Tuesday, 31 December 2024

        ಮತ್ತೊಂದು ವರ್ಷ ನಿರ್ಗಮನದ ಹಾದಿಯಲ್ಲಿದೆ- 
             
         ಹಲವಾರು ನಿರೀಕ್ಷೆಗಳಲ್ಲಿ ಕೆಲವಕ್ಕೆ ತೆರೆದುಕೊಂಡು,ಉಳಿದವು ಗಳನ್ನು ಬಾಕಿ ಇರುವ ಲಿಸ್ಟಗೆ ಸೇರಿಸಿ...
      ‌‌‌    ಅದು ಗ್ರಾಹ್ಯವೇ! ಎಲ್ಲವೂ ಕೈಯಳವಿನಲ್ಲಿ ಇರದೇನೇ ನಾವು
ಇಷ್ಟೊಂದು ಚಿಗುರಿದ್ದೇವೆ! ಎಲ್ಲವೂ
ನಾವಂದಂತೆಯೇ ಆಗಿಬಿಟ್ಟರೆ!!! ಊಹಿಸಲೂ ಆಗದ ಪರಿಧಿ...
                ಈ ವರ್ಷವೇ ನಾವು ಹೊಸಮನೆಗೆ ಬಂದದ್ದು...ಇನ್ನೂ ಹೊಸದಾಗಿಯೇ ಇದೆ ಸುತ್ತಲಿನ ವಾತಾವರಣ.ನಾವೂ ನಮ್ಮದೇ ಆದ
ಜಗತ್ತಿನಲ್ಲಿ ಮಗ್ನ...ಒಳಗೊಳ್ಳುವಿಕೆ ಅಷ್ಟಾಗಿ ಇಲ್ಲ...ಆದರೂ ನನಗೆ ಈಗ
ಇಂಥದೇ ಬೇಕಿತ್ತೇನೋ ಅಂದುಕೊಂಡ
ದ್ದಲ್ಲದೇ ನನ್ನದೊಂದು ಬಾಲ್ಕನಿಯಿಂದ ಲೇ ಹೊರಜಗತ್ತಿಗೆ ಅಂಟಿದ್ದೇನೆ.ಚಟು
ವಟಿಕೆಗಳ ವೇಗ ತಗ್ಗಿದೆ.ಅದಕ್ಕೆ ವಯಸ್ಸೋ/ ಮನಸ್ಸೋ/ಸಹಜ ಇಳುವರಿಕೆಯೋ- ಕಾರಣ ಗೊತ್ತಿಲ್ಲ,
ಗೊತ್ತಾಗುವುದೂ ಬೇಡ."ನೀ ಇಟ್ಟಲ್ಲಿ
ಇಟ್ಟ ಹಾಗಿರು"- ಎಂದು ಮನಸ್ಸಿಗೆ
ಸದಾ ಬೋಧಿಸುತ್ತೇನೆ.
              ನನ್ನದು ಎಂದಿಗೂ ಅತಿ ನಿರೀಕ್ಷೆ ಏನಿಲ್ಲ...ಅಂದುಕೊಂಡದ್ದು ಆದರೆ ಒಳ್ಳೆಯದು- ಇಲ್ಲವಾ- ಇನ್ನೂ
ಒಳ್ಳೆಯದು, God is in the HEAVEN, and all is RIGHT with the world...ನನಗೇನು ಬೇಕು
ಅವನಿಗಲ್ಲದೇ ಇನ್ನಾರಿಗೆ ಗೊತ್ತಿರಲು
ಸಾಧ್ಯ???
             ಸಧ್ಯದಲ್ಲೇ ಎಂಬತ್ತಕ್ಕೆ ಕಾಲಿಡುತ್ತೇನೆ.ಮನುಷ್ಯನ ಸರಾಸರಿ
ವಯಸ್ಸು 76 ವರ್ಷಗಳಂತೆ.ಅದು
ಹೌದಾದರೆ ಮೂರು ವರ್ಷ ಹೆಚ್ಚೇ ಮುಂದಿದ್ದೇನೆ...ಏನು ಬೇಡಲಿ ನಿನ್ನ ಬಳಿಗೆ ಬಂದು??
         ‌     ಒಂದೇ ಒಂದು ಹಳಹಳಿ...
ಮೊಮ್ಮಕ್ಕಳೆಲ್ಲ ದೊಡ್ಡವರಾಗಿದ್ದಾರೆ. ಮೂವರು ಗೂಡು ಬಿಟ್ಟು ಹಾರಿದ್ದಾರೆ.
ಉಳಿದ ಮೂವರು ತಮ್ಮತಮ್ಮ ಗುರಿ
ನಿರತರು...ಅವರ ಕಂಪನಿ miss ಮಾಡಿಕೊಳ್ಳುತ್ತಿದ್ದೇನೆ...ನೆಂಟರು ಬೇಕೆಂದರೆ ಅಕ್ಕಿಯ ಮೇಲಿನ ಪ್ರೀತಿ
ಬಿಡಬೇಕು...ಪ್ರಯತ್ನದಲ್ಲಿದ್ದೇನೆ.
               ನಾಳೆಯೇ ಹೊಸವರುಷ... 
ಅದು ಹೇಗೋ/ ಏನೋ/ ಕಾದು ನೋಡೋಣ...ಬೇಕಾಗಲಿ/ ಬೇಡವಾಗಲಿ/ನಮಗೆ ದಕ್ಕುವದೆಲ್ಲ ನಮ್ಮದೇ...

      Happy New Year to All...

   

No comments:

Post a Comment

        ಧಾರವಾಡದಲ್ಲಿ ಇಂದಿಗೆ ಹತ್ತು  ದಿನ ಕಳೆದವು. ಈ ಸಲ ಅದರ ಬಗ್ಗೆ ಬರೆಯಲು ತುಂಬಾನೆ ನೋವು ಹಾಗೂ ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ......