Thursday 30 November 2023

ಹೇಳು, ಸಾಕು...

ನೀನು ಹೇಗೆ ಬದುಕುತ್ತಿ- ಹೇಳಬೇಡ,
ಇತರರ ನೋವು ನಿನ್ನನ್ನೂ ನೋಯಿಸುತ್ತಾ? ಹೇಳು,ಸಾಕು...
ನಿನ್ನ ವಯಸ್ಸೆಷ್ಟು-ನನಗೆ ಬೇಡ,
ನಿನ್ನ ಪ್ರೀತಿ,ಕನಸಿಗೆ'ನಿಜದ ಬದುಕು' ಬದುಕುವ 'ಹುಂಬ'ಎನಿಸಿಕೊಳ್ಳುವ  ಧೈರ್ಯ ಉಂಟಾ?- ಹೇಳು ಸಾಕು...

ನಿನ್ನ ಬದುಕಿನ ಪರಿಭ್ರಮಣದ 
ಕಥೆ ನನಗೆ ಬೇಡ..
ನಿನ್ನ ಮನದಾಳದ ದುಃಖದ ಮೂಲ ಅರಿತಿದ್ದೀಯಾ,?
ಬದುಕಿನ ಕಷ್ಟಗಳ ಎದುರಿಸಬಲ್ಲೆಯಾ- ಹೇಳು ಸಾಕು...

ದುಃಖ ನನ್ನದಿರಲಿ,ನಿನ್ನದೇ ಇರಲಿ,
ಅಡಗಿಸದೇ,ಕಂಗೆಡಿಸದೇ,
ಸಂತೋಷದ ಗಳಿಗೆ, 
ನಿನ್ನದಿರಲಿ,ನನ್ನದೇ ಇರಲಿ,
ಮಾನವ ಮಿತಿಗಳ ಉಪದೇಶಿಸದೇ
ಟೊಳ್ಳು- ಗಟ್ಟಿಗಳ ನಿರ್ದೇಶಿಸದೇ ನನ್ನೊಡನೆ ಇರಬಲ್ಲೆಯಾ?
ಹೇಳು ಸಾಕು...

ನೀ ಹೇಳುವ ಮಾತು ಸತ್ಯವಾ?
ಸುಳ್ಳಾ?-ನನಗೆ ಬೇಕಿಲ್ಲ...
ನೀನು ನಿನ್ನಾತ್ಮವನ್ನು ವಂಚಿಸಿ
ನಿನ್ನದಲ್ಲದ ರೂಪ ತಾಳುವುದಿಲ್ಲ ತಾನೇ ಹೇಳು,ಸಾಕು...

ಎಲ್ಲ ದಿನಗಳೂ ನಮ್ಮವೇ ಆಗಿರಲಿಕ್ಕಿಲ್ಲ
ಎಲ್ಲ ಗೆಲುವೂ ಸದಾ ಜೊತೆಗಿರಲಿಕ್ಕಿಲ್ಲ
ಈ ಎಲ್ಲ ಜಯಾಪಜಯಗಳ ಮೀರಿ
ನನ್ನೊಡನಿರಬಲ್ಲೆಯಾ? 
ಹೇಳು,ಸಾಕು...

ಕೆಲವೊಮ್ಮೆ ಏಕಾಕಿಯಾಗಿಯೂ
ಖುಶಿಯಿಂದಿರಬಲ್ಲೆಯಾ?
'ಶೂನ್ಯಗಳಿಗೆ'-ಗಳಲ್ಲೂ ನಿನ್ನನ್ನು
ನೀನು ಸಂಭಾಳಿಸಬಲ್ಲೆಯಾ?
ಹೇಳು ಸಾಕು...


Thursday 23 November 2023

It doesn’t interest me what you do for a living.

I want to know what you ache for
and if you dare to dream
of meeting your heart’s longing.

It doesn’t interest me how old you are.
I want to know if you will risk looking like a fool
for love
for your dream
for the adventure of being alive.

It doesn’t interest me what planets are
squaring your moon...
I want to know if you have touched
the center of your own sorrow
if you have been opened
by life’s betrayals
or have become shriveled and closed
from fear of further pain.

I want to know
if you can sit with pain mine or your own
without moving to hide it
or fade it
or fix it.

I want to know
if you can be with joy
mine or your own.
if you can dance with wildness
and let the ecstasy fill you
to the tips of your fingers and toes
without cautioning us
to be careful
to be realistic
to remember the limitations
of being human.

It doesn’t interest me
if the story you are telling me
is true.
I want to know if you can
disappoint another
to be true to yourself.
If you can bear the accusation of betrayal
and not betray your own soul.
If you can be faithless
and therefore trustworthy.

I want to know if you can see Beauty
even when it is not pretty
every day.
And if you can source your own life
from its presence.

I want to know
if you can live with failure
yours and mine
and still stand at the edge of the lake
and shout to the silver of the full moon,
“Yes.”

It doesn’t interest me to know where you live or how much money you have.
I want to know if you can get up after the night of grief and despair, weary and bruised to the bone
and do what needs to be done
to feed the children.

It doesn’t interest me who you know
or how you came to be here.
I want to know if you will stand
in the center of the fire
with me
and not shrink back.

It doesn’t interest me where or what or with whom you have studied.
I want to know what sustains you
from the inside
when all else falls away.
 
I want to know
if you can be alone
with yourself
and if you truly like
the company you keep
in the empty moments.

~ Oriah Mountain Dreamer - The Invitation

ನೀನು ಹೇಗೆ ಬದುಕುತ್ತಿ- ಹೇಳಬೇಡ,
ಇತರರ ನೋವು ನಿನ್ನನ್ನೂ ನೋಯಿಸುತ್ತಾ? ಹೇಳು,ಸಾಕು...

ನಿನ್ನ ವಯಸ್ಸೆಷ್ಟು-ನನಗೆ ಬೇಡ,
ನಿನ್ನ ಪ್ರೀತಿ,ಕನಸಿಗೆ'ನಿಜದ ಬದುಕು' ಬದುಕುವ'ಹುಂಬ' ಎನಿಸಿಕೊಳ್ಳುವ ' ಧೈರ್ಯ ಉಂಟಾ?- ಹೇಳು ಸಾಕು...

ನಿನ್ನ ಬದುಕಿನ ಪರಿಭ್ರಮಣದ 
ಕಥೆ ಬೇಡ..
ನಿನ್ನ ಮನದಾಳದ ದುಃಖದ ಮೂಲ ಅರಿತಿದ್ದೀಯಾ,?
ಬದುಕಿನ ಕಷ್ಟಗಳ ಎದುರಿಸಬಲ್ಲೆಯಾ- ಹೇಳು ಸಾಕು...

ದುಃಖ ನನ್ನದಿರಲಿ,ನಿನ್ನದೇ ಇರಲಿ,
ಅಡಗಿಸದೇ,ಕಂಗೆಡಿಸದೇ,
ಸಂತೋಷದ ಗಳಿಗೆ, 
ನಿನ್ನದಿರಲಿ,ನನ್ನದೇ ಇರಲಿ,
ಮಾನವ ಮಿತಿಗಳ ಉಪದೇಶಿಸದೇ
ಟೊಳ್ಳು- ಗಟ್ಟಿಗಳ ನಿರ್ದೇಶಿಸದೇ ನನ್ನೊಡನೆ ಇರಬಲ್ಲೆಯಾ?
ಹೇಳು ಸಾಕು...

