ಒಂಬತ್ತು ದೇಶಗಳ ಪರ್ಯಟನದ ವರೆಗೆ, ಕಚ್ಚೆ ಸೀರೆಯಿಂದ ಚೂಡಿ
ದಾರದ ವರೆಗೆ... List goes endless.
ಆದರೆ ಈ ಬದುಕು ಎಲ್ಲರಿಗೂ ಏನನ್ನೋ ಕೊಡುತ್ತದಾದರೂ ಏನೋ ಒಂದನ್ನು ಕಸಿದುಕೊಂಡೇ ಕೊಡುತ್ತದೆ. ಹಣವಿದ್ದ ರೆ ಗುಣವಿಲ್ಲ.ಪ್ರತಿಭೆ ಇದ್ದರೆ ಬಡತನ, ಎರಡೂ ಇದ್ದರೆ ಆರೋಗ್ಯ ಸಮಸ್ಯೆ. ಎಲ್ಲ ನೆಟ್ಟಗಿದೆಯೋ ಮಕ್ಕಳು ಇಲ್ಲ ವೆಂಬ ಚಿಂತೆ. ಅಷ್ಟೇ ಆದರೆ ಒಂದೇ ಸಮಸ್ಯೆ, ಇದ್ದರೆ ನೂರಾರು...ಹೀಗೇ...
ಬಹುತೇಕ ಬದುಕಿಗಿರುವಷ್ಟು
ಉಪಮಾನ/ ಉಪಮೇಯಗಳು ಬೇರೆಯದಕ್ಕೆ ಇಲ್ಲವೇನೋ. ಅದೊಂದು ಒಗಟು (ಪಹೇಲಿ) ಅನ್ನುವದರಿಂದ ಹಿಡಿದು ಬದುಕೊಂದು ಸಂಗ್ರಾಮ ಅನ್ನುವದರ ನಡುವೆ ನೀವು ಏನನ್ನೇ ಸೇರಿಸಿ, ಹೀರಿಕೊಳ್ಳುತ್ತದೆ, ಅಷ್ಟು ದೊಡ್ಡ ಒಡಲು ಅದಕ್ಕೆ...
ಬಾಲ್ಯಕ್ಕೆ ಮುಗ್ಧತೆಯಿದೆ,
ಸಮಯವಿದೆ,ನಿಷ್ಕಲ್ಮಷ ಪ್ರೀತಿಯಿದೆ-ಜೊತೆಗೆ ಅಭ್ಯಾಸದ ಒತ್ತಡ, ಅನಾರೋಗ್ಯಕರ ಪೈಪೋಟಿ, ಮೊಬೈಲ್/ ಕಂಪ್ಯೂಟರ್ ಗಳ ಅಪರಿಮಿತ ಸೆಳೆತವಿದೆ... ಯೌವನಕ್ಕೆ ಶಕ್ತಿಯಿದೆ,ಕನಸಿನ ಹಾದಿಗಳಿವೆ, ವೇಗದ ಬದುಕಿನ ಒತ್ತಡವೂ ಇದೆ. ಹೀಗಾಗಿ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಬಹಳವಿದೆ. ಮುಪ್ಪಿಗೆ ವಿಶ್ರಾಂತಿಯಿದೆ, ಮಕ್ಕಳ ಭಾಗ್ಯವಿದೆ,ಆದರೆ ನೆಮ್ಮದಿಯ
ಖಚಿತತೆ ಕಡಿಮೆ...
ಇಷ್ಟೆಲ್ಲ ಪುರಾಣಕ್ಕೂ ಒಂದು ಹಿನ್ನೆಲೆಯಿದೆ.ಬೆಳಿಗ್ಗೆ ಸೋನೂ ವೇಣುಗೋಪಾಲ ಅವಳ ವೀಡಿಯೋ ಒಂದು ನೋಡಿದೆ.
" ಬದುಕು ರಾಜಾಜಿನಗರವಿದ್ದಂತೆ" - ಒಂದು ಬದಿ 'ನವರಂಗ'- ಇನ್ನೊಂದು ಬದಿ ' ಹರಿಶ್ಚಂದ್ರ ಘಾಟ್ '- ಅಂದಳು.
ಹಸಿಗೋಡೆಗೆ ಹರಳು ಒಗೆದಂತೆ ನೆಟ್ಟಿತು.ಅದರ ಬಗ್ಗೆಯೇ ವಿಚಾರ ಲಹರಿ ಹರಿದಾಗ ಹೊರಬಂದ ಹೂರಣವಿಷ್ಟು...
No comments:
Post a Comment