Saturday 31 December 2022

 ಭಾವ- ಋಣ...
   
        ಯಾವುದೇ ವಿಚಾರವೊಂದು ತಲೆಯಲ್ಲಿ  ಬೀಜಾಂಕುರವಾಗಿ ಆಕಾರಗೊಂಡು ಎರಡೂ ಬೊಗಸೆಗಳ ತುಂಬಾ ದಕ್ಕುವದೆಂದರೆ ಅದೂ ಒಂದು 'ಪ್ರಸವ' ಸಮಾನ ಕೆಲಸವೇ...

"ಗಂಡಸಿಗೆ ಪ್ರಸವ ವೇದನೆ  
ಇಲ್ಲ ಎಂದವರಾರು?
ಕವಿಗಳನ್ನೊಮ್ಮೆ ಕೇಳಿನೋಡಿ"-

ಇದು ನಾನು ಹಿಂದೊಮ್ಮೆ ಓದಿ
ಮೆಚ್ಚಿಕೊಂಡ ಒಂದು ಹನಿಗವನ.( ಯಾರದು ನೆನಪಿಲ್ಲ)ಈ ಪ್ರಕ್ರಿಯೆಯಲ್ಲಿ
ಅನೇಕರ ಆಶಯ, ಆಶೀರ್ವಾದ, ಅನುಗ್ರಹಗಳು ನೇಪಥ್ಯದಲ್ಲಿ ಕೆಲಸ ಮಾಡಿರುತ್ತವೆ.ಒಂದು ಹೆಸರು/ ಒಂದು ಯಾದಿ ಕೊಟ್ಟು  ಋಣ ತೀರಿಸುವ ಮಾತಲ್ಲ ಇದು.ಅಂತೆಯೇ ಇವು ನೇರ ಅನುವಾದಿತ ಕವನಗಳಲ್ಲದಿದ್ದರೂ ಅನೇಕ ಹೆಸರಾಂತ / ಕೆಲವೊಮ್ಮೆ ಹೆಸರು ಸಹ ತಿಳಿಯದ ಕವಿಗಳ ಕವನಗಳ ಎಳೆಯನ್ನು ಹಿಡಿದು ನಮ್ಮ ಭಾಷೆ/ ಸಂಸ್ಕೃತಿಗೆ ಅನುವಾಗುವಂತೆ
ಹೊಂದಿಸಿಕೊಂಡು ರೂಪಾಂತರ ಮಾಡಿದ ಕವನಗಳು.ಇದಕ್ಕೆ ಕಾರಣ ಆ ಕವಿತೆಗಳ ಬಗೆಗಿನ ನನ್ನ ಸೆಳೆತ, ಅವುಗಳಲ್ಲಿದ್ದ ಸಂದೇಶಗಳೇ ಹೊರತು ಬೇರೆ ಏನೂ ಇಲ್ಲ. ಅದಕ್ಕೆಂದೇ ಇವು ' ಭಾವ- ಋಣ'- ಕವಿತೆಗಳು...
            ನನ್ನೀ ಕಾರ್ಯದಲ್ಲಿ ಅನೇಕರು
ಅನೇಕ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ. ತಮಿಳು- ಕನ್ನಡ ಭಾಷೆಗಳ ಅನುವಾದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹೆಸರು ಶ್ರೀ
K. ನಲ್ಲತಂಬಿಯವರದು. ನಾನು ಅವರನ್ನು ಒಂದೆರಡು ಸಲ ಭೇಟಿಯಾಗಿದ್ದರೂ ಸಾಹಿತ್ಯ ವಿಷಯಕ್ಕೆ
ಸಂಬಂಧಿಸಿ ಚರ್ಚೆಯಾದದ್ದಿಲ್ಲ. ಆದರೂ ನನ್ನ ಒಂದೇ ಒಂದು ವಿನಂತಿಗೆ
ಮನ್ನಣೆಯಿತ್ತು ,ಕವನಗಳನ್ನು ಓದಿ, ಸೂಕ್ತ ಸಲಹೆಗಳನ್ನು ಕೊಟ್ಟು ಅವುಗಳ ಬಗೆಗೆ ತಮ್ಮ ಅಭಿಪ್ರಾಯ ತಿಳಿಸಿದ ಅವರ ಉಪಕಾರ ಎಂದಿಗೂ ಸಹ ಮರೆಯದಂಥದು. ಒಮ್ಮೆ ಅದರ ಪ್ರತಿ
ಕೈ ಸೇರಿದ ಕೂಡಲೇ ಮುನ್ನುಡಿಗಾಗಿ ಹಿರಿಯ ಕನ್ನಡ ಲೇಖಕಿ ಶ್ರೀಮತಿ ಜಯಶ್ರೀ ದೇಶಪಾಂಡೆಯವರನ್ನು ವಿನಂತಿಸಿಕೊಂಡಾಗ ನನ್ನ ಆತ್ಯಂತ ಆತ್ಮೀಯ ಗೆಳತಿಯಾದ ಅವರೂ ಸಹ ಹೇಳಿದ ಸಮಯಕ್ಕೆ ಮುಂಚಿತ ವಾಗಿಯೇ ಮುನ್ನುಡಿ ಕೈ ಸೇರುವಂತೆ ನೋಡಿಕೊಂಡರು.  ಪುಸ್ತಕದ   ಮುಖ ಪುಟದ ಜವಾಬ್ದಾರಿ ರಾಷ್ಟ್ರೀಯ/ಅಂತರ್ ರಾಷ್ಟ್ರೀಯ ಮಟ್ಟದ ಖ್ಯಾತ ಕಲಾಕಾರ ಚಿತ್ರಮಿತ್ರ ಅವರದು.ಅವರ ಕುಂಚ ನನ್ನ ಕಲ್ಪನೆಯನ್ನೂ ಮೀರಿ ಕೆಲಸ ಮಾಡಿ ನನ್ನ ಸಂಕಲನದ  ಆಶಯವನ್ನು ಶಬ್ದಗಳ ಹಂಗೇ ಇಲ್ಲದೇ, ಬರಿಯ ನೋಟಮಾತ್ರದಿಂದ ಗ್ರಹಿಸುವ ಷ್ಟರ ಮಟ್ಟಿಗೆ ಸಶಕ್ತಗೊಳಸಿದ್ದಾರೆ. ಇದಕ್ಕೆಲ್ಲ ಕುಂದಣವಿಟ್ಟಂತೆ ಕೊನೆಯ ಪುಟವನ್ನು ತಮ್ಮ ಅನಿಸಿಕೆಗಳ ಮೂಲಕವೇ ಬೆನ್ನುಡಿಯಾಗಿ ಅಂದಗೊಳಿಸಿದ ಶ್ರೀಮತಿ ಕಿರಣ ರಾಜನಹಳ್ಳಿಯವರದು ಬಹುಶ್ರುತ 
ಹೆಸರು.ಚಿಕ್ಕ ವಯಸ್ಸಿನಿಂದಲೇ ಹಿರಿಯ ಸಾಧನೆಮಾಡಿ ಕರ್ನಾಟಕ ಸೇರಿದಂತೆ
ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಈ ಸಮಸ್ತ ಹಿರಿಯರ ಸಹಾಯ- ಸಹಕಾರ ಗಳಿಂದ ಇಂದು ನನ್ನ ಕನಸಿನ ಪುಸ್ತಕ ವೊಂದು ಪ್ರಕಟಗೊಳ್ಳುತ್ತಿದೆ.ಈ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. 
            ನನ್ನ ನಾಲ್ಕನೇ ಪುಸ್ತಕ  "ತುಂತುರು... ಇದು ನೀರ ಹಾಡು"- ಇದನ್ನು ಈ ಮೊದಲೇ ಅಂದವಾಗಿ ಮುದ್ರಿಸಿ ಕೊಟ್ಟ "ಮಹಿಮಾ ಪ್ರಕಾಶನ"ದ- ಮಾಲಿಕ ಶ್ರೀ ಶ್ರೀನಿವಾಸ ಅವರು ನನ್ನ ಈ ಪುಸ್ತಕದ ಮುದ್ರಣದ
ಹೊಣೆ ಹೊತ್ತು ಅಂದವಾಗಿ ಮುದ್ರಿಸಿ
ಸರಿಯಾದ ವೇಳೆಗೆ ನನ್ನ ಕೈಸೇರುವಂತೆ ಮಾಡಿದ್ದಾರೆ.
            ‌ಅಂದಮೇಲೆ ಈ ಪುಸ್ತಕದ ಶ್ರೇಯಸ್ಸು ಈ ಎಲ್ಲರಿಗೂ ಸಲ್ಲಲೇ ಬೇಕಾದ್ದು ನ್ಯಾಯ. ಅವರೆಲ್ಲರಿಗೂ ಮನಸಾ ವಂದಿಸಿ ಪುಸ್ತಕವನ್ನು ನಿಮ್ಮೆಲ್ಲರ ಓದಿಗಾಗಿ ಒದಗಿಸುತ್ತಿದ್ದೇನೆ.
   ‌    ಮತ್ತೊಮ್ಮೆ ಪ್ರತ್ಯಕ್ಷವಾಗಿ/ ಪರೋಕ್ಷವಾಗಿ ನನಗೆ ಈ ಕೆಲಸದಲ್ಲಿ ಸಹಕರಿಸಿದ ಎಲ್ಲರಿಗೂ ಹೃದಯಾಳದ 
ಕೃತಜ್ಞತೆಗಳು...
           ಇನ್ನೊಮ್ಮೆ, ಮತ್ತೊಮ್ಮೆ, ಮಗದೊಮ್ಮೆ ನನ್ನ ಹೃತ್ಪೂರ್ವಕ ನಮನಗಳು...




Saturday 10 December 2022

ಬದುಕೊಂದು ಬಹುರೂಪ ದರ್ಶಕ...

      ಎರಡು ದಿನ ಮೈಸೂರಿನಲ್ಲಿ ಮಗಳ
 ನೂತನ ಮನೆಯ ಗ್ರಹಪ್ರವೇಶವಿತ್ತು.
ತಿಂಗಳಿಗೂ ಮೀರಿ ಕಾಡುತ್ತಿದ್ದ ಬೆನ್ನು ನೋವು/ ಅಲರ್ಜಿ ಕೆಮ್ಮಿನಿಂದಾಗಿ
ನನ್ನ ಪಾತ್ರ ಕೇವಲ ಒಂದೆಡೆಗೆ ಕೂತು
ನೋಡಿ ಖುಶಿಪಡುವದಕ್ಕೆ ಸೀಮಿತವಾಗಿತ್ತು.ನಂತರ ಗೊತ್ತಾದದ್ದು
ನಾನೇ ಎಲ್ಲಕ್ಕಿಂತಲೂ ಹೆಚ್ಚು ಫಲಾನುಭವಿ ಎಂದು.
         ‌       ಒಳಗೊಳ್ಳುವಿಕೆ ಇಲ್ಲದೇ ದೂರದಲ್ಲಿ ನಿಂತು ಏನೋ ಒಂದನ್ನು
ನೋಡಿ ಅನುಭವಿಸುವದರ ಮೋಜು
ನನಗೆ ಪ್ರತಿಶತ ನೂರರಷ್ಟು ಸಿಕ್ಕದ್ದು ಈ ಸಲದ ವಿಶೇಷ.
                ತೊಂಬತ್ತರ ವಯಸ್ಸಿನವರು
/ ಅಥವಾ ಅದಕ್ಕೆ ಸಮೀಪವಿದ್ದವರ
ಗುಂಪೊಂದು ಒಂದೆಡೆ ಕೂತು ತಮ್ಮ ಕಾಲದ/ ಈ ಕಾಲದ  ಸ್ಥಿತ್ಯಂತರಗಳ
ತುಲನೆಯಲ್ಲಿ ತೊಡಗಿಕೊಂಡು ಅದರ
ಮೌಲ್ಯಮಾಪನ ನಡೆಸಿ ಲಾಭಾಲಾಭದ
ಸರಿದೂಗಿಸುವಿಕೆಯಲ್ಲಿ ತಲ್ಲೀನರಾಗಿದ್ರೆ
' ಎರಡು+' ವಯಸ್ಸಿನ ಮಕ್ಕಳ ಪಾಲಕರ ಥಕ ಥೈ- ನೋಡುಗರಿಗೆ ಹಬ್ಬ.
ಗೊತ್ತುಗುರಿಯಿಲ್ಲದೆ ತಮ್ಮಷ್ಟಕ್ಕೆ ತಾವೇ ಅಲ್ಲಿಲ್ಲಿ ಓಡಾಡಿಕೊಂಡು / ಆಟ ಗಳಲ್ಲಿದ್ದರೂ ಆತಂಕ, ಏನೋ ಮಾಡಿಕೊಂಡು ಒಮ್ಮೆಲೇ ಅಳಲು ಸುರುವಾದರೂ ಆತಂಕ.ಅಮ್ಮ/ ಅಪ್ಪ/ ಅಜ್ಜ- ಅಜ್ಜಿಯರ ಭಾಗದೌಡು...
           ‌‌"ಅದು ತನ್ನಿ, ಇದು ಮಾಡಿ-"
ಇಂಥ ಸಣ್ಣ- ಪುಟ್ಟ ಸುಗ್ರೀವಾಜ್ಞೆ ಪಾಲಿಸುವ ಯುವ ಪಡೆ ಒಂದು ಕಡೆಯಾದರೆ, " ಕಾಫಿ ಬೇಕಾ? ಟೀ ಬೇಕಾ? ಶುಗರ್ ಇರಲಿಯಾ?/ ಬೇಡವಾ? ಗಳನ್ನು ಕೇಳಿಕೊಂಡು ಕೂತಲ್ಲೇ ಒದಗಿಸುತ್ತಿರುವ ಅಡುಗೆ ಯವರ ಸಹಾಯಕರ ರಂಗ ಪ್ರವೇಶ 
ಮಧ್ಯೆ ಮಧ್ಯೆ...ನಿರಂತರವಾಗಿ ಬರುತ್ತಿರುವ ಆಮಂತ್ರಿತರು ಯಾರ ಕಡೆಯವರು? ಮನೆ ಜನರ ಕಡೆಯಿಂದ ಮನೆಗೇ ಬಂದವರಾ, ಈಗ ಮಾತ್ರ ಕಾರ್ಯಕ್ರಮಕ್ಕೆ ಬಂದವರಾ? ತಿಳಿಯದೇ ಒಂದು ರೀತಿಯಲ್ಲಿ ಕಂಗಾಲಾದರೂ ದೇಶಾವರಿಯ ನಗೆ ನಕ್ಕು ಪರಿಸ್ಥಿತಿ ಸಂಭಾಳಿಸುವ ಹೊಣೆಗಾರಿಕೆ ಹೊತ್ತ ಸ್ವಾಗತಕಾರರ
ಪುಟ್ಟದೊಂದು ತಾಕಲಾಟ...ಏನೋ ಗಟ್ಟಿಯಾದದ್ದೊಂದು ಮಾಡಲಾಗದೇ/ ಹಾಗೇ ಸುಮ್ಮನೇ ಕೂಡಲೂ ಮುಜುಗರ ಪಡುವ ಕೆಲ ಸಹೃದಯ
ಮಧ್ಯವಯಸ್ಕರ ಗುರಿಯಿಲ್ಲದ ಅತ್ತಿಂದಿತ್ತ/ ಇತ್ತಿಂದತ್ತ ನಡೆದ ಪಥ ಸಂಚಲನ, ಸದ್ದು ಗದ್ದಲವಿಲ್ಲದೇ,ಒಂದು ಕಪ್ ಚಹವನ್ನೂ ಕುಡಿಯದೇ ದುಡಿಯಲೇ ಹುಟ್ಟಿದಂತಿದ್ದವರ 'ಪರೋಪಕಾರಾರ್ಥಂ ಇದಂ ಶರೀರಮ್'- ಗುಂಪು ಒಂದು ಕಡೆಯಾದರೆ, ಹಾಕಿದ ಶಾಮಿಯಾನಾ
ದಲ್ಲಿ,ಯಾರಿಗೂ ತೊಂದರೆಯಾಗದಂತೆ
ಸ್ಥಳಹುಡುಕಿಕೊಂಡು ' ಕರೆದಾಗ ಒಂದು ನಗೆಯೊಂದಿಗೆ ತಟ್ಟನೇ ಹಾಜರಾಗಿ ಹೇಳಿದ ಕೆಲಸ ಮುಗಿಸಿ ಮತ್ತೆ ಮರಳಿ ಸುಖಾಸೀನರಾಗುವ ' ನಿರುಪದ್ರವಿಗಳ'
ನಿರಾಳದ ತಂಡದ್ದು ಇನ್ನೊಂದು ದೃಶ್ಯ.
            ‌‌‌‌‌‌ಇಡೀ ವಾತಾವರಣವನ್ನೇ
ಒಂದು ಸೂತ್ರದಿಂದ ಬಂಧಿಸಿ ರಾಜ-ಮಹಾರಾಜರ ವಂದಿ ಮಾಗಧರ ಕಂಚಿನ ಕಂಠದಲ್ಲಿ ಮಂತ್ರೋಚ್ಚಾರಣೆ
ಮಾಡುತ್ತ ಸದಭಿರುಚಿಯ ಸಜ್ಜನರನ್ನು
ಮಂತ್ರಮುಗ್ಧರಾಗಿಸುವ ಪುರೋಹಿತ ತಂಡದವರ ಸಮ್ಮೋಹಿನಿಯದೇ ಒಂದು ಸೆಳೆತವಾದರೆ, ಕ್ಷಣಕ್ಕೊಂದು ಹೊಸ ಸೀರೆಯುಟ್ಟು ಗುಂಪುಗುಂಪಾಗಿ
ಹಾಡು- ಕುಣಿತ/ ಮೋಜು- ಮಸ್ತಿ mood ಗಳಲ್ಲಿ ,ಫೋಟೋ sessions ಮಾಡುತ್ತ  ವಯಸ್ಸಿನ ಭೇದವನ್ನೇ ಸಂಪೂರ್ಣ ಮರೆತುಬಿಟ್ಟು ಸಂಭ್ರಮಿಸುತ್ತಿದ್ದ ಹೂಮನಸ್ಸಿನವರ
ಪಡೆ ,ನಮ್ಮಂತೆ ಒಂದೆಡೆ ಕುಳಿತು  
ಆನಂದ ಪಡೆಯುತ್ತಿದ್ದ ಗುಂಪಿಗೆ ಚೇತೋಹಾರಿ...
         ‌‌‌  ಏನೂಂತ ಹೇಳುತ್ತ ಹೋಗುವದು? ಬಿಚ್ಚಿದಷ್ಟೂ ತೆರೆದು ಕೊಳ್ಳುವ  ಸಡಗರ ನೋಡಿದ ಮೇಲೆ ಕೊನೆಗೆ ನನಗನಿಸಿದ್ದು ' ಅಸಂಖ್ಯಾತ ಸಂದರ್ಭಗಳಿಗೆ ಧಾರ್ಮಿಕ ದಿರಿಸು ತೊಡಿಸಿ, ಯಾವುದೋ ಕಾರಣ ಕೊಟ್ಟು
ಜನರನ್ನು ಒಗ್ಗೂಡಿಸಿ, ದಿನದ ಆಗು ಹೋಗುಗಳನ್ನು ಒಂದು ದಿನವಾದರೂ ಮೈಮರೆಸುವಂತೆ ಮಾಡಿ,
 ಸಾರ್ವಜನಿಕ ಬದುಕನ್ನು ಹದಗೊಳಿಸಿದ  ಹರಕಾರರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ...




     ‌‌ ‌      ‌


Wednesday 7 December 2022

Chandrala Parameshwari temple details..



ನಮ್ಮ ಕುಲದೇವರು ಶ್ರೀ ಚಂದ್ರಲಾಂಬ ಪರಮೇಶ್ವರಿ ಸನ್ನತಿ.

Dear All... anyone is interested to visit Shri kshetra Chandrala parameshwari temple Sannati.

Small helpfull brief.

From Bangalore-There are plenty of trains which goes to Mumbai ( Udyan Express,KK Express,Nanded Express n many more.you can book either Yadgir or Nalwar.

Nalwar is 20 KMS...you will get rickshaw @ for Rs 300 to 400/- for 3 seats...buses are quite few..so don't wait for bus.

Once you reach sannati.. directly go to office n get room for Rs 400/- with hot water facility.

Bheema river also backside of Temple,you can take bath there also on river bank.

Can take receipt for any puja which you desire... suppose if you willing to do SARWA SEVA..it will cost you Rs 1500/-which includes KUMKUM archanne,Pallakki Seva,lunch for 4 people.

Breakfast can be ordered in small hotel,just in infront of temple,which is customiesd..like Upma,Garam Avalakki or Susla { No onion,No Garlic).

Do offer Saree & complete puja items to Amma & take blessings,they will also in return give you Saree of Devi as a prasada
Please carry as much as  possible flower of all variety,as that place don't get flower.

Pallakki Seva will be evening by 7pm...So ideally stay over night...Dinner will be served by 8.30 to 9pm.

Next day you can proceed as per your planned scheduled.

Contact Pradhan Archak-Pawankumar Archak-9515228300 (Every 15 days they change the archak Seva duty)

Hope this breif might help any devotees who wants to visit.

Thank you .
'Gruha Bhojana'pure veg
Girinagar, Bangalore-560085
Ph-9108609944
ಅತೀ ಪರಿಚಯಾತ್...ಅವಜ್ಞಾತ್...
( familiarity breeds the contempt...)
       ‌ ‌‌‌
       ಅತ್ಯಂತ ರುಚಿಯಾದ, ಸ್ವಾದಿಷ್ಟ ಊಟ ಯಾವುದು? ಎಂಬ ಪ್ರಶ್ನೆಗೆ, "- ಅತಿ ಹಸಿದು/ಕಾದು ಉಣ್ಣಲು ಎತ್ತಿಕೊಂಡ ಮೊದಲ ತುತ್ತು-"ಇದು... ಖಂಡಿತಕ್ಕೂ ಹೌದು.ಇಲ್ಲದಿದ್ದರೆ,  -ತುಂಬಿದ ಹೊಟ್ಟೆಗೆ ಹುಗ್ಗಿ ಮುಳ್ಳು- ಅಂದಂತಾಗುತ್ತದೆ. ಸುಲಭದಲ್ಲಿ ಸಿಕ್ಕರೆ, demand ಗಿಂತಲೂ supply ಹೆಚ್ಚಾದರೆ ಅಸಡ್ಡೆ ಆಗುವದು ಸಹಜ.ಯಾವುದಕ್ಕೂ ಮೊದಲೊಂದು
ಇಚ್ಛೆ ಇರಬೇಕು, ಸುಲಭವಾಗಿ ಸಿಗುವಂತಿರಬಾರದು,ಕಾಡಿ, ಕಾಡಿಸಿ
ಲಭ್ಯವಾಗಬೇಕು.ಆಗ ಸಿಗುವ ರಾಜ ಮರ್ಯಾದೆಯೇ ಬೇರೆ.
                ಕೆಲ ದಿನಗಳಿಂದ ಈ ಮಾತು ಪದೇಪದೇ ನೆನಪಾಗುತ್ತಿದೆ.
ಎಲ್ಲದರಲ್ಲೂ...ಅಷ್ಟೇ ಏಕೆ face book ವಿಷಯಕ್ಕೂ...
                