ನೀ ಹೇಳುವ ಮಾತು ಸತ್ಯವಾ? ಸುಳ್ಳಾ?-ನನಗೆ ಬೇಕಿಲ್ಲ...
ನೀನು ನಿನ್ನಾತ್ಮವನ್ನು ವಂಚಿಸಿ
ನಿನ್ನದಲ್ಲದ ರೂಪ ತಾಳುವುದಿಲ್ಲ ತಾನೇ? ಹೇಳು,ಸಾಕು...

ಎಲ್ಲ ದಿನಗಳೂ ನಮ್ಮವೇ 
ಆಗಿರಲಿಕ್ಕಿಲ್ಲ
ಎಲ್ಲ ಗೆಲುವೂ ಸದಾ 
ಜೊತೆಗಿರಲಿಕ್ಕಿಲ್ಲ
ಈ ಎಲ್ಲ ಜಯಾಪಜಯಗಳ ಮೀರಿ
ನನ್ನೊಡನಿರಬಲ್ಲೆಯಾ? 
ಹೇಳು,ಸಾಕು...

ಕೆಲವೊಮ್ಮೆ ಏಕಾಕಿಯಾಗಿಯೂ
ಖುಶಿಯಿಂದಿರಬಲ್ಲೆಯಾ?
'ಶೂನ್ಯ ಗಳಿಗೆ'ಗಳಲ್ಲೂ ನಿನ್ನನ್ನು
ನೀನು ಸಂಭಾಳಿಸಬಲ್ಲೆಯಾ?
ಹೇಳು ಸಾಕು...






Wednesday 22 November 2023

 ಸಿಂಹದ ಮರಿ ಕುರಿಮರಿಯಾದ ಕಥೆ..
            
