ಜಬ್ ಜಬ್ ಜೋ ಜೋ ಹೋನಾ
ಹೈ ...ತಬ್ ತಬ್ ಸೋ ಸೋ ಹೋತಾ ಹೈ...
ನಮ್ಮ ಈಗಿನ ಮನೆಗೆ ಚಂದದೊಂದು ಹಿತ್ತಲವಿದೆ.ನಮಗೆ manage ಮಾಡಲು ಸಾಧ್ಯವಾಗುವ ಷ್ಟು ಗಿಡ- ಮರ ಹೂಬಳ್ಳಿ ಬೆಳೆಸಿದ್ದೇವೆ. ಸಾಲಿನಲ್ಲಿ ಕೊನೆಯ ಮನೆಯಾದ್ದರಿಂದ
ಸಾಕಷ್ಟು ಬಿಸಿಲು ಬರುತ್ತದೆ.ಬೆಳಗಿನ ತಿಂಡಿಗೆ ಮೊದಲು / ತಿಂಡಿಯ ನಂತರ
ಎರಡು ಕುರ್ಚಿಗಳನ್ನಿಟ್ಟುಕೊಂಡು ಎಳೆ ಬಿಸಿಲಿಗೆ ಮೈಯೊಡ್ಡಿ ಕೂಡುವದು ನನ್ನ ನಿತ್ಯದ ಅಭ್ಯಾಸ.
ಇಂದೂ ೯-೩೦ ಕ್ಕೆ ಹೊರಗೆ ಹೋದೆ, ಕೂಡಲೊಂದು/ ಎರಡೂ ಕಾಲು ಚಾಚುವದಕ್ಕಾಗಿ ಒಂದು ಹೀಗೆ ಎರಡು ಕುರ್ಚಿಗಳನ್ನು ಹಾಕಿಕೊಂಡು
ಆಸೀನಳಾಗಿ ಕೈಯಲ್ಲಿ ಮೊಬೈಲ್ ಹಿಡಿದೆ.ಐದು ನಿಮಿಷವೂ ಆಗಿರಲಿಕ್ಕಿಲ್ಲ
ನನಗೆ ಕೆಳಗೆ ಜರಿದ ಅನುಭವ. Vertigo ಬಹಳ ದಿನಗಳ ಮೇಲೆ
ನನ್ನನ್ನು ನೆನೆಸಿಕೊಂಡಿತಾ? ಎಂದೆನೋ
ಅಂದುಕೊಳ್ಳುವದರಲ್ಲಿ ನಾನು ನೆಲಕ್ಕೆ
ಬಿದ್ದು ಆಗಿತ್ತು. ನನ್ನ ತಲೆ garden ಗಾಗಿ
ಕಟ್ಟಿದ ಇಟ್ಟಂಗಿ ಕಟ್ಟೆಗೆ ಬಡಿಯಿತು. ಏನು ನಡೆಯುತ್ತಿದೆ ಗೊತ್ತಾಗದೇ
ಕಾಲು ಸರಿಸಿ ಏಳಲು ಹೋದರೆ ಎರಡೂ ಕಾಲು ಕುರ್ಚಿಯೊಳಗೇ lock
ಆಗಿವೆ. ಕಷ್ಟಪಟ್ಟು ಕಾಲು ಹೊರತೆಗೆದು ಗೋಣು ಎತ್ತಿ ನೋಡಿದರೆ ಕುರ್ಚಿಗೆ ಮೂರೇ ಕಾಲು... ಮುರಿದ ತುಂಡು ಎಲ್ಲೂ ಕಾಣುತ್ತಿಲ್ಲ.ಹೊರಳಾಡಿ ಹೇಗೋ ಕೈ ಎದ್ದು ನೋಡಿದರೆ ಎಲ್ಲ ಅಯೋಮಯ ಕಂಡದ್ದು ...ಕುರ್ಚಿ ಎತ್ತಿದೆ.ದೊಡ್ಡದೊಂದು ಹೆಗ್ಗಣದ ಹೋರಿನಲ್ಲಿ ಕುರ್ಚಿಯ ಕಾಲು ಪೂರ್ತಿ ಹೂತು ಹೋಗಿದೆ.ಮೇಲೆ ಚನ್ನಾಗಿ Trim ಮಾಡಿದ ಹುಲ್ಲು ಇದ್ದ ಕಾರಣ
ಆ ' ಛುಪಾ ರುಸ್ತುಮ್ 'ನ ಅಂದಾಜು
ಯಾರಿಗೂ ಇಲ್ಲ, ಬಾಯ್ದೆರೆದು ಕುರ್ಚಿಯ ಒಂದು ಕಾಲನ್ನು ಇಲ್ಲವೇ
ಇಲ್ಲ ಎಂಬಷ್ಟು 'ಸ್ವಾಹಾ' ಮಾಡುವವರೆಗೆ...