  ‌‌‌       ನಾನು fb ಗೆ ಬಂದು ಹನ್ನೆರಡು ವರ್ಷಗಳಾದವು.ಮೊದಲ smart phone ನ್ನು ಚೊಚ್ಚಿಲ ಮಗುವನ್ನು ಎತ್ತಿಕೊಂಡಷ್ಟೇ ಪ್ರೀತಿಯಿಂದ ಕೈಯಲ್ಲಿ ಹಿಡಿದಿದ್ದೆ. ಮಕ್ಕಳು/ ಮೊಮ್ಮಕ್ಕಳು/ ನೆರೆಹೊರೆ ಯವರು/ ನನ್ನ ಹಳೆಯ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಎಲ್ಲರ ನೆರವಿನಿಂದ ದಿನಕ್ಕೊಂದು ಹೊಸ ವಿದ್ಯೆ ಕಲಿತೆ. ಚುಟುಕು ಪದ್ಯ/ ಹೃಸ್ವಕತೆಗಳು/ ಹಿಂದಿ,ಇಂಗ್ಷಿಷ ಅನುವಾದಗಳು/ ಸ್ವಂತ ರಚನೆಗಳು ಅಂತ post ಹಾಕಿದ್ದೇ ಹಾಕಿದ್ದು. ಹಗಲು- ರಾತ್ರಿಯ ಪರಿವೆಯಿಲ್ಲದೇ ಅತಿ ಪ್ರೀತಿಯಲ್ಲಿ ಹುಚ್ಚಾದ ಪ್ರೇಮಿಗಳ ಕತೆಯಾಯ್ತು ಕೆಲ ದಿನಗಳ ವರೆಗೆ...
   ‌‌‌‌        
          Likes/ comments ಖುಶಿ ಕೊಡುತ್ತಿದ್ದವು.' ಬರಹ ಚನ್ನಾಗಿದೆ ಅಂದರೆ ಏನೋ ಅಮಲು. ನಿಮ್ಮನ್ನು
Follow ಮಾಡ್ತೀನಿ ಅಂದುಬಿಟ್ಟರಂತೂ
ಸ್ವರ್ಗಕ್ಕೆ ಮೂರೇ ಮೊಳ ಅನಿಸುತ್ತಿತ್ತು. ಹೊತ್ತೇರಿದಂತೆ ಮತ್ತೇರಿದ ಅನುಭವ.
ಹಾಲು ಉಕ್ಕುತ್ತಿತ್ತು, ಕುಕ್ಕರ್ ಸೀಟಿಯ ಮೇಲೆ ಸೀಟಿಗಳಾಗುತ್ತಿದ್ದವು. Calling bell ಸ್ವಲ್ಪು ಹೊತ್ತು ಧ್ವನಿಮಾಡಿ ತಂತಾನೇ ಬಂದಾಗುತ್ತಿತ್ತು. ಊಟಕ್ಕೆ    ಕರೆದರೆ  'ಹಸಿವೆ ಇರುತ್ತಿರಲಿಲ್ಲ'- ಹೀಗೇನೇನೋ ಹಳವಂಡಗಳು...
  ‌‌‌‌        
        ವರ್ಷಗಳು ಉರುಳಿದಂತೆ ಎಲ್ಲ ಆರಂಭಕ್ಕೂ ಒಂದು ಅಂತ್ಯವಿದೆ ಎಂದು ಅರಿವಾಗತೊಡಗಿತು. ಒಮ್ಮೆಲೇ
ನಿಲ್ಲದಿದ್ದರೂ ವೇಗ ಕುಂಠಿತವಾಯಿತು. 
ಆಭ್ಯಾಸ ಮರೆಯಬಾರದು ಎಂದು
Post ಹಾಕಿದರೂ ಅದರಲ್ಲಿ ಮೊದಲ ಉತ್ಸಾಹ ಕಾಣುತ್ತಿಲ್ಲ.ಕಣ್ಣಿನ ತೊಂದರೆ
ಅದಕ್ಕೆ ಸಾಥ್ ಕೊಡುತ್ತಿದೆ.

   ‌‌‌‌      ಈಗಲೂ ಬರೆಯುತ್ತಿದ್ದರೂ ಓದುವದೇ  ಹೆಚ್ಚುಚ್ಚು ಹಿತವೆನಿಸುತ್ತಿದೆ.
ಅದೂ ಹೆಚ್ಚು ಸಾಧ್ಯವಾಗುತ್ತಿಲ್ಲ ಎಂಬ ಕೊರಗೂ ಕಾಡುತ್ತಿದೆಯಾ?- ಗೊತ್ತಿಲ್ಲ.
ಅಥವಾ ' ಅದೇ ಹಸಿವಿಲ್ಲದಾಗಿನ ಊಟವಾ? ಅರ್ಥವಾಗುತ್ತಿಲ್ಲ...
   

     ‌
   ‌‌



Monday 5 December 2022

 ಇಷ್ಟು  ಸಾಕೇ ಸಾಕು...

ಬದುಕಿನಲಿ ಏನೇ ಬರಲಿ,
ಹೃದಯವೆಷ್ಟೇ ಭಾರವಾಗಿರಲಿ,
ಸುತ್ತೆಲ್ಲ ಬರಿ ಕತ್ತಲೆ ಕವಿದಿರಲಿ,
ಒಂದು ಗಳಿಗೆ ಸಹಿಸಿದರೆ ಸಾಕು...

ಜಗವೆಲ್ಲ ವಿರೋಧಿಸಲಿ,
ಜನವೆಲ್ಲ ಎದುರಾಗಲಿ,
ಜಗದೀಶನ ದಯೆಯಿದೆ
ಎಂಬ ಭಾವವೊಂದು  ನನ್ನೆದೆ ತಂಪಾಗಿಸಲು ಸಾಕು...

ಮನಸಿಗೆ ಅನಿಸಿದ್ದನ್ನು 
ನಾನು ನಂಬುವವರೆಗೂ...
ಅದು ಸುತ್ತ ಕವಿದ ಕತ್ತಲನ್ನು ಕರಗಿಸುವವರೆಗೂ
ನನ್ನ ನಂಬುಗೆ/ವಿಶ್ವಾಸಗಳು 
ನನಗೆ ಸಾಕು...

ಅರಿವೊಂದು ನನ್ನ 
ಕೈ ಹಿಡಿವವರೆಗೂ...
ದೇವರು ಇದಕ್ಕೂ
ಕೊನೆ ಹಾಡುವ ನಂಬುಗೆ  ಇರುವವರೆಗೂ...
ಜೀವನದ ಸವಾಲುಗಳನ್ನೆಲ್ಲ
ಎದುರಿಸುವ ಛಾತಿ ನನ್ನದಾಗಿರುವವರೆಗೂ...
ಬದುಕಿನ ಏನೊಂದೂ
ನನ್ನ ಕೂದಲು ಸಹ ಕೊಂಕಿಸಲಾರದೆಂಬ
ಭಾವವೊಂದೇ ಸಾಕು...

ಕತ್ತಲೆಯ ಕೂಪದಲ್ಲೇ ಇರಲಿ...
ನನಗೆ ಭಯ ಹುಟ್ಟಿಸುವ 
ಗಾಢ ಸಂಚೇ ನಡೆದಿರಲಿ...
ಪ್ರತಿರಾತ್ರಿಗೂ ಒಂದು
ಬೆಳಗಿದೆ ಎಂಬ ಅರಿವು
ನನಗೆ ಸಾಕು...
All is well and wisely put...        
   ‌‌  
        ಒಂದು ಸೆಂಟಿಪೆಡ್ - ಶತಪದಿ 
ತನ್ನಷ್ಟಕ್ಕೆ ತಾನೇ ತೆವಳುತ್ತಾ ಮುನ್ನಡೆಯುತ್ತಿತ್ತು. ಒಂದು ಕಪ್ಪೆ ಅದನ್ನು ನೋಡಿತು, ನೋಡುತ್ತಲೇ ಇತ್ತು.ಅದಕ್ಕೋ ಗೊಂದಲ. ಎರಡು / ನಾಲ್ಕು ಕಾಲುಗಳುಳ್ಳವರೇ ಎಡವಿ/ ತಡವರಿಸಿ/ ಮುಗ್ಗರಸಿ ಬೀಳುವದುಂಟು.ಈ ಶತಪದಿ ನೂರು ಕಾಲುಗಳನ್ನಿಟ್ಟುಕೊಂಡು ಅದು ಹೇಗೆ
Confusion ಆಗದೇ ನಡೆಯುತ್ತಿದೆ. ಎಷ್ಟು ನೋಡಿದರೂ ಸಮಸ್ಯೆ ಬಗೆಹರಿಯದಾದಾಗ ಅದು ಶತಪದಿಯ ಬಳಿಗೇನೇ ಹೋಗಿ ಕೇಳಿತು," ನೀನು ಅದು ಹೇಗೆ  ನಡೆಯುವಾಗ ನೂರು ಕಾಲುಗಳನ್ನು ಸಂಭಾಳಿಸುತ್ತೀಯಾ? ಯಾವುದನ್ನು ಯಾವಾಗ ಇಡಬೇಕು ಎಂದು ಅದ್ಹೇಗೆ ನಿರ್ಧರಿಸುತ್ತೀಯಾ?- ಎಂದು. ಶತಪದಿಗೆ ನಡೆಯುವದಷ್ಟೇ ಗೊತ್ತು. ಹೇಗೆ ಎಂದು ಅದೆಂದೂ ಯೋಚಿಸಿದ್ದೇ ಇಲ್ಲ.ಈಗ ಅದಕ್ಕೆ ಗೊಂದಲ. ಉತ್ತರ ಹೊಳೆಯಲಿಲ್ಲ. ತಾನೇ ಪರೀಕ್ಷಿಸತೊಡಗಿತು, ಈಗ ಯಾವ ಕಾಲಿಟ್ಟೆ, ಮುಂದಿನದು ಯಾವುದು? ಅದರ ಲಕ್ಷ್ಯ( ಗಮನ )ಹಳಿ ತಪ್ಪಿತು. ಒಮ್ಮೆ ಆ ಕಡೆ ಒಮ್ಮೆ ಈ ಕಡೆ ಹೊಯ್ದಾಡಿ ಪಕ್ಕದ ಗುಂಡಿಯೊಳಗೆ ಬಿದ್ದೇ ಬಟ್ಟಿತು. 
              ‌
           ಇದು ನಮ್ಮದೂ ಕತೆ ಹೌದು.
ಯಾರೋ ಏನೋ  ತಮಗೆ ಬೇಕಾದದ್ದು
ತಮಗೆ ಬೇಕಾದ ವೇಗದಲ್ಲಿ/ರೀತಿಯಲ್ಲಿ
ತಮಗೆ ತಿಳಿದಂತೆ ಮಾಡುತ್ತಿರುತ್ತಾರೆ.
ಅದು ಚನ್ನಾಗಿಯೇ ನಡೆದಿರುತ್ತದೆ. ಅವರೂ ಅದರೊಂದಿಗೆ comfortable ಆಗಿಯೇ ಇರುತ್ತಾರೆ.
ಜಗತ್ತಿನಲ್ಲಿ ತನ್ನಷ್ಟಕ್ಕೆ ಎಲ್ಲವೂ 
ಹಗಲು/ ರಾತ್ರಿಯಂತೆ ತನ್ನ ಪಾಡಿಗೆ ನಡೆದಿರುತ್ತದೆ.ಆದರೆ ಅದನ್ನು ಸಹಿಸದ
ಕಪ್ಪೆಗಳಿಗೇನೂ ಬರವಿಲ್ಲ.ಸ್ವಭಾವ ದೋಷವೋ/ ಚಟವೋ/ ಸುಮ್ಮನೇ ಕೂಡಲಾಗದ್ದಕ್ಕೋ/ ಉದ್ದೇಶಪೂರ್ವಕವಾಗಿ ಮಾಡುವ ಕಿತಾಪತಿಯೋ/ ಅಥವಾ ಏನು ಮಾಡಿದರೆ ಪರಿಣಾಮ ಮುಂದೆ  ಏನಾಗಬಹುದು ತಿಳಿಯದ ಅಮಾಯಕತೆಯೋ/ ಉಂಡ ಅನ್ನ ಕರಗಲಾಗದ್ದಕ್ಕೋ/ ಬೇರೆ ಯಾವುದೇ ಕೆಲಸವಿಲ್ಲದ್ದಕ್ಕೋ ಅಂತೂ ಉಪದ್ವ್ಯಾಪ ಮಾಡಿ ಒಂದು ಕೊಕ್ಕೆ ಹಾಕಿಯೇ ಬಿಡುತ್ತಾರೆ. ಅದು ಕೆಲವರಿಗೆ
ನಿಭಾಯಿಸಿ ಗೊತ್ತಿದ್ದರೆ ಸರಿ. ಇಲ್ಲದಿದ್ದರೆ
ಮೊದಲೇ ಅನುಮಾನ/ ಆತ್ಮವಿಶ್ವಾಸ ದ ಕೊರತೆ/ ತಮ್ಮ ಬಗ್ಗೆ ತಮಗೇ  ಒಂದು ಗೊಂದಲವಿದ್ದು ಸ್ಪಷ್ಟತೆ ಇಲ್ಲದೇ ಇರುವವರಿಗೆ/ಬೇರೆಯವರ ಮಾತನ್ನು
ಎಷ್ಟು/ ಯಾವಾಗ/ ಪರಿಗಣಿಸಬೇಕು
ಎಂಬ ಅರಿವಿಲ್ಲದವರಿಗೆ ನೇರ ಗುರಿ ತಪ್ಪಿ, ವಿಚಲತೆಯಿಂದ /ಭ್ರಮೆಯಿಂದ
ದಾರಿ ತಪ್ಪಿದವರಾಗುತ್ತಾರೆ. ಪರಿಣಾಮ ವೆಂದೂ ಅಪೇಕ್ಷಿತವಾಗಿರುವದಿಲ್ಲ.
           ‌  
           ಇದರರ್ಥ ಒಂದು ಪ್ರಶ್ನೆ/ ಸಲಹೆ / ಮಾರ್ಗದರ್ಶನ ತಪ್ಪು ಎಂದಲ್ಲ. ಆದರೆ ಅದು ಅನವಶ್ಯಕ ಮೂಗು ತೂರಿಕೆಯಾಗದಂತೆ ಪುಟ್ಟದೊಂದು ಎಚ್ಚರಿಕೆ ಸದಾ ಇರಬೇಕು.ಆ ಇನ್ನೊಬ್ಬರಿಗೆ ಮಧ್ಯಪ್ರವೇಶ ಬೇಕಾ?ಬೇಕಿದ್ದರೆ ಯಾವಾಗ?ಅವರು ಅದನ್ನು
ಸ್ವೀಕರಿಸುವ ಮನಸ್ಥಿತಿ ಇದ್ದವರಾ? 
ಅದರ ಪರಿಣಾಮವೇನಾಗಬಹುದು?
ಇಂಥ ಚಿಕ್ಕ ಪುಟ್ಟ ಪ್ರಶ್ನೆಗಳನ್ನು ಸ್ವಂತಕ್ಕೆ ಒಮ್ಮೆ ಕೇಳಿಕೊಂಡು ಮುಂದುವರಿಯುವದು ಕ್ಷೇಮ...ಅಷ್ಟೇ...

 ‌‌    ‌ ‌‌‌    

Sunday 4 December 2022

   ‌‌‌    ಒಬ್ಬ ವ್ಯಕ್ತಿಯಿದ್ದ.ಅವನಿಗೆ ಮೈ ತುಂಬ ಬಟ್ಟೆ ಹಾಕ್ಕೊಂಡ್ರೆ ಏನೋ ಇರುಸು ಮುರಿಸು. ಹೀಗಾಗಿ ಎಲ್ಲೆ ಹೋದರೂ ಕನಿಷ್ಟತಮ ಬಟ್ಟೆಯಲ್ಲೇ ತಿರುಗುತ್ತಿದ್ದ. ಒಂದುಸಲ ಪರಿಚಯದ ವ್ಯಕ್ತಿಯೊಬ್ಬರು ," ಯಾಕಯ್ಯಾ, ಏನಿದು
ಅವತಾರ? ಹೊರಗಡೆಯಾದರೂ ಚಂದಾಗಿ dress ಮಾಡಿ ಅಡ್ಡಾಡಬಾರ್ದೇ"- ಅಂದರು.ಅವನು
ಹೇಳಿದ," ಎಂಥ ವಿಚಿತ್ರ ನೋಡಿ ಸಾರ್,
ನಾನೂ ನಿಮನ್ನು ಒಂದು ಪ್ರಶ್ನೆ  ಕೇಳ್ಬೇಕೂಂತಾನೇ ಇದ್ದೆ,ಅದೇಕೆ ಸಾರ್, ಸದಾ ಉಸಿರುಗಟ್ಟುವ ಹಾಗೇ ಮೈತುಂಬಾ ಬಟ್ಟೆ ಸುತ್ಗೋತೀರಾ? ಸ್ವಲ್ಪು ಸಡಿಲಾಗಿ ಎಷ್ಟು ಬೇಕು ಅಷ್ಟೇ
Dress ಮಾಡಿ ಹಾಯಾಗಿ ಉಸರಾಡ್ಕೊಂಡು ಇರ್ಬಾರ್ದಾ?"
ಎಂದು ಕೇಳಿದ...
              ‌ಯಾರದು ಸರಿ? ಯಾರದು
ತಪ್ಪು? ಅವರವರಿಗೆ ಅವರವರದೇ ಸರಿ. ಯಾಕೆಂದರೆ ಅವೆಲ್ಲ ವೈಯಕ್ತಿಕ
ನಿಲುವುಗಳು.ಆಚಾರ, ವಿಚಾರದಂತೆ
ಉಡುಪು ಸಹ ವ್ಯಕ್ತಿಗತ ವಿಷಯ. ನಮ್ಮ ಅಭಿಪ್ರಾಯ ಅಲ್ಲಿ ಅನಗತ್ಯ. ಹಾಗೆಯೇ ನಮ್ಮ ಅನಿಸಿಕೆಗಳು ನಮ್ಮವು.ಅವು ಇತರರಿಗೆ ಯಾವುದೇ ರೀತಿಯಲ್ಲಿ ಅಡ್ಡ ಪರಿಣಾಮವಾಗದಿದ್ರೆ  ಕೇಳುವ ಅವಶ್ಯಕತೆಯಿಲ್ಲ.
             " ಹೌದು, ಇದು ನನ್ನ ನಿಲುವು. ನಾನು ಅತಿ ಓದಿದವಳಲ್ಲ.ಯಾವುದೇ
'ಇಸಂ' ಗೆ ಸೇರಿದವಳಲ್ಲ.ಹೀಗೇ ಇರಬೇಕು ಎಂಬ ಹಟವಿಲ್ಲ. ಹೀಗೇ ಎಂದು ಹಟಹಿಡಿದು  ಸಾಧಿಸುವಷ್ಟು ಜ್ಞಾನ ಸಂಪಾದನೆಯೂ ನನ್ನದಲ್ಲ.ನನ್ನ
ಅರಿವಿಗೆ ಬಂದಷ್ಟು ಬರೆದುಕೊಂಡು, ತಿಳಿದಷ್ಟು ಅರಗಿಸಿಕೊಂಡು, ನನ್ನದೇ
ಒಂದು ಮಿತಿಯಲ್ಲಿ ಬದುಕುವದನ್ನು ಕಲಿತಿದ್ದೇನೆ.ಆದರೆ ನನ್ನ ಸ್ನೇಹಿತ ವರ್ಗ ತುಂಬ ವಿಶಾಲ ಹಾಗೂ ವೈವಿಧ್ಯಮಯ
ಎಲ್ಲನಮೂನೆಯ ಪ್ರತಿಭಾವಂತರಿದ್ದಾರೆ
ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಬೆಳೆದು ನಿಂತ ವರಿದ್ದಾರೆ.ಅದನ್ನು ಯಾವುದೇ  ಪೂರ್ವಾಗ್ರಹವಿಲ್ಲದೇ ಅನುಭವಿಸಿ
ಆನಂದಿಸುತ್ತೇನೆ.- ಎಂದೆಲ್ಲ ನನ್ನ ಮಟ್ಟಿಗೆ ನಾನು ಅಂದುಕೊಂಡದ್ದಿದೆ.
ಎಲ್ಲರನ್ನೂ ಮೀರಿದ ಅರಿವು ನನಗಿದೆ, ಪರವಾಗಿಲ್ಲ ಎಂಬುದೊಂದು ಸಣ್ಣ ಜಂಬವಿತ್ತಾ? ಗೊತ್ತಿಲ್ಲ.
      ‌‌‌         ತಿಳಿರು- ತೋರಣ ಮಾಲಿಕೆ ಯಲ್ಲಿ ಶ್ರೀವತ್ಸ ಜೋಶಿಯವರ ಇಂದಿನ ಕಂತು ಓದಿ, ಪ್ರತಿಕ್ರಿಯೆ ನೀಡಿ, ಆದಮೇಲೆ ಸಾಯಂಕಾಲ ಅವರದೇ ಒಂದು ಶತಾವಧಾನದ ಹಳೆಯ ವೀಡಿಯೋ ನೋಡಿ ಅದೇ ಗುಂಗಿನಲ್ಲಿದ್ದಾಗ ಜೋಶಿಯವರಿಗೆ ಧನ್ಯವಾದಗಳನ್ನು ಹೇಳಿದ ಶತಾವಧಾನಿ ಆರ್ ಗಣೇಶ್ ಅವರ ಧ್ವನಿಯ ಆಡಿಯೋ ಕೇಳಿದೆ.ನನ್ನ ಅಹಂ ನ ಬಲೂನಿಗೆ ಸೂಜಿ ಚುಚ್ಚಿದಂತಾಗಿ  ಚಪ್ಪಟೆಯಾದದ್ದು ಇನ್ನೂ ಸರಿಯಾಗಿಲ್ಲ...

       




Saturday 3 December 2022

ನಾನೂ ಧಾರವಾಡದಲ್ಲಿ ಅವರ ಅಷ್ಟಾವಧಾನ ಕಾರ್ಯಕ್ರಮಗಳನ್ನು ನೋಡಿದ್ದೇನೆ.ಒಂದಂತೂ ನಮ್ಮ school ನಲ್ಲೇ ಆಯೋಜಿತವಾಗಿತ್ತು. ಸಂಸ್ಕೃತದಲ್ಲಿ ನನಗೆ ಹೆಚ್ಚಿನ ಜ್ಞಾನ ವಿಲ್ಲದಿದ್ದರೂ ಯಾವುದೇ ಪದಗಳನ್ನು ಕ್ಷಣಾರ್ಧದಲ್ಲಿ ಹೊಂದಿಸಿ/ ಪೋಣಿಸಿ ಪದ್ಯ ರಚಿಸಿ ಹೇಳುವ ಅವರ ಜಾಣ್ಮೆಗೆ
ತೆರೆದ ಬಾಯಿ ಮುಚ್ಚದೇ ನೋಡುತ್ತಿದ್ದ ನೆನಪು.ಆ ಅಪ್ರಸ್ತುತ ಅಧಿಕ ಪ್ರಸಂಗಿಯ ತಲೆ- ಬುಡವಿಲ್ಲದ ಪ್ರಶ್ನೆಗಳಂತೂ ನಮ್ಮ ತಲೆಯನ್ನು ಗಿರಿಗಿರಿ ತಿರುಗಿಸಿಬಿಟ್ಟರೆ ಅವಧಾನಿಗಳು ಎಲ್ಲಿಂದಲೋ ಕೊಂಡಿ
ಸೃಷ್ಟಿಸಿ ಧಿಡೀರ್ ಉತ್ತರ ಕೊಡುತ್ತಿದ್ದರು
ರಘು ಅಪಾರವರ  ' ಚೌ- ಚೌಪದಿ- ಯಲ್ಲಿ ಎಲ್ಲಿಂದಲೋ ಹೆಕ್ಕಿ ತೆಗೆದ ನಾಲ್ಕು ಪದಗಳನ್ನು ಬಳಸಿ ಬರೆಯಬೇಕಾದ ಆಶು- ಕವನಗಳಿಗೆ 
ಇವರ ಅಷ್ಟಾವಧಾನ ನೋಡಿದ ಅನುಭವದ ಆಧಾರದ ಮೇಲೆಯೇ
 ಬರೆದ ಕವನಗಳನ್ನು ಅದೇ ಹೆಸರಿನಲ್ಲಿ
ಪ್ರಕಟಿಸಿದ್ದು ನನ್ನ ಮೊದಲ ಪ್ರಯತ್ನ...
ಇದೀಗ 'ಜ್ಞಾನ- ಗಣಿ'ಗಳು ಅರವತ್ತು ಸಂವತ್ಸರಗಳ ಒಂದು ಸುತ್ತು ಮುಗಿಸಿ
ಎರಡನೇ ಸುತ್ತು ಓಡಲು ಅಣಿಯಾಗಿದ್ದಾರೆ.ಅವರಿಗೆ ಆಯುರಾರೋಗ್ಯ/ ದೀರ್ಘಾಯುಷ್ಯ
ನೀಡಿ ವಿಶೇಷವಾಗಿ ಆಶೀರ್ವದಿಸಲು ಆ ದೇವರಲ್ಲಿ ಪ್ರಾರ್ಥನೆ...
            ನನಗೀಗ ಎಪ್ಪತ್ತೇಳು ವರ್ಷ. ನಡೆದು ಬಂದ ದಾರಿ ವೈವಿಧ್ಯಮಯ, ಹೊಸ ಹೊಸ ಪ್ರಯೋಗಗಳ ಹಂತ ಗಳನ್ನು ದಾಟಿ ಇಲ್ಲಿಯವರೆಗೆ ಬಂದದ್ದು. ಸೌದೆಯಿಂದ ಸೋಲಾರ್ ವರೆಗೆ, ಬಯಲು ಶೌಚದಿಂದ ಕಮೋಡ ವರೆಗೆ, ಸಾಲೆ ಗುಡಿಯಿಂದ ವಿಶ್ವವಿದ್ಯಾ ಲಯದ ವರೆಗೆ, ರಟ್ಟೀಹಳ್ಳಿಯಿಂದ 
ಒಂಬತ್ತು ದೇಶಗಳ‌ ಪರ್ಯಟನದ ವರೆಗೆ, ಕಚ್ಚೆ ಸೀರೆಯಿಂದ ಚೂಡಿ
ದಾರದ ವರೆಗೆ... List goes endless.
  ‌‌            ಆದರೆ ಈ ಬದುಕು ಎಲ್ಲರಿಗೂ ಏನನ್ನೋ ಕೊಡುತ್ತದಾದರೂ ಏನೋ ಒಂದನ್ನು ಕಸಿದುಕೊಂಡೇ ಕೊಡುತ್ತದೆ. ಹಣವಿದ್ದ ರೆ ಗುಣವಿಲ್ಲ.ಪ್ರತಿಭೆ ಇದ್ದರೆ ಬಡತನ, ಎರಡೂ ಇದ್ದರೆ ಆರೋಗ್ಯ ಸಮಸ್ಯೆ. ಎಲ್ಲ ನೆಟ್ಟಗಿದೆಯೋ ಮಕ್ಕಳು ಇಲ್ಲ ವೆಂಬ ಚಿಂತೆ. ಅಷ್ಟೇ ಆದರೆ  ಒಂದೇ ಸಮಸ್ಯೆ, ಇದ್ದರೆ ನೂರಾರು...ಹೀಗೇ...
  ‌‌‌‌           ಬಹುತೇಕ ಬದುಕಿಗಿರುವಷ್ಟು
ಉಪಮಾನ/ ಉಪಮೇಯಗಳು ಬೇರೆಯದಕ್ಕೆ ಇಲ್ಲವೇನೋ.  ಅದೊಂದು ಒಗಟು (ಪಹೇಲಿ) ಅನ್ನುವದರಿಂದ ಹಿಡಿದು ಬದುಕೊಂದು ಸಂಗ್ರಾಮ ಅನ್ನುವದರ ನಡುವೆ ನೀವು ಏನನ್ನೇ ಸೇರಿಸಿ, ಹೀರಿಕೊಳ್ಳುತ್ತದೆ, ಅಷ್ಟು ದೊಡ್ಡ ಒಡಲು ಅದಕ್ಕೆ...
                ‌  
     ‌‌        ಬಾಲ್ಯಕ್ಕೆ ಮುಗ್ಧತೆಯಿದೆ,
ಸಮಯವಿದೆ,ನಿಷ್ಕಲ್ಮಷ ಪ್ರೀತಿಯಿದೆ-ಜೊತೆಗೆ ಅಭ್ಯಾಸದ ಒತ್ತಡ, ಅನಾರೋಗ್ಯಕರ ಪೈಪೋಟಿ, ಮೊಬೈಲ್/ ಕಂಪ್ಯೂಟರ್ ಗಳ ಅಪರಿಮಿತ ಸೆಳೆತವಿದೆ... ಯೌವನಕ್ಕೆ ಶಕ್ತಿಯಿದೆ,ಕನಸಿನ ಹಾದಿಗಳಿವೆ, ವೇಗದ ಬದುಕಿನ ಒತ್ತಡವೂ ಇದೆ. ಹೀಗಾಗಿ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಬಹಳವಿದೆ. ಮುಪ್ಪಿಗೆ ವಿಶ್ರಾಂತಿಯಿದೆ, ಮಕ್ಕಳ ಭಾಗ್ಯವಿದೆ,ಆದರೆ ನೆಮ್ಮದಿಯ
ಖಚಿತತೆ ಕಡಿಮೆ...
              ಇಷ್ಟೆಲ್ಲ ಪುರಾಣಕ್ಕೂ ಒಂದು ಹಿನ್ನೆಲೆಯಿದೆ.ಬೆಳಿಗ್ಗೆ ಸೋನೂ ವೇಣುಗೋಪಾಲ ಅವಳ ವೀಡಿಯೋ ಒಂದು ನೋಡಿದೆ.
        