             ‌‌‌   ಒಂದು ಸುಂದರ ಬೆಳಗು... Walking ಮುಗಿಸಿ ಮನೆಗೆ ಬಂದ ಆ ಮನೆಯವರಿಗೆ  ಮನೆಯಂಗಳದಲ್ಲಿ ಕಂಡದ್ದು ಕಾಲು ಗಾಯಮಾಡಿಕೊಂಡು
ಮುದುಡಿ ಮಲಗಿ ' ಒಂದೇ ಸವನೇ ಕುಯ್ ಕುಯ್ಗುಡುತ್ತಿದ್ದ ಒಂದು ನಾಯಿ ಮರಿ.ನೋಡಿದರೆ ಗಾಯ ತೀವ್ರವಾಗಿ ತ್ತು.ಮನೆಯೊಳಗೆ ಕೊಂಡೊಯ್ದು
ಪ್ರಥಮೋಪಚಾರ ಮುಗಿಸಿ ತಕ್ಷಣ ದವಾಖಾನೆಗೆ ಕರೆದೊಯ್ದು ಉಪಚಾರ ಮಾಡಿಸಿಯಾಯ್ತು.ಸ್ವಲ್ಪಮಟ್ಟಿಗೆ ಪರವಾಗಿಲ್ಲ‌ ಅನಿಸಿದಾಗ ಅದರ ಫೋಟೋ ತೆಗೆದು face book ಗೂ
ಹಾಕಿ ಅದರ ಮಾಲಿಕರ ಗಮನ ಸೆಳೆಯಲು ಮಾಡಿದ ಪ್ರಯತ್ನವೂ ಫಲ
ಕಾಣಲಿಲ್ಲ.ಯಾರಿಗಾದರೂ ಬೇಕಿದ್ದರೆ
ಕೊಂಡೊಯ್ಯಬಹುದೆಂಬ ವಿನಂತಿಗೂ
ಪ್ರತಿಕ್ರಿಯೆ ಬರಲಿಲ್ಲ.ಅಷ್ಟು ಹೊತ್ತಿಗಾಗ ಲೇ ಮನೆಯವರಿಗೆ ಅದೂ ಕುಟುಂಬದ ಒಂದು ಭಾಗವೇ-ಅನಿಸತೊಡಗಿ ಆಪ್ತತೆ
ಬೆಳೆದಿತ್ತು.ಮುಖ್ಯವಾಗಿ ಆ ಮರಿಯೇ
ಹಾಗೆಂದುಕೊಂಡಾಗಿತ್ತು.ಸಣಕಲಾಗಿದ್ದ
ಆ ಮರಿ ಮನೆಯವರ 'ರಾಜಾತಿಥ್ಯ' ದಿಂದ ಮುದ್ದು ಮುದ್ದಾಗಿ ಬೆಳೆದು, ಬೆಳ್ಳಗೆ ನೋಡಿದವರ ಕಣ್ಣು ಕುಕ್ಕುತ್ತಿತ್ತು.
ಕೈಯಲ್ಲಿ ಹಿಡಿದರೆ ಮೃದುವಾಗಿ,ತುಂಬ
ಹಿತವಾಗಿ feel ಆಗುತ್ತಿದ್ದುದಕ್ಕೋ ಏನೋ ಎಲ್ಲರೂ ಅದನ್ನು ' ಮೊಮೊ'
ಎಂದು ಕರೆಯಲಾರಂಭಿಸಿದ್ದರು ಕೂಡ.
ಹೊರ ಗೇಟಿನಿಂದ ಇಂಚು ಇಂಚೂ ತನ್ನದೇ ಎಂಬಂತೆ, ಮನೆಗೆ ಬರುವವರು
ತನ್ನಪ್ಪಣೆಯಿಲ್ಲದೇ ಒಳಗೆ ಬರಲಾಗದು
ಎಂಬಂತೆ ನಡೆದುಕೊಳ್ಳುತ್ತಿತ್ತು.ಗೊತ್ತಿದ್ದ ವರೇ ಬಂದರೂ ಯಾರಾದರೊಬ್ಬರು
ಅದನ್ನು ಎತ್ತಿಕೊಂಡು ಅದರ ಜಾಗ ಸೇರಿಸಿ ಕಬ್ಬಿಣದ ಬಾಗಿಲ ಹಿಂದೆ ಕೂಡಿ ಹಾಕಿದರೂ ಅದರ ಧ್ವನಿಯೇ ಎದೆ
ನಡುಗಿಸುತ್ತಿತ್ತು.ಮನೆ ಬಿಟ್ಟು ಬರುವ ವರೆಗೂ ಅಂಗೈಯಲ್ಲಿಯೇ ಜೀವ ಹ ಹಿಡಿದು ಕೊಂಡ ಭಾವ...
     ‌ ‌          ಯಾವು ಯಾವುದೋ ಕಾರಣಕ್ಕೆ ಇತ್ತೀಚೆಗೆ ಅವರ ಮನೆಗೆ
ನನಗೆ ಹೋಗಲಾಗಿರಲಿಲ್ಲ.ಮೊನ್ನೆ
ಅವಕಾಶ ಒದಗಿ ಬಂತು.ಹೋದಾಗ
ಅಚ್ಚರಿಯಾದದ್ದು ಅಲ್ಲಿ ಬೇರೆಯದೇ
ನಾಯಿ ಇದ್ದ ಹಾಗೆ ಅನಿಸಿದ್ದು.ತುಂಬ ಬೆಳೆದು/ಮೈತುಂಬ ಕೂದಲುಗಳುಳ್ಳ
ದೊಡ್ಡ ಗಾತ್ರದ ಜಾತಿಯ ನಾಯಿಯ
ರೂಪ.ಆದರೆ ಸದ್ದೇಯಿಲ್ಲ.ಸದಾ ಯಾರಾದರೂ ಒಬ್ಬರ ಹಿಂದೆ ಅಂಟಿ ಕೊಂಡೇ ನಡೆಯುವುದು ಯಾರೂ ಇಲ್ಲದಿದ್ದರೆ ಕಂಗಾಲಾದಂತೆ ಹುಡುಕಾಡುವುದು/ ಇಲ್ಲವೇ ಕುರ್ಚಿ/
ಸೋಫಾ ಹುಡುಕಿ ಭಯಭೀತ ಕಣ್ಣುಗಳಿಂದ ಮುದುಡಿ ಮಲಗುವದು
ನೋಡಿ ನನಗೋ ಒಗಟು...ಅಂಗೂಲಿ ಮಾಲ ' ಬೌದ್ಧ ಬಿಕ್ಷು'ವಾದ feeilngಉ
                ನನ್ನಿಂದ ಸುಮ್ಮನಾಗಿರಲಾ ರದೇ ಕೇಳಿಯೇ ಬಿಟ್ಟೆ.ಕೇಳಿದ ನಂತರ
ಕಸಿವಿಸಿಯಾಯ್ತು.ಕಳೆದ ದೀಪಾವಳಿ ಯಲ್ಲಿ ಒಂದು ವಾರಕ್ಕೂ ಮೀರಿ
ಯಾವುದೇ ಅಂಕೆಯಿಲ್ಲದೇ ಹಾರಿದ 
ಸಿಡಿ ಮದ್ದುಗಳು/ಆಟಂಬಾಂಬ್ಗಳ
ಎದೆ ನಡುಗಿಸುವ ಸದ್ದುಗಳು ಅದರ ಧ್ವನಿಯನ್ನೂ ಅಡಗಿಸಿಬಿಟ್ಟಿದ್ದವು.
ಆ ಅವಧಿ ಮುಗಿಯುವವರೆಗೂ ಬೆಚ್ಚಿ ಬೆದರಿ ಮುದುಡಿಕೊಂಡು,ಮನೆಯಲ್ಲಿ
ಇದ್ದೂ ಇಲ್ಲದ ಹಾಗೇ ಇದ್ದು, ಹಬ್ಬದ ನಂತರವೂ ಆ ಭಯ ಎಷ್ಟು ಬೇರು ಬಿಟ್ಟಿತ್ತೆಂದರೆ ಇಂದಿಗೂ ಅದು ಅದರಿಂದ ಹೊರ ಬರಲಾಗಿಲ್ಲ.ಅಲ್ಲದೇ ಮನೆಯವರೆಲ್ಲರ ಸಾಂಘಿಕ ಪ್ರಯತ್ನದ ನಂತರವೂ ಅದು  ಮೊದಲಿನ 'ಮೊಮೊ' ಆಗಿಯೇಯಿಲ್ಲ...
              ಅದರದಿನ್ನು ಹೆದರಿಕೆಯಿಲ್ಲ
ಎಂಬ ನಿರಾಳ ಭಾವ ಬರಬೇಕಿತ್ತು. ಆದರೆ ಹಾಗಾಗಲೇಯಿಲ್ಲ.ಪ್ರತಿ ದೀಪಾವಳಿಗೂ ಮೂರು ವರ್ಷಗಳ ವರೆಗೆ ಮಗನನ್ನು ಬಗಲಲ್ಲೆತ್ತಿ/ಸೆರಗು
ಮುಚ್ಚಿ/ಮನೆಯ ಮೂಲೆಯೊಂದರಲ್ಲಿ
ಹೆದರಿಕೆಯಿಂದ ನಡುಗುತ್ತಿದ್ದ ನನ್ನ ಈಗಿನ ಐವತ್ತೆರಡು ವರ್ಷದ ಮಗನ
ಬಾಲ್ಯದ ದಿನಗಳಿಗೆ ಇದನ್ನು ಸಮೀಕರಿಸಿಕೊಂಡು ಸಂಕಟವಾಯಿತು
ಒಮ್ಮೆ, ಕೇವಲ ಒಂದೇ ಒಂದು ಸಲ ಮೋಮೋದ ಆ ಮೊದಲಿನ ಸಿಂಹಧ್ವನಿ
ಕೇಳುವ ತವಕದೊಂದಿಗೇ ಮನೆಗೆ ವಾಪಸ್ ಆದೆ.
          ‌ಎಷ್ಟೊಂದು ಮಕ್ಕಳ/ಹಿರಿಯರ,
ಅಶಕ್ತರ/ ಮೂಕ ಪ್ರಾಣಿಗಳ ಪ್ರತಿನಿಧಿ ಯೋ ಈ 'ಮೊಮೋ' ಅನಿಸಿತು ನನಗೆ.
ಎಲ್ಲವೂ ಅತಿರೇಕಕ್ಕಿಟ್ಟುಕೊಂಡ ಈ
ಆಡಂಬರದ ಜಗತ್ತಿನಲ್ಲಿ 'ಮೊಮೊ'ದ
ಈ ನೋವನ್ನು 'ಬುದ್ಧಿವಂತ'ರೆನಿಸಿಕೊಂ ಡವರಿಗೆ ತಿಳಿಯ ಪಡಿಸುವದಾದರೂ ಹೇಗೆ???
     





