ಸತ್ತಿರುತ್ತೇವೆ...
ಆಯಿತು, ಧಾರವಾಡದಿಂದ ಬಂದಾಯ್ತು.ತಡವಾಗಿತ್ತು ಅಂತ ಶಾಲಿನಿ ಮನೆಯಲ್ಲೇ ಉಳಿದುಕೊಂಡೆ. ಮರುದಿನ ನಸುಕಿನಲ್ಲಿ ಎದ್ದು ಒಂದು ಕಪ್ ಕಾಫಿ/ಬಿಸ್ಕತ್ನೊಂದಿಗೆ ಬೆಳಗಿನ ಶುಭಾರಂಭ/ ಒಂದಿಷ್ಟು ಉದ್ದೇಶ ರಹಿತ free lance ಹರಟೆ ಮುಗಿದು
ನನಗಾಗಿ ಆಟೋ book ಆಯಿತು.
Bye- bye ಆಗಿ ಆಟೋ ಹೊರಟೂ ಆಯಿತು.ಹತ್ತು- ಹದಿನೈದು ನಿಮಿಷಗಳ ಷ್ಟೇ...ಹೋಗುತ್ತಿರುವ ಹಾದಿ ಎಂದೂ
ನೋಡಿದ ನೆನಪಿಲ್ಲ,ಒಂಚೂರೂ ಪರಿಚಿತ ಅನಿಸಲಿಲ್ಲ.ಆಟೋ driver ಕಡೆ ನೋಡಿದೆ,ದಿವ್ಯ ತಾದಾತ್ಮ್ಯದಿಂದ
ಆಟೋ ಓಡಿಸುತ್ತಿದ್ದ.ನೋಡಲು ಪೊಗದಸ್ತು ಮೀಸೆ- ಗಡ್ಡ,ರಗಡಾ look,
ರಿಕ್ಷಾದಲ್ಲಿ ಇನ್ನೊಬ್ಬರಿದ್ದಾರೆ ಎಂಬ ಕಿಂಚಿತ್ ಗಮನವೂ ಇರಲಿಲ್ಲ.ನಾನೇ ಕೇಳಿದೆ," ಇದೇನು ಹೊಸ ದಾರಿ? ಎಂದೂ ನೋಡಿಲ್ಲ?"" ಹೌದು ಮ್ಯಾಡಮ್,ಇದು ಇನ್ನೊಂದು ಹೊಸ ಒಳದಾರಿ". ಅಲ್ಲ, ಮಾಮೂಲಿ ರಸ್ತೆ
ಯಾಕೆ ಹಿಡಿಯಲಿಲ್ಲ?" Time ಜಾಸ್ತಿ ಹಿಡಿಯುತ್ತೆ/ತುಂಬಾ traffic"-ಅಂತ. ಚುಟುಕಾಗಿ ಹೇಳಿದ.ನಡುನಡುವೆ ಯಾರ್ಯಾರದೋ ಫೋನ್..." ಹೂ ಹೇಳು,ಅಂತ ಸಾಕೇತಿಕ ಸಂಭಾಷಣೆ. 'ಹೂ- ಊಹೂ - ಸರಿ- ಮಾಡ್ತೇನಿ- ಹೇಳ್ತೇನಿ ಅಂತ ಏನೇನೋ ಚುಟುಕು
ಉತ್ತರಗಳು.ನನಗೆ ಇನ್ನಷ್ಟು ಭಯ... ರಿಕ್ಷಾ ಎಲ್ಲೆಲ್ಲೋ ಸುತ್ತು ಹಾಕುತ್ತಿದೆ. ಪೂರ್ತಿ ಊರ ಹೊರಭಾಗ- ಗಲೀಜು- ರಸ್ತೆಗುಂಟ plastic ರಾಶಿ- ಜನಗಳ ಸಂಚಾರವಿಲ್ಲ, ಹೃದಯ ಬಡಿತ ಹೆಚ್ಚಾಯ್ತು.ಕೈ/ಕೊರಳು ಸೀರೆಯಿಂದ ಮುಚ್ಚಿಕೊಂಡೆ. ಸುಳ್ಳು ಸುಳ್ಳೆ ಅವರಿವರಿಗೆ ಫೋನ್ ಮಾಡಿದಂತೆ
ನಟಿಸಿದೆ.ಕೆಲಸಕ್ಕೆ ಬಾರದ ಭಯ- ಆತಂಕ ಸುರುವಾಯ್ತು...ಟೀವಿಗಳಲ್ಲಿ
ನೋಡಿದ/ಸುದ್ದಿಗಳಲ್ಲಿ ಕೇಳಿದ ಹಳೆಯ
