
" ಆಂಟಿ, ನಿಮ್ಮ ಕವನಗಳ ಹವ್ಯಾಸ ನನಗೆ ಗೊತ್ತು.ಹಾಗಾಗಿ ಅಡ್ಡಾಡಿ ನಿಮಗೆಂದೇ ತಂದಿದ್ದೇನೆ"- ಎಂದು
ನಾಲ್ಕು ಕವನ ಸಂಕಲನಗಳನ್ನು ಕೈಗಿತ್ತ
ಅಂತಃಕರಣದ ಜೀವವದು...
              ಅಂಥ ಸಹೃದಯಿ ಜೀವಗಳು
ಇದ್ದಲ್ಲೆಲ್ಲ ಖುಶಿಯನ್ನು ಕಾಣುತ್ತವೆ, ಇತರರಿಗೂ ಹಂಚುತ್ತವೆ, ಆದರೆ ದೇವರಿಗೇಕೆ ಅಂಥವರ ಮೇಲೆ ಅಷ್ಟು
ಪ್ರೀತಿ!!!ಹೇಮಂತನದು ಅಂಥದೇ ಹೆಂಗರುಳು.ಈಗಲೂ ನಾನು ಅಮೇರಿಕೆಗೆ ಬರಬೇಕೆಂದು ಮಗನ ಒತ್ತಾಯ. ಆದರೆ ಸಮಸ್ಯೆಯಾಗಿರು ವುದು ವೀಸಾ.ಇಂದಿಲ್ಲ ನಾಳೆ ಹೋದೇನು.ಆದರೆ ಮೊದಲ ಸಲ ಬ್ರಮ್ಹಚಾರಿಯಾಗಿ/ಎರಡನೇ ಬಾರಿ
ಧನಶ್ರೀಗೆ ಪ್ರೀತಿಯ ಜೊತೆಯಾಗಿ ಇದ್ದವನನ್ನು ಈ ಬಾರಿ ಆರವನ‌ ಅಪ್ಪನಾಗಿ ನೋಡಬೇಕೆಂದಿದ್ದೆ.ಅದು
ಆಗುವುದಿಲ್ಲ ಎಂದಮೇಲೆ ಹೋಗುವಲ್ಲಿ ಹುರುಪೂ ಇರುವುದಿಲ್ಲ. ಅಲ್ಲದೇ ಅಲ್ಲಿ ಹೋಗಿ ಎರಡು ಪ್ರವಾಸಗಳನ್ನು ಸಂತೋಷದಿಂದ ಕಳೆದ ನೆನಪುಗಳು ಇನ್ನೂ ಹಸಿರಾಗಿ ರುವಾಗ ಹೇಮಂತನಿಲ್ಲದ ಪ್ರವಾಸ ಕಲ್ಪನೆಗೆ ತಂದುಕೊಳ್ಳಲೂ ಕಷ್ಟ... ಹಾಗೆಂದು ಅವನಿಗೆ-Rest in peace- ಅನ್ನಲೂ ಆಗುವುದಿಲ್ಲ.
  ‌‌      
      ದೇವರೇ! ಈ ಬಾರಿ ನಿನ್ನನ್ನು
ಕ್ಷಮಿಸುವುದಿಲ್ಲ...



Friday 15 March 2024

ಹಸಿರಿದ್ದಲ್ಲಿ ಮೇದು...ಬೆಚ್ಚಗಿದ್ದಲ್ಲಿ
ಮಲಗಿ...          
    ‌          ದೂರದ ದಾರಿ ಕ್ರಮಿಸುವಾಗ
ಕೆಲವೊಮ್ಮೆ ಹೊರಳು ನೋಟ ಬೇಕೇ ಬೇಕು. ಒಂದು ವಯಸ್ಸಾಗಿ ದೇಹದಿಂದ ಲೋ/ಮನಸ್ಸಿನಿಂದಲೋ 'ಇನ್ನು ಸಾಕಪ್ಪಾ'- ಅಂತ ಒಮ್ಮೆಯಾದರೂ ಅನಿಸುವುದು ಸ್ವಾಭಾವಿಕ.ಆಗ ಕಳೆದ 
ಬದುಕಿನ ಸಿಹಿ ಕಹಿ ನೆನಪುಗಳೇ ನಂತರದ ಬದುಕನ್ನು 'ಹದ' ಗೊಳಿಸು ತ್ತವೆ.
   ‌      ‌‌‌‌      ನನ್ನ ಬಾಲ್ಕನಿಯಂದರೆ ನಾನು ಹೀಗೆ ಧ್ಯಾನಸ್ಥಳಾಗುವ ಜಾಗ...ಎಲ್ಲರೂ ತಮ್ಮತಮ್ಮ ಕೆಲಸ ಗಳಲ್ಲಿ ಮಗ್ನರಾದಾಗ ನನ್ನ ವಿರಾಮ ಕ್ಕಿದು ತಕ್ಕ ಸಮಯ.ನನ್ನ ನೆನಪಿನ ನವಿಲು ' ಗರಿಬಿಚ್ಚಿ' ಕುಣಿವ ಕಾಲ...

   ‌‌       ಒಂದು ಕಾಲವಿತ್ತು. ಇದಕ್ಕೆ ಬಡತನವೆನ್ನುತ್ತಾರೆ- ಎಂದು ಗೊತ್ತೇ ಇಲ್ಲದೇ ಹಸಿದಾಗ ಬೊಗಸೆ ನೀರು ಕುಡಿಯುತ್ತಿದ್ದೆವು.ಇವು 'ದೇಹಕ್ಕೆ ಅವಶ್ಯವಾದವುಗಳು ಎಂದು ತಿಳಿಯದೇ ಬಯಲಲ್ಲಿ ಆಡುತ್ತಿದ್ದೆವು.
ಬೇರೆಯವರ ಮನೆಯಲ್ಲಿ ಇರಲು ಕೆಲವು ನಿಯಮಗಳಿರುತ್ತವೆ ಎಂಬುದನ್ನು ಲೆಕ್ಕಿಸದೇ ಎಲ್ಲೆಲ್ಲೋ  ವೇಳೆ ಕಳೆಯುತ್ತಿದ್ದೆವು.ರ್ಯಾಂಕ್/ class/ ಸ್ಪರ್ಧೆಗಳೇ ಇಲ್ಲದ ಶಾಲೆಗಳಿಗೆ
ಹೋಗುತ್ತಿದ್ದೆವು.ಉತ್ತಮ ಸ್ಥಾನಗಳನ್ನು ಪಡೆದವರು/ನಪಾಸಾದವರು ಒಟ್ಟಿಗೆ ಸೇರಿಯೇ ಹೆಗಲಮೇಲೆ ಕೈಹಾಕಿಕೊಂಡೆ
ರಜೆ ಕಳೆದುಬಿಡುತ್ತಿದ್ದೆವು. ಅವರು ಪಾಸಾದ ಪಾರ್ಟಿ 'ಶುಂಠಿ' ಪೆಪ್ಪರ್ ಮೆಂಟ್ ಇಲ್ಲವೇ ಕಿತ್ತಲೆ ತೊಳೆಯ ಪೆಪ್ಪರ್ಮೆಂಟ್ಗಳಲ್ಲಿ ಆಚರಿಸಲ್ಪಡುತ್ತಿ ದ್ದವು.ಅದೂ ದೊಡ್ಡವರೂ ಮನಸ್ಸು
ಮಾಡಿ, ಆಣೆಯೊಂದನ್ನು ಕೊಟ್ಟರೆ...

        ಆಟಗಳೂ ಗುಂಪು ಆಟಗಳೇ...
ಈಗಿನಂತೆ ಒಬ್ಬನಿಗೆ ಒಂದು ಕೋಣೆಯಿದ್ದು,ಅದರ ಬಾಗಿಲು ಜಡಿದು, ಅಮ್ಮ- ಅಪ್ಪನ ಕೂಗಿಗೂ ಲೆಕ್ಕಿಸದೇ ಕಳೆದು ಹೋಗುವ  ಬೋರ್ಡ ಗೇಮ್ ಅಥವಾ online game ಗಳಲ್ಲ. ಆಡಲು ಬಾರದ ಮಕ್ಕಳನ್ನೂ ಜೊತೆಗೆ ಸೇರಿಸಿಕೊಂಡು,  'ಲೆಕ್ಕಕ್ಕುಂಟು, ಆಟಕ್ಕಿಲ್ಲ'-ಮಾಡಿಬಿಡು ತ್ತಿದ್ದೆವು. ಆಡಲೂ ಹೆಚ್ಚಿಗೆ ಬೆಲೆಯ ಆಟಿಕೆಗಳು ಇರುತ್ತವೆ ಎಂಬುದೇ ಗೊತ್ತಿರದ ಕಾಲ ಅದು.ಜೋಳದ ದಂಟು, ಕಲ್ಲು, ಮಣ್ಣು, ಬಳೆ ಚೂರು, ಡಬ್ಬಿ ಸಿಗದ ಮುಚ್ಚಳ, ಮುಚ್ಚಳ ಕಳೆದ ಡಬ್ಬಿ, ಅಮ್ಮನ ಸೀರೆ,ಅಪ್ಪನ ಪಂಜೆ, ಗಾಜಿನ ಗೋಲಿಗಳು ಏನೆಲ್ಲಾ ಆದಿ- ಅಂತ್ಯ ಗಳಿಲ್ಲದ ಸರಕುಗಳೇ ನಮ್ಮ Toy store ನಲ್ಲಿ ಬಿಕರಿಯಾಗುವ ಆಟಿಗೆಗಳು.ದಣಿದಾಗ ಮಲಗಲಂತೂ ಒಂದು ಹರಿ ಹಾಸಿಗೆ ಅಂದರೆ 'ಏಕ ಹಾಸು'...ಇದ್ದಷ್ಟು ದಿಂಬು - ಹೊದಿಕೆ ಗಳನ್ನಂತೂ ಇತರರಿಗೆ ನಿದ್ದೆ ಹತ್ತುವ ವರೆಗೂ ಕಾಯ್ದು ಕಳವು ಮಾಡಲು ಕಾಯುವ ಅಣ್ಣಂದಿರು-ಅಕ್ಕಂದಿರು ಪ್ರತಿ ಮನೆಯಲ್ಲೂ ಇರುತ್ತಿದ್ದರು.

    ‌‌‌     ಎಲ್ಲದರಲ್ಲಿಯೂ, ಎಲ್ಲವೂ ಹೀಗೇ... ಸಾಮೂಹಿಕ...ಅದನ್ನೇ ಬರೆದರೆರಡು ಪುಸ್ತಕಗಳಾದಾವು.ಆದರೆ
ಬರೆಯಲಾರೆವು,ಏಕೆಂದರೆ ಆಗಿನವರಿಗೆ ಲ್ಲವೂ ಗೊತ್ತಿದೆ. ಈಗಿನವರಿಗೆ
ಅದಾವುದರ ಅವಶ್ಯಕತೆಯೇ ಇಲ್ಲ...

           ಹೀಗೆಯೇ ಕಳೆದ ಬದುಕು
ನಮಗೆ ಕಲಿಸಿದ ತಾಳ್ಮೆ- ಸಹಜೀವನ, ಹಂಚಿಕೊಳ್ಳುವಿಕೆ,ಸ್ಪರ್ಧೆ- ಅಸೂಯೆಗ ಳು ಅಷ್ಟಾಗಿ ಇಲ್ಲದ ಜೀವನದ ಪರಿಣಾಮವೇ ಬಹುಶಃ ಈ ವಯಸ್ಸಿನ ಲ್ಲಿಯೂ ಬಾಲ್ಕನಿಯಲ್ಲೊಂದು Recliner chair ಹಾಕಿಕೊಂಡು ಅಪರೂಪದ- ಅಲಭ್ಯ - ಆಲ್ಹಾದಕರ
ನೆನಪುಗಳಲ್ಲಿ ಕಳೆದುಹೋಗುವ ' ವರ'-
ವೊಂದನ್ನು ದಯಪಾಲಿಸಿರಬೇಕು...



         

   ‌‌‌‌        







Thursday 14 March 2024

 ಬಾಲ್ಕನಿಯಿಂದ...
          
    ‌‌ ‌‌‌‌‌    ಹೊಸ ಮನೆಗೆ ಬಂದು ಬರಿ ಒಂದೂವರೆ ತಿಂಗಳೂ ಆಗಿಲ್ಲ.ಐದು
Bedroom ಗಳ ಸ್ವಂತ ಮನೆ ಬಾಡಿಗೆಗೆ ಕೊಟ್ಟು ಮೂರು ಬೆಡ್ರೂಮ್ flat ಒಂದಕ್ಕೆ ಬದಲಾಗಬೇಕಾದ ಅನಿವಾರ್ಯತೆ ಬಂದಾಗ ಸಾಕಷ್ಟು
ಯೋಚಿಸಬೇಕಾಯ್ತು.ಆದರೆ ಮನೆಯ ಎಲ್ಲರೂ ಬೇರೆ ಬೇರೆ ಏರಿಯಾಗಳಿಗೆ
ಸ್ಕೂಲ್/ ಕಾಲೇಜು/ office ಅಂತ ಮತ್ತೆ ಮತ್ತೆ  ತಿರುಗಾಡಬೇಕಾಗಿ ಬಂದಾಗ ಎಲ್ಲದಕ್ಕೂ ಅನುಕೂಲವಾ
ಗುವ ಜಾಗವೊಂದನ್ನು ಹುಡುಕಬೇಕಾ ದ  ಅವಶ್ಯಕತೆ ಎದುರಾಗಿ ಈ ನಿರ್ಧಾರ ತಡವಾಗಿಯಾದರೂ ತೆಗೆದುಕೊಳ್ಳಲೇ
ಬೇಕಾಯಿತು...
              ಸರಿ, ಅರ್ಧಕ್ಕರ್ಧದಷ್ಟು ಸಾಮಾನುಗಳನ್ನು ಬಿಟ್ಟುಬರುವ/ ಹಂಚುವ/ ಕೆಲವನ್ನು ಮಾರಬೇಕಾದ
ಅನಿವಾರ್ಯತೆಯನ್ನು ಒಪ್ಪಿಕೊಂಡು
ಅವಶ್ಯಕತೆ ಇದ್ದಷ್ಟೇ ಎತ್ತಿ ಹಾಕಿಕೊಂಡು
ಬಂದು ಎರಡು ತಿಂಗಳಾಗುತ್ತ ಬಂತು.
ಆಶ್ಚರ್ಯವೆಂದರೆ ಒಂದೇ ಒಂದು ಬಿಟ್ಟು ಬಂದ ವಸ್ತುವಿನ ಕೊರತೆ ಕಾಡಿಲ್ಲ.ಮನೆ ದೊಡ್ಡದು, ಇಡಲು ಜಾಗದ ಅಭಾವವಿರಲಿಲ್ಲ,ಯಾರಿಗೆ ಏನು ಬೇಕೋ ಅದೆಲ್ಲ ಮನೆಯನ್ನು ಸೇರುತ್ತಿತ್ತು.ಅವು ಎಲ್ಲ ಎಲ್ಲಿದ್ದವೋ ಕೂಡ ಗೊತ್ತಿರಲಿಲ್ಲ. ಎಲ್ಲವನ್ನೂ ಹೊರ ತೆಗೆದು ಗುಡ್ಡೆ ಹಾಕಿದಾಗಲೇ ನಮಗೆ ಗೊತ್ತಾಗಿದ್ದು.ಈ ಮನೆ ಚಿಕ್ಕದೆಂಬ ಕಾರಣಕ್ಕೆ ಏನೆಲ್ಲಾ ಅಲ್ಲೇ ಕೊಟ್ಟು/ಬಿಟ್ಟು ಬಂದರೂ ಒಂದಿಷ್ಟೂ ಸಹ
ಕೊರತೆಯೆನಿಸದಾಗ ನಮಗೇನೇ ನಮ್ಮ ಅನವಶ್ಯಕ ಸಂಗ್ರಹದ ಬಗ್ಗೆ ಅಚ್ಚರಿ.ಅಲ್ಲಿ ಮನೆಗೆಲಸದ ಸಹಾಯಕಿ ಯಾಗಿ ಇಡೀ ದಿನ ಒಬ್ಬಳು ಮನೆಯಲ್ಲಿ ಇರುತ್ತಿದ್ದಳು.ಇಲ್ಲಿ flat ನಲ್ಲಿ ಹಾಗೆ
ಇಟ್ಟುಕೊಳ್ಳುವ ಒಂದು ಸಾಧ್ಯತೆಯೇ 
ಇರಲಿಲ್ಲ.ಎಲ್ಲ ಮನೆಗಳಂತೆ ತಾಸೆರಡು ತಾಸು ಬಂದು ಮಾಮೂಲಿ ಕೆಲಸ ಮುಗಿಸಿ ಹೋಗುತ್ತಾಳೆ.ಅದೂ ಸಮಸ್ಯೆ ಎನಿಸಿಲ್ಲ.ಹೀಗೇನೇ ನಾವು ಇದುವರೆಗೆ
ನಡೆದುಕೊಂಡು ಬಂದದ್ದು ಎಂಬಷ್ಟು
ಸಹಜವಾಗಿಯೇ ಇದ್ದುಬಿಟ್ಟಿದ್ದೇವೆ. ಅಲ್ಲಿದ್ದದ್ದು independent villa ಆದ ಕಾರಣ ಕ್ಷಣಕ್ಕೊಮ್ಮೆ ಹೊರಬಂದು ಸುತ್ತಾಡುವ ಚಟವಿತ್ತು.ಇಲ್ಲಿ ಆರನೇ floor. ಒಮ್ಮೆಕೆಳಗಿಳಿದು walking ಮುಗಿಸಿಬಿಟ್ಟರೆ ಮತ್ತೆ ಮರುದಿನವೇ 
ಕೆಳಗೆ ಹೋಗುವುದು...ಅದೂ O.K ಯಾಗಿದೆ.
             ಅಲ್ಲಿ ಇದ್ದಷ್ಟು ನಮ್ಮ ಸಮಾನ ವಯಸ್ಕರೂ ಇಲ್ಲಿಲ್ಲ...ಕೇವಲ ಮೂರೇ ಮೂರು ಕನ್ನಡ families.ಅದೂ ಅವರಾರೂ ನನ್ನ ವಯೋಮಾನದವ ರಲ್ಲ...ದೂರದಿಂದ ಮುಗುಳ್ನಗೆ ತೂರಿ
ಕೈಯಾಡಿಸಿ ನಡೆದು ಬಿಡುತ್ತಾರೆ.ಒಂದು ವೇಳೆ ನಿಂತು ಮಾತನಾಡಿದರೂ ಬದಲಾಗುವ Wave length ಗಳಿಂದಾ ಗಿ ವಿಷಯಗಳೂ ಇರುವುದಿಲ್ಲ. ಆದರೆ
ನೋಡಿ ಅದಾವುದೂ ನನ್ನನ್ನು ಕಿಂಚಿತ್ತೂ ಕಾಡಿದ್ದಿಲ್ಲ.ನನ್ನ ತಿರುಗಾಟದ
ಸಮಯ ಮುಗಿಸಿ ಮನೆಗೆ ಬಂದರೆ
ನನ್ನ ರೂಮಿನ‌ ಬಾಲ್ಕನಿಯೇ ಒಂದು ಪುಟ್ಟ ವಿಶ್ವ...ಇಲ್ಲಿಂದಲೇ ಹಳೆಯ/ ಹೊಸ ಗೆಳತಿಯರ - ಸಂಬಂಧಿಕರ ಸಂಪರ್ಕ- ಫೋನ್- ಫೇಸ್ ಬುಕ್ ಮುಖಾಂತರ...
               ಈಗ ನನ್ನನ್ನು ಕಾಡುವ ಪ್ರಶ್ನೆ ಎಂದರೆ- ಎಷ್ಟೋ ವರ್ಷಗಳ ನಂಟೊಂ ದನ್ನು ಈ ರೀತಿ ನಿರ್ಭಾವುಕತೆಯಿಂದ
ಬದಿಗಿರಿಸುವ ಮನಸ್ಥಿತಿ ನಮಗೆ ಹೇಗೆ ಬರುತ್ತದೆ??? 
   ‌‌‌‌‌          ಅನಿವಾರ್ಯವಾಗಿಯೇ? ಹೊಂದಿಕೊಳ್ಳಲೇಬೇಕಾದ ಪರಿಸ್ಥಿತಿ ಗನುಗುಣವಾಗಿಯೇ?ಅವಕಾಶವಾದಿ ತನದ ನಮ್ಮ ಸ್ವಭಾವದಿಂದಲೇ?ಈಗ ಬದಲಾದ ಸ್ಥಿತಿಯಿಂದ ನಮಗಾಗುತ್ತಿ ರುವ ಅನುಕೂಲತೆಗಳಿಂದಲೇ?ಫೋನ್,ಫೇಸ್‌ಬುಕ್‌, What's App
ಮುಖಾಂತರ ಎಲ್ಲ ರೀತಿಯ ಸಂಪರ್ಕ
ಸಾಧ್ಯವಿದ್ದ ಕಾರಣಕ್ಕಾಗಿಯೇ? ಅಥವಾ
ಏನೊಂದೂ ದಾರಿ ಇಲ್ಲವೆಂದೇ?
  



Wednesday 13 March 2024

ಗೆ ಆಕಾಶವೂ ಮಿತಿಯಲ್ಲ...       
     ಜಯಶ್ರೀ ದೇಶಪಾಂಡೆ ಹಾಗೂ ನನ್ನ ಸ್ನೇಹ-ಪರಿಚಯ ಹತ್ತು ವರ್ಷಗಳ ಇತ್ತೀಚಿನದು...ನಮ್ಮಅಂತಃಪುರ group ನ್ನು ನಾನು ಸೇರಿಕೊಂಡ ಮೇಲಿನದು...ಫೇಸ್ಬುಕ್ ಮನೆ ಮನೆ ತಲುಪಿ ಆಗಲೇ ಎಲ್ಲರನ್ನೂ ತನ್ನ ನಿಯಂತ್ರಣದ ತೆಕ್ಕೆಗೆ ತೆಗೆದುಕೊಳ್ಳುತ್ತಿ ದ್ದರ ಹೊಸತರಲ್ಲಿ...
          ‌‌‌ಆದರೆ ಅವರ ಹೆಸರು ನನ್ನ ಕಾಲೇಜು ದಿನಗಳಿಂದಲೂ ನಮಗೆಲ್ಲ ಸುಪರಿಚಿತ.ಅಭ್ಯಾಸದ ಏಕತಾನತೆ
ಯಿಂದ ಬೇಸತ್ತು ಬದಲಾವಣೆ ಬಯಸಿದಾಗಲೆಲ್ಲ ಕೈಗೆತ್ತಿಕೊಳ್ಳುತ್ತಿದ್ದ
ಪ್ರತಿ ಮ್ಯಾಗಝೈನ್ ಗಳಲ್ಲೆಲ್ಲ ಅವರ
ಹೆಸರು ಕಡ್ಡಾಯವೇನೋ ಎಂಬಂತೆ
ಕಾಣುತ್ತಿದ್ದ ದಿನಗಳವು.ಕಾಣದಿದ್ದರೆ
ಅದನ್ನು ಹುಡುಕಿ ಅವರ ಲೇಖನಗಳ
ನ್ನು‌ ಓದಿದ ನಂತರವೇ ದಿನವೊಂದು ಸಾಂಗವಾದಂತೆ...
   ‌      ಪರಸ್ಪರ ಪರಿಚಯವಾದ ಮೇಲೆ -ನನಗೆ ತಿಳಿದದ್ದು, - ಕೇವಲ ತೇಲುವ ಮಂಜುಗಡ್ಡೆಯ ತುದಿ ಮಾತ್ರ- ನಾನು ಕಂಡದ್ದು...ಪೂರ್ತಿ ಗೊತ್ತಾಗಲು ವರ್ಷಗಳೇ ಬೇಕಾಗಬಹುದು ಎಂಬ‌ ಸತ್ಯ.. ಕಾಣಿಸಲು ತುಂಬ ನಾಜೂಕು,
ನಯ- ವಿನಯ, ಮೃದು ಮಾತುಗಳು,
ಮುಂದೆ ಮುಂದೆ ತೋರಿಸಿಕೊಳ್ಳುವು ದಕ್ಕಿಂತಲೂ ಹಿಂಜರಿಯುವ ಸ್ವಭಾವ, ಇನ್ನೂ ಕಲಿಯುವುದು ಸಾಕಷ್ಟಿದೆ/ ನಾನೇನೂ ಹೆಚ್ಚಿಗೆ ಸಾಧಿಸಿಲ್ಲ ಎಂಬ ವಿನೀತ ಭಾವ, ಇವುಗಳಿಂದಾಗಿ ಅವರ ಸಾಹಿತ್ಯ ಪ್ರತಿಭೆಯ ಆಳ- ಅಗಲ ಗೊತ್ತಾಗಲು ಅವರ ಜೊತೆಯಲ್ಲಿದ್ದು ಪರಿಚಯವಾಗಬೇಕು ಇಲ್ಲವೇ ಅವರ ಸಾಹಿತ್ಯ ಪ್ರಪಂಚ ಹೊಕ್ಕು ಬರಬೇಕು
ಎಂಬುದು ನನಗೆ ಬಹು ಬೇಗನೇ ಅರಿ
ವಾಯಿತು...
   ‌‌        ತಿರು ಶ್ರೀಧರ ಅವರು ಹೇಳಿದಂತೆ, ಜಯಶ್ರೀ ದೇಶಪಾಂಡೆ ಅಂದರೆ ತಕ್ಷಣವೇ ಮನಸ್ಸಿನಲ್ಲಿ ಮೂಡಿಬರುವುದು ವಿಶ್ವದೆಲ್ಲೆಡೆಯ ಮನಗಳ ಸೂಕ್ಷ್ಮಾತಿಸೂಕ್ಷ್ಮಗಳ ಎಳೆಗಳನ್ನು ಒಂದೆಳೆಯಾಗಿ ಪೋಣಿಸುವ ವಿಶಿಷ್ಟ ಬರಹಗಳು,-
ಕವನಗಳು,ಕಥೆಗಳು,ಹರಟೆಯಂಥ ಲಘು ಬರೆಹಗಳು,ಪ್ರವಾಸ ಕಥನಗಳು,
ಕಾದಂಬರಿಗಳು,ವಿಮರ್ಶಾಲೇಖನಗಳು ಏನೆಲ್ಲ ಸಾಹಿತ್ಯ ಪ್ರಕಾರಗಳಿವೆಯೋ ಎಲ್ಲದರಲ್ಲೂ ಸಿದ್ಧಿ ಪಡೆದದ್ದಲ್ಲದೇ ಹೆಚ್ಚು ಕಡಿಮೆ ಪ್ರತಿಯೊಂದರಲ್ಲೂ 
ಪ್ರಶಸ್ತಿ, ಸನ್ಮಾನಗಳನ್ನು ಪಡೆದ ಲೇಖಕಿ
ಎಂದು ಗುರುತಿಸಿಕೊಂಡವರು ಜಯಶ್ರೀ. ಅವೆಲ್ಲವುಗಳ ಯಾದಿಗೆಂದೇ ಒಂದು ಕೈಪಿಡಿ ಪ್ರಕಟಿಸಬೇಕಾಗಬಹು ದೇನೋ!
   ‌‌‌‌       ಸಧ್ಯದ ವಿಶೇಷವೆಂದರೆ ಆ ಯಾದಿಗೆ ಮತ್ತೊಂದು ಪ್ರಶಸ್ತಿಯ ಗರಿ.
ಅವರ ಪ್ರವಾಸ ಕಥನ" ಹೊಸ ನಾಡು...ಹೆಜ್ಜೆ ಹಾಡು" ಪುಸ್ತಕಕ್ಕೆ ನಾಡೋಜ ಡಾ ಸಾರಾ ಅಬೂಬಕ್ಕರ ದತ್ತಿ ನಿಧಿ ಪ್ರಶಸ್ತಿ ದೊರಕಿದ್ದು, ಸಧ್ಯದಲ್ಲೇ  ಅಂದರೆ ಮುಂಬರುವ ಬುಧವಾರದಂದು,( ೨೪- ಮಾ) ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುವುದಿದೆ. ಕಾರ್ಯಕ್ರಮ ಆಯೋಜನೆ, ಪ್ರಶಸ್ತಿ ಪ್ರದಾನ,  ಇದು ರಾಜ್ಯ'ಕರಾವಳಿ ಲೇಖಕಿಯರ, ವಾಚಕಿಯರ ಸಂಘ 
( ರಿ).ಇವರಿಂದ...
 ‌‌‌            ಇನ್ನೇನಿದ್ದರೂ ಕಾರ್ಯಕ್ರಮ 
ಮುಗಿದ ಮೇಲೆ ಅದರ ವಿವರಗಳು/ ಅನುಭವ/ಆನಂದಗಳು ಎಲ್ಲರಿಗೂ ದಕ್ಕುವುದಷ್ಟೇ ಬಾಕಿ...
         ‌ 




Sunday 10 March 2024

ಇಂದು ಮಾರ್ಚ ಹತ್ತು...
'ವಾಹ್...ವಾಹ್'...ಅದ್ಭುತ-' ಎಂದು ಹೇಳುವ  ದಿನ...
       This is really AWESOME...
ಎಂದು ಹೇಳಿ ಮೆಚ್ಚುಗೆ ವ್ಯಕ್ತ ಪಡಿಸುವ ಅಂತರ್ ರಾಷ್ಟ್ರೀಯ ದಿನವಂತೆ
ಇಂದು...ಹಾಗೆಂದು ಬಿ.ಕೆ ಸುಮತಿಯವರ post ಒಂದನ್ನು ಇಂದು ಬೆಳಿಗ್ಗೆಯೇ ನೋಡಿದೆ.ತಕ್ಷಣ ನೆನಪಾದದ್ದು ಶ್ರೀಮತಿ ಶಾಲಿನಿ ಮೂರ್ತಿಯವರ 'ಕಥೆಗಳ ತೋರಣ'ದ
ಐದು ಮತ್ತು ಆರನೆಯ ಆವೃತ್ತಿ ಗಳ
ಬಿಡುಗಡೆ ಸಮಾರಂಭ...ಈ ಮೊದಲೇ ನಾಲ್ಕು ಪುಸ್ತಕಗಳ ಬಿಡುಗಡೆಯು  ಮುಗಿದಿದ್ದು ಈ ಬಾರಿ ಮಕ್ಕಳ ಜೊತೆಗೇನೆ/ ಅವರದೇ ಶಾಲೆಯಲ್ಲಿ ಯೇ ಬೆಳಗಿನ ಉಪಹಾರದಿಂದ  ಹಿಡಿದು ಪುಸ್ತಕ ಬಿಡುಗಡೆ/ಕಥಾ ವಾಚನ/ ಚಿತ್ರಗಳಿಗೆ ಬಣ್ಣ ತುಂಬುವುದು ಮುಂತಾದ ಕಾರ್ಯಕ್ರಮವನ್ನು ಸಾಂಗಗೊಳಿಸಿ
ಆ ದಿನದ ಬಹುಭಾಗವನ್ನು ಮಕ್ಕಳಂತೆಯೇ ಕಳೆದು ಸ್ವಂತಕ್ಕೂ- ಮಕ್ಕಳಿಗೂ ಹೊಸ ಚೇತನ ತುಂಬಿದ
ವಿಶೇಷ ದಿನ...ನನ್ನ ಮಟ್ಟಿಗೆ ಅದು
' ವಾಹ್...ವಾಹ್...ಅದ್ಭುತ' ಎನಿಸಿದ್ದು
ಅಚ್ಚರಿಯ ವಿಷಯವೇನೂ ಅಲ್ಲ... ಅದನ್ನೇ ತಮ್ಮದೇ ಶಬ್ದಗಳಲ್ಲಿ 
ಶಾಲಿನಿ ಮೂರ್ತಿ ವ್ಯಕ್ತ ಪಡಿಸಿದ್ದು ಹೀಗೆ...

         "ಕೇವಲ ಒಂದು ವರ್ಷದ ಹಿಂದೆ ನನ್ನ ದೂರದ ಕನಸಾಗಿದ್ದ ಕಥೆ ಪುಸ್ತಕಗಳನ್ನು ಬರೆಯಬೇಕೆಂಬ ಇಚ್ಛೆಯೊಂದು ಸಾಕಾರಗೊಂಡು, ಒಂದು ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಯಡಿ ಪ್ರಕಟಗೊಂಡು ಇಂಥದೊಂದು ಕಾರ್ಯಕ್ರಮ ಮಕ್ಕಳ ನಡುವೆ ನಾವೆಲ್ಲರೂ ಬೆರೆತು ಆಚರಿಸುತ್ತೇವೆ ಎಂಬ ಕನಸೊಂದು ನನಸಾಗುತ್ತದೆ ಎಂಬ ಕಿಂಚಿತ್ತೂ ಕಲ್ಪನೆಯಿರಲಿಲ್ಲ.
ದೇವರು ದೊಡ್ಡವನು!ಅಂಥ ನನ್ನ ಒಂದು ಕನಸನ್ನು ಅವನು ಸಾಕಾರ ಗೊಳಿಸಿದ ದಿನವಿದು.‌ಈ ಕಾರ್ಯಕ್ರಮ ವನ್ನು ಇಷ್ಟು ಸಡಗರದೊಂದಿಗೆ,
ಇಷ್ಟೊಂದು ಕ್ರಮಬದ್ಧವಾಗಿ ನಡೆಸಿ ಕೊಟ್ಟ ಅನಂತನಗರ ವಿದ್ಯಾನಿಕೇತನ ಶಾಲೆಯ ಆಡಳಿತ ಮಂಡಳಿ/ ಶಾಲಾ ಸಿಬ್ಬಂದಿ/ ಮುದ್ದು ಮುದ್ದಾದ ಮಕ್ಕಳು ನನ್ನ ಮಟ್ಟಿಗೆ ಒಂದು ಪವಾಡವನ್ನೇ ಮಾಡಿದ್ದಾರೆ.ನಾವು ಇಂದು ಬಿಡುಗಡೆ ಗೊಳಿಸಿದ್ದು'ಕಥೆಗಳ ತೋರಣ'ದ
ಐದು ಮತ್ತು ಆರನೆಯ ಸಂಪುಟಗಳು. ಒಟ್ಟು ಹನ್ನೆರಡು ಪುಸ್ತಕಗಳ
ಯೋಜನೆಯಲ್ಲಿ ಇದೀಗ ಕ್ರಮಿಸಿದ್ದು ಸರಿ ಅರ್ಧ ದಾರಿ ಮಾತ್ರ...ಇಂದಿನ ಕಾರ್ಯಕ್ರಮದಲ್ಲಿ ಮಕ್ಕಳ ಕಣ್ಣುಗಳ ಹೊಳಪು/ ಮುಖದ ಮೇಲಿನ ಕುತೂಹಲಗಳು ನನಗೆ ಮುಂದಿನ ಆರು ಪುಸ್ತಕಗಳನ್ನು ಆದಷ್ಟು ಬೇಗ ಹೊರ ತರಬೇಕೆಂಬ ಹುಮ್ಮಸು ತುಂಬಿವೆ.
ಆದಷ್ಟು ಬೇಗ ಆ ಕೆಲಸ ಮುಗಿಸಿ ಮಕ್ಕಳ ಕೈಗೆ ಇಡುತ್ತೇನೆಂಬ ಬಗ್ಗೆ ಅಗಾಧವಾದೊಂದು ನಂಬಿಕೆಯಿದೆ. ಈ ನಂಬಿಕೆ- ವಿಶ್ವಾಸಗಳನ್ನು ಹೆಚ್ಚು ಬಲ ಗೊಳಿಸಿದ ಇಂದಿನ ಕಾರ್ಯಕ್ರಮಕ್ಕೆ /ಅದರ ಅನಂತನಗರ ಶಾಲೆಯ ರೂವಾರಿಗಳಿಗೆ ಎಲ್ಲರಿಗೂ ನನ್ನ ' ಅನಂತಾನಂತ' ಕೃತಜ್ಞತೆಗಳು..."
       
     
  ‌‌‌    
       

Friday 23 February 2024

ಎಪ್ಪತ್ತರಿಂದ ಎಂಬತ್ತು - ಹೀಗಿದ್ದರೆ ಗತ್ತು...

* ನನ್ನಮ್ಮ/ಅಪ್ಪ / ಅಣ್ಣ ತಮ್ಮಂದಿರು/ ಹೆಂಡತಿ ಮಕ್ಕಳು ಅಂತ ಎಲ್ಲರನ್ನೂ ಪ್ರೀತಿಸಿ/care ಮಾಡಿ ಆಗಿದೆ.ಇದೀಗ ನನ್ನನ್ನೇ ನಾನು ಪ್ರೀತಿಸತೊಡಗಿದ್ದೇನೆ...

*ನಾನು Globe ಅಲ್ಲ...ಇಡೀ ಜಗತ್ತಿನ 
ಭಾರ ಹೊತ್ತು ನಿಂತಂತೆ ನನಗೆ ಅನಿಸಬೇಕಿಲ್ಲ...