Sunday 19 November 2023

    ಅದು 1970 ದಶಕ...ಧಾರವಾಡದ
ಗಲ್ಲಿಗಲ್ಲಿಗಳಲ್ಲಿ/ ಪುಟ್ಟ ಪುಟ್ಟ ಬಯಲು ಗಳಲ್ಲಿ ಮೂರು ಕೋಲುಗಳನ್ನು ಊರಿ
ಇಲ್ಲವೇ ಊಟಕ್ಕೆ ಕೂಡುವ ಮಣೆಗಳ ನ್ನು ಹೇಗೋ ಆಸರೆ ಕೊಟ್ಟು ನಿಲ್ಲಿಸಿ ಮಕ್ಕಳು cricket ಆಡುತ್ತಿದ್ದರು.ಸ್ವಲ್ಪ- ಸ್ವಲ್ಪವೇ ಆ ಆಟ ಜನಪ್ರಿಯವಾಗತೊ ಡಗಿತ್ತು.TV ಇನ್ನೂ ಬಂದಿರಲಿಲ್ಲವಾಗಿ
ಅದರ ಪ್ರಭಾವ ಕೆಲವೇ ಮಕ್ಕಳ ಮೇಲೆ ಮಿತಿಯೊಳಗಿತ್ತು...
                ನನ್ನ ಮಗ ಸ್ನಾನ ಮಾಡಲು
ತೆಗೆದ ಬನಿಯನ್ ಅನ್ನು  ಉಂಡೆ ಕಟ್ಟಿ
ಓಡಿ ಬಂದು ಬಾಲ್ ಹಾಕುವಂತೆ ಬಕೆಟ್ಟಿನೊಳಗೆ ಹಾಕಿ ಕೇಕೆ ಹಾಕುತ್ತಿದ್ದ.
ಯಾರಾದರೂ ಏನಾದರೂ ಕೊಡಲು ಹೋದರೆ ಅದನ್ನು ಎಸೆಯಲು ಹೇಳಿ ಎದ್ದು/ಬಿದ್ದು/ಕೆಳಗೆ ಮಲಗಿ ಕಠಿಣ Catchವೊಂದನ್ನು ಹಿಡಿದಂತೆ ಅದನ್ನು ತೆಗೆದುಕೊಂಡು ಸುಖಿಸುತ್ತಿದ್ದ.೧೯೮೪ ರಲ್ಲಿ TV ಬಂದ ಮೇಲೆ  ನಮ್ಮ Black and White T Vಯಲ್ಲಿಯ Match ಗಳನ್ನೇ ಈಗಿನ‌ WORLD CUP ರೇಂಜ ನಲ್ಲಿ ವೈಭವೀಕರಣಗೊಳಿಸಲಾ ಗುತ್ತಿತ್ತು.ಚಹಾ/juice/ಚುರುಮರಿ/ ಮಿರ್ಚಿಗಳ ಸಮಾರಾಧನೆ, ಗಂಟಲು  ಹರಿಯುವಂತೆ ಕೇಕೆ/ಬೇಕಾದ ಟೀಮ್  ಗೆದ್ದರೆ ನಿಬ್ಬಣದ ಮುಂದಿನ ಕುಣಿತದ
ಗದ್ದಲ...ಉಫ್ ಮನೆ - ಮನಸ್ಸುಗಳ
ತುಂಬಾ ನವಿಲ ನರ್ತನ.ನಿರೀಕ್ಷೆಗಳು
ಕಡಿಮೆ ಹೀಗಾಗಿ ಶುದ್ಧ ಆನಂದಕ್ಕೇನೇ
ಸಿಂಹಪಾಲು...ನಾವು ಹಿರಿಯರು
ಮಕ್ಕಳನ್ನು ಕಾಡಿ/ಕೇಳಿ ಆ ಆಟವನ್ನು 
ತಿಳಿದುಕೊಂಡು ಅವರು ನಕ್ಕಾಗ ನಕ್ಕು,
ಖಿನ್ನರಾದಾಗ ಚು.ಚು.ಚು ಲೊಚಗುಟ್ಟಿ ಅವರನ್ನು ಬೆಂಬಲಿಸುವುದಿತ್ತು. Innocence is Bliss- ಅನ್ನುವುದು ಅದಕ್ಕೇ ಇರಬೇಕು
           ಈಗ ಎಲ್ಲೆಲ್ಲೂ ಜ್ಞಾನ ಸ್ಫೋಟ,
ಕಿರುಬೆರಳಿನಲ್ಲಿ ಮಾಹಿತಿ ಕಣಜ.ಅದೇ
ಮಾತನಾಡಲು ಕಲಿತ ಮಕ್ಕಳಿಗೂ
ತಮ್ಮವೇ ಅಭಿಪ್ರಾಯಗಳು.ತಮ್ಮದೇ
ರೀತಿಯಲ್ಲಿ ಅವುಗಳನ್ನು ವ್ಯಕ್ತ ಪಡಿಸುವ ಚಾಕಚಕ್ಯತೆ...ಆಟವನ್ನು ಆಟವಾಗಿ ನೋಡದೇ ಅಭಿಮಾನದ
ಅತಿರೇಕ, ಅತಿರೇಕದ ಪ್ರತಿಕ್ರಿಯೆಗಳು,
ಅಭಿಪ್ರಾಯ ಭೇದಗಳನ್ನೇ ಮೂಲಕ್ಕೆ ಗಂಭೀರವಾಗಿಸಿ - ವಾದ-ವಿವಾದಗಳು,
ಔಚಿತ್ಯವನ್ನು ಮೀರಿದ‌ ಪದ ಬಳಕೆ, ಅನವಶ್ಯಕ ಮಾನಸಿಕ ಕ್ಲೇಶಗಳು,
ಇವುಗಳನ್ನೇ ಕಾಣುತ್ತೇವೆ.ಆದರೆ ಅಲ್ಲಿ ಕೆಲಸ ಮಾಡುವುದು AAA( ಅರ್ಹತೆ- ಅವಕಾಶ- ಅದೃಷ್ಟ)ಗಳೇ ಹೊರತು
ಮಿಕ್ಕ ಯಾವ ವಿಷಯಗಳೂ ಅಲ್ಲ.
ಹತ್ತಾರು ಟೀಮ್ ಗಳು ಆಡಲು ಬಂದಾಗ ಎಲ್ಲರೂ ಚನ್ನಾಗಿ ಆಡಲೆಂ ದೇ,ಗೆಲ್ಲಲೆಂದೇ,ಬಂದಿರುತ್ತಾರೆ.
ಅದೃಷ್ಟ ಕೈಕೊಟ್ಟರೆ ಯಾವ ಅರ್ಹತೆ ಯೂ ಏನೂ ಮಾಡಲಾಗುವುದಿಲ್ಲ. ಕರ್ಣನ‌ ಕೌಶಲ್ಯದಂತೆ ಕೊನೆ ಗಳಿಗೆ ಯಲ್ಲಿ ನೆನಪು ಕೈಕೊಟ್ಟು ದುರಂತಕ್ಕೆ ಏನೋ ಒಂದು ಕೊನೆಗೆ ಕಾರಣೀಭೂತ ವಾಗುತ್ತದೆ...ಆಗ ಯಾವ ಸಚಿನ್/ ಯಾವ ಕೊಹಲಿಯೂ ಏನನ್ನೂ ಮಾಡಲಾಗದೇ ನಡೆಯುತ್ತಿರುವುದಕ್ಕೆ 
ಮೂಕ ಸಾಕ್ಷಿಯಾಗಯತ್ತಾರೆ...
ನಿನ್ನೆಯಾದದ್ದೂ ಅಂಥ ಪ್ರಸಂಗಗಳಲ್ಲಿ ಒಂದು...

ಅಷ್ಟೇ...

.


       ‌

                      

ಈ ಲಿಮರಿಕ್ ಗಳು
ಪಂಚುಗಳುಳ್ಳ ಗಿಮಿಕ್ ಗಳು...
ಪದ್ಯಗಳು/ಗದ್ಯಗಳು...
ಎರಡಕ್ಜೂ ಸಲ್ಲುವ ಪದ ನೈವೇದ್ಯಗಳು.
ಒಟ್ಟಿನಲ್ಲಿ ಪಂಚ್ ಪದಿಗಳ
ಒಲ್ಲದವರಿಗೆ ಪದ ' ಕಿರಿಕ್' ಗಳು...



