ಹಾಗೇ ಹೇಳುತ್ತಲೇ ಇರುತ್ತೇವೆ,
ನಾಳೆ/ಇನ್ನೊಮ್ಮೆ ಎಂದಾದರೂ/
ಮುಂದಿನ ವರ್ಷ/ಮುಂದೆ ನೋಡೋಣ, ಹೀಗೇ...
ಒಂದೇ ಒಂದು ಬಾರಿ ಈ
ಶಬ್ದಗಳ ಪೊಳ್ಳುತನ ನೋಡು,
ನಿನ್ನ ಸೂರ್ಯ ದಿನಾಲೂ
ಪಶ್ಚಿಮದಲ್ಲಿ ಇಳಿಯುತ್ತಿದ್ದಾನೆ,
ನೀನು ಮತ್ತೊಂದು ವರ್ಷದ
ಮಾತನಾಡುತ್ತಿದ್ದೀಯಾ...
ನಿನ್ನ ಕ್ಯಾಲೆಂಡರ್ ದಲ್ಲಿ ಅನೇಕ
ಮಾಸ/ವರ್ಷಗಳು ಬಾಕಿ ಇರಬಹುದು-
ನಿನ್ನ ಅವ್ವನವು ಬಹಳಷ್ಟು ಕಳೆದುಹೋಗಿವೆ...
ನಿನ್ನನ್ನು 'ಬಂಗಾರ- ಬಂಗಾರ' ಅನ್ನುತ್ತಲೇ ಕೂದಲು 'ಬೆಳ್ಳಿ'ಯಾಗಿವೆ...
ಮುಂದಿನ ವರ್ಷ ಏನೋ! ಕಂಡವರಾರು?
ನಾಳೆಯೇ ಅವಳೊಡನೆ ಒಂದು
ದಿನ ಕಳೆ,
ಆಗ ಅವಳ ಕಂಗಳ ಮಿಂಚನ್ನೊಮ್ಮೆ ನೋಡು...
ಅದಾವ ' ದೀಪಾವಳಿ'ಗೆ ಕಡಿಮೆ
ಹೇಳು!!!...
ಅಮ್ಮ 'ಬಣ್ಣ ಬದಲಿಸುವಲ್ಲೂ
ನಿಪುಣೆ'-
ನೀನು ಉದಾಸಳಾದರೆ ಗೆಳತಿಯಂತೆ,
ತಪ್ಪು ಮಾಡಿದರೆ ಅಪ್ಪನಂತೆ,
ಹೆದರಿದರೆ ಹಿರಿಯಣ್ಣನಂತೆ, ನಿಲ್ಲುತ್ತಾಳೆ...
ಇದವಳಿಗೆ ಹೇಗೆ ಸಾಧ್ಯ?
ನನಗಚ್ಚರಿ...
' ಅಮ್ಮ' ಎಲ್ಲ ಸಂಬಂಧಗಳನ್ನೂ
ನಿಭಾಯಿಸಬಲ್ಲಳು...
ಆದರೆ ಎಲ್ಲ ಸಂಬಂಧಗಳು
ಒಟ್ಟಾದರೂ ಅವಳನ್ನು ಇನಿತೂ
ಸರಿಗಟ್ಟಲಾಗದು...
ಹೇಳುತ್ತಾರೆ,
"ಅಲ್ಲೆಲ್ಲೋ ಒಂದು ಸ್ವರ್ಗಲೋಕವಿದೆಯಂತೆ,
ಹಾಲಿನ ಹೊಳೆ ಹರಿಯುತ್ತದಂತೆ,
ಯಕ್ಷಿಣಿಯರಿರುತ್ತಾರಂತೆ,
ಅಲ್ಲಿ ನೋವಿಲ್ಲ,ದುಃಖವಿಲ್ಲ...
ಸಂತೋಷಕ್ಕೆ ಮಿತಿಯಿಲ್ಲ,
ಹರ್ಷಕ್ಕೆ' ಸರಹದ್ದು' ಇಲ್ಲ.
ಅಲ್ಲಿ ಹಗಲಿಗಿಂತ ರಾತ್ರಿಗಳಲ್ಲಿ
ಹೆಚ್ಚು ಬೆಳಕಿರುತ್ತದೆ"...
ಹಾಗೆ...ಹೀಗೆ...
ಇದೆಲ್ಲ ಯಾರೋ ಹೇಳಿದ/ ಕೇಳಿದ
ಮಾತುಗಳು...
ಅದನ್ನು ನಂಬಲೇ ಬೇಕಿಲ್ಲ-
ಆಕಾಶದಲ್ಲೆಲ್ಲೋ ಸ್ವರ್ಗ ಹುಡುಕಬೇಕಿಲ್ಲ...
ಪಕ್ಕದ ಅಮ್ಮನ ಕೋಣೆಯಲ್ಲಿ
ಇಣುಕು...
ಅಲ್ಲೇ 'ಸ್ವರ್ಗ'ವಿದೆ...
No comments:
Post a Comment