* ಹಣ್ಣು- ಕಾಯಿಪಲ್ಯ ಮಾರುವಂಥ ಚಿಲ್ಲರೆ ವ್ಯಾಪಾರಿಗಳ ಬಳಿ ನಾನೀಗ ಚೌಕಸಿ ಮಾಡುವುದಿಲ್ಲ.ಎಂಟಾಣೆ-ಒಂದು ರೂಪಾಯಿಯಿಂದ ನನಗೇನೂ ವ್ಯತ್ಯಾಸವಾಗುವುದಿಲ್ಲ.ಆದರೆ ಇಂಥ ಒಂದೊಂದೇ ರೂಪಾಯಿ ಅವರ ಮಕ್ಕಳ ಶಾಲೆಯ ಫೀಯ ಭಾರ ಕಿಂಚಿತ್ತಾದರೂ ಉಳಿಸಬಲ್ಲದು.
 
*ವಿಶೇಷ ಸಂದರ್ಭಗಳಲ್ಲಿ ಮನೆಗೆಲಸದವರಿಗೆ ಸ್ವಲ್ಪು ಹೆಚ್ಚೇ 'ಖುಶಿ' ಕೊಡುತ್ತೇನೆ...ಅವರ ಮುಖದ ಮೇಲಿನ ನಗೆಯ ಬೆಲೆ ಆ ದುಡ್ಡಿಗಿಂತ ಹೆಚ್ಚು...

*ಯಾರಾದರೂ ಹಿರಿಯರು ತಮ್ಮ ವಿಷಯ ಪದೇ ಪದೇ ಹೇಳಿದರೂ ನಾನವರನ್ನು ತಡೆಯುವುದಿಲ್ಲ.ಅವರ ನೆನಪಿನಂಗಳದಲ್ಲಿ ದಕ್ಕುವ ಖುಶಿಯಿಂದ ಅವರನ್ನು ವಂಚಿಸಲು
ಮನಸ್ಸಾಗುವುದಿಲ್ಲ...

* ಯಾರಾದರೂ ತಪ್ಪು ಮಾಡುತ್ತಿದ್ದಾರೆ ಎಂದು ತಿಳಿದರೂ ಅವರನ್ನು ತಿದ್ದುವ ಗೋಜಿಗೆ ಹೋಗುವುದಿಲ್ಲ.ಅದು ನನ್ನ ಕೆಲಸವೂ ಅಲ್ಲ.ಅಷ್ಟಕ್ಕೂ ಪರಿಪೂರ್ಣ ತೆಗಿಂತಲೂ ಮನಸ್ಸಿನ ಶಾಂತಿ ಹೆಚ್ಚು
ಹೆಚ್ಚು ಮುಖ್ಯ...

*ಒಳ್ಳೆಯ ಕೆಲಸಕ್ಕೆ ಸ್ವಲ್ಪ ಹೆಚ್ಚಾಗಿಯೇ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ.ಅದು ಅವರನ್ನು ಖುಶಿ ಪಡಿಸಿದರೆ ನನಗೂ ಮನಸ್ಸು ಅರಳುತ್ತದೆ...ಅದರಲ್ಲಿ ನಾನು ಕಳೆದುಕೊಳ್ಳುವುದೇನೂ ಇಲ್ಲ...

*ಯಾರಾದರೂ ಅನಾರೋಗ್ಯಕರ ಸ್ಪರ್ಥೆಗೆ ಇಳಿದರೆ  ಸರಿದು ನಿಂತು ಅವರಿಗೆ ದಾರಿಮಾಡಿಕೊಡುತ್ತೇನೆ... ಹೇಗ್ಹೇಗೋ ಗೆದ್ದು ಬೀಗುವುದು ನನಗಾಗದ ವಿಷಯ...

*ನನ್ನ ಭಾವನೆಗಳನ್ನು ಮುಕ್ತವಾಗಿ ಪ್ರದರ್ಶಿಸುತ್ತೇನೆ...ಭಾವನೆಗಳಿಲ್ಲದೇ ಮಾನವೀಯ ಮೌಲ್ಯಗಳಿಲ್ಲ...

*ನನ್ನ ಸಂಬಂಧಗಳು/ನನ್ನ ಅಹಮಿಕೆ ಗಳ ನಡುವೆ ಆಯ್ಕೆ ಬಂದರೆ ನನ್ನ ಆಯ್ಕೆ ಸಂಬಂಧಗಳೇ...ನನ್ನನ್ನು ಕೊನೆಯಲ್ಲಿ ಒಂಟಿಯಾಗಿಸುವ 'ಅಹಂ' ನನಗೆ ಬೇಡ...

*ನನ್ನ ಸಂತೋಷವೀಗ ನನ್ನದೇ ಜವಾಬ್ದಾರಿ...ಕಾರಣ ನನ್ನ ಸಂತೋಷ ಕ್ಕೆ ಬೇಕಾದುದನ್ನೆಲ್ಲ ಮಾಡಲು ನಾನು
ಸದಾ ಸಿದ್ಧಳಿ/ನಿದ್ದೇನೆ...
               ಏಕೆಂದರೆ ಸಂತೋಷವಾಗಿ ರುವುದೆಂದಿಗೂ ವೈಯಕ್ತಿಕ ಆಯ್ಕೆ...

Wednesday 21 February 2024

ಬಿ.ವಿ.ಭಾರತಿ...            
  ‌ನೆನಪುಗಳು ಕೆಲವೊಮ್ಮೆ ಮಧುರವೆನ್ನಿಸಿದರೆ, ಮತ್ತೆ ಕೆಲವೊಮ್ಮೆ ಶಿಕ್ಷೆಯೂ ಅನ್ನಿಸಿಬಿಡುತ್ತದೆ. ಆದರೆ ಚೆಂದದ ನೆನಪುಗಳು ಮಾತ್ರ ನನಗಿರಲಿ ಅನ್ನಲಾಗದು. ಬದುಕೆನ್ನುವ ಪ್ಯಾಕೇಜ್ ಡೀಲ್‌ ಸೂಪರ್ ಮಾರ್ಕೆಟ್‌ಗಳಲ್ಲಿ ಸಿದ್ಧ ಪಡಿಸಿಟ್ಟ ಈರುಳ್ಳಿ ಪ್ಯಾಕೆಟ್‌ನ ಹಾಗೆ. ಎಲ್ಲ ಸೈಜ಼್‌ನ ಗಡ್ಡೆಗಳ ನಡುನಡುವೆ ಒಂದೆರಡು ಕೊಳೆತವನ್ನೂ ಸೇರಿಸಿಬಿಟ್ಟಿರುತ್ತಾರೆ. ಮನೆಗೆ ಹೋಗಿ ತೆರೆದ ನಂತರವೇ ಅದು ಅರಿವಿಗೆ ಬರುವುದು. ಬದುಕಲ್ಲಿಯೂ ದೇವರು ಹೀಗೆಯೇ ಮಾಡಿರುತ್ತಾನೆ. ಹಲವು ನೋವಿನ ನೆನಪುಗಳು, ಹಲವು ಸಂಭ್ರಮದ ನೆನಪುಗಳು, ಹಲವು ವಿಷಾದದ ನೆನಪುಗಳು, ಹಲವು ದುಃಖದ ನೆನಪುಗಳು...

ಕೃಷ್ಣಾ ಮಾ ಎಂದೇ ನಾನು ಕರೆಯುವ ಕೃಷ್ಣಾ ಕೌಲಗಿಯವರ 'ಹಾಯಿ ದೋಣಿಯ ಪಯಣ'ದಲ್ಲಿನ ಎಲ್ಲ ಬರಹಗಳೂ ವಿವಿಧ ನೆನಪುಗಳು, ವಿವಿಧ ಅನಿಸಿಕೆಗಳು, ಸಂದರ್ಭಗಳು, ಸಂಭ್ರಮಗಳನ್ನು ಕುರಿತು ಬರೆದವು. ಮಾಗಿದ ಮನಸ್ಸಿನ ಬರಹಗಳು. ಏನೆಲ್ಲ  ಹೇಳುವಾಗಲೂ ಅವರದ್ದು ತಣ್ಣನೆಯ ದನಿ. ಬದಲಾದ ಬದುಕಿನ ಬಗ್ಗೆ ಬರೆಯುವಾಗಲೂ ಆಕ್ರೋಶವಿಲ್ಲ, ಚೀರಾಟವಿಲ್ಲ... ಒಪ್ಪಿಕೊಳ್ಳುವ ಸ್ಥಿತಪ್ರಜ್ಞತೆಯಷ್ಟೇ. ಅಲ್ಲಲ್ಲಿ ಸಣ್ಣ ವಿಷಾದ ತಲೆದೋರಿದರೂ, ಅದನ್ನು ಕೊಡವಿ ಮುಂದೆ ಸಾಗಿ ಯಾವುದೋ ಆಧುನಿಕ ಕಾಲದ ಬದಲಾವಣೆಯ ಬಗ್ಗೆ ಬೆರಗಿನಿಂದ ಹೇಳಲಾರಂಭಿಸುತ್ತಾರೆ! 

ಇಡೀ ಪುಸ್ತಕದಲ್ಲಿ ಅತ್ಯಂತ ನೋವಿನ ಬರಹವೆಂದರೆ ಅವರು ಓದಿ ಟೀಚರ್ ಆಗುವ ಸಂದರ್ಭ. ಇಡೀ ಪುಸ್ತಕದಲ್ಲಿನ ಎಲ್ಲ ಬರಹಗಳು ಸೇರಿ ಒಂದು ತೂಕವಾದರೆ, ಇದೊಂದು ಬರಹದ್ದೇ ಬೇರೊಂದು ತೂಕ. ಅದನ್ನು ಬರೆಯುವಾಗಿನ ಅವರ ಸಂಯಮ ನೀವು ಅವರ ಹಾಯಿ ದೋಣಿಯ ಪಯಣದಲ್ಲಿ ಜೊತೆಯಾದರಷ್ಟೇ ತಿಳಿಯುತ್ತದೆ...

ಭಾರತಿ ಬಿ ವಿ

Tuesday 20 February 2024

'ಹಾಯಿ ದೋಣಿ'ಯ ಪಯಣ'ಕ್ಕೆ ಮೊದಲು...
       ಇದ್ದಕ್ಕಿದ್ದಂತೆ ಗೊತ್ತಿಲ್ಲದೇ ಬಿರುಗಾಳಿಯೆದ್ದು ಹಾಯಿದೋಣಿಯ ಪಥ ದಿಕ್ಕೆಟ್ಟರೆ ಅದನ್ನು ತಡೆಯಲಾಗುವುದಿಲ್ಲ. ಏಕೆಂದರೆ ಹಾಯಿಯನ್ನು ಪೂರಕ್ಕೆ ಪೂರ ಬಿಚ್ಚಿಡದಿದ್ದರೆ ಅದಕ್ಕೆ ಬಿರುಗಾಳಿಗೆ ತನ್ನನ್ನು ಒಡ್ಡಿಕೊಳ್ಳಲೂ ಗೊತ್ತಾಗುವುದಿಲ್ಲ, ಅದರಿಂದ ತಪ್ಪಿಸಿಕೊಳ್ಳುವುದೂ ಗೊತ್ತಿರುವುದಿಲ್ಲ. ಸಾವಧಾನದಿಂದಿದ್ದರೆ ಈ ಎಲ್ಲ ಏರುಪೇರುಗಳಿಗೂ ಅದು ತನ್ನನ್ನು ತಾನು ಒಡ್ಡಿಕೊಂಡೂ ಗಮ್ಯವನ್ನು ಮುಟ್ಟಲು ಸಾಧ್ಯ.. 
      'ಜೀವನ' ಎಂದರೂ ಹಾಗೇ... ಉಸಿರು ನಿಲ್ಲೋ ತನಕ ಮುಗಿಯದ ಪಯಣ.ಅದೃಷ್ಟ ಶಕ್ತಿಯೊಂದು ಅದನ್ನು ನಿರ್ದೇಶಿಸುತ್ತಿರುತ್ತದೆ. ಹಾಗಾಗಿ ಈ ಪಯಣ ಎಂದರೆ ಹಾಯಿ ದೋಣಿಯ ಪಯಣವಿದ್ದಂತೆ-ಅದು ಒಯ್ದತ್ತಲೇ ನಮ್ಮ ದಾರಿ...
      ಈ ಜೀವನದಲ್ಲಿ ಎಲ್ಲ ರೀತಿಯ ವ್ಯಕ್ತಿಗಳ ಪರಿಚಯವಾಗುತ್ತದೆ. ಒಳ್ಳೆಯತನ, ಕೆಟ್ಟತನಗಳ ಅರಿವಾಗುತ್ತದೆ. ಒಮ್ಮೊಮ್ಮೆ ನಮ್ಮಲ್ಲಿ ಅತ್ಯುತ್ಸಾಹವು ತುಂಬಿ ತುಳುಕಿದರೆ ಇನ್ನೊಮ್ಮೆ ನಿರುತ್ಸಾಹವೇ ಹಾಸಿ ಹೊದೆಯುವಷ್ಟು ಮಟ್ಟಿಗೆ ಮುಸುಕುತ್ತದೆ. ಹೀಗೆ ಎಲ್ಲ ಮುಖಗಳ ಈ ಅನುಭವಗಳ ಒಟ್ಟು ಸಂಗಮವೇ  ಈ ಜೀವನ ಯಾನ... 
        ‌ ಮಕ್ಕಳು ಓದಿದರೆ ನೆನಪು ಮನದಲ್ಲಿ ಬೇರೂರುವಂತೆ, ಯುವಜನರಿಗೆ ವರುಷಗಳು ಕಳೆದಂತೆ ತಾಯಿ-ತಂದೆಯರ ಸಂಸ್ಕಾರದ ನೆನಪುಗಳು/ ತಾಯಿಗೆ ತನ್ನ ಮಕ್ಕಳ ತುಂಟಾಟಗಳು, ಆಪ್ತರಲ್ಲಿ ಜಗಳ- ಮನಸ್ತಾಪವಾದಾಗ ಅವರೊಂದಿಗೆ ಕಳೆದ ಮಧುರ ಕ್ಷಣಗಳು-ಇಂಥ ನೆನಪುಗಳ ಸಂಪುಟವನ್ನು ತೆರೆದಾಗ ಎಂಥ ಜೀವನವೂ ಕುತೂಹಲವೆನ್ನಿಸುತ್ತದೆ.
    ಒಮ್ಮೆ ಆ ಅನುಭವಗಳನ್ನು ದಾಟಿ ಬಂದೆವಾದರೆ ಆ ನೆನಪುಗಳು ಸವಿ ಸವಿ ನೆನಪುಗಳು.. ಅಂದಿನ ಕಹಿ ನೆನಪುಗಳೂ ಕೂಡ  ಇಂದಿನ ದಾರಿದೀಪಗಳಾಗಿಬಿಡುತ್ತವೆ. ಆಗೆಲ್ಲ
ಯಾವುದೇ ಭಾವನಾ ತೀವ್ರತೆಗೆ ಸಿಲುಕದೇ ಹೊರಗೆ ನಿಂತುಕೊಂಡೇ ಅವುಗಳನ್ನು ನೆನೆಯಬಹುದು...

      ಹೀಗೆಯೇ ನೆನೆಯುತ್ತಾ ಹೋದ
ನೆನಪುಗಳ ಸಂಕಲನ ' ಹಾಯಿ ದೋಣಿಯ ಪಯಣ'. ಇದು ಶ್ರೀಮತಿ ಕೃಷ್ಣಾ ಕೌಲಗಿಯವರ ಮೂರನೇಯ 
ಲಘು ಲಹರಿ ಬರೆಹಗಳ ಸಂಗ್ರಹ...
' ನೀರ ಮೇಲೆ ಅಲೆಯ ಉಂಗುರ' ಹಾಗೂ ' ತುಂತುರು ಇದು ನೀರ ಹಾಡು' ಇವೆರಡೂ ಮೊದಲಿನವು...ಪ್ರಸ್ತುತ ಪುಸ್ತಕದ ಮೊದಲ ಲೇಖನ “ಹೊಸ ವರ್ಷದ ಹೊಸ್ತಿಲಲ್ಲಿ ನಿಂತು-" ಲೇಖಕಿಗೆ ತಾವು ಶಿಕ್ಷಕಿಯಾಗಿದ್ದಾಗಿನ ಒಂದು ನೆನಪು. ಹೊಸ ವರ್ಷದ  ಶುಭಾಶಯಗಳ ವಿನಿಮಯ, ಸಿಹಿಯನ್ನು ಹಂಚುವುದು, ಪಟಾಕಿ ಹೊಡೆಯುವುದು ಎಂಬ ಇಂದಿನ ಟ್ರೆಂಡ್‌ಗಳ ಬಗ್ಗೆ ಹೇಳುತ್ತ ಲೇಖಕಿ ವಿಷಯ ವಿಸ್ತರಿಸುತ್ತ ಹೋಗುತ್ತಾರೆ... ತಮ್ಮ ಬಾಲ್ಯದಲ್ಲಿಯ: ಹೊಸವರ್ಷದ ಹಬ್ಬದ ಆಚರಣೆಗೆ ಹೋಲಿಸಿಕೊಳ್ಳುತ್ತ ಯುಗಾದಿ ಎಂದರೆ ಎಣ್ಣೆ ಮಜ್ಜನದಿಂದ ಪ್ರಾರಂಭಗೊಂಡು ಮನೆಬಾಗಿಲಿಗೆ ಛಂದದ ರಂಗೋಲಿ, ತಳಿರು ತೋರಣ, ಸಿಹಿಯೂಟ, ಹೊಸಬಟ್ಟೆ, ದೇವರ ದರ್ಶನ, ಪಂಚಾಂಗ ಶ್ರವಣಗಳ ಹೈಲೈಟ್ಸ್ ಲೇಖನದ ತಿರುಳು. ನಂತರದ ದಿನಗಳಲ್ಲಿ ಹೊಸವರ್ಷದ ಗದ್ದಲ, ಕೇಕ್‌ ಕತ್ತರಿಸುವುದು, ಅಷ್ಟೇ ಅಲ್ಲ, ಕುಡಿತ, ಕುಣಿತಗಳು ಇವುಗಳನ್ನು ನೆನೆದಾಗ - ಸಭ್ಯ ಸಂಪ್ರದಾಯದಿಂದ ಎಷ್ಟು ದೂರ ಬಂದಿದ್ದೇವೆ ಎಂದೆನ್ನಿಸುವುದು ತೀರ ಸಹಜವೇ. ಕೊನೆಯಲ್ಲಿ ಅವರವರಿಗೆ ಇಷ್ಟಬಂದಂತೆ ಹಬ್ಬಗಳನ್ನು ಆಚರಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಲೇಖಕಿ ವಿಡಂಬನಾತ್ಮಕವಾಗಿ ಜೋಕಿಸುತ್ತಾರೆ.
      ತಮ್ಮ ಗಡಿಬಿಡಿಯ ಸ್ವಭಾವದ ಬಗ್ಗೆ  ಹೇಳುತ್ತಾ ಸಮಯಕ್ಕೆಸರಿಯಾಗಿ  ಎಲ್ಲವನ್ನೂ ಮಾಡಬೇಕೆಂಬ ಆತುರ ದಲ್ಲಿ ಅನೇಕ ಎಡವಟ್ಟುಗಳೂ ಆಗುತ್ತಿದ್ದುದುಂಟೆಂದು ನೆನೆಯುವಾಗ
ಓದುಗರಿಗೆ ತಮ್ಮದೇ ಅನುಭವಗಳು
ನೆನಪಾದರೆ ಅಚ್ಚರಿ ಪಡಬೇಕಿಲ್ಲ.

      ಹಳ್ಳಿಗಳಲ್ಲಿಯ ಪರಸ್ಪರ ಆತ್ಮೀಯ ಸಂಬಂಧಗಳ ಬಗ್ಗೆ ತಿಳಿಸುತ್ತಾ ತಾವು ಆಚರಿಸುತ್ತಿದ್ದ ದೀಪಾವಳಿಯ ಸಂಭ್ರಮವನ್ನು ನೆನೆಯುವಾಗ ಈಗಿನ ಕುಟುಂಬಗಳಲ್ಲಿ ಜನರ ಸಂಖ್ಯೆ ಕಡಿಮೆಯಾಗಿರುವುದರಿಂದಾಗಿ  ಎಲ್ಲ ಹಬ್ಬಗಳ ಆಚರಣೆಗಳು ಕಿಂಗ ಸೈಜಿನಿಂದ ನ್ಯೂಕ್ಲಿಯರ್‌ ಸೈಜಿಗಿಳಿದಿದೆ ಎನ್ನುವ ಅಭಿಪ್ರಾಯ ಅವರದು...
       ‌‌ 
          ಸುಖವೆಂದರೆ ಐಷಾರಾಮಿ ಜೀವನ ಎಂದು ತಿಳಿದಿರುವ ಈಗಿನ ಯುವಪೀಳಿಗೆಗೆ ಹಿರಿಯ ನಾಗರಿಕರನ್ನು ಇತ್ತೀಚಿನ ದಿನಗಳಲ್ಲಿ ಮಾತನಾಡಿಸುವ ವರೇ ಇರುವುದಿಲ್ಲದುದರಿಂದ ಅವರು ಮಾತನ್ನೇ ಮರೆತಂತಾಗಿ ಮಾನಸಿಕ ವಾಗಿ ಕುಗ್ಗಿ ಮರೆವಿನ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂಬ ಎಚ್ಚರಿಕೆ ಯನ್ನೂ ರವಾನಿಸಲು ಲೇಖಕಿ ಇಲ್ಲಿ ಮರೆಯುವುದಿಲ್ಲ.ಇಂಥ ಕೆಲವನ್ನು 
ಹೇಳುವುದಕ್ಕಿಂತ ಓದಿ ಅನುಭವಿಸಿ ದರೇ ಚೆನ್ನ!ಏಕೆಂದರೆ ಜೀವನವೆಂದರೇನೇ ಅನುಭವಗಳು
ತುಂಬಿದ ಕಣಜ...ಸ್ಥಿತ್ಯಂತರಗಳು ಬದುಕಿನ ಅನಿವಾರ್ಯ ಭಾಗ. ಈಗಂತೂ ಅದರ ವೇಗ ಕಲ್ಪನೆಗೂ ನಿಲುಕದ್ದು.ತಮ್ಮ ಅರಿವಿಗೆ ಹೊಸದಾದ ವಿಷಯಗಳಲ್ಲಿ ಹಿರಿಯರೂ ತಾವೇ ಸೋತು ತಲೆಬಾಗಿ ಮಕ್ಕಳ ಮಾತಿಗೆ ಒಪ್ಪಿಕೊಳ್ಳಲೇಬೇಕು ಎನ್ನುವ ಅವರು ಅದು ಅವಶ್ಯವಷ್ಟೇ ಅಲ್ಲ, ಸಧ್ಯದ ಮಟ್ಟಿಗೆ ಬುದ್ಧಿವಂತಿಕೆಯೂ ಹೌದು ಎನ್ನುವ ನಿಲುವನ್ನು ತಾಳುತ್ತಾರೆ.
      
        
‌          ಇಂದು ಹೀಗೆ ತಮ್ಮಂಥವರನ್ನೂ ಮೊದಲ್ಗೊಂಡು ಬಹುಜನರ ಸಮಸ್ಯೆ. ಬದುಕಿನ‌ ಧಾವಂತದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಸುತ್ತಲೂ ಜನರಿದ್ದೂ ಒಂಟಿಯಾಗುವ ನಮಗೆ ಬೇಡದ ಭಾವಗಳು ಮನಸ್ಸಿನಲ್ಲಿ ದಟ್ಟವಾಗಿ ಮೋಡಗಟ್ಟುತ್ತಾ ಹೋಗುತ್ತವೆ. ತನ್ನ ಯೋಗ್ಯತೆ ಮೀರಿ ಸಾಂದ್ರತೆ ಹೆಚ್ಚಾದಾಗ ಹೊರಬಂದು ಸುರಿದು ಬರಿದಾಗಲು ತಹತಹಿಸುತ್ತವೆ. ಆ ಗಳಿಗೆಗೊಂದು ಜೊತೆ ಕಿವಿ ಬೇಕು. ಇಡಲು ಹೆಗಲು ಬೇಕು. ಒಂದಿಷ್ಟು ಆರ್ದ್ರ ಹೃದಯದ ಸಿಂಚನ ಬೇಕು ಎನ್ನುವ ಅವರ ಮಾತು ಎಲ್ಲರೂ ಒಪ್ಪಿಕೊಳ್ಳುವ ಸತ್ಯ. 
    ‌‌    ಈ ಬದುಕು ಎಲ್ಲರಿಗೂ ಏನನ್ನೋ ಕೊಡುತ್ತದಾದರೂ ಏನೋ ಒಂದನ್ನು ಕಸಿದುಕೊಂಡೇ ಕೊಡುತ್ತದೆ. ಏಕೆಂದರೆ ಬದುಕೆಂದರೆ ಹೋಟೆಲ್ ಟೇಬಲ್ ಅಲ್ಲವಲ್ಲ, ಯಾರನ್ನೋ ಕೈ ಮಾಡಿ ಕರೆದು Instant orders ಕೊಟ್ಟು ಇಲ್ಲಿ ಏನನ್ನೂ ಪಡೆಯಲಾಗುವುದಿಲ್ಲ... ಅದೊಂದು ಸದಾ ಹರಿವ ನದಿಯ ರೀತಿ. ಒಮ್ಮೆ ಗತಿ ಪಡೆದುಕೊಂಡರಾ ಯಿತು. ತನ್ನ ಮರ್ಜಿಯ ಮೇಲೆ ತನ್ನದೇ ಆದ ವೇಗದಲ್ಲಿ, ತನ್ನದೇ ರೀತಿಯಲ್ಲಿ ಹರಿಯುತ್ತಿರುತ್ತದೆ,'ಥೇಟ್ ಹಾಯಿ ದೋಣಿಯ'ದೇ ತರಹ.. ಇಂಥ ಪಯಣದ ನಡುವೆಯೇ ಜೀವನದ ಪಾಠಗಳೂ ಸಿಗುತ್ತವೆ. ಎಲ್ಲದಕ್ಕೂ ಮೈಯೊಡ್ಡಿ ಈಸಬೇಕು... ಎಂಬ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವದಕ್ಕೆ
ಈ ಸಂಗ್ರಹದಲ್ಲಿ ಅನೇಕ ಲೇಖನಗಳಿವೆ.ಹೀಗೆ ಹಲವು
ವಿಭಿನ್ನ  ನೆನಪುಗಳನ್ನೊಳಗೊಂಡ ಹೊತ್ತಿಗೆಗೆ ಮುನ್ನುಡಿ ಬರೆಯಲು ಖುಶಿ ಎನ್ನಿಸಿತು. ಧನ್ಯವಾದಗಳು ಕೃಷ್ಣಾ ಅವರೆ. ಇಂಥ ಅನೇಕ ಸುಂದರ ಅನುಭವಗಳನ್ನು ಹೊತ್ತ ಇನ್ನೂ ಅನೇಕ ಅನುಭವಗಳ ಸಂಚಿಯೇ
ಮುಂದೆಯೂ ಓದುಗರೆದುರು ಬಿಚ್ಚಲಿ ಎಂಬ ಹಾರೈಕೆಯೊಂದಿಗೆ, ನಿಮ್ಮೆಲ್ಲರ ವಿಶ್ವಾಸಿ,                        
ಮಾಲತಿ ಮುದಕವಿ
ಧಾರವಾಡ- ೭...

Sunday 18 February 2024

ನಾಳೆ ಹೇಗೆಂಬುದನು ನಾನರಿಯೆ... ‌‌‌‌ 
       ‌‌‌‌‌     
          B.A.ಆದಕೂಡಲೇ ನೌಕರಿಗೆ
ಸೇರಿದವಳಲ್ಲ ನಾನು.ಮೂರು ಮಕ್ಕಳ
ಜವಾಬ್ದಾರಿ ವಹಿಸಿಕೊಂಡು ಪ್ರತಿಶತ
ನೂರರಷ್ಟು ಗ್ರಹಿಣಿಯಾಗಿದ್ದೆ ಹತ್ತು ವರುಷ ಕಾಲ...ಮೈ ತುಂಬ ಕೆಲಸ.ದೊಡ್ಡ ಮನೆಯ ನಿರ್ವಹಣೆ. ಬರುವವರು/ಹೋಗುವವರ ನಡುವೆ ಪೂರ್ತಿಯಾಗಿಯೇ ಕಳೆದುಹೋಗಿದ್ದೆ.
ಅಂಥದರಲ್ಲಿ ಮಕ್ಕಳು " ಅವ್ವ ,ಬಾಯಿಲ್ಲೆ ನಿಂಗ ಮಜಾ ತೋರಸ್ತೇನಿ "- ಅಂತ ಬೆಳಗಿನ ಹೊತ್ತು ಕರೆದರೆ ಹೋಗಲಾಗುತ್ತಿರಲಿಲ್ಲ .ಏನೋ ಹೇಳಿ ಸಾಗಹಾಕುವುದು/ ಅವುಗಳು ಮುಖ ಮುದುಡಿಸಿಕೊಂಡು ಕೂಡುವುದೂ ಮಾಮೂಲಾಗಿತ್ತು.ಆಗ ಅವರ ಅಪ್ಪಾಜಿ ಹತ್ತಿರವಿದ್ದರೆ ಪರಿಸ್ಥಿತಿ
ಸಂಭಾಳಿಸಿ ಮಕ್ಕಳ ಜೊತೆ ಹೋಗಿ
ಅವರ ಜೊತೆ ಕೆಲ ನಿಮಿಷಗಳಿದ್ದು
ಅವರ ಮುಖ ಅರಳುವಂತೆ ಮಾಡುತ್ತಿದ್ದುದೂ ಇತ್ತು." ಹಾಗೆ ಮಕ್ಕಳ ಕುತೂಹಲ/ ಉತ್ಸಾಹ ತಣ್ಣಗಾಗಿಸಬಾ ರದು.‌ಕೆಲವೇ ನಿಮಿಷಗಳಲ್ಲಿ ಏನೂ
ಕಳೆದುಕೊಳ್ಳುವುದು ಇರುವುದಿಲ್ಲ.
ಕೆಲಸ ಬಿಟ್ಟು ಹೋಗು, ಅವರು ಹೇಳುವುದನ್ನು ಕೇಳಿಸಿಕೋ.ತಕ್ಷಣ ಮೆಚ್ಚುಗೆಯ ಎರಡು ಮಾತನಾಡು. ಅದು ಅವರ ವ್ಯಕ್ತಿತ್ವಕ್ಕೆ ಸಹಕಾರಿ"-  ಎಂದು ನನಗೂ ಒಂದು class ತೆಗೆದುಕೊಳ್ಳುತ್ತಿದ್ದರು.ಆದರೆ
ಒಂಬತ್ತೂವರೆಗೆ ಎಲ್ಲರೂ ಮನೆ ಬಿಡುವುದು ಅನಿವಾರ್ಯವಾದಾಗ
ಅದು ಕಷ್ಟ ಸಾಧ್ಯ, ಬಹಳವೇ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂಬುದೂ
ಅವರಿಗೆ ಗೊತ್ತಿತ್ತು...ಕೆಲಸದ ಗಡಿಬಿಡಿ ಯಲ್ಲಿ ರೇಗಿದರೆ ತಟ್ಟನೇ ಹಾಜರಾಗಿ ಮಕ್ಕಳನ್ನು ಸಮಾಧಾನ ಮಾಡುವುದು ಅವರ ಕೆಲಸ..." ನೋಡು, ಮಕ್ಕಳನ್ನು ಅಮ್ಮ- ಅಪ್ಪ ಇಬ್ಬರೂ ಒಂದೇ ಸಲ ಬಯ್ಯಬಾರದು.ಕಂಗಾಲಾಗುತ್ತವೆ, ಅಸಹಾಯಕರಾಗುತ್ತಾರೆ.ನಾನು ಬಯ್ದಾಗ ನೀನು ಅವರ ಪರ ನಿಲ್ಲು. ಹಾಗೇ ನೀನು ಏನಾದರೂ ಅಂದರೆ ನಾನು ಅವರನ್ನು ಸಂಭಾಳಿಸುತ್ತೇನೆ. ಅದು ಮಕ್ಕಳಿಗೆ ಬಲ ಕೊಡುತ್ತದೆ.
ನಮ್ಮ ನಮ್ಮಲ್ಲಿಯೇ ಇದು ಸದಾ ನೆನಪಿರಲಿ.ಮಕ್ಕಳ ಆತ್ಮ ವಿಶ್ವಾಸಕ್ಕೆ
ಕುಂದಾಗುವ ಹಾಗೆ ಯಾವ ಕಾರಣಕ್ಕೂ
ನಾವು ನಡೆದುಕೊಳ್ಳುವುದು ಬೇಡ..."

              ಇಂಥ ಸಣ್ಣಪುಟ್ಟ ದಿನನಿತ್ಯದ ವಿಷಯಗಳಿಗೂ ಗಮನ ಕೊಡಲೇ ಬೇಕಾದುದೂ ಹಿರಿಯರಿಲ್ಲದ ಮನೆಯ ಪ್ರಥಮ ಆದ್ಯತೆಯಾಗಿತ್ತು...ಬಹುಶಃ ಎಂಬತ್ತು- ತೊಂಬತ್ತರ ದಶಕಗಳಲ್ಲಿ
ಮಧ್ಯಮ ವರ್ಗದ ಮನೆಗಳಲ್ಲಿ ಇದು
ಸಾಮಾನ್ಯವಾಗಿ ಕಂಡು ಬರುವ ಪ್ರತಿ
ಮನೆಯ ದೃಶ್ಯವಾಗಿತ್ತು...

                ಇದೆಲ್ಲ ಈಗ ನೆನಪಾಗಲು
ಮೊನ್ನೆ ರೈಲಿನಲ್ಲಿ ನಡೆದ ಒಂದು ಘಟನೆ
ಕಾರಣ.ಕೆಲ ದಿನಗಳ ಹಿಂದೆ ' ಚನ್ನಮ್ಮ Express' ನಲ್ಲಿ ಧಾರವಾಡಕ್ಕೆ ಹೋಗಬೇಕಿತ್ತು‌.ನಮ್ಮ ಬೋಗಿಯಲ್ಲಿ
ಒಂದು ಚಿಕ್ಕ ಕುಟುಂಬವೂ ಇತ್ತು.
ಬೆಳಿಗ್ಗೆ ಐದು ಗಂಟೆಗೆ ಹುಬ್ಬಳ್ಳಿ station
ಗೆ ಬರುತ್ತಲೇ ಅಪ್ಪ ತನ್ನ ಮಗನನ್ನು
ಎಬ್ಬಿಸಲು ಸುರುವಿಟ್ಟುಕೊಂಡರು. ಎದ್ದು ಹಾಸಿಗೆ ಮಡಚಿ,Shoes ಧರಿಸಿ
ಸಾಮಾನುಗಳನ್ನು ಬಾಗಿಲ ಬಳಿ ಸರಿಸಿಟ್ಟು ಸಾವಧಾನದಿಂದ ಇಳಿಯುವ ಯೋಜನೆ ಅವರದು.ಹದಿಮೂರು- ಹದಿನಾಲ್ಕರ ಅವರ ಮಗ ಏಳಲು ತಯಾರಿಲ್ಲ.'ಏಳು - ಎಂದು ಅಪ್ಪನ ಒತ್ತಾಯ.' ಮಲಗಲಿ ಬಿಡಿ'- ಅಂತ ಅಮ್ಮನ ಜೋರು.ಇದರ ಸಂಪೂರ್ಣ ಲಾಭ ಪಡೆದ ಮಗ ಎದ್ದಿದ್ದರೂ ಕೆಳಗೆ ಬರದೇ Mobile ನಲ್ಲಿ ಮುಳುಗಿದ್ದ. ಕೊನೆಗೆ ಅಪ್ಪ ಅವನನ್ನು ಕೆಳಗಿಳಿಸಿ ಅವನ ಕಾಲನ್ನು ತನ್ನ ತೊಡೆಯ ಮೇಲೆ ತೆಗೆದುಕೊಂಡು,Shoes ಹಾಕತೊಡಗಿ ದರೂ ಅವ್ವ- ಮಗ ತುಟಿ ಪಿಟ್ಟೆನ್ನಲಿಲ್ಲ. ಅಷ್ಟೇ ಅಲ್ಲ ಒಂದು ಕಾಲಿಗೆ ಬೂಟು ಹಾಕಿಯಾದ ಮೇಲೆ, mobile
ನೋಡುತ್ತಲೇ ಮಗ,ಅದನ್ನು ಕೆಳಗಿಳಿಸಿ
ಇನ್ನೊಂದು ಕಾಲನ್ನು ಅಪ್ಪನ‌ ತೊಡೆಯ
ಮೇಲೆ ಧಪ್ ಎಂದು ಬೀಸಿ ಹಾಕಿದ. ಇಷ್ಟಾದರೂ ಅಮ್ಮ ತನ್ನದೇನೋ ಮಾಡುವದರಲ್ಲಿ ಒಂದೇ ಒಂದು ಶಬ್ದವಾಡಲಿಲ್ಲ.ಆದ ದಿಗ್ಭ್ರಮೆಯಲ್ಲಿ ಉಳಿದ ವೇಳೆ ಕಳೆದು ಧಾರವಾಡ station ನಲ್ಲಿ ನಮ್ಮ ಪಾಡಿಗೆ ನಾವಿಳಿದು ಹೋದದ್ದಷ್ಟೇ ನಾವು ಮಾಡಿದ್ದು...