ಘಟನೆಗಳೆಲ್ಲ ಬೇಡವೆಂದಷ್ಟೂ ಕಣ್ಣುಗಳ ಮುಂದೆ..."ಅವನೋ ಹಕ್ಕಿಯ ಕುತ್ತಿಗೆಯನ್ನೇ ನೋಡಿ ಬಾಣ ಗುರಿಯಿಟ್ಟ ದ್ರೋಣಾಚಾರ್ಯರ ಶಿಷ್ಯ
ಅರ್ಜುನನಂತೆ ತಲ್ಲೀನನಾಗಿದ್ದ. ಇಷ್ಟಾದರೂ ರಿಕ್ಷಾ ಊರ ಹೊರಬದಿ ಯ ರಸ್ತೆಗುಂಟ ಸಾಗುತ್ತ ನನ್ನ ಭಯ ಹೆಚ್ಚಿಸುತ್ತಿತ್ತು.ಏನೂ ಮಾಡುವ ಹಾಗಿರಲಿಲ್ಲ,ಕೇಳುವ ಹಾಗಿರಲಿಲ್ಲ,
ಭಯ ತೋರಿಸುವ ಹಾಗಿರಲಿಲ್ಲ.ಸ್ವಲ್ಪು
ಹೊತ್ತು ಕಳೆಯುತ್ತಲೇಎಲ್ಲೋ ಏನೋ
ಈ ಮೊದಲು ನೋಡಿದಂತೆನಿಸತೊಡಗಿ
ಒಂದು ನಿರಾಳತೆಯ ಭಾವ ಬಂದು
ಕೊಂಚ ಮುಖದ ನೆರಿಗೆಗಳು ಸಡಿಲವಾದವು.ದೂರದಲ್ಲಿ ಅಜ್ಮೇರಾದ
ಎತ್ತರದ ಕಟ್ಟಡಗಳು ಕಾಣತೊಡಗಿದ ವು." ಇದೇ gate ಅಲ್ವಾ ಮೇಡಂ"- ಅಂದ ರಿಕ್ಷಾವಾಲಾ ಜಗತ್ತಿನ ಅತಿ ಸಭ್ಯ,
ಅತಿ ಸಜ್ಜನ, ಅತ್ಯಂತ ಪರಿಚಿತ- ಆತ್ಮೀಯ ವ್ಯಕ್ತಿ ಎನಿಸತೊಡಗಿತು. ಮನೆ ಬಂದು ನಿಧಾನವಾಗಿ ನಿಲ್ಲಿಸಿ, ಕೈಯಲ್ಲಿ ನನ್ನೆಲ್ಲ bag ಗಳನ್ನು ಹಿಡಿದು
ಬಾಗಿಲವರೆಗೆ ನನ್ನನ್ನು ಬಿಟ್ಟಾಗ ಅವನ ಒಳ್ಳೆತನಕ್ಕೆ ಖುಶಿಯಾಯ್ತೋ,ನನ್ನ ಭಯ ನಿವಾರಣೆಯಾಗಿ ನೆಮ್ಮದಿ ಅನಿಸಿತೋ
ನನಗೇ ಗೊಂದಲವಾಯ್ತು.ಮೀಟರ್ ಪ್ರಕಾರ ಹಣ ಕೊಟ್ಟಾಗ ಬೆಳಗಿನ ಸವಾರಿಯಾದ್ದರಿಂದ ಚಿಲ್ಲರೆ ಇಲ್ಲ ಮ್ಯಾಡಮ್ ಅಂದಾಗ,ಊರಗಲ ಬಾಯ್ತೆರೆದು ನಕ್ಕು ಹೇಳಿದೆ," ಇರಲಿ ಬಿಡಿ -" ಖುಶಿಖುಶಿಯಾಗಿ ಆಟೋ ತಿರುಗಿಸಿಕೊಂಡು ನಮಸ್ಕರಿಸಿ ಹೊರಟು ಹೋದ...
ನಿಜ-Cowards die many a times before their deaths- ಅನಿಸಿತು.ನನ್ನ ಅಂಜುಬುರುಕುತನಕ್ಕೆ
ನಾಚಿಕೆ ಅನಿಸಿದರೂ ಎಂದೋ ಓದಿದ/ಕೇಳಿದ ಸುದ್ದಿಗಳಿಂದ ಇಂಥದೊಂದು ಹೆದರಿಕೆ ಸಹಜವೇ ಎಂದು ನನ್ನನ್ನು ನಾನೇ ಸಮರ್ಥಿಸಿ ಕೊಳ್ಳುತ್ತ ಮನೆಯೊಳಗೆ ಹೊಕ್ಕೆ...
No comments:
Post a Comment