ನಾನು, ನನ್ನ ಕುರ್ಚಿ ಸುರಕ್ಷಿತ ಎಂದು ಗೊತ್ತಾದ ಕೂಡಲೇ
ತಲೆ ಬೇರೆ ಕಡೆ ಓಡತೊಡಗಿತು.ಎಂಥ ದೊಡ್ಡ ಅಪಾಯದಿಂದ ಪಾರಾದೆ ಎಂದು ಗೊತ್ತಾದ ಮೇಲೆಯೇ ಆಗಿದ್ದರೆ
'ಏನೇನು ಆಗ ಬಹುದಿತ್ತು? '-ಎಂದು
ಊಹಿಸಿ ನಡುಗು ಶುರುವಾಯಿತು. ನನಗೆ ಮರಣದ ಭಯಕ್ಕಿಂತ ಏನಾದರೊಂದು ಆಗಿ, ಪರಾವಲಂಬಿ
ಯಾಗುವದರ ಬಗ್ಗೆ ಸದಾ ಭಯ. ಮಕ್ಕಳ ಮನೆಯಲ್ಲಿರುವದರಿಂದ ಇನ್ನೂ ಹೆಚ್ಚು. ನಾವು ಅವರಿಗೆ ಹೆಚ್ಚು ನೆರವಾಗದಿದ್ದರೂ ಸರಿ, ಅವರಿಗೆ ಭಾರವಾಗಬಾರದೆಂಬ ಒಂದು ನೈಜ ಅನಿಸಿಕೆ.
ಈ ವಯಸ್ಸಿನವರಿಗೆ ಜಾರಿ ಬೀಳುವದು, ಎಲುಬು ಸುಲಭವಾಗಿ
ಮುರಿಯುವದು,ಒಮ್ಮೆಲೇ ಬಿದ್ದ ಪರಿಣಾಮವಾಗಿ ತಲೆಗೆ ಪೆಟ್ಟು ಬಿದ್ದು,
ಬೇರೇನೋ ಆಗುವದು ಎಲ್ಲ ನಿತ್ಯ
ಕೇಳುವ ಸುದ್ದಿ.ನನಗೇನಾಗಿದೇ ನನಗೇ ಗೊತ್ತಾಗದ್ದರಿಂದ ಯಾರನ್ನೂ ಕೂಗಿ
ಕರೆಯಲಿಲ್ಲ.ಒಂದು ಕ್ಷಣ ನಿಂತು ತಲೆ
ಸುತ್ತುತ್ತಿಲ್ಲ ತಾನೇ ಎಂದು ಖಚಿತ ಪಡಿಸಿಕೊಂಡು ನಿಧಾನವಾಗಿ ಕೈ- ಕಾಲಿನ ಮಣ್ಣು ತೊಳೆದುಕೊಂಡು ಏನೂ ಆಗಿಲ್ಲ ಎಂಬಂತೆ ಮಗಳನ್ನು ಕರೆದು ಒಂದು ಎಚ್ಚರಿಕೆ ಕೊಟ್ಟೆ. ದೇವರೆದುರು ಅರಿವಿಲ್ಲದೆ ಎರಡೂ ಕೈ
ಜೋಡಿಸಿ ಧನ್ಯವಾದಗಳನ್ನು ಹೇಳಿ ಮುಗಿಸಿದರೂ ಎದೆ ಬಡಿತ ತಪ್ಪಿದ ಸದ್ದು ನನಗೆ ಕೇಳುತ್ತಿತ್ತು.
'ತೇನ ವಿನಾ ತೃಣಮಪಿ ನ ಚಲತಿ'- ಎಂದು ಕೇಳಿದ್ದೇನೆ, ಅನೇಕರಿಗೆ
ಅನೇಕ ಬಾರಿ ಹೇಳಿದ್ದೇನೆ, ಇಂದು
ಪೂರ್ಣ ಪ್ರಮಾಣದಲ್ಲಿ ಅನುಭವಿಸಿದ್ದೇನೆ ಕೂಡ...
ನಿಜ- ಜಬ್ ಜಬ್ ಜೋ ಜೋ ಹೋನಾ ಹೈ...ತಬ್ ತಬ್ ಸೋ ಸೋ ಹೋತಾ ಹೈ...
No comments:
Post a Comment