        " ಬದುಕು ರಾಜಾಜಿನಗರವಿದ್ದಂತೆ" - ಒಂದು ಬದಿ 'ನವರಂಗ'- ಇನ್ನೊಂದು ಬದಿ ' ಹರಿಶ್ಚಂದ್ರ ಘಾಟ್ '- ಅಂದಳು.
ಹಸಿಗೋಡೆಗೆ ಹರಳು ಒಗೆದಂತೆ ನೆಟ್ಟಿತು.ಅದರ ಬಗ್ಗೆಯೇ ವಿಚಾರ ಲಹರಿ ಹರಿದಾಗ ಹೊರಬಂದ ಹೂರಣವಿಷ್ಟು...




Sunday 27 November 2022

ಕನ್ನಡ ಹಿರಿಮೆ..

ಮೊದಲು ತಾಯ ಹಾಲ ಕುಡಿದು
ನಲ್ಮೆಯಿಂದ ತೊದಲಿ ನುಡಿದು
ಕೆಳೆಯರೊಡನೆ ಬೆಳೆದು ಬಂದ ಮಾತದಾವುದು 

ಸವಿಯ ಹಾಡ ಕತೆಯ ಕಟ್ಟಿ
ಕಿವಿಯಲೆರದು ಕರುಳ ತಟ್ಟಿ
ನಮ್ಮ ಜನರು ನಮ್ಮ ನಾಡು ಎನಿಸಿತಾವುದು
ನಮ್ಮ ಕವಿಗಳೆಂಬ ಕೋಡು ತಲೆಗದಾವುದು 

ಕನ್ನಡ ನುಡಿ ನಮ್ಮ ಹೆಣ್ಣು
ನಮ್ಮ ತೋಟದಿನಿಯ ಹಣ್ಣು
ಬಳಿಕ ಬೇರೆ ಬೆಳೆದ ಹೆಣ್ಣು
ಬಳಿಗೆ ಸುಳಿದಳು
ಹೊಸದು ರಸದ ಬಳ್ಳಿ ಹಣ್ಣು
ಒಳಗೆ ಸುಳಿದಳು 

ಬಲ್ಲವರಿಗೆ ಬೆರಗೆ ಇಲ್ಲಿ
ಅರಿಯದವರು ನಾಲ್ವರಲ್ಲಿ
ಕಳೆಯ ಬೆಳಕು ಹೊಳೆಯಲಂದು ದಣಿದು ಹೋದೆನು
ಬಡವನಳಿಲು ಸೇವೆ ಎಂದು ಧನ್ಯನಾದೆನು

ಸಾಹಿತ್ಯ:  ಬಿ.ಎಂ.ಶ್ರೀ

('ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಕವಿತೆಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

Friday 25 November 2022

ಕನ್ನಡವಲ್ಲ ತಿಂಗಳು ನಡೆಸುವ
ಗುಲ್ಲಿನ ಕಾಮನಬಿಲ್ಲು ;
ರವಿ ಶಶಿ ತಾರೆಯ ನಿತ್ಯೋತ್ಸವವದು,
ಸರಸತಿ ವೀಣೆಯ ಸೊಲ್ಲು.
~ಕೆ.ಎಸ್.ನಿಸಾರ್ ಅಹಮದ್

ಮೊದಲ ಮಾತು...

ಅನುವಾದ ನನ್ನ ಹುಚ್ಚು.ಒಂದು ತರಹದ ಮೋಹ.ಶಾಲೆ/ ಕಾಲೇಜು ಗಳಲ್ಲಿ ಓದುವಾಗ, ಶಿಕ್ಷಕಿಯಾಗಿ 
ಕೆಲಸದಲ್ಲಿದ್ದಾಗ ಏನೇ ಓದಿದ್ದು ಮೆಚ್ಚುಗೆಯಾಗಲೀ ಅದು ಬೇರೆ ಭಾಷೆಯಲ್ಲಿದ್ದರೆ ಮೊದಲು ಕನ್ನಡಕ್ಕೆ ಇಳಿಸುತ್ತಿದ್ದೆ.ಅದು ಎಷ್ಟು ಚಟವಾಗಿ ಬಿಟ್ಟಿತೆಂದರೆ ಇಂಗ್ಲೀಷ್/ ಹಿಂದಿಯಲ್ಲಿ ಓದಿದ ಎಲ್ಲವೂ auto translate ಆಗುವಷ್ಟು...ಆದರೆ ನನ್ನದು ಶಬ್ದಾನುವಾದವಲ್ಲ( word to word  translation) ಭಾವಾನುವಾದ, - ಮೆಚ್ಚಿದ ಕವನದ ಉತ್ತಮ ಆಶಯದ ಮೂಲಕ್ಕೆ ಧಕ್ಕೆ ಬರದಂತೆ, ನಮ್ಮ ಭಾಷೆಯ ಭಾವಕ್ಕೆ ಸರಿಹೋಗುವಂತೆ
ಮಾರ್ಪಡಿಸಿ ಕವನದ ರೂಪ ಕೊಡುವದು.ಆರಿಸುವಾಗಲೂ ಮೂಲ ಕವಿ ಯಾರು? ಅವನು ಪ್ರಸಿದ್ಧಿ/ ಜನಮನ್ನಣೆ ಪಡೆದವನೇ ಎಂಬುದಕ್ಕಿಂತ ಅವನ ಕವನ ಕೊಡುವ ಸಂದೇಶವೇನು? ಅದು ಓದುಗರ ಭಾವನೆಗಳನ್ನು ಎಷ್ಟರಮಟ್ಟಿಗೆ ಒಳಗೊಳ್ಳುತ್ತದೆ? ಎಂಬುದು ನನಗೆ ಮುಖ್ಯವಾಗುತ್ತದೆ. ಅದಕ್ಕೇ ಅದನ್ನ translation ಅನ್ನುವದಿಲ್ಲ- trans- creation ಅನ್ನುತ್ತೇನೆ.ಅನುವಾದವಲ್ಲ ,ಒಂದು ರೀತಿಯಲ್ಲಿ ರೂಪಾಂತರ ಅನ್ನ ಬಹುದೇನೋ...
              ಇನ್ನು ಸಾಧ್ಯವಾದಷ್ಟೂ ಆಯ್ದ ಕವನಗಳ ಮೂಲ ಹುಡುಕಿ
ಅವರ ಹೆಸರು/ ಫೋಟೋ ಹಾಕಿದ್ದೇನೆ.ಕೆಲವುಗಳ ಮಾಹಿತಿ ಲಭ್ಯವಿಲ್ಲದ ಕಾರಣಕ್ಕೆ unknown ಎಂದು ಕಾಣಿಸಿದ್ದೇನೆ. ನನಗೆ ತಿಳಿದ ಹಾಗೆ ಮಾಹಿತಿ ಸರಿಯಿದೆ. ಯಾರಾದರೂ ಏನಾದರೂ ಲೋಪ ಕಂಡರೆ, ನನಗೆ ತಿಳಿಸಿದರೆ ಸೂಕ್ತ ತಿದ್ದುಪಡಿ ಮಾಡುತ್ತೇನೆ.
   ‌‌          ಕೊನೆಯದಾಗಿ ಕವನಗಳ Copyright ವಿಷಯದ ವಿಶೇಷ ಮಾಹಿತಿ ನನಗಿಲ್ಲ.ಅಲ್ಲದೇ ಅನುವಾದ ಸಂಗ್ರಹಕ್ಕೆ ' ವ್ಯವಹಾರ/ಮಾರಾಟ'ದ ಉದ್ದೇಶವಿಲ್ಲ. ಅದು ಶಬ್ದಶಃ ಅನುವಾದವೂ ಅಲ್ಲ. ನನ್ನೊಳಗಿನ ಕವನ ಪ್ಗರೀತಿಗೆಳ ಅನುವಾದವಾದಮೇಲೆ ಲಭ್ಯವಿದ್ದ
ಮಾಹಿತಿ ಬರೆದಿದ್ದೇನೆ.ಅಷ್ಟು ಸಾಕಾಗಬಹುದು ಎಂಬುದು ನನ್ನ ತಿಳುವಳಿಕೆ.

Sunday 20 November 2022

ಪ್ರೀತಿ ಅಂದರೆ...

ಒಂದು 
ಮೃದು ಮಧುರ ಕಾಳಜಿ ,
ಎದೆಗೂಡಿನಲ್ಲಡಗಿದ
ಸುಪ್ತ ಸಹಾನುಭೂತಿ,
ಪ್ರತಿನಿಮಿಷ, ಪ್ರತಿಗಳಿಗೆ, 
ಪ್ರತಿಕ್ಷಣದ ಅನುಭೂತಿ...

ಎರಡು ಹೃದಯಗಳ
ದೈವಾಲಿಂಗನ...
ಕೈಯ ಬಿಸುಪು,
ಬಿಸಿ-ಬಾಹುಬಂಧನ...

ಎರಡು ಬುದ್ಧಿ /ಹೃದಯ/ 
ಆತ್ಮಗಳ ಭಾವ ವಿನಿಮಯ...
ಸದಾ ಇರುವ,ಮೊಳೆವ, 
ಚಿಗುರುವ ಬೀಜ ತಳಿ..
ಈ ಭುಮಿಯನ್ನೇ ಸಗ್ಗವಾಗಿಸುವ 
ಇಬ್ಬರು ಸಂತೃಪ್ತ  ಜೀವಿಗಳಿಗೆ
ಆ ಭಗವಂತನಿತ್ತ 
ಅಮೃತ ಸದೃಶ ಬಳುವಳಿ...

ಮೂಲ:Patricia Waiter...

Saturday 19 November 2022

ಜಯಶ್ರೀ ದೇಶಪಾಂಡೆಯವರ ಮುನ್ನುಡಿ...

*ಭಾವವೆಂಬ ಹೂವು ಅರಳಿ*

ಕವಿತೆ ಎಂದರೆ ಹೃದಯದ ಆತ್ಮನಿವೇದನೆ. ಭಾವನೆಗಳ ಉಸಿರಾಟ!
ವಿಶ್ವಾದ್ಯಂತದ ಹೃದಯಗಳು ಮಿಡಿದು ಹೊರಹೊಮ್ಮಿಸಿದ ಭಾವನೆಗಳು ಪದ್ಯವಾಗಿ ತೆರೆದುಕೊಂಡಾಗ ಅದು ಬಿಡಿಸುವ ಅಸಂಖ್ಯ ಚಿತ್ರಗಳನ್ನು ನಮ್ಮ ಭಾಷೆಯಲ್ಲಿಟ್ಟು ಅಲಂಕರಿಸಿ ನಮ್ಮೆದುರು ತಂದು ಹರವಿದ್ದಾರೆ ಶ್ರೀಮತಿ ಕೃಷ್ಣಾ ಕೌಲಗಿ. 
"ಕವಿತೆ ಕಣ್ಣಿಗೆ ಬಿದ್ದೊಡನೆ ನನ್ನ  ಮನಸ್ಸಿನಲ್ಲಿ ಅದರ ರೂಪಾಂತರದ ಚಲನೆಯೊಂದು ಆರಂಭವಾಗಿಬಿಡುತ್ತಿತ್ತು.auto translate ಆಗಿಬಿಡುವ ಥರದಲ್ಲಿ. ಇನ್ನೊಬ್ಬರ ಲೇಖನಿಯ ಸಾಲುಗಳು ನನ್ನ ಬಳಿ ಬಂದು ನಿಂತಂತೆ  ಅನಿಸುತ್ತಿತ್ತು'' ಎನ್ನುವ ಈ ಪುಸ್ತಕದ ಲೇಖಕಿ ತಮ್ಮ ಅನುವಾದ/ಪುನರ್ರೂಪಣದ ಬಹಳಷ್ಟು ಕವಿತೆಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. 

"ನಮ್ಮ ದಾರಿಗೆ ಇರಲಿ 
ನಿಮ್ಮ ಟಾರ್ಚಿನ ಬೆಳಕು,
ಸರಿರಾತ್ರಿಗಿರುವಂತೆ ಚಂದ್ರಗಿಂಡಿಯ ತುಳುಕು"
         ಎಂದು ಕವಿ  ಗೋಪಾಲಕೃಷ್ಣ ಅಡಿಗರು ಉದ್ಗರಿಸಿದ್ದನ್ನು ಇಲ್ಲಿ ನೆನಪಿಸಿಕೊಂಡರೆ ಇಲ್ಲಿರುವ ಐವತ್ತು ಆಂಗ್ಲ ಕವಿತೆಗಳನ್ನು ಕೃಷ್ಣಾ ಅವರು ಇಂಗ್ಲಿಷ್ ನಿಂದ  ಕನ್ನಡಕ್ಕೆ ತಂದಿರುವುದು ಅವರ 'ಚಂದ್ರಗಿಂಡಿಯ ತುಳುಕಿ'ನಂಥ  ಮರುನಿರ್ಮಿತ ಕವನಗಳ ಬೆಳಕಿನ ಸ್ವರೂಪದಲ್ಲಿ! 

ಅನುವಾದ ಅಥವಾ ಭಾಷಾಂತರಕ್ಕಿರುವ ಮಿತಿಗಳು‌ trans creation ಅಥವಾ ಪುನರ್ರಚನೆಯಲ್ಲಿ ಅಷ್ಟಾಗಿ ಕಡ್ಡಾಯವಾಗಲಾರದು ಎನ್ನಬಹುದು.‌ ಮೂಲಪದಗಳಿಗಿರುವ ಹಲವು  ಅರ್ಥವ್ಯತ್ಯಾಸವನ್ನು ಇಲ್ಲಿ ತಮ್ಮ ರೂಪಾಂತರಣಕ್ಕೆ ಬೇಕಿರುವ ವಿನ್ಯಾಸದಲ್ಲಿ ಬಳಸಿದ್ದಾರೆ. 

ಇಲ್ಲಿನ ಐವತ್ತೂ ಕವನಗಳು ಹೊಮ್ಮಿಸುವ ಅರ್ಥ, ಭಾವ, ಲಯ, ಕಾಲಮಾನ, ಸಂವೇದನೆಗಳೆಲ್ಲ ಬೇರೆ ಬೇರೆ ಸ್ತರಗಳಿಂದ, ವ್ಯಕ್ತಿಗಳಿಂದ ಬಂದಿವೆ.
'ಅಸ್ಮಿತೆ' -ಬದುಕಿನ ನಿರೀಕ್ಷೆಗಳು , (ಸ್ಟೆಫಾನೀ ಬೆನೆಟ್ ಹೆನ್ರಿ)
 'ಪ್ರೀತಿ' ಯಾನೆ ಅನುಭಾವ,(ಗಾರ್ನೆಟ್ ಮಾತ್ಸೆರ) 
'ಮುಖಾಮುಖಿ'- ಜೀವಭಾವಗಳ ದ್ವಂದ್ವ, 'ಮಿಲನ'-(ಖಲೀಲ್ ಗಿಬ್ರಾನ್) 'ಬದುಕೆಂದರೆ'- ತೃಪ್ತಿಯಿಂದ ತುಂಬಿರುವ ಕೊನೆಗಳಿಗೆ(ರಾಲ್ಫ್ ರಾಡೋ ಎಮರ್ಸನ್)
'ಅಂತರ್ಮುಖಿ'- ಎರಿನ್ ಹ್ಯಾನ್ಸನ್. ಇವರೆಲ್ಲರ ಹಾಗೂ ಇನ್ನೂ ಅನೇಕರ ಭಾವಪ್ರಧಾನತೆಯ ಸಾಲುಗಳಿಗೆ ಕನ್ನಡದ ರೇಷ್ಮೆ ಹೊದಿಸಿದ್ದಾರೆ.
ಅಲ್ಲದೆ ರೊಮ್ಯಾಂಟಿಕ್ ಕವಿ ಎಂದು ಜನಜನಿತನಾಗಿದ್ದ ಲಾರ್ಡ್ ಬೈರನ್ನನ 'ಶೀ ವಾಕ್ಸ್ ಇನ್ ಬ್ಯೂಟಿ' ಕವಿತೆಯನ್ನು  ಬೆಳದಿಂಗಳ ಬಾಲೆಯಾಗಿಸಿ ಕಾವ್ಯದ ರಮಣೀಯತೆಗೆ ಹೊಳಪಿತ್ತಿದ್ದಾರೆ. 

ಐವತ್ತು ವಿಭಿನ್ನ ಕವಿತೆಗಳ ವೈವಿಧ್ಯಮಯ ರೂಪಗಳನ್ನು ಹೀಗೆ ಅವುಗಳದ್ದೇ ಇನ್ನೊಂದು ಸ್ವರೂಪಕ್ಕೆ ಮಾರ್ಪಡಿಸುವುದು ಒಂದು ಸಾಹಿತ್ಯಿಕ ಸಾಹಸವೇ ಹೌದು. 
ಇದನ್ನು ಮಾಡಿ ತೋರಿಸಿದ್ದಾರೆ ಕೃಷ್ಣಾ ಕೌಲಗಿ.
-ಜಯಶ್ರೀ ದೇಶಪಾಂಡೆ

Friday 18 November 2022

Life certificates copies...


[18/11, 11:08 am] Krishan Koulagi: Thank you for successfully submitting your digital life certificate. Your Pramaan id is 7058121431. You may view life certificate online at https://jeevanpramaan.gov.in/ppouser/login. Your Digital life certificate will be processed by your pension Disbursing Agency for release of pension. NICSI
[18/11, 11:28 am] Krishan Koulagi: Thank you for successfully submitting your digital life certificate. Your Pramaan id is 6030575778. You may view life certificate online at https://jeevanpramaan.gov.in/ppouser/login. Your Digital life certificate will be processed by your pension Disbursing Agency for release of pension. 


Wednesday 16 November 2022


ಬದುಕಿನಲ್ಲಿ,
ನೀನು ನಿರೀಕ್ಷಿಸುವಷ್ಟು
ನಿನ್ನನ್ನು ಯಾರೂ ಪ್ರೀತಿಸಲಾರರು...
ನಿನ್ನ ಒಳಗನ್ನು ತಾವಾಗೇ ಅರಿತು
ನಿನಗೆ ಬೇಕಾದಾಗ ಗಗನಕ್ಕೆ ನೆಗೆದು,  ನಕ್ಷತ್ರಗಳ ಹೆಕ್ಕಿ ತಂದು
ಕೈ-ಯಲ್ಲಿಡಲಾರರು...

ನೀ ಕಳೆದುಕೊಂಡ ಪಾದರಕ್ಷೆಯೊಂದ
ಹಿಡಿದು ಕುದುರೆ ಏರಿ
ನಿನ್ನ ಬಾಗಿಲಿಗಾವ 
ರಾಜಕುಮಾರನೂ ಬರುವನೆಂದು 
ನಿರೀಕ್ಷಿಸಬೇಡ...

ತಿಳಿದು ಕೋ...

ಅದಕ್ಕೆಂದೇ
ನಿನ್ನನ್ನು ನೀನು
ಅಗಾಧವಾಗಿ ಪ್ರೀತಿಸು...
ಸುದೈವದಿಂದ ಬದುಕಿನಲ್ಲಿ ಹೆಚ್ಚೇನಾದರೂ 
ಪ್ರೀತಿ ದಕ್ಕಿದ್ದೇ ಆದರೆ , 
ಅದು ನಿನ್ನ -
ಸುಂದರ ಕಿರೀಟಕ್ಕೆ
ಮತ್ತೊಂದು ಗರಿಯಷ್ಟೇ-
ಎಂದು ಭಾವಿಸು...

Tuesday 15 November 2022

ಪ್ರೀತಿ -

ಅಂದರೇನು?
ಅದೊಂದು ಅನುಭವವಾ? ಅನುಭಾವವಾ?

ಬದುಕಿನ ಭಾಗವಾ?
ಕೊಡು- ಕೊಳ್ಳುವಿಕೆಗೆ,-
ನೋವು-ನಲಿವಿಗೆ,-
ನೆನಪು- ನಿಂದನೆಗೆ,-

ಮೃದುವಾ? ಕಠೋರವಾ?
ಧ್ವನಿಯ ಏರಿಳಿತಗಳಂತೆ-
ಬಿಸುಪಾ? ತಂಪು- ತಂಪಾ?
ಮಳೆ ಧರೆಗಿಳಿದಂತೆ...

ನಾವು ಹೆಣೆದಿಟ್ಟ ಸಿಹಿ ನೆನಪುಗಳಾ?
ನಿನ್ನ  ಮೋಹಕ ಮುಗುಳ್ನಗೆಯಂತೆ..

ನಾನೇನೇ ನಾನಂದುಕೊಂಡರೂ
ಅದು ಬೆರಳು ತೋರಿಸುವದು
ನಿನ್ನ ಕಡೆಗೇನೇ...

