ಬದುಕಿನಲ್ಲಿ,
ನೀನು ನಿರೀಕ್ಷಿಸುವಷ್ಟು
ನಿನ್ನನ್ನು ಯಾರೂ ಪ್ರೀತಿಸಲಾರರು...
ನಿನ್ನ ಒಳಗನ್ನು ತಾವಾಗೇ ಅರಿತು
ನಿನಗೆ ಬೇಕಾದಾಗ ಗಗನಕ್ಕೆ ನೆಗೆದು, ನಕ್ಷತ್ರಗಳ ಹೆಕ್ಕಿ ತಂದು
ಕೈ-ಯಲ್ಲಿಡಲಾರರು...
ನೀ ಕಳೆದುಕೊಂಡ ಪಾದರಕ್ಷೆಯೊಂದ
ಹಿಡಿದು ಕುದುರೆ ಏರಿ
ನಿನ್ನ ಬಾಗಿಲಿಗಾವ
ರಾಜಕುಮಾರನೂ ಬರುವನೆಂದು
ನಿರೀಕ್ಷಿಸಬೇಡ...
ತಿಳಿದು ಕೋ...
ಅದಕ್ಕೆಂದೇ
ನಿನ್ನನ್ನು ನೀನು
ಅಗಾಧವಾಗಿ ಪ್ರೀತಿಸು...
ಸುದೈವದಿಂದ ಬದುಕಿನಲ್ಲಿ ಹೆಚ್ಚೇನಾದರೂ
ಪ್ರೀತಿ ದಕ್ಕಿದ್ದೇ ಆದರೆ ,
ಅದು ನಿನ್ನ -
ಸುಂದರ ಕಿರೀಟಕ್ಕೆ
ಮತ್ತೊಂದು ಗರಿಯಷ್ಟೇ-
ಎಂದು ಭಾವಿಸು...
No comments:
Post a Comment