ಧಾರವಾಡದ ನಮ್ಮನೆ ಒಂದು
ಚಿಕ್ಕ ವಾಡೆಯಂತಿತ್ತು.' ಮೂಡಲಮನೆ'
ಧಾರಾವಾಹಿಯ ' ಶಾಸ್ತ್ರಿಯವರ ಮನೆ'
ಯಂತೆ.ನಾವಿಬ್ಬರು/ಮೂರು ಮಕ್ಕಳಿಗೆ
ತುಂಬಾನೇ ದೊಡ್ಡದು.ಹೀಗಾಗಿ ಅದನ್ನು ಸುಸ್ಥಿತಿಯಲ್ಲಿಡಲಾದರೂ ಅರ್ಧ ಭಾಗ ಬಾಡಿಗೆಗೆ ಕೊಡುವುದು
ಅನಿವಾರ್ಯವಾಗಿತ್ತು.ಆಗಾಗ ಬಾಡಿಗೆ ಯವರು transfer ಆದರೆ ಮತ್ತೆ ಹೊಸಬರ ಹುಡುಕಾಟ.ಹೀಗೇ ಒಮ್ಮೆ
ಖಾಲಿ ಆದಾಗ ಒಂದು ಕುಟುಂಬ ಮನೆ ನೋಡಿ ಒಪ್ಪಿಕೊಂಡು ಹೋದದ್ದೂ ಆಯಿತು.ಅಜ್ಜ ಅಜ್ಜಿ/ಗಂಡ - ಹೆಂಡತಿ
ಮೂವರು ಗಂಡುಮಕ್ಕಳು, ಒಟ್ಟು ಏಳು ಜನ.ಬರುತ್ತೇವೆಂದು ಹೇಳಿ ಹೋದವರು ಹದಿನೈದು ದಿನವಾದರೂ
ಮನೆ ಕಡೆ ಹಾಯದಿದ್ದಾಗ ಕೊನೆಯ
ಎಚ್ಚರಿಕೆ ನಮ್ಮಿಂದ ರವಾನೆಯಾಯಿತು.
ಒಂದು ವಾರದಲ್ಲಿ ಆ ಕುಟುಂಬ
ನಮ್ಮನೆಗೆ ಬಂತು.ಎಲ್ಲ ಸರಿಯಿತ್ತು. ಅಜ್ಜಿ ಮಾತ್ರ ಜೀವವಿಲ್ಲದಂತೆ ತುಂಬ
ಉದಾಸರಾಗಿ,ಮಾತು/ನಗು ಎಲ್ಲ ಮರೆತವರಂತೆ ಯಾವುದೋ ಕಡೆ ದೃಷ್ಟಿ
ನೆಟ್ಟು ಮೌನಕ್ಕೆ ಜಾರಿರುತ್ತಿದ್ದರು.ನನಗೆ
ಅಚ್ಚರಿ, ಆತಂಕ.ಅವರ ಸೊಸೆಯನ್ನು
ಕೇಳಿದೆ." ನಾವು ಐವತ್ತು ವರ್ಷಗಳಿಂದ ಒಂದೇ ಮನೆಯಲ್ಲಿ ಇದ್ದೆವು.ಈಗ ಮಾಲಿಕರ ಒತ್ತಾಯಕ್ಕೆ ಬಿಡಬೇಕಾಗಿ ಬಂತು.ಅವರಿಗೆ ವಯಸ್ಸಾಗಿದೆ.ಹೊರಗೆ
ಹೋಗುವುದು ಕಡಿಮೆ.ಆ ಮನೆ ಒಗ್ಗಿ ಹೋಗಿತ್ತು.ಇಲ್ಲಿಗೆ ಬರಲು ಸುತರಾಂ
ಒಪ್ಪಲೇಯಿಲ್ಲ.ಅದಕ್ಕೇ ನಮಗೂ ಇಷ್ಟು
ತಡವಾದದ್ದು"- ಅಂದರು.ತುಂಬಾನೇ
ಒಳ್ಳೆಯ ಜನ...
ಅವರು ಮೊದಲಿದ್ದುದು ಗಾಂಧಿಚೌಕ್ ಬಳಿ.ನಮ್ಮದು ಹೊಸ ಯಲ್ಲಾಪುರ.ಹಾಗೇ ಮುಂದೆ ಹೋದರೆ ಹೊಸಯಲ್ಲಾಪುರ ಸ್ಮಶಾನ." ನನ್ನನ್ನು
ಅರ್ಧದಾರಿಗೆ ತಂದು ಬಿಟ್ಟಿದ್ದಾನೆ ಮಗ. ಅವನಿಗೇನೋ ಸರಾಗವಾಯಿತು. ಆಯುಷ್ಯ ಮುಗಿಯುವವರೆಗೆ ನಾನು
ಹೇಗೆ ದಿನ ಕಳೆಯಲಿ? ಎಂದು ಗೋಳಾಡುವುದನ್ನು ಕಂಡಾಗ ನನಗೆ
ಗಾಬರಿ...ಅದೇನು psycho- Physical problemಓ ಎರಡು ಮೂರು ತಿಂಗಳು ಮರುಗಿ ಜೀವ ಬಿಟ್ಟು ಅಂದುಕೊಂಡ ಹಾಗೆಯೇ ಸ್ಮಶಾನ ಸೇರಿದ್ದು ಮಾತ್ರ ಅರಗಿಸಿಕೊಳ್ಳ ಲಾಗಲೇ ಇಲ್ಲ...