ಏಕೆಂದರೆ,

ನಾನು ಕಂಡದ್ದು ನಿನ್ನನ್ನೇ...ನಿನ್ನೊಬ್ಬಳನ್ನೇ
ನದಿಯಂತೆ ಹರಿಯುವ,
ಮಳೆಯಂತೆ ಸುರಿಯುವ,
ಸರ್ವ ನೋವು ನಿವಾರಕಿಯಾದ ನಿನ್ನನ್ನೇ...ಆ ಕಾರಣಕ್ಕೇ
ನೀನು, 
ನೀನು ಮಾತ್ರ ನನ್ನವಳು...

Monday 14 November 2022

ಬೇಕಾಗಿದೆ ಒಂದು ಹಳೆಯ ಮಾಡೆಲ್...

ಕಂಡೊಡನೆ ತೊಡೆಯೇರುವ,
ಇಳಿಸಿದರೆ ಕಾಲ್ಗಳನಪ್ಪಿ ನಿಲ್ಲುವ,
'ಬೇಡ'- ಎಂದರೆ ಬಿಡದೇ ಕಾಡುವ
ಮಗುವೊಂದು ಬೇಕಾಗಿದೆ...

ಮಣ್ಣಿನಲಿ ಆಡುವ, ಬೀದಿಯಲಿ ಓಡುವ, ಕಣ್ಣರಳಿಸಿ ನೋಡುವ,
ಕನಸಿನಲೂ ಕಾಡುವ 
ಮಗುವೊಂದು ಬೇಕಿದೆ...

ಅಜ್ಜಿಯ ಕಥೆ ಕೇಳುವ, ಅಪ್ಪನ
ಹೆಗಲೇರುವ, ಸದಾ. ಅಮ್ಮನ ಸೆರೆಗೆಳೆಯುವ ಮಗುವೊಂದು
ಬೇಕಾಗಿದೆ...

ಕಂಡಲ್ಲಿ ಮರವೇರಿ
ಕಸುಗಾಯಿ ಕಚ್ಚಿ ಹಂಚಿಕೊಳ್ಳುವ, ಮಳೆಯಲ್ಲಿ ತಾ ನೆಂದರೂ
ಗೆಳೆಯನಿಗೆ ಕೊಡೆ ಹಿಡಿವ ಮಗುವೊಂದು ಬೇಕಾಗಿದೆ...

ಮುಗ್ಧತೆಯೇ ಮಗುವಾಗಿ 
ದಗ್ಧಮನಕೆ ತಂಪೆರೆದು, 
ಸ್ನಿಗ್ಧ ಮನವರಳಿಸುವಂಥ
ಮಗುವೊಂದು ಬೇಕಾಗಿದೆ...

ಬಾಲ್ಯ ಹರಯವಾಗದ,
ಹರಯ ಮುಪ್ಪೆನಿಸದ,
ಬೆಳೆದ ಮೇಲೂ ಮಗು ಮನದ
ಮಗುವೊಂದು ಬೇಕಾಗಿದೆ...








Friday 11 November 2022

ಅಂತರ್ಮುಖಿ...

ಗಾಳಿಯಲ್ಲಿ ತೇಲುವ 
ತರಗೆಲೆಯಂತೆ,
ನಾನು ಜನರ ಬದುಕಿನಿಂದ
ಒಳ- ಹೊರಗೆ ಆಗುತ್ತಲೇ ಇರುತ್ತೇನೆ,
ಹಲವುಬಾರಿ ಯಾರಿಗೂ
ಅರಿವಾಗದಂತೆ...
ಬಂಧ ಬಿಗಿಯಾಗುವ
ಮತ್ತೆ ಅದನು ಕಳೆದುಕೊಳ್ಳುವ  ನಿರಂತರ ಭಯ ನನಗೆ...
ಯಾರೊಂದಿಗೂ ಸ್ಪರ್ಧೆಗಿಳಿಯುವ
ಮನಸ್ಸಲ್ಲ ನನ್ನದು,
ಯಾವುದೇ ವಿಶೇಷ
ಗಮನ ನನ್ನ 'ಕಣ್ಣು ಕುಕ್ಕಿ'ಸುತ್ತದೆ...
ಯಾವಾಗಲೂ ಒಂದು 
ಮುಗುಳ್ನಗೆಯ ಮುಸುಕಿನಲ್ಲಿ
ಒಂದು ಪಕ್ಕಕ್ಕೆ ಸರಿದು 
ನನ್ನ ಪಾಡಿಗೆ ನಾನಿರುವದೇ
ನನ್ನ ಆಯ್ಕೆ.
ದಟ್ಟ ಸಂದಣಿಯಲ್ಲೂ
ಯಾರಿಗೂ ತಿಳಿಯದಂತೆ 
ನಾನೇ 'ನಾನಾಗಿರಬಲ್ಲೆ'-
ನಾ ಬಂದು ಹೋದದ್ದೇ
ಲೆಕ್ಕಕ್ಕಿಲ್ಲದಂತೆ...
ನಾನು ಹೋದದ್ದೂ ಯಾರನ್ನೂ ಕಿಂಚಿತ್ತೂ ಬಾಧಿಸದಂತೆ...
ಹೋದಮೇಲೂ
ಯಾರೊಬ್ಬರೂ ನೆನೆಸದಂತೆ,
ಒಂದೆರಡು ದಿನಗಳಲ್ಲೇ
ನೆನಪಿನಂಗಳದಿಂದ
ಜಾರಿ ಬಿಡುವಂತೆ...

Wednesday 9 November 2022

Till we meet again*

I will keep you safe deep in my heart...
You will live in me either as love, grief or pain
Be there, till we meet again...

My last gift was a book 
Still remember your excitement and child like look
The pages unread and crease you left will remain
So will the thoughts I want to share,
Accept them till we meet again

You helped anyone you could
Stepped up and kept promises more than anyone would
Like a tree takes a creeper in an embrace ,
Like a rock you stood by come sun or rain
I will pray for strength to do the same ,
Strengthen me till we meet again

The void you have left ,the gap that is formed 
We all struggle each day to not notice but carry on
But I will try so long as I can, to heal the pain
Correct me till we meet again

It became strangely simple since the day you were gone 
To solve a problem, to tell the right from wrong 
All I have to do is think what you would have done
I find my answer right there And I know how to move on
Guide me till we meet again

I hope you knew what you meant to me
Your love and kindness was all that people could see
Never had the right words to express so I refrain
Excuse me Till we meet again

You haven't left my mind for a second nor has the pain 
You still are my best friend , my teacher and my everything sane  Solace me till we meet again

And that you will forever remain
As my strength and guiding light, 
Trying to follow your path right
But only till we meet again.

(ಮೂಲ ಇಂಗ್ಲಿಷ ಕವನ : Sohani Hanchinamani...)

ಅನುವಾದ: ಶ್ರಿಮತಿ, ಕೃಷ್ಣಾ ಕೌಲಗಿ...


ನಾವು ಮತ್ತೆ ಭೇಟಿಯಾಗುವವರೆಗೆ...

ಅಪ್ಪಾ , ನೀನು- 
ನನ್ನ ಎದೆಯಾಳದಲ್ಲಿ ಪ್ರೀತಿಯಾಗಿ, ನೋವಾಗಿ,
ನೆನಪಾಗಿ, ಭದ್ರವಾಗಿ ಇರುವೆ...
ಅಲ್ಲೇ ಇರು, ಹಾಗೇ ಇರು
ನಾವು ಮತ್ತೆ ಭೇಟಿಯಾಗುವವರೆಗೆ...

ನಾ ನಿನಗೊಂದು ಕಾಣಿಕೆ ಕೊಟ್ಟೆ,
ನಿನ್ನ ಚಿಕ್ಕ ಮಗುವಿನ ಸಂತಸ,
ಕಣ್ಣ ಹೊಳಪು ಕಂಡು ಖುಶಿ ಪಟ್ಟೆ,
ಅದ ತೆರೆದು ನೋಡುವ 
ಮುನ್ನವೇ ನೀ ಹೊರಟುಬಿಟ್ಟೆ,
ಕಾದಿರಿಸುವೆ ನನ್ನೆಲ್ಲಾ ಅನಿಸಿಕೆಗಳ...
ನಾವು ಮತ್ತೆ ಭೇಟಿಯಾಗುವವರೆಗೆ...

ಕೇಳಿದವರಿಗೆ ಕೈನೀಡಿ ಹರಸಿದೆ...
ಕೊಟ್ಟ ಮಾತುಗಳ
ಹುಸಿ ಗೊಳಿಸದೇ ನಡೆಸಿದೆ...
ಆಸರೆ ಬಯಸಿದ ಬಳ್ಳಿಗಳಿಗೆ ಮರವಾದೆ...
ಬಿರುಗಾಳಿ, ಮಳೆಗೆ
ಕಲ್ಬಂಡೆಯಾದೆ...
ನಾನೂ 'ನೀನಾ'ಗಬೇಕು,
ನನ್ನ ಹೀಗೇ ಬಲಪಡಿಸುತ್ತಿರು , 
ನಾವು ಮತ್ತೆ ಭೇಟಿಯಾಗುವವರೆಗೆ...

ನಿನ್ನನುಪಸ್ಥಿತಿಯಿಂದಾದ ಖಾಲಿತನ,
ಅದರಿಂದುಂಟಾದ ಖಿನ್ನತೆ 
ಮೀರಿ ನಿಲ್ಲಲು,
'ನೀನಿರುವೆ 'ಎಂಬ
 ಭಾವದಲ್ಲೇ ಬದುಕಿಬಿಡಲು
ಶತಾಯಗತಾಯ ಪ್ರಯತ್ನ ನಡೆದಿದೆ.
ಅದು ಸಫಲವಾಗುವಂತೆ ಮಾಡು, 
ನಾವು ಮತ್ತೆ ಭೇಟಿಯಾಗುವವರೆಗೆ...

ನೀನು  'ಹೋದಾ'ಗಿನಿಂದ 
ಸವಾಲುಗಳನೆದುರಿಸುವದು, 
ಸರಿ/ ತಪ್ಪು ಗಳ ಗುರುತಿಸುವದು
ಕಠಿಣವೇನೂ ಅನಿಸಿಲ್ಲ...
ನಿನ್ನಂತೆ/ ನಿನ್ನದೇ ರೀತಿಯಲ್ಲಿ
ಚಿಂತಿಸಿದರೆ ಆಯಿತಲ್ಲ , 
ಸಮಸ್ಯೆಯೇಯಿಲ್ಲ,
ಹೀಗೇ ಇನ್ನು  ಮುಂದೂ ನಡೆಸು,
ನಾವು ಮತ್ತೆ ಭೇಟಿಯಾಗುವವರೆಗೆ...

ನೀನು ನಮಗೆಲ್ಲ ಏನೆಂಬುದು 
ನಿನಗೂ ಗೊತ್ತು...
ನಿನ್ನ ಪ್ರೀತಿ/ ಅಕ್ಕರೆಗಳು
ನಮಗೂ  ಗೊತ್ತು... ಅವುಗಳನ್ನು ಪದಗಳಲ್ಲಿ ಹೇಳುವಲ್ಲಿ ಮಾತ್ರ
ಸೋಲುತ್ತೇವೆ...
ಕ್ಷಮಿಸಿಬಿಡು, 
ನಾವು  ಮತ್ತೆ ಭೇಟಿಯಾಗುವ ವರೆಗೆ...

ನೀನು  ನಮ್ಮನ್ನಗಲಿದ  ನೋವು ಸುಲಭಕ್ಕೆ ಶಮನವಾಗದು...
ನಿನ್ನ ಸ್ನೇಹ/ ಮಾರ್ಗದರ್ಶನಗಳ ಹೊರತು ಏನೂ ನಡೆಯದು-
ಅದು ಹಾಗೇ ನಡೆಯಲಿ,
ನಾವು ಮತ್ತೆ ಭೇಟಿಯಾಗುವವರೆಗೆ... 

ನೀನಿಲ್ಲದೆಯೂ  
'ನಮ್ಮ ಜೊತೆಯಲ್ಲೇ' ಇರುವೆ...
ನಿನ್ನಿಂದಲೇ ಬಲಪಡೆದು, 
ನೀ ತೋರಿದ ಬೆಳಕಲ್ಲೇ ನಡೆದು,
ನಾನಿದ್ದು ಬಿಡುವೆ-
ನಾವು ಮತ್ತೆ ಭೇಟಿಯಾಗುವವರೆಗೆ...

               
ಅನುವಾದ ನನ್ನ ಹುಚ್ಚು.ಒಂದು ತರಹದ ಮೋಹ.ಶಾಲೆ/ ಕಾಲೇಜು ಗಳಲ್ಲಿ ಓದುವಾಗ, ಶಿಕ್ಷಕಿಯಾಗಿ 
ಕೆಲಸದಲ್ಲಿದ್ದಾಗ ಏನೇ ಓದಿದ್ದು ಮೆಚ್ಚುಗೆಯಾಗಲೀ ಅದು ಬೇರೆ ಭಾಷೆಯಲ್ಲಿದ್ದರೆ ಮೊದಲು ಕನ್ನಡಕ್ಕೆ ಇಳಿಸುತ್ತಿದ್ದೆ.ಅದು ಎಷ್ಟು ಚಟವಾಗಿ ಬಿಟ್ಟಿತೆಂದರೆ ಇಂಗ್ಲೀಷ್/ ಹಿಂದಿಯಲ್ಲಿ ಓದಿದ ಎಲ್ಲವೂ ಓದುತ್ತಲೇ ಮನಸ್ಸಿನಲ್ಲಿ auto translate ಆಗುವಷ್ಟು...ಆದರೆ ನನ್ನದು ಶಬ್ದಾನುವಾದವಲ್ಲ( word to word  translation) ಭಾವಾನುವಾದ, - ಮೆಚ್ಚಿದ ಕವನದ ಉತ್ತಮ ಆಶಯದ ಮೂಲಕ್ಕೆ ಧಕ್ಕೆ ಬರದಂತೆ, ನಮ್ಮ ಭಾಷೆಯ ಭಾವಕ್ಕೆ ಸರಿಹೋಗುವಂತೆ
ಮಾರ್ಪಡಿಸಿ ಕವನದ ರೂಪ ಕೊಡುವದು.ಆರಿಸುವಾಗಲೂ ಮೂಲ ಕವಿ ಯಾರು? ಅವನು ಪ್ರಸಿದ್ಧಿ/ ಜನಮನ್ನಣೆ ಪಡೆದವನೇ ಎಂಬುದಕ್ಕಿಂತ ಅವನ ಕವನ ಕೊಡುವ ಸಂದೇಶವೇನು? ಅದು ಓದುಗರ ಭಾವನೆಗಳನ್ನು ಎಷ್ಟರಮಟ್ಟಿಗೆ ಒಳಗೊಳ್ಳುತ್ತದೆ, ಓದುಗರಿಗೆ ಅದೆಷ್ಟು relate ಆಗುತ್ತದೆ ಎಂಬುದು ನನಗೆ ಮುಖ್ಯವಾಗುತ್ತದೆ. ಅದಕ್ಕೇ ಅದನ್ನ translation ಅನ್ನುವದಿಲ್ಲ- trans- creation ಅನ್ನುತ್ತೇನೆ.ಅನುವಾದವಲ್ಲ ,ಒಂದು ರೀತಿಯಲ್ಲಿ ರೂಪಾಂತರ ಅನ್ನ ಬಹುದೇನೋ...
              ಇನ್ನು ಸಾಧ್ಯವಾದಷ್ಟೂ ಆಯ್ದ ಕವನಗಳ ಮೂಲ ಹುಡುಕಿ
ಅವರ ಹೆಸರು/ ಫೋಟೋ ಹಾಕಿದ್ದೇನೆ.ಕೆಲವುಗಳ ಮಾಹಿತಿ ಲಭ್ಯವಿಲ್ಲದ ಕಾರಣಕ್ಕೆ unknown ಎಂದು ಕಾಣಿಸಿದ್ದೇನೆ. ನನಗೆ ತಿಳಿದ ಹಾಗೆ ಮಾಹಿತಿ ಸರಿಯಿದೆ.ಒಂದು ವೇಳೆ ಯಾರಿಗಾದರೂ ಏನಾದರೂ ಲೋಪ ಕಂಡರೆ, ನನಗೆ ತಿಳಿಸಿದರೆ ಸೂಕ್ತ ತಿದ್ದುಪಡಿ ಮಾಡುತ್ತೇನೆ.
   ‌‌          ಕೊನೆಯದಾಗಿ ಕವನಗಳ Copyright ವಿಷಯದ ವಿಶೇಷ ಮಾಹಿತಿ ನನಗಿಲ್ಲ.ಅಲ್ಲದೇ ಅನುವಾದ ಸಂಗ್ರಹಕ್ಕೆ ' ವ್ಯವಹಾರ/ಮಾರಾಟ'ದ ಉದ್ದೇಶವಿಲ್ಲ.ಅದು ಕವನಗಳ ಶಬ್ದಶಃ ಅನುವಾದವೂ ಅಲ್ಲ. ನನ್ನೊಳಗಿನ ಕವನ ಪ್ರೀತಿಗೆ ಸಂದ/ ಸಲ್ಲಿಸಿದ ಗೌರವ ಅಷ್ಟೇ ಹೊರತು ಬೇರೇನಿಲ್ಲ.ಅದಲ್ಲದೇ ಅನುವಾದವಾದಮೇಲೆ ಲಭ್ಯವಿದ್ದ
ಮಾಹಿತಿ ಬರೆದಿದ್ದೇನೆ.ಅಷ್ಟು ಸಾಕಾಗಬಹುದು ಎಂಬುದು ನನ್ನ ತಿಳುವಳಿಕೆ.  
   ‌‌‌‌           ಆಗಾಗ ಬರೆದ, ಬರೆಯುತ್ತಿ ರುವ ಕವನಗಳನ್ನು ಸಾಕಷ್ಟು ಸ್ನೇಹಿತರು
ಮೆಚ್ಚಿದ್ದಾರೆ ,ಪ್ರತಿಕ್ರಯಿಸುತ್ತಾರೆ. ಅದುವೇ ಬಹುಮಾನ ನನಗೆ ಎಲ್ಲರಿಗೂ ನಮಸ್ಕಾರ...


Tuesday 8 November 2022

ಅ- ಭಯ...

ಸಗ್ಗದಲ್ಲಿಯೇ ಕುಳಿತು
ನಿನ್ನನ್ನು ನೋಡುತಿಹೆ..
ಹಿಗ್ಗುವೆನು-ಕುಗ್ಗುವೆನು ನಿನ್ನ ಜೊತೆಗೆ..
ನಿನ್ನಿಂದ ನಾನೆಂದೂ
ದೂರ ಹೋಗಿಲ್ಲೆಂದು
ಸಂಜ್ಞೆಗಳ ಕಳುಹುತಿಹೆ ನಿನ್ನ ಬಳಿಗೆ...

ನೀನು ನಕ್ಕಾಗೊಮ್ಮೆ
ನಾನೂನು ನಗುತಲಿಹೆ
ಮಲಗಿರಲು ಪಕ್ಕದಲೆ ಬಂದುಬಿಡುವೆ...
ಯಾವುದೇ ಕಾರಣಕೆ
ಕಣ್ಣು ಹನಿಗೂಡಿದೊಡೆ
ಎನ್ನ ತೋಳ್ಗಳ ಬಳಸಿ ಬಂಧಿಸಿಡುವೆ...

ಒಂದಿಲ್ಲ ಒಂದುದಿನ
ನಾನು ಬರುವೆನು ಎಂದು
ನೀನು ಕಾಯುವದೆನಗೆ ಮೊದಲೆ ಗೊತ್ತು...
ನೀನೆಂದೂ ಏಕಾಕಿ ಅಲ್ಲ, 
ಜೊತೆಯಲೆ ಇರುವೆ
ಇದ ತಿಳಿಸಬಯಸುವೆನು ಮೂರು ಹೊತ್ತು...

ನೀನಿಲ್ಲದಾ ಬಾಳು
ನನಗೇಕೆ ಬೇಕೆಂದು
ಯಾವತ್ತೂ ತರಬೇಡ ಮನದ ಒಳಗೆ...
ಇಲ್ಲಿ, ಈ  ಸಗ್ಗದಲಿ
ನಾನು ಸುಖದಿಂದಿರುವೆ
ಬಂದಾಗ ನೋಡುವಿಯಂತೆ ನನ್ನ ಬಳಿಗೆ....

ನಿನಗೆ ದಕ್ಕಿದ ಬಾಳು
ನಿನಗಿತ್ತ ಬಳುವಳಿ
ಮನಸಾರೆ ಬದುಕಿ ಬಾ ನಗುನಗುತಲಿ...
ನಿನ್ನ ಪ್ರತಿ ಉಸಿರಲ್ಲು
ನನ್ನದೂ ಇದೆಯೆಂದು
ಮತ್ತೊಮ್ಮೆ ಬದುಕುವೆನು ಹೊಸ ಹುರುಪಲಿ..

( ಕನ್ನಡ ರೂಪ: ಶ್ರೀಮತಿ,ಕೃಷ್ಣಾ ಕೌಲಗಿ)

Sunday 6 November 2022

My monthly medicine package.

Monthly medicine kit...
1) Glucomet 500mg- 60.

2) Telma- 40/5.
30.

3) Rozavel - 10 mg.- 30.

4) Neurobion forte- 30.

5) Revital ( women). 
1 bottle.

6) Mixtard -50.insulin pack.
One box of five.(with needles)

7) Vicks Vaporub- one bottle.(big)

8) Ascoril cough syrup ( suger free)
2. Bottles.

9) Acu check- 
Blood test strips + 12 needles.

10) Flucort - C .cream...

11) Thyronorm- 75 mg. (Once in three months).

12) Refresh tears- Eye drop...

Saturday 5 November 2022

ಸರಳ, ಸಾತ್ವಿಕ ಬದುಕು
ಅಪರಾಧವಲ್ಲ,
ಅದಕ್ಕಾಗಿ ನಾಚಿಕೆ ಪಡಬೇಕಿಲ್ಲ... ಯಾರನ್ನೋ
ಏನನ್ನೋ ಕಳೆದುಕೊಳ್ಳುವದು
ಬದುಕಿನ‌ ಕರಾಳತೆಯಲ್ಲ...
ಅಂಥದರಲ್ಲಿ
ನಿಮ್ಮತನವನ್ನು ಗುರುತಿಸಿ, ಉಳಿಸಿಕೊಂಬುದು
ಸಣ್ಣ ಸಾಧನೆಯೇನೂ ಅಲ್ಲ...

ನೀವೆಷ್ಟು ದೊಡ್ಡವರು?
ನಿಮ್ಮ ವಯಸ್ಸೇನು ? ಬೇಕಿಲ್ಲ...
ಉಸಿರಿದ್ದರೆ ಸಾಕು,
ಮನಸು ಹಸಿರಿದ್ದರೆ ಸಾಕು...
ಬದುಕು ಬೊಗಸೆ ತುಂಬಿ ಕೊಡುತ್ತದೆ.
ಹಿಡಿಯಷ್ಟು ಸ್ವಾತಂತ್ರ್ಯ/ ಉತ್ಸಾಹ...
ಇದ್ದರೆ ಸಾಕು, ಸ್ವರ್ಗ ತೆರೆಯುತ್ತದೆ...

ಬದುಕೆಂದರೆ ಎರಡಲಗಿನ ಕತ್ತಿ
ಇದ್ದಂತೆ...
ಗಳಿಗೆಗೆ ಖುಶಿ, ಆನಂದ ,ತೃಪ್ತಿ-
ಬದುಕು ತಂಗಾಳಿ...
ಮರುಗಳಿಗೆ ನೋವು, ವೇದನೆ, ಕಷ್ಟ-
ಆಗ ಅದು ತೀಕ್ಷ್ಣ ಬಿರುಗಾಳಿ...

ಯಾರಿಗೂ, ಯಾವುದಕ್ಕೂ,
ಏನನ್ನೂ ಇಲ್ಲಿ ಹೋಲಿಸಲಾಗದು...
ಅಕಾರಣವಾಗಿ ಸೋಲಿಸಲಾಗದು...
ಅವರೆದೆಯ ನೋವು
ಅವರಿಗೇನೇ ಗೊತ್ತು,
ನಮ್ಮದೇನಿದ್ದರೂ ನಮ್ಮ ಸೊತ್ತು...
ನಮ್ಮ ಯುದ್ಧ ಕೇವಲ ನಮ್ಮದು...
ನಮ್ಮ ಗೆಲವು/ ಸೋಲು ನಮ್ಮದೇ...
ಉಳಿದವರ ಚಿಂತೆ ನಮ್ಮದಲ್ಲ...
ನಮ್ಮ ಬದುಕು ಸಫಲವೋ/ಅಸಫಲವೋ ಚಿಂತೆ ಅವರದಲ್ಲ...