              ಒಂದೋ ಎರಡೋ ಮಕ್ಕಳು, ಯಾವುದಕ್ಕೂ ಕೊರತೆ ಕಾಡುವ ಮಾತೇಯಿಲ್ಲ,ಸಮೃದ್ಧತೆಯೇ ಸುಖ ಎಂಬ ತಪ್ಪು ಭಾವನೆ...ಜೊತೆಗೆ ಸ್ವಲ್ಪು
ಹೆಚ್ಚಾಗಿಯೇ ಕೊಟ್ಟ ಸ್ವಾತಂತ್ರ್ಯ- ಪ್ರೀತಿ...

          ಇವೆಲ್ಲವುಗಳ ಒಟ್ಟು ಪರಿಣಾಮ ವಿರಬಹುದಾ?ಇದೇ ಮುಂದುವರಿದರೆ
ನಾಳೆ ಹೇಗೋ?!!
   ‌‌‌          




Wednesday 14 February 2024

ಆಟ ಮುಗಿದು ಹೋದ ಮೇಲೆ...

-ಇವತ್ತಿನ foot ball ಏನಾಯ್ತು?
- ನಾವು ಗೆದ್ವಿ...
- ಎಷ್ಟು ಗೋಲಿನಿಂದ?
- ಒಂದು...
- ಮೊದಲೆಲ್ಲ, 5-0 6-0 ಅಂತಿದ್ದೆಲ್ಲೊ...
- ಅಜ್ಜಿ, ಹಂಗ ಗೆದ್ರ ಚಲೋ ಆಟ ಅಲ್ಲ ಅದು.ಎದುರುಗಡೆ‌ team ಭಾಳ weak ಇದ್ರ ಅಂಥ result ಬರತದ. One sided ಆಟ ಆಗತದ. Cricket match ನಾಗ ಅದsss ವರ್ಷ ಬಂದ ಟೀಮ್ ಗೂ/ವಿಶ್ವಕಪ್ ಗೆದ್ದ ಟೀಮ್ಗೂ ಆಟ ಆದ್ಹಂಗ...ಎರಡೂ ಟೀಮ್ ಸಮ ಸಮ ಇರ್ಬೇಕು.ಒಬ್ರು ಗೋಲ್ ಮಾಡಲಿಕ್ಕೆ ನೋಡ್ತಿದ್ರ ,ಇನ್ನೊಂದು ಟೀಮ್ ಅದನ್ನ ತಡಿಬೇಕು.ಆ ಗೋಲ್
ಆಗಗೊಡಬಾರ್ದು, ಅದು ತುರುಸಿನ ಆಟ.ಒಂದ ಸಲ ಇವರ ' ಗೋಲ್ ಆದ್ರ
Next time ಅವರ ಗೋಲ್ ಆಗ್ಬೇಕು. ಅದು ಖರೆ ಆಟ...ಸಮಬಲದ ಟೀಮು ಜೊತೆ  ಆಡಿದ್ಹಾಂಗ...ಒಂದ ಟೀಮ್ ಆಡಿದ್ರ ಉಪಯೋಗಿಲ್ಲ
- penalty ಒಳಗ ಆದ್ರ?
- ಅದೂ ಚಲೋ ಅಲ್ಲ.ಆಗ result 50/50 ಇರ್ತದ.ಕೊನೆತನಕ tension.
- ಅಂದ್ರ ಕೊನೆ ತನಾ ಸೆಣಸಾಟ  ಇರ್ಬೇಕು ಅನ್ನು...
- ಹಾಂ...
           ಸುಮಾರು ಹತ್ತು ವರ್ಷಗಳಿಂದ
ಬೆಂಗಳೂರು foot ball clubನ ಆಟಗಾರನಾದ ಮೊಮ್ಮಗನಿಂದ ಇವತ್ತು ಕಲಿತ ಒಂದು ಬದುಕಿನ ಪಾಠವಿದು. ಬದುಕಿನಾಗ ಕೊನೆತನಕಾ ಕಲಿಯೋದು ಮುಗಿಯೂದಿಲ್ಲ. ಸಾಯೂತನ- ಅಷ್ಟ ಯಾಕ- ಹೆಂಗ ಸಾಯ್ಬೇಕು ಅನ್ನೋದನ್ನ ಸಹಾ ಕಲಿಯೋದಿರತದ...
           ಬದುಕೊದಂದ್ರನೂ ಒಂದು ಆಟsssನ...ನಮ್ಮ ಆಟಕ್ಕೆ  ಪರವಾಗಿ- ವಿರೋಧವಾಗಿ ಆಟಗಾರರು ಇದ್ದೇ ಇರ್ತಾರ.ಕೆಲವರು ನುರಿತ ಆಟಗಾರ ರಾದ್ರ ಇನ್ನೂ ಅನೇಕರು ನಮ್ಮ ಆಟಕ್ಕ ಅಡ್ಡಗಾಲು ಹಾಕೋರು.ಆಟಗಳ ತಂತ್ರಗಳನ್ನು ತಿಳಿದು,ಹುಶಾರು ತಪ್ಪದೇ
ಎದುರಾಳಿಗಳ ಪಟ್ಟುಗಳನ್ನು ಅರಿತು
ಆಡಿದರ ಗೆಲ್ಲಬಹುದು...ಎದುರಾಳಿ
ಅಸಮರ್ಥರಿದ್ದರೆ ಆಟದ ಉತ್ಸಾಹ ಇರೂದೆ ಇಲ್ಲ...ಸ್ಪರ್ಧೆಯೊಳಗ ಪರಿಣತಿ ಇಲ್ಲದವರ ಜೊತೆ ಸೆಣಸಾಟ ದಿಂದ ಆಟದ ತೃಪ್ತಿ ಸಿಗೂದಿಲ್ಲ...
            ಅಂತೇನೇನೋ ಹುಚ್ಚು ಲಾಜಿಕ್ ಶುರುವಾತು.ಹಂಗ ನೋಡಿದ್ರ ನಾನೂ ಒಂದು ಕಾಲಕ್ಕೆ ಹಳ್ಳಿಯಲ್ಲಿಯ ಆಟೋಟಗಳಲ್ಲಿ ಮುಂದಿದ್ದವಳೇ. ಆದರೆ ಅದು ಅತಿ ಸಣ್ಣ ಹಳ್ಳಿ...ಕಡಿಮೆ ಸ್ಪರ್ಧಾಭಾವದ/ ತರಬೇತಿ ಪೂರ್ಣ ಪ್ರಮಾಣದಲ್ಲಿ ಸಿಕ್ಕಿರದ ಜವಾರಿ ಆಟಗಾರಳು... ಹೈಸ್ಕೂಲ್ ಮುಗಿದ ತಕ್ಷಣ ಅವೆಲ್ಲಕ್ಕೂ ' ಜನ- ಗಣ- ಮನ' ಹಾಡಿಯಾಗಿತ್ತು. ನಂತರದ ಬದುಕಿನಲ್ಲಿ ಬದುಕೂ ಒಂದು ಆಟವೇ- ಎಂಬುದು ಅರಿವಾದಾಗ ಆಟಗಳ ಪಟ್ಟುಗಳನ್ನು ಹೆಜ್ಜೆ ಹೆಜ್ಜೆಗೂ ಕಲಿಯುವ ಅನಿವಾರ್ಯತೆ ಬಂತು. ಉಳಿದ ಆಟಗಳಂತೆ ಬೇಡವೆನಿಸಿದಾಗ ಮೈದಾನ ಬಿಟ್ಟುಹೊರಡುವ ಸ್ವಾತಂತ್ರ್ಯ
ವಿಲ್ಲದ ಆಟವದು...
          ‌‌ಎಲ್ಲವನ್ನೂ ಶಕ್ತಿಗೆ ಅನುಸಾರ ವಾಗಿ ಆಡಿ ಮುಗಿಸಿ retirement ಘೋಷಿಸಿದ ಮೇಲೆ ಮೈದಾನದಲ್ಲಿದ್ದು
ಇತರ ಆಟಗಾರರ ಆಟದ ಬಗೆಗಿನ commentary ಹೇಳುವ ಮಾಜಿ ಆಟಗಾರಳು ನಾನೀಗ ಎನಿಸಿ ಮನಸ್ಸಿನಲ್ಲೇ ನಕ್ಕೆ...


     ‌‌‌    ಇದೀಗ ಮುಂಜಾನೆ ವಾಕಿಂಗ್ ಗೆ ಎಂದು lift ನಲ್ಲಿ ಹೋಗುತ್ತಿದ್ದೆ.
ಓಡಿ ಬಂದು ಒಬ್ಬ ಯುವತಿ ಲಿಫ್ಟನಲ್ಲಿ ಸೇರಿಕೊಂಡಳು...ಪದೇ ಪದೇ floor ನಂಬರ್ ನೋಡುತ್ತಿದ್ದಳು,ಸಿಕ್ಕಾಪಟ್ಟೆ ಎದೆಯ ಏರಿಳಿತ/ಮುಖ ಒರೆಸಿಕೊಳ್ಳು ವುದು ನಡೆದಿತ್ತು.ನನಗೆ ತಡೆಯಲಾಗ ದೇ ಕೇಳಿದೆ," ಯಾಕೆ late ಆಯ್ತಾ? - ಅಂತ...ಆಕೆ ಅಳುವುದೊಂದು ಬಾಕಿ. " ಹೌದು ಮೇಡಮ್, ಎಂಟೂ ಹದಿನೈದು ನಿಮಿಷಕ್ಕೆ ಇರಬೇಕಿತ್ತು ಎಂಟೂವರೆ 
ಮೇಲಾಯ್ತು,ಆಗಲೇ ಮೂರು ನಾಲ್ಕು
ಬಾರಿ ಫೋನ್ ಬಂದಾಗಿದೆ". ಅಂದಳು.
" ಇರಲಿ ಬಿಡು, ಐದು-ಹತ್ತು ನಿಮಿಷಗಳ ಲ್ಲಿ ಜಗತ್ತೇನೂ ಮುಳುಗಲ್ಲ,ನಾಳೆ
ಯಿಂದ ಸ್ವಲ್ಪು ಬೇಗ ಹೊರಡು. ಏನೀವಾಗ?ಎಂಥೆಂಥ ಮಶಿನ್ಗಳೆ ಕೆಟ್ಟು ನಿಲ್ಲುತ್ತವೆ, ನೀನು ಈ ಪಾಟಿ tension
ಆದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ"ಎಂದೆ. Thanks Madam ಎಂದು ಹೇಳಿ floor open ಆಯ್ತು ಅಂತ ಹೊರಟು ಹೋದಳು...
              ಅವಳ ವಯಸ್ಸು ಮೂವತ್ತೂ ಆಗಿರಲಿಲ್ಲ,ಇದ್ದರೂ ಚಿಕ್ಕ ಮಕ್ಕಳು/ ಹೊರಗೆ ದುಡಿಯುವ ಗಂಡ,ಇವಳಿಗೂ ದುಡಿಯಲೇ ಬೇಕಾದ ಅನಿವಾರ್ಯತೆ
ಏನೆಲ್ಲ ತೊಂದರೆಗಳೋ!!! ಆ ನಂತರ
ಕೂಡ ಎಷ್ಟೋ ಹೊತ್ತಿನ ನಂತರವೂ ಅವಳಂಥ ಅಸಹಾಯಕರ ಬದುಕಿನ
ಚಿತ್ರಗಳೇ ಕಣ್ಣಮುಂದೆ...
           ಇದರಲ್ಲಿ ಯಾರ ಪರ ಚಿಂತಿಸ ಬೇಕೋ ಅದೂ ತಿಳಿಯದು.ಹೆಚ್ಚಿನ ಮನೆಗಳಲ್ಲಿ ಗಂಡ- ಹೆಂಡತಿ ಇಬ್ಬರೂ
ಕೆಲಸ ಮಾಡುತ್ತಿದ್ದರೆ ಬೆಳಗಿನ ಹೊತ್ತಿನಲ್ಲಿ ಅಕ್ಷರಶಃ " ಪ್ರಪಂಚ
 ಪಾಣಿಪತ್"- ಯುದ್ಧ ನಡೆದಿರುತ್ತದೆ.
ಮಕ್ಕಳ ಬಸ್ಸು ಕ್ಷಣವೊಂದರಲ್ಲಿ miss ಆಗಬಹುದು.ಹತ್ತು ನಿಮಿಷ ಆಚೀಚೆ ಯಾದರೂ traffic ನಲ್ಲಿ ಆಗುವ ಹೆಚ್ಚಳ ನಿಜಕ್ಕೂ ಆಘಾತಕಾರಿ. ಮನೆಯ ಹೆಣ್ಣುಮಗಳೂ ಇದನ್ನೆಲ್ಲ ಒಂದು ಹಂತಕ್ಕೆ ತಂದ ಮೇಲೆಯೇ ತಮ್ಮ Work from home ಟೇಬಲ್ ಅಲಂಕರಿಸಬೇಕು.ಕೆಲಸದವರ ಮೇಲೆ ಈ ಕಾರಣಕ್ಕೆ ಪೂರ್ತಿ ಅವಲಂಬಿತ ರಾಗುವುದು ಅನಿವಾರ್ಯ. ಸ್ವಲ್ಪ ಮಟ್ಟಿಗೆ ಹೆಚ್ಚು ಕಡಿಮೆಯಾದರೂ ಕೆಲಸದವಳ ಬದಲಿಗೆ ಕೆಲಸಕ್ಕೆ ಇಟ್ಟುಕೊಂಡವರ ಸರ್ಕಸ್ ನ ಬಾರಿ... ಅವರ ಬಿಪಿಯ ಒತ್ತಡದ scale ಮೇಲೆ ಮೇಲೆ.ತಲೆಗೆ ಜಗ್ಗಿದರೆ ಕಾಲು ತಣ್ಣಗೆ...ಕಾಲಿಗೆ ಎಳೆದರೆ ತಲೆ ಹೊರಗೆ. ಅಕ್ಷರಶಃ ಉಭಯ ಸಂಕಟ.ಹಾಗೆಂದು ಕೆಲಸದವರ ಮೇಲೂ ರೇಗುವ ಹಾಗಿಲ್ಲ
ಬಿಟ್ಟು ಹೋದರೆ ಇನ್ನೂ ಅಧ್ವಾನ... ಹಾಗೆಂದು ಪೂರ್ತಿ ವಿನಾಯತಿ ತೋರಿಸಿದರೆ ಕೆಲಸದವರಿಗೂ ಸದರ
ಹೆಚ್ಚಾಗುತ್ತದೆ ಎಂಬ ಹೆದರಿಕೆ ಬೇರೆ ಕಾಡುತ್ತದೆ.ಇದಕ್ಕೆಲ್ಲ ತಮ್ಮದೇ ನೂರೆಂಟು ಸಮಸ್ಯೆಗಳ ನಡುವೆಯೂ
ಮನೆಯವರು diplomatic ಆಗಿ
ಇಂಥವುಗಳನ್ನು handle ಮಾಡುವ ಅನಿವಾರ್ಯತೆ...
  ‌‌‌              ನಾನು ಬೆಂಗಳೂರಿನಲ್ಲಿ ಇದುವರೆಗೆ ನೋಡಿದ ಕೆಲಸದವರಲ್ಲಿ ಮಕ್ಕಳ ಜೊತೆ ಇದ್ದವರು ತುಂಬಾ ಕಡಿಮೆ.ಅಜ್ಜ/ಅಜ್ಜಿಯ ಜೊತೆಯಲ್ಲೋ ಯಾವುದೋ ಒಂದು ಹಾಸ್ಟೆಲ್ ನಲ್ಲೋ
ಇರೋ ಮಕ್ಕಳೇ ಜಾಸ್ತಿ.ಗಂಡಂದಿರಿಗೆ
ಹಗಲು ರಾತ್ರಿಯ shift duty... ಮನೆ ಬಾಡಿಗೆ ತುಂಬ ಜಾಸ್ತಿ.ಎಷ್ಟು ಕೆಲಸ ಮಾಡಿದರೂ ಸರಿ ಹೋಗದ ಹೊಂದಾಣಿಕೆಯಾಗದ ಬಜೆಟ್. ಅವರು ಕಿಂಚಿತ್ತೂ slow ಆಗದೇ ಕೆಲಸ
ಮಾಡಿದರೂ ತಕ್ಕಡಿ ಸರಿದೂಗುವುದು ಕಠಿಣ.ಯಾರನ್ನು ನೋಡಿದರೂ ಓಡುತ್ತಿರುವಂತೆಯೇ ನಡೆಯುವುದು. ಸದಾ ಸಮಯದೊಂದಿಗೆ ಸೆಣಸಾಟ ಇವುಗಳದೇ ನೋಟ ಸಾಮಾನ್ಯ...
            ಇದು ಒಂದು ' ವಿಷ ಸರಪಳಿ'.
ಮದುವೆಗಾಗಿ ಹಿಡಿದ ಹುಚ್ಚಿನ ಕತೆ. ಸುಲಭ ಪರಿಹಾರ ಕಾಣುವುದಿಲ್ಲ...
ದುಡ್ಡು ಸಂಪಾದಿಸಬೇಕೆಂದರೆ ದುಡಿಯಲೇಬೇಕು...ದುಡಿತ ಹೆಚ್ಚಾಯಿತೆಂದು ಗೊಣಗಿದರೆ ಹಣ ಸಂಪಾದನೆ ಕಡಿಮೆ. ಇವರೆಲ್ಲರ Tension ನಿತ್ಯ ಧಾರಾವಾಹಿಯಂತೆ...
ದಿನಕ್ಕೊಂದು ಹೊಸ ಎಪಿಸೋಡ್...
               ಹೀಗೆ ಯೋಚಿಸುತ್ತಲೇ ದಿನ
ನಿತ್ಯದ rounds ಮುಗಿಸಿ ಮನೆಗೆ ಬರುವುದರಲ್ಲಿ ಕೆಲಸದವಳು ಬಂದಾಗಿತ್ತು...ಮನೆಯಲ್ಲಿ ಅವಳೊ ಬ್ಬಳೇ.ಅತ್ತೆಗೆ ತೊಂಬತ್ತರ ಸಮೀಪ 
ವಯಸ್ಸಾಗಿರುವುದರಿಂದ ಅವಳ ಗಂಡ ತಾಯಿಯ ಜೊತೆಗೆ ಇದ್ದಾನೆ.ಮಗನನ್ನು
ಯಾವುದೋ ಊರಲ್ಲಿ ಹಾಸ್ಟೆಲ್ ಒಂದರಲ್ಲಿ ಬಿಟ್ಟಿದ್ದಾಳೆ.ಮಗಳ ಮದುವೆ ಯಾಗಿದ್ದರೂ ಅವಳದೂ ಏನೇನೋ‌ ಬೇಡಿಕೆ. ಹೀಗಾಗಿ ಸಂಸಾರದ ನೊಗ
ಸಧ್ಯಕ್ಕೆ ಇವಳ ಕುತ್ತಿಗೆಯಿಂದ ಕೆಳಗಿಳಿಯುವ ಸಂಭವ ಕಡಿಮೆ...ಹೀಗೆ
ಏನೇನೋ ದಿನಕ್ಕೊಂದು ಸುದ್ದಿಯ addition ಇದ್ದದ್ದೇ...ಅಂದಿನ ಸ್ಪೆಶಲ್ ಎಪಿಸೋಡು ಕೇಳಲು ಅಣಿಯಾಗುತ್ತ ಲೇ ಮನೆಯೊಳಗೆ ಸೇರಿಕೊಂಡೆ...

               



Tuesday 13 February 2024

ಇಂದು ವಿಶ್ವ ರೆಡಿಯೋ ದಿನವಂತೆ...  ‌‌   
    ‌
  ‌‌‌ ನಾನು ಹದಿನೆಂಟು ವರ್ಷದವಳಾ ಗುವವರೆಗೂ ರೆಡಿಯೋ ಪದ ಕೇಳಿ ಮಾತ್ರ ಗೊತ್ತಿತ್ತು.ಊರ ಹಬ್ಬ/ ಜಾತ್ರೆ/ ಸರ್ಕಸ್ ಟೆಂಟ್ ಬಂದಾಗಲೆಲ್ಲ ಗ್ರಾಮೋಫೋನ ರಿಕಾರ್ಡಿನ ಹಾಡುಗಳ
ಕಿರಿಚುವಿಕೆ ಕಿರಿಕಿರಿಯಾದದ್ದೇ ಹೆಚ್ಚು...
ಕಲಿಯಲೆಂದು ಧಾರವಾಡಕ್ಕೆ ಬಂದಾಗ
ಮಾಲಿಕರ ಮನೆಯಲ್ಲಿ Kreft ರೆಡಿಯೋ ಮೊದಲ ಬಾರಿ ನೋಡಿದೆ.ಅವರ ಮಗಳು ನನಗಿಂತ ನಾಲ್ಕು ವರ್ಷ ಹಿರಿಯಳಾದ್ದರಿಂದಲೂ
ನಾನು ನನ್ನ ಪಾಡಿಗೆ ಬೆಳಿಗ್ಗೆ ಎದ್ದು ಕಾಲೇಜಿಗೆ ಹೋಗುತ್ತಿದ್ದರಿಂದ ಹಾಡು ಕೇಳುವುದು ಒಮ್ಮೆಲೇ ಚಟವೆಂದೇನೂ
ಆಗಲಿಲ್ಲ.ಆದರೆ ಸಾಯಂಕಾಲ ರಾತ್ರಿಯ ಹಾಡುಗಳು ಗಮನ ಸೆಳೆಯುತ್ತಿದ್ದವು.ರೇಡಿಯೋ ಅಟ್ಟದ ಮೇಲಿನ ರೂಮಿನಲ್ಲಿರುತ್ತಿದ್ದುದರಿಂದ ಸದ್ದಾಗದೇ ಮೆಟ್ಟಲ ಮೇಲೆ ಕುಳಿತು
ಒಮ್ಮೊಮ್ಮೆ ಕೇಳುತ್ತಿದ್ದೆ.ಆದರೆ ನನ್ನ ಆಯ್ಕೆಯವಲ್ಲ.ಅನಿವಾರ್ಯವಾಗಿ ಬರುತ್ತಿದ್ದುದನ್ನೇ ಕೇಳಬೇಕಿತ್ತು.ಮದುವೆ
ಯಾದ ಮೇಲೆ/ನಾದಿನಿಯೂ ಅತ್ತೆಮನೆಗೆ ಹೋದ ಕಾರಣಕ್ಕೆ ರೇಡಿಯೋ ಏನೋ ನನ್ನದಾಗಿತ್ತು. ಆದರೆ ಹೆಚ್ಚಿನ ಕಾರ್ಯಬಾಹುಲ್ಯದಿಂದ ಅಷ್ಟು ಹೊತ್ತಿಗೆ ಅದರ ಮೇಲಿನ
ಆಸಕ್ತಿ ಅಷ್ಟಾಗಿ ಉಳಿದುಕೊಳ್ಳಲಿಲ್ಲ.
              ಮತ್ತೆ ನಮ್ಮ ನಂಟು  ಸುರುವಾದದ್ದು ನಾನು ಶಿಕ್ಷಕಿಯಾದ ನಂತರವೇ.ನನಗೆ ಆಕಾಶವಾಣಿಯಲ್ಲಿ
ಕೆಲಸ ಮಾಡುವ ಅನೇಕರ ಪರಿಚಯ ವಿದ್ದದ್ದು/ನಾನು ಅದಾಗಲೇ ಅಷ್ಟಿಷ್ಟು
ಬರಹವನ್ನು ಸುರುಮಾಡಿದ್ದು ಕಾಕತಾಳೀಯವಾಗಿ ಕಾರ್ಯಕ್ರಮದ
Offers ಬರತೊಡಗಿದವು/ಆಸಕ್ತಿಯೂ ಇತ್ತು/ ಅವಶ್ಯಕತೆಯೂ ಇತ್ತು. ಅಷ್ಟರಲ್ಲಾಗಲೇ ಸಂಸಾರದ ಜವಾಬ್ದಾರಿ ನನ್ನೊಬ್ಬಳ ಮೇಲೇಯೇ
ಬಿದ್ದಾಗಿತ್ತು.ಆದಾಯಕ್ಕೂ/ಖರ್ಚಿಗೂ
ತಾಳೆ ಹೊಂದಿಸಲು ಎಂದು ಒಪ್ಪುತ್ತಿದ್ದ
ಕಾರ್ಯಕ್ರಮಗಳು ಬದುಕಿನ ಅನಿವಾರ್ಯ ಭಾಗಗಳಾಗತೊಡಗಿದ ವು. ಬೆಳಗಿನ ಚಿಂತನ/ ಗಿಳಿವಿಂಡು/ ಮಹಿಳಾರಂಗ/ ಶಾಲೆಯ ಪಠ್ಯಾಧಾರಿತ
ಎಲ್ಲ ಕಾರ್ಯಕ್ರಮಗಳು/ ಸ್ವರಚಿತ ಕವನಗಳ ಓದು- ಹೀಗೆ ಒಂದಿಲ್ಲೊಂದು
ಕಾರ್ಯಕ್ರಮವಿರುತ್ತಿದ್ದ ಕಾರಣಕ್ಕೆ ಆರ್ಥಿಕವಾಗಿಯೂ ಸಹಾಯವಾಗು ತ್ತಿದ್ದರಿಂದ ಮನೆಗೆಲಸ/ ಶಾಲಾ ಕೆಲಸ ಗಳು ಎಷ್ಟೇ ಇರಲಿ ಒಪ್ಪಂದಗಳನ್ನು
ತಪ್ಪಿಸುತ್ತಿರಲಿಲ್ಲ.
   ‌‌‌            ಹೀಗಾಗಿ ಈ ರೆಡಿಯೋ ಕಾರ್ಯಕ್ರಮಗಳು ನನ್ನ ವೇಳೆಯ ಸದುಪಯೋಗ/ ಹೆಚ್ಚಿನ ಆದಾಯ/ ಬರಹದ ಆಸಕ್ತಿಯನ್ನು ನಿರಂತರವಾಗಿ
ಸಜೀವವಾಗಿಟ್ಟು ಆಗ ಕಾದದ್ದಲ್ಲದೇ
ಅದನ್ನು ನಿಯಮಿತಗೊಳಿಸಿ ಈಗ 
ವೃದ್ಧಾಪ್ಯದಲ್ಲಿಯೂ ಸಹ ನನ್ನ ಸದಾಕಾಲದ ಸಂಗಾತಿಯನ್ನಾಗಿ ಉಳಿಸಿಕೊಂಡಿದೆ... ರಟ್ಟೀಹಳ್ಳಿಯಿಂದ ಧಾರವಾಡ/ ಧಾರವಾಡದಿಂದ ಬೆಂಗಳೂರು/ಆಗಾಗ ನಿರಂತರವಾಗಿ
ಎಲ್ಲಿ ಮಕ್ಕಳು ಕರೆಯುತ್ತರೋ ಅಲ್ಲಿಗೆ
ವಾಸ್ತವ್ಯ ಬದಲಾಯಿಸುತ್ತಲೇ ಹೋದರೂ ಎಲ್ಲಿಯೂ ' ನಾನು ಏಕಾಕಿ'- ಎನಿಸದಂತೆ  ನನ್ನನ್ನು ಕಾದಿದೆ.
ಈಗಂತೂ ನಾನಾರೀತಿಯ ರೇಡಿಯೋ ಸರಕಾರದ ಪರವಾಗಿ/ಖಾಸಗಿಯಾಗಿ
ಅಸಂಖ್ಯಾತ ಚಾನೆಲ್ಗಳು ಲಭ್ಯವಿದ್ದು
ಸುಧಾರಿತ ಫೋನಗಳ ಆವಿಭಾಜ್ಯ
ಅಂಗಗಳಾಗಿ ಅಂಗೈ ನೆಲ್ಲಿಯಾಗಿವೆ...
               ಈಗೆಷ್ಟು ಬಳಸುತ್ತೇವೆ ಅನ್ನುವದಕ್ಕಿಂತಲೂ ಅತಿ ಅವಶ್ಯಕತೆ ಇದ್ದಾಗ ನಮ್ಮನ್ನು ಅದು ಬೆಳಸಿದ ರೀತಿ / ನಮ್ಮ ವ್ಯಕ್ತಿತ್ವದ ಭಾಗವೇ ಆಗಿ
ನಮ್ಮೊಳಗೇನೇ ಇಳಿದು ಹೋದ ರೀತಿ
ಯೊಂದು ನಿಜಕ್ಕೂ ಅದ್ಭುತ.ಇದೊಂದು
ಕಾರಣಕ್ಕೆ ನಾನು ಆಕಾಶವಾಣಿಗೆ/ ರೆಡಿಯೋಗಳ ವಿವಿಧ ವಾಹಿನಿಗಳಿಗೆ
ಆ ಜೀವ ಋಣಿ...




Sunday 11 February 2024


 ಸ್ವಲ್ಪೇ ಕೊಟ್ಟು ಎಷ್ಟೊಂದು ಪಡೆಯಬಹುದು! ಸ್ವಲ್ಪೇ ಕೊಟ್ಟು ಎಷ್ಟೊಂದು ಪಡೆಯಬಹುದು!

       ಅದೊಂದು ಕಾರ್ಯಾಲಯ. ಅದು 103 ವರ್ಷಗಳು ಮುಗಿದು 104 ಕ್ಕೆ ಕಾಲಿಟ್ಟವರೊಬ್ಬರ ಜನ್ಮದಿನ ಕಾರ್ಯಕ್ರಮ. ನಟ್ಟ ನಡುವೆ ಒಂದು ಅಲಂಕೃತ ಕುರ್ಚಿಯ ಮೇಲೆ ಕುಳಿತ ʻಮಡಿ ಹೆಂಗಸುʼ, ಅತಿ ಶುಭ್ರ ಬಿಳಿಸೀರೆ ಉಟ್ಟುಕೊಂಡು, ಪಕ್ಕಕ್ಕೆ ಧಾರವಾಡ ಫೇಡೆಯ Box ಇಟ್ಟುಕೊಂಡು, ಬಂದು ಕಾಲಿಗೆ ನಮಸ್ಕರಿಸಿದವರ ಕೈಗೆ ಎರಡು ಫೇಡೆ ಇಟ್ಟು “ನನ್ನಂತೆಯೇ ಶತಾಯುಷಿಯಾಗು”– ಎಂದು ಅವರ ತಲೆಮೇಲೆ ಕೈ ಇಟ್ಟು ಬಾಯಿತುಂಬಾ ಹರಸುತ್ತಿದ್ದರು…ಹಾಗೆಂದು ಗಟ್ಟಿ ಮುಟ್ಟಿ ಆಳಲ್ಲ. ಗುಬ್ಬಿಯಾಕಾರದಂತೆ ಪುಟ್ಟ ದೇಹಿ. ಸಂಪೂರ್ಣ ಬಾಗಿದ ಬೆನ್ನು. ಆದರೂ ಒಂದು ಕಡೆ ಹತ್ತು ನಿಮಿಷ ಕೂಡದೇ ಏನೋ ಒಂದನ್ನು ಸದಾ ಮಾಡುತ್ತಲೇ ಇರುವ ಅಭ್ಯಾಸ… ʻಹೊತ್ತಾಯ್ತು, ಊಟ ಮೊದಲು ಮಾಡಿʼ ಎಂದರೆ ʻನನಗೆ ಹಸಿವೆಯಾ ಗುವುದಿಲ್ಲʼ, ʻಚೆನ್ನಾಗಿ ನೀರು ಕುಡಿಯಿರಿʼ ಎಂದರೆ ʻನನಗೆ ನೀರಡಿಕೆಯೇ ಆಗುವುದಿಲ್ಲʼ - ಇಂಥದೇ  ಉತ್ತರ. ಅವರ ಹೊಟ್ಟೆಗೆ ದೇವರು ಅದೇನು ಅಮೃತ ಹಾಕಿದ್ದನೋ ಗೊತ್ತಿಲ್ಲ. 
ಮನೆಯಲ್ಲಿ ಎಂಟು ಮಕ್ಕಳು, ಹಿರಿ-ಕಿರಿಯರು, ಬಂದು-ಹೋಗುವ ಜನರೂ ಹೆಚ್ಚು. ಸದಾ ಒಂದಿಲ್ಲೊಂದು ಮನೆಯ ಕೆಲಸಗಳಲ್ಲಿ ಭಾಗಿ. ಅವರಲ್ಲಿ ಕೆಲಸ ಮುಗಿದರೆ, ನಮ್ಮ ಮನೆಯಲ್ಲಿ ಇಣುಕಿ, ನನ್ನ ಕೆಲಸಗಳಲ್ಲಿ ಬೇಡವೆಂದರೂ ನೆರವಾಗುವುದು ಅವರ ರೂಢಿ. ಕೂತಲ್ಲೇ ಕಾಯಿ-ಪಲ್ಲೆ ಸ್ವಚ್ಛ ಮಾಡುವುದು, ನಾನು ಕೆಲಸದಲ್ಲಿದ್ದರೆ ನನ್ನ ಮಕ್ಕಳನ್ನು ಆಡಿಸುವುದು, ತೊಟ್ಟಿಲು ತೂಗುವುದು- ಇಂಥ ಅತಿ ಅವಶ್ಯ ಕೆಲಸಗಳಲ್ಲಿ ಕೈ ಜೋಡಿಸುವು ದು ಅವರು ಮಾಡುತ್ತಿದ್ದ ಕೆಲಸ… 
ಮೊದಲೆಲ್ಲ ಕಳೆದ ಕಷ್ಟದ ಜೀವನ ಅವರಿಗೆ ಸಾಕಷ್ಟು ಪಾಠ ಕಲಿಸಿತ್ತು, ಸಹನೆ ಕಲಿಸಿತ್ತು, ದೀರ್ಘ ಕಾಯುವಿಕೆ ಯನ್ನು ಕಲಿಸಿತ್ತು.ಆ ವಯಸ್ಸಿನಲ್ಲಿಯೂ ಒಮ್ಮೆಯೂ ಸಹ ಸಿಟ್ಟಿಗೇಳುತ್ತಿರಲಿಲ್ಲ. ಮಾತು ತುಂಬಾನೇ ಕಡಿಮೆ. ಹೀಗಾಗಿಯೇ ಅವರಿಂದ ಸದ್ದಿಲ್ಲದೇ ಕೆಲಸಗಳಾಗುತ್ತಿದ್ದವು- ಎಂಬ ನಂಬಿಕೆ ನನ್ನದು.ಹತ್ತು ವರ್ಷಗಳ ನಂತರ ಅವರಿಗೆ ನಮ್ಮ ಮನೆ ಸಣ್ಣದಾಗಿ ಬೇರೆ ಮನೆಗೆ ಹೋಗಬೇಕಾಯಿತು. ಆದರೂ ಆಗಾಗ ಮೊಮ್ಮಕ್ಕಳನ್ನು ಕಾಡಿಬೇಡಿ ಅವರ ಗಾಡಿಯ ಹಿಂದೆ ʻಮಂಗನ ಮರಿʼಯಂತೆ ಮೊಮ್ಮಕ್ಕಳನ್ನು ಅವುಚಿ ಹಿಡಿದು, ನಮ್ಮ ಮನೆಗೆ ಬಂದು ಇಳಿಯುತ್ತಿದ್ದರು. ಪಕ್ಕದ ಪರಿಚಯಸ್ಥರ ಮನೆಯಲ್ಲಿ ಒಪ್ಪತ್ತು ಉಂಡು/ ನಮ್ಮ ಮನೆಯಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಮತ್ತೆ ಮನೆಗೆ ವಾಪಾಸ್ ಆಗುತ್ತಿದ್ದರು...
ವಯಸ್ಸು ಹೆಚ್ಚಾಗುತ್ತಾ ಹೋದಂತೆ ಇದು ಸ್ವಲ್ಪಮಟ್ಟಿಗೆ ಕಡಿಮೆಯಾಯಿ ತು…“ಮಾಮಿ... ಆಯಿ ನಿಮ್ಮ ಮನೆಗೆ ಬರುತ್ತೇನೆಂದು ಹಠ ಮಾಡುತ್ತಾಳೆ. ಗಾಡಿಯಲ್ಲಿ ಹಿಂದೆ ಕೂಡಿಸಿಕೊಂಡು ಬರುವುದು ಸುಲಭವಾಗುವುದಿಲ್ಲ. ಮುಂದೆ ದಾರಿ ನೋಡಬೇಕೋ ಅಥವಾ ಹಿಂದೆ ಅವಳನ್ನು ನೋಡುತ್ತಿರ ಬೇಕೋ ಗೊಂದಲವಾಗುತ್ತದೆ. ಬಿದ್ದರೆ  ಎಂಬ ಭಯವೂ ಕಾಡುತ್ತದೆ.ನೀವು
ಊರಲ್ಲಿಲ್ಲ ಎಂದು ಹೇಳುತ್ತೇನೆ. ಎಂದಾದರೂ ಕೇಳಿದರೆ ʻಹೌದುʼ ಅನ್ನಿ Please.” ಇದು ಮೊಮ್ಮಕ್ಕಳ ಉಭಯಸಂಕಟ.“ಏನSSS… ಯಾವಾಗ ಕೇಳಿದರೂ ನೀ ಊರಾಗ ಇಲ್ಲ ಅಂತಾರ ನಮ್ಮ ಮೊಮ್ಮಕ್ಳು… ಗಂಡ, ಮಕ್ಳನ್ನ ಬಿಟ್ಗೊಟ್ಟು ಎಲ್ಲೆ ಹೋಗ್ತಿ? ಅವರೇನು ಮಾಡ್ಬೇಕು?” -ಇದು ಮುಂದೆಂದೋ ನನ್ನನ್ನು ಕಂಡಾಗ ಆಯಿ ತಪರಾಕಿ ತಗೋತಿದ್ದ ರೀತಿ…
ಇಂದು ತುಂಬಾ ಹಳೆಯ ಸುದ್ದಿ. ಈಗ ಅವರ ಮನೆಯ ಹಿರಿಯರ್ಯಾರೂ ಸಹಜವಾಗಿಯೇ ಇಲ್ಲ. ಐವತ್ತು ವರ್ಷಗಳಿಗೂ ಹಿಂದಿನ ಸುದ್ದಿ ಇದು. ಆದರೆ ನೆನಪುಗಳ ಕಸುವು ಕಳೆದಿಲ್ಲ… ಹಸಿ ಗೋಡೆಗೆ ನೆಟ್ಟ ಹರಳಂತೆ ಎದ್ಯಾಗ ನೆಟ್ಟು ಉಳದಾವ…ಅಂದ ಹಾಗ ಆ ಅಂತಃಕರಣ ಸ್ವರೂಪಿ, ಹೊರ ಜಗತ್ತನ್ನೇ ಕಾಣದ, ತಾನೇ ಒಂದು ಪುಟ್ಟ ವಿಶ್ವದಂತೆ ಇದ್ದ ಆ ನಮ್ಮ ʻಆಯಿʼಯ ಹೆಸರು 'ಅಕ್ಕೂಬಾಯಿ ಅಂಬೇಕರ್…'
               ಮೊನ್ನೆ ತಾನೇ ಆದ ನನ್ನ ಹುಟ್ಟುಹಬ್ಬದ ಗುಂಗಿನಲ್ಲಿ ಕಳೆದು ಹೋದಾಗ ಅಂದಿನ ಆಯಿಯ ಹುಟ್ಟುಹಬ್ಬದ ನೆನಪು ತುಂಬ ಕಾಲ ಕಾಡಿತು...ಅವರೆಲ್ಲ 'ಆಡದೇ ಮಾಡುವ ಉತ್ತಮ'ರು-ಕರ್ಮಜೀವಿಗಳು... ಅವರ ಆ ಹುಟ್ಟುಹಬ್ಬದ ಸಂಭ್ರಮದಲ್ಲಿ ಏನೋ ದೈವಿಕ ಭಾವವಿತ್ತು.ಯಾವುದೇ ಬಾಹ್ಯ ಆಡಂಬರವಿಲ್ಲದೇ ಕೇವಲ ಸಭ್ಯ ಶತಾಯುಷಿಯೊಬ್ಬರ ಆಶೀರ್ವಾದದ ನೆರಳಿನಲ್ಲಿ ಇನ್ನುಳಿದವರ ಶ್ರೇಯಸ್ಸು ಫಲಿತಗೊಳ್ಳಲಿ ಎಂಬ ಸದುದ್ದೇಶದ ಆ ಸಮಾರಂಭದೆದುರು ನಮ್ಮ ಆಡಂಬರ ಹೆಚ್ಚಾಯಿತೇನೋ - ಎಂಬ ಪುಟ್ಟ ಅಳುಕು ಅನಿಸಿದ್ದು ಯಾಕೋ ಗೊತ್ತಿಲ್ಲ...🙏🙏🙏

       ಅದೊಂದು ಕಾರ್ಯಾಲಯ. ಅದು 103 ವರ್ಷಗಳು ಮುಗಿದು 104 ಕ್ಕೆ ಕಾಲಿಟ್ಟವರೊಬ್ಬರ ಜನ್ಮದಿನ ಕಾರ್ಯಕ್ರಮ. ನಟ್ಟ ನಡುವೆ ಒಂದು ಅಲಂಕೃತ ಕುರ್ಚಿಯ ಮೇಲೆ ಕುಳಿತ ʻಮಡಿ ಹೆಂಗಸುʼ, ಅತಿ ಶುಭ್ರ ಬಿಳಿಸೀರೆ ಉಟ್ಟುಕೊಂಡು, ಪಕ್ಕಕ್ಕೆ ಧಾರವಾಡ ಫೇಡೆಯ Box ಇಟ್ಟುಕೊಂಡು, ಬಂದು ಕಾಲಿಗೆ ನಮಸ್ಕರಿಸಿದವರ ಕೈಗೆ ಎರಡು ಫೇಡೆ ಇಟ್ಟು “ನನ್ನಂತೆಯೇ ಶತಾಯುಷಿಯಾಗು”– ಎಂದು ಅವರ ತಲೆಮೇಲೆ ಕೈ ಇಟ್ಟು ಬಾಯಿತುಂಬಾ ಹರಸುತ್ತಿದ್ದರು…ಹಾಗೆಂದು ಗಟ್ಟಿ ಮುಟ್ಟಿ ಆಳಲ್ಲ. ಗುಬ್ಬಿಯಾಕಾರದಂತೆ ಪುಟ್ಟ ದೇಹಿ. ಸಂಪೂರ್ಣ ಬಾಗಿದ ಬೆನ್ನು. ಆದರೂ ಒಂದು ಕಡೆ ಹತ್ತು ನಿಮಿಷ ಕೂಡದೇ ಏನೋ ಒಂದನ್ನು ಸದಾ ಮಾಡುತ್ತಲೇ ಇರುವ ಅಭ್ಯಾಸ… ʻಹೊತ್ತಾಯ್ತು, ಊಟ ಮೊದಲು ಮಾಡಿʼ ಎಂದರೆ ʻನನಗೆ ಹಸಿವೆಯಾ ಗುವುದಿಲ್ಲʼ, ʻಚೆನ್ನಾಗಿ ನೀರು ಕುಡಿಯಿರಿʼ ಎಂದರೆ ʻನನಗೆ ನೀರಡಿಕೆಯೇ ಆಗುವುದಿಲ್ಲʼ - ಇಂಥದೇ  ಉತ್ತರ. ಅವರ ಹೊಟ್ಟೆಗೆ ದೇವರು ಅದೇನು ಅಮೃತ ಹಾಕಿದ್ದನೋ ಗೊತ್ತಿಲ್ಲ. 
ಮನೆಯಲ್ಲಿ ಎಂಟು ಮಕ್ಕಳು, ಹಿರಿ-ಕಿರಿಯರು, ಬಂದು-ಹೋಗುವ ಜನರೂ ಹೆಚ್ಚು. ಸದಾ ಒಂದಿಲ್ಲೊಂದು ಮನೆಯ ಕೆಲಸಗಳಲ್ಲಿ ಭಾಗಿ. ಅವರಲ್ಲಿ ಕೆಲಸ ಮುಗಿದರೆ, ನಮ್ಮ ಮನೆಯಲ್ಲಿ ಇಣುಕಿ, ನನ್ನ ಕೆಲಸಗಳಲ್ಲಿ ಬೇಡವೆಂದರೂ ನೆರವಾಗುವುದು ಅವರ ರೂಢಿ. ಕೂತಲ್ಲೇ ಕಾಯಿ-ಪಲ್ಲೆ ಸ್ವಚ್ಛ ಮಾಡುವುದು, ನಾನು ಕೆಲಸದಲ್ಲಿದ್ದರೆ ನನ್ನ ಮಕ್ಕಳನ್ನು ಆಡಿಸುವುದು, ತೊಟ್ಟಿಲು ತೂಗುವುದು- ಇಂಥ ಅತಿ ಅವಶ್ಯ ಕೆಲಸಗಳಲ್ಲಿ ಕೈ ಜೋಡಿಸುವು ದು ಅವರು ಮಾಡುತ್ತಿದ್ದ ಕೆಲಸ… 
ಮೊದಲೆಲ್ಲ ಕಳೆದ ಕಷ್ಟದ ಜೀವನ ಅವರಿಗೆ ಸಾಕಷ್ಟು ಪಾಠ ಕಲಿಸಿತ್ತು, ಸಹನೆ ಕಲಿಸಿತ್ತು, ದೀರ್ಘ ಕಾಯುವಿಕೆ ಯನ್ನು ಕಲಿಸಿತ್ತು.ಆ ವಯಸ್ಸಿನಲ್ಲಿಯೂ ಒಮ್ಮೆಯೂ ಸಹ ಸಿಟ್ಟಿಗೇಳುತ್ತಿರಲಿಲ್ಲ. ಮಾತು ತುಂಬಾನೇ ಕಡಿಮೆ. ಹೀಗಾಗಿಯೇ ಅವರಿಂದ ಸದ್ದಿಲ್ಲದೇ ಕೆಲಸಗಳಾಗುತ್ತಿದ್ದವು- ಎಂಬ ನಂಬಿಕೆ ನನ್ನದು.ಹತ್ತು ವರ್ಷಗಳ ನಂತರ ಅವರಿಗೆ ನಮ್ಮ ಮನೆ ಸಣ್ಣದಾಗಿ ಬೇರೆ ಮನೆಗೆ ಹೋಗಬೇಕಾಯಿತು. ಆದರೂ ಆಗಾಗ ಮೊಮ್ಮಕ್ಕಳನ್ನು ಕಾಡಿಬೇಡಿ ಅವರ ಗಾಡಿಯ ಹಿಂದೆ ʻಮಂಗನ ಮರಿʼಯಂತೆ ಮೊಮ್ಮಕ್ಕಳನ್ನು ಅವುಚಿ ಹಿಡಿದು, ನಮ್ಮ ಮನೆಗೆ ಬಂದು ಇಳಿಯುತ್ತಿದ್ದರು. ಪಕ್ಕದ ಪರಿಚಯಸ್ಥರ ಮನೆಯಲ್ಲಿ ಒಪ್ಪತ್ತು ಉಂಡು/ ನಮ್ಮ ಮನೆಯಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಮತ್ತೆ ಮನೆಗೆ ವಾಪಾಸ್ ಆಗುತ್ತಿದ್ದರು...
ವಯಸ್ಸು ಹೆಚ್ಚಾಗುತ್ತಾ ಹೋದಂತೆ ಇದು ಸ್ವಲ್ಪಮಟ್ಟಿಗೆ ಕಡಿಮೆಯಾಯಿ ತು…“ಮಾಮಿ... ಆಯಿ ನಿಮ್ಮ ಮನೆಗೆ ಬರುತ್ತೇನೆಂದು ಹಠ ಮಾಡುತ್ತಾಳೆ. ಗಾಡಿಯಲ್ಲಿ ಹಿಂದೆ ಕೂಡಿಸಿಕೊಂಡು ಬರುವುದು ಸುಲಭವಾಗುವುದಿಲ್ಲ. ಮುಂದೆ ದಾರಿ ನೋಡಬೇಕೋ ಅಥವಾ ಹಿಂದೆ ಅವಳನ್ನು ನೋಡುತ್ತಿರ ಬೇಕೋ ಗೊಂದಲವಾಗುತ್ತದೆ. ಬಿದ್ದರೆ  ಎಂಬ ಭಯವೂ ಕಾಡುತ್ತದೆ.ನೀವು
ಊರಲ್ಲಿಲ್ಲ ಎಂದು ಹೇಳುತ್ತೇನೆ. ಎಂದಾದರೂ ಕೇಳಿದರೆ ʻಹೌದುʼ ಅನ್ನಿ Please.” ಇದು ಮೊಮ್ಮಕ್ಕಳ ಉಭಯಸಂಕಟ.“ಏನSSS… ಯಾವಾಗ ಕೇಳಿದರೂ ನೀ ಊರಾಗ ಇಲ್ಲ ಅಂತಾರ ನಮ್ಮ ಮೊಮ್ಮಕ್ಳು… ಗಂಡ, ಮಕ್ಳನ್ನ ಬಿಟ್ಗೊಟ್ಟು ಎಲ್ಲೆ ಹೋಗ್ತಿ? ಅವರೇನು ಮಾಡ್ಬೇಕು?” -ಇದು ಮುಂದೆಂದೋ ನನ್ನನ್ನು ಕಂಡಾಗ ಆಯಿ ತಪರಾಕಿ ತಗೋತಿದ್ದ ರೀತಿ…
ಇಂದು ತುಂಬಾ ಹಳೆಯ ಸುದ್ದಿ. ಈಗ ಅವರ ಮನೆಯ ಹಿರಿಯರ್ಯಾರೂ ಸಹಜವಾಗಿಯೇ ಇಲ್ಲ. ಐವತ್ತು ವರ್ಷಗಳಿಗೂ ಹಿಂದಿನ ಸುದ್ದಿ ಇದು. ಆದರೆ ನೆನಪುಗಳ ಕಸುವು ಕಳೆದಿಲ್ಲ… ಹಸಿ ಗೋಡೆಗೆ ನೆಟ್ಟ ಹರಳಂತೆ ಎದ್ಯಾಗ ನೆಟ್ಟು ಉಳದಾವ…ಅಂದ ಹಾಗ ಆ ಅಂತಃಕರಣ ಸ್ವರೂಪಿ, ಹೊರ ಜಗತ್ತನ್ನೇ ಕಾಣದ, ತಾನೇ ಒಂದು ಪುಟ್ಟ ವಿಶ್ವದಂತೆ ಇದ್ದ ಆ ನಮ್ಮ ʻಆಯಿʼಯ ಹೆಸರು 'ಅಕ್ಕೂಬಾಯಿ ಅಂಬೇಕರ್…'
               ಮೊನ್ನೆ ತಾನೇ ಆದ ನನ್ನ ಹುಟ್ಟುಹಬ್ಬದ ಗುಂಗಿನಲ್ಲಿ ಕಳೆದು ಹೋದಾಗ ಅಂದಿನ ಆಯಿಯ ಹುಟ್ಟುಹಬ್ಬದ ನೆನಪು ತುಂಬ ಕಾಲ ಕಾಡಿತು...ಅವರೆಲ್ಲ 'ಆಡದೇ ಮಾಡುವ ಉತ್ತಮ'ರು-ಕರ್ಮಜೀವಿಗಳು... ಅವರ ಆ ಹುಟ್ಟುಹಬ್ಬದ ಸಂಭ್ರಮದಲ್ಲಿ ಏನೋ ದೈವಿಕ ಭಾವವಿತ್ತು.ಯಾವುದೇ ಬಾಹ್ಯ ಆಡಂಬರವಿಲ್ಲದೇ ಕೇವಲ ಸಭ್ಯ ಶತಾಯುಷಿಯೊಬ್ಬರ ಆಶೀರ್ವಾದದ ನೆರಳಿನಲ್ಲಿ ಇನ್ನುಳಿದವರ ಶ್ರೇಯಸ್ಸು ಫಲಿತಗೊಳ್ಳಲಿ ಎಂಬ ಸದುದ್ದೇಶದ ಆ ಸಮಾರಂಭದೆದುರು ನಮ್ಮ ಆಡಂಬರ ಹೆಚ್ಚಾಯಿತೇನೋ - ಎಂಬ ಪುಟ್ಟ ಅಳುಕು ಅನಿಸಿದ್ದು ಯಾಕೋ ಗೊತ್ತಿಲ್ಲ...🙏🙏🙏
       ಅದೊಂದು ಕಾರ್ಯಾಲಯ. ಅದು 103 ವರ್ಷಗಳು ಮುಗಿದು 104 ಕ್ಕೆ ಕಾಲಿಟ್ಟವರೊಬ್ಬರ ಜನ್ಮದಿನ ಕಾರ್ಯಕ್ರಮ. ನಟ್ಟ ನಡುವೆ ಒಂದು ಅಲಂಕೃತ ಕುರ್ಚಿಯ ಮೇಲೆ ಕುಳಿತ ʻಮಡಿ ಹೆಂಗಸುʼ, ಅತಿ ಶುಭ್ರ ಬಿಳಿಸೀರೆ ಉಟ್ಟುಕೊಂಡು, ಪಕ್ಕಕ್ಕೆ ಧಾರವಾಡ ಫೇಡೆಯ Box ಇಟ್ಟುಕೊಂಡು, ಬಂದು ಕಾಲಿಗೆ ನಮಸ್ಕರಿಸಿದವರ ಕೈಗೆ ಎರಡು ಫೇಡೆ ಇಟ್ಟು “ನನ್ನಂತೆಯೇ ಶತಾಯುಷಿಯಾಗು”– ಎಂದು ಅವರ ತಲೆಮೇಲೆ ಕೈ ಇಟ್ಟು ಬಾಯಿತುಂಬಾ ಹರಸುತ್ತಿದ್ದರು…ಹಾಗೆಂದು ಗಟ್ಟಿ ಮುಟ್ಟಿ ಆಳಲ್ಲ. ಗುಬ್ಬಿಯಾಕಾರದಂತೆ ಪುಟ್ಟ ದೇಹಿ. ಸಂಪೂರ್ಣ ಬಾಗಿದ ಬೆನ್ನು. ಆದರೂ ಒಂದು ಕಡೆ ಹತ್ತು ನಿಮಿಷ ಕೂಡದೇ ಏನೋ ಒಂದನ್ನು ಸದಾ ಮಾಡುತ್ತಲೇ ಇರುವ ಅಭ್ಯಾಸ… ʻಹೊತ್ತಾಯ್ತು, ಊಟ ಮೊದಲು ಮಾಡಿʼ ಎಂದರೆ ʻನನಗೆ ಹಸಿವೆಯಾ ಗುವುದಿಲ್ಲʼ, ʻಚೆನ್ನಾಗಿ ನೀರು ಕುಡಿಯಿರಿʼ ಎಂದರೆ ʻನನಗೆ ನೀರಡಿಕೆಯೇ ಆಗುವುದಿಲ್ಲʼ - ಇಂಥದೇ  ಉತ್ತರ. ಅವರ ಹೊಟ್ಟೆಗೆ ದೇವರು ಅದೇನು ಅಮೃತ ಹಾಕಿದ್ದನೋ ಗೊತ್ತಿಲ್ಲ. 
ಮನೆಯಲ್ಲಿ ಎಂಟು ಮಕ್ಕಳು, ಹಿರಿ-ಕಿರಿಯರು, ಬಂದು-ಹೋಗುವ ಜನರೂ ಹೆಚ್ಚು. ಸದಾ ಒಂದಿಲ್ಲೊಂದು ಮನೆಯ ಕೆಲಸಗಳಲ್ಲಿ ಭಾಗಿ. ಅವರಲ್ಲಿ ಕೆಲಸ ಮುಗಿದರೆ, ನಮ್ಮ ಮನೆಯಲ್ಲಿ ಇಣುಕಿ, ನನ್ನ ಕೆಲಸಗಳಲ್ಲಿ ಬೇಡವೆಂದರೂ ನೆರವಾಗುವುದು ಅವರ ರೂಢಿ. ಕೂತಲ್ಲೇ ಕಾಯಿ-ಪಲ್ಲೆ ಸ್ವಚ್ಛ ಮಾಡುವುದು, ನಾನು ಕೆಲಸದಲ್ಲಿದ್ದರೆ ನನ್ನ ಮಕ್ಕಳನ್ನು ಆಡಿಸುವುದು, ತೊಟ್ಟಿಲು ತೂಗುವುದು- ಇಂಥ ಅತಿ ಅವಶ್ಯ ಕೆಲಸಗಳಲ್ಲಿ ಕೈ ಜೋಡಿಸುವು ದು ಅವರು ಮಾಡುತ್ತಿದ್ದ ಕೆಲಸ… 
ಮೊದಲೆಲ್ಲ ಕಳೆದ ಕಷ್ಟದ ಜೀವನ ಅವರಿಗೆ ಸಾಕಷ್ಟು ಪಾಠ ಕಲಿಸಿತ್ತು, ಸಹನೆ ಕಲಿಸಿತ್ತು, ದೀರ್ಘ ಕಾಯುವಿಕೆ ಯನ್ನು ಕಲಿಸಿತ್ತು.ಆ ವಯಸ್ಸಿನಲ್ಲಿಯೂ ಒಮ್ಮೆಯೂ ಸಹ ಸಿಟ್ಟಿಗೇಳುತ್ತಿರಲಿಲ್ಲ. ಮಾತು ತುಂಬಾನೇ ಕಡಿಮೆ. ಹೀಗಾಗಿಯೇ ಅವರಿಂದ ಸದ್ದಿಲ್ಲದೇ ಕೆಲಸಗಳಾಗುತ್ತಿದ್ದವು- ಎಂಬ ನಂಬಿಕೆ ನನ್ನದು.ಹತ್ತು ವರ್ಷಗಳ ನಂತರ ಅವರಿಗೆ ನಮ್ಮ ಮನೆ ಸಣ್ಣದಾಗಿ ಬೇರೆ ಮನೆಗೆ ಹೋಗಬೇಕಾಯಿತು. ಆದರೂ ಆಗಾಗ ಮೊಮ್ಮಕ್ಕಳನ್ನು ಕಾಡಿಬೇಡಿ ಅವರ ಗಾಡಿಯ ಹಿಂದೆ ʻಮಂಗನ ಮರಿʼಯಂತೆ ಮೊಮ್ಮಕ್ಕಳನ್ನು ಅವುಚಿ ಹಿಡಿದು, ನಮ್ಮ ಮನೆಗೆ ಬಂದು ಇಳಿಯುತ್ತಿದ್ದರು. ಪಕ್ಕದ ಪರಿಚಯಸ್ಥರ ಮನೆಯಲ್ಲಿ ಒಪ್ಪತ್ತು ಉಂಡು/ ನಮ್ಮ ಮನೆಯಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಮತ್ತೆ ಮನೆಗೆ ವಾಪಾಸ್ ಆಗುತ್ತಿದ್ದರು...
ವಯಸ್ಸು ಹೆಚ್ಚಾಗುತ್ತಾ ಹೋದಂತೆ ಇದು ಸ್ವಲ್ಪಮಟ್ಟಿಗೆ ಕಡಿಮೆಯಾಯಿ ತು…“ಮಾಮಿ... ಆಯಿ ನಿಮ್ಮ ಮನೆಗೆ ಬರುತ್ತೇನೆಂದು ಹಠ ಮಾಡುತ್ತಾಳೆ. ಗಾಡಿಯಲ್ಲಿ ಹಿಂದೆ ಕೂಡಿಸಿಕೊಂಡು ಬರುವುದು ಸುಲಭವಾಗುವುದಿಲ್ಲ. ಮುಂದೆ ದಾರಿ ನೋಡಬೇಕೋ ಅಥವಾ ಹಿಂದೆ ಅವಳನ್ನು ನೋಡುತ್ತಿರ ಬೇಕೋ ಗೊಂದಲವಾಗುತ್ತದೆ. ಬಿದ್ದರೆ  ಎಂಬ ಭಯವೂ ಕಾಡುತ್ತದೆ.ನೀವು
ಊರಲ್ಲಿಲ್ಲ ಎಂದು ಹೇಳುತ್ತೇನೆ. ಎಂದಾದರೂ ಕೇಳಿದರೆ ʻಹೌದುʼ ಅನ್ನಿ Please.” ಇದು ಮೊಮ್ಮಕ್ಕಳ ಉಭಯಸಂಕಟ.“ಏನSSS… ಯಾವಾಗ ಕೇಳಿದರೂ ನೀ ಊರಾಗ ಇಲ್ಲ ಅಂತಾರ ನಮ್ಮ ಮೊಮ್ಮಕ್ಳು… ಗಂಡ, ಮಕ್ಳನ್ನ ಬಿಟ್ಗೊಟ್ಟು ಎಲ್ಲೆ ಹೋಗ್ತಿ? ಅವರೇನು ಮಾಡ್ಬೇಕು?” -ಇದು ಮುಂದೆಂದೋ ನನ್ನನ್ನು ಕಂಡಾಗ ಆಯಿ ತಪರಾಕಿ ತಗೋತಿದ್ದ ರೀತಿ…
ಇಂದು ತುಂಬಾ ಹಳೆಯ ಸುದ್ದಿ. ಈಗ ಅವರ ಮನೆಯ ಹಿರಿಯರ್ಯಾರೂ ಸಹಜವಾಗಿಯೇ ಇಲ್ಲ. ಐವತ್ತು ವರ್ಷಗಳಿಗೂ ಹಿಂದಿನ ಸುದ್ದಿ ಇದು. ಆದರೆ ನೆನಪುಗಳ ಕಸುವು ಕಳೆದಿಲ್ಲ… ಹಸಿ ಗೋಡೆಗೆ ನೆಟ್ಟ ಹರಳಂತೆ ಎದ್ಯಾಗ ನೆಟ್ಟು ಉಳದಾವ…ಅಂದ ಹಾಗ ಆ ಅಂತಃಕರಣ ಸ್ವರೂಪಿ, ಹೊರ ಜಗತ್ತನ್ನೇ ಕಾಣದ, ತಾನೇ ಒಂದು ಪುಟ್ಟ ವಿಶ್ವದಂತೆ ಇದ್ದ ಆ ನಮ್ಮ ʻಆಯಿʼಯ ಹೆಸರು 'ಅಕ್ಕೂಬಾಯಿ ಅಂಬೇಕರ್…'
               ಮೊನ್ನೆ ತಾನೇ ಆದ ನನ್ನ ಹುಟ್ಟುಹಬ್ಬದ ಗುಂಗಿನಲ್ಲಿ ಕಳೆದು ಹೋದಾಗ ಅಂದಿನ ಆಯಿಯ ಹುಟ್ಟುಹಬ್ಬದ ನೆನಪು ತುಂಬ ಕಾಲ ಕಾಡಿತು...ಅವರೆಲ್ಲ 'ಆಡದೇ ಮಾಡುವ ಉತ್ತಮ'ರು-ಕರ್ಮಜೀವಿಗಳು... ಅವರ ಆ ಹುಟ್ಟುಹಬ್ಬದ ಸಂಭ್ರಮದಲ್ಲಿ ಏನೋ ದೈವಿಕ ಭಾವವಿತ್ತು.ಯಾವುದೇ ಬಾಹ್ಯ ಆಡಂಬರವಿಲ್ಲದೇ ಕೇವಲ ಸಭ್ಯ ಶತಾಯುಷಿಯೊಬ್ಬರ ಆಶೀರ್ವಾದದ ನೆರಳಿನಲ್ಲಿ ಇನ್ನುಳಿದವರ ಶ್ರೇಯಸ್ಸು ಫಲಿತಗೊಳ್ಳಲಿ ಎಂಬ ಸದುದ್ದೇಶದ ಆ ಸಮಾರಂಭದೆದುರು ನಮ್ಮ ಆಡಂಬರ ಹೆಚ್ಚಾಯಿತೇನೋ - ಎಂಬ ಪುಟ್ಟ ಅಳುಕು ಅನಿಸಿದ್ದು ಯಾಕೋ ಗೊತ್ತಿಲ್ಲ...🙏🙏🙏

       ಅದೊಂದು ಕಾರ್ಯಾಲಯ. ಅದು 103 ವರ್ಷಗಳು ಮುಗಿದು 104 ಕ್ಕೆ ಕಾಲಿಟ್ಟವರೊಬ್ಬರ ಜನ್ಮದಿನ ಕಾರ್ಯಕ್ರಮ. ನಟ್ಟ ನಡುವೆ ಒಂದು ಅಲಂಕೃತ ಕುರ್ಚಿಯ ಮೇಲೆ ಕುಳಿತ ʻಮಡಿ ಹೆಂಗಸುʼ, ಅತಿ ಶುಭ್ರ ಬಿಳಿಸೀರೆ ಉಟ್ಟುಕೊಂಡು, ಪಕ್ಕಕ್ಕೆ ಧಾರವಾಡ ಫೇಡೆಯ Box ಇಟ್ಟುಕೊಂಡು, ಬಂದು ಕಾಲಿಗೆ ನಮಸ್ಕರಿಸಿದವರ ಕೈಗೆ ಎರಡು ಫೇಡೆ ಇಟ್ಟು “ನನ್ನಂತೆಯೇ ಶತಾಯುಷಿಯಾಗು”– ಎಂದು ಅವರ ತಲೆಮೇಲೆ ಕೈ ಇಟ್ಟು ಬಾಯಿತುಂಬಾ ಹರಸುತ್ತಿದ್ದರು…ಹಾಗೆಂದು ಗಟ್ಟಿ ಮುಟ್ಟಿ ಆಳಲ್ಲ. ಗುಬ್ಬಿಯಾಕಾರದಂತೆ ಪುಟ್ಟ ದೇಹಿ. ಸಂಪೂರ್ಣ ಬಾಗಿದ ಬೆನ್ನು. ಆದರೂ ಒಂದು ಕಡೆ ಹತ್ತು ನಿಮಿಷ ಕೂಡದೇ ಏನೋ ಒಂದನ್ನು ಸದಾ ಮಾಡುತ್ತಲೇ ಇರುವ ಅಭ್ಯಾಸ… ʻಹೊತ್ತಾಯ್ತು, ಊಟ ಮೊದಲು ಮಾಡಿʼ ಎಂದರೆ ʻನನಗೆ ಹಸಿವೆಯಾ ಗುವುದಿಲ್ಲʼ, ʻಚೆನ್ನಾಗಿ ನೀರು ಕುಡಿಯಿರಿʼ ಎಂದರೆ ʻನನಗೆ ನೀರಡಿಕೆಯೇ ಆಗುವುದಿಲ್ಲʼ - ಇಂಥದೇ  ಉತ್ತರ. ಅವರ ಹೊಟ್ಟೆಗೆ ದೇವರು ಅದೇನು ಅಮೃತ ಹಾಕಿದ್ದನೋ ಗೊತ್ತಿಲ್ಲ. 
ಮನೆಯಲ್ಲಿ ಎಂಟು ಮಕ್ಕಳು, ಹಿರಿ-ಕಿರಿಯರು, ಬಂದು-ಹೋಗುವ ಜನರೂ ಹೆಚ್ಚು. ಸದಾ ಒಂದಿಲ್ಲೊಂದು ಮನೆಯ ಕೆಲಸಗಳಲ್ಲಿ ಭಾಗಿ. ಅವರಲ್ಲಿ ಕೆಲಸ ಮುಗಿದರೆ, ನಮ್ಮ ಮನೆಯಲ್ಲಿ ಇಣುಕಿ, ನನ್ನ ಕೆಲಸಗಳಲ್ಲಿ ಬೇಡವೆಂದರೂ ನೆರವಾಗುವುದು ಅವರ ರೂಢಿ. ಕೂತಲ್ಲೇ ಕಾಯಿ-ಪಲ್ಲೆ ಸ್ವಚ್ಛ ಮಾಡುವುದು, ನಾನು ಕೆಲಸದಲ್ಲಿದ್ದರೆ ನನ್ನ ಮಕ್ಕಳನ್ನು ಆಡಿಸುವುದು, ತೊಟ್ಟಿಲು ತೂಗುವುದು- ಇಂಥ ಅತಿ ಅವಶ್ಯ ಕೆಲಸಗಳಲ್ಲಿ ಕೈ ಜೋಡಿಸುವು ದು ಅವರು ಮಾಡುತ್ತಿದ್ದ ಕೆಲಸ… 
ಮೊದಲೆಲ್ಲ ಕಳೆದ ಕಷ್ಟದ ಜೀವನ ಅವರಿಗೆ ಸಾಕಷ್ಟು ಪಾಠ ಕಲಿಸಿತ್ತು, ಸಹನೆ ಕಲಿಸಿತ್ತು, ದೀರ್ಘ ಕಾಯುವಿಕೆ ಯನ್ನು ಕಲಿಸಿತ್ತು.ಆ ವಯಸ್ಸಿನಲ್ಲಿಯೂ ಒಮ್ಮೆಯೂ ಸಹ ಸಿಟ್ಟಿಗೇಳುತ್ತಿರಲಿಲ್ಲ. ಮಾತು ತುಂಬಾನೇ ಕಡಿಮೆ. ಹೀಗಾಗಿಯೇ ಅವರಿಂದ ಸದ್ದಿಲ್ಲದೇ ಕೆಲಸಗಳಾಗುತ್ತಿದ್ದವು- ಎಂಬ ನಂಬಿಕೆ ನನ್ನದು.ಹತ್ತು ವರ್ಷಗಳ ನಂತರ ಅವರಿಗೆ ನಮ್ಮ ಮನೆ ಸಣ್ಣದಾಗಿ ಬೇರೆ ಮನೆಗೆ ಹೋಗಬೇಕಾಯಿತು. ಆದರೂ ಆಗಾಗ ಮೊಮ್ಮಕ್ಕಳನ್ನು ಕಾಡಿಬೇಡಿ ಅವರ ಗಾಡಿಯ ಹಿಂದೆ ʻಮಂಗನ ಮರಿʼಯಂತೆ ಮೊಮ್ಮಕ್ಕಳನ್ನು ಅವುಚಿ ಹಿಡಿದು, ನಮ್ಮ ಮನೆಗೆ ಬಂದು ಇಳಿಯುತ್ತಿದ್ದರು. ಪಕ್ಕದ ಪರಿಚಯಸ್ಥರ ಮನೆಯಲ್ಲಿ ಒಪ್ಪತ್ತು ಉಂಡು/ ನಮ್ಮ ಮನೆಯಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಮತ್ತೆ ಮನೆಗೆ ವಾಪಾಸ್ ಆಗುತ್ತಿದ್ದರು...
ವಯಸ್ಸು ಹೆಚ್ಚಾಗುತ್ತಾ ಹೋದಂತೆ ಇದು ಸ್ವಲ್ಪಮಟ್ಟಿಗೆ ಕಡಿಮೆಯಾಯಿ ತು…“ಮಾಮಿ... ಆಯಿ ನಿಮ್ಮ ಮನೆಗೆ ಬರುತ್ತೇನೆಂದು ಹಠ ಮಾಡುತ್ತಾಳೆ. ಗಾಡಿಯಲ್ಲಿ ಹಿಂದೆ ಕೂಡಿಸಿಕೊಂಡು ಬರುವುದು ಸುಲಭವಾಗುವುದಿಲ್ಲ. ಮುಂದೆ ದಾರಿ ನೋಡಬೇಕೋ ಅಥವಾ ಹಿಂದೆ ಅವಳನ್ನು ನೋಡುತ್ತಿರ ಬೇಕೋ ಗೊಂದಲವಾಗುತ್ತದೆ. ಬಿದ್ದರೆ  ಎಂಬ ಭಯವೂ ಕಾಡುತ್ತದೆ.ನೀವು
ಊರಲ್ಲಿಲ್ಲ ಎಂದು ಹೇಳುತ್ತೇನೆ. ಎಂದಾದರೂ ಕೇಳಿದರೆ ʻಹೌದುʼ ಅನ್ನಿ Please.” ಇದು ಮೊಮ್ಮಕ್ಕಳ ಉಭಯಸಂಕಟ.“ಏನSSS… ಯಾವಾಗ ಕೇಳಿದರೂ ನೀ ಊರಾಗ ಇಲ್ಲ ಅಂತಾರ ನಮ್ಮ ಮೊಮ್ಮಕ್ಳು… ಗಂಡ, ಮಕ್ಳನ್ನ ಬಿಟ್ಗೊಟ್ಟು ಎಲ್ಲೆ ಹೋಗ್ತಿ? ಅವರೇನು ಮಾಡ್ಬೇಕು?” -ಇದು ಮುಂದೆಂದೋ ನನ್ನನ್ನು ಕಂಡಾಗ ಆಯಿ ತಪರಾಕಿ ತಗೋತಿದ್ದ ರೀತಿ…
ಇಂದು ತುಂಬಾ ಹಳೆಯ ಸುದ್ದಿ. ಈಗ ಅವರ ಮನೆಯ ಹಿರಿಯರ್ಯಾರೂ ಸಹಜವಾಗಿಯೇ ಇಲ್ಲ. ಐವತ್ತು ವರ್ಷಗಳಿಗೂ ಹಿಂದಿನ ಸುದ್ದಿ ಇದು. ಆದರೆ ನೆನಪುಗಳ ಕಸುವು ಕಳೆದಿಲ್ಲ… ಹಸಿ ಗೋಡೆಗೆ ನೆಟ್ಟ ಹರಳಂತೆ ಎದ್ಯಾಗ ನೆಟ್ಟು ಉಳದಾವ…ಅಂದ ಹಾಗ ಆ ಅಂತಃಕರಣ ಸ್ವರೂಪಿ, ಹೊರ ಜಗತ್ತನ್ನೇ ಕಾಣದ, ತಾನೇ ಒಂದು ಪುಟ್ಟ ವಿಶ್ವದಂತೆ ಇದ್ದ ಆ ನಮ್ಮ ʻಆಯಿʼಯ ಹೆಸರು 'ಅಕ್ಕೂಬಾಯಿ ಅಂಬೇಕರ್…'
               ಮೊನ್ನೆ ತಾನೇ ಆದ ನನ್ನ ಹುಟ್ಟುಹಬ್ಬದ ಗುಂಗಿನಲ್ಲಿ ಕಳೆದು ಹೋದಾಗ ಅಂದಿನ ಆಯಿಯ ಹುಟ್ಟುಹಬ್ಬದ ನೆನಪು ತುಂಬ ಕಾಲ ಕಾಡಿತು...ಅವರೆಲ್ಲ 'ಆಡದೇ ಮಾಡುವ ಉತ್ತಮ'ರು-ಕರ್ಮಜೀವಿಗಳು... ಅವರ ಆ ಹುಟ್ಟುಹಬ್ಬದ ಸಂಭ್ರಮದಲ್ಲಿ ಏನೋ ದೈವಿಕ ಭಾವವಿತ್ತು.ಯಾವುದೇ ಬಾಹ್ಯ ಆಡಂಬರವಿಲ್ಲದೇ ಕೇವಲ ಸಭ್ಯ ಶತಾಯುಷಿಯೊಬ್ಬರ ಆಶೀರ್ವಾದದ ನೆರಳಿನಲ್ಲಿ ಇನ್ನುಳಿದವರ ಶ್ರೇಯಸ್ಸು ಫಲಿತಗೊಳ್ಳಲಿ ಎಂಬ ಸದುದ್ದೇಶದ ಆ ಸಮಾರಂಭದೆದುರು ನಮ್ಮ ಆಡಂಬರ ಹೆಚ್ಚಾಯಿತೇನೋ - ಎಂಬ ಪುಟ್ಟ ಅಳುಕು ಅನಿಸಿದ್ದು ಯಾಕೋ ಗೊತ್ತಿಲ್ಲ...🙏🙏🙏

