ಕೆಲಸದಲ್ಲಿದ್ದಾಗ ಏನೇ ಓದಿದ್ದು ಮೆಚ್ಚುಗೆಯಾಗಲೀ ಅದು ಬೇರೆ ಭಾಷೆಯಲ್ಲಿದ್ದರೆ ಮೊದಲು ಕನ್ನಡಕ್ಕೆ ಇಳಿಸುತ್ತಿದ್ದೆ.ಅದು ಎಷ್ಟು ಚಟವಾಗಿ ಬಿಟ್ಟಿತೆಂದರೆ ಇಂಗ್ಲೀಷ್/ ಹಿಂದಿಯಲ್ಲಿ ಓದಿದ ಎಲ್ಲವೂ auto translate ಆಗುವಷ್ಟು...ಆದರೆ ನನ್ನದು ಶಬ್ದಾನುವಾದವಲ್ಲ( word to word translation) ಭಾವಾನುವಾದ, - ಮೆಚ್ಚಿದ ಕವನದ ಉತ್ತಮ ಆಶಯದ ಮೂಲಕ್ಕೆ ಧಕ್ಕೆ ಬರದಂತೆ, ನಮ್ಮ ಭಾಷೆಯ ಭಾವಕ್ಕೆ ಸರಿಹೋಗುವಂತೆ
ಮಾರ್ಪಡಿಸಿ ಕವನದ ರೂಪ ಕೊಡುವದು.ಆರಿಸುವಾಗಲೂ ಮೂಲ ಕವಿ ಯಾರು? ಅವನು ಪ್ರಸಿದ್ಧಿ/ ಜನಮನ್ನಣೆ ಪಡೆದವನೇ ಎಂಬುದಕ್ಕಿಂತ ಅವನ ಕವನ ಕೊಡುವ ಸಂದೇಶವೇನು? ಅದು ಓದುಗರ ಭಾವನೆಗಳನ್ನು ಎಷ್ಟರಮಟ್ಟಿಗೆ ಒಳಗೊಳ್ಳುತ್ತದೆ? ಎಂಬುದು ನನಗೆ ಮುಖ್ಯವಾಗುತ್ತದೆ. ಅದಕ್ಕೇ ಅದನ್ನ translation ಅನ್ನುವದಿಲ್ಲ- trans- creation ಅನ್ನುತ್ತೇನೆ.ಅನುವಾದವಲ್ಲ ,ಒಂದು ರೀತಿಯಲ್ಲಿ ರೂಪಾಂತರ ಅನ್ನ ಬಹುದೇನೋ...
ಇನ್ನು ಸಾಧ್ಯವಾದಷ್ಟೂ ಆಯ್ದ ಕವನಗಳ ಮೂಲ ಹುಡುಕಿ
ಅವರ ಹೆಸರು/ ಫೋಟೋ ಹಾಕಿದ್ದೇನೆ.ಕೆಲವುಗಳ ಮಾಹಿತಿ ಲಭ್ಯವಿಲ್ಲದ ಕಾರಣಕ್ಕೆ unknown ಎಂದು ಕಾಣಿಸಿದ್ದೇನೆ. ನನಗೆ ತಿಳಿದ ಹಾಗೆ ಮಾಹಿತಿ ಸರಿಯಿದೆ. ಯಾರಾದರೂ ಏನಾದರೂ ಲೋಪ ಕಂಡರೆ, ನನಗೆ ತಿಳಿಸಿದರೆ ಸೂಕ್ತ ತಿದ್ದುಪಡಿ ಮಾಡುತ್ತೇನೆ.
ಕೊನೆಯದಾಗಿ ಕವನಗಳ Copyright ವಿಷಯದ ವಿಶೇಷ ಮಾಹಿತಿ ನನಗಿಲ್ಲ.ಅಲ್ಲದೇ ಅನುವಾದ ಸಂಗ್ರಹಕ್ಕೆ ' ವ್ಯವಹಾರ/ಮಾರಾಟ'ದ ಉದ್ದೇಶವಿಲ್ಲ. ಅದು ಶಬ್ದಶಃ ಅನುವಾದವೂ ಅಲ್ಲ. ನನ್ನೊಳಗಿನ ಕವನ ಪ್ಗರೀತಿಗೆಳ ಅನುವಾದವಾದಮೇಲೆ ಲಭ್ಯವಿದ್ದ
ಮಾಹಿತಿ ಬರೆದಿದ್ದೇನೆ.ಅಷ್ಟು ಸಾಕಾಗಬಹುದು ಎಂಬುದು ನನ್ನ ತಿಳುವಳಿಕೆ.
No comments:
Post a Comment