Sunday, 29 December 2024

ಶ್ರೀವತ್ಸ ಜೋಶಿ ಸರ್,
           ನಮಸ್ಕಾರಗಳು...
           ನಿಮಗೆ ನೆನಪಿದೆಯಾ, ನನ್ನ ಮೊದಲನೇ ಪುಸ್ತಕ ' ನೀರ ಮೇಲೆ ಅಲೆಯ ಉಂಗುರ' ಕ್ಕೆ ಪುಟ್ಟದಾದ ಮುನ್ನಡಿಯ ವಿನಂತಿ  ಮಾಡಿಕೊಂಡಿದ್ದೆ ನಿಮ್ಮಲ್ಲಿ."ಕಳಿಸಿಕೊಡಿ, ನೋಡುತ್ತೇನೆ" ಅಂದಿರಿ.ಕಳಿಸಿದೆ, ಕಾದೆ.ನೀವು ಅದನ್ನು ಕಳಿಸಿದಾಗ ಅದು ಮುನ್ನುಡಿಯಾಗಿ ರಲಿಲ್ಲ, ಡಿಸೆಂಬರ್ -೨೯ - 2019- ರವಿವಾರದ ವಿಶ್ವವಾಣಿ ಪತ್ರಿಕೆಯಲ್ಲಿ ' ತಿಳಿರು ತೋರಣ'ದ ಅಮೋಘ ಅಂಕಣವಾಗಿ ಮುದ್ರಿತವಾಗಿತ್ತು.
ಅದನ್ನು ನೋಡಿದಾಗ ನನಗಾದ ಅಚ್ಚರಿ/ ಆನಂದ, ಈ ಐದು ವರ್ಷಗಳ ನಂತರವೂ ಅಂದರೆ ಇಂದಿಗೂ ಹಚ್ಚ ಹಸಿರಾಗಿದೆ.ನನ್ನ ಪುಸ್ತಕಕ್ಕೆ ಹೊಸದೊಂದು ಆಯಾಮ ಕೊಟ್ಟು,ಅದನ್ನು ಜನಕ್ಕೆ ಪರಿಚಯಿಸಿದ
ರೀತಿಗೆ ಸಿಕ್ಕ ಬೆಲೆಯಂದರೆ ಅದು ಮುದ್ರಣವಾಗಿ ಕೈಗೆ ಬರುವ ವೇಳೆಗೆ
ನೂರಾರು order ಬರಲು ಪ್ರಾರಂಭ ವಾದವು.ಅದರ ಹಣ ಸಾರ್ವಜನಿಕ
ಉದ್ದೇಶಕ್ಕೆ ಎಂದು ಮೊದಲೇ announce ಮಾಡಿದ್ದರಿಂದ ನನಗೆ ಖುಶಿ/ ಹಣ ಇಮ್ಮಡಿಯಾಗಿ ದೊರೆತು
ಅಂದುಕೊಂಡದ್ದನ್ನು ಮಾಡಿ ಮುಗಿಸಿದ್ದರಲ್ಲಿ ನಿಮ್ಮ ಪಾತ್ರವೇ ಹೆಚ್ಚು.
ನಂತರದಲ್ಲೂ ಆ ಹುಮ್ಮಸು/ಹುರುಪು
ನನ್ನಿಂದ ಮತ್ತೆ ನಾಲ್ಕು ಪುಸ್ತಕಗಳನ್ನು
ಬರೆಯಲು ಪ್ರೇರೇಪಿಸಿದ್ದು ಬೋನಸ್. ಪುಸ್ತಕಗಳು ಏನು? ಹೇಗೆ? ಏಕೆ?- ಅನ್ನುವುದಕ್ಕಿಂತಲೂ  ಕೋವಿಡ್ನಿಂದಾಗಿ
ಎರಡು ವರ್ಷಗಳ ಕಾಲ ಭಯ ಹುಟ್ಟಿಸಿ
ಎಲ್ಲರನ್ನೂ ಗ್ರಹಬಂಧನದಲ್ಲಿರಿಸಿದಾಗ
ಮೌಲ್ಯಯುತವಾಗಿ ಹೊತ್ತು ಕಳೆಯಲು
ಅನುಕೂಲವಾದದ್ದೂ ಹೌದು...
           ‌ ಈಗ ನನ್ನ ಐದನೆಯ ಪುಸ್ತಕ
" ಹಾಯಿ ದೋಣಿಯ ಪಯಣ'- ಮುದ್ರಣಗೊಂಡು ಬಂದಿದೆ.ಇನ್ನು ಬಹುಶಃ ಬರೆಯುವುದಿಲ್ಲ.75 ರಿಂದ ಐದು ವರ್ಷಗಳ ಬದುಕು ಸುಂದರ ವಾಗಿ ಕಳೆದು ಹೋಗಿದ್ದಕ್ಕೆ ನಿಮ್ಮ ಐದುವರ್ಷಗಳ ಹಿಂದಿನ 'ತಿಳಿರು ತೋರಣ'ವೇ ಕಾರಣ.ಇನ್ನೇನಿದ್ದರೂ
ಆದಷ್ಟು...ಆದಾಗ...ಆದರೆ...ಮಾತ್ರ.

A big thank you Joshi Sir...


No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...