       ಅದೊಂದು ಕಾರ್ಯಾಲಯ. ಅದು 103 ವರ್ಷಗಳು ಮುಗಿದು 104 ಕ್ಕೆ ಕಾಲಿಟ್ಟವರೊಬ್ಬರ ಜನ್ಮದಿನ ಕಾರ್ಯಕ್ರಮ. ನಟ್ಟ ನಡುವೆ ಒಂದು ಅಲಂಕೃತ ಕುರ್ಚಿಯ ಮೇಲೆ ಕುಳಿತ ʻಮಡಿ ಹೆಂಗಸುʼ, ಅತಿ ಶುಭ್ರ ಬಿಳಿಸೀರೆ ಉಟ್ಟುಕೊಂಡು, ಪಕ್ಕಕ್ಕೆ ಧಾರವಾಡ ಫೇಡೆಯ Box ಇಟ್ಟುಕೊಂಡು, ಬಂದು ಕಾಲಿಗೆ ನಮಸ್ಕರಿಸಿದವರ ಕೈಗೆ ಎರಡು ಫೇಡೆ ಇಟ್ಟು “ನನ್ನಂತೆಯೇ ಶತಾಯುಷಿಯಾಗು”– ಎಂದು ಅವರ ತಲೆಮೇಲೆ ಕೈ ಇಟ್ಟು ಬಾಯಿತುಂಬಾ ಹರಸುತ್ತಿದ್ದರು…ಹಾಗೆಂದು ಗಟ್ಟಿ ಮುಟ್ಟಿ ಆಳಲ್ಲ. ಗುಬ್ಬಿಯಾಕಾರದಂತೆ ಪುಟ್ಟ ದೇಹಿ. ಸಂಪೂರ್ಣ ಬಾಗಿದ ಬೆನ್ನು. ಆದರೂ ಒಂದು ಕಡೆ ಹತ್ತು ನಿಮಿಷ ಕೂಡದೇ ಏನೋ ಒಂದನ್ನು ಸದಾ ಮಾಡುತ್ತಲೇ ಇರುವ ಅಭ್ಯಾಸ… ʻಹೊತ್ತಾಯ್ತು, ಊಟ ಮೊದಲು ಮಾಡಿʼ ಎಂದರೆ ʻನನಗೆ ಹಸಿವೆಯಾ ಗುವುದಿಲ್ಲʼ, ʻಚೆನ್ನಾಗಿ ನೀರು ಕುಡಿಯಿರಿʼ ಎಂದರೆ ʻನನಗೆ ನೀರಡಿಕೆಯೇ ಆಗುವುದಿಲ್ಲʼ - ಇಂಥದೇ  ಉತ್ತರ. ಅವರ ಹೊಟ್ಟೆಗೆ ದೇವರು ಅದೇನು ಅಮೃತ ಹಾಕಿದ್ದನೋ ಗೊತ್ತಿಲ್ಲ. 
ಮನೆಯಲ್ಲಿ ಎಂಟು ಮಕ್ಕಳು, ಹಿರಿ-ಕಿರಿಯರು, ಬಂದು-ಹೋಗುವ ಜನರೂ ಹೆಚ್ಚು. ಸದಾ ಒಂದಿಲ್ಲೊಂದು ಮನೆಯ ಕೆಲಸಗಳಲ್ಲಿ ಭಾಗಿ. ಅವರಲ್ಲಿ ಕೆಲಸ ಮುಗಿದರೆ, ನಮ್ಮ ಮನೆಯಲ್ಲಿ ಇಣುಕಿ, ನನ್ನ ಕೆಲಸಗಳಲ್ಲಿ ಬೇಡವೆಂದರೂ ನೆರವಾಗುವುದು ಅವರ ರೂಢಿ. ಕೂತಲ್ಲೇ ಕಾಯಿ-ಪಲ್ಲೆ ಸ್ವಚ್ಛ ಮಾಡುವುದು, ನಾನು ಕೆಲಸದಲ್ಲಿದ್ದರೆ ನನ್ನ ಮಕ್ಕಳನ್ನು ಆಡಿಸುವುದು, ತೊಟ್ಟಿಲು ತೂಗುವುದು- ಇಂಥ ಅತಿ ಅವಶ್ಯ ಕೆಲಸಗಳಲ್ಲಿ ಕೈ ಜೋಡಿಸುವು ದು ಅವರು ಮಾಡುತ್ತಿದ್ದ ಕೆಲಸ… 
ಮೊದಲೆಲ್ಲ ಕಳೆದ ಕಷ್ಟದ ಜೀವನ ಅವರಿಗೆ ಸಾಕಷ್ಟು ಪಾಠ ಕಲಿಸಿತ್ತು, ಸಹನೆ ಕಲಿಸಿತ್ತು, ದೀರ್ಘ ಕಾಯುವಿಕೆ ಯನ್ನು ಕಲಿಸಿತ್ತು.ಆ ವಯಸ್ಸಿನಲ್ಲಿಯೂ ಒಮ್ಮೆಯೂ ಸಹ ಸಿಟ್ಟಿಗೇಳುತ್ತಿರಲಿಲ್ಲ. ಮಾತು ತುಂಬಾನೇ ಕಡಿಮೆ. ಹೀಗಾಗಿಯೇ ಅವರಿಂದ ಸದ್ದಿಲ್ಲದೇ ಕೆಲಸಗಳಾಗುತ್ತಿದ್ದವು- ಎಂಬ ನಂಬಿಕೆ ನನ್ನದು.ಹತ್ತು ವರ್ಷಗಳ ನಂತರ ಅವರಿಗೆ ನಮ್ಮ ಮನೆ ಸಣ್ಣದಾಗಿ ಬೇರೆ ಮನೆಗೆ ಹೋಗಬೇಕಾಯಿತು. ಆದರೂ ಆಗಾಗ ಮೊಮ್ಮಕ್ಕಳನ್ನು ಕಾಡಿಬೇಡಿ ಅವರ ಗಾಡಿಯ ಹಿಂದೆ ʻಮಂಗನ ಮರಿʼಯಂತೆ ಮೊಮ್ಮಕ್ಕಳನ್ನು ಅವುಚಿ ಹಿಡಿದು, ನಮ್ಮ ಮನೆಗೆ ಬಂದು ಇಳಿಯುತ್ತಿದ್ದರು. ಪಕ್ಕದ ಪರಿಚಯಸ್ಥರ ಮನೆಯಲ್ಲಿ ಒಪ್ಪತ್ತು ಉಂಡು/ ನಮ್ಮ ಮನೆಯಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಮತ್ತೆ ಮನೆಗೆ ವಾಪಾಸ್ ಆಗುತ್ತಿದ್ದರು...
ವಯಸ್ಸು ಹೆಚ್ಚಾಗುತ್ತಾ ಹೋದಂತೆ ಇದು ಸ್ವಲ್ಪಮಟ್ಟಿಗೆ ಕಡಿಮೆಯಾಯಿ ತು…“ಮಾಮಿ... ಆಯಿ ನಿಮ್ಮ ಮನೆಗೆ ಬರುತ್ತೇನೆಂದು ಹಠ ಮಾಡುತ್ತಾಳೆ. ಗಾಡಿಯಲ್ಲಿ ಹಿಂದೆ ಕೂಡಿಸಿಕೊಂಡು ಬರುವುದು ಸುಲಭವಾಗುವುದಿಲ್ಲ. ಮುಂದೆ ದಾರಿ ನೋಡಬೇಕೋ ಅಥವಾ ಹಿಂದೆ ಅವಳನ್ನು ನೋಡುತ್ತಿರ ಬೇಕೋ ಗೊಂದಲವಾಗುತ್ತದೆ. ಬಿದ್ದರೆ  ಎಂಬ ಭಯವೂ ಕಾಡುತ್ತದೆ.ನೀವು
ಊರಲ್ಲಿಲ್ಲ ಎಂದು ಹೇಳುತ್ತೇನೆ. ಎಂದಾದರೂ ಕೇಳಿದರೆ ʻಹೌದುʼ ಅನ್ನಿ Please.” ಇದು ಮೊಮ್ಮಕ್ಕಳ ಉಭಯಸಂಕಟ.“ಏನSSS… ಯಾವಾಗ ಕೇಳಿದರೂ ನೀ ಊರಾಗ ಇಲ್ಲ ಅಂತಾರ ನಮ್ಮ ಮೊಮ್ಮಕ್ಳು… ಗಂಡ, ಮಕ್ಳನ್ನ ಬಿಟ್ಗೊಟ್ಟು ಎಲ್ಲೆ ಹೋಗ್ತಿ? ಅವರೇನು ಮಾಡ್ಬೇಕು?” -ಇದು ಮುಂದೆಂದೋ ನನ್ನನ್ನು ಕಂಡಾಗ ಆಯಿ ತಪರಾಕಿ ತಗೋತಿದ್ದ ರೀತಿ…
ಇಂದು ತುಂಬಾ ಹಳೆಯ ಸುದ್ದಿ. ಈಗ ಅವರ ಮನೆಯ ಹಿರಿಯರ್ಯಾರೂ ಸಹಜವಾಗಿಯೇ ಇಲ್ಲ. ಐವತ್ತು ವರ್ಷಗಳಿಗೂ ಹಿಂದಿನ ಸುದ್ದಿ ಇದು. ಆದರೆ ನೆನಪುಗಳ ಕಸುವು ಕಳೆದಿಲ್ಲ… ಹಸಿ ಗೋಡೆಗೆ ನೆಟ್ಟ ಹರಳಂತೆ ಎದ್ಯಾಗ ನೆಟ್ಟು ಉಳದಾವ…ಅಂದ ಹಾಗ ಆ ಅಂತಃಕರಣ ಸ್ವರೂಪಿ, ಹೊರ ಜಗತ್ತನ್ನೇ ಕಾಣದ, ತಾನೇ ಒಂದು ಪುಟ್ಟ ವಿಶ್ವದಂತೆ ಇದ್ದ ಆ ನಮ್ಮ ʻಆಯಿʼಯ ಹೆಸರು 'ಅಕ್ಕೂಬಾಯಿ ಅಂಬೇಕರ್…'
               ಮೊನ್ನೆ ತಾನೇ ಆದ ನನ್ನ ಹುಟ್ಟುಹಬ್ಬದ ಗುಂಗಿನಲ್ಲಿ ಕಳೆದು ಹೋದಾಗ ಅಂದಿನ ಆಯಿಯ ಹುಟ್ಟುಹಬ್ಬದ ನೆನಪು ತುಂಬ ಕಾಲ ಕಾಡಿತು...ಅವರೆಲ್ಲ 'ಆಡದೇ ಮಾಡುವ ಉತ್ತಮ'ರು-ಕರ್ಮಜೀವಿಗಳು... ಅವರ ಆ ಹುಟ್ಟುಹಬ್ಬದ ಸಂಭ್ರಮದಲ್ಲಿ ಏನೋ ದೈವಿಕ ಭಾವವಿತ್ತು.ಯಾವುದೇ ಬಾಹ್ಯ ಆಡಂಬರವಿಲ್ಲದೇ ಕೇವಲ ಸಭ್ಯ ಶತಾಯುಷಿಯೊಬ್ಬರ ಆಶೀರ್ವಾದದ ನೆರಳಿನಲ್ಲಿ ಇನ್ನುಳಿದವರ ಶ್ರೇಯಸ್ಸು ಫಲಿತಗೊಳ್ಳಲಿ ಎಂಬ ಸದುದ್ದೇಶದ ಆ ಸಮಾರಂಭದೆದುರು ನಮ್ಮ ಆಡಂಬರ ಹೆಚ್ಚಾಯಿತೇನೋ - ಎಂಬ ಪುಟ್ಟ ಅಳುಕು ಅನಿಸಿದ್ದು ಯಾಕೋ ಗೊತ್ತಿಲ್ಲ...🙏🙏🙏

ನಿಮ್ಮೊಲುಮೆಯಿಂದಲೇ...

   ನಿಮ್ಮೊಲುಮೆಯಿಂದಲೇ...
  ‌   ಒಂದು ವಿಚಾರ ಮನದಲ್ಲಿ ಮೂಡಿ,
ತಲೆಯಲ್ಲಿ ಪಲ್ಲವಿಸಿ, ಬುದ್ಧಿ ಬಲದಿಂದ 
ಬರಹದ ರೂಪ ತಾಳುವ ಪರಿಯೊಂದು ಇದೆಯಲ್ಲ,ಅದು ಸುಲಭವಲ್ಲ. ಸ್ವಂತ ಕ್ಕೂ ಮೆಚ್ಚುಗೆಯಾಗಿ ಉಳಿದವರಿಗೂ
ಹೌದೆನಿಸಿ ಪುಸ್ತಕ ರೂಪ ಧರಿಸಿ ಕೈಗೆ
ಬರುವುದೆಂದರೆ ಹೆತ್ತು- ಹೊತ್ತು ಮಗುವೊಂದು ಬಂದಂತೆ...ಆ ಅವಧಿಯಲ್ಲಿ ಕಣ್ಣಿಗೆ ಕಾಣುವ- ಕಾಣದ
ಕೈಗಳೆಷ್ಟೋ...ಅವುಗಳ ನೆರವೆಷ್ಟೋ...
              ಇದು ನನ್ನ ನಾಲ್ಕು ಪುಸ್ತಕ ಗಳನ್ನು ಹೊರತರುವಾಗಿನ ಅನುಭವ. ಬರೆಯುವಾಗ/ ಬರೆದಮೇಲೆ/ ಓದುವವರ-ಓದಿ ಮೆಚ್ಚುಗೆ ವ್ಯಕ್ತ ಪಡಿಸುವವರ ಸಹಕಾರದಿಂದ ಪ್ರಾರಂಭವಾಗುವ ಋಣಭಾರ, ಆಶಯನುಡಿ, ಮುನ್ನುಡಿ,ಬರಹಗಳನ್ನು
ಅಚ್ಚುಕಟ್ಟಾಗಿ print worthy ಯಾಗಿಸುವವರ ಕೈಚಳಕ, cover page ಆಯ್ಕೆ, ಅಂದದ ಮುದ್ರಣ ಅಂತೆಲ್ಲ ಹಂತಗಳನ್ನು ಮುಗಿಸಿ ಕೈ ಸೇರುವುದೆಂದರೆ ಎಂಥ ಅನುಭವಿಕರಿಗೂ ಒಂದು ಎದೆಗುದಿ
ಇದ್ದೇ ಇರುತ್ತದೆ.ಇನ್ನು ಆ ಕ್ಷೇತ್ರದಲ್ಲಿ
ಎಳಸಾದ ನಮಗೆ ಕೇಳುವುದೇ ಬೇಡ.
ಪರಿಚಿತರ ಸಲಹೆ- ಸಹಾಯದ ಒಂದು ಅವಶ್ಯಕತೆ ಮುಗಿಯುವುದೇ ಇಲ್ಲ...
            ಹೀಗಿದ್ದಾಗ ಅವರಿಗೊಂದು
ಆಭಾರ ಮನ್ನಣೆ ಸಲ್ಲುವುದು ಅತ್ಯಂತ
ಸಮರ್ಥನೀಯ...ನನ್ನ ಮೊದಲ
ಮಾತು ಬರೆದಕೂಡಲೇ ಮುನ್ನುಡಿಗೆ
ನೆನಪಾದವರು ನನ್ನದೇ ನೆಲದ ಬರಹಗಾರ್ತಿ ಶ್ರೀಮತಿ ಮಾಲತಿ ಮುದಕವಿ.ತಡಮಾಡದೇ ಒಂದು ಕರೆ ಮಾಡಿ ವಿನಂತಿಸಿದೆ.ನನ್ನ ಮೇಲಿನ ಸ್ನೇಹಕ್ಕೋ/ ನನ್ನ ಧ್ವನಿಯಲ್ಲಿದ್ದ ನಲ್ಮೆಯ ಒತ್ತಾಯಕ್ಕೋ ತಕ್ಷಣ ಒಪ್ಪಿದರು.ಅದು ಅವರ ಸಹೃದಯತೆ.
ಆಶಯ ನುಡಿಗಾಗಿ ಬಹುದಿನಗಳಿಂದ 
ಭಾರತಿ ಬಿ ವಿ ಯವರನ್ನು ಸಂಪರ್ಕಿಸಬೇಕು ಎಂಬುದಿತ್ತು.ಕಾರಣ ಅವರ ಬರಹಗಳೂ ಸಹ ದಿನ ನಿತ್ಯದ ಬದುಕಿನ ಪ್ರತಿ ರೂಪಗಳೇ.ಸರಳ- ವಿಶಾಲ- ಸಾರ್ವಜನಿಕ - ತಳಸ್ಪರ್ಶಿ...
ಆದರೆ ಅವರು ತಮಗೇನೇ ಸ್ವತಃ ಸಿಗಲಾರದಷ್ಟು busy ಎಂಬ ಕಾರಣಕ್ಕೆ
ಅನುಮಾನಿಸುತ್ತಲೇ ಕೇಳಿದೆ." ನಾನೀಗ
ನನ್ನ ಪುಸ್ತಕದ ಕೆಲಸ ಒಂದು ಹದಕ್ಕೆ ತಂದು ನಿಲ್ಲಿಸಿದ್ದೇನೆ ಕೃಷ್ಣಾ ಮಾ. ಬರಹದ Pdf ಕಳಿಸಿ.ಆದಷ್ಟು ಬೇಗನೇ
ಖಂಡಿತ ಬರೆದು ಕಳಿಸುತ್ತೇನೆ - ಅಂದರು.ನನಗೆ ಪುಸ್ತಕವೇ ಕೈ ಸೇರಿದಷ್ಟು ನಿರಾಳ ಭಾವ ಬಂತು.
ನಾನು ಎಲ್ಲವನ್ನೂ type ಮಾಡುವುದು
ಮೊಬೈಲ್ ನಲ್ಲೇ.ಹೀಗಾಗಿ ಅದನ್ನು computer ಗೆ ವರ್ಗಾಯಿಸಿ print worthy ಆಗಲು ಬೇಕಾದ ಎಲ್ಲ ಕೆಲಸಗಳನ್ನು ಇದುವರೆಗೆ ಮಾಡಿಕೊಟ್ಟು ಚಂದಗಾಣಿಸಿದವರು
ಶ್ರೀಮತಿ ಸುರೇಖಾ ಭೀಮಗುಳಿ.
ಇಂಥ ನುರಿತವರ ಸಹಾಯ- ಸಹಕಾರದಿಂದ ಇದೀಗ ಎಲ್ಲವೂ
ಮುಕ್ತಾಯ ಹಂತಕ್ಕೆ ಬಂದದ್ದು ಆಶ್ಚರ್ಯವೇನೂ ಅಲ್ಲ.ಇವರೆಲ್ಲರಿಗೂ
ನಾನು ಮನಸಾ ಋಣಿ ಎಂದು ಬರೆದರೆ
ಏನನ್ನೂ ಹೇಳಿದಂತಲ್ಲ ಎಂಬುದು ಗೊತ್ತಿದೆ.ಆದರೂ ಎಲ್ಲರಿಗೂ ನನ್ನ ಸಹಸ್ರ ಸಹಸ್ರ ನಮನಗಳು...
ಇನ್ನು ಪುಸ್ತಕಗಳನ್ನು ಅಂದವಾಗಿ ಮುದ್ರಿಸಿಕೊಟ್ಟ ಮಹಿಮಾ ಪ್ರಕಾಶನದವರನ್ನು ಮರೆಯಲಾದೀತೆ?!
ಈ ಹಿಂದಿನ ಎರಡು ಪುಸ್ತಕಗಳನ್ನು ಅಚ್ಚುಕಟ್ಟಾಗಿ ಮುದ್ರಿಸಿದಂತೆ ಇದರ ಕೆಲಸವನ್ನೂ ಸಂಪನ್ನಗೊಳಸಿದ್ದಾರೆ.
ಇದರೊಳಗಿನ ಲೇಖನಗಳು ಈಗಾಗಲೇ
ನನ್ನ face book ಪುಟಗಳಲ್ಲಿ ಬಂದವುಗಳೇ... ಕಾಲಕಾಲಕ್ಕೆ ಅವುಗಳನ್ನು ಓದಿ,ಮೆಚ್ಚುಗೆ ವ್ಯಕ್ತಪಡಿಸಿ
ಸಲಹೆ- ಅಭಿಪ್ರಾಯಗಳನ್ನು ಕೊಟ್ಟು
ಹುರಿದುಂಬಿಸಿದ ಎಲ್ಲಾ ಓದುಗರೇ
ಈ ಪುಸ್ತಕ ಬರಲು ಕಾರಣವೆಂದರೆ ಅತಿಶಯೋಕ್ತಿ ಖಂಡಿತ ಅಲ್ಲ.ಆ ಕಾರಣಕ್ಕೆ ಪ್ರತ್ಯಕ್ಷವಾಗಿ- ಪರೋಕ್ಷವಾಗಿ
ಈ ಪುಸ್ತಕ ಪ್ರಕಟನೆಗೆ ಕೈಗೂಡಿಸಿ ಸಹಕರಿಸಿದ ಪ್ರತಿಯೊಬ್ಬರಿಗೂ
ನನ್ನ ಹೃದಯಾಂತರಾಳದ ನಮನಗಳು...
ಇತಿ ನಿಮ್ಮ,
ಕೃಷ್ಣಾ ಕೌಲಗಿ

    ‌        

Wednesday 7 February 2024

 ಮೊದಲ ಮಾತು...
    ‌‌‌‌‌     ನಾನು ನನ್ನ ಪದವಿ ಹಾಗೂ ಪದವಿಯೋತ್ತರ ಪರೀಕ್ಷೆಗಳಲ್ಲಿ ಭಾಷೆಗಳನ್ನು ಅಭ್ಯಸಿಸಿದವಳು ಎಂಬ
ಕಾರಣಕ್ಕೋ ಏನೋ ಭಾಷೆಗಳ ಮೇಲೆ
ಅತೀವ ಪ್ರೇಮ...ನಮ್ಮನೆಯಲ್ಲಿ ಅಪ್ಪ
ನನ್ನು ಹಿಡಿದು ಎಲ್ಲರಿಗೂ ಪುಸ್ತಕ ಪ್ರೀತಿ
ಅತಿಯಾಗಿ ಇದ್ದ ಕಾರಣಕ್ಕೆ ಕೊಂಡೋ/
ಕೆಲವೊಮ್ಮೆ ಪುಸ್ತಕಗಳನ್ನು ಬೇರೆಯವರಿಂದ ಎರವಲು ಪಡೆದೋ ಓದಿನ ಗೀಳು ಹಚ್ಚಿಕೊಂಡವರು ನಾವೆಲ್ಲ... ಬರೆಯುವ ಸಾಮರ್ಥ್ಯ ವಿದ್ದರೂ ನನ್ನ ಮೊದಲ ತಂಗಿಯನ್ನು ಬಿಟ್ಟು,ಯಾಕೋ ಬೇರೆ ಯಾರೂ ಆ ಕಡೆ ಒಲವು ತೋರಿಸಿರಲಿಲ್ಲ.ನಾನು  ಮಾತ್ರ ಶಿಕ್ಷಕಿಯಾದ ವೇಳೆಯಲ್ಲಿ ಆಕಾಶವಾಣಿ ಧಾರವಾಡದಲ್ಲಿ ಹೆಚ್ಚು ಕಡಿಮೆ ಎಲ್ಲ ವಿಭಾಗಗಳಿಗೂ ಕಾರ್ಯಕ್ರಮಗಳನ್ನು ಸತತವಾಗಿ ಕೊಡುತ್ತಿದ್ದೆ.ಕಾರಣ ಅದಕ್ಕೆ ಸಿಗುತ್ತಿದ್ದ ಹೆಚ್ಚಿನ ಆದಾಯ ಹಾಗೂ single parent ಆಗಿ ಮೈಮೇಲೆ ಬಿದ್ದ ಮೂರು ಮಕ್ಕಳ ಜವಾಬ್ದಾರಿಗೊಂದು ಆಧಾರ ವಾದೀತೆಂದು...ಅದು ಒಂದು ಸತತ ಅಭ್ಯಾಸವಾಗಿ ಬದಲಾದದ್ದು- ನಾನು ವೃತ್ತಿಯಿಂದ retire ಆಗಿ/ ಮಕ್ಕಳೆಲ್ಲ ಬದುಕಿನಲ್ಲಿ Settle ಆದಮೇಲೆಯೇ...
            ಆಗಲೇ Android phone ನ‌ ಬಳಕೆ ಹೆಚ್ಚಾದ ಕಾರಣ face book ನ ಪರಿಚಯವಾಗಿ ಹೆಚ್ಚು ಸುಲಭವಾಗಿ ಟೈಪಿಸಲು ಕಲಿತದ್ದು, ಹುರುಪಿಗೆದ್ದು ದಿನಾಲೂ ಅದು- ಇದು ಎಂದುಕೊಂಡು ಬರೆಯುತ್ತಲೇ ಹೋದದ್ದು, ಒಂದು ಪುಸ್ತಕವಾಗುವಷ್ಟು ಸರಕು ತಯಾರಾದಾಗ ವಾಶಿಂಗ್ಟನ್ ಡಿಸಿ ಯ
ಪ್ರಸಿದ್ಧ ಅಂಕಣಕಾರರಾದ ಶ್ರೀವತ್ಸ ಜೋಶಿಯವರ ವಿಶೇಷ ಸಹಕಾರದಿಂದ ನನ್ನ ಮೊದಲ ಕೃತಿ 'ನೀರ ಮೇಲೆ ಅಲೆಯ ಉಂಗುರ'- ಪ್ರಕಟಗೊಂಡದ್ದು  ಎಲ್ಲವೂ ಇದೀಗ ಇತಿಹಾಸ...
     ‌        ಆದರೂ ಮತ್ತೊಮ್ಮೆ ಹೇಳುತ್ತೇನೆ, ನಾನು ಸಾಹಿತಿಯಲ್ಲ, ಸಾಹಿತ್ಯ ಪ್ರೇಮಿ.ಓದಿನ ಹುಚ್ಚು ನನ್ನನ್ನಿಲ್ಲಿಯವರೆಗೂ ಕರೆದುಕೊಂಡು ಬಂದದ್ದು.ನನ್ನ ಲೇಖನಗಳೂ ಸಹ ಕುಟುಂಬ - ಸಮಾಜ- ಪರಿಸರ-ದಿನ ನಿತ್ಯದ ಆಗು ಹೋಗುಗಳ ಸುತ್ತಲೇ ಗಿರಕಿ ಹೊಡೆಯುತ್ತವೆ.ಒಬ್ಬರ ಅನುಭವ ' ಆ ಒಬ್ಬರದೇ ಆಗಬೇಕಿಲ್ಲ'- ಎಂಬ ಕಾರಣಕ್ಕೆ ಹಲವರಿಗೆ ತಮ್ಮವೂ ಆಗಿ ಬಿಡುತ್ತವೆ.'ಸಹಿ ಹಾಕಿದರೆ ನನ್ನದೇ'. 'ಇದು ನನ್ನದೂ ಅನುಭವ', 'ಹೌದು, ಇದನ್ನು ನಾವೂ ಬದುಕಿನಲ್ಲಿ  ಅನುಭವಿಸಿದ್ದೇವೆ'- ಎನ್ನುವವರ ಅನುಮೋದನೆ ನನ್ನಿಂದ ಮತ್ತೆ ಮತ್ತೆ
ಹೆಚ್ಚು ಹೆಚ್ಚು ಬರೆಸುತ್ತದೆ.ಅತಿ ವಾದ- ವಿವಾದಗಳ, ಹೆಚ್ಚು ನಿಖರ ಮಾಹಿತಿ ಗಳನ್ನು ಬೇಡುವ, ಒಂದು ವಿಷಯಕ್ಕೆ
ಹಲವಾರು ಆಯಾಮಗಳಿರುವ, ಉಪದೇಶದ ಧಾಟಿಯ ಬರಹಗಳ
ಗೋಜಿಗೆ ನಾನು ಹೋಗುವುದಿಲ್ಲ. ನನ್ನದೇ ಅನುಭವಕ್ಕೆ ಬಂದ,ಅದು ಇನ್ನುಳಿದವರದೂ ಆಗುವಂಥ  social
Canvas ಹೊಂದಿದ ವಿಷಯಗಳಲ್ಲಿ
ನನಗೆ ಆಸಕ್ತಿ. ಅದಕ್ಕೆಂದೇ ಯಾವಾಗಲೂ ನನ್ನ ಬರಹಗಳಿಗೆ Chat centre ಎನ್ನುವುದುಂಟು ನಾನು. ಯಾವಾಗೆಂದರೆ ಆವಾಗ, ಯಾರೆಂದರೆ ಅವರು, ಎಲ್ಲೆಂದರಲ್ಲಿ ರುಚಿ ನೋಡಬೇಕೆಂದಾಗ,ನೋಡಿ  ಕೈ  ತೊಳೆದು ಹೊರಟುಬಿಡಬಹುದು. ಅದಕ್ಕೂ ಹೆಚ್ಚಿನ ಸಾಮರ್ಥ್ಯ /ಜ್ಞಾನ/ವಿಷಯ ಸಂಗ್ರಹ/ ಬರೆಯುವ ತಾಳ್ಮೆ/ನನ್ನದು ಖಂಡಿತ ಅಲ್ಲ...
         ‌  ' ಹಾಯಿ ದೋಣಿಯ ಪಯಣ'
ನನ್ನ ಮೂರನೇ ಲಘು ಬರಹ ಸಂಗ್ರಹ.
ಬರಹಗಳ ಸಂಕಲನಕ್ಕೆ ಈ ಹೆಸರು ಕೊಟ್ಟುದಕ್ಕೂ ಕಾರಣವಿದೆ.ಬದುಕಿನ ಯಾನ ತುಂಬ ದೀರ್ಘ, ಕಷ್ಟಕರ... ಅದಕ್ಕೆ ಯಾವುದೂ ತರ್ಕಸಿದ್ಧಾಂತ ಸುಲಭ ಸಾಧ್ಯವಲ್ಲ.ಯಾವುದೋ ಅದೃಶ್ಯ ಶಕ್ತಿ ದಿಕ್ಸೂಚಿಯಾಗಿ ಬದುಕಿನ‌ ಹಡಗಕ್ಕೆ ' ಹಾಯೀ ಪಟ(ಧ್ವಜ)ದ ಕೆಲಸ ಮಾಡುತ್ತದೆ.ಗಾಳಿಯೊಂದಿಗೆ ಸೇರಿ ದಡ ಮುಟ್ಟಿಸುತ್ತದೆ.ಕಡಲ ಏರಿಳಿತಗಳನ್ನು ಗುರುತಿಸುತ್ತದೆ.ಹಾಗೇ ಬದುಕು ಕೂಡ...ಅದರ ಅನೇಕ ಸಂಗತಿಗಳು ತರ್ಕಕ್ಕೆ ನಿಲುಕುವುದಿಲ್ಲ.
ದೈವ ಚಿತ್ತವೆಂದು ಬಂದುದಕ್ಕೆಲ್ಲ ಎದೆಯೊಡ್ಡುವುದು, ಪ್ರಸಾದದಂತೆ ಕೈಮುಗಿದು ಸ್ವೀಕರಿಸುವುದು ಮಾತ್ರ
ನಮಗಿದ್ದ ಸ್ವಾತಂತ್ರ್ಯ...

              'ನೀರಮೇಲೆ ಅಲೆಯ ಉಂಗುರ' ' ತುಂತುರು ಇದು ನೀರ ಹಾಡು'- ಈ ಮೊದಲಿನವು... ನೀರಿನ ಚಲನಶೀಲತೆ/ನಿರಂತರ ಹರಿವು/ ಪಾತ್ರ/ ಆಕಾರಕ್ಕೆ ಸರಿ ಹೊಂದುಕೊಳ್ಳು ವ ಅದರ ಗುಣ ಸುಂದರ ಬದುಕಿಗೂ ಬೇಕಾಗುವ ಮೂಲಸತ್ವಗಳು. ಹೀಗಾಗಿ ನನ್ನ ಬರಹ ಸಂಕಲನಗಳಿಗೆ ' ನೀರು' ಅಮೃತಮಯವಾಗಿದೆ...ಅಗಲ- ಉದ್ದ- ಆಳಗಳನ್ನು ದೊರಕಿಸಿಕೊಟ್ಟಿದೆ. ನಿರಂತರವಾಗಿ ದಿನಕ್ಕೊಂದು ವಿಷಯ ದೊರಕುವಷ್ಟು ಸಮೃದ್ಧವಾಗಿದೆ.  ಮುಖ್ಯವಾಗಿ ನನ್ನ ಅಳವಿಗೆ
( ಸಾಮರ್ಥ್ಯ)ಕ್ಕೆ ತಕ್ಕುದಾಗಿದೆ
ಎಂಬ ಬಲವಾದ ಅನಿಸಿಕೆ ನನ್ನದು...
      ‌‌‌ಮೊದಲಿನ ಎರಡು ಕೃತಿಗಳನ್ನು
ಹಾಗೂ ಐವತ್ತು ಇಂಗ್ಲಿಷ್ ಕವಿತೆಗಳ ಅನುವಾಧ ಪುಸ್ತಕ ' ಭಾವವೆಂಬ ಹೂವು ಅರಳಿ'-ಸ್ವಾಗತಿಸಿದಂತೆ ಇದನ್ನೂ ಓದಿ ಮೆಚ್ಚುವಿರೆಂಬ ಆಶಯದೊಂದಿಗೆ.

ನಿಮ್ಮ ಪ್ರೀತಿಯ,
ಶ್ರೀಮತಿ ಕೃಷ್ಣಾ ಕೌಲಗಿ...





