ಹಾಗೇ ಸುಮ್ಮನೇ...
ಅವರ ಬಿಟ್ಟು, ಇವರ ಬಿಟ್ಟು, ಇವರಾರು?...
ಸುಮಾರು ಒಂಬತ್ತು ಹತ್ತರ ನಡುವೆ ಹೀಗೊಂದು ಫೋನು,
" ಕೃಷ್ಣಾ ಮನೇಲಿದೀರಾ??
" ಹಾ ,ಇದೀನಿ..."
"ಒಂದ್ಹತ್ತು ನಿಮಿಷ ನಿಮ್ಮನೆಗೆ ಬರಬಹುದಾ?"
"ಅಯ್ಯೋ ಕೇಳೋದೇಕೆ?" ಬೇಕೆಂದರೆ ಬಂದು ಬಿಡಬೇಕಪ್ಪಾ"
" ಹಾಗಲ್ಲ. ಕೃಷ್ಣಾ,ಮಕ್ಕಳು ಮೊಮ್ಮಕ್ಕಳು ಇದ್ದರೆ
ತೊಂದರೆಯಾಗಲ್ವಾ?
" ಹಾಗೇನಿಲ್ಲ.ನನ್ನ ರೂಮಿನಲ್ಲಿ ಕೂಡೋಣ ..ಇಲ್ಲದಿದ್ದರೆ ಮನೆಯದುರು swimming pool lawn ನಲ್ಲಿ ಕೂಡೋಣ..
ಬಂದಂತೂ ಬನ್ನಿ"
ಅಲ್ಲಿಗೆ phone cut...ಮತ್ತು ಹತ್ತು ನಿಮಿಷಕ್ಕೆ walking ಮುಗಿಸಿ ಮನೆಕಡೆ ಮುಖಮಾಡಿದ ಮೂರ್ನಾಲ್ಕು ಗೆಳತಿಯರು..
ತೆರೆದ ಬಾಗಿಲ ಎದುರು...
ಪ್ರಾರಂಭಿಕ ಮುಗುಳ್ನಗೆ,ಕೈ ಕುಲುಕುವಿಕೆ, ಹಾಗೊಂದು ಹಿಗ್ಗು ,ಮೇಲೊಂದು hugಉ ಎಲ್ಲ ಕಿಲಕಿಲ ಮುಗಿದಮೇಲೆ ಆಸೀನರಾಗಿ,ಸ್ವಲ್ಪು ಸುಧಾರಿಸಿಕೊಂಡರೋ
ಶುರು ಕಥಾನಕ..
ಒಬ್ಬರಿಗೆ ,ಮಗಳು ಲಕ್ಷಗಟ್ಟಲೇ ಪಗಾರದ ನೌಕರಿಗೆ bye ಹೇಳಿ ಸಮಾಜ ಸೇವೆಯಡೆಗೆ ಮನವೊಲಿದಿದ್ದರ ಬಗ್ಗೆ ಆತಂಕ...ಈ ಎಲ್ಲ ಹುಚ್ಚು ನಾಕು ದಿನ..
ಇವರಂತೆ ಉಳಿದವರಿರದಿದ್ದರೆ ಭ್ರಮ ನಿರಸನಗೊಂಡು ವಾಪಸ್ ಬಂದಾಗ ಅಷ್ಟು ಭದ್ರ ನೌಕರಿ ಇವರಿಗೆ ಕಾದಿರುತ್ತೆಯೇ? ನೌಕರಿ ಬಿಟ್ಟರೆ ಬಿಡಲಿ ,ಚಂದದೊಂದು ಮಗು ಮಾಡಿಕೊಂಡು
ಬದುಕಿನಲ್ಲಿ settle ಆಗಲಿ ಎಂಬ ಬಯಕೆ...
ಇನ್ನೊಬ್ಬರ ಮಗನಿಗೆ ವಿದೇಶಕ್ಕೆ ಹೋಗಿ ಭವಿಷ್ಯ ಭದ್ರ ಮಾಡಿಕೊಂಡ ಮೇಲೆ ಮದುವೆಯಾಗುವ ಯೋಜನೆ...ಅವನ ಯೋಚನೆಗೆ ಮನೆಮಂದಿಯ ಸಹಮತವಿಲ್ಲ...
ರೆಕ್ಕೆ ಬಲಿತ ಹಕ್ಕಿ ಹಾರಿಹೋದ ಮೇಲೆ ತಿರುಗಿ ಗೂಡಿಗೆ ಬರುವ ಗ್ಯಾರಂಟಿ ಕೊಡುವವರಾರು??
ಮತ್ತೊಬ್ಬರ ಮಗಳಿಗೆ ತನ್ನ ಜಾತಿಯದಲ್ಲದ ಹುಡುಗನ ಮೇಲೆ ಒಲವು..
ಇದೂ ಸುಲಭ ಪರಿಹಾರದ ವಿಷಯವಲ್ಲ..
ಮಗದೊಬ್ಬರ ಸಂಸಾರದಲ್ಲಿ, ಹೊಂದಿಕೊಂಡು ಇರಲಾಗದ ಸದಸ್ಯರ ಜೊತೆಗಿನ ಅಭಿಪ್ರಾಯ ಭೇದಗಳ ತಾಕಲಾಟದಿಂದ ಬಿಸಿಲ್ಗುದುರೆಯಾದ ಮನಶ್ಶಾಂತಿ....
