ಯಾರದೇ ಹುಟ್ಟುಹಬ್ಬವಾಗಲೀ ಒಂದು ಸದಾಶಯದ ಸಂದೇಶವನ್ನು ಫೋನ್ ಮಾಡಿಯೋ/ ಹತ್ತಿರವಿದ್ದರೆ ಒಂದು ಸ್ನೇಹಾಲಿಂಗನದಿಂದಲೋ/ಅದೃಷ್ಟವಂತರಾದರೆ ಒಂದು ಚಂದದ ಪಾರ್ಟಿಯಲ್ಲಿ ಭಾಗಿಯಾಗಿ ಆಚರಿಸುವದೋ ರೂಢಿ. ಶಾಲಿನಿಯ ಪರಿಚಯವಾಗಿ ಈ ಹದಿನೇಳು ವರ್ಷ ಗಳಲ್ಲಿ ನನ್ನದೂ ಇದೇ ಸಂಪ್ರದಾಯ.
ಆದರೆ ಶಾಲಿನಿಯ ಈ ವರ್ಷದ ಈ ಸಂಭ್ರಮಕ್ಕೆ ವಿಶೇಷವಾದ ಆಯಾಮ ಸಿಕ್ಕಿದೆ.ಇಡೀ ಭಾರತವೇ ಅತ್ಯುತ್ಸಾಹದಿಂದ ಕಾಯುತ್ತಿರುವ ಅಯೋಧ್ಯಾದಲ್ಲಿಯ ಶ್ರೀ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯವು ಇಂದೇ ಅಂದರೆ ಶಾಲಿನಿಯ ಜನ್ಮದಿನದಂದೇ ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಎಂಥ ಕಾಕತಾಳೀಯ!!!ಇನ್ನೊಂದು ಅಚ್ಚರಿಯ ವಿಷಯ ಬಹುಜನರಿಗೆ ಗೊತ್ತಿಲ್ಲ!ಅವರ ಮನೆಯ ಹೆಸರೇ 'ಅಯೋಧ್ಯಾ'-'ಅವರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇದ್ದಾಗ ಅತ್ತೆ,ಮಾವನವರ ಭೇಟಿಗೆ ಹೋಗಬೇಕಾದಾಗಲೆಲ್ಲ' ನಾನಿಂದು 'ಅಯೋಧ್ಯೆ'ಗೆ ಹೋಗಬೇಕು ಕೃಷ್ಣಾ- ಎಂದಾಗಲೊಮ್ಮೆ ನಾನು" ಸರಿ ಹೋಗಿ ಬನ್ನಿ, ನಾನೂ ನನ್ನ 'ಹಸ್ತಿನಾಪುರ'- ಕ್ಕೆ ಹೊರಡುತ್ತೇನೆ ಎನ್ನುತ್ತಿದ್ದೆ.ಇದೀಗ 'ಅಯೊಧ್ಯಾ'ನಿವಾಸಿ
ಯಾಗಿದ್ದೂ ಹುಟ್ಟುಹಬ್ಬದಂದು
ನಮ್ಮೂರು 'ಧಾರವಾಡ'ದಲ್ಲಿ ಕಳೆಯು ತ್ತಿರುವುದು ನಮ್ಮಿಬ್ಬರಿಗೂ ಈ ಜನೆವರಿ -೨೨ ರ ವಿಶೇಷ...
ನಾನು ಬೆಂಗಳೂರು ನಿವಾಸಿ ಯಾದ ಹೊಸತರಲ್ಲಿ ನನ್ನನ್ನು ಬೆನ್ನಿಗೆ ಕಟ್ಟಿಕೊಂಡು ಇಡೀ ಬೆಂಗಳೂರು ಸುತ್ತಿಸಿದವರು ಅವರು.ಒಮ್ಮೆ ಅವರನ್ನೂ ನಾನು ಧಾರವಾಡಕ್ಕೆ ಕರೆದುಕೊಂಡು ಹೋಗಬೇಕು ಅಂದು ಕೊಂಡದ್ದು ಎಷ್ಟು ಬಾರಿಯೋ!!! ಆದರೆ ಕಾಲ ಕೂಡಿ ಬಂದಿರಲೇ ಇಲ್ಲ.ಆದರೆ ನೋಡಿ, ಈಗಲೂ ನನ್ನನ್ನು ಅವರೇ ಧಾರವಾಡಕ್ಕೆ ಕರೆದುಕೊಂಡು ಬಂದ ವರು ಅವರು ಇರುವುದೇ ಹಾಗೆ!!!ಎಂದಿಗೂ/ಎಂದೆಂದಿಗೂ ಅವರದು
ಕೊಡುವ ಕೈ...ಬೇಡುವುದಲ್ಲ.ಅವರ ಅಣ್ಣ ಡಾ, ಚಿತ್ತರಂಜನ ಭಟ್ಟ ಅವರ ಸ್ಮೃತಿನಮನ ಕಾರ್ಯಕ್ರಮವೊಂದನ್ನು ಧಾರವಾಡದ ಶ್ರೀ ಆಲೂರು ವೆಂಕಟ ರಾವ್ ಸಭಾ ಭವನದಲ್ಲಿ ಹಮ್ಮಿಕೊಳ್ಳ ಲಾಗಿದ್ದು ಅದರಲ್ಲಿ ಭಾಗವಹಿಸುವ ಅವಕಾಶ ಈ ಬಾರಿ ನನ್ನದಾಗಿದೆ.ಈ ಮೂರುದಿನಗಳ ಪ್ರವಾಸ ನಮ್ಮಿಬ್ಬರ ಹೊಸವರ್ಷದ ಮೊಟ್ಟ ಮೊದಲ ಕಾರ್ಯಕ್ರಮವಾದದ್ದಲ್ಲದೇ ಅಂದೇ ರಾಮಲಲ್ಲಾ ಪ್ರತಿಷ್ಠಾಪನವಾಗುತ್ತಿರು ವುದೂ ಹಾಗೂ ಅವರ ಹುಟ್ಟುಹಬ್ಬ ದಂದು ಅದರೊಂದಿಗೆ ನಾನೂ ಜೊತೆ ಗಿರುವಂತಾದುದೂ ಅದೃಷ್ಟವೆಂದೇ ಹೇಳಬೇಕು.ದೇಶಾದ್ಯಂತದ ಈ ದಿನದ ಸರ್ವಮಂಗಲಮಯ ವಾತಾವರಣ ಶಾಲಿನಿಯವರ ಬದುಕಿನಲ್ಲೂ ಸುಖ - ಸಂತಸ ತುಂಬಿ ತರಲಿ ಎಂಬ ಹಾರೈಕೆ ಯೊಂದಿಗೆ ಒಂದು ಸ್ನೇಹಾಲಿಂಗನ ಅವರಿಗೆ...
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶಾಲಿನಿ...ಸದಾಕಾಲ ಸುಖಿಯಾಗಿರಿ...ಖುಶಿಖುಶಿಯಾಗಿರಿ...
No comments:
Post a Comment