'
 

Tuesday 6 February 2024

            ಆಟೋಟ/ ಭಾಷಣಗಳಲ್ಲಿ ಮುಂದಿದ್ದ ಕಾಲವೊಂದಿತ್ತು.ಓದಿನಲ್ಲಿ ಅತಿ ಹಿಂದೆ- ಅತಿ ಮುಂದೆ ಎಂದೇನೂ ಅಲ್ಲದ so so class.ಸ್ಪರ್ಧೆಗಳಿದ್ದರೂ
ಶಾಲಾ ಕಾರ್ಯಕ್ರಮಗಳ ಭಾಗವಾಗಿ...
ಮಾತ್ರ...ಇತರರನ್ನು ಸೋಲಿಸಬೇಕು ಎಂಬುದಕ್ಕಿಂತ ನಾವು ಗೆಲ್ಲಬೇಕು ಎಂಬ ಆಶೆಯೇ ಕಾರಣವಾಗುವಂಥ ಮುಗ್ಧತೆ. Neck tight competitions ಎಂಬ 
ವ್ಯಾಖ್ಯಾನ ಗೊತ್ತಿರದ‌ ಭಾಗವಹಿಸುವಿಕೆ
ಪಡೆದ ಒಂದು certificate ನ್ನೇ ನೋಬೆಲ್ prize ಎಂಬಂತೆ pose
ಕೊಟ್ಟು ಪಡೆದ ನೆನಪು...ಬಾಲ್ಯ/ ಬಾಲ್ಯದ ಆಟಗಳಷ್ಟು ಸುಂದರವಾದ ದ್ದು ಬೇರೇನಿದೆ ಬದುಕಿನಲ್ಲಿ!!!ಅದೇ
ಕಾರಣಕ್ಕೆ 'ನಿನಗೇನು ಬೇಕೋ ಎಲ್ಲವನ್ನೂ ನನ್ನಿಂದ ತೆಗೆದು ಕೋ!
ನನ್ನ ಬಾಲ್ಯವನ್ನು ನನಗೆ ಕೊಟ್ಟುಬಿಡು
ಎಂದು ಗಜಲ್ ಕಾರರೂ ಹಾಡಿದ್ದಾರೆ...
           ಇದನ್ನೆಲ್ಲ ನೆನಪಿಸುವ ಒಂದು ಘಟನೆ ಮೊನ್ನೆ ನಡೆಯಿತು.ನಮ್ಮ ಹೊಸ ಮನೆಗೆ ಬಂದು ಮೂರು ದಿನಗಳು ಮಾತ್ರ ಆಗಿದ್ದವು.ಮನೆ ಹೊಂದಿಸುವ ಗಲಾಟೆಯಲ್ಲಿ ಹೊರಗೆ
ಇಣುಕಿ ನೋಡಲೂ ಆಗಿರಲಿಲ್ಲ.ಆ ದಿನ Annual Sports ಇದ್ದ ಬಗ್ಗೆ ಇನ್ನೊಮ್ಮೆ WhatsApp ನಲ್ಲಿ ವಿವರವಾಗಿ ಸಂದೇಶವೊಂದು ಬಂದಿತು. ಅಪಾರ್ಟ್ಮೆಂಟ್ ಜನರನ್ನು ಒಂದೇ ಜಾಗದಲ್ಲಿ ಭೇಟಿಯಾಗಲು ಸದವಕಾಶ ಎಂದು ಮಗಳು ಹೋಗೋಣ  ಅಂದಳು.ಒಬ್ಬರದೂ ಪರಿಚಯವಿಲ್ಲ ದೆಡೆ ಹೋಗಲು ಹಿಂಜರಿಕೆ ನನಗೆ. ' 'ಮೊದಲು' ಎಂಬುದು ಎಂದಿಗೂ ಇರು
ವುದೇ ಎಂದು ಯೋಚಿಸಿ 'ಆಯಿತು'
ಎಂದೆ...ಹೋದೆವು.ಹಿರಿಯ ನಾಗರಿಕ ರಿಗೆಂದು ಎರಡು ಆಟ...Lamon- spoon ಓಟ/ Frisbee ಎಸೆತ...
ಆಗಲೇ ಸಾಕಷ್ಟು ಜನ ಹೆಸರುಕೊಟ್ಟು ಆಗಿತ್ತು.ನಾನು ಹಿಂಜರಿಕೆಯಿಂದಲೇ
ಆಚೀಚೆ ಸುತ್ತಾಡುತ್ತಿದ್ದೆ.ನನ್ನನ್ನೂ ಕೇಳಿದರು,ಮುಂದಿನ ಬಾರಿ ಎಂದೆ... ಆಟ ಶುರುವಾದವು.Frisbee ಗೆ ಮೊದಲು ಸಂಘಟಕರು ಮತ್ತೊಮ್ಮೆ
ಕೇಳಿದಾಗ ' ನಿಂತಲ್ಲೇ ಎಸೆಯುವುದು
ತಾನೇ! ಎಂಬ ಧೈರ್ಯದಿಂದ ಒಪ್ಪಿದೆ.
ನನ್ನ ಪಾಳಿ ಬಂದಾಗ ಮೈಯಲ್ಲಿ
ಬಾಲ್ಯದ ನೆನಪುಗಳು ತುಂಬಿರಬೇಕು. ಏನು ಹುರುಪು ಬಂತೋ ಕಾಣೆ. ಸುತ್ತಲಿದ್ದವರಾರೂ ಕಾಣಲಿಲ್ಲ.ನಾನು/ ಕೈಯಲ್ಲಿ ಹಾರಾಡುವ ತಟ್ಟೆ/ ಮುಂದಿನ
 Track... ಒಮ್ಮೆ ದೀರ್ಘ ಉಸಿರು ತೆಗೆದುಕೊಂಡು ಬೀಸಿ ಒಗೆದೆ.ನನ್ನದೇ
ಎಂದು ಅನುಮಾನವಾಗುವಷ್ಟು ಹಾರಿತು. ಆಗಿನ ಮಟ್ಟಿಗೆ ನನಗಾದದ್ದು ಸಂತೋಷವೋ/ಸಂಕೋಚವೋ
ತಿಳಿಯಲಿಲ್ಲ.ಸರಿದು ನಿಂತೆ.ಎರಡು rounds ಎಸೆತಗಳಾದವು.ಸಾಕಷ್ಟು
ಜನ ಭಾಗವಹಿಸಿದ್ದರು.ಸ್ವಲ್ಪು ಹೊತ್ತು
ಇದ್ದಂತೆ ಮಾಡಿ ಅದೇ ಪರಿಚಯವಾದ ಒಬ್ಬರಿಗೆ ಹೋಗುತ್ತೇನೆ ಎಂದು ಹೇಳಿ
ಹೊರಟೆ.ದೂರದಲ್ಲಿ result ತಯಾರಿ ಸುತ್ತಿದ್ದ ಸಂಘಟಿಕರಲ್ಲಿ ಒಬ್ಬರು ಓಡಿ ಬಂದು," congratulations ಆಂಟಿ, ನಿಮಗೆ ಸೆಕೆಂಡ್ prize,ಇನ್ನೇನು ಬರಿ prize distribution ಉಳಿದಿದೆ,ತೆಗೆದು
ಕೊಂಡೇ ಹೋಗಿ ಅಂದಾಗ ನಾನು
' ಬೆಬ್ಬೆಬ್ಬೆ'- ಅನ್ನುವಷ್ಟು ನನಗೆ ಅಚ್ಚರಿ.
ಮುಂದಿನದು ಒಂದು trophy/ ಒಂದು
ಫೋಟೋ ಅಷ್ಟೇ....
            ಘಟನೆ ಸಣ್ಣದು/ಪರಿಣಾಮ 
ದೊಡ್ಡದು.ಜನ ಹೇಗೋ ಏನೋ/ ಭೇಟಿ ಯಾವತ್ತು? ನನಗೆ ಹೊಸ ವಾತಾವರಣ ಹೊದೀತಾ? ಎಂತೆಲ್ಲ ಮನಸ್ಸಿನಲ್ಲಿದ್ದ ಗೊಂದಲಗಳಿಗೆ ಅರಿವೇ ಇಲ್ಲದಂತೆ ತೆರೆ ಬಿದ್ದದ್ದು ಸಣ್ಣ ವಿಷಯ ವೇನಲ್ಲ. ಯಾರೋ ಬಂದರು.ಹೆಸರು
ಕರೆದಾಯಿತು,ಅನೇಕರು ಮುಗುಳ್ನಕ್ಕ ರು.ಕೆಲವರು ಕೈ ಕುಲುಕಿದರು...
ನನ್ನ ಹೆಸರು ಕೇಳಿ, ತಮ್ಮದನ್ನು ಹೇಳಿ 
ತಾವು ಪ್ರತಿದಿನ ಸಾಯಂಕಾಲ ಸೇರುವ
ಜಾಗ/ ವೇಳೆ ತಿಳಿಸಿ ಬರಲು ಆಹ್ವಾನಿಸಿದರು...ಗೊತ್ತೇ ಆಗದಂತೆ
ನನ್ನ ಹೋಳಿಗೆ ತುಪ್ಪದಲ್ಲಿ ಜಾರಿ ಬಿದ್ದಿತ್ತು...

 



Sunday 4 February 2024

ಬದುಕು ಹಾಗೇ ಸಾಗುತ್ತಿದೆ...

 'ಸಂಧ್ಯಾ- ರಾಗ'...
     
ಯೌವನದ ಗುರುತುಗಳನ್ನು ಕಳೆದು
ಕೊಂಡು ಬದುಕುವದು 
ಯಾರಿಗೂ ಸುಲಭ ಸಾಧ್ಯವಲ್ಲ...
ನಸುಕಿನಲ್ಲೆದ್ದು ಮಗ್ಗಲು ಬದಲಿಸುವಾಗ ನಡುವಿನಲ್ಲಿ ಮೊದಲಿನ ಕಸುವಿಲ್ಲ...ಆದರೂ ಪರವಾಯಿಲ್ಲ, ಸಾಗುತಿದೆ ಬದುಕು...

ಬೆಳಿಗ್ಗೆ ಎದ್ದು ಚಹ ಮಾಡುತ್ತೇನೆ...
ಪೇಪರ್ ಓದುತ್ತೇನೆ...
ಮೊದಲಿನಂತೆ ಜೊತೆಗಾರರಾರಿಲ್ಲ,
ಮೊದ ಮೊದಲು 
ದೊಡ್ಡಮನೆಯ ಬಾಲ್ಕನಿಗಳಿಂದ 
ಮನೆ ತುಂಬ ಸೂರ್ಯಕಿರಣಗಳ ಸಂತಸವಿತ್ತು,
ಈಗ ಪುಟ್ಟ ಫ್ಲ್ಯಾಟ್ ನ ಸೂರ್ಯ,
ಕಿಟಕಿಗಳಿಂದಲೇ ಒಂದು ಗಂಟೆ
ಕಾಲ ಒಳಗಿಣುಕುತ್ತಾನೆ,
ಹಾಗೇ ಸಾಗುತಿದೆ ಬದುಕು...

ಮಳೆ ಬಂದರೆ ಛತ್ತು ಇದೆ, 
ಛತ್ರಿಯೂ ಇದೆ...
ಉಪದೇಶ ಕೊಡಲು ಜನರಿದ್ದಾರೆ...
ಮುದ್ದಿಸಲು,ಆಲಂಗಿಸಲು ಮೊಮ್ಮಕ್ಕಳು ಇವೆ.‌
ನನ್ನದೇ ಒಂದು ಪುಟ್ಟ 
ಕೋಣೆಯೂ ಇದೆ,
ಆದರೆ ವಾಕಿಂಗ್ ನಂತರ 
ಬೆವರು ಸುಲಭದಲ್ಲಿ ಆರುವುದೇ ಇಲ್ಲ-
ಒಟ್ಟಿನಲ್ಲಿ ಸಾಗುತಿದೆ ಬದುಕು...

ಹಾಗೆಂದು ಖುಶಿ ಖುಶಿ
ಇರುವವರನ್ನು ಕಂಡರೆ ನನಗೆ
ಅಸೂಯೆಯೇನೂ ಇಲ್ಲ...
ಕಾರಿನ ಕಿಟಕಿ ಕೆಳಗಿಳಿಸಿ
ಗಾಳಿ ಕುಡಿಯುತ್ತೇನೆ...
ಹಾಕಿದ ಹಾಡನ್ನೇ ಮತ್ತೆ 
ಮತ್ತೆ ಹಾಕಿಕೊಂಡು ಕೇಳುತ್ತೇನೆ...
ಸಾಕಿನ್ನು, ಗೆಳತಿಯರು ಅನ್ನುತ್ತೇನೆ,
ಮರುಕ್ಷಣವೇ -ಅವರನ್ನು ಮನೆಗೆ ಕರೆಯುತ್ತೇನೆ...
ನನ್ನದೇ ಮರ್ಜಿಯಲ್ಲಿ ಸಾಗುತಿದೆ ಬದುಕು...

ಒಮ್ಮೊಮ್ಮೆ,
ಮಾಡಿದ ಅಡುಗೆ ಸೀದು ಹೋಗುತ್ತದೆ-
ಆದರೂ ಅದೇ ಜಗತ್ತಿನ best food
ಅನಿಸುತ್ತದೆ...
ಯೋಗ ಅಂದರೆ ಆಸಕ್ತಿ ಇರಲಿಲ್ಲ,
ಈಗ ನನಗಿಂತ ಅರ್ಧವಯಸ್ಸಿನ  
'ಗುರು' ವಿನಿಂದ ಕಲಿಯುತ್ತಿದ್ದೇನೆ...
ಪರವಾಯಿಲ್ಲ , 
ಹೆಚ್ಚು-ಕಡಿಮೆ ಸಾಗುತಿದೆ ಬದುಕು...

ಇಂದಿಗೂ ಕನ್ನಡಿಯೆದುರು ನಿಂತು
ಮತ್ತೆ ಮತ್ತೆ ನೋಡಿಕೊಳ್ಳುತ್ತೇನೆ.
ಬಾಲ್ಯ ಯೌವನವಾಗಿ,
ಯೌವನ ಪ್ರೌಢಾವಸ್ಥೆಗೆ ತಿರುಗಿ
ನಂತರ ಇಂದಿಗೆ ಹೇಗೆ,ಯಾವಾಗ ಬದಲಾಯಿತೋ ಗೊತ್ತಾಗಲೇಯಿಲ್ಲ...
ಬದುಕು ನನ್ನನ್ನು ಪರೀಕ್ಷಿಸಿದಷ್ಟೇ ನಾನೂ ಅದನ್ನು ಪರೀಕ್ಷಿಸಿದ್ದೇನೆ...
ನಮ್ಮಿಬ್ಬರ ಜುಗಲ್ಬಂದಿಯಲ್ಲಿ ಸಾಗುತಿದೆ ಬದುಕು...

ಕೆಲಸಗಳು ಕಡಿಮೆಯಾಗಿವೆ,
ಆದರೆ ಕೆಲ ಆಸೆಗಳು ಕಡಿಮೆಯಾಗಿಲ್ಲ...
ಹಲವರು ಹೇಳಿದ್ದನ್ನೇ ಹೇಳುತ್ತಾರೆ, ಏನೂ ಅನಿಸುವದಿಲ್ಲ...
ಬಾಲ್ಯದ ಹಲವಾರು ಗಲ್ಲಿ/ ಓಣಿ/ ಚಾಳು/ಅಂಗಡಿ/ಪೇಟೆ 
ಎಲ್ಲವೂ ನೆನಪಿನಲ್ಲಿವೆ...
ಆದರೆ ಈಗೀಗ ಏನನ್ನೂ
ಕೊಳ್ಳುವ ಮನಸ್ಸಾಗುವುದಿಲ್ಲ...
ಯಾರೇ ದಾರಿಯಲ್ಲಿ ಸಿಗಲಿ,
ಎಲ್ಲೋ ನೋಡಿದ್ದೇನೆ ಅನಿಸುತ್ತದೆ...
ಹೀಗೇ ಒಂದು ಲಯದಲ್ಲಿ 
ನಿತ್ಯ ಸಾಗುತಿದೆ ಬದುಕು...

ಮನೆಯೀಗ ಸ್ವಲ್ಪ ನೀಟಾಗಿದೆ, 
ಅಲ್ಲಲ್ಲಿ ಬಿದ್ದ ಪುಸ್ತಕಗಳು 
ಗಾಜಿನ ಕಪಾಟು ಸೇರಿವೆ...
ಸ್ನಾನದ ನೀರಿಗೆ ತಣ್ಣೀರು
ಬೆರೆಸಿಕೊಳ್ಳಬೇಕಾಗುತ್ತದೆ... 
'ರೀಲು'ಗಳನ್ನು ನೋಡುತ್ತಲೇ ಗಂಟೆಗಳನ್ನು ಕಳೆಯುತ್ತೇನೆ...
ಆದರೆ ಪಾಪ್ಕಾರ್ನ ಇಲ್ಲದೇ ಸಿನೆಮಾ
ನೋಡಲಾಗುವುದಿಲ್ಲ...
ಹೆಚ್ಚು ಕಡಿಮೆ ಹಾಗೇ ಸಾಗುತಿದೆ ಬದುಕು..

ಆಸು ಪಾಸಿನ ಮಕ್ಕಳು
ಆಂಟಿ ಅನ್ನುವದನ್ನು ಬಿಟ್ಟು ಯಾವಾಗ ' ಅಜ್ಜಿ' ಸುರುಮಾಡಿದರೋ ಗೊತ್ತಾಗಲೇಯಿಲ್ಲ... 
ಮನಸ್ಸಿಗೆ ನೋವಾದರೆ
ಕಣ್ಣುಗಳು ಹನಿಗೂಡುತ್ತವೆ-
ಎಂಬುದು ಯಾವಾಗ ತಿಳಿಯಿತೋ, 
ಅರಿವಿಗೇ ಬರದೇ ಸಾಗುತಿದೆ ಬದುಕು.

ಪರವಾಯಿಲ್ಲ, 
ಬದುಕು ಬದಲಾದರೂ 
ಹೆಚ್ಚು ಕಡಿಮೆ ಹಾಗೇ ಸಾಗಿದೆ, 
ಆರೋಗ್ಯವಿದೆ, ಗೆಳೆತಿಯರಿದ್ದಾರೆ, 
ಇನ್ನೂ ಬಾಕಿ ಬದುಕು ಕಳೆಯುವದಿದೆ...
ಖುಶಿ ಖುಶಿಯಾಗಿ ನಗುತ್ತಾ
ಇದ್ದುದನ್ನೇ ಒಪ್ಪುತ್ತಾ, ಅಪ್ಪುತ್ತಾ  
ಬದುಕಿ ಹೋಗುವದಿದೆ...
ಎಂಬ ಜ್ಞಾನದೊಂದಿಗೆ ಸಾಗುತಿದೆ
ಬದುಕು...

( ಮೂಲ: ಹಿಂದಿಯಿಂದ...)

Friday 2 February 2024

ಅಜ್ಞಾತವಾಗಿರುವುದರಲ್ಲೂ ಮಜಾ ಇದೆ...
              ನಾವು ಕೋರಮಂಗಲಕ್ಕೆ ಬಂದು ಒಂದೇ ವಾರ...ಅದರಲ್ಲಿ ಬಹಳಷ್ಟು ಸಮಯ ಮನೆ ಹೊಂದಿಸು ವುದರಲ್ಲಿ ಕಳೆದು ಹೋಗಿದೆ.ಯಾವುದ ನ್ನು ಎಲ್ಲಿಡಬೇಕು ಎಂಬ calculation ಮೊಟ್ಟ ಮೊದಲು ಸರಿಹೋಗಬೇಕು. ದಿನ ಬಳಕೆಯ ವಸ್ತುಗಳು ಕೈಗೆಟಕು ವಂತೆ, ವಾರಕ್ಕೊಮ್ಮೆ ಬೇಕಾಗುವುದು 
ಕಪಾಟಿನ ಮೇಲ್ಭಾಗದಲ್ಲಿ, ಅಪರೂಪಕ್ಕೆ
ಬೇಕಾಗುವುದನ್ನು ಲಾಫ್ಟ ಮೇಲೆ ಸೇರಿಸಬೇಕು.ಇಲ್ಲದಿದ್ದರೆ ಆಗುವ ಗೊಂದಲ ನಂತರ ತಲೆ ಬಿಸಿಮಾಡುವು ದಲ್ಲದೇ ವ್ಯರ್ಥವಾಗಿ ಸಮಯವನ್ನು ನುಂಗಿ ಹಾಕುತ್ತದೆ.ಇದನ್ನು ಮಗಳು- ಅಳಿಯನೇ ಮಾಡಿದರೂ ನಮ್ಮ ಕೋಣೆ ನಮ್ಮದೇ ತಲೆನೋವು...
                  ತಕ್ಕ ಮಟ್ಟಿಗೆ ಪರವಾಗಿಲ್ಲ
ಅಂತಾದಾಗ ಬೆಳಗಿನ ಹೊತ್ತು ಸ್ವಲ್ಪ ಸಮಯ ಹೊರಗೆ ಸುತ್ತಾಡಲು/ಬಿಸಿಲು
ಕಾಸಲು ಸಮಯ ತೆಗೆದಿಟ್ಟುಕೊಂಡೆ. ಸಾಕಷ್ಟು ಜನ ಸಿಕ್ಕರೂ ಯಾರದೂ
ಪರಿಚಯವಿಲ್ಲ.ಒಮ್ಮೆಲೇ ಆಗುವುದೂ ಇಲ್ಲ ಬಿಡಿ.ಯಾರು ಹೇಗೋ ಗೊತ್ತಾಗು ವವರೆಗೂ ನಮಗೂ ಹಿಂಜರಿಕೆಯೇ. ನನ್ನ ಪಾಡಿಗೆ ನಾನು ಸುತ್ತುವುದೂ ಒಂದು ರೀತಿಯಲ್ಲಿಖುಶಿಯೇ.ಸುತ್ತಲೂ ಯಾರೆಲ್ಲ ಇದ್ದರೂ ಸಂಬಂಧವೇ ಇರ ದಂತೆ ನಮ್ಮಷ್ಟಕ್ಕೇನೇ ನಾವಿರುವುದೂ ಒಂದು ರೀತಿಯಲ್ಲಿ ಹಾಯೆನಿಸಿದ ಅನುಭವವಾಯಿತು.ನಿಜವಾಗಿಯೂ ಒಂದು Luxury..ಇತ್ತೀಚೆಗೆ ಇಂಗ್ಲಿಷ್/ಹಿಂದಿ ಅಂಥ ನಮ್ಮದಲ್ಲದ ಭಾಷೆಯಲ್ಲಿ ಹರಟಲು ಮನಸ್ಸಾಗುವುದಿಲ್ಲ... ನಿಜವೋ/ಸುಳ್ಳೋ ಯಾರನ್ನು ಕೇಳಿದರೂ 'ತಿಳಿಯುತ್ತದೆ, ಮಾತನಾಡ ಲು ಬರುವುದಿಲ್ಲ.- ಎಂದೇಹೇಳುವುದು. ಲೆಕ್ಕ ಇಟ್ಟು ಹೆಜ್ಜೆ ಹಾಕಿದಂಥ ಭಾವ... ಮನಸ್ಸಿನಲ್ಲಿ .ಬಂದ ಭಾವಗಳನ್ನು ಲೆಕ್ಕಾಚಾರವಿಲ್ಲದೇ ಮಾತಿಗಿಳಿಸುವ ಕಲೆ ಮಾತೃಭಾಷೆಗೆ ಸಿದ್ಧಿಸಿದಷ್ಟು ಬೇರಾವುದಕ್ಕೂ ಸಿದ್ಧಿಸದು ಮನಸ್ಸಿಗೂ ತೃಪ್ತಿಯೆನಿಸದು.ಅದು ಅನಿವಾರ್ಯ ವೆಂದಾದರೆ ಆ ಮಾತು ಬೇರೆ. ಆ ಕಾರಣಕ್ಕೆಎರಡು ದಿನ ನನ್ನನ್ನು
ನೋಡಿ ಹತ್ತಿರ ಬಂದವರೊಡನೆ ಅಷ್ಟಿಷ್ಟು ಮಾತನಾಡುವ/ಆದಷ್ಟೂ
ಪರಿಸರಕ್ಕೆ ಪರಿಚಿತಳಾಗುವ ನಿರ್ಧಾರ
ಮಾಡಿ ನಾಲ್ಕೈದು ದಿನಗಳೀಗ ಕಳೆದವು.ನೆಮ್ಮದಿಯಾಗಿದ್ದೇನೆ,ಕೆಲ ದಿನಗಳು ಕಳೆದ ಮೇಲೆ ಮತ್ತೆ ನೋಡಿದರಾಯಿತೆಂಬ ಲೆಕ್ಕದೊಂದಿಗೆ-.
ಸಂತೆಯಿಂದ ದೂರವಿದ್ದ ಕಾರಣ ನನ್ನೊಡನೆ ನಾನು ಕಳೆವ ಸಮಯ ಹೆಚ್ಚಾಗಿದೆ. ಹಿತವಾಗಿದೆ.ಅಪೇಕ್ಷಣೀಯ
ವೆನಿಸಿದೆ.ಕೈಲಾದಷ್ಟು ಕೆಲಸ/ ದಿನಕ್ಕೆರಡು ಫೋನು/ ಎರಡು TNS ಧಾರಾವಾಹಿಗಳು/ಮೊಮ್ಮಕ್ಕಳೊಂದಿಗೆ
ಸಿಕ್ಕಷ್ಟು ಹೊತ್ತು ಕಾಲಹರಣ ಇಂಥವೇ ಅನಿವಾರ್ಯ/ಅಪೇಕ್ಷಿತ/ ಅತಿ ಅವಶ್ಯಕವೆನಿಸಿದ ಚಟುವಟಿಕೆಗಳಲ್ಲಿ
ವ್ಯಸ್ತವಾಗಿರುವುದೂ ಒಂದು ಹೊಸಪ್ರಯೋಗವೇ!!!!
      ‌   ‌‌‌  ಸಧ್ಯ ಅಷ್ಟೇ ಜಾರಿಯಲ್ಲಿದೆ...





Wednesday 31 January 2024

         ಬೆಂಗಳೂರಿಗೆ ಬಂದು ಎರಡು ದಶಕಗಳಾಗುತ್ತ ಬಂದರೂ ನಾವು ಅಪಾರ್ಟ್ಮೆಂಟ್ನಲ್ಲಿ ಇದ್ದುದು ಕಡಿಮೆಯೇ
- ಇಲ್ಲವೇ ಇಲ್ಲ ಎಂಬುವಷ್ಟು.ಒಂದೇ ಬಾರಿ ಒಂದು ವರ್ಷಗಳ ಕಾಲ ಇದ್ದರೂ
ಮನೆ ground floor ನಲ್ಲಿ ಇದ್ದ ಕಾರಣಕ್ಕೆ ಅಪಾರ್ಟ್ಮೆಂಟ್ feeling ಬರಲೇಯಿಲ್ಲ.
             ಇದೀಗ ನಮಗಿದು ಹೊಸ ಅನುಭವ.ನಾವು ಕರ್ನಾಟಕದವರು
ಹೆಚ್ಚು ಗೊಣಗುವವರಲ್ಲ.ಶಕ್ತಿ ಮೀರಿ
ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಅದಕ್ಕೆಂದೇ ಬೆಂಗಳೂರು ಬರಿ ನಮ್ಮದಾಗಿ ಉಳಿದಿಲ್ಲ.ಅಪಾರ್ಟ್ಮೆಂಟ್
ಅಂದರೆ ಒಂದು ಪುಟ್ಟ ವಿಶ್ವ...ನುಕ್ಕಡ್/ ವಠಾರ ಸೀರಿಯಲ್ಗಳಷ್ಟು ಗಾವಠಿ/ ಜವಾರಿ ಅನಿಸುವುದಿಲ್ಲ ನಿಜ.posh
ಅಪಾರ್ಟ್ಮೆಂಟ್ಗಳಂತೂ ಸ್ವತಂತ್ರ ಮನೆಗಳ ಎಲ್ಲ ಸೌಲಭ್ಯಗಳನ್ನೂ ಹೊಂದಿರುತ್ತವೆ.ಆದರೂ ಕೆಲವೊಂದು
ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು
ಇಲ್ಲಿಯೂ ಅವಶ್ಯಕ ಹಾಗೂ ಅನಿವಾರ್ಯ...
           ನಾನು ನೌಕರಿಯಲ್ಲಿದ್ದಾಗ ನಲವತ್ತೈದು ನಿಮಿಷಗಳಿಗೊಮ್ಮೆ ಗಂಟೆ
ಬಾರಿಸುತ್ತಿತ್ತು.ಈಗ ಯಾವಾಗೆಂದರೆ 
ಆವಾಗ- ಕೆಲಸದವರು/ಕೆಲಸವಿದೆಯಾ
ಎಂದು ಕೇಳುವವರು/ವಿಳಾಸ ತಪ್ಪಿ
ಬಂದವರು-ಅದು ಇದು ಚಿಕ್ಕ ಪುಟ್ಟ ರಿಪೇರಿ ಕೆಲಸದವರು ಹೀಗೆ.ಇದು ಎಲ್ಲ ಕಡೆಯೂ ಇದ್ದುದೇ ಅನ್ನಿ.ಆದರೂ ಇಲ್ಲಿ ನಮ್ಮ ಮನೆಯ ಗಂಟೆಯಾ? ಪಕ್ಕದ flat ದ್ದಾ ತಿಳಿಯಲು ನನಗಂತೂ ವೇಳೆ 
ಹಿಡಿಯುತ್ತದೆ.ಧಡಧಢ ಸದ್ದು ಕೇಳಿದರೆ
ನಮ್ಮನೆಗೇ ಯಾರಾದರೂ ಬಂದರಾ ಅಂತ ಪುಟ್ಟ alert.ಯಾರದೋ ಮನೆಯಲ್ಲಿ ಕುಕ್ಕರ್ ಸೀಟಿ ಹೊಡೆದರೆ ನಮ್ಮನೇದಾ ಅಂತ ಅಡಿಗೆ ಮನೆಗೆ ಧಾವಿಸಿದ್ದಿದೆ.ಹಾಗೆಯೇ ನಮ್ಮದೇ ಆದಾಗ ಬೇರಾರದೋ ಆಗಿರಬಹುದು
ಅಂತ ಉಳಿದದ್ದೂ ಇದೆ.' ಬದುಕು ಅಂದರೆ ಅಪಾರ್ಟ್ಮೆಂಟ್- ನಲ್ಲಿ ಇದ್ದ ಹಾಗೆ- ಜೋರಾಗಿ ತಿರುಗಿಸಿದರೆ ಮೈಯಲ್ಲಾ ಒದ್ದೆ- ಸ್ವಲ್ಪು ತಿರುಗಿಸಿದರೆ
ಕೈಗೂ ಹನಿಯಲ್ಲ- ಅಂತ ಮೊನ್ನೆ ಎಲ್ಲಿಯೋ ಓದಿದ್ದೆ.ಅಂದು ಅರ್ಥವಾಗಿ ರಲಿಲ್ಲ.ಇದೀಗ ಚೂರು ಚೂರು ಅರ್ಥ ಆಗ್ತಿದೆ.
            ಇನ್ನು ವಾಕಿಂಗ್ ಹೋದಾಗಿನ
ಅನುಭವವೇ ಒಂದು ರೀತಿ- ಅದೂ
ಎಲ್ಲ ಕಡೆ ಕಾಣಸಿಗುವಂಥದೇ ಆದರೂ
ಏಕತೆಯಲ್ಲೂ ಭಿನ್ನತೆ. ತಮ್ಮ ಪಾಡಿಗೆ ತಾವು ear phone ಸಿಕ್ಕಿಸಿಕೊಂಡು
ಸ್ವಗತಕ್ಕೆ ಎಂಬಂತೆ ಮಾತನಾಡುವವರು /ಮೂವರು-ನಾಲ್ವರು  ಸೇರಿ ಹರಟೆ ಹೊಡೆಯುತ್ತ ಮಜಾ ತೆಗೆದುಕೊಳ್ಳು ವವರು/ತಮ್ಮ ಪಾಡಿಗೆ ತಾವು ಯಾವುದೋ ಬೆಂಚ್ ಮೇಲೆ ಆಸೀನ ರಾಗಿ ತಮ್ಮದೇ ಜಗತ್ತಿಲ್ಲಿರುವವರು,
ಎದುರು ಬಂದವರಿಗೆ ಮುಕ್ತ ನಗು ವೊಂದನ್ನು ಚಲ್ಲಿಯೋ, ಕೈಯೆತ್ತಿ
Wish ಮಾಡಿಯೋ ಮುನ್ನಡೆಯುವ ವರು/ಜಗತ್ತೇ ಒಂದು-ನಾನೇ ಒಂದು
ಎಂಬ ಸ್ವಯಂಭೂಗಳು/ಇಡಿಯಾಗಿ ವಾತಾವರಣದ ಪರಿವೀಕ್ಷಣೆಗೇನೇ
ನಿಂತವರಂತೆ ಇರುವ ದುರ್ಬೀನು ಕಣ್ಣುಗಳ ಮಹಾ ಸಂಶೋಧನಾತ್ಮಕ
ಒಳಗಣ್ಣಿನವರು- ಅಬ್ಬಬ್ಬಾ ಅನ್ನುವಂಥ
ಜಗದಗಲದ/ ಮನದಗಲದ/ ಅವರವರದೇ ಪುಟ್ಟ ವಿಶ್ವಕೋಶಗಳ
ಸಂಪುಟಗಳು...
            ಇನ್ನೂ ಒಂದು ವಾರವೂ
ಆಗಿಲ್ಲ.ಒಬ್ಬಿಬ್ಬರನ್ನು ಬಿಟ್ಟರೆ ಹಾಯ್
ಕೂಡ ಹೇಳಿಲ್ಲ ಆದರೂ ನನ್ನದೇ ಒಂದು ಪುಟ್ಟ ಸರ್ವೆ ಆಗಿದೆ.ತಿಳಿಯಲು 
ಬೆಟ್ಟದಷ್ಟಿದೆ.ಕೆಲವು ಬಲ್ಲವರಿಂದ ಕಲಿತದ್ದು/ಕೆಲವನ್ನು ಓದಿದ್ದು/ ಕೆಲವನ್ನು ಇತರರನ್ನು ಅನುಸರಿಸಿ/ ಕೆಲವನ್ನು ನನ್ನದೇ ಅನುಭವಗಳಿಂದ ಅಷ್ಟಿಷ್ಟು ಕಲಿತದ್ದು...
               ಬದುಕೆಂದರೇನೇ ' ಕಲಿಕೆ' ತಾನೇ?! ಅದು ಕಲಿಸಿದಷ್ಟೂ ನಾನಂತೂ ಕಲಿಯಲು ಸದಾ ರೆಡಿ...



        

.

Monday 29 January 2024

ಅವಳದೂ ಸರಿ...ನನ್ನದೂ ತಪ್ಪಲ್ಲ...
     ‌‌‌‌‌‌‌       "ಯಾಕೆ ಬೇಕಾದದ್ದು/ ಬೇಡವಾದದ್ದು ಎಲ್ಲವನ್ನೂ ಫೇಸ್ಬುಕ್ಕಿ ನಲ್ಲಿ ಹಾಕಬೇಕು?ಅದರಿಂದಲಾಗುವ ಪ್ರಯೋಜನಗಳಾದರೂ ಏನು? 
ನಾವು ಉಣ್ಣುವುದು/ಉಡುವುದು/
ಹೇಳುವುದು/ ಕೇಳುವುದು ಎಲ್ಲವೂ
ಏಕೆ breaking news ಆಗಬೇಕು...
ನಮ್ಮವೂ ಅಂತಲೇ family groups/ friends'groups ಗಳು ಇರುವಾಗ ಅವುಗಳಲ್ಲಿ share ಮಾಡಿದರೆ, ಅಷ್ಟು ಸಾಕಾಗಲ್ವಾ?ಮತ್ತೊಬ್ಬರ ವಿಷಯಗಳ ನ್ನು, ಫೋಟೋಗಳನ್ನು ಹಂಚಿಕೊಳ್ಳುವ ಮುನ್ನ ಅವರ ಒಪ್ಪಿಗೆ ಪಡೆದರೂ ಅದನ್ನು ಮತ್ತೆ ಮತ್ತೆ ಯೋಚಿಸಿಯೇ ಹಾಕಬೇಕು"- ಮುಂತಾಗಿ ನನ್ನ ಮಗಳು
Social Mediaದ Ethics ಬಗ್ಗೆ ನಿನ್ನೆ
ಒಂದು Class ತೆಗೆದುಕೊಂಡಳು. ನಾನೂ ಅತ್ಯಂತ ವಿಧೇಯ ವಿದ್ಯಾರ್ಥಿ ನಿಯಾಗಿಯೇ ಅವಳು ಹೇಳಿದ್ದೆಲ್ಲವ ನ್ನೂ ಕೇಳಿಸಿಕೊಂಡೆ.ನನ್ನ ವಾದವನ್ನೂ ಮಂಡಿಸಿದೆ.ಅನುಮಾನಗಳನ್ನು ಸಹ ಮುಂದಿಟ್ಟೆ.ಅವಳೂ ಸೋಲಲಿಲ್ಲ.
ನಾನೂ ಸುಲಭಕ್ಕೆ ಒಪ್ಪಲಿಲ್ಲ.ಆದರೆ
ಕೊನೆಯಲ್ಲಿ ಅಹಿಂಸಾತ್ಮಕವಾಗಿ ಕೆಲ
ವಿಷಯಗಳೊಂದಿಗೆ ಇಬ್ಬರೂ ರಾಜಿಯಾಗಿ ವಿಷಯ ಇತ್ಯರ್ಥ ವಾಯಿತು.
           ಅವಳಿಗೂ ನನಗೂ ಪೂರ್ತಿ
ಮೂವತ್ತು ವರ್ಷಗಳ ದೀರ್ಘ ಅಂತರ.
ಹತ್ತು ವರ್ಷಕ್ಕೊಮ್ಮೆ ಬದುಕು ಮಗ್ಗಲು ಬದಲಿಸುತ್ತದಂತೆ.ಆ ಲೆಕ್ಕದಲ್ಲಿ ನಮ್ಮ
ಬದುಕು ಮೂರು ಬಾರಿ ಮುಗುಚಿ ಹಾಕಿ
ಯಾಗಿದೆ.ನಮ್ಮ ಬದುಕಿಡೀ 'ಭಾವಕೋ ಶ'ದಲ್ಲಿ (EQ) ಬದುಕಿ ಬಂದದ್ದು... ಹಳ್ಳಿಯ ಹಿನ್ನೆಲೆಯದು.ಮನೆಗಳ ನಡುವೆ ಗೋಡೆಗಳು ಬರಿ ಹೆಸರಿಗೆ. ಆಡಿದ ಭಾಷೆ ಹೃದಯದ್ದು...ಎಲ್ಲರೂ ಎಲ್ಲರಿಗಾಗಿ ಎಂದು ಬದುಕಿದ ರೀತಿ...
ಅವಳದು 'ಬುದ್ದಿಕೋಶ' (IQ)ದಲ್ಲಿ ಬೆಳೆದ ತಲೆಮಾರಿನದು.ವ್ಯಕ್ತಿ- ವ್ಯಕ್ತಿಗಳ 
ನಡುವಣ ಅಂತರಕ್ಕೂ ಇನ್ನಿಲ್ಲದ ಗೌರವ.ಹೀಗಾಗಿ ವಿಚಾರಧಾರೆಯೂ
ಅದಕ್ಕೆ ಸಲ್ಲುವಂತೆ ಇದ್ದುದು ಅಚ್ಚರಿ ಯೇನೂ ಅಲ್ಲ. 
                 ನನಗೂ ಇದೆಲ್ಲ ಗೊತ್ತಿದೆ. ಅದನ್ನು ಒಪ್ಪುತ್ತೇನೆ ಕೂಡ.ಆದರೆ
ಇವೆರಡರ ನಡುವೆ ಕಟ್ಟುನಿಟ್ಟಾದ ' ಗಡಿರೇಖೆ' - ಬೇಕೇ? ಇದು ನನ್ನ ಪ್ರಶ್ನೆ. ನನ್ನ ನಿಲುವನ್ನು ಹೋಲುವವರು ನನ್ನ 
ಬರಹಗಳನ್ನು ಮೆಚ್ಚುತ್ತಾರೆ.'ತಮ್ಮ ವಿಚಾರಗಳಿಗೆ relate ಮಾಡಿಕೊಳ್ಳುತ್ತಾ ರೆ.' ಸಹಿ ಹಾಕಿದರೆ ಈ ಲೇಖನ ನನ್ನದೇ
ಅನ್ನುವವರೂ ಇದ್ದಾರೆ. ನಮಗೂ ಹೀಗೆ
ಅನಿಸುತ್ತದೆ ಆದರೆ ಬರೆಯಲು ತೋಚುವುದಿಲ್ಲ ಅಂದವರಿದ್ದಾರೆ. ಅದನೊಪ್ಪದವರ ಮೇಲೆ ಯಾವುದೇ
ಆಗ್ರಹವಿರುವುದಿಲ್ಲ.face book ಕೂಡ ಒಂದು ' ಅಕ್ಷರ ಸಂತೆ'. ಅಲ್ಲಿ
ಎಲ್ಲವೂ ಇರುತ್ತದೆ. ಬೇಕೆಂದವರು ಬೇಕಾದದ್ದು ಎತ್ತಿಕೊಳ್ಳುತ್ತಾರೆ.- ಇದು
ನನ್ನ ಪ್ರಾಮಾಣಿಕ ಅನಿಸಿಕೆ.ಇದಕ್ಕೆ ನನ್ನ ಮಗಳದೂ ಭಾಗಶಃ ಅನುಮೋದನೆ ಯಿದೆ.
            ಸುರಾಸುರರ ಸಮುದ್ರ ಮಥನ ದಲ್ಲಿ ಅಮೃತ- ವಿಷ ಎರಡೂ ಬಂದಂತೆ
ನಮ್ಮ ಅರ್ಧಗಂಟೆಯ ಚರ್ಚೆಯಲ್ಲಿ
ಎಲ್ಲವೂ ಬಂತು...