ಎಲ್ಲರ ಬುಟ್ಟಿಗಳಲ್ಲೂ ಬೇರೆ ಬೇರೆ ಹಾವುಗಳದೇ ನರ್ತನ...ಆದರೆ ವಿಭಿನ್ನ ಪರಿಸರದಲ್ಲಿ ಬೆಳೆದ ಹಿರಿಯರಿಗೆ ಬಿಸಿ ತುಪ್ಪ...ಉಗುಳಲಾಗದೇ,ನುಂಗಲಾಗದೇ , ಹೊಂದಿಕೊಳ್ಳಲೂ ಆಗದೇ ಒಳಗೊಳಗೇ ಕಾಡುವ ನೋವುಗಳ ಮುಂದೆ ಹಿಡಿ- ಮುಷ್ಟಿಯಾಗುವ ಅನಿವಾರ್ಯತೆ..
ಈಗ ಜಗತ್ತು ಬದಲಾಗಿದೆ..ಆಗುತ್ತಿದೆ...ಯಾರೂ ಉಳಿದವರನ್ನು ಮೊದಲಿನಂತೆ ಆಡಿಕೊಳ್ಳುವದಿಲ್ಲ..
ಎಲ್ಲರ ಮನೆಯ ದೋಸೆಯೂ ತೂತೇ...ಆದಷ್ಟು ಹೇಳಿನೋಡೋಣ..ಮನವೊಲಿಸುವ ಪ್ರಯತ್ನ ಮಾಡೋಣ...ಸಾಕಷ್ಟು ಅವಕಾಶ ಕೊಟ್ಟುನೋಡೋಣ...ಪರಿಹಾರ ಕನಸು ಎಂತಾದರೆ ಅವರ ಮಟ್ಟಿಗೆ ಅವರನ್ನು ಬಿಟ್ಟು ಬಿಡುವದೊಂದೇ ದಾರಿ ..ಎಂತೆಲ್ಲ ಮಾತುಗಳು ಹರಿದಾಡಿ ,ಮಡುಗಟ್ಟಿದ ಆತಂಕಗಳು ಕರಗತೊಡಗಿದ ಮೇಲೆ.ಒಂದಿಷ್ಟು ತಿಂಡಿಯೋ,snacksಒ,,ಒಂದು ತಂಪು ಪಾನೀಯವೋ,,ಒಂದೊಂದು cup coffee ಓ ಸರಬರಾಜಾದ ಮೇಲೆ ಎಲ್ಲರ ಮುಖದ ಮೇಲೊಂದು ತೆಳುನಗೆಯೊಂದಿಗೆ ತಾತ್ಕಾಲಿಕ ವಿದಾಯ...
ಇಂಥ ಭೇಟಿಗಳು,ಭಾವನೆಗಳ shareಮಾಡುವಿಕೆ, ಅಪಾಯಕಾರಿಯಲ್ಲದ gossips ,ಗಳು ಮನಸ್ಸಿಗೆ tonic ಕೆಲಸ ಮಾಡುತ್ತವೆ ಎಂಬುದನ್ನು ಇತ್ತೀಚೆಗೆ ಮನಶ್ಶಾಸ್ತ್ರಜ್ಞರು ಒಪ್ಪಿಕೊಳ್ಳುತ್ತಿದ್ದಾರೆ..
ಮನುಷ್ಯ ಸಂಘಜೀವಿ...ಜನರ ಮಧ್ಯದಲ್ಲೇ ಹುಟ್ಟಿದ ಸಮಸ್ಯೆಗಳಿಗೆ ಅವರ ಮಧ್ಯದಲ್ಲೇ ಔಷಧ ಸಿಗುತ್ತಿರುತ್ತದೆ..ಹಾಗೆಂದು ಮಿತಿ ಮೀರಿ ಸುದ್ದಿಗಳಿಗೆ ಮಸಾಲೆ ತುಂಬಿ ಹರಿಬಿಟ್ಟು ಆತ್ಮೀಯರೆಂದು ಹೇಳಿಕೊಂಡವರಿಗೂ ವಿಶ್ವಾಸಘಾತಮಾಡಿ ಅವರ ಭಾವನೆಗಳೊಂದಿಗೆ ಆಡುವವರ ಬಗ್ಗೆ ಒಂದು ಎಚ್ಚರ ಇರಲೇಬೇಕು..
ಅದು ಉಭಯತರಿಗೂ ಅಪಾಯಕಾರಿ...ಆತಂಕಕಾರಿ...ನೊಂದ, ಬೇಸತ್ತ ಆತ್ಮೀಯರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು ವಿಕೃತ ಆನಂದ ಪಡೆಯುವ ಬದಲು,ಅವರ ನಂಬಿಕೆ,ವಿಶ್ವಾಸ ಗಳಿಸಿ ಅವರ ಕಷ್ಟ ಪರಿಹಾರಕ್ಕೆ ಹೆಗಲು ಕೊಟ್ಟರೆ ಇರುವ ಸಮಾಧಾನ ಅದರಿಂದ ನಮ್ಮದಾಗುವ ತೃಪ್ತಿಗೆ ಸಾಟಿಯುಂಟೇ...
ಇದು ಅವರ/ ಇವರ/ ಇನ್ಯಾರದೋ ಕಥೆಯಲ್ಲ...ಬದುಕು ಯಾರನ್ನೂ spare ಮಾಡುವದಿಲ್ಲ.ಇಂದು ಅವರಿಗೆ..
ನಾಳೆ ನಮ್ಮ ಮನೆ ಬಾಗಿಲೊಳಗೆ...
No comments:
Post a Comment