Friday 4 November 2022

ನಿಮ್ಮಾತ್ಮವೇ ದಣಿದು ಹೋದರೆ,
ಮನಸ್ಸು ಏನನ್ನೂ ಸ್ವೀಕರಿಸುವದಿಲ್ಲ...
ಬದುಕು,ಪ್ರೀತಿ, ಸಾಹಸ,ಎಲ್ಲವೂ ಅರ್ಥಕಳೆದುಕೊಳ್ಳುತ್ತವೆ...
ತಿಂದನ್ನ ಕರಗುವದಿಲ್ಲ...

ಬದುಕಿನ ಆ ಬ್ರಹತ್ ಶೂನ್ಯತೆಗೆ ಸುಲಭ ಪರಿಹಾರ ಸಿಗುವದಿಲ್ಲ,
ಗಳಿಸಿಟ್ಟ ಏನೆಲ್ಲವನ್ನೂ ತೆತ್ತರೂ ಆರೋಗ್ಯ, ಆರಾಮ, ನೆಮ್ಮದಿ
ಕೊಳ್ಳಲಾಗುವದಿಲ್ಲ...
ಆನಂದದ ಬಳ್ಳಿಗೆ ಮತ್ತೆ ಮತ್ತೆ
ನೀರೆರೆಯದ ಹೊರತೂ
ಕುಬೇರನ ಆಸ್ತಿಯನೆಲ್ಲ ವ್ಯಯಿಸಿದರೂ
ಬದುಕಿನ‌ ಬಳ್ಳಿ ಹೂ ಬಿಡುವದಿಲ್ಲ...

ಅಷ್ಟೇ ಏಕೆ,
ನಿದ್ದೆಯೂ ಕೂಡ ನೆಮ್ಮದಿ ತರುವದಿಲ್ಲ...
ಆದರೆ, ಒಂದು‌ಮಾತು...
ಹಾಗೆಂದು,
ಹತಾಶರಾಗಬೇಕಿಲ್ಲ.
ನಿಮ್ಮಾತ್ಮ‌ ದಣಿದಾಗ,
ದಣಿದು ಬೇಸತ್ತಾಗ,
ನಿಮ್ಮ ಸುತ್ತುಮುತ್ತಲೇ
ಹೇರಳವಾಗಿ ,ಉಚಿತವಾಗಿ,
ಎಲ್ಲೆಲ್ಲೂ ಪರಿಹಾರಗಳು
ಕಾಣಸಿಗುತ್ತವೆ...
ಕಣ್ಣು ತೆರೆದು ಒಮ್ಮೆ ನೋಡಿ,
ದಿನನಿತ್ಯದ ಸರಳ, ಸಹಜ, ಸುಂದರ ಸಂಗತಿಗಳಲ್ಲೇ ಮನಸ್ಸು ನೆಟ್ಟು ನೋಡಿ...
ನಂಬಲಾಗದ ಖುಶಿ ನಿಮ್ಮದಾಗಬಹುದು.
ಬದುಕು ಮರಳಿ ಚಂದವಾಗಬಹುದು...

Thursday 3 November 2022

ಬದುಕಿನಲ್ಲಿ ಎಲ್ಲವೂ
ಸುಂದರ ಕತೆಯೇ ಆಗಬೇಕಿಲ್ಲ...
ಸಿಕ್ಕ ಪ್ರತಿ ಸಜ್ಜನ ವ್ಯಕ್ತಿಯೂ
ಮನಸ್ಸು ಗೆದ್ದ ಮಾತ್ರಕ್ಕೆ
ಅಲ್ಲಿಯೇ ಶಾಶ್ವತವಾಗಿ ನೆಲೆಸಬೇಕಿಲ್ಲ -
ಹಲವು ಬಾರಿ, ಹಲವರು
ನಮ್ಮ ಬದುಕಿನಲ್ಲಿ ಪ್ರೀತಿಸುವದನ್ನು
ಕಲಿಸಲೆಂದೇ ಬರಬಹುದು...

ಕೆಲವೊಮ್ಮೆ,
ಯಾರನ್ನು ಯಾವ ಕಾರಣಕ್ಕೆ 
ಹೆಚ್ಚು ಹಚ್ಚಿಕೊಳ್ಳಬಾರದು,
ಹತ್ತಿರ ಬಿಟ್ಟುಕೊಳ್ಳಬಾರದು,
ನಮಗೆ ನಾವೇ ಮಾರಕವಾಗಬಾರದು
ಎಂಬುದನ್ನೂ ಕಲಿಸುತ್ತವೆ...

ಕೆಲವೊಮ್ಮೆ ,
ಕೆಲವರು ನಮ್ಮನ್ನು ಬಿಟ್ಟು ಹೋಗುತ್ತಾರೆ, 
ಹೆದರಬೇಕಿಲ್ಲ...
ಅದೂ ಬದುಕಿನ ಭಾಗವೇ...
ಅವರಿಲ್ಲದಿದ್ದರೂ
ಅವರಿಂದ ಕಲಿತ
ಬದುಕಿನ ಪಾಠಗಳು
ನಮ್ಮೊಡನೆ ಇರುವವರೆಗೂ 
ಅವರು ನಮ್ಮೊಂದಿಗೆ ಇದ್ದಂತೆಯೇ...
ಚಿಂತಿಸಬೇಕಿಲ್ಲ...

Saturday 29 October 2022

ಅಭೀಪ್ಸೆ...

ಎಲ್ಲ ಅಪಸವ್ಯಗಳ ನಡುವೆಯೂ, 
ಆಲದ ಮರದಂತೆ ಅಲುಗಾಡದೇ, 
ಭದ್ರವಾಗಿ ಬೇರೂರಿ,
ಬೀಳುವ ಭಯ ತೊರೆದು ನಿಂತಿದ್ದೇನೆ .

ಬೀಳುವದೇಯಿಲ್ಲ - ಎಂಬ ಭರವಸೆಯೇನೂ ಇಲ್ಲ...
ಆದರೂ ನನ್ನಲ್ಲಿರುವ 
ಅಂತಃಶಕ್ತಿಯ ಪ್ರೇರಣೆಯನ್ನು
ಅಷ್ಟೊಂದು ಸುಲಭವಾಗಿ 
ಸಾಯಗೊಡುವದೂ ಇಲ್ಲ.

ಈ ಕಡು ಚಳಿಗಾಲದ
ತಂಪುಗಾಳಿ ನನ್ನ ಬೇರುಗಳನ್ನು ಹೆಪ್ಪುಗಟ್ಟಿಸಲಾರದು...
ನನ್ನೊಳಗಿನ ಕಿಡಿ 
ಸದಾ 'ನನ್ನೊಳಗ'ನ್ನು
ಬೆಚ್ಚಗಿರಿಸದೇ ಇರಲಾರದು...

ಅಳಿದುಳಿದ ಬಾಳನ್ನು 
ನಾನಿನ್ನೂ ಬದುಕಬೇಕಿದೆ...
ಎಷ್ಟೋ ಕನಸುಗಳ
ನನಸಾಗಿಸಬೇಕಿದೆ...
ನನ್ನೊಳಗಣ ಪ್ರೀತಿಯ ಹಂಚಬೇಕಿದೆ...
ನನ್ನವರಿಂದ ಪಡೆಯಬೇಕಾದ ಬಳುವಳಿಗಳ ಮೊತ್ತ ಬಾಕಿಯಿದೆ...

ಬದುಕನ್ನು ಹೇಗೋ ಮುಗಿಸುವ
ಇರಾದೆ ಖಂಡಿತ ಇಲ್ಲ...
'ಹೇಗೆಂಬುದು?'-ಇನ್ನೂ ಖಚಿತವಿಲ್ಲ,
ನೋಡಬೇಕು - ದೂರದಲ್ಲೆಲ್ಲೋ 
ಶಾಂತವಾದ ಜಾಗದಲ್ಲಿ,
ಕಡಲಿನ ಹಿತವಾದ ಗಾಳಿಯೊಡನೆ ಬೆರೆತು, 
ತನುವ ಹೆಪ್ಪುಗಟ್ಟಿಸುವ ಮಳೆಯಿಂದ
ದೂರ ಹೋಗಿ, ಜಾಗವೊಂದನ್ನು
ಹುಡುಕಬೇಕು...

Friday 28 October 2022

MAYBE PEOPLE DON’T WANT TO STOP GRIEVING…

Maybe they are terrified,
that the grief they feel is the last thing they have left of that person.
That if they move on from the grief, 
they will lose the final connection.  
The only tie. 

Maybe people feel united with their loved one,
in the realm just outside our reality. 
United in pain and loss. 
Banished to a parallel universe where they can both exist together, 
still together.

Maybe that’s just too precious to move on from.

So if you are in this place, or you know someone who is, 
maybe you can remind them that they are completely connected to their lost one, 
in so many more wonderful ways than just the loss.
How can they not be?
Inch for inch the pain they feel equals the love they shared.

At the end of the day, it’s all just love. 
And there is no need to banish either.
They can exist side by side, 
grief and love.

And they do, 

every day.

Donna Ashwort

ಬಿಟ್ಟುಹೋದವರನ್ನು
ಉಳಿಸಿಕೊಳ್ಳುವ ಏಕೈಕ ಮಾರ್ಗವೆಂದರೆ
ಅವರ ನೆನಪಲ್ಲಿ/ ವಿರಹದಲ್ಲಿ
ಬೇಯುವದು-
ಮನದಲ್ಲಿಲ್ಲ ಎಂದರೆ ಇದ್ದೊಂದು
ಕೊಂಡಿ ಕಳಚಿಕೊಂಡ ಅನಾಥ ಭಾವ...

"ಅವಳನ್ನು ತಡೆಯಲು ಸಾಧ್ಯವೇಯಿಲ್ಲ"-
ಎಂದೆಲ್ಲರೂ ಅಂದುಕೊಂಡದ್ದುಂಟು.
ಆದರೆ ಅನೇಕ ಬಾರಿ ಅವಳೇ,ತಾನಾಗಿಯೇ ನಿಂತಿದ್ದಾಳೆ...

ಆಗೆಲ್ಲ 'ಇಲ್ಲಿಗಿವಳದು ಮುಗಿಯಿತು'-
ಎಂದು ಹಲವುಬಾರಿ ಹಲವರು
ಯೋಚಿಸಿದ್ದಿದೆ...

ಇಲ್ಲ, ಖಂಡಿತ ಇಲ್ಲ,

ಆಗೆಲ್ಲ ಯಾವುದೋ ಸಕಾರಣಕ್ಕಾಗಿಯೇ ಅವಳು
ತಡೆದು ನಿಂತಿದ್ದಾಳೆ - 
ಪ್ರತಿಬಾರಿ ನಿಂತಾಗಲೂ
ಈ ದಾರಿ  ಸರಿ ಇದೆಯಾ?
ಮೊದಲಿನದಕಿಂತ
ಉತ್ತಮವಾದೀತಾ?
ಅದನ್ನೊಮ್ಮೆ ಪುನಃ 
ಪರಾಮರ್ಶಿಸಬೇಕೆ?
ಅದರಿಂದ ಹೆಚ್ಚೇನಾದರೂ ಲಾಭವಾದೀತೆ?
ಎಂದೊಮ್ಮೆ  ಪರಕಿಸಲು ಮಾತ್ರ...

ಏಕೆಂದರೆ,

ಆರಿಸಿದ ದಾರಿ ಹಿಂದಿನದರಕಿಂತ
ಭಿನ್ನವಾಗಿರಬೇಕು...
ಉತ್ತಮವಾಗಿರಬೇಕು,
ಮೊದಲಿನದಕಿಂತ ಧೃಡವಾಗಿರಬೇಕು...
ಮತ್ತೆ ಮತ್ತೆ ಬದಲಿಸುವಂತಾಗಬಾರದು,
ಎಂಬುದೊಂದೇ ಚಿಂತನೆಯಿಂದ...

'ಅವಳನ್ನು ತಡೆಯಲಾಗದು'- ಎಂಬುದು ನಿಜ...

ಆದರೆ ಅದು ಅವಳು
ನಡುನಡುವೆ ನಿಲ್ಲುವದಕ್ಕೆ, 
ಮತ್ತೆ, ಮತ್ತೆ ಯೋಚಿಸುವದಕ್ಕೆ
ಸಂಬಂಧಿಸಿದಂತೆ  ಮಾತ್ರ ನಿಜ...
'ಅಲ್ಲಿಯೇ'  ಅಂದರೆ ' 
ನಿಂತಲ್ಲಿಯೇ ಅವಳು
ತನ್ನ ಶಕ್ತಿ ಒಗ್ಗೂಡಿಸಿಕೊಂಡು
ಮುಂದುವರಿಯುತ್ತಿದ್ದುದೂ
ಅಷ್ಟೇಏಏಏಏ ನಿಜ...

( ಈ 'ಅವಳು'- ಯಾರೂ ಆಗಬಹುದು.)

Friday 21 October 2022

ಅಷ್ಟೇ...

ಜಗತ್ತಿನಲ್ಲಿ, 
ಯಾವುದೂ ಬದಲಾಗುವದಿಲ್ಲ,
ರೂಪ ಬದಲಿಸುತ್ತವೆ,
ಅಷ್ಟೇ...
ನಮ್ಮ ವಿಚಾರ, ಭಾವನೆಗಳೂ ಹೊರತಲ್ಲ,
ಕೆಲವು ಕಾಣುತ್ತವೆ,
ಇನ್ನು ಕೆಲವು ಕಾಣುವದಿಲ್ಲ,
ಅಷ್ಟೇ ...

ಈ ಎಲ್ಲ ವಿಚಾರ, ಭಾವನೆಗಳೂ
ಒಂದು ರೀತಿಯ ಶಕ್ತಿಗಳೇ...
ಕಾಲಮಾನ ಬದಲಾದಂತೆ ಬದಲಾಗುತ್ತವೆ,
ಕೆಲವು ಕಾಲಗತಿಗೆ ಹೊಂದುತ್ತವೆ, 
ಇನ್ನು ಕೆಲವು ಇಲ್ಲ,- 
ಅಷ್ಟೇ...

ನಮ್ಮವೇ ವಿಚಾರಗಳು,
ಭಾವನೆಗಳು,
ಅರಿತೋ, ಅರಿಯದೆಯೋ,
ನಮ್ಮ ಒಳಗನ್ನು ನಿರ್ಧರಿಸುತ್ತವೆ...
ಪ್ರತಿಯೊಂದೂ ಒಂದು ಪುಟ್ಟ
ಯೋಚನೆಯಿಂದ ಶುರುವಾಗಿ 
ಮುಕ್ತಾಯಗೊಳ್ಳುತ್ತದೆ.
ಅಷ್ಟೇ...

ವ್ಯಕ್ತ ಭಾವನೆಗಳೇ
ಶಬ್ದರೂಪ ಪಡೆದ ಅವ್ಯಕ್ತ ವಿಚಾರಗಳು,
ಇವು ಶಕ್ತಿಯುತವಾದಾಗ
ಬದುಕು ಬದಲಾಗುತ್ತದೆ...
ನಮ್ಮನ್ನು ಅದರ ಭಾಗವಾಗಿಯೋ,
ಅದರಿಂದ ಹೊರತೋ ಮಾಡುತ್ತವೆ...
ಮನಸಿಗೆ ನೆಮ್ಮದಿಯನ್ನೋ,
ದುಗುಡವನ್ನೋ ತರುತ್ತವೆ...
ಅಷ್ಟೇ...

ಮಾತು ಸದಾ ಬೇಕಿರುವದಿಲ್ಲ,
ಕೆಲವೊಮ್ಮೆ ಮಾತೇ ಎಲ್ಲವೂ ಆಗುತ್ತವೆ.
ನಮ್ಮನ್ನು ಬಂಧಿಸುವ, 
ಮುಕ್ತಗೊಳಿಸುವ,
ಸಾಧನವಾಗಿ ಬಿಡುತ್ತವೆ,
ಒಮ್ಮೊಮ್ಮೆ, ಬರಿ 'ಇಲ್ಲ- ಹೌದು'ಗಳೇ
ಇಡಿ ಬದುಕನ್ನು
ಬದಲಾಯಿಸಿ ಬಿಡುತ್ತವೆ...
ಅಷ್ಟೇ...

Thursday 20 October 2022

ಸ್ನೇಹ...

ಯಾವ ವೇಳೆಯಲ್ಲಿ, 
ಎಷ್ಟು ಸಮಯ, ಮಾತನಾಡಿದಿರಿ
ಎಂಬುದು ಮುಖ್ಯವಲ್ಲ...
ಯಾರೊಂದಿಗೆ
ಎಷ್ಟು ಮನಬಿಚ್ಚಿ ಮಾತಾಡಬಲ್ಲಿರಿ,
ತಿಳಿಯದಿದ್ದರದು ಸಖ್ಯವಲ್ಲ...

ನಿಮ್ಮ ಮನದಲ್ಲೇನಿದೆ,-
ತಿಳಿಯಲು, ಒಂದೇ ಒಂದು 
ನೋಟ ಸಾಕು...
ಯಾವುದೇ ಶಂಕೆ, ಭಯವಿಲ್ಲದೆ ,
ಕ್ಷಣದಲ್ಲಿ ನೋವು ಮರೆಸುವ ಒಂದು ಅಪ್ಪುಗೆ ಬೇಕು...

ಹೃದಯ-ಹೃದಯಗಳ ತಟ್ಟಿ,
ಕೈ- ಕೈಗಳನ್ನು  ಬೆಸೆದು
ಎರಡೂ ಜೀವ ಒಂದೆನ್ನುವ ಸ್ನೇಹ 
ತುಂಬ ವಿರಳ...
ಕೆಲವರಿಂದ ಮುಖ ತಪ್ಪಿಸುತ್ತೇವೆ,
ಹಲವರಿಗೆ ಪೊಳ್ಳುನಗೆ ಒಪ್ಪಿಸುತ್ತೇವೆ
ಸಸ್ನೇಹ-ವಲ್ಲ  ಸರಳ...

ಪುಕ್ಕಟೆ ನೂರಕ್ಕಿಂತ
ನಿಜದ ಮೂರು ಸಾಕು...
ಎಲ್ಲರೂ/ಎಲ್ಲವೂ ಬಿಟ್ಟು ಹೋದ ಮೇಲೂ ಜೊತೆ ನಿಲ್ಲುವವರು ಬೇಕು.
"ಅವಳ ತೊಡಿಗೆ ಇವಳಿಗಿಟ್ಟು ನೋಡಬಯಸಿದೆ..."
        ‌‌‌‌‌    
          ‌‌‌‌‌  ಸುಮಾರು ಎರಡು ದಿನಗಳ ಹಿಂದೆ ಬೆಳಿಗ್ಗೆ ನನ್ನ  mobile ಸದ್ದಾಯಿತು. ಎತ್ತಿ 'ಹಲೋ' ಎಂದೆ.

" ನಮಸ್ಕಾರ ಮ್ಯಾಡಮ್, ಕೃಷ್ಣಾ ಕೌಲಗಿಯವರು ಬೇಕಾಗಿತ್ತು".

" ನಮಸ್ಕಾರ ಸರ್, ನಾನೇ ಮಾತಾಡ್ತಿರೋದು, ಹೇಳಿ"

" ನಿಮ್ಮ  ಪುಸ್ತಕ ಬಂದು ಮುಟ್ಟಿದೆ  ಮ್ಯಾಡಮ್. ತುಂಬ ಚನ್ನಾಗಿದೆ. ಸುಲಭವಾಗಿ  ಓದಿಸಿಕೊಂಡು  ಹೋಗ್ತಿದೆ. ಅಭಿನಂದನೆಗಳು ನಿಮಗೆ".

" ಸರ್, ಧನ್ಯವಾದಗಳು , ನಿಮ್ಮ ಅಭಿಪ್ರಾಯಕ್ಕೆ. ಖುಶಿಯಾಯ್ತು".

" ಇನ್ನೊಂದು ಮಾತು ಹೇಳಬಹುದಾ ಮ್ಯಾಡಮ್, ತಪ್ಪು ಭಾವಿಸಬಾರದು".

" ಇಲ್ಲ , ದಯವಿಟ್ಟು  ಹೇಳಿ"

"ನೀವು ಕನ್ನಡ ಲೇಖನಗಳಲ್ಲಿ ಇಂಗ್ಲಿಷ/ ಹಿಂದಿ ಶೀರ್ಷಿಕೆ, ಹಾಗೂ  ಪದಗಳ ಬಳಕೆ ಮಾಡಬಾರದಿತ್ತು" .

"ಊಟ  ಅಚ್ಚ  ಕನ್ನಡದ್ದೇ ಸರ್.  ಭಾಷೆಯ ಬಳಕೆ ಬರಿ  ಉಪ್ಪಿನಕಾಯಿ/ ಚಟ್ನಿಯಿದ್ದ ಹಾಗೇ".

" ಅದೂ ಬೇಡವಾಗಿತ್ತು. ನೀವು ಶಿಕ್ಷಕಿ. ಮೇಲಾಗಿ  ಹಿರಿಯರು.
ನೀವೇ ಕನ್ನಡ ಪೋಷಿಸದಿದ್ದರೆ ಹೇಗೆ? ಅಲ್ವಾ?"

" ಅದು ಕನ್ನಡದ ಅವಗಣನೆ ಅಲ್ಲ ಸರ್. ಕನ್ನಡಕ್ಕಿಷ್ಟು ಅಲಂಕಾರ. ಅಲ್ಲದೇ ಪ್ರತಿವರ್ಷ ಸಾವಿರಾರು ಕನ್ನಡ ಪದಗಳು ಆಕ್ಸಫರ್ಡ ಶಬ್ದಕೋಶದಲ್ಲಿ
ಇದ್ದ ರೀತಿಯಲ್ಲೇ ಒಪ್ಪಿತವಾಗುತ್ತಿವೆ. ಸರ್ವಸಮ್ಮತವೆನಿಸುತ್ತವೆ.  ವಿವಿಧ ಭಾಷೆಗಳ ನಡುವಣ ಅಡ್ಡಗೋಡೆ ಶಿಥಿಲವಾಗ್ತಿದೆ. ರೈಲು ನಿಲ್ದಾಣ, ದ್ವಿಚಕ್ರವಾಹನ, ಮಹಾವಿದ್ಯಾಲಯ, ಉಗಿಬಂಡಿ ,ವರ್ತಮಾನ ಪತ್ರಿಕೆಗಳು  ಹೀಗೆ ಬಳಸಿದರೆ ಸುಲಭಕ್ಕೆ ಅರ್ಥವಾಗದಷ್ಟು railway station, bicycle, college, University, Train , ಪೇಪರ್ಗಳು  ಕನ್ನಡದಲ್ಲಿ  ಹಾಸು ಹೊಕ್ಕಾಗಿವೆ. ಅಲ್ವಾ?"

"ಇರಬಹುದು  ಮ್ಯಾಡಮ್, ಆದರೂ ಅವೇ ಶಬ್ದಗಳನ್ನು ಕನ್ನಡ ಲಿಪಿಯಲ್ಲಿ ಬರೆಯೋಣ, ನಮ್ಮ ಊರಲ್ಲಿ ಸರಕಾರೀ ಕನ್ನಡ ಶಾಲೆಯಲ್ಲಿ ಇಂಗ್ಲಿಷ ಅಂಕಿಗಳನ್ನು ಬರೆಯುತ್ತಿದ್ದರು, ನಾನು ದಿನಾಲೂ ಶಾಲೆಗೆ ಹೋಗಿ ಕನ್ನಡದಲ್ಲಿ  ಕಲಿಸಲೇ
ಬೇಕೆಂದು ಆಗ್ರಹಿಸಿದೆ. ಈಗ ಅದನ್ನು  ಮಾಡುತ್ತಿದ್ದಾರೆ.
ನಾವು ಕೆಲ ಹಿರಿಯರಾದರೂ ಕನ್ನಡ ಉಳಿಸಲು ಪ್ರಯತ್ನಿಸೋಣ ಮ್ಯಾಡಮ್, ನಾಳಿನ ಪೀಳಿಗೆಗೆ ' ಬಿತ್ತಲು ಕನ್ನಡದ ಬೀಜಗಾಳುಗಳನ್ನು ಕಾಯ್ದಿಡೋಣ. ಇಲ್ಲದಿದ್ದರೆ  ನಮ್ಮ ಕನ್ನಡ ಬಹುಕಾಲ
ಉಳಿಯುವುದಿಲ್ಲ ಅಲ್ಲವೇ
ಮ್ಯಾಡಮ್?."