    * ಒಂದು ವಿಷಯ ಪ್ರತಿಪಾದಿಸುವ ಲ್ಲಿ ಸಂಬಂಧಸಿದವರ ಒಪ್ಪಿಗೆ ಇಲ್ಲದೇ ಫೇಸ್ಬುಕ್ಕಿ ನಲ್ಲಿ ಏನನ್ನೂ ದಾಖಲಿಸ ಬಾರದು.

* ಸಂಬಂಧಿಸಿದವರ ಅನುಮತಿಯಿಲ್ಲ ದೇ ಫೋಟೋ Share ಮಾಡುವಂತಿಲ್ಲ

* ಒಪ್ಪಿಗೆ ಪಡೆದು/content ಮೊದಲೇ
ತೋರಿಸಿ ಹಾಕಬಹುದು.( ನಾನು ಹಾಗೆಯೇ ಮಾಡುವುದು...)

* ಆದಷ್ಟು ಖಾಸಗಿ ವಿಷಯಗಳನ್ನು/
ಮಹತ್ವದ ವಿಷಯಗಳನ್ನು ಬಹಿರಂಗ ಪಡಿಸದಿದ್ದರೆ ಒಳ್ಳೆಯದು.

*ಯಾವುದಾದರೂ ಘಟನೆ/ಎಚ್ಚರಿಕೆ/
ಸಂಗತಿಗಳನ್ನು ಬರೆಯುವಾಗ ಅದನ್ನು
ವ್ಯಕ್ತಿಗತವಾಗಿಸದೇ ಸಾರ್ವಜನಿಕವಾ ಗಿಸಿ ಲೇಖನ ಬರೆಯುವುದು ಸೂಕ್ತ. ಹಾಗೆ ಮಾಡುವದರಿಂದ ವ್ಯಕ್ತಿಗತ ಮಾಹಿತಿ ಸೋರಿಕೆಯಾಗದೇ ವಿಷಯ
ಮಾಹಿತಿಯಷ್ಟೇ ರವಾನೆಯಾಗುತ್ತದೆ.

* ನಿಮ್ಮ ವಯಕ್ತಿಕ ಫೋಟೋಗಳನ್ನು
Share ಮಾಡುವ ಅಧಿಕಾರ ನಿಮಗೆ 
ಖಂಡಿತ ಇದೆ.ಆದರೆ ಬೇರೆಯವರು
ಜೊತೆಗಿದ್ದರೆ  ಅವರೊಪ್ಪಿಗೆ ಪಡೆದು
ಹಾಕಿದಷ್ಟೂ ಒಳ್ಳೆಯದು.

* ಅತಿ ಸ್ನೇಹ/ಪರಿಚಯ/ಪರಸ್ಪರ
ತಿಳುವಳಿಕೆಗಳು ಇದ್ದಲ್ಲಿ ಇಂಥ ಯಾವುದೇ ಸಮಸ್ಯೆಗಳು ಇರುವದಿಲ್ಲ - ಎಂಬುದೊಂದು ಸಮಾಧಾನ...
         
        ಮೇಲೆ ಬರದದ್ದೆಲ್ಲ ನಿನ್ನಿನ ಅಮ್ಮ+ ಮಗಳ ನಡುವಿನ ಸಹಜ ಚರ್ಚೆಯ out come...ಒಪ್ಪುವುದು
ಬಿಡುವುದು ಸಂಪೂರ್ಣವಾಗಿ ವೈಯಕ್ತಿಕ...

 


Thursday 25 January 2024

 Bye  Bye  Electronic city........
 Hi Koramangala !!!
    
      "ನೀವು ಈ gated community ಗೆ ಮೊದಲಿಗೆ ಬಂದ ಹಲವರಲ್ಲಿ ಒಬ್ಬರು...ಒಂಬತ್ತು ವರ್ಷಗಳ ನಂತರ ಬಿಡುತ್ತಿದ್ದೀರಿ,ಹೇಗೆ ಅನಿಸುತ್ತಿದೆ?? ಕೇಳಿದವರು TV ಯವರಲ್ಲ,ಕೈಯಲ್ಲಿ ಮೈಕೂ ಇರಲಿಲ್ಲ.ಆದರೆ ಪ್ರಶ್ನೆಯ ಧಾಟಿ ಹಾಗೆಯೇ ಇತ್ತು, ಕುತೂಹಲ ವಿತ್ತು, ಕುಹಕತನವಿರಲಿಲ್ಲ...
               ನಾನು ಹದಿನೆಂಟು ವರ್ಷದವಳಾಗಿದ್ದಾಗ ಧಾರವಾಡದಲ್ಲಿ ಓದಬೇಕೆಂದು ಹಳ್ಳಿಯನ್ನು/ ಅಪ್ಪ/ ಅಮ್ಮನನ್ನು ಬಿಟ್ಟು ಅಣ್ಣನ ಜೊತೆಗೆ ಬಂದದ್ದು. ಕಲಿಯುವುದು ಮುಗಿದ ಮೇಲೆ ಮದುವೆಯಾಗಿ ಗಂಡನ ಮನೆಗೆ ಬಂದದ್ದು ಇಪ್ಪತ್ನಾಲ್ಕನೇ ವಯಸ್ಸಿಗೆ...
ನೌಕರಿಯಿಂದ ನಿವೃತ್ತಿಗೊಂಡು ಮಕ್ಕಳು/ ಮೊಮ್ಮಕ್ಕಳೆಂದು ಬೆನ್ನು ಹತ್ತಿದ್ದು, ನನಗೆ ಅರವತ್ತು ತುಂಬಿದಾಗ.
ನಂತರದಲ್ಲೂ ಮೂರು ಮನೆ ಬದಲಾಯಿಸಿಯಾಗಿದೆ- ಮಕ್ಕಳ ಆಫೀಸು/ ಮೊಮ್ಮಕ್ಕಳ ಚಟುವಟಿಕೆ ಗಳು/ ಕುಟುಂಬ ಸದಸ್ಯರ ಸಂಖ್ಯೆ 
ಹೀಗೆಯೇ ಆಯಾ ಕಾಲದ ಆದ್ಯತೆ ಗಳಿಗೆ ಮಾನ್ಯತೆ ಕೊಟ್ಟು ಮಾಡಿದ  ಅನಿವಾರ್ಯ,ಅವಶ್ಯಕವಾದ ನಿರ್ಧಾರ. ಇಲ್ಲದಿದ್ದರೆ ಬದುಕಿನ ಮುಕ್ಕಾಲು ಭಾಗ Silk board junctionನಂಥ signal ಗಳಲ್ಲೇ ಆಯಸ್ಸು ಮರಳಿ ಸಿಗದಂತೆ ಕಳೆದು ಹೋಗಿಬಿಡುತ್ತದೆ...ಅದನ್ನೇ ಕೇಳಿದವರಿಗೆ ಹೇಳಿದೆ...
            " ಇದೇ ಕಾರಣಕ್ಕೇನೆ ಆಂಟಿ
ನೀವು ನಮಗೆ ಇಷ್ಟವಾಗುವುದು- ಎಂದು ನಕ್ಕರು ಪ್ರಶ್ನೆ ಕೇಳಿದವರು... ಅದು ಆಗ ಅವರಿಗಷ್ಟೇ ಹೇಳಿದ ಮಾತಲ್ಲ...ಮನೆ ಬದಲಾಯಿಸಿದಾ ಗೊಮ್ಮೆ ನನಗೆ ನಾನೇ ಹೇಳಿಕೊಳ್ಳುತ್ತ ಬಂದ auto suggestions... ಬದುಕೆಂದರೆ ಹೋಟೆಲ್ ಟೇಬಲ್ ಅಲ್ಲ.ಯಾರನ್ನೋ ಕೈ ಮಾಡಿ ಕರೆದು Instant orders ಕೊಟ್ಟು ಏನನ್ನೂ ಇಲ್ಲಿ ಪಡೆಯಲಾಗುವುದಿಲ್ಲ... ಅದೊಂದು ಹರಿಪಡೆದುಕೊಂಡಾಯಿತು. ಇದ್ದಂತೆ... ತನ್ನ ಮರ್ಜಿಯ ಮೇಲೆ ತನ್ನದೇ ವೇಗದಲ್ಲಿ ಹರಿಯುತ್ತಿರುತ್ತದೆ. ದಂಡೆಯಲ್ಲಿ ನಿಂತು ಮುಖ ತೊಳೆದು ಕೊಳ್ಳುವವರು/ಬಟ್ಟೆ- ಪಾತ್ರೆಗಳನ್ನು ಸ್ವಚ್ಛಗೊಳಿಸುವವರು/ ದನಕರು- ಮೋಟಾರು ಗಾಡಿ ತೊಳೆಯುವವರು/ ನೀರಿಗಿಳಿದು ಧ್ಯಾನಕ್ಕೆ ಇಳಿಯುವವರು /ಸ್ವಂತಕ್ಕೆ ಮುಳುಗುವವರು/ಇತರರ  ಮುಳುಗಿಸಿ ಮೋಜು ನೋಡುವವರು
ಎಲ್ಲರೂ ಇರುತ್ತಾರೆ.ಇಂಥವರ  ನಡುವೆಯೇ ಜೀವನದ ಪಾಠಗಳೂ
ಸಿಗುತ್ತವೆ...ಎಲ್ಲದಕ್ಕೂ ಮೈಯೊಡ್ಡ ಬೇಕು...ಎಂಬುದು ನನ್ನ ಅನಿಸಿಕೆ..
ಹಾಗೆಂದ ಮಾತ್ರಕ್ಕೆ ಒಂದುಮನೆಯಿಂದ
ಇನ್ನೊಂದು ಮನೆಗೆ/ಹೊಸ ವಾತಾವರ ಣಕ್ಕೆ  ಸುಲಭವಾಗಿ ಹೊಂದಿಕೊಂಡು 
ಬಿಡಬಹುದು ಅಂತಲ್ಲ,.ಸ್ವಲ್ಪಮಟ್ಟಿಗಿನ
ತಾಳ್ಮೆಯನ್ನು ಬದುಕು ಸದಾ ಬೇಡುತ್ತದೆ- ಎಂಬ ಅರಿವಿದ್ದರೆ ಅಷ್ಟು ಸಾಕು...
                ನಿನ್ನೆಯೇ ಬನಶಂಕರಿ ಹಬ್ಬ ದಂದು ಹೊಸಮನೆಗೆ ಬಂದು ಬೆಳಿಗ್ಗೆ  ಕೋರಮಂಗಲದಲ್ಲಿ ಉದಯಿಸಿದ ಸೂರ್ಯನ ದರ್ಶನ ಭಾಗ್ಯವನ್ನಂತೂ ಪಡೆದುಕೊಂಡಾಯಿತು. ಇನ್ನೂ  ಕೆಲದಿನಗಳ ಮಟ್ಟಿಗೆ ಅಪರಿಚಿತ ಭಾವ ಒಂದಿಷ್ಟು ಕಾಡೀತು. ಅದು ಸಹಜ, ಸ್ವಾಭಾವಿಕವಾದದ್ದೇ!!ಅಲ್ಲಿಗೆ Break ಒಂದು ಸಿಕ್ಕಂತೆ... ಕೆಲಕಾಲ...ಕೆಲ ದಿನಗಳ ಮಟ್ಟಿಗೆ...
ಆದರೇನಂತೆ?
            ಇನ್ನು ಮುಂದೆ ಈ ನೆಲದಾಳ ದಿಂದ ನಮ್ಮ ನಿಮ್ಮ ಮಾತು ಕತೆ...




    ಸಾಯುವ ಮೊದಲೇ ಹಲವು ಬಾರಿ
ಸತ್ತಿರುತ್ತೇವೆ...
              ಆಯಿತು, ಧಾರವಾಡದಿಂದ ಬಂದಾಯ್ತು.ತಡವಾಗಿತ್ತು ಅಂತ ಶಾಲಿನಿ ಮನೆಯಲ್ಲೇ ಉಳಿದುಕೊಂಡೆ. ಮರುದಿನ ನಸುಕಿನಲ್ಲಿ ಎದ್ದು ಒಂದು ಕಪ್ ಕಾಫಿ/ಬಿಸ್ಕತ್ನೊಂದಿಗೆ ಬೆಳಗಿನ ಶುಭಾರಂಭ/ ಒಂದಿಷ್ಟು ಉದ್ದೇಶ ರಹಿತ free lance ಹರಟೆ ಮುಗಿದು
ನನಗಾಗಿ ಆಟೋ book ಆಯಿತು.
Bye- bye ಆಗಿ ಆಟೋ ಹೊರಟೂ ಆಯಿತು.ಹತ್ತು- ಹದಿನೈದು ನಿಮಿಷಗಳ ಷ್ಟೇ...ಹೋಗುತ್ತಿರುವ ಹಾದಿ ಎಂದೂ
ನೋಡಿದ ನೆನಪಿಲ್ಲ,ಒಂಚೂರೂ ಪರಿಚಿತ ಅನಿಸಲಿಲ್ಲ.ಆಟೋ driver ಕಡೆ ನೋಡಿದೆ,ದಿವ್ಯ ತಾದಾತ್ಮ್ಯದಿಂದ
ಆಟೋ ಓಡಿಸುತ್ತಿದ್ದ.ನೋಡಲು ಪೊಗದಸ್ತು ಮೀಸೆ- ಗಡ್ಡ,ರಗಡಾ look,
ರಿಕ್ಷಾದಲ್ಲಿ ಇನ್ನೊಬ್ಬರಿದ್ದಾರೆ ಎಂಬ ಕಿಂಚಿತ್ ಗಮನವೂ ಇರಲಿಲ್ಲ.ನಾನೇ ಕೇಳಿದೆ," ಇದೇನು ಹೊಸ ದಾರಿ? ಎಂದೂ ನೋಡಿಲ್ಲ?"" ಹೌದು ಮ್ಯಾಡಮ್,ಇದು ಇನ್ನೊಂದು ಹೊಸ ಒಳದಾರಿ". ಅಲ್ಲ, ಮಾಮೂಲಿ ರಸ್ತೆ
ಯಾಕೆ ಹಿಡಿಯಲಿಲ್ಲ?" Time ಜಾಸ್ತಿ ಹಿಡಿಯುತ್ತೆ/ತುಂಬಾ traffic"-ಅಂತ. ಚುಟುಕಾಗಿ ಹೇಳಿದ.ನಡುನಡುವೆ ಯಾರ್ಯಾರದೋ ಫೋನ್..." ಹೂ ಹೇಳು,ಅಂತ ಸಾಕೇತಿಕ ಸಂಭಾಷಣೆ. 'ಹೂ- ಊಹೂ - ಸರಿ- ಮಾಡ್ತೇನಿ- ಹೇಳ್ತೇನಿ ಅಂತ ಏನೇನೋ ಚುಟುಕು
ಉತ್ತರಗಳು.ನನಗೆ ಇನ್ನಷ್ಟು ಭಯ... ರಿಕ್ಷಾ ಎಲ್ಲೆಲ್ಲೋ ಸುತ್ತು ಹಾಕುತ್ತಿದೆ. ಪೂರ್ತಿ ಊರ ಹೊರಭಾಗ- ಗಲೀಜು- ರಸ್ತೆಗುಂಟ plastic ರಾಶಿ- ಜನಗಳ ಸಂಚಾರವಿಲ್ಲ, ಹೃದಯ ಬಡಿತ ಹೆಚ್ಚಾಯ್ತು.ಕೈ/ಕೊರಳು ಸೀರೆಯಿಂದ  ಮುಚ್ಚಿಕೊಂಡೆ. ಸುಳ್ಳು ಸುಳ್ಳೆ ಅವರಿವರಿಗೆ ಫೋನ್ ಮಾಡಿದಂತೆ
ನಟಿಸಿದೆ.ಕೆಲಸಕ್ಕೆ ಬಾರದ ಭಯ- ಆತಂಕ ಸುರುವಾಯ್ತು...ಟೀವಿಗಳಲ್ಲಿ
ನೋಡಿದ/ಸುದ್ದಿಗಳಲ್ಲಿ ಕೇಳಿದ ಹಳೆಯ
ಘಟನೆಗಳೆಲ್ಲ ಬೇಡವೆಂದಷ್ಟೂ ಕಣ್ಣುಗಳ ಮುಂದೆ..."ಅವನೋ ಹಕ್ಕಿಯ ಕುತ್ತಿಗೆಯನ್ನೇ ನೋಡಿ ಬಾಣ ಗುರಿಯಿಟ್ಟ ದ್ರೋಣಾಚಾರ್ಯರ ಶಿಷ್ಯ
ಅರ್ಜುನನಂತೆ ತಲ್ಲೀನನಾಗಿದ್ದ. ಇಷ್ಟಾದರೂ ರಿಕ್ಷಾ ಊರ ಹೊರಬದಿ ಯ ರಸ್ತೆಗುಂಟ ಸಾಗುತ್ತ ನನ್ನ ಭಯ ಹೆಚ್ಚಿಸುತ್ತಿತ್ತು.ಏನೂ ಮಾಡುವ ಹಾಗಿರಲಿಲ್ಲ,ಕೇಳುವ ಹಾಗಿರಲಿಲ್ಲ,
ಭಯ ತೋರಿಸುವ ಹಾಗಿರಲಿಲ್ಲ.ಸ್ವಲ್ಪು
ಹೊತ್ತು ಕಳೆಯುತ್ತಲೇಎಲ್ಲೋ ಏನೋ
ಈ ಮೊದಲು ನೋಡಿದಂತೆನಿಸತೊಡಗಿ
ಒಂದು ನಿರಾಳತೆಯ ಭಾವ ಬಂದು
ಕೊಂಚ ಮುಖದ ನೆರಿಗೆಗಳು ಸಡಿಲವಾದವು.ದೂರದಲ್ಲಿ ಅಜ್ಮೇರಾದ
ಎತ್ತರದ ಕಟ್ಟಡಗಳು ಕಾಣತೊಡಗಿದ ವು." ಇದೇ gate ಅಲ್ವಾ ಮೇಡಂ"- ಅಂದ ರಿಕ್ಷಾವಾಲಾ ಜಗತ್ತಿನ ಅತಿ ಸಭ್ಯ,
ಅತಿ ಸಜ್ಜನ, ಅತ್ಯಂತ ಪರಿಚಿತ- ಆತ್ಮೀಯ ವ್ಯಕ್ತಿ ಎನಿಸತೊಡಗಿತು. ಮನೆ ಬಂದು ನಿಧಾನವಾಗಿ ನಿಲ್ಲಿಸಿ, ಕೈಯಲ್ಲಿ ನನ್ನೆಲ್ಲ bag ಗಳನ್ನು ಹಿಡಿದು
ಬಾಗಿಲವರೆಗೆ ನನ್ನನ್ನು ಬಿಟ್ಟಾಗ ಅವನ ಒಳ್ಳೆತನಕ್ಕೆ ಖುಶಿಯಾಯ್ತೋ,ನನ್ನ ಭಯ ನಿವಾರಣೆಯಾಗಿ ನೆಮ್ಮದಿ ಅನಿಸಿತೋ
ನನಗೇ ಗೊಂದಲವಾಯ್ತು.ಮೀಟರ್ ಪ್ರಕಾರ ಹಣ ಕೊಟ್ಟಾಗ ಬೆಳಗಿನ ಸವಾರಿಯಾದ್ದರಿಂದ ಚಿಲ್ಲರೆ ಇಲ್ಲ ಮ್ಯಾಡಮ್ ಅಂದಾಗ,ಊರಗಲ ಬಾಯ್ತೆರೆದು ನಕ್ಕು ಹೇಳಿದೆ," ಇರಲಿ ಬಿಡಿ -" ಖುಶಿಖುಶಿಯಾಗಿ ಆಟೋ ತಿರುಗಿಸಿಕೊಂಡು ನಮಸ್ಕರಿಸಿ ಹೊರಟು ಹೋದ...
          ನಿಜ-Cowards die many a times before their deaths- ಅನಿಸಿತು.ನನ್ನ ಅಂಜುಬುರುಕುತನಕ್ಕೆ
ನಾಚಿಕೆ ಅನಿಸಿದರೂ  ಎಂದೋ ಓದಿದ/ಕೇಳಿದ ಸುದ್ದಿಗಳಿಂದ ಇಂಥದೊಂದು ಹೆದರಿಕೆ ಸಹಜವೇ ಎಂದು ನನ್ನನ್ನು ನಾನೇ ಸಮರ್ಥಿಸಿ ಕೊಳ್ಳುತ್ತ ಮನೆಯೊಳಗೆ ಹೊಕ್ಕೆ...



Sunday 21 January 2024

      ಪ್ರತಿವರ್ಷದಂತೆ ಹೊಸವರ್ಷದ ಸಂಭ್ರಮ ಶುಭಾಶಯಗಳ ಮಟ್ಟಿಗೆ
ಒಂದೆರಡು ದಿನಗಳ ಮಟ್ಟಿಗಷ್ಟೇ ಉಳಿಯದೇ ತಿಂಗಳಡೀ ಒಂದು mania ಆಗಿ ಜಗದ್ವ್ಯಾಪಿಯಾದದ್ದು
ಬಹುಶಃ ಇತಿಹಾಸ ಸೃಷ್ಟಿಸಿರಬಹುದು...
ಆದರೂ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ'- ಎಂಬ ಆಶೆ.ಈ ಗುಂಗು ದಿನದಿನಕ್ಕೆ ಹೆಚ್ಚಾಗುತ್ತ ಸೃಷ್ಟಿಸಿದ positive vibes ಸಧ್ಯಕ್ಕೆ ಇಳಿವ ಲಕ್ಷಣಗಳಂತೂ ಇಲ್ಲ...ಒಳ್ಳೆಯದೇ..
ನಾನೂ ಒಂದು ಲಘು ಬರಹ ಬರೆದಿದ್ದು ಅದೂ ಒಂದು ಭಿನ್ಬ ಆಚರಣೆ ಆಗಲಿ ಎಂದೇ....

Friday 19 January 2024

       ಅಷ್ಟೇ ಏಕೆ? ಶಾಲೆಯಲ್ಲಿ ಹೇಳಿದ
ಮೊದಲ ಶ್ಲೋಕ: ರಾಮಃ- ರಾಮೌ-
ರಾಮಾಃ...ಮೊದಲ ಕಥೆ- ಬಾಲ ರಾಮ 
ಚಂದಪ್ಪಾ ಬೇಕೆಂದು ಅತ್ತು, ಅದರ ಪ್ರತಿಬಿಂಬವನ್ನೇ ನೋಡಿ ಸಮಾಧಾನ ವಾಗಿದ್ದು...ಶಾಲೆಯಲ್ಲಿ ಹತ್ತನೇ ವರ್ಗದ ವರೆಗೆ ಯಾವುದೇ ಶಬ್ದ ವಾಕ್ಯದಲ್ಲಿ
ಬಳಸುವಾಗ ' ರಾಮ ' ಮಾತ್ರ ಕರ್ತೃ
ವಾಗಿರುತ್ತಿದ್ದುದು...*ರಾಮನು ಶಾಲೆಗೆ
ಹೋದನು.* ಹಾಗೆ...ಯಾರಾದರೂ
ಸಲ್ಲದ್ದು/ಅನುಚಿತವಾದದ್ದು ಹೇಳಿದರೆ
ಅದಕ್ಕೂ ' ರಾಮಾ...ರಾಮಾ' ಎನ್ನುತ್ತ
ಕಿವಿ ಮುಚ್ಚಿಕೊಳ್ಳುವುದು/ಹಾಡು ಹೇಳು ಅಂದರೆ,' ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ಅಥವಾ
' ರಾಮ ನಾಮವ ಜಪಿಸೋ ಏ ಮನುಜಾ'- ಅಂತಲೇ ಸುರು...ಅದು ಬಿಡಿ, ಲೆಕ್ಕದಲ್ಲೂ 'ರಾಮನ ಲೆಕ್ಕ, ಕೃಷ್ಣನ ಲೆಕ್ಕ - ಅನ್ನುವ ಲೆಕ್ಕಾಚಾರ...ಮದುವೆ ಹುಡುಗನ ಸ್ವಭಾವ ಹೇಳುವಾಗ," ಚಿಂತಿಸ ಬೇಡಿ,' ಹುಡುಗ ಸಾಕ್ಷಾತ್ಪ ಶ್ರೀ ರಾಮಚಂದ್ರ'- ಎಂಬ Certificate... ಕೊಟ್ರೆ ಅದು ಅಂತಿಮ...


Thursday 18 January 2024

ಚಳಿ ತುಂಬಾನೇ
ಅನಿಸುತ್ತಿದೆಯಲ್ಲವೇ? 

ನೀವೆಲ್ಲ ಬೆಚ್ಚಗಿರಬಹುದು
ಅಂದುಕೊಳ್ಳುತ್ತೇನೆ,
ಎಂದಿನಂತೆ-
ದಪ್ಪ ಕಂಬಳಿಯಲ್ಲಿ...
ಹೀಟರಿನ ಅಡಿಯಲ್ಲಿ...
ಒಲಿದವರ ಅಪ್ಪುಗೆಯಲ್ಲಿ...

"ಈ ವರುಷ ತುಂಬಾನೇ
ಚಳಿಯಿದೆ- "ಎಂದು
ಜನ ಹೇಳುತ್ತಾರೆ...
ನಮ್ಮ ಮಟ್ಟಿಗೆ ಇದು 
ಪ್ರತಿ ಚಳಿಗಾಲದ ಕಥೆ...

ರಸ್ತೆಯ ಮೇಲೆ, 
ಫ್ಲೈ ಓವರ್ ಕೆಳಗೆ,
ಸಿಕ್ಕ-ಹರಕು ಬಟ್ಟೆಗಳ
ಸುತ್ತಿಕೊಂಡರೂ
ಒಳಗೊಳಗೇ ಚಳಿಯೊಡನೆ 
ಸೆಣಸುವ  ನಮಗೆ
ಇದು ನಿತ್ಯ ವ್ಯಥೆ...

ಮೂರು ದಿನಗಳಿಂದ
ನೂರರ ಜ್ವರದಲ್ಲಿ
ನರಳುವ ಮುನ್ನಾ...
ಮೈನಸ್ ಡಿಗ್ರಿಯ ಚಳಿಯಲ್ಲೂ
ದುಡಿಯಲೇಬೇಕಾದ
ಅನಿವಾರ್ಯತೆ ಇರುವ
ಪಿಂಟೂ ಹೇಳುತ್ತಾರೆ-
"ಇಲ್ಲ, ನಮಗೆ ಬಿಲ್ಕುಲ್
ಚಳಿ ಎನಿಸುವುದೇ ಇಲ್ಲ..."

ಇಂಥವರನ್ನೂ ಬೆಚ್ಚಗಿರಿಸುವ ಬಗೆಯೊಂದ-
ಕಂಡುಹಿಡಿಯಬೇಕು?
ನಮ್ಮ ಮಕ್ಕಳಂತೆಯೇ
ದೇವರ ಮಕ್ಕಳನ್ನೂ
ಕಾಣಬೇಕು...

ಹಿಂದಿಯಿಂದ:
ಶ್ರೀಮತಿ ಕೃಷ್ಣಾ ಕೌಲಗಿ.

Sunday 14 January 2024

      
           ೧೯೬೫ ರಲ್ಲಿ ಕಾಲೇಜಿಗೆಂದು ಧಾರವಾಡಕ್ಕೆ ಬಂದಾಗ ಅಣ್ಣನಿಗೆ ಅದೇ ತಾನೇ ನೌಕರಿ ಹತ್ತಿತ್ತು.ಹೆಗಲು/ ಬೆನ್ನು ಬಾಗುವಷ್ಟು ಜವಾಬ್ದಾರಿ.ಮನೆ ಬಾಡಿಗೆ
ರೂ, ಮೂವತ್ಮೂರಕ್ಕೂ ತತ್ವಾರ...ಸರಿ ಮನೆಯಲ್ಲಿ ಇದ್ದ ಬಿದ್ದ ಪಾತ್ರೆಗಳನ್ನು ರಿಪೇರಿ ಮಾಡಿಸಿ/ಕಲಾಯಿ ಹಾಕಿಸಿ
ಕೆಲವನ್ನು ಅನಿವಾರ್ಯವಾದಾಗ ಖರೀದಿಸಿ ಬದುಕು ಸಾಗಿತ್ತು.ಆಗ JSS ಕಾಲೇಜಿನ ಆಡಳಿತ ಸಂಕಷ್ಟದಲ್ಲಿದ್ದು
ಒಳ್ಳೆಯದಿನಗಳು ಬರಬಹುದೆಂದು ಕಾಯುತ್ತಿದ್ದ ಕಾಲವದು.
       ‌‌ ‌‌‌        ನಮ್ಮ ಅಣ್ಣ ತುಂಬಾ ಉದಾರಿ.ತನ್ನಂತೆ ಹಳ್ಳಿ ಬಿಟ್ಟು ಓದಲು ಬಂದವರಿಗೆಲ್ಲ ಒಂದು ಭರವಸೆ... ಕೆಲವೊಮ್ಮೆ ನಮಗೆ ಗೊತ್ತಿದ್ದು, ಕೆಲವೊಮ್ಮೆ ಗೊತ್ತಿಲ್ಲದೇ ತನಗಾದಷ್ಟು
ಸಹಾಯ ಮಾಡುವುದನ್ನು ಎಂದೂ
ತಪ್ಪಿಸುತ್ತಿರಲಿಲ್ಲ.ಯಾರಾದರೂ ಧಿಡೀರೆಂದು ಮನೆಗೆ ಬಂದು ಮನೆಯಲ್ಲಿ ತೊಂದರೆಯಿದ್ದರೆ ' ತನಗೆ
ಹಸಿವಿಲ್ಲ/ ಎಲ್ಲೋ ಊಟವಾಯಿತು'
ಅಂತಾದರೂ ನಮನ್ನು ನಂಬಿಸಿ ತನ್ನ ಪಾಲಿನದನ್ನು ಅವರಿಗೆ ಕೊಟ್ಟು
ಪರಿಸ್ಥಿತಿ ಸಂಭಾಳಿಸುತ್ತಿದ್ದ ದಿನಗಳವು.
             ಕಾಲೇಜು ಆಡಳಿತ ಧರ್ಮಸ್ಥಳದವರ ಕೈಗೆ ಬಂದು, ನಿಯಮಿತ ಪಗಾರ ಬರತೊಡಗಿದ ಮೇಲೆ ಪರಿಸ್ಥಿತಿ ಸಹನೀಯವೆನಿಸಿತು.
ಕ್ರಮೇಣ ಸುಧಾರಿಸಿತು.ಎಲ್ಲರ ಮದುವೆ, ಮಕ್ಕಳು, ಶಿಕ್ಷಣ,ಅಂತ
 ಒಂದು ಮಟ್ಟ ತಲುಪಿದ ಮೇಲೆ/ ಎಲ್ಲರೂ ಚನ್ನಾಗಿ ಓದಿ, ನೌಕರಿ ಸಿಕ್ಕ ಮೇಲೆ ' ಇನ್ನು ಪರವಾಗಿಲ್ಲ'- ಅನ್ನುವಂತಾದಮೇಲೆ ಹಿಂದಿರುಗಿ
ನೋಡದಂತಾಯಿತು.
     ‌ ‌            ಈಗ ಬದುಕು ದಿಕ್ಕು ಬದಲಿಸಿ,ಮಕ್ಕಳೆಲ್ಲ ವಿದೇಶ  ಸೇರಿ,
'ಇನ್ನು ಅವರದೇ ಜಮಾನಾ'- ಅಂತ‌ ನಾವು back seat ಗೆ ಸರಿದಾದ ಮೇಲೆ ಬದುಕು ಬಣ್ಣ ಬದಲಾಯಿಸಿತು.
ಉಳಿದವರಂತೆ ಕೊರತೆಯಿಲ್ಲದ ಜೀವನ ಸುರುವಾಗಿ ಕಷ್ಟ ಪಟ್ಟು ದುಡಿದದ್ದರ ಫಲ ಕೈಗೆಟುಕುವ ಹಂತ
ತಲುಪಿದಾಗ, ಮೊಮ್ಮಕ್ಕಳು ದೊಡ್ಡವರಾದ ಮೇಲೆ ಅವರವರ ಆಸಕ್ತಿ/ಅನುಕೂಲ/ಆರ್ಥಿಕ ಬಲ ಅನುಸರಿಸಿ ಸಾಮಾನುಗಳ ಖರೀದಿ,
ನಿತ್ಯ ಹೊಸದರ ಹಂಬಲ,ದಿನದಿನಕ್ಕೆ ಬೆಳೆಯುತ್ತಿರುವ Consumerism ಹೆಚ್ಚಾಗುತ್ತ ಬೇಕೋ ಬೇಡವೋ ಒಟ್ಟು ಎಲ್ಲವನ್ನೂ ಖರೀದಿಸುತ್ತ ಮನೆಯಲ್ಲಿ
ತುಂಬುವುದು ಹವ್ಯಾಸವಾಗಿ ಮನೆಯ
ಜನರನ್ನು ಮೀರಿಸಿ ಸಾಮಾನುಗಳೇ
ಮನೆತುಂಬುವ ಪ್ರವೃತ್ತಿ ಬೆಳೆಯುತ್ತಿರು ವುದು ಸ್ಪಷ್ಟವಾಗಿ ಕಾಣುತ್ತಿದೆ.ತೊಂದರೆ
ಯಾಗುವುದು ವಾಸ್ತವ್ಯ ಬದಲಿಸುವ 
ಪ್ರಸಂಗ ಬಂದಾಗ,ವಸ್ತುಗಳ priority
ನಿರ್ಧರಿಸುವಾಗ, ಒಯ್ಯಲೂ ಆಗದೇ, ಒಗೆಯಲೂ ಆಗದೇ ಎಲ್ಲವೂ 
ಗೊಂದಲ/ಗೋಜಲು ಆಗಿಹೋಗುತ್ತದೆ
ಎಲ್ಲ ಬೇಕಿತ್ತು/ಖರೀದಿಯಾಯ್ತು/ಈಗ 
ಅನವಶ್ಯಕವಾಗಿವೆ.ಒಗೆಯಲು ಮನಸ್ಸಾಗದು,ಬೇಕೆಂಬವರಿಗೆ ಹಂಚಿಯೂ ಮಿಗುತ್ತವೆ.ವಿಲೇವಾರಿ
ಸುಲಭವಾಗುವುದಿಲ್ಲ ಎಂಬ ಕಿರಿಕಿರಿ.
ಕೆಲವೊಮ್ಮೆ ಸಮಯದ ಅಭಾವ,ನಿತ್ಯ ಕೆಲಸದೊಂದಿಗೆ ಸಮಯ ಕೊಡಲಾಗ ದ ಅಸಹಾಯಕತೆ ಏನೆಲ್ಲವೂ ಕಾರಣವಾಗುತ್ತವೆ ಎಂಬ ಸ್ವತಃ ಅನುಭವಗಳು ನಮ್ಮನ್ನು ಹದಗೊಳಿಸುತ್ತಿವೆಯೋ/ ಹಣ್ಣಾಗಿಸುತ್ತಿವೆಯೋ ಗೊತ್ತಾಗದ
ಕಾಲಘಟ್ಟವಿದು...
     

