Sunday, 27 November 2022

ಕನ್ನಡ ಹಿರಿಮೆ..

ಮೊದಲು ತಾಯ ಹಾಲ ಕುಡಿದು
ನಲ್ಮೆಯಿಂದ ತೊದಲಿ ನುಡಿದು
ಕೆಳೆಯರೊಡನೆ ಬೆಳೆದು ಬಂದ ಮಾತದಾವುದು 

ಸವಿಯ ಹಾಡ ಕತೆಯ ಕಟ್ಟಿ
ಕಿವಿಯಲೆರದು ಕರುಳ ತಟ್ಟಿ
ನಮ್ಮ ಜನರು ನಮ್ಮ ನಾಡು ಎನಿಸಿತಾವುದು
ನಮ್ಮ ಕವಿಗಳೆಂಬ ಕೋಡು ತಲೆಗದಾವುದು 

ಕನ್ನಡ ನುಡಿ ನಮ್ಮ ಹೆಣ್ಣು
ನಮ್ಮ ತೋಟದಿನಿಯ ಹಣ್ಣು
ಬಳಿಕ ಬೇರೆ ಬೆಳೆದ ಹೆಣ್ಣು
ಬಳಿಗೆ ಸುಳಿದಳು
ಹೊಸದು ರಸದ ಬಳ್ಳಿ ಹಣ್ಣು
ಒಳಗೆ ಸುಳಿದಳು 

ಬಲ್ಲವರಿಗೆ ಬೆರಗೆ ಇಲ್ಲಿ
ಅರಿಯದವರು ನಾಲ್ವರಲ್ಲಿ
ಕಳೆಯ ಬೆಳಕು ಹೊಳೆಯಲಂದು ದಣಿದು ಹೋದೆನು
ಬಡವನಳಿಲು ಸೇವೆ ಎಂದು ಧನ್ಯನಾದೆನು

ಸಾಹಿತ್ಯ:  ಬಿ.ಎಂ.ಶ್ರೀ

('ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಕವಿತೆಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

No comments:

Post a Comment

 ಹೀಗೊಂದು ಫೋನಾಯಣ...            ನಮಗೆ ಫೋನು ಮೊದಲಿನಿಂದಲೂ ತುಟ್ಟಿ..ಮಗ ಅಮೇರಿಕಕ್ಕೆ ಹೋದಾಗಲೂ ಪಕ್ಕದ ಮನೆಯಲ್ಲಿನ ನಂಬರ್ ದಿಂದ  ಮಾತಾಡಿ ಅಲ್ಲಿ ಸಮಯದ ಸಮಸ್ಯೆ ಯಾದಾಗ...