ಯಾರೇ ಆಗಲಿ ಒಂದು ಜಾಗದ ವಾತಾವರಣಕ್ಕೆ ಹೊಂದಿಕೊಂಡು Comfort Zone ಒಂದನ್ನು ತಮ್ಮದು ಅಂದುಕೊಂಡ ಮೇಲೆ ಅದರಿಂದ ದೂರವಾಗುವಾಗ ನೊಂದುಕೊಳ್ಳು ವುದು ಅತ್ಯಂತ ಸಾಮಾನ್ಯವಾದ ಸಂಗತಿ.ಅದೇ ಕಾರಣಕ್ಕೇನೆ ವರ್ಗವಾಗುವ ಜನರು ಒದ್ದಾಡುವುದು.
ಆದರೆ ಅದನ್ನೊಂದು ವ್ಯಸನವಾಗುವ
ಮಟ್ಟಿಗೆ ಹಚ್ಚಿಕೊಳ್ಳವುದು ಮಾತ್ರ
ಆಶ್ಚರ್ಯಕರ ಹಾಗೂ ಆತಂತಕರ...
ಇದೆಲ್ಲ ಈಗೇಕೆ ನೆನಪಾಯಿತೆಂದರೆ ನಾವು ಸಧ್ಯಕ್ಕೆ
ನಾಲ್ಕನೇ ಮನೆ ಬದಲಾಯಿಸುವ
ಪರಿಸ್ಥಿತಿ ಬಂದಿದೆ. ಯಾವುದೂ ಬಾಡಿಗೆ
ಮನೆಗಳಲ್ಲ, ಸ್ವಂತದ್ದೇ...ಒಂದು ಕಾಲಕ್ಕೆ
ಮನೆಯ ಜನ/ಅವರ office ಗಳು/
ಮಕ್ಕಳ ಶಾಲೆ/ಆಟ- ಹವ್ಯಾಸ/ಅಭ್ಯಾಸ ಕ್ಕೆ( JEE- CET ಯಂಥ) ಅವಶ್ಯಕತೆ ಗಳಿಗನುಸಾರವಾಗಿ ಸಾರಿಗೆಯ ಶ್ರಮ/
ಮುಖ್ಯವಾಗಿ ತಗಲುವ ಸಮಯ/ ಅನಾವಶ್ಯಕ ಖರ್ಚು- ವೆಚ್ಚ/ಎಲ್ಲದಕ್ಕೂ
ಹೆಚ್ಚಾಗಿ ಕುಟುಂಬ ಸದಸ್ಯರು ಒಬ್ಬರಿ
ಗೊಬ್ಬರು ಸಮಯಕೊಡಲಾಗದಷ್ಟು
ವ್ಯಸ್ತರಾಗುವುದು - ಇವಕ್ಕೆಲ್ಲ ಏಕೈಕ
ಪರಿಹಾರವೆಂದರೆ ಎಲ್ಲರಿಗೂ ಸಮೀಪವಾಗುವಂತೆ ಒಂದು ಮನೆ ಹುಡುಕುವುದು...ನಾವು ಮಾಡಬೇಕೆಂದದ್ದೂ ಅದೇ!!! ಅಂಥ
ಸಮಯದಲ್ಲಿ priority ಬೇರೇನೇ ಆಗಿರುತ್ತದೆ.ನಾಳೆ ಮಕ್ಕಳು settle ಆಗಿ
ನೌಕರಿಗಾಗಿ ಎಲ್ಲಿ ಹೋಗಬೇಕಾಗುತ್ತದೆ
ಬಲ್ಲವರಾರು!?ಆಗಲಾದರೂ ಬೇಕಾದಾಗ/ಬೇಕಾದಂತೆ ಬದಲಾಗು ವುದು ಅನಿವಾರ್ಯವಷ್ಟೇ ಅಲ್ಲ ಅತಿ
ಅವಶ್ಯಕವೆನಿಸಿಬಿಡುತ್ತದೆ.
ಏಕೆಂದರೆ finally ನಾವೆಲ್ಲಾ ಒಪ್ಪಿಕೊಳ್ಳಬೇಕಾದ ಸತ್ಯವೊಂದಿದೆ...
"ಅಲ್ಲಿರುವುದು ನಮ್ಮನೆ...
ಇಲ್ಲಿರುವುದು ಸುಮ್ಮನೇ..."
No comments:
Post a Comment