              ‌ನಿಜವಾದ ಅರ್ಥದಲ್ಲಿ ಯಾವುದೇ ಪ್ರಚಾರದ ಗೀಳಿಗೆ ಬೀಳದೇ  ಮನದಾಳದಿಂದ ಕನ್ನಡಕ್ಕಾಗಿ ಮಿಡಿಯುವ  ಹಿರಿಯ ,ಪ್ರಬುದ್ಧ ಹೃದಯವೊಂದನ್ನು ವೈಚಾರಿಕವಾಗಿ ವಾದಕ್ಕಿಳಿಸಿ  ಗಾಸಿಗೊಳಿಸಲು ಮನಸ್ಸಾಗಲಿಲ್ಲ. ಅವರು "' ನವೆಂಬರ್ ತಿಂಗಳಿಗೆ" ಮಾತ್ರ ಸೀಮಿತರಾದ ಕನ್ನಡಿಗರಾಗಿರಲಿಲ್ಲ. ಹುಟ್ಟಾ ಕನ್ನಡಿಗರಾಗಿದ್ದರು. ಅವರನ್ನು ಎದುರಿಸುವ ಯಾವುದೇ ಸಮರ್ಥವಾದ ಅಸ್ತ್ರ ನನ್ನ ಬತ್ತಳಿಕೆಯಲ್ಲಿ ಇರಲಿಲ್ಲ.ಬುದ್ಧಿ ಮಾತಾಡಿದ್ದರೆ ನನ್ನಮೆದುಳೂ ಉತ್ತರಿಸುತ್ತಿತ್ತು .ಅಲ್ಲಿ ಮಾತಾಡಿದ್ದು ಹೃದಯ. ಎರಡಕ್ಕೂ ತಾಳಮೇಳವಿರುವದಿಲ್ಲ ಎಂದೆನಿಸಿ ಅವರಿಗೆ ' ಆಯಿತು' ಎಂದು ಹೇಳಿ ಮಾತು ಮುಗಿಸಿ ಫೋನಿಟ್ಟೆ.
              'ಇಂಗ್ಲಿಷ  ಗೀತಗಳು' ಎಂಬ ಹೆಸರಿನಲ್ಲಿ ಅನೇಕ ಇಂಗ್ಲಿಷ ಭಾಷೆಯ ಅತ್ಯಮೂಲ್ಯ ಕವನಗಳನ್ನು ಕನ್ನಡಕ್ಕೆ ಕೊಟ್ಟ ಬಿ.ಎಮ್.ಶ್ರೀಯವರೇ ' ಅವಳ ತೊಡುಗೆ ಇವಳಿಗಿಟ್ಟು ನೋಡಬಯಸಿದೆ'_ ಎಂದಿದ್ದಾರೆ. ಇಂಗ್ಲಿಷ್ ಬೀಜಗಳನ್ನು ಬಿತ್ತಿ ಕನ್ನಡದ ಸಮೃದ್ಧ ಫಸಲು ತೆಗೆಯುವ ಕೆಲಸ ಮಾಡಿದ್ದಾರೆ. "ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು" ದಂಥ ಹಲವಾರು ಕವನಗಳು ಇಂಥ ಪ್ರಯತ್ನಗಳ ಫಲಶ್ರುತಿ.    ನಾನು ಅವರ ಪರಮ ಭಕ್ತೆ. ನನಗೆ ಕನ್ನಡದ ಬಗ್ಗೆ ಅಸಡ್ಡೆ ಇಲ್ಲ. ಇಂಗ್ಲಿಷ/ ಹಿಂದಿ  ನನ್ನ ಪದವಿಯ ವಿಷಯಗಳಾದರೂ ನನ್ನ ಬರಹಗಳಿಗೆ  ಕನ್ನಡವೇ ಆದ್ಯ.
ಏನಾದರೂ ಬೇರೆ ಭಾಷೆಯ ಒಲವಿದ್ದರೆ ಅದು ನನ್ನ ಕನ್ನಡವನ್ನು ಅಲಂಕರಿಸಿ ಚಂದಗೊಳಿಸಲಿಕ್ಕೆ ಮಾತ್ರ.
ಅನೇಕರು ' ನೀರ  ಮೇಲೆ ಅಲೆಯ ಉಂಗುರ" ದ ಅನ್ಯ ಭಾಷೆಯ ಶೀರ್ಷಿಕೆಗಳನ್ನು  ಮನಸಾರೆ ಮೆಚ್ಚಿದ್ದಾರೆ. ಪ್ರಶಂಶಿಸಿದ್ದಾರೆ. ಹಾಗೆಂದ ಮಾತ್ರಕ್ಕೆ  ನನಗೆ ಫೋನು ಮಾಡಿ ಸಲಹೆಯೊಂದನ್ನು ಕೊಟ್ಟ ಹಿರಿಯರನ್ನು ಧಿಕ್ಕರಿಸಿದೆ ಅಂತಲ್ಲ. ಅವರಿಗೆ  ನತಮಸ್ತಕಳಾಗಿ ಒಂದು ಮಾತು, _
   ‌‌‌     ಸರ್, ನೀವು ನೂರಕ್ಕೆ ನೂರು ಸರಿ...ನಿಮಗೆ ನತಮಸ್ತಕಳಾಗಿ ವಂದನೆಗಳನ್ನು ಸಲ್ಲಿಸುತ್ತೇನೆ, ಆದರೆ ನನ್ನದೂ ತಪ್ಪಲ್ಲ...🙏🙏🙏🙏🙏

                ‌ಭಾಷೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಅರಳಿಸುತ್ತವೆ. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಜಗತ್ತೇ ಒಂದು ಹಳ್ಳಿಯಂತೆ ಬದಲಾಗುತ್ತಿರುವ ಈ  ಪರ್ವಕಾಲದಲ್ಲಿ ಕಾಲ ಹಾಗೂ ಸಮಯದ ಜೊತೆ ಹೆಜ್ಜೆ ಹಾಕಲು ಸಹಕಾರಿಯಾಗಲಿವೆ. ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯ ಅಂಗವಾಗಿ ಕ್ರಮೇಣ ಕಿರಿದಾಗುತ್ತ ಹೊರಟು Global village ಎಂದು ಗುರುತಿಸಿಕೊಂಡಿರುವ  ಹೊಸ ಜಗತ್ತನ್ನು ಎಲ್ಲರಿಗೂ ಸರಿ ಸಮಾನ
ವಾಗಿ ತೆರೆದಿಡುವ ಬೆಳಕಿಂಡಿಗಳಾಗಿವೆ. ಬಡ, ಪ್ರಾಚೀನ, ಹಿಂದುಳಿದ,ಎಂಬ ಸಲ್ಲದ ನಾಮಾಂಕಿತಗಳಿಂದ ಒಂದು ಕಾಲಕ್ಕೆ ಅವಹೇಳನಕ್ಕೆ ಗುರಿಯಾಗುತ್ತಿದ್ದ ಭಾರತವೀಗ ವಿಶ್ವಗುರುವಾಗಿ ಗುರುತಿಸಿ ಕೊಳ್ಳುತ್ತಿದೆ. ಅನೇಕ ದೇಶಗಳಲ್ಲಿ ಭಾರತೀಯರೇ ಆಯಕಟ್ಟಿನ ಪ್ರಮುಖ ಹುದ್ದೆಗಳಿಗೆ  ಆಯ್ಕೆಯಾಗಿರುವದನ್ನು
ನೋಡುತ್ತಿದ್ದೇವೆ. ಸಂಸ್ಕೃತ , ಆಯುರ್ವೇದ ಚಿಕಿತ್ಸಾ ಪದ್ಧತಿ, ಯೋಗಾಭ್ಯಾಸಗಳು Indian Image ಕಳಚಿಕೊಂಡು ವಿಶ್ವ ಮಾನ್ಯವಾಗುತ್ತಿವೆ.
ಇಂತಹ ವೇಳೆಯಲ್ಲಿ ಕಣ್ಣುಮುಚ್ಚಿ ಕುಳಿತರೆ ನಷ್ಟ ನಮಗೇ ಹೊರತು ಅನ್ಯರಿಗಲ್ಲ. 
         
‌   ಕಾರಣ ಎಲ್ಲವೂ ಬೇಕು. ನಮ್ಮದನ್ನು
ಭದ್ರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ಯೊಂದಿಗೆ ಅನ್ಯರದು ಎಷ್ಟು? ಎಲ್ಲಿ? ಏಕೆ? ಹೇಗೆ? ಯಾವಾಗ? ಎಂಬುದನ್ನು ಚೆನ್ನಾಗಿ ಅರಿತು ನಡೆದರೆ ಯಾರೂ ನಮ್ಮನ್ನು, ನಮ್ಮದನ್ನು, ನಮ್ಮಿಂದ ಯಾವಕಾಲಕ್ಕೂ ಕಸಿಯಲಾರರು... 

  ಇದು ನನ್ನ ಅನಿಸಿಕೆ...

Tuesday 18 October 2022

ಈ ಜಗತ್ತಿನಲ್ಲಿ
ಅನೇಕರು ಸೋಮಾರಿಗಳಾಗಿರುತ್ತಾರೆ,
ಉತ್ಸಾಹ ಕಳೆದುಕೊಂಡವರಿರುತ್ತಾರೆ,
ಬದುಕಿನಲ್ಲಿ ಹೆಚ್ಚು ಭರವಸೆ
ಉಳಿಸಿಕೊಂಡಿರುವದಿಲ್ಲ,
ಒಮ್ಮೊಮ್ಮೆ ವಿನಾಕಾರಣವಾಗಿ-
ಅದೂ ಸಹಜವೇ...
ಸದಾ ಬಾಲಕ್ಕೆ ಬೆಂಕಿ ಹಚ್ಚಿಕೊಂಡು
ಭರ್ರನೇ ಮೇಲೇರುತ್ತಲೇ ಇರಲು
ನಾವೇನೂ ಮಿಂಚಿನೋಟಗಳ
ರಾಕೆಟ್ಗಳಲ್ಲವಲ್ಲ...

ಪ್ರಕೃತಿ ಕಡೆಗೊಮ್ಮೆ ಕಣ್ತೆರೆದು ನೋಡೋಣ,
ಕೆಲವೊಮ್ಮೆ ಬಯಲುಗಳು,
ಗಿಡಮರಗಳು, 
ಪ್ರಾಣಿ- ಪಕ್ಷಿಗಳೂ
ಕೂಡ ದೀರ್ಘ ವಿಶ್ರಾಂತಿಯಲ್ಲಿ
ಇರುತ್ತವೆ.
ಕೆಲವೊಮ್ಮೆ, ಕೆಲಕಾಲ-
ಹಾಗಿರುವದೂ ಪ್ರಕೃತಿ ನಿಯಮವೇ...
ಸುದೀರ್ಘ ರಾತ್ರಿಗಳು,
ಚಂದಿರ, ಏಕಾಂತ,
ವಿಸ್ತಾರದ ಬಯಲು,
ನಿಶ್ಚಲತೆಗಳೊಂದಿಗೂ
ಆರಾಮವಾಗಿ, 
ನಿರ್ಯೋಚನೆಯಿಂದ
ಕೆಲ ಹೊತ್ತು ಕಳೆಯೋಣ...
ಮತ್ತೆ 
ಮರುಜನ್ಮ ಪಡೆಯೋಣ...

Monday 17 October 2022

ನನಗೇ ಏಕೆ???...

ನೋವುಂಡ ಸಮಯದಲ್ಲಿ,
ವಿಶ್ವವೇ ನಿನ್ನ ವಿರುದ್ಧ ತಿರುಗಿ
ಬಿದ್ದಿದೆ- ಎನಿಸಿದಾಗ,
ಮುಸಲಧಾರೆ ಮಳೆಸುರಿದು 
ಕಂಗೆಟ್ಟು ಕೂತಾಗ,
ಎದುರಿಗಿರುವ ದಾರಿಗಳೆಲ್ಲವೂ
ಕಗ್ಗಂಟಾದಾಗ,
ಏನೂ ಮಾಡಲು ತೋಚದೇ 
ಕಂಗಾಲಾದಾಗ,
"ನನಗೇ ಏಕೆ ಹೀಗೇ"- 
ಎಂದೇನಾದರೂ ಅನಿಸಿದ್ದಿದೆಯಾ?

ಮೋಡಗಳ ಮರೆಯಲ್ಲಿ
ಸೂರ್ಯ ದಿಕ್ಕುಗಾಣದಾದಾಗ-
ನಕ್ಷತ್ರಗಳು ಹೊಳಪು ಕಳೆದುಕೊಂಡಾಗ,-
ಹಾಸಿಗೆಯಲ್ಲಿ ಹೊದಿಕೆ ಹೊದ್ದು, 
ತಲೆ ಅದರೊಳಗೆ ಹುದುಗಿಸಿಕೊಂಡು, 
ಬದುಕೇ ' ಭೂತ'ವಾಗಿ 
ಭಯ ಬೀಳಿಸಿದಾಗ,-
"ನನಗೇ ಏಕೆ ಹೀಗೆ?"-
ಎಂದೇನಾದರೂ ಅನಿಸಿದ್ದಿದೆಯಾ??...

ಹಾಗಾದರೆ,

ಜಗತ್ತು ಅತ್ಯಂತ ಸುಂದರವೆನಿಸಿದ ಗಳಿಗೆಯಲ್ಲಿ,-
ತುಂತುರು ಮಳೆ, ಮುತ್ತಿನ ಮಣಿ ಗಳೊಂದಿಗೆ ಕಾಮನಬಿಲ್ಲು ಮುಡಿದು ನಿಂತ ಇಳೆ  ಕಂಡಾಗ,-
"ಅಬ್ಬಾ! ಈ ಸುಂದರ ದಿನ ನನ್ನದು"-  ಎಂದೊಮ್ಮೆ ಮನ  ಹಿರಿಹಿರಿ ಹಿಗ್ಗಿದಾಗ,-
"ನನಗೇ ಏಕೆ"- ಎಂದು ಒಮ್ಮೆಯಾದ ರೂ ಅಂದುಕೊಳ್ಳಬಹುದಲ್ಲವೇ???

ಎಷ್ಟೋ ದಿನಗಳಿಂದ,
ಎಷ್ಟೋ ಜನರಿಗೆ, 
ಎಷ್ಟೋ ಸಂಗತಿಗಳಿಗೆ,
ಎಷ್ಟೋ ನೆನಪು-ನೋವುಗಳಿಗೆ,
ಗೊತ್ತಿಲ್ಲದೇ ಜೋತು ಬಿದ್ದಿದ್ದೇನೆ...

ಹತ್ತಬೇಕೆಂದುಕೊಂಡ
ಪರ್ವತಗಳನ್ನು 
ಬೆನ್ನ ಮೇಲೆ ಹೊತ್ತು
ನಿಂತಿದ್ದೇನೆ...
ಎಷ್ಟೆಂದರೆ,
ಹಿಂದಿರುಗಿ ಹೋಗಲಾರದಷ್ಟು...
ಎಷ್ಟೆಂದರೆ
ಮುಂದೆ ಅಡಿಯಿಡಲಾದಷ್ಟು...

ಅದು ನನ್ನ ಹೃದಯವನ್ನು ,
ನನ್ನ ಆತ್ಮವನ್ನು ,
ನನ್ನ ಇಚ್ಛಾಶಕ್ತಿ ಎಲ್ಲವನ್ನೂ
ಪುಡಿಪುಡಿಯಾಗಿಸಿದೆ...

ಎಷ್ಟೋ ದಿನ ಕಳೆದ ಮೇಲೂ-
ನನಗೊಂದೇ ಒಂದು ದಿಗಿಲು,
ಯಾವುದು  ಹೆಚ್ಚು ಕಠಿಣ???
ಬೆನ್ನ ಮೇಲಣ ಭಾರವನ್ನು ಹೊತ್ತು ಸಾಗುವದೋ???
ಅದನ್ನು ಕೊಡವಿ, ಬಿಟ್ಟು
ಮುಂದೆ ಸಾಗುವದೋ???

Sunday 16 October 2022

ಮೈ ಔರ್ ಮೇರೀ ತನಹಾಯೀ...

ನನ್ನ ದುಃಖ ಸದಾ ನನ್ನ ಸಂಗಾತಿ...
ನಾನದನ್ನು ಪೊರೆಯುತ್ತೇನೆ...
ಅದನ್ನು ಚಿಕ್ಕದಾಗಿಸುತ್ತೇನೆ,
ಕಷ್ಟಪಟ್ಟಾದರೂ ನಿಭಾಯಿಸುತ್ತೇನೆ.

ಆದರೆ-
ಅದನ್ನು ತಡೆಯುವದಿಲ್ಲ, 
ಇದ್ದರಿರಲಿ ಎಂದು ಅಲಕ್ಷಿಸುವದಿಲ್ಲ,
ಅದು ಸಂಪೂರ್ಣ 'ಸುರಿ'ದು ಹೋಗಿ
ಬರಿದಾಗುವವರೆಗೂ ಕಾಯುತ್ತೇನೆ...
ನಂತರ ನಿಧಾನವಾಗಿ ಎದ್ದು 
ನಮ್ಮ ದಿನದ ಪಾಡು ನಾವು ನೋಡಿಕೊಳ್ಳುತ್ತೇವೆ...
ಮಕ್ಕಳನ್ನು ಮುದ್ದಿಸುತ್ತೇವೆ...
ಒಂದು ಓಟ ಮುಗಿಸಿ 
ಅದೇ ಬಂದಂತೆ,
ಮುಂದಿನ ' ಮಹಾ ಓಟ' ಕ್ಕೊಂದು
ತರಬೇತಿ ಪಡೆದಂತೆ...

"ನಾನು ಸದಾ ನಿನ್ನೊಡನೆಯೇ ಇರುವವ "- 
ನನ್ನ ದುಃಖ ನನ್ನ ಕಿವಿಯಲ್ಲಿ ಪಿಸುಗುಡುತ್ತದೆ...
ನಾನೇನೂ ಹೇಳುವದಿಲ್ಲ...
ತಣ್ಣೀರು ಮುಖಕ್ಕೆ ಉಗ್ಗಿ ,
ಕೆಲಸಮಯ ಇಬ್ಬರೂ
ವಿರಮಿಸುತ್ತೇವೆ...

ಒಂದು ದೊಡ್ಡದರ ಪಕ್ಕ
ಇನ್ನೊಂದು ಸಣ್ಣದು...

Friday 14 October 2022

ಬದುಕೆಂದರೆ...

ಸದಾ ಆದಷ್ಟೂ ಶುದ್ಧ, 
ಮುಕ್ತನಗು ನಗುವುದು,
ಬದುಕು ಬಲ್ಲವರ
ಗೌರವ ಗಳಿಸುವದು,
ಮಕ್ಕಳನ್ನು ಮುದ್ದಿಸುವದು,
ಪ್ರಾಮಾಣಿಕ ವಿಮರ್ಶಕರಿಂದ
ಮೆಚ್ಚುಗೆ ಪಡೆಯುವದು,
ಸುಳ್ಳು ಸ್ನೇಹಿತರ
ಆಷಾಢಭೂತಿತನವನ್ನು
ಸಹಿಸಿಕೊಳ್ಳುವದು,
ಸೌಂದರ್ಯದ ಆರಾಧಕರಾಗಿರುವದು,
ಇತರರಲ್ಲಿಯ ವಿಶೇಷತೆಯನ್ನು
ಗುರುತಿಸಿ ಮನ್ನಿಸುವದು,
ಬದುಕಿಗೆ ವಿದಾಯ ಹೇಳುವಾಗ-
ಆರೋಗ್ಯವಂತ ಮಗುವನ್ನೋ, ಸ್ವಂತದ್ದೊಂದು ತುಂಡು/
ಹಸಿರು ಭೂಮಿಯನ್ನೋ,
ಅಷ್ಟಿಷ್ಟಾದರೂ ಸುಧಾರಿತ ಸಮಾಜವನ್ನೋ
ಗುರುತಾಗಿ ಬಿಟ್ಟು
ಹೋಗುವದು,
ನಿಮ್ಮ ಬದುಕಿನಿಂದ
ಸ್ಫೂರ್ತಿ ಪಡೆದಿರಬಹುದಾದ
ಒಂದಾದರೂ ಜೀವವಿದೆ ಎಂಬ 
ತೃಪ್ತಿಯಿಂದ ಬಾಳು ಕೊನೆಗೊಳ್ಳುವದು

-ಇದು 
ನಿಜವಾದ ಬದುಕು, 
ಯಶಸ್ಸು, 
ಸಾರ್ಥಕತೆ...

Thursday 13 October 2022

ಆಸರೆ...

ಹಿಂದಿರುಗಿ ನೋಡಿದರೆ,
ನನ್ನ ಬದುಕೊಂದು 
ದೊಡ್ಡದಾದ ಮರದ 
'ಆಸರೆ'ಯಡೆಯಲ್ಲಿ ಇತ್ತು ...
ಅದರಡಿಯಲ್ಲಿ ನನಗೆ
ನಾನು ಬಯಸಿದ್ದೆಲ್ಲ,
ನೆನೆಸಿದ್ದೆಲ್ಲ ಸಿಗುತ್ತಿತ್ತು...

ಗಾಳಿಯಿತ್ತು, ಬೆಳಕಿತ್ತು...
ಆರಾಮವಿತ್ತು, ಆಹಾರವಿತ್ತು...
ಆಡಿ ದಣಿಯುವಷ್ಟು-'ಆಡುಂಬೊಲ'(ಆಟದಬಯಲು)ವಿತ್ತು.

ಆದರೆ ಆ ದೊಡ್ಡ ಮರದ 
ಹಿಂದಿನ  ಬಾನಂಚು ಯಾಕೋ
ಭಯ ಬೀಳಿಸುತ್ತಿತ್ತು...
ಮುಂದೆ ಮುಂದೆ ಸರಿದಂತೆ,
ಮರವನ್ನೇ ತಬ್ಬಿ ಚಿಕ್ಕದಾಗಿಸಿದಂತೆ,
ಭಾಸವಾಗುತ್ತಿತ್ತು...
ನಾನು ಅದರ ಬಳಿ ಓಡಿ
ಅದನ್ನು ಗಟ್ಟಿಯಾಗಿ ಅಪ್ಪಿ
ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿ
ಮೊದಲಿನಂತಾಗಲೀ ಎಂದು
ಪ್ರಾರ್ಥಿಸಿದ ಹಾಗೆ ಕನವರಿಕೆಯಾಗುತ್ತಿತ್ತು...
ದಿನಗಳು ಕಳೆದವು...
ಮರ ಉರುಳಿತು.
ಜೊತೆಗೆ ಅದರ ಆ ವಿಚಿತ್ರವಾದ ಅಂಜಿಕೆಯೂ...

ಅದಕ್ಕಾಗಿ ಹುಡುಕಿದೆ, ಕಾಣಲಿಲ್ಲ,
ನಂತರದಲ್ಲಿ ಒಂದುದಿನ ನನ್ನಕಾಲ ಕೆಳಗೇ ಅದನ್ನು ಕಂಡೆ...
ನಾನೇ ಆ 'ಮರವಾದೆ' ಅಂದುಕೊಂಡೆ...
ಆಶ್ಚರ್ಯವೆಂದರೆ ಈಗ ಮತ್ತೆ
ಬೆಳಕಿತ್ತು, ಮೊದಲಿಗಿಂತ ಹೆಚ್ಚೇಯಿತ್ತು.

ದೂರದಲ್ಲಿ ಅಂತಹವೇ 
ಇನ್ನೂ ಕೆಲ ಮರಗಳನ್ನೂ, 
ಅಲ್ಲಿ ಆಡುವ ನನ್ನಂಥ ಚಿಣ್ಣರನ್ನೂ,ಅವರದೇ ಅದೇ ಭಯವನ್ನು, ನನ್ನಂತೆಯೇ ಅವರೂ
ಮರಗಳ ಅಪ್ಪಿ ನಿಂತದ್ದನ್ನೂ ಕಂಡೆ...
ಬಾಹುಗಳನ್ನು ಚಾಚಿದೆ, 
ಮರವನ್ನೆತ್ತಿ ಅಂಚಿಗೆ ನಡೆದೆ, 
ಅದು ಮರದ್ದೇ ನೆರಳು, 
ಅಂಜಿಕೆಗೆ ಅವಕಾಶವಿಲ್ಲ ಎಂದು ತೋರಿಸಿದೆ....
ನನಗೀಗ ಭಯವಿನಿತೂ ಇಲ್ಲ.
ನನಗೆ ಗೊತ್ತು,
ನನ್ನಮ್ಮ / ನನ್ನಪ್ಪ ಅವರೂ ಈಗ
ಖುಶಿ ಖುಶಿಯಾಗಿದ್ದಾರೆ...
ಅವರ ಮಗ ಕತ್ತಲೆಬಿಟ್ಟು 
ಬೆಳಕಿನೆಡೆಗೆ ನಿರ್ಭೀತನಾಗಿ
ನಡೆದು ಬಂದಿದ್ದಾನೆ/ ಬರುತ್ತಿದ್ದಾನೆ...
 ಬೇರಿನ್ನೇನು ಬೇಕು???








