Saturday, 16 November 2024

          ಬದುಕಿನ ಏರಿಳಿತಗಳೂ ನಮ್ಮ ಮನಸ್ಸನ್ನು ನಿಯಂತ್ರಿಸುವ ಬಲ ಪಡೆದಿರುತ್ತವೆ.ವಯೋಸಹಜ
ಆರೋಗ್ಯ ಸಮಸ್ಯೆಗಳೂ ಅಡಚಣಿ ಗಳಾಗುತ್ತವೆ.ಹುಮ್ಮಸನ್ನು ಹದತಪ್ಪಿಸುತ್ತವೆ...ಇಂಥ ಪರಿಸ್ಥಿತಿಯಲ್ಲಿ
ಯಾವ ಕೆಲಸವೂ ಗತಿಪಡೆಯುವುದಿಲ್ಲ
               ನನಗೂ ಅದೇ ಆಗಿತ್ತು. ಒಂದು ಪುಸ್ತಕ ಬರೆದು print ಗೆ ಕಳುಹಿಸಿ ಬಹಳ ದಿನಗಳಾಗಿದ್ದವು. ಎಲ್ಲಿಗೆ ಬಂತು? ಎಂದೂ ಕೇಳಿರಲಿಲ್ಲ.
ನಿನ್ನೆ ಏಕಾಏಕಿ ನೆನಪಿಗೆ ಬಂದು ಕೇಳಿದೆ.
"Printing ಕೆಲಸ ಸ್ವಲ್ಪಮಟ್ಟಿಗೆ slow ಆಗಿತ್ತು.ಈಗ ನಿಮ್ಮದೇ ಪುಸ್ತಕ ಮಾಡುತ್ತೇವೆ"- ಎಂದು ಹದಿನೈದು ನಿಮಿಷಗಳಲ್ಲಿ ಈ ' ಮುಖಪುಟ ವಿನ್ಯಾಸ' ಕಳಿಸಿಕೊಟ್ಟರು.ಎರಡು ಮೂರು ವಾರಗಳಲ್ಲಿ ನಿಮ್ಮ ಕೈಯಲ್ಲಿರುತ್ತದೆ ಎಂದು ಆಶ್ವಾಸನೆಯನ್ನೂ ಕೊಟ್ಟರು...
       ‌‌‌    ‌ ಹೇಗಿದ್ದರೂ ವರ್ಷ ಮುಗಿಯಲು ಬರುತ್ತಿದೆ.ಒಂದೇ ತಿಂಗಳು.ಹೊಸ ವರ್ಷವೇ ಆದರೆ ಇನ್ನೂ ಚನ್ನ ಎಂದುಕೊಂಡೆ.
                 So, ನಾನೀಗ ಒಂದು ಹೊಸ ನಿರೀಕ್ಷೆಯಲ್ಲಿದ್ದೇನೆ.ಡಿಸೆಂಬರ್
ದಲ್ಲಿ ನನ್ನ ಆರನೇಯ/ ಬಹುಶಃ ಕೊನೆಯ ಪುಸ್ತಕವೊಂದು ಬಂದುಬಿಟ್ಟರೆ ಕೆಲದಿನಗಳವರೆಗಾದ ರೂ ಒಂದಿಷ್ಟು ಹೊಸತು ಕಂಡೀತು...
          ಆ ದಿನ ಬೇಗ ಬರಲಿ...

No comments:

Post a Comment

             ಯಾಕೋ -ಇಂದು Mood ಸ್ವಲ್ಪ ನಿಮ್ನವಾಗಿದೆ.ದಿನದ ಸಹಜತೆಯಿಲ್ಲ... ಯಾವುದನ್ನೂ ಹಿಡಿಯುತ್ತಿಲ್ಲ...ನಾಲ್ಕು ದಿನಗಳ ಕಾಲ ಹಬ್ಬಗಳ ಸಾಲು ಸಾಲು... ಫೋನಗಳಲ್ಲಿ ...