Saturday 18 November 2023

   ‌‌‌      " ಒಬ್ಬ ಹೆಣ್ಣುಮಗಳು/ತಾಯಿ/ ಟೀಚರ್-ಆದವರು ಮಾತನಾಡುವದು 
ಹೆಚ್ಚು...ನಾನು ಮೂರೂ ಆದವಳು... ಮಾತು ಮುಗಿಸುವವರೆಗೂ ಕೈಯಲ್ಲಿ
ಹಿಡಿದ ಮೈಕು ನಂದೇ-"ಎಂದು ಸುಧಾ ಮೂರ್ತಿಯವರು ಒಮ್ಮೆ ಒಂದು function ನಲ್ಲಿ ತಮಾಷೆ ಮಾಡಿಯೇ
Stage ಏರಿದ್ದರು...ನಾನೂ ಆ ಮೂರು
ಆದವಳೇ...ಆದರೆ ಮೈಕಿಗೂ/ ನನಗೂ
ಆಗಿಬರುವುದಿಲ್ಲ.ಆ ಗಳಿಗೆಗೆ ಬೇಕಾದ
Presence of mind ನನಗಿಲ್ಲ.ಕಾರಣ
Stage ಹತ್ತಿದ್ದು ಇಲ್ಲವೇ ಇಲ್ಲ ಅನ್ನುವ ಷ್ಟು ಕಡಿಮೆ...ಆದರೆ ನೌಕರಿಯಲ್ಲಿದ್ದಾಗ
ವರ್ಷವಿಡೀ ಶಾಲಾ ಕಾರ್ಯಕ್ರಮಗಳ ಲ್ಲಿ ಹಿನ್ನೆಲೆಯಲ್ಲಿ ಕೆಲಸ ನಿರ್ವಹಿಸಿ ಗೊತ್ತಿದೆಯಾದ್ದರಿಂದ 'ಸಂತೆಯಲ್ಲಿ ಮನೆ ಮಾಡುವುದು'- ಅಂದರೇನು ಎಂಬುದು ಗೊತ್ತಿದೆ.ಹೀಗಾಗಿ ಆ ಬಗ್ಗೆ ದೂರು/ತಕರಾರು ಎಂಬುದು ಇರಲಿಲ್ಲ ಇದುವರೆಗೆ...
             ಈ ಮಾತು ಹಳೆಯದು. ಇದೀಗ ನನ್ನದು ' ಸಂಧ್ಯಾ ಪರ್ವ'...
ಎಲ್ಲ ಅವಯವಗಳೂ 50%  off...
ಕಣ್ಣಿಗೆ ನೋಡುವ/ಕಿವಿಗೆ ಕೇಳುವ/ ಮೆದುಳಿಗೆ ಅರ್ಥೈಸಿಕೊಳ್ಳುವ ತಾಕತ್ತು
ಕ್ಷೀಣಿಸಿದೆ,ಅದು ಸರ್ವೇ ಸಾಮಾನ್ಯ
ಎಂಬುದನ್ನು ಯಾವಾಗಲೋ ಒಪ್ಪಿ ಕೊಂಡು ನನ್ನ ಸಾಮರ್ಥ್ಯಕ್ಕೆ ಅನುಗುಣ ವಾಗಿ ದಿನಚರಿ ಬದಲಿಸಿಕೊಂಡೂ ಆಗಿದೆ...
    ‌‌        ಆದರೂ ಕೆಲವೊಮ್ಮೆ ನಮಗೆ
ಪರೀಕ್ಷಾಕಾಲ ಎಂಬುದು ಬರುವುದೂ. ಉಂಟು, ನಮ್ಮದು ಬಹುದೊಡ್ಡ Gated community.ವರ್ಷಕ್ಕೊಮ್ಮೆ
annual day ಆಗುತ್ತದೆ.ನಾನೂ ಅದರಲ್ಲಿ ಸ್ವಂತ ಖುಶಿಯಿಂದ ಭಾಗವ ಹಿಸಿದ್ದೇನೆ.ಆದರೆ ಈ ಸಲ stage ದೊಡ್ಡದಾಗಿ ನನ್ನ ರೂಮಿಗೆ ಹೊಂದಿ ಕೊಂಡೇ ಆಗಿದೆ.ಬೆಳಗಿನಿಂದಲೇ ಅದರ
ತಯಾರಿ ಅದ್ಧೂರಿಯಾಗಿ ನಡೆದಿದೆ. ಚಿಕ್ಕಪುಟ್ಟ ಮಕ್ಕಳ rearsals ನಡೆದಿವೆ. ನೋಡಲು ಹಬ್ಬ...ಒಂದೇ ಹೆದರಿಕೆ.  ಆರು ಗಂಟೆಯಿಂದ dinner
ಮುಗಿಯುವವರೆಗೆ ಅಂದರೆ ಸುಮಾರು
ಹತ್ತೂವರೆಯವರೆಗೆ ಸತತವಾದ ಸದ್ದು
ಸಹಿಸುವ ಕ್ಷಮತೆಯ ಕೊರತೆ ಇರುವುದೇ ಸಧ್ಯಕ್ಕೆ ನನ್ನ ಸಮಸ್ಯೆ...

           'ಅಕ್ಕಿಯ ಮೇಲೂ ಇಷ್ಟ.ಇತ್ತ ನೆಂಟರ ಮೇಲೂ ಪ್ರೀತಿ.ಕಾರ್ಯಕ್ರಮ
ನೋಡುವಾಸೆ.ಆದರೆ ನನ್ನ‌ ಮಿತಿಗೆ 
ಕಾಯಂ ಅಲ್ಲೇ ಇದ್ದು ಭಾಗವಹಿಸು ವದೂ ಸಾಧ್ಯವಿಲ್ಲದ ಮಾತು.ಆ ಕಾರಣಕ್ಕೆ ಆತ್ಮೀಯ ಶಾಲಿನಿಯೊಂದಿಗೆ
ಒಂದು ಸುಂದರ ಸಂಜೆ ಕಳೆದು ಬಹುದಿನಗಳಿಂದ ಬಾಕಿಯಿದ್ದ ಹರಟೆ
ಹೊಡೆದು ಮುಗಿಸಿ ಬಂದದ್ದು ನನಗೆ
ಕನಿಷ್ಟ ಮುಂದಿನ ಒಂದು ತಿಂಗಳ  ಟಾನಿಕ್ಕು...
 ‌             


 

