Tuesday, 15 November 2022

ಪ್ರೀತಿ -

ಅಂದರೇನು?
ಅದೊಂದು ಅನುಭವವಾ? ಅನುಭಾವವಾ?

ಬದುಕಿನ ಭಾಗವಾ?
ಕೊಡು- ಕೊಳ್ಳುವಿಕೆಗೆ,-
ನೋವು-ನಲಿವಿಗೆ,-
ನೆನಪು- ನಿಂದನೆಗೆ,-

ಮೃದುವಾ? ಕಠೋರವಾ?
ಧ್ವನಿಯ ಏರಿಳಿತಗಳಂತೆ-
ಬಿಸುಪಾ? ತಂಪು- ತಂಪಾ?
ಮಳೆ ಧರೆಗಿಳಿದಂತೆ...

ನಾವು ಹೆಣೆದಿಟ್ಟ ಸಿಹಿ ನೆನಪುಗಳಾ?
ನಿನ್ನ  ಮೋಹಕ ಮುಗುಳ್ನಗೆಯಂತೆ..

ನಾನೇನೇ ನಾನಂದುಕೊಂಡರೂ
ಅದು ಬೆರಳು ತೋರಿಸುವದು
ನಿನ್ನ ಕಡೆಗೇನೇ...

ಏಕೆಂದರೆ,

ನಾನು ಕಂಡದ್ದು ನಿನ್ನನ್ನೇ...ನಿನ್ನೊಬ್ಬಳನ್ನೇ
ನದಿಯಂತೆ ಹರಿಯುವ,
ಮಳೆಯಂತೆ ಸುರಿಯುವ,
ಸರ್ವ ನೋವು ನಿವಾರಕಿಯಾದ ನಿನ್ನನ್ನೇ...ಆ ಕಾರಣಕ್ಕೇ
ನೀನು, 
ನೀನು ಮಾತ್ರ ನನ್ನವಳು...

No comments:

Post a Comment

ಹತ್ತರಿಂದ ಐವತ್ತು- ಹೀಗಿತ್ತು...     ‌               ಆಗಿನ ನಮ್ಮ ಮನೆ Typical ಮಧ್ಯಮ ವರ್ಗದ ಮಾಧ್ವ ಮನೆ...'' ನಿಯಮಗಳು/ಕಟ್ಟಳೆಗಳು ಹೆಚ್ಚು..ಒಬ್ಬ ಮಡಿ...