Thursday, 28 November 2024

Anxiety...

ಇತ್ತೀಚೆಗೆ ನನಗೊಬ್ಬರು ಕೇಳಿದರು,-
"Anxiety" ಅಂದರೇನು? "

ನಾನು ಹೇಳಿದೆ,"
"ಯಾವಾಗ ಆಗಬೇಕಾದ ಕೆಲಸವೊಂದು ತಡವಾಗುತ್ತಲೇ ಹೋಗುತ್ತದೋ,
ಅದರ ಫಲ ದೊರೆಯಲು ಹೆಚ್ಚು,
ಹೆಚ್ಚು ಕಾಯುವಂತಾಗುತ್ತದೋ,
ಮುಚ್ಚಿದ ಕಂಗಳಲ್ಲಿ ಕನಸುಗಳು ಅರಳುವದಿಲ್ಲವೋ,
ಮನೆಯಲ್ಲಿ ನನ್ನ ' ಅಸ್ತಿತ್ವ'
ಲೆಕ್ಕಕ್ಕೇ ಬರುವದಿಲ್ಲವೋ,
ಏಕಾಕಿತನ ಹಿಂಸಿಸುತ್ತದೋ,
ನಮ್ಮ ಮೌನ ಇತರರಿಗೆ ಅರ್ಥ
ಆಗುವುದೇ ಇಲ್ಲವೋ,
ಹೊರಗೆಲ್ಲ ಸರಿಯೇ ಅನಿಸಿದರೂ
ಒಳಗೊಳಗೆ ಅಸಹಾಯಕತೆ,
ಆಕ್ರೋಶ, ನಿಟ್ಟುಸಿರು, ಚೀತ್ಕಾರ 
ಏನೆಲ್ಲಾ ಗುಳೆಗಟ್ಟುತ್ತವೆಯೋ...
ಹೊರಗೂ ಬರಲಾರದೇ ಉಸಿರುಗಟ್ಟಿಸುತ್ತವೆಯೋ,
ಆಗ
ಹೃದಯದಿಂದ ಒಳಹರಿವ ರಕ್ತನಾಳಗಳಲ್ಲಿ ಭೀತಿಯೊಂದು
ಮಡುಗಟ್ಟುತ್ತದೆ... 
ನರನರವೂ ಕೂಗಿ ಕೂಗಿ ಹೇಳುತ್ತದೆ,
'ಮನಸ್ಸಿಗೆ ನೆಮ್ಮದಿಯಿಲ್ಲ'-ಎಂದು.
ಈ ಭಾವವೇ 
Anxiety_

No comments:

Post a Comment

Smt. Veena Nayak  Flat no 402, 4th floor  Presidency Crown Court Apts, C.G.Kamath Road, Karagalapady, Mangalore 575003 Mobile: 7760774037