ನಾವಿಬ್ಬರೂ
ಮೊದಲ ಬಾರಿ
ಭೇಟಿಯಾದ ದಿನ-
ಸಾವಿರಾರು ಹೊಂಗನಸಗಳ  
ಹಿಡಿದಿಟ್ಟುಕೊಂಡ ಆ ನಿನ್ನ 
ಕಣ್ಣುಗಳ ರಹಸ್ಯ-
ನಿನ್ನ ಸುಂದರ ಮಂದಹಾಸದ 
ಗುಟ್ಟನರಿಯಲು ಬಯಸಿದ 
ನನ್ನ ತವಕ-
ನಿನ್ನ ಮನಸಿನ ಪುಟಗಳ ಮೇಲೆ 
ಬರೆದ ಪ್ರೇಮ ಗೀತೆಯನರಿತ ಹಿಗ್ಗು-
ಪರಸ್ಪರರ ಮನಮೆಚ್ಚಿ ಅರಿತುಕೊಂಡ
ಪ್ರೇಮದ ಪರಿಭಾಷೆ-
ಇವೆಲ್ಲವೂ,
ಇನ್ನೆಂದಿಗೂ 
ಹಿಂದಿರುಗಿ ನೋಡದಂತೆ 
ನಿನ್ನನ್ನು ,
ಇಂದಿನಿಂದಲೇ
ಹಿಂಬಾಲಿಸಲು
ಸಿಕ್ಕ  ಬಹಳಷ್ಟು
ಬದುಕಿನ ಭರವಸೆಗಳು...
ಕೈ ಚಲ್ಲಿ ಕೂಡಬೇಡ...

ಬದುಕಿನಲ್ಲಿ ಯಾವುದೂ ನಾವಂದುಕೊಂಡಂತೆಯೇ 
ನಡೆಯಲಿಕ್ಕಿಲ್ಲ...
ನಡೆಯಬೇಕೆಂದ  ದಾರಿ 
ನೇರ/ಸುಗಮವಾಗಿರಲಿಕ್ಕಿಲ್ಲ...
' ಸಾಲ'ವಿದ್ದಷ್ಟು 'ಜಮಾಪುಂಜಿ' ಇರಲಿಕ್ಕಿಲ್ಲ...
ನಿಟ್ಟುಸಿರಿನಷ್ಟು ನಗುವೂ ಬರಲಿಕ್ಕಿಲ್ಲ,
ಆದರೂ ಕುಗ್ಗಬೇಡ...
ಬೇಕೆಂದರೆ ವಿಶ್ರಾಂತಿ ಪಡೆ...
ಮುಂದೆ ಮುಂದಕ್ಕೆ ನಡೆ...

ಬದುಕೇ ವಿಚಿತ್ರ...ಅದರಲ್ಲಿ, ಸಾಕಷ್ಟು ತಿರುವು,ಹೊರಳುಗಳಿವೆ
ಕಲಿಯಬೇಕಾದ ಪಾಠಗಳಿವೆ...
ಗೆಲುವು ಕೈಹಿಡಿಯುವದೆಂದಾಗ ಸೋಲುಗಳೆದುರಾಗುತ್ತವೆ,
ಹೆಜ್ಜೆಗಳು ನಿಧಾನವಾಗುತ್ತವೆ
ಆದರೂ
ಮುಂದೆ ಮುಂದಕ್ಕೆ ನಡೆ...

ಅನೇಕಬಾರಿ ಗುರಿ ಹತ್ತಿರವೇ ಇರುತ್ತದೆ...
ಸೋತ/ದಣಿದ ಮನಕ್ಕದು ದೂರ- ಭಾಸವಾಗುತ್ತದೆ,
ಕೈ ಚಾಚಿದರೆ ಗೆಲವು ಸಿಗುವಾಗಲೇ ಮನ ಹತಾಶವಾಗುತ್ತದೆ.
ಮಿಂಚಿ ಹೋದಮೇಲೆ ಅದರ ಅರಿವಾಗುತ್ತದೆ...
ಕಾರಣ, ನಿಲ್ಲದೇ  
ಮುಂದೆ ಮುಂದಕ್ಕೆ ನಡೆ...

'ಜಯ' ವೆಂಬುದು ಮಗ್ಗಲು 
ಮುಗುಚಿ ಹಾಕಬೇಕಿರುವ  'ಅಪಜಯ'ವಷ್ಟೇ...
ದಟ್ಟ ಮೋಡಗಳಂಚಿಗಿರುವ
' ಬೆಳ್ಳಿಯ ಗೆರೆ 'ಯಷ್ಟೇ...
ಎಷ್ಟು ಹತ್ತರವೆಂಬುದು
ಅಂದಾಜಿಸಬಹುದು...
ದೂರದಂತೆ ಕಂಡರೂ
ಕೈಯಳತೆಯಲ್ಲೇ ಇರಬಹುದು...
ಕಾರಣ, ನಿಲ್ಲದೇ
ಮುಂದೆ ಮುಂದಕ್ಕೆ ನಡೆ...

Tuesday 11 October 2022

ಈ ಕವಿತೆ,
ನಾನು ಬರೆಯಬೇಕೆಂದುಕೊಂಡ  ಕವಿತೆಯಲ್ಲವೇ ಅಲ್ಲ...
ನನ್ನ ಬರೆಯುವ ಮೇಜಿನ  ಎದುರು
ಕುಳಿತಾಗ, 
ಎದುರಿಗೊಂದು ಖಾಲಿಪುಟ ಇಟ್ಟುಕೊಂಡಾಗ,
ತಲೆಯಲ್ಲಿದ್ದ ವಿಚಾರಗಳೇ ಒಂದು...
ಬರೆದು ಮುಗಿಸಿದಾಗ
ಪುಟಗಳಲ್ಲಿ ಮೂಡಿಬಂದ
ಸಾಲುಗಳೇ ಬೇರೊಂದು...

ಈ ಕವಿತೆ 
ಪ್ರಪಂಚದಿಂದ ಯುದ್ಧಗಳನ್ನೆಲ್ಲ ಆಮೂಲಾಗ್ರವಾಗಿ ಕಿತ್ತೆಸೆಯಬಲ್ಲ,
ಜಗತ್ತನ್ನೇ ಹರಿದು ಹಂಚಿ ಛಿದ್ರ ವಿಚ್ಛಿದ್ರ
ವಾಗಿಸಿದ ದುಷ್ಟ ಶಕ್ತಿಗಳನ್ನೆಲ್ಲ ಸದೆ ಬಡಿದು ದೇಶದೆಲ್ಲ 
ನೋವುಗಳಿಗೂ ಮುಲಾಮು ಆಗಬಲ್ಲ
ಕವಿತೆ ಯಾಗಬಹುದೆಂದು ಕೊಂಡಿದ್ದೆ...
ಇಲ್ಲ,ಹಾಗಾಗಲೇಯಿಲ್ಲ...
ಪ್ರೇಮಿಗಳು ಆ ಕವಿತೆಯ ಸಾಲುಗಳನ್ನು
ನಿತ್ಯ ಉಲಿಯುವಂತೆ,
ಈ ಕವನವನ್ನು ಜೋಗುಳವಾಗಿಸಿ
ಅಳುವ ಮಕ್ಕಳನ್ನು 
ಸಂತೈಸಿ ಅಮ್ಮಂದಿರು ನಲಿಯುವಂತೆ,
ಎಲ್ಲ ತಲೆಮಾರುಗಳಿಗೂ
ಹೊಸ ಭರವಸೆಯೊಂದು
ಉಳಿಯುವಂತೆ,
ಬರೆಯಬೇಕೆಂದಿದ್ದೆ...
ಊಹುಂ- 
ಅದಾಗಲೇಯಿಲ್ಲ...

ನನ್ನನ್ನು ನಂಬಿ...
ಅಗಾಧ ನಿರೀಕ್ಷೆಗಳೊಂದಿಗೆ,
ಮಾನವತೆಯ
ಅಪರೂಪದ ದೃಷ್ಟಾಂತಗಳನ್ನು ನೀಡುವ ನೀತಿಪಾಠಗಳ
ಮಿಳಿತ ಕವಿತೆ ಬರೆಯ ಬೇಕೆಂದೆ...
ಯಾವಾಗ, ಎಲ್ಲಿ, ಏಕೆ, ಹೇಗೆ  ಸೂಕ್ತ ಶಬ್ದಗಳು ತಪ್ಪಿಸಿಕೊಂಡು
ಈ ಪದಗಳಿಲ್ಲಿ ನುಸುಳಿದವೋ
ತಿಳಿಯಲೇಯಿಲ್ಲ...

Monday 10 October 2022

ಉಯ್ಯಾಲೆ...

ಅಮ್ಮನ ಮಡಿಲಲ್ಲಿ ತಲೆಯಿಟ್ಟು ಮಲಗಿದಾಗ ನಾನು ಯೋಚಿಸುತ್ತೇನೆ-
ಹೇಗೆ 'ಹಗಲು', 'ತಾರೆ'ಗಳನ್ನು ಅಡಗಿಸುತ್ತದೋ ಹಾಗೇ 
ಅಮ್ಮನೊಳಗೆ ನಾನೂ ಅಡಗಿದ್ದೆ...
ಅವಳು ತನಗೇ ತಾನೇ ಹಾಡು ಗುಣುಗುವದನ್ನು ಆಲಿಸುತ್ತಿದ್ದೆ- 
ಬೆನ್ನಿಗೆ ನನ್ನನ್ನು ಕಟ್ಟಿಕೊಂಡು 
ಬೆಳಗು/ ಬೈಗು ಮನೆಗೂ ಶಾಲೆಗೂ
ಎಡತಾಕುತ್ತಿದ್ದಳು, ನೆನಪಿಸಿಕೊಳ್ಳುತ್ತಿದ್ದೆ-

ಅವಳೇನು ಅಂದುಕೊಳ್ಳುತ್ತಿದ್ದಳು,
ಒಮ್ಮೆಯೂ ಯೋಚನೆ
ಬರಲೇಯಿಲ್ಲ...

ಈಗ ಮಗ ನನ್ನ ತೊಡೆಯಮೇಲೆ ತಲೆಯಿಟ್ಟು ಮಲಗಿದಾಗ 
ಯೋಚಿಸುತ್ತೇನೆ,
ನಾನು ಅವನ ಹಣೆಗೊತ್ತಿದ ಮುತ್ತುಗಳು ನನ್ನ ದುಗುಡಗಳನ್ನು
ಅವನಿಗೆ ಸಾಗಿಸುವದಿಲ್ಲ ತಾನೇ?
ದೂರದಲ್ಲಿ ನಕ್ಷತ್ರಗಳಿನ್ನೂ ಮಿನುಗುತ್ತಲೇ ಇವೆ- 
ಈಗಲೇ ಅವು ಮಸುಕಾಗಲಿಕ್ಕಿಲ್ಲವಷ್ಟೇ,
ಎನಿಸಿದಾಗ ನೆಮ್ಮದಿಯ
ಉಸಿರು ಬಿಡುತ್ತೇನೆ...

ಮಗನೇನು-
ಯೋಚಿಸುತ್ತಿರಬಹುದು-
ನನಗೆ ಅಂದಾಜು ಇಲ್ಲ...

ಎರಡು 'ಅಜ್ಞಾತ'ಗಳ ನಡುವೆ
ನನ್ನೀ ಬದುಕು...
ನನ್ನ ಹುಟ್ಟಿಗೂ ಮೊದಲಿನ ಅಮ್ಮನ ಅನಿಸಿಕೆಗಳು, 
ನನ್ನಾನಂತರದ ನನ್ನ ಮಗನ ಆಶಯಗಳು...
ಏನಿರಬಹುದು ನನಗೆ ಅರಿವಿಲ್ಲ...

'ಹೊಸದರ' ಹುಟ್ಟಿಗೆ ನಾಂದಿಯಾಗಿ 'ಇದ್ದುದರ' ಅಂತ್ಯವೇ?
ಬೇರೆಯೇ ಕಿಟಕಿಯೊಂದು ತೆರೆದುಕೊಂಡು 'ಹೊಸಸೂರ್ಯ'-ನ ಉದಯವೇ? ಏನೋ ಗೊತ್ತಿಲ್ಲ...
ಇದು ಹುಟ್ಟು ಸಾವುಗಳ 
ನಡುವಣದೊಂದು ವಿಶ್ರಾಂತ ಗೀತೆ-ಯಂತೂ ಅಹುದೇನೋ.....

Sunday 9 October 2022

ಬೆಳದಿಂಗಳ ಬಾಲೆ ...

ನಿರಭ್ರ ಆಗಸದಲ್ಲಿ
ಮಿನುಗುತಾರೆಗಳ ನಡುವೆ,
ಕತ್ತಲು ರಾತ್ರಿಯ ಎಲ್ಲ
ಮೆರಗುಗಳ  ಕಣ್ಣಂಚಿನಲ್ಲಿ
ಹಿಡಿದಿಟ್ಟುಕೊಂಡು
ಹಗಲಲ್ಲಿಯೂ ಕಾಣದ
ಮೋಡಿಯ ನಾದದಲ್ಲಿ
ಅವಳು ನಡೆಯುತ್ತಾಳೆ...

ಹಾಗೆ ಒಂದು ನೆರಳು,
ಹೀಗೆ ಒಂದು ಬೆಳಕಸೆಳಕು,
ಆ ಹೆಸರಿಸಲಾಗದೊಂದು
ವೈಭವದ ಪಲಕು
ದೈವೀ ಮುಖದ ಮೇಲೆ ಬಿಂಬಿಪ
ಸ್ವಚ್ಛ, ಶುಭ್ರ ಸ್ವರ್ಗದ 
ತುಣುಕೊಂದು ನಡೆದು ಬರುವಂತೆ...

ಆ ಗಲ್ಲಗಳ ಮೇಲೆ,
ಆ ಹುಬ್ಬುಗಳ ನಡುವೆ,
ಮೆದು, ಶಾಂತ, ಆದರೂ 
ನಿರಂತರ ನಿಲುವು, ಚಲುವು,
ಮನಮೋಹಕ ನಗೆ, ಮೊಗದ ಕಾಂತಿ,
ಚಂದದ ಬದುಕಿನ ಬಗ್ಗೆ ಅಗಾಧ ಪ್ರೀತಿ,
ಈ ಎಲ್ಲವುಗಳ ಸಂಗಾತಿ, ಸಂಪ್ರೀತಿ ಇವಳು ನಡೆದು ಬರುವ ರೀತಿ...

Saturday 8 October 2022

ಬಿರುಬೇಸಿಗೆಯಲ್ಲೊಂದು ತನಿಮಳೆ...

             " ಈ ಜಗತ್ತಿನಲ್ಲಿ ಆಸೆಗಳನ್ನು ತಣಿಸಲು ಎನೆಲ್ಲ ಇದೆ-ಆದರೆ ದುರಾಶೆ 
ಯನ್ನಲ್ಲ -" ಅಂತ ಒಂದು ಮಾತಿದೆ. ಕೋವಿಡ್ ಪೂರ್ವದಲ್ಲಿ ನಾವು ಅಂತಃಪುರದ ಸಖಿಯರು ಅವಕಾಶಗಳನ್ನು ಬಳಸಿಕೊಂಡದ್ದು ಹಾಗೇನೇ... ಪುಟ್ಟಪುಟ್ಟ ಕಾರಣಗಳನ್ನೂ ಸಂಭ್ರಮಕ್ಕೆ ನೆವವಾಗಿಸಿ ಹಿಗ್ಗಿದ್ದಿದೆ. ಆಗ ಬಂತು ನೋಡಿ ಕೋವಿಡ್ಕಾಲ...ಎರಡೂವರೆ ವರ್ಷಗಳ ಕಾಲ ಇಂಥ ಸ್ನೇಹಕೂಟ ಗಳಿಗೆ ತಡೆಯಾಜ್ಞೆ - ಎಲ್ಲರಿಗೂ ಮನೆವಾಸದ ಬಲವಂತದಮಾಘಸ್ನಾನ -ಸುಮಾರು ಆರು ತಿಂಗಳುಗಳಿಂದ ಸ್ವಲ್ಪಮಟ್ಟಿಗೆ ಉಸಿರುನಿರಾಳವಾದರೂ ಒಂದು ರೀತಿ ಸ್ವಯಂಸ್ಥಾನ ಬದ್ಧತೆಯ ಶಿಕ್ಷೆ ಕೊಟ್ಟುಕೊಂಡವರೇ ಜಾಸ್ತಿ. ನಮ್ಮಂಥ ವಯಸ್ಸಾದವರಿಗಂತೂ ಸ್ವಲ್ಪು ಹೆಚ್ಚೇ ಭಯ...ಇಂದು ಒಂದು ರೀತಿಯ ice breaking ಆದ ಅನುಭವ/ಅವಕಾಶ. ಇದಕ್ಕೆ ಕಾರಣ ನಮ್ಮ ಅಂತಃಪುರದ ಸಂಸ್ಥಾಪಕ  ಸದಸ್ಯರಲ್ಲಿ ಪ್ರಮುಖರಾದ ಜಯಲಕ್ಷ್ಮಿ
ಪಾಟೀಲ್. ಮನೆಯ ಪುಟ್ಟ ಕಾರ್ಯಕ್ರಮವೊಂದಕ್ಕೆ ದೊಡ್ಡ Frame ಒದಗಿಸಿ ಅದರಲ್ಲಿ ನಮ್ಮನ್ನು Fit ಮಾಡಿಸಿ ಎಲ್ಲರಿಗೂ ಅತಿ ಅವಶ್ಯಕತೆ ಇದ್ದ ಸಂಭ್ರಮವನ್ನು ಯಥೇಷ್ಟ ಒದಗಿಸಿದ್ದಾರೆ.ಅದರ ಕೆಲವು ಝಲಕುಗಳು...

Thursday 6 October 2022

English grammar... chart...

https://m.facebook.com/story.php?story_fbid=pfbid02c1MF3QVWbATY3g4zMTwj58kvfyZPYdfdj61XQAJcji7B8oWFmcFusJ5yKo4Aw6jil&id=375728422762056&sfnsn=wiwspwa

Sunday 2 October 2022

'ದುಃಖ'
-ವೆಂದರೆ,
ನನಗೆ ಬೇರೆಯದೇ ಒಂದು ಭಾವವಿತ್ತು-

ಅದು-
ಮನಸ್ಸಿಗೆ ಹತ್ತಿರವಾದವರ  
ಸಾವು- ನೋವಿನಲ್ಲಿದೆ ಎಂಬುದೊಂದು
ಅನಿಸಿಕೆಯಿತ್ತು...
ಅದನ್ನು ದಾಟಿ ದಡ ಸೇರುವದು  ನಿಜಕ್ಕೂ ತೀರದ 'ಸೆಣಸಾಟ' 
ಅಂದುಕೊಂಡಿದ್ದೆ...

ಇಲ್ಲ -
ಹಾಗೆ ದಾಟಿ ಸೇರಬಹುದಾದ ದಡವೆಂಬುದು ಇಲ್ಲವೇಯಿಲ್ಲ-
ಎಂಬುದೀಗ ನನಗೆ ಅರಿವಾಗಿದೆ...

ಏನಿದ್ದರೂ ಅದನ್ನು ತಾಳಿಕೊಳ್ಳಬೇಕು,
ಅದರೊಂದಿಗೆ ರಾಜಿಯಾಗಬೇಕು,
ಕೊನೆಯವರೆಗೂ ಅದು ಇರುವದೇ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು-

ದುಃಖವೆಂದರೆ ಅನುಭವಿಸಿ ಮುಗಿಸಬಹುದಾದದ್ದಲ್ಲ, 
'ಮುಗಿಯಿತು' ಎಂದು ನಿರಾಳವಾಗುವದಂತೂ ಅಲ್ಲವೇ ಅಲ್ಲ-

ಅದೆಂದರೆ, ಒಂದು ಪರಿಹಾರ,
ನಮ್ಮೊಳಗೇ ಇರುವ 
ಒಂದು ಗುಣಾತ್ಮಕ ಅಂಶ...
ನಮ್ಮೊಳಗೇ ಆಗಬೇಕಾದ ಆಂತರಿಕ 
ಬದಲಾವಣೆ...
ನಮ್ಮನ್ನೇ ನಾವು ಕಂಡುಕೊಳ್ಳುವ ಹೊಸದೊಂದು ಅರಿವು...
ಅಷ್ಟೇ...

Friday 23 September 2022

ಪ್ರೀತಿಯದೂ ತನ್ನದೇ ರೀತಿ...

ಇದೂ ಒಂದು ರೀತಿಯ
ಪ್ರೀತಿಯೇ ಅಲ್ಲವೇ?

ಚಹವನ್ನು ತನ್ನೊಳಗೆ ತುಂಬಿ ಹಿಡಿದಿಟ್ಟುಕೊಳ್ಳುವ ಕಪ್ಪಿನದು...

ನಾಲ್ಕೂ ಕಾಲುಗಳನ್ನೂರಿ ಗಟ್ಟಿಯಾಗಿ ನಿಲ್ಲುವ, ನಿಲ್ಲಿಸುವ ಕುರ್ಚಿಯದು...

ಕಾಲ್ಬೆರಳುಗಳನ್ನೋ, ಬೂಟುಗಳ ತಳವನ್ನೋ ಕಚ್ಚಿ ಹಿಡಿಯುವ  ನೆಲದ್ದು.

ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯುವ ಬೀರುಗಳೊಳಗಣ ಬಟ್ಟೆಗಳದ್ದು...

ಇಟ್ಟ ಬಟ್ಟಲಲ್ಲೇ ನಿಧಾನವಾಗಿ ಒಣಗುವ ಸೋಪಿನದು...

ಬೆನ್ನಿನ ತೇವವನ್ನು ನಿಧಾನವಾಗಿ ಹೀರುವ ಟಾವೆಲ್ಲಿನದು...

ಒಂದರ ಹಿಂದೆ ಇನ್ನೊಂದು ಆತುಕೊಂಡು 
ಸರದಿ ನಿಲ್ಲುವ ಆ ಮೆಟ್ಟಿಲುಗಳದು...

ಅಖಂಡವಾಗಿ ತೆರೆದುನಿಂತು ಬದುಕು/ ಬವಣೆ ತೋರಿಸುತ್ತಲೇ ಇರುವ ಆ ಉದಾರ ಕಿಟಕಿಗಳದು???

ಸಾಮಾನ್ಯಕ್ಕಿಂತ ಸಾಮಾನ್ಯವಾಗಿರುವ
ಎಷ್ಟೊಂದು ಸಂಗತಿಗಳಿಗೆ - ಅಸಾಮಾನ್ಯ ತಾಳ್ಮೆಯಿದೆ ಎಂಬುದು
ನನಗೆ ಅಚ್ಚರಿಯೋ ಅಚ್ಚರಿ...

Thursday 22 September 2022

ಬಿಡುವು...

ಆಗಾಗ ಅರಗಳಿಗೆಯಾದರೂ ನಿಂತು
ಹೊರಳಿ ನೋಡಲಾಗದಷ್ಟು ನಮ್ಮ
ಬದುಕೆಂದೂ ಭಾರವಾಗಬಾರದು...

ಅಲ್ಲಲ್ಲಿ, ಗಿಡಮರಗಳೆಡೆಯಲ್ಲಿ
ಗುಂಪಾಗಿ ಹುಲ್ಲು ಮೇಯುವ ಹಸು- ಕುರಿಗಳನ್ನು ನೋಡಲಾಗದಷ್ಟು,

ಅಡವಿಗಳಲ್ಲಿ ಪುಟ್ಟ ಅಳಿಲುಗಳು 
ಹುಲ್ಲಿನಡಿ ಕಾಯಿಗಳನ್ನು ಅಡಗಿಸಿಡುವ
ಚಂದ ಸವಿಯಲಾರದಷ್ಟು...