Sunday 12 November 2023

           ಒಂದು ದಿನ ಮೊದಲೇ ಆಕಳ ಸಗಣಿಯಿಂದ ಸಾರಿಸಿದ ನೆಲ/ ಅದರ ಅಂಚಿಗೆಲ್ಲ ಕೆಂಪು ಮಣ್ಣಿನ (ಹುರಮಂಜು ಎಂಬುದರ)  ಢಾಳವಾದ ಪಟ್ಟಿಗಳು/ ನಟ್ಟ ನಡುವೆ ಸಿಕ್ಕ ಜಾಗದ ಅಳತೆಗೆ ಹೊಂದುವ ರಂಗೋಲಿ ಎಳೆಗಳು/ ನಡುನಡುವೆ ಅರಿಷಿಣ- ಕುಂಕುಮದ ಲೇಪನ/ನಸುಕು ಮೂಡುವ ಮುನ್ನವೇ ಮನೆಮುಂದೆ ದೀಪಗಳ ಬಹು ಸಾಲು/ನಸುಕಿನಲ್ಲೆದ್ದು ಆಲಸಿ ಗಂಡ- ಏಳಲೊಪ್ಪದ ಮಕ್ಕಳನ್ನು
ರಮಿಸಿ, ಮರ್ಜಿ ಹಿಡಿದು,ಬಯ್ಯಲಾರ ದೇ ಬಯ್ದಂತೆ ಮಾಡಿ ಹಾಸಿಗೆ ಬಿಟ್ಟು
ಎಬ್ಬಿಸಿ ಆರತಿಗೆ ತಯಾರಾಗಲು 
ಕಳಿಸಿ/ಅಕ್ಕ ಪಕ್ಕದವರು ಲಭ್ಯವಿದ್ದರೆ ಅವರನ್ನೂ ಆಮಂತ್ರಿಸಿ ಮನೆಯ ನಡುವಿನ ಹಾಲಿನಲ್ಲಿ ಬ್ರಹತ್ ಆಕಾರದ
ಜಮಖಾನೆಯೊಂದನ್ನು ಹಾಸಿ, ಬಾಗಿಲ
ಮುಂದೆ ನಿಂತು ಪರಿಚಯದವರನ್ನು
ಒಳಗೆ ಕರೆದು ಕೂಡಿಸುವ ಅಮ್ಮ- ಅಪ್ಪಂದಿರು...
            ಅರೆನಿದ್ದೆಯಲ್ಲಿ ಕಣ್ಣುಜ್ಜುತ್ತ
ಏಳಲಾರದೇ ಎದ್ದು ಗಳಿಗೆಗೊಮ್ಮೆ ಅಮ್ಮನ ಎಚ್ಚರಿಕೆಯ ದನಿಗೆ ಸಣ್ಣಗೆ ಹೂಗುಡುತ್ತ,ಅರೆಮನಸ್ಸಿನಲ್ಲಿಯೇ
ತಯಾರಾಗುವ ನಾವು - ಮಕ್ಕಳು...
             ನಾವು ಆರತಿಗೆ ಹೋದರೆ ಅವರೂ ನಮ್ಮನೆಗೆ ಬರುತ್ತಾರೆ ಎಂಬ ಸದ್ಭಾವನೆಯಿಂದ ಕರೆಗೆ ಓಗೊಟ್ಟು
ಬೆಳಗಿನ ಆರತಿಯಲ್ಲಿ ಸಂಭ್ರಮದಿಂದ ‌
ಪಾಲ್ಗೊಳ್ಳುವ ನೆರೆಹೊರೆಯ ಹಿರಿ- ಕಿರಿಯರು...ಆರತಿಯ ಹಾಡು ಹಾಡುತ್ತಲೇ ಒಬ್ಬೊಬ್ಬರಿಗೂ ತಿಲಕ
ಹಚ್ಚಿ,ಹಣೆಗೆ ಎಣ್ಣೆಯೊತ್ತಿ ಆಶೀರ್ವದಿ ಸುವ ಮುತೈದೆಯರು, ಆರತಿಯ ತಟ್ಟೆಗೆ ಹಾಕಿದ ರೊಕ್ಕದ ಮೇಲೊಂದು
ಕಣ್ಣಿಟ್ಟುಕೊಂಡೇ ಆರತಿಯ ನಂತರದ
ಹಣ ಹಂಚಿಕೊಳ್ಳಲು ಆತುರರಾದ
ಅಕ್ಕ ತಂಗಿಯರು,ಕೆಲಸವಲ್ಲಿ ಏನೇ ನಡೆದಿರಲಿ ಹಸೆಗೆ ಕರೆಯುವ ಹಾಡು/ ಆರತಿ ಹಾಡು/ ಎಣ್ಣೆ ಶಾಸ್ತ್ರದ ಹಾಡು/ ಆಶಿರ್ವಾದದ ಹಾಡು ಎಂದು ಪದ್ಧತಿಗೆ
ಚ್ಯುತಿ ಬಾರದಂತೆ ಹಿನ್ನೆಲೆಯಲ್ಲಿ ಸುರಾಗವಾಗಿ ಹಾಡುವ ಅಜ್ಜಿಯಂದಿರು,ಅವರಿಗೆಲ್ಲ ಆರತಿಯ ನಂತರ ಸರದಿಯಲ್ಲಿ ನಿಂತು ಸಾಷ್ಟಾಂಗ ನಮಸ್ಕಾರ ಮಾಡಲು ಕಾದಿರುವ ಕಿರಿಯರ ಸಾಲು...
             " ಬೇಗ ಬೇಗ ಸ್ನಾನ ಮಾಡಿ, ಗುಡಿಗೆ ಹೋಗಿಬನ್ನಿ- ಫಲಹಾರಕ್ಕೆ ಬರಲು ಒತ್ತಾಯ ಮುಂದಿನ ಹೆಜ್ಜೆ...ಅದೂ ತೈಲಾಭ್ಯಂಜನ- ಎಣ್ಣೆ ಸ್ನಾನ...ಅದು ಮುಗಿಯಿತೋ ವಾರ ಮೊದಲೇ ಮಾಡಿಟ್ಟ ಸಿಹಿ- ಕಾರದ ತಿಂಡಿಗಳ ಸಮಾರಾಧನೆ...ನಮ್ಮ ನಮ್ಮ ಮನೆಯಲ್ಲಿ ಎಂಬ ಕಟ್ಟಳೆಯೇ ಇಲ್ಲ.
ಹಸಿದ ಹೊತ್ತಿಗೆ ಯಾರ ಮನೆಯಲ್ಲಿ ಇರುತ್ತೀರೋ ಆ ಮನೆಯ ತಟ್ಟೆಯ ಮುಂದೆ ಕೂತರೂ ಆದೀತು...
                ಇದು ನರಕ ಚತುರ್ದಶಿ
ಒಂದೇ ದಿನದ ರಿವಾಜಲ್ಲ.ಪೂರ್ತಿ ಮೂರು ನಾಲ್ಕು ದಿನಗಳ ನಿತ್ಯ ಸಮಾರಾಧನೆ.ಆ ದಿನಗಳಲ್ಲಿ ಫಲಹಾರವೇ ಪರಿಹಾರ... ಊಟ ವೆಂಬುದು ಕಾಟಾಚಾರಕ್ಕೆ... ಬೇಕಾದಾಗ...ಬೇಕಾದಷ್ಟು...ಸಾಯಂಕಾಲ, ಪಟಾಕ್ಷಿಗಳ ಹಾವಳಿ,ಮಿತ್ರ ಕೂಟಗಳು,ಉದ್ದೇಶ ರಹಿತ ತಿರುಗಾಟ,
ದಣಿವಾದಾಗ ನಿದ್ದೆಯ ಚಿಂತೆ...
              ಇದು ನಮ್ಮ ಬಾಲ್ಯದ ದೀಪಾವಳಿ...ಈಗ ನನ್ನ ಯಾವ ಮಕ್ಕಳಿಗೂ ಹೆಣ್ಣುಮಕ್ಕಳಿಲ್ಲ...ರಜೆಯ ಅಭಾವವೋ/ಬರಲಾರದ ಯಾವುದೋ ಒಂದು ಅನಿವಾರ್ಯತೆ
ಯೋ ಹಬ್ಬದಾಚರಣೆ King Size ದಿಂದ Nuclear Size ಗೆ ಇಳಿದಿದೆ. ಆರತಿ ಹಿಡಿಯಲೂ ಇಬ್ಬರು ಹೆಣ್ಣುಮಕ್ಕಳ ಕೊರತೆ...ಗಂಡ - ಮಕ್ಕಳು ಯಾರನ್ನೋ ಜೊತೆಗೂಡಿಸಿ
ಮಾಡಿ ಮುಗಿಸುವ ಅನಿವಾರ್ಯತೆ...
ಇಂದು ಬೆಳಿಗ್ಗೆ ಆದದ್ದೂ ಅದೇ...ಆದರೆ
ಸಂಭ್ರಮ ಸಂಭ್ರಮವೇ ತಾನೆ!!! ಅದು
ಈಗ ' ಜನ-ಜನಿತ'ವಲ್ಲ- ' ಮನ ಜನಿತ'...
        ಒಪ್ಪಿಕೊಳ್ಳ‌ಬೇಕಾದ್ದೇ ತಾನೇ!!!