Friday 12 January 2024

Articles List.

Articles List..

*ಭಾಗ್ಯದ ಬಳೆಗಾರ ಹೋಗಿ ಬಾ...
*ಸಖಿ ಗೀತ...
* ಅಲ್ಲಿರುವುದು ನಮ್ಮನೆ...
* ಕನಸು ತೇಲಿ ಬರತಾವ ಹುಡುಕಿ...
* ಕಪಾಟಿನಲ್ಲಿ ಜಾಗವಿಲ್ಲ...ಉಡಲು
ಸೀರೆಯಿಲ್ಲ...
*ಇರಬೇಕು...ಇದ್ದೂ ಇಲ್ಲದಂತಿರಬೇಕು.
* ಶ್ರೀ ರಾಮ‌ಮಯಂ ಜಗತ್...
* ಸಾಯುವ ಮೊದಲೇ ಹಲವು ಬಾರಿ
  ಸಾಯುವವರು...
* ಧಾರವಾಡ ಡೈರಿ...
* Bye... Bye Electronic city...
Hi Koramangala...
* ಯಾರಿಗೆ ಹೇಳೋಣ ನಮ್ಮ problem??
* ಇದು ಶಿಕ್ಷಕಿ ವಿದ್ಯಾರ್ಥಿನಿಯಾದ ಕಥೆ...
* ದಿವ್ಯವಿರಲಿ ಜೀವನ...ಅರಳುತಿರಲಿ
ಜನಮನ...
* ಅಜ್ಞಾತವಾಗಿರುವುದರಲ್ಲೂ ಎಷ್ಟೊಂದು ಸುಖವಿದೆ!!!
* ತುಪ್ಪದಲ್ಲಿ ಜಾರಿ ಬಿದ್ದ ಹೋಳಿಗೆ...
 JUST ASKING...
      ‌‌‌     ನಿನ್ನೆ ಸಂಕ್ರಾಂತಿ ಪೂರ್ವ ಎಳ್ಳು ಅಮಾವಾಸ್ಯೆ.ರೈತರಿಗೆ ಅತಿ ದೊಡ್ಡ ಹಬ್ಬ.ಚರಗ ಚಲ್ಲುವುದು/
ಹೊಲದೂಟ ಏನೆಲ್ಲ ಸಂಭ್ರಮಗಳು 
ಇರುತ್ತವೆ.ಹಳ್ಳಿಯಲ್ಲಿ ಹುಟ್ಟಿ ಬೆಳೆದು
ಅದು ಸ್ವಲ್ಪು ಮಟ್ಟಿಗೆ ಗೊತ್ತು.
                  ನಮ್ಮ ಕವಿತಾ ಬೀದರ ಜಿಲ್ಹೆಯ ರಾಜಗೀರ್ದವಳು. ಮನೆಯ ಸಹಾಯಕಿಯಾಗಿ ಒಂಬತ್ತು ವರ್ಷಗಳಿಂದ ಪರಿಚಯ.ಹೆಚ್ಚು ಕಡಿಮೆ
ಮನೆಯವಳೇ...ನಿನ್ನೆ ಅವಳ  ಮಗಳಿಂದ ಒಂದು ಮೆಸೇಜು ಬಂತು
ನನ್ನ ಮಗಳಿಗೆ." ಅಕ್ಕಾ,ಈ ಹಬ್ಬದಲ್ಲಿ
ನಮ್ಮ ಕಡೆಗೆ ಒಂದು ರಿವಾಜು ಇದೆ. ಇಬ್ಬರು ಗಂಡು ಮಕ್ಕಳು ಇದ್ದವರು
ಒಬ್ಬನೇ ಮಗ ಇದ್ದವರಿಗೆ ಬಳೆ ಇಡಿಸಬೇಕು-ಕನಿಷ್ಟ ಐವರಿಂದ. ಇಲ್ಲಿ
ಕೆಲವರು ಇದ್ದಾರೆ, ನೀವು ರೂ, ೧೦೦
ಕಳಿಸಿ ಅಕ್ಕ,ನಾನು ಬಳೆ ಇಟ್ಟುಕೊಳ್ಳಲು "- ಅಂತ.ತಕ್ಷಣ ನನ್ನ ಮಗಳು ರೂ, ೫೦೦ ಹಾಕಿಯಾಯಿತು, ಖುಶಿಯಿಂದ.
ಅವಳು ಅಮ್ಮನಿಗೆ ಫೋನ್ ಮಾಡಿ
' ಅಷ್ಟು ಬೇಡವಿತ್ತು,ಬಳೆಗೆ ಅಷ್ಟು ಬೇಡ
ನಾನು ಉಳಿದದ್ದು ವಾಪಸ್ ಹಾಕುತ್ತೇನೆ'- ಅಂತ.ಅವಳಮ್ಮನೇ 
ಅವಳಿಗೆ ತಿಳಿಹೇಳಿ ಅದನ್ನು ಇಟ್ಟುಕೊಳ್ಳ ಹೇಳಿದಳು ಎಂಬಲ್ಲಿಗೆ ಈ
ಕಿರು ಅಧ್ಯಾಯ ಸಮಾಪ್ತವಾಯ್ತು.
           ಇದೀಗ ಈ ಆಚರಣೆಯ ಬಗ್ಗೆ
ನನಗೆ ಬಂದ ಜಿಜ್ಞಾಸೆಯೇ ಬೇರೆ. ಮಕ್ಕಳಿಲ್ಲದವರಿಗೆ ಮಕ್ಕಳಿದ್ದವರಿಂದ
ಇಂಥದೊಂದು ಶಾಸ್ತ್ರ ಅಂದರೆ ಏನೋ ಅರ್ಥವಿದೆ.ಒಬ್ಬ ಮಗ ಇದ್ದವರಿಗೆ ಇಬ್ಬರು ಗಂಡು ಮಕ್ಕಳು ಇದ್ದವರಿಂದ-
ಎಂಬುದು ಪಚನವಾಗಲಿಲ್ಲ.ಅದೇಕೆ
ಬಳೆ ತೊಡಿಸುವ ಸಣ್ಣ ವಿಷಯಕ್ಕೂ
ಈ ' ಹೆಣ್ಣು- ಗಂಡು ಭೇದ.ಪಂಚಮಿಗೆ ಇದ್ದ ಹಾಗೆ ಎಲ್ಲ ಹೆಣ್ಣುಮಕ್ಕಳಿಗೆ ಅಂತೆ ಏಕೆ ಇಲ್ಲ?ಗಂಡುಮಗ ಮನೆಯಲ್ಲಿದ್ದು
ವಂಶ ಬೆಳೆಸುತ್ತಾನೆ,ಹೆಣ್ಣು ಪರರ ಮನೆಗೆ  ಹೋಗಿ ಬಿಡುತ್ತಾಳೆ ಅಂತಲಾ?
ಹೋಗಲಿ ಇಬ್ಬರು ಗಂಡುಮಕ್ಕಳು
ಇದ್ದವರು ಒಬ್ಬನೇ ಮಗ ಇದ್ದವರಿಗಿಂತ
ಅದು ಹೇಗೆ ಶ್ರೇಷ್ಠರಾಗುತ್ತಾರೆ.?? ಹೆಣ್ಣಮಕ್ಕಳನ್ನು ಹೆತ್ತವರು ಯಾಕೆ ಈ
ಪರಿಧಿಯಿಂದ ಹೊರಗಿರಬೇಕು? ಇದು ಯಾವ ನ್ಯಾಯ? ಒಮ್ಮೆ ಹಾಗಿತ್ತು ಅಂತ ಈಗಲೂ ಮುಂದುವರಿಯಲೇ ಬೇಕಾ?ಅದೊಂದು ಖುಶಿಯ ಸಂಪ್ರದಾಯವಾಗಿ/ಸಾರ್ವಜನಿಕವಾಗಿ
ಒಬ್ಬರಿಗೊಬ್ಬರು ಬಳೆ ತೊಡಿಸಿ ಊರೇ
ಸಂಭ್ರಮಿಸಿದರೆ ಆಗುವ ನಷ್ಟವೇನು?
ಎಷ್ಟು ಯೋಚಿಸಿದರೂ ನನಗಂತೂ 
ಈ ವಿಷಯ ಬಗೆಹರಿಯಲಿಲ್ಲ.
             ನಿಮಗಾರಿಗಾದರೂ ಈ ಪದ್ಧತಿ ಗೊತ್ತಿದೆಯಾ?ಕೇಳಿ ಬಲ್ಲಿರಾ?





Wednesday 10 January 2024

ಶಾಲಿನಿ...

ಇಂದಿನ ದಿನವೇ ಶುಭದಿನವು...    
          ಯಾರದೇ ಹುಟ್ಟುಹಬ್ಬವಾಗಲೀ ಒಂದು ಸದಾಶಯದ ಸಂದೇಶವನ್ನು ಫೋನ್ ಮಾಡಿಯೋ/ ಹತ್ತಿರವಿದ್ದರೆ ಒಂದು ಸ್ನೇಹಾಲಿಂಗನದಿಂದಲೋ/ಅದೃಷ್ಟವಂತರಾದರೆ ಒಂದು ಚಂದದ ಪಾರ್ಟಿಯಲ್ಲಿ ಭಾಗಿಯಾಗಿ ಆಚರಿಸುವದೋ ರೂಢಿ. ಶಾಲಿನಿಯ ಪರಿಚಯವಾಗಿ ಈ ಹದಿನೇಳು ವರ್ಷ ಗಳಲ್ಲಿ ನನ್ನದೂ ಇದೇ ಸಂಪ್ರದಾಯ. 
         ‌‌‌     ಆದರೆ ಶಾಲಿನಿಯ ಈ ವರ್ಷದ ಈ ಸಂಭ್ರಮಕ್ಕೆ ವಿಶೇಷವಾದ ಆಯಾಮ ಸಿಕ್ಕಿದೆ.ಇಡೀ ಭಾರತವೇ ಅತ್ಯುತ್ಸಾಹದಿಂದ ಕಾಯುತ್ತಿರುವ ಅಯೋಧ್ಯಾದಲ್ಲಿಯ ಶ್ರೀ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯವು ಇಂದೇ ಅಂದರೆ ಶಾಲಿನಿಯ  ಜನ್ಮದಿನದಂದೇ ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಎಂಥ ಕಾಕತಾಳೀಯ!!!ಇನ್ನೊಂದು ಅಚ್ಚರಿಯ ವಿಷಯ ಬಹುಜನರಿಗೆ ಗೊತ್ತಿಲ್ಲ!ಅವರ ಮನೆಯ ಹೆಸರೇ 'ಅಯೋಧ್ಯಾ'-'ಅವರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇದ್ದಾಗ ಅತ್ತೆ,ಮಾವನವರ ಭೇಟಿಗೆ ಹೋಗಬೇಕಾದಾಗಲೆಲ್ಲ' ನಾನಿಂದು 'ಅಯೋಧ್ಯೆ'ಗೆ ಹೋಗಬೇಕು ಕೃಷ್ಣಾ- ಎಂದಾಗಲೊಮ್ಮೆ ನಾನು" ಸರಿ ಹೋಗಿ ಬನ್ನಿ, ನಾನೂ ನನ್ನ 'ಹಸ್ತಿನಾಪುರ'- ಕ್ಕೆ ಹೊರಡುತ್ತೇನೆ ಎನ್ನುತ್ತಿದ್ದೆ.ಇದೀಗ 'ಅಯೊಧ್ಯಾ'ನಿವಾಸಿ
ಯಾಗಿದ್ದೂ ಹುಟ್ಟುಹಬ್ಬದಂದು
ನಮ್ಮೂರು 'ಧಾರವಾಡ'ದಲ್ಲಿ ಕಳೆಯು ತ್ತಿರುವುದು ನಮ್ಮಿಬ್ಬರಿಗೂ ಈ ಜನೆವರಿ -೨೨ ರ ವಿಶೇಷ...
   ‌‌‌‌           ನಾನು ಬೆಂಗಳೂರು ನಿವಾಸಿ ಯಾದ ಹೊಸತರಲ್ಲಿ ನನ್ನನ್ನು ಬೆನ್ನಿಗೆ ಕಟ್ಟಿಕೊಂಡು ಇಡೀ ಬೆಂಗಳೂರು ಸುತ್ತಿಸಿದವರು ಅವರು.ಒಮ್ಮೆ ಅವರನ್ನೂ ನಾನು ಧಾರವಾಡಕ್ಕೆ ಕರೆದುಕೊಂಡು ಹೋಗಬೇಕು ಅಂದು ಕೊಂಡದ್ದು ಎಷ್ಟು ಬಾರಿಯೋ!!! ಆದರೆ ಕಾಲ ಕೂಡಿ ಬಂದಿರಲೇ ಇಲ್ಲ.ಆದರೆ ನೋಡಿ, ಈಗಲೂ ನನ್ನನ್ನು ಅವರೇ ಧಾರವಾಡಕ್ಕೆ ಕರೆದುಕೊಂಡು ಬಂದ ವರು ಅವರು ಇರುವುದೇ ಹಾಗೆ!!!ಎಂದಿಗೂ/ಎಂದೆಂದಿಗೂ ಅವರದು
ಕೊಡುವ ಕೈ...ಬೇಡುವುದಲ್ಲ.ಅವರ ಅಣ್ಣ ಡಾ, ಚಿತ್ತರಂಜನ ಭಟ್ಟ ಅವರ ಸ್ಮೃತಿನಮನ ಕಾರ್ಯಕ್ರಮವೊಂದನ್ನು ಧಾರವಾಡದ ಶ್ರೀ ಆಲೂರು ವೆಂಕಟ ರಾವ್ ಸಭಾ ಭವನದಲ್ಲಿ ಹಮ್ಮಿಕೊಳ್ಳ ಲಾಗಿದ್ದು ಅದರಲ್ಲಿ ಭಾಗವಹಿಸುವ ಅವಕಾಶ ಈ ಬಾರಿ ನನ್ನದಾಗಿದೆ.ಈ ಮೂರುದಿನಗಳ ಪ್ರವಾಸ ನಮ್ಮಿಬ್ಬರ ಹೊಸವರ್ಷದ ಮೊಟ್ಟ ಮೊದಲ ಕಾರ್ಯಕ್ರಮವಾದದ್ದಲ್ಲದೇ ಅಂದೇ ರಾಮಲಲ್ಲಾ ಪ್ರತಿಷ್ಠಾಪನವಾಗುತ್ತಿರು ವುದೂ ಹಾಗೂ ಅವರ ಹುಟ್ಟುಹಬ್ಬ ದಂದು ಅದರೊಂದಿಗೆ ನಾನೂ ಜೊತೆ ಗಿರುವಂತಾದುದೂ ಅದೃಷ್ಟವೆಂದೇ ಹೇಳಬೇಕು.ದೇಶಾದ್ಯಂತದ ಈ ದಿನದ ಸರ್ವಮಂಗಲಮಯ ವಾತಾವರಣ ಶಾಲಿನಿಯವರ ಬದುಕಿನಲ್ಲೂ ಸುಖ - ಸಂತಸ ತುಂಬಿ ತರಲಿ ಎಂಬ ಹಾರೈಕೆ ಯೊಂದಿಗೆ ಒಂದು ಸ್ನೇಹಾಲಿಂಗನ ಅವರಿಗೆ...
              ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶಾಲಿನಿ...ಸದಾಕಾಲ ಸುಖಿಯಾಗಿರಿ...ಖುಶಿಖುಶಿಯಾಗಿರಿ...

       


            

     

Monday 8 January 2024

Sushruta Dodderi in fb👇

'ಜಸ್ಟ್ ಬ್ಯಾಂಗ್ಲೂರ್' 
- - - 

‘ಯಾರ್ರೀ ಎಂಟ್ನೇ ಮೈಲೀ’ ಅಂತ ಕಂಡಕ್ಟರ್ ಕೂಗಿದಾಗ ಹೌಹಾರಿ ಎದ್ದದ್ದು. ಊರಿನಲ್ಲಿ ಬಲ್ಲವರು ಹೇಳಿಕಳುಹಿಸಿದ್ದರು: “ಎಂಟನೇ ಮೈಲಿ ಬಂತು ಎಂದರೆ ಬೆಂಗಳೂರು ಬಂತು ಎಂದರ್ಥ. ಅಲ್ಲಿಗೆ ಎಚ್ಚರ ಮಾಡಿಕೊಂಡು ಬ್ಯಾಗ್ ಸರಿ ಮಾಡಿಕೊಂಡು ಕುಳಿತುಕೋ. ಎಂಟನೇ ಮೈಲಿ ಆದಮೇಲೆ ಜಾಲಹಳ್ಳಿ ಕ್ರಾಸ್, ಗೊರಗುಂಟೆಪಾಳ್ಯ, ಯಶವಂತಪುರ, ನವರಂಗ್..... ಸ್ವಲ್ಪವೇ ಹೊತ್ತಿನಲ್ಲಿ ಮೆಜೆಸ್ಟಿಕ್ ಎಂಬ ಲಾಸ್ಟ್‌ ಸ್ಟಾಪ್ ಬಂದೇಬಿಡುವುದು. ಎಚ್ಚರವಾಗಿರು..”  ಈ ‘ಎಚ್ಚರವಾಗಿರು’ ಎಂಬ ಮಾತನ್ನು ಪದೇಪದೇ ಹೇಳಿದ್ದರು ಮನೆಯಲ್ಲಿ. ಅವರು ಅಷ್ಟು ಸಲ ಹೇಳಿದಮೇಲೆಯೂ ಮೈ ಮರೆಯಲಾದೀತೇ? ಎಂಟನೇ ಮೈಲಿಯೇನು, ತುಮಕೂರು ಬಂದಾಗಲೇ ಬೆಂಗಳೂರು ಬಂತೆಂದು ಚಡಪಡಿಸಿ ಎದ್ದದ್ದು. ಇಷ್ಟಕ್ಕೂ, ಅಷ್ಟೊಂದು ಕನಸುಗಳು, ಅಷ್ಟೊಂದು ಬಯಕೆಗಳು, ಅಷ್ಟೊಂದು ನಿರೀಕ್ಷೆಗಳು, ಅಷ್ಟೊಂದು ಭಯ ಹೊದ್ದುಕೊಂಡು ಮಲಗಿದವರಿಗೆ ನಿದ್ರೆ ಬಂದೀತಾದರೂ ಹೇಗೆ? 

ಮೆಜೆಸ್ಟಿಕ್ ಎಂಬ ಸಮುದ್ರದಲ್ಲಿ ಬಸ್ಸು ನಮ್ಮನ್ನು ಇಳಿಸಿಯೇಬಿಟ್ಟಿತು. ಎಷ್ಟೊಂದು ಕನಸುಗಳು ನನ್ನೊಂದಿಗೇ ಇಳಿದವು... ಸುತ್ತ ನೋಡಿದರೆ ನನ್ನ ಹಾಗೆಯೇ ಭಯ-ಚಡಪಡಿಕೆ-ಹಂಬಲಗಳನ್ನು ರಾಚಿಕೊಂಡಿದ್ದ ಎಷ್ಟೊಂದು ಜೀವಗಳು ಹರಿದಾಡುತ್ತಿವೆ. ಯಾವ ತೇರು ನೋಡಲು ಬಂದವರು ಇಷ್ಟೆಲ್ಲ ಜನ. ಏನೂ ತಿಳಿಯದಿದ್ದರೂ ಎಲ್ಲ ತಿಳಿದವರಂತೆ ಅದು ಹೇಗೆ ನಡೆಯುತ್ತಿದ್ದಾರೆ ಹುಸಿಗಾಂಭೀರ್ಯದಿಂದ. ಹೆಗಲ ಚೀಲದಲ್ಲಿರುವ ಎರಡು ಅಂಗಿ, ಎರಡು ಪ್ಯಾಂಟು, ಒಂದು ಕೌದಿಗಳನ್ನು ಇವರೆಲ್ಲ ಯಾವ ನಲ್ಲಿಯಿಂದಿಳಿಯುವ ಕಾವೇರಿ ನೀರಿನಲ್ಲಿ ತೊಳೆಯುವರು.  ಒಂದೇ ಪುಟದ ಬಯೋಡೇಟಾ, ಝೆರಾಕ್ಸು ಮಾಡಿಸಿದ ಅಂಕಪಟ್ಟಿ ಮತ್ತು ಯಾರನ್ನೋ ಭೇಟಿ ಮಾಡಿದರೆ ಕೆಲಸ ಕೊಡಿಸುತ್ತಾರಂತೆ ಎಂಬ ಯಾರದೋ ಮಾತಿಗೆ ಈ ಮಹಾಸಾಗರಕ್ಕಿಳಿಯುವಷ್ಟು ಭರವಸೆಯಿತ್ತಲ್ಲ. 

ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ಕೆಯಾಗಿ, ಕೆಲಸ, ಸಂಬಳ, ಉಳಿದುಕೊಳ್ಳಲು ಮನೆ –ಎಲ್ಲವೂ ಪಕ್ಕಾ ಆದಮೇಲೆಯೇ ಬೆಂಗಳೂರಿಗೆ ಬರುವ ಇಪ್ಪತ್ತು ಪ್ರತಿಶತ ಅದೃಷ್ಟಶಾಲಿಗಳನ್ನು ಬಿಡಿ. ಆದರೆ ಇನ್ನುಳಿದ ಎಂಬತ್ತು ಜನ ಇಲ್ಲಿಗೆ ದಿಕ್ಕೆಟ್ಟು ಬಂದವರು. ದಿಕ್ಕು ಹುಡುಕಲು ಬಂದವರು. ಏನು ಗೊತ್ತಿತ್ತು ನಮಗೆ ಇಲ್ಲಿಗೆ ಬರುವಾಗ? ಅಪ್ಪ-ಅಮ್ಮ ಜೇಬಿಗೆ ತುರುಕಿ ಕಳುಹಿಸಿದ್ದ ನೋಟುಗಳು ಎಷ್ಟು ಕಾಲ ಬಾಳಿಕೆ ಬರುವಂತಿದ್ದವು? ಟೀವಿಯಲ್ಲಿ ನೋಡಿದ್ದ ನಗರದ ಚಿತ್ರ, ಹರುಕುಮುರುಕು ಇಂಗ್ಲೀಷು, ಅರೆಬರೆ ಓದುಗಳ ಜೊತೆ ಒಂದಿಷ್ಟು ಭಂಡತನ ಇಲ್ಲದಿದ್ದರೆ ಈ ನಗರದಲ್ಲಿ ನಾವು ಉಳಿದುಕೊಳ್ಳಲು ಸಾಧ್ಯವಿತ್ತೆ? 

ಸಿಗ್ನಲ್ಲಿನ್ನಲ್ಲಿ ರಸ್ತೆ ದಾಟುವದನ್ನು ಕಲಿತೆವು, ಫಳಫಳ ಹೊಳೆವ ಹೊದಿಕೆಯ ಗಗನಚುಂಬಿ ಕಟ್ಟಡಗಳನ್ನು ನೋಡುತ್ತಾ ಸಾಗಿದೆವು, ಮಾಲುಗಳ ಎಸ್ಕಲೇಟರುಗಳನ್ನು ಢವಗುಡುವ ಎದೆಯೊಂದಿಗೆ ಏರಿದೆವು, ಮೂಲೆಯಂಗಡಿಯಲ್ಲಿ ಬನ್ನು ತಿಂದು - ಚಹಾ ಕುಡಿದು ಹೊಟ್ಟೆ ತುಂಬಿಸಿಕೊಂಡೆವು, ಬಿಎಂಟಿಸಿ ಬಸ್ಸೇರಿ ಪ್ರತಿ ಸ್ಟಾಪು ಬಂದಾಗಲೂ ಬಸ್‌ಸ್ಟಾಂಡ್ ಮೇಲಿನ ಹೆಸರನ್ನು ಬಗ್ಗಿಬಗ್ಗಿ ಓದಿ ನಮ್ಮ ಸ್ಟಾಪ್ ಇನ್ನೂ ಬಂದಿಲ್ಲ ಎಂದುಕೊಂಡೆವು, ದಿನಪತ್ರಿಕೆಗಳಲ್ಲಿನ ಜಾಬ್ ಓಪನಿಂಗ್ ಜಾಹೀರಾತುಗಳನ್ನು ಮಾರ್ಕ್ ಮಾಡಿಕೊಂಡು ಫೋನಿಸಿದೆವು, ಚಿತ್ರವಿಚಿತ್ರ ಹೆಸರಿನ ಕಂಪನಿಗಳಿಗೆ ಇಂಟರ್ವ್ಯೂ ಕೊಟ್ಟು ಅವರಿಂದ ವಾಪಸು ಕಾಲ್ ಬರಬಹುದೆಂದು ಕಾದೆವು, ರಾತ್ರಿಯಾಕಾಶದಲ್ಲಿ ನಕ್ಷತ್ರಗಳೊಂದನ್ನೂ ತೋರದ ನಗರ ಬೀದಿಬೀದಿಯಲ್ಲಿ ಝಗಮಗಿಸುವ ರೀತಿಗೆ ಬೆರಗಾದೆವು, ನಾಳೆ ಬೆಳಿಗ್ಗೆಯ ತಿಂಡಿಗೆ ಹಣವಿದೆಯಾ ಅಂತ ಜೇಬು ಮುಟ್ಟಿ ಮುಟ್ಟಿ ನೋಡಿಕೊಂಡೆವು. 

ಬೆಂಗಳೂರು ನಮ್ಮನ್ನು ಬಿಟ್ಟುಕೊಡಲಿಲ್ಲ. ‘ಏ, ಯಾರ್ಯಾರಿಗೋ ಕೆಲಸ ಕೊಟ್ಟಿದೀನಂತೆ, ನಿಂಗೆ ಇಷ್ಟು ಟ್ಯಾಲೆಂಟ್ ಇದೆ, ಬಾ ನಂಜೊತೆ’ ಅಂತ ಕರೆದುಕೊಂಡು ಹೋಗಿ ಉದ್ಯೋಗ ಕೊಡಿಸಿತು. ಮೊದಲ ಸಂಬಳ ಬಂದಾಗ ಅಮ್ಮನಿಗೆ ಸೀರೆ ಕೊಂಡೂ ಉಳಿಯಿತಲ್ಲ ಹಣ. ಪೀಜಿ, ಅಲ್ಲಿಂದ ಸಣ್ಣ ರೂಮು, ನಂತರ ಒನ್  ಬಿಎಚ್‌ಕೆ, ಸ್ವಂತ ಅಡುಗೆ, ರೂಂಮೇಟ್ಸು, ರೆಡಿಮಿಕ್ಸ್ ಸಾರು, ವೀಕೆಂಡ್ ದರಬಾರು, ಹುಡುಗಿಯ ಎಸ್ಸೆಮ್ಮೆಸ್ಸು, ಪಿಕ್‌ಪಾಕೆಟ್ ಆದ ನೋವು –ಎಷ್ಟೆಲ್ಲ ಅನುಭವಗಳನ್ನು ಕೊಟ್ಟಿತು ನಗರ. ಫಸ್ಟ್ ಡೇ ಫಸ್ಟ್ ಶೋ ನೋಡಿದ ನೆಚ್ಚಿನ ಹೀರೋ ಸಿನೆಮಾ, ಅಂತರಜಾಲ ಜಾಲಾಡಿ ಪತ್ತೆಹಚ್ಚಿದ ಬೆಟ್ಟಕ್ಕೆ ಹೋದ ವೀಕೆಂಡ್ ಟ್ರೆಕ್ಕು, ಇಎಂಐನಲ್ಲಿ ಕೊಂಡ ಮೊದಲ ಟೂವ್ಹೀಲರು, ಕಾಫಿಡೇಯ ದುಬಾರಿ ಬಿಲ್ಲು, ‘ಬಯ್ ಟೂ ಗೆಟ್ ವನ್ ಫ್ರೀ’ ಆಫರಿನಲಿ ಕೊಂಡ ಜೀನ್ಸು, ಮೆಟ್ರೋ ಪಾಸು, ಹೇಗೋ ಉಳಿಸಿದ ನಾಲ್ಕು ಕಾಸು...  ಬೆಂಗಳೂರು ನಿಧನಿಧಾನಕ್ಕೆ ನಮ್ಮನ್ನು ಗಟ್ಟಿ ಮಾಡಿತು. ಶಕ್ತರನ್ನಾಗಿಸಿತು. ಎಂದೋ ದಿಕ್ಕೆಟ್ಟು ಕುಳಿತ ಘಳಿಗೆ ಯಾರೋ ಬಂದು ‘ಮುಂದೇನಯ್ಯಾ ನಿನ್ನ ಕಥೆ?’ ಅಂತ ಕೇಳಿದರೆ, ‘ಏ, ಬೆಂಗಳೂರಲ್ಲೇ ಬದುಕಿದೀನಿ, ನಂಗ್ಯಾಕೆ ಭಯ? ಎಲ್ಲಾದರೂ ಹೋಗಿ ಹೆಂಗಾದರೂ ಬದುಕ್ತೀನಿ ಬಿಡಯ್ಯಾ’ ಅಂತ ಹೇಳುವಷ್ಟು ಧೈರ್ಯವನ್ನು ಕೊಟ್ಟಿತು. 

ಮೆಜೆಸ್ಟಿಕ್ಕಿನ ರಶ್ಶಿನಲ್ಲಿ, ಸಿಲ್ಕ್‌ಬೋರ್ಡಿನ ಟ್ರಾಫಿಕ್ಕಿನಲ್ಲಿ, ಮಲ್ಲೇಶ್ವರದ ಎಂಟನೇ ಕ್ರಾಸಿನ ಅಂದದ ಹುಡುಗಿಯರಲ್ಲಿ, ಎಂಜಿ ರಸ್ತೆಯ ತಳುಕುಬಳುಕಿನಲ್ಲಿ, ಎಲೆಕ್ಟ್ರಾನಿಕ್ ಸಿಟಿಯ ಫಾರೀನ್ ಗತ್ತಿನಲ್ಲಿ, ಮಾರತ್ತಹಳ್ಳಿಯ ತಮಿಳುಗನ್ನಡದಲ್ಲಿ, ಗಾಂಧಿಬಜಾರಿನ ಮುಗ್ಧ ಸೌಂದರ್ಯದಲ್ಲಿ, ಲಾಲ್‌ಭಾಗಿನ ಫಲಪುಷ್ಪ ಪ್ರದರ್ಶನದಲ್ಲಿ, ಕೆಆರ್ ಮಾರ್ಕೆಟ್ಟಿನ ಮುಂಜಾನೆಯ ತಾಜಾ ಹೂವು-ಹಣ್ಣು-ತರಕಾರಿಗಳಲ್ಲಿ ಬೆಂಗಳೂರು ತನ್ನನ್ನು ತಾನು ತೆರೆದಿಟ್ಟುಕೊಂಡಿತು.  ‘ಒನ್ನೆಂಡಾಫ್ ಆಗುತ್ತೆ ಸಾರ್’ ಆಟೋಗಳೂ, ಇಡ್ಲಿ-ಸಾಂಬಾರ್ ಡಿಪ್ಪಿನ ದರ್ಶಿನಿಗಳೂ, ಭಾನುವಾರದ ಪುಸ್ತಕ ಬಿಡುಗಡೆಗಳೂ, ಅಣ್ಣಮ್ಮನುತ್ಸವದ ತಮಟೆ ಸದ್ದೂ ನಮ್ಮ ಬದುಕಿನ ಭಾಗವಾಯಿತು.  ಬೆಂಗಳೂರು ನಿಧನಿಧಾನಕ್ಕೆ ‘ನಮ್ಮದು’ ಆಯ್ತು. ಎಷ್ಟರ ಮಟ್ಟಿಗೆ ಎಂದರೆ, ಯಾರೋ ಉತ್ತರ ಭಾರತದ ಟೆಕ್ಕಿ, ‘ಐ ಹೇಟ್ ದಿಸ್ ಸಿಟಿ ಯಾರ್.. ಇಲ್ಲಿನ ಟ್ರಾಫಿಕ್ಕು, ಗಲಾಟೆ, ಕೆಟ್ಟ ರಸ್ತೆಗಳು...’ ಅಂತೇನಾದರೂ ಭಾಷಣ ಕೊಡಲು ಶುರು ಮಾಡಿದರೆ ಅವನನ್ನು ಮಧ್ಯದಲ್ಲೇ ತಡೆದು, ‘ಇದು ನಮ್ಮೂರು, ಯಾರು ನಿನಗೆ ಇಲ್ಲಿಗೆ ಬರಲು ಹೇಳಿದ್ದು?’ ಅಂತ ದಬಾಯಿಸುವಷ್ಟು ನಾವು ಬೆಂಗಳೂರಿಗರು ಆದೆವು. 

ಬೆಂಗಳೂರು ನಮ್ಮನ್ನು ಕೆಂಪು ಸಿಗ್ನಲ್ಲಿನಲ್ಲಿ ತಡೆದು ನಿಲ್ಲಿಸಿತು, ಹಸಿರಾಗಿ ಮುಂದೆ ತಳ್ಳಿತು, ಕಾಣದ ವೈರಸ್ಸು ಬಂದಾಗ ಊರಿಗೆ ಓಡಿಸಿತು, ಮತ್ತೆ ವಾಪಸು ಕರೆಸಿತು, ವಿದ್ಯಾರ್ಥಿ ಭವನದಲ್ಲಿ ಕೂರಿಸಿ ಮಸಾಲೆ ದೋಸೆ ತಿನ್ನಿಸಿತು, ಬೈಟೂ ಕಾಫಿ ಕುಡಿಸಿತು. ನಮಗೆ ಕೆಲಸ ಕೊಟ್ಟಿತು, ಸಂಬಳ ಕೊಟ್ಟಿತು, ಹೊಸಹೊಸ ಅನುಭವಗಳನ್ನು ಕೊಟ್ಟಿತು, ಸಂಸಾರ ಹೂಡಿಕೊಟ್ಟಿತು, ಬದುಕು ಕಟ್ಟಿಕೊಳ್ಳುವ ಕಲೆಯನ್ನು ಹೇಳಿಕೊಟ್ಟಿತು. 

ಕೋಟ್ಯಂತರ ಜನಗಳಿಗೆ ಏನೆಲ್ಲ ಕೊಟ್ಟ ಬೆಂಗಳೂರು, ತಾನೇನೂ ಮಾಡಿಲ್ಲವೆಂಬಂತೆ ಸುಮ್ಮನೆ ಇದೆ. ತನ್ನ ಫ್ಲೈಓವರಿನ ಕಾಲುಗಳನ್ನು ಅಲ್ಲಾಡಿಸದಂತೆ ನಿಂತಿದೆ, ರಸ್ತೆತುಂಬ ನಿಂತ ಮಳೆನೀರನ್ನು ಬೆಳಗಾಗುವುದರೊಳಗೆ ಹಿಂಗಿಸಿದೆ, ಬೇರಿಳಿಯಲೂ ಅವಕಾಶವಿಲ್ಲದ ಮೇಫ್ಲವರಿನ ಮರಗಳಲ್ಲಿ ಕೆಂಪನೆ ಹೂವರಳಿಸಿದೆ, ಮನೆಮನೆಗಳಿಂದ ಕಸ ಸಂಗ್ರಹಿಸಿ ದೊಡ್ಡ ಲಾರಿಯಲ್ಲಿ ಹೇರಿ ನಗರದ ಆಚೆ ಹಾಕಿದೆ, ಹಸಿದು ಬಂದವರಿಗೆ ನಡುರಾತ್ರಿಯಲ್ಲೂ ರಸ್ತೆಬದಿಯ ತಳ್ಳುಗಾಡಿಯಲ್ಲಿ ತಟ್ಟೆಇಡ್ಲಿ ತಿನ್ನಿಸಿದೆ. ಮತ್ತು, ತನ್ನ ಕಾಂತತ್ವಶಕ್ತಿಯನ್ನು ಇನ್ನೂ ಕಳೆದುಕೊಳ್ಳದ ಈ ನಗರ, ಆಕಾಂಕ್ಷಿಗಳನ್ನೆಲ್ಲ ತನ್ನೆಡೆಗೆ ಸೆಳೆಯುತ್ತಲೇ ಇದೆ. 

[ಕನ್ನಡ ಪ್ರಭ ದೀಪಾವಳಿ ವಿಶೇಷಾಂಕ-2023ರ 'ನನ್ನ ಬೆಂಗಳೂರು' ಸರಣಿಗಾಗಿ ಬರೆದದ್ದು]

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...