ಸೂರ್ಯಕಿರಣಗಳ ಬೆಳಕಿನಲ್ಲಿ ಝರಿ, ಕಾಲುವೆಗಳಲ್ಲಿ,ರಾತ್ರಿಯತಾರೆಗಳಂದದ ಮಿಂಚುಗಳನ್ನು ಕಂಡು ಬೆರಗಾಗದಷ್ಟು,

ಚಲುವೆಂಬ 'ಚಲ್ವಿಕೆ'ಯ 
ಕಾಲಗೆಜ್ಜೆಗಳ ನರ್ತನವನ್ನು 
ಕಣ್ಣುಗಳು ಆಸ್ವಾದಿಸಿದ
ಖುಶಿ ಮುಖದ ಮೇಲಿಳಿದು ಮುಗುಳ್ನಗೆಯಾಗಿ  
ಹೊರ ಚಲ್ಲುವವರೆಗೆ ಕಾಯದಷ್ಟು, 

ನಮ್ಮ ಬದುಕೇ ನಮಗೆ ಭಾರವಾಗಬಾರದು... ಬಡವಾಗಬಾರದು...

Wednesday 21 September 2022

ನನ್ನೊಳಗಿನ ನೀನು...

ಗಾಳಿಯಲಿಂದು
ನಿನ್ನ ದನಿ ಕೇಳಿದಂತನಿಸಿ
ನೋಡಲೆಂದು ಮುಖ ತಿರುಗಿತ್ತು...
ಗಾಳಿಯ ಬಿಸುಪೆನ್ನ
ಮುದ್ದಿಸಿತು--
ನಿಂತಲ್ಲೇ ಮಾತೇ ಮರೆತು ಹೋಗಿತ್ತು...

ಆಗಸವೇರಿ ಬಂದ 
ಸೂರ್ಯಕಿರಣಗಳಲ್ಲಿ
ನಿನ್ನದೇ ಸ್ಪರ್ಶ ಸುಖವಿತ್ತು...
ನಿನ್ನಾಲಿಂಗನಕೆ ಕಾದು
ಕಣ್ಮುಚ್ಚಿ ನಿಂತೆ--
ಅರೆಕ್ಷಣ, ನನ್ನೆದೆಬಡಿತ ಗಡಿಮೀರಿತ್ತು...

ಕಿಟಕಿಯಂಚಿನ ಗಾಜಿನಲಿ
ನಿನ್ನ ಚಲುವ ಮೊಗವ ಕಂಡೆ,
ಹೊರಗೆ ಮಳೆ ಹನಿಯುತಿತ್ತು...
ಬಿದ್ದ ಪ್ರತಿ ಹನಿಯಲ್ಲಿಯೂ
ನನಗೆ ನಿನ್ನದೇ ಮಧುರ 
ಹೆಸರು ಕೇಳುತಿತ್ತು...

ನಿನ್ನ ನೆನಪುಗಳನೆತ್ತಿ-
ಎನ್ನ ಎದೆಗವಚಿ ಹಿಡಿದೆ,
ಬದುಕು ಪರಿಪೂರ್ಣವೆನಿಸಿತ್ತು...
ನೀನಿಲ್ಲದಿದ್ದರೇನಂತೆ?
ನೀನೆಂದಿಗೂ ನನ್ನದೇ  
ಇನ್ನರ್ಧ ಭಾಗವೆನಿಸಿತ್ತು...

ಆಗಸದ ಅಂಗಳದಿ,
ಸೂರ್ಯ ಹುಟ್ಟುವವರೆಗೂ-
ಭೂಮಿಯ ಮೇಲೆ ಗಾಳಿ 
ಬೀಸುವ ವರೆಗೂ-
ಮಳೆಯಿಂದ‌ ಇಳೆ ತೋಯುವವರೆಗೂ-
"ನೀನು ನನ್ನಳಗೇನೇ"-
ಎಂಬುದು ನನ್ನ ಹೃದಯಕ್ಕೆ ಅರಿವಾಯ್ತು...

Monday 19 September 2022

ಅಭಯಾರಣ್ಯ...

ಎಲ್ಲದರಿಂದ ದೂರದಲ್ಲಿ
ನನ್ನದೇ ಒಂದು ' ಅಭಯಾರಣ್ಯ'ದಲ್ಲಿ,
ಮುಂದೆ ಹಾಸಿರುವ ಹೊಲದ ಎದುರುಗಡೆ ಪುಟ್ಟ''ಗೂಡ"ನೊಂದ ಮಾಡಿಕೊಂಡಿದ್ದೇನೆ...

ನಕ್ಷತ್ರಪುಂಜಿತ ರಾತ್ರಿಯಲ್ಲಿ, ವರ್ಣಮಯ ಆಗಸದ ಕೆಳಗೆ, 
ನನ್ನ ಕೋಣೆಯಲ್ಲಿಯೇ
ಕೆಂಪು ಗುಲಾಬಿಗಳು ಅರಳುತ್ತವೆ...
ಚಂದ್ರನ ಶೀತಲ ಕಿರಣಗಳ ಹೊದ್ದು ಮಲಗಿದ ನನ್ನ ಮೇಲ್ಗಡೆ ಅಗಣಿತ ತಾರಾಗಣ ಹೊಳೆಯುತ್ತವೆ...

ಅರುಣೋದಯವಾಯಿತೋ,
ಹಾಡು ಹಕ್ಕಿಗಳ  ಸವಿಗಾನ...
ನಸುಕಿನ ಮಂದಗಾಳಿಯ ಜೊತೆಗೆ ಸೂರ್ಯ ರಶ್ಮಿಗಳ ಸ್ನಾನ...
ಮೇಲೆ ಅದರಕ್ಕರೆಯಲಿ ಮಿಂದೆದ್ದ ಬಂಗಾರದೆಲೆಗಳ ಜೋಕಾಲಿ...
ಸುತ್ತ ಗಿಡಮರಗಳ ಹೃದಯಗಾನದಲಿ.

ಕೆಳಗೆ ಭೂಮಿತಾಯ ಮಡಿಲಲ್ಲಿ ನಾನು.

ಇಂಥ ಗಳಿಗೆಗಳು ನನಗೆ 
ಅವನಿತ್ತ  ದೈವೀ ಪ್ರಸಾದ,
ಕಳೆಯಬಹುದಾದ ಬೇರೆ ಏನೆಲ್ಲ ದಾರಿಗಳಿದ್ದರೂ ಇದೇ ನನಗೆ 
ಅವನಿಂದ ದೊರೆತ ಹಸಾದ...

Saturday 17 September 2022


"ಹೀಗಾಗಬಾರದಿತ್ತು,"
"ನಿಮಗಾದ ನಷ್ಟಕ್ಕೆ ಖೇದವಿದೆ..."
"ಮನಸ್ಸು ಗಟ್ಟಿಮಾಡಿಕೊಳ್ಳಿ-
 ಬೇರೆ ದಾರಿಯೇನಿದೆ?..."

"ಎಲ್ಲರೂ ಒಂದಿಲ್ಲ ಒಂದುದಿನ   ಹೋಗಲೇಬೇಕು..."
'ಸಾವು ಕೊನೆಯಲ್ಲ,ಆರಂಭ'- 
ಎಂಬುದನರಿಯಲೇಬೇಕು...

"ಮೊದಲೇ ಹೋದ-
'ಅಲ್ಲಿ'ಯ ನಂಟರನ್ನು ಸೇರುತ್ತಾರೆ"...
ನಾವಲ್ಲಿ ಹೋದಾಗ ತೆರೆದ ಬಾಹುಗಳಿಂದ ಸ್ವಾಗತಿಸುತ್ತಾರೆ..."

ಅವರಾಡಿದ ಪ್ರತಿ ಪದದಲ್ಲೂ ಪ್ರೀತಿಯಿದೆ ನನಗೆ ಗೊತ್ತು...
ಪ್ರತಿಮಾತೂ ಹೃದಯದಾಳದಿಂದ
ಬಂದದ್ದು , ಅದೂ ಗೊತ್ತು...

ಆದರೆ ಆ ಎಲ್ಲ'ಮಾತುಗಳ'-
'ಪ್ರೀತಿಯ' ಒಟ್ಟು ಮೊತ್ತ'ವೂ ಸಹ
ನಿನ್ನಿಂದಾದ ಶೂನ್ಯವನ್ನು
ಎಳ್ಳಷ್ಟೂ ತುಂಬಲಾರದೆಂಬುದು-
ನನಗೆ ಮಾತ್ರ-ವೇ ಗೊತ್ತು...

Friday 16 September 2022

ದ್ವಂದ್ವ...

ನನಗೆ ಯಾವಾಗಲೂ ದ್ವಂದ್ವ...
ಬಯಲಾಗದೇ ಒಳಗೇ ಹುದುಗಿರಲೇ?
ಎಲ್ಲರೊಂದಿಗೆ ಮುಕ್ತವಾಗಿರಲೇ?

ಅನಿಶ್ಚಿತತೆಯ ಕಾತರತೆಯಲ್ಲಿರಲೇ?
ಅಭಯದ  ಶ್ರೀರಕ್ಷೆಯಲ್ಲಿರಲೇ?
ಸ್ವಾತಂತ್ರ್ಯಕ್ಕಾಗಿ ಹಂಬಲಿಸಲೇ?
ಬೇರುಗಳೊಂದಿಗೆ ಬೆಸೆದುಕೊಳ್ಳಲೇ?

ಪ್ರವಾಹದ ಸೆಳೆತಕ್ಕೆ ಸಿಕ್ಕು ಆಚೀಚೆ
ಸದಾ ಸ್ಥಳ ಬದಲಿಸುತ್ತಲೇ
ಇರುವ ತೆರೆಗಳಂತೆ ನಾನು...
ನಿರಂತರ ಅತ್ತಿಂದಿತ್ತ,ಇತ್ತಿಂದತ್ತ
ಹೊಯ್ದಾಡುವ ಗಡಿಯಾರದ 
ಲೋಲಕ ನಾನು...
ನಾನಾರೆಂದು ಅರಿಯಲು ಇನ್ನೆಷ್ಟು
ಸಮಯ ಕಾಯಬೇಕೋ...

Sunday 11 September 2022

ನಾನು ಏನು ಧರಿಸಬೇಕು?
ಹೇಗೆ ಕಾಣಿಸಿಕೊಳ್ಳಬೇಕು?
-ಹೇಳಿದ್ದೇ ಹೇಳಿದ್ದು...
ಮಾತು ಪಾಲಿಸಿದೆ, ಸರಿಹೋಗಲಿಲ್ಲ...
ಬೇರೆ ಯಾರೋ ಹೇಳಿದ ರೀತಿ,ನೀತಿ
ನನಗೆ ಒಗ್ಗಲೇಯಿಲ್ಲ...
ನನಗೆ ಭಿನ್ನವಾದದ್ದೇನೋ ಮಾಡುವಾಸೆ,
ಅಪಾಯ ಎದುರಿಸುವ ಭಯ ನನಗೆಂದಿಗೂ ಇಲ್ಲ, ನೋವುಂಡಿದ್ದೇನೆ- ನಿಜ, ಆದರೆ ಪ್ರೀತಿ ಗಳಿಸಲು
ತೆರಬೇಕಾದ ಯಾವೊಂದೂ ಬೆಲೆಯೂ ನನಗೆ ಲೆಕ್ಕವಿಲ್ಲ...ನೀವು ಒಪ್ಪಿ/ ಬಿಡಿ, ಅದು ನನ್ನ ಆಯ್ಕೆ,ಅದರಲ್ಲಿ ಸಂದೇಹವಿಲ್ಲ...
ಅದಕ್ಕಾಗಿ ನಿದ್ರೆಯಿಲ್ಲದ
ರಾತ್ರಿಗಳನ್ನು ಕಳೆದಿದ್ದೇನೆ, 
ರಾತ್ರಿಯಿಡೀ ಮಗ್ಗಲು ಬದಲಾಯಿಸಿದ್ದೇನೆ.
ಹತಾಶಳಾದ ಮಾತ್ರಕ್ಕೆ ಬದುಕುವದನ್ನು,
ಪ್ರೀತಿಸುವದನ್ನು ಬಿಟ್ಟು ಬಿಡುವಷ್ಟು ಮೂರ್ಖಳಲ್ಲ ನಾನು...
ತಪ್ಪುಗಳಿಂದ ಕಲಿತಿದ್ದೇನೆ, 
ನನ್ನ ಸುತ್ತಲೊಂದು ಎತ್ತರದ ಗೋಡೆ ಕಟ್ಟಿಕೊಂಡಿದ್ದೇನೆ...
ಬದಲಾಗಲೇಬೇಕೆಂಬ 
ಯೋಚನೆಯಿಲ್ಲ ನನಗೆ,
ಬಣ್ಣಬಣ್ಣದ ಮಾತುಗಳ,
ಸಲ್ಲದ ಕನಸುಗಳ ಹಂಬಲವಿಲ್ಲ...
ನನಗೆ ಬೇಕಾದ್ದು ನಿಜವಾದ ಪ್ರೀತಿ, ಆರ್ದ್ರ ಭಾವನೆಗಳು,ಆತ್ಮೀಯ ನೆಲೆಯಲ್ಲಿ ಸಿಗುವ ನಿಜವಾದ ಸಂಬಂಧಗಳು...
ಜಗತ್ತು ನನ್ನ ಬಗ್ಗೆ ಏನೇ ಹೇಳಲಿ, ನನ್ನನ್ನು ಒಪ್ಪಿಕೊಳ್ಳಲಿ, ಬಿಡಲಿ,
ನಾನು ಲೆಕ್ಕಿಸುವದಿಲ್ಲ,
ನನ್ನ ಒಲವು,ನಿಲುವು,ಬಲವು ಏನೆಂದು ನನಗೆ ಚನ್ನಾಗಿ ಗೊತ್ತು...
ನಾನು ದಿನದಿನ‌ಕ್ಕೆ ಉಳಿಯಬೇಕು, ಬೆಳೆಯಬೇಕು,ನಲಿಯಬೇಕು.
ಅದನ್ನು ಇಂದೇ ಈಗಲೇ ಆರಂಭಿಸಬೇಕು...
ನನಗೆ ಗೊತ್ತು, 
ಇಂದಿಲ್ಲ ಎಂದಾದರೆ ಮುಂದೆಂದೂ ಇಲ್ಲ...

Saturday 10 September 2022

ನಿನ್ನದು ಮೃದು  ಸ್ವಭಾವವಾ?
ಒಳ್ಳೆಯದೇ, ನಿನ್ನದು ಮೃದು  ಸ್ವಭಾವವಾ?
ಒಳ್ಳೆಯದು,
ಜಗತ್ತಿಗೆ ಅನುಕಂಪದ
ಅವಶ್ಯಕತೆಯಿದೆ...
ನಿನ್ನದು ಕಠೋರ ಸ್ವಭಾವವೇ? ಒಳ್ಳೆಯದು,ಜಗತ್ತಿಗೆ
ನಿಷ್ಠ ಸೈನಿಕರ ಅವಶ್ಯಕತೆಯಿದೆ...
ನಿನ್ನದು ಶಾಂತ ನಿಲುವೇ? ಒಳ್ಳೆಯದೇ...
ಜಗತ್ತಿಗೆ
ಮಾತನಾಡುವ ಮೊದಲು ಹಲವುಬಾರಿ
ಯೋಚಿಸುವವರು ಬೇಕು.
ನಿನ್ನದು ಗಟ್ಟಿ ದನಿಯೇ?
ಒಳ್ಳೆಯದೇ, 
ಜಗತ್ತಿಗೆ 
ಗಲ್ಲಿಗಲ್ಲಿಯ ಮೂಲೆಗಳಿಗೆ,
ಪರ್ವತದ ತುದಿಗಳಲ್ಲಿ
ಅಂದೋಲನಕಾರರು ಬೇಕು...ಮುಳ್ಳು ಹಾದಿಗಳಲ್ಲೂ ಪರಸ್ಪರ ಕೈಹಿಡಿದು ಮುಂದೆ ಸಾಗಬೇಕು...
ನೀವು ಹತಾಶರಾ? 
ಒಳ್ಳೆಯದೇ...
ಜಗತ್ತಿಗೆ ಇತರರ ನೋವು ಅರಿಯಬಲ್ಲವರು ಬೇಕು...
ನೀವು ನೋವ ಗೆದ್ದವರಾ? 
ಒಳ್ಳೆಯದು,
ಜಗತ್ತಿಗೆ ಪವಾಡಗಳ ಕುರಿತಾಗಿ ಕಥೆ ಹೇಳಿ ಧೈರ್ಯ ತುಂಬುವವರು ಬೇಕು...
ನೀವು ಜೀವಂತವಾಗಿದ್ದೀರಾ?  ಒಳ್ಳೆಯದು,
ಹಾಗಾದರೆ ಮತ್ತೇಕೆ ತಡ?
ಕುಣಿಯಿರಿ/ ಹಾಡಿರಿ/ಮಾತಾಡಿ/ ಸೃಷ್ಟಿಸಿರಿ/
ಆಲಿಸಿರಿ/ ಅನುಭವಿಸಿ/ ತೆಗೆದುಕೊಳ್ಳಿ/ ಕೊಡಿ/ಚಲಿಸುತ್ತಿರಿ,
ನಡೆಯಲಿ ಬದುಕು!!!
ಜಗತ್ತಿಗೆಅನುಕಂಪದ ಅವಶ್ಯಕತೆಯಿದೆ
ನಿನ್ನದು ಕಠೋರ ಸ್ವಭಾವವೇ? ಒಳ್ಳೆಯದೇ,
ಜಗತ್ತಿಗೆ ನಿಷ್ಠಸೈನಿಕರ ಅವಶ್ಯಕತೆಯಿದೆ 
ನಿನ್ನದು ಶಾಂತ ನಿಲುವೇ? ಒಳ್ಳೆಯದೇ...
ಜಗತ್ತಿಗೆ ಮಾತನಾಡುವ ಮೊದಲು ಹಲವುಬಾರಿಯೋಚಿಸುವವರು ಬೇಕು.
ನಿನ್ನದು ಗಟ್ಟಿ ದನಿಯೇ?
ಒಳ್ಳೆಯದೇ, 
ಜಗತ್ತಿಗೆ,ಗಲ್ಲಿಗಲ್ಲಿಯ ಮೂಲೆಗಳಿಗೆ,
ಪರ್ವತದ ತುದಿಗಳಲ್ಲಿ
ಅಂದೋಲನಕಾರರು ಬೇಕು...
ಮುಳ್ಳು ಹಾದಿಗಳಲ್ಲೂ ಪರಸ್ಪರ ಕೈಹಿಡಿದು ಮುಂದೆ ಸಾಗಬೇಕು...
ನೀವು ಹತಾಶರಾ? ಸೋತವರಾ?
ಒಳ್ಳೆಯದೇ...
ಜಗತ್ತಿಗೆ ಇತರರ ನೋವು ಅರಿಯಬಲ್ಲವರು ಬೇಕು...
ನೀವು ನೋವ ಗೆದ್ದವರಾ? 
ಒಳ್ಳೆಯದೇ,
ಜಗತ್ತಿಗೆ ಪವಾಡಗಳ ಕುರಿತಾಗಿ ಕಥೆ ಹೇಳಿ ಧೈರ್ಯ ತುಂಬುವವರು ಬೇಕು...
ನೀವು ಜೀವಂತವಾಗಿದ್ದೀರಾ?  ಒಳ್ಳೆಯದೇ,
ಹಾಗಾದರೆ ಮತ್ತೇಕೆ ತಡ?
ಕುಣಿಯಿರಿ/ ಹಾಡಿರಿ/ಮಾತಾಡಿ/ ಸೃಷ್ಟಿಸಿರಿ/ಆಲಿಸಿರಿ/ ಅನುಭವಿಸಿ/ ತೆಗೆದುಕೊಳ್ಳಿ/ ಕೊಡಿ/ಚಲಿಸುತ್ತಿರಿ,
ನಡೆಯಲಿ ಬದುಕು!!!

Wednesday 7 September 2022


ಅಭಯ...

ಒಂದು ಮಾತು 
ಸದಾ ನೆನಪಿಡು...
ನಾನು ಯಾವಾಗಲೂ
ನಿನ್ನೊಡನೆಯೇ ಇರುವೆ...
ಎಂದಿಗೂ ನಾ
ಮೈಮರೆಯುವದಿಲ್ಲ...

ಬೀಸುವ ಗಾಳಿಯ 
ಪ್ರತಿ ಉಸುರಿನಲ್ಲೂ
ನಾನಿರುವೆ...
ಹಿಮರಾಶಿಯ
ನೆತ್ತಿಯಮೇಲಿನ
ಮಿಂಚು- ಮಣಿಗಳಲ್ಲಿ
ನಾನಿರುವೆ...

ಮಾಗಿದ ತೆನೆಗಳ  
ಹೊನ್ನ ಬೆಳಕಿನಲಿ 
ನಾನಿರುವೆ...
ಮಾಗಿಯ ಕಾಲದ 
ತುಂತುರು ಹನಿಗಳಲ್ಲಿ 
ನಾನಿರುವೆ...

ನಸುಕಿನ ನೀರವದಲಿ  
ನಿನ್ನ ಚೇತನವಾಗಿ 
ನಾನಿರುವೆ...
ಕತ್ತಲ ರಾತ್ರಿಯ
ನಕ್ಷತ್ರಗಳ ಮಿಣುಕಿನಲಿ
ನಾನಿರುವೆ...

ನಾನಿಲ್ಲ ಎಂದು 
ಹೇಳಿದವರಾರು?
ಪ್ರತಿ ದಿನದ
ಹೊಸಬೆಳಕಿನಲ್ಲೂ
ನಿನ್ನೊಡನೆ
ನಾನಿರುವೆ...

Sunday 4 September 2022

JOY

Joy does not arrive with a fanfare, 
on a red carpet strewn with the flowers of a perfect life.

Joy sneaks in, as you pour a cup of coffee,
watching the sun hit your favourite tree, just right.

And you usher joy away,
because you are not ready for it. 
Your house is not as it must be,
for such a distinguished guest.

But joy cares nothing for your messy home, 
or your bank-balance,
or your waistline, you see.

Joy is supposed to slither through the cracks of your imperfect life,
that’s how joy works.

You cannot invite her, you can only be ready when she appears.
And hug her with meaning,
because in this very moment, 
joy chose you.

Donna Ashworth...
ಖುಶಿ...

'ಖುಶಿ'ಯೆಂಬುದು,
'ಪರಿಪೂರ್ಣಜೀವನ'ವೆಂಬ 
ಕೆಂಪು ಹಾಸಿನ‌ಮೇಲೆ
ಬಣ್ಣಬಣ್ಣಗಳ ಹೂಗಳನ್ನು  ತೂರಿಕೊಂಡು, ಬೆಂಬಲಿಗರೊಡನೆ
ನಡೆದು ಬರುವದಿಲ್ಲ...

ಕಪ್ಪಿಗೆ ನೀನು ಬಿಸಿ ಬಿಸಿ ಕಾಫಿ  ಸುರಿದುಕೊಂಡಾಗ,
ನೀ ನೆಟ್ಟ ಮರದಮೇಲೆ
ಬಂಗಾರದ ಕಿರಣಗಳು
ಹರಡಿದ್ದು ಕಂಡಾಗ, ಖುಶಿ 
ಸದ್ದಿಲ್ಲದೇ ನುಸುಳಿ ಬರಬಹುದು...

ನೀನದನು ನಿರೀಕ್ಷಿಸದಿದ್ದಾಗ-
ನಿನ್ನ ಮನೆ ಗೊಂದಲದ ಗೂಡಾದಾಗ
ಈ ಅತಿಥಿ ಏಕಾಏಕಿ
ಕಾಣಿಸಿಕೊಳ್ಳಬಹುದು...
ಅದಕ್ಕೆ ನಿನ್ನ ಮನೆ 
ಹೇಗಿದೆ? -ಬೇಕಿಲ್ಲ...
ನಿನ್ನ ಬಳಿ ಹಣವೆಷ್ಟು 
ನೋಡುವದಿಲ್ಲ,
ನಿನ್ನ ಅಂದಚಂದಗಳ ಪರಿವೆ ಮೊದಲೇಯಿಲ್ಲ...

ಅದು ನಿನ್ನ ದೈನಾಸೀ
ಬದುಕಿನ ಓರೆಕೋರೆಗಳಿಂದಲೂ ಜಾರಿಕೊಂಡು ಬಂದುಬಿಡಬಹುದು...
ಖುಶಿಯ ಗುಣವೇ ಹಾಗೆ...

ಬಾ - ಅಂದಾಗ 
ಅದು ಬರುವದಿಲ್ಲ...
ತಾನಾಗಿ ಬಂದಾಗಲೇ 
ನೀನದನು ಅಪ್ಪಿ
ಬರಮಾಡಿಕೊಳ್ಳಬೇಕು.
ಯಾಕೆಂದರೆ,
ಈಗ, 
ಈ ಕ್ಷಣದಲ್ಲಿ,
ಖುಶಿಯೇ ನಿನ್ನನ್ನು 
ಆಯ್ದುಕೊಂಡಿದೆ...
ನೀನು ಅದನ್ನಲ್ಲ...

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...