Saturday 11 November 2023

       ಸಡಗರ/ಸಿಹಿ- ಕಾರದ ತಿಂಡಿ/ ಸಹಕಾರ ಎನ್ನುತ್ತಾ ಮಹಿಳಾ ಸ್ನೇಹಿ 
ಶಬ್ದಗಳ ಬಳಕೆ ಮಾಡಿ ನೀವು ಉದಾಹರಿಸಿದ ತಿಂಡಿಗಳಲ್ಲಿ ಕನಿಷ್ಟ ಕಾಲುಭಾಗವಾದರೂ ಡಬ್ಬಿಗಳ ನ್ನಲಂಕರಿಸಿ ಕುಳಿತ ದಿನದಂದೇ Quiz ನ ಪ್ರಶ್ನೆಗಳನ್ನು ಕೇಳಿ ಉತ್ತರಿಸುವವರ ಶ್ರಮವನ್ನು ಅರ್ಧವಾಗಿಸಿದ್ದೀರಿ. ಎಂದೆಂದು ಏನೇನು ಮಾಡಬೇಕು ಎಂದು plan ಮಾಡಿಕೊಂಡವರಿಗಂ ತೂ ಮತ್ತೂ ಅರ್ಧ ನೆನಪಿನಲ್ಲಿರಲು ಸಾಕು. " ನಿಮ್ಮನೆಯಲ್ಲಿ ಏನಡಿಗೆ?" ಎಂದು ಕೇಳಿದರೆ ಕೆಲವು ಹೊರಬೀಳು  ತ್ತವೆ.ಕೆಲವಕ್ಕೆ ನೀವು ಕೊಟ್ಟ clue ಗಳೇ
ಸಾಕು...ಒಟ್ಟಿನಲ್ಲಿ ಸಿಹಿ- ಕಾರ ತಿಂಡಿಗಳ
ಹೆಸರುಗಳ ಅನ್ವೇಷಣೆ ಅಷ್ಟೇನೂ ಕಠಿಣವೇನೂ ಇಲ್ಲ ಬಿಡಿ.ನೆನಪು ಕೈ-ಕೊಟ್ಟರೆ ಮನೆಯಲ್ಲಿಯ ತಿಂಡಿಗಳ
ಸುವಾಸನೆಗಳೇ ನೆನಪಿಸಲು ನೆರವಾಗುತ್ತವೆ...

Thursday 9 November 2023

ನನ್ನನ್ನು 'ದಿವಾಳಿ'-ಯಾಗಿಸಿದ ಒಂದು
ದೀಪಾವಳಿ...
    
         ನಾವು ಚಿಕ್ಕವರಾಗಿದ್ದಾಗ (ನಮ್ಮ ಕಡೆಗೆ) ಪಟಾಕ್ಷಿ ಹಾರಿಸುವುದು ಕೇವಲ ಗಣೇಶ ಚತುರ್ಥಿಗೆ ಮಾತ್ರ ಮೀಸಲಾ ಗಿತ್ತು. ಅದು ಹೇಗೆ/ಯಾವಾಗ/ಎಲ್ಲಿಂದ ದೀಪಾವಳಿಗೂ ಹಬ್ಬಿತೋ ನೆನಪಿಲ್ಲ. ಈಗ ಬಿಡಿ, ಎಲೆಕ್ಶನ್ ಗೆದ್ದರೆ/ಕ್ರಿಕೆಟ್
Match ಗೆದ್ದರೆ/ಮದುವೆ ನಿಬ್ಬಣಗಳಲ್ಲಿ
/ಯಾರಾದರೂ ತೀರಿಕೊಂಡಾಗಲೂ
ಪಟಾಕ್ಷಿ ಹಾರಿಸುವ ರೂಢಿಯುಂಟು...

      ‌‌       ಅಂಥ ಸಂಭ್ರಮ ಅಪರೂಪ ವಾಗಿದ್ದ ಕಾಲದ ಮಾತಿದು...ರೂಢಿಗತ ವೋ/ಹಣದ ಅಭಾವವೋ ಅಂತೂ
ನಾವೆಲ್ಲಾ ಆ ಪ್ರಸಂಗಕ್ಕೆ ವರ್ಷವಿಡೀ ದಾರಿ ಕಾಯುತ್ತಿದ್ದುದು ಚನ್ನಾಗಿಯೇ ನೆನಪಿದೆ...ದೊಡ್ಡವರಿಗೆ/ಚಿಕ್ಕವರಿಗೆ
ಬೇರೆ ಬೇರೆ ರೀತಿಯ ಪಟಾಕಿಗಳ ಹಂಚಿಕೆ... ಸಣ್ಣ ಸಣ್ಣ ಕೇಪಿನ ಡಬ್ಬಿ/ಚಿಕ್ಕ ಚಿಕ್ಕ ಪಟಾಕಿ ಸರಗಳು/ಸುರು ಸುರು ಬತ್ತಿಗಳು/ಚಕ್ರ/ಹೂಕುಂಡಗಳು /ಮತಾಪು ಕಡ್ಡಿ/ಚುಚೇಂದ್ರಿಯಂಥ ಹೂ ಕಡ್ಡಿಗಳು - ಇವು ಚಿಕ್ಕಮಕ್ಕಳಿಗೆ... ಮನೆಯಲ್ಲಿ/ ಅಂಗಳದಲ್ಲಿ ಹಾರಿಸ ಬಹುದಾದ ನಿರುಪದ್ರವಿ ಗುಂಪಿಗೆ ಇವು ಸೇರಿದರೆ, ಅಟಂಬಾಂಬು/ಲಕ್ಷ್ಮಿ ಪಟಾಕಿ/ ಧಡಾಕಿಗಳು/ ದೊಡ್ಡ ದೊಡ್ಡ ಪಟಾಕಿ ಸರಗಳು/ರಾಕೆಟ್ಗಳು ಇಂಥವು, ದೊಡ್ಡವರಿಗೆ..."ಎಲ್ಲರಿಗೂ ಸರಿಯಾಗಿ ಹಂಚುತ್ತೇವೆ, adjustments ನೀವೇ ಮಾಡಿಕೊಳ್ಳಿ. ಯಾವುದೇ ತಕರಾರು ನಮ್ಮ ಬಳಿ ಬರುವಂತಿಲ್ಲ - ಇದು ಹಿರಿಯರೆಲ್ಲರ ಕಾಯಂ ಕರಾರು...

