Friday, 14 October 2022

ಬದುಕೆಂದರೆ...

ಸದಾ ಆದಷ್ಟೂ ಶುದ್ಧ, 
ಮುಕ್ತನಗು ನಗುವುದು,
ಬದುಕು ಬಲ್ಲವರ
ಗೌರವ ಗಳಿಸುವದು,
ಮಕ್ಕಳನ್ನು ಮುದ್ದಿಸುವದು,
ಪ್ರಾಮಾಣಿಕ ವಿಮರ್ಶಕರಿಂದ
ಮೆಚ್ಚುಗೆ ಪಡೆಯುವದು,
ಸುಳ್ಳು ಸ್ನೇಹಿತರ
ಆಷಾಢಭೂತಿತನವನ್ನು
ಸಹಿಸಿಕೊಳ್ಳುವದು,
ಸೌಂದರ್ಯದ ಆರಾಧಕರಾಗಿರುವದು,
ಇತರರಲ್ಲಿಯ ವಿಶೇಷತೆಯನ್ನು
ಗುರುತಿಸಿ ಮನ್ನಿಸುವದು,
ಬದುಕಿಗೆ ವಿದಾಯ ಹೇಳುವಾಗ-
ಆರೋಗ್ಯವಂತ ಮಗುವನ್ನೋ, ಸ್ವಂತದ್ದೊಂದು ತುಂಡು/
ಹಸಿರು ಭೂಮಿಯನ್ನೋ,
ಅಷ್ಟಿಷ್ಟಾದರೂ ಸುಧಾರಿತ ಸಮಾಜವನ್ನೋ
ಗುರುತಾಗಿ ಬಿಟ್ಟು
ಹೋಗುವದು,
ನಿಮ್ಮ ಬದುಕಿನಿಂದ
ಸ್ಫೂರ್ತಿ ಪಡೆದಿರಬಹುದಾದ
ಒಂದಾದರೂ ಜೀವವಿದೆ ಎಂಬ 
ತೃಪ್ತಿಯಿಂದ ಬಾಳು ಕೊನೆಗೊಳ್ಳುವದು

-ಇದು 
ನಿಜವಾದ ಬದುಕು, 
ಯಶಸ್ಸು, 
ಸಾರ್ಥಕತೆ...

No comments:

Post a Comment

ಮುಂಜಾನೆ ನಾನೆದ್ದು ಯಾರ್ಯಾರ ನೆನೆಯಾಲಿ...        ನನ್ನ ಪ್ರತಿ Post ಗೂ ಒಬ್ಬ ಹಿರಿಯರ  ಕಾಮೆಂಟ್ ಕಡ್ಡಾಯವೇನೋ ಅನ್ನುವಷ್ಟ ರ ಮಟ್ಟಿಗೆ ಬರುತ್ತದೆ, ನಂತರ ನನ್ನ ಮೆಸೇಜ...