             ಒಮ್ಮೆ'ಪಟಾಕಿ'ಗಳ ಬಟವಡೆ ಯಾದ ನಂತರವೇ ನಮ್ಮ ಗುಪ್ತ ಕಾರ್ಯಾಚರಣೆ ಪ್ರಾರಂಭ.ಕಿರಿಯರ ನ್ನು ಪುಸಲಾಯಿಸಿ/ಹೇಗೋ ಒಪ್ಪಿಸಿ
ಅವರಿಂದ ನಮಗೆ ಬೇಕಾದ ದೊಡ್ಡ ದೊಡ್ಡ ಪಟಾಕಿಗಳನ್ನು ಲಪಟಾಯಿಸು
ವುದೂ ಒಂದು ಚಾಕಚಕ್ಯತೆಯಾಗಿತ್ತು
ನಮಗೆ...ಎಲ್ಲರಕ್ಕಿಂತ ಮೊದಲು/ 
ಯಾರಿಗೂ ಗೊತ್ತಾಗದಂತೆ/ಒಂದು
ಗುಪ್ತ ಸ್ಥಳವನ್ನಾಯ್ದು ' ವ್ಯಾಪಾರ ಕುದುರಿಸುವುದು' ನಡೆಯಬೇಕಿತ್ತು...

               ಒಂದು ವರ್ಷ ಇವೆಲ್ಲ ಹಂತ ಗಳನ್ನು ಹಾಯ್ದು/ಬೇಡದ ಪಟಾಕ್ಷಿಗಳ ನ್ನು ಸಾಗಿಸಿ/ ಬೇಕಾದವುಗಳನ್ನು ಶೇಖರಿಸಿ ಇಟ್ಟುಕೊಂಡೆ...ಹಬ್ಬದ ಹಿಂದಿನ ದಿನ ಅವುಗಳನ್ನೆಲ್ಲ ಸ್ವಲ್ಪು ಬೆಚ್ಚಗೆ ಮಾಡಿಕೊಳ್ಳಬೇಕು- ಹಳೆಯ ವಿದ್ದು, ತಂಪಾಗಿದ್ದರೆ ' ಠುಸ್ಸ್' ಆಗುವುದು ಗ್ಯಾರಂಟಿ.ಆ ಕಾರಣಕ್ಕೆ
ಒಂದು ದೊಡ್ಡ ರೊಟ್ಟಿಯ ಹಂಚನ್ನು
ಬಿಸಿಯಾಗಿದ್ದ ಒಲೆಯ ಮೇಲಿಟ್ಟು ಎರಡು ಸಲ ಮೇಲೆ ಕೆಳಗೆ ಮಾಡಿ ತೆಗೆಯಬೇಕೆಂದು ಯೋಚಿಸಿದವಳು
ಊಟಕ್ಕೆ ಕರೆದರೆಂದು ಹೋದೆ.ಅರ್ಧ ಊಟವಾಗಿತ್ತು, ಒಮ್ಮಿಂದೊಮ್ಮೆಲೇ
ಭಯಂಕರ ಶಬ್ದ...ಎಲ್ಲರಿಗೂ ಗಾಬರಿ.
ಹಿತ್ತಲ ಗೋಡೆ ಬಿತ್ತೇನೋ ಎಂದು ಕೊಳ್ಳುವಾಗಲೇ ಕಿವಿ ಗಡಚಿಕ್ಕುವಂತೆ ಶುರುವಾದ ಶಬ್ದ ಎಲ್ಲರನ್ನೂ ಕಕ್ಕಾವಿಕ್ಕಿ ಯಾಗಿಸಿ/ ಚಿಕ್ಕಮಕ್ಕಳನ್ನು ಚೀರಾಡಿಸಿ/ಅಪ್ಪನ ಕೂಗಾಟವನ್ನೂ ಮೀರಿಸಿ ಹತ್ತು ನಿಮಿಷಗಳಾದ ಮೇಲೆ ಕ್ರಮೇಣ ಸಣ್ಣದಾಗುತ್ತಾ ಹೋಯಿತು.ಎದ್ದು ಹೋಗಿ ನೋಡಿದರೆ ಏನೊಂದೂ ಕಾಣದಷ್ಟು ಹೊಗೆ/ನೀರು ತುಂಬುವ ಹಬ್ಬಕ್ಕೆಂದು ತುಂಬಿಸಿಟ್ಟ ಪಾತ್ರೆಗಳ  ನೀರಿನೊಳಗೆಲ್ಲ ಮದ್ದಿನ ತುಂಡುಗಳು/ಹಂಚಿನ ಮೇಲೆ ಹೇಳಲೂ ಒಂದೂ ಪಟಾಕ್ಷಿ ಇರಲಿಲ್ಲ.ಬಹುಶಃ ಒಲೆಯಲ್ಲಿ ಹೆಚ್ಚಿನಾಂಶ ಕೆಂಡವಿದ್ದಿರಬಹುದು. ಅಥವಾ ನಾನು ಕೊಟ್ಟ ವೇಳೆ ಹೆಚ್ಚಾಗಿರ ಬಹುದು. ಅಂತೂ ಅನಾಹುತವೊಂದು ನಡೆದು ಹೋಗಿತ್ತು...ನನ್ನ ಸ್ವಾರ್ಥಕ್ಕೆ/ ಅತಿಯಾದ ಆಸೆಗೆ/ಮಕ್ಕಳಿಗೆ ಮಾಡಿರಬಹುದಾದ 'ಮೋಸ'ಕ್ಕೆ ಪಾಠ
ಕಲಿಸಲು ದೇವರು ಕಿಂಚಿತ್ತೂ ಕೂಡ ತಡಮಾಡಿರಲಿಲ್ಲ...

           ಆಮೇಲೆ ಒಂದು ದಿನದ ಛೇಡಿಸುವಿಕೆ/ಹಿಡಿಯಷ್ಟು ಬೈಗಳು/
ಮತ್ತೆ ಪಟಾಕಿ ನನಗೆ ಸಿಗಬಹುದಾ- ಇಲ್ಲವಾ ಗೊಂದಲ/ಅಪ್ಪನ ಸಿಡಿ ಮುಖ/ಮತ್ತೆ ಪಾತ್ರೆಗಳಿಗೆ ಹೊಸ ನೀರು ತುಂಬಬೇಕಾದಾಗಿನ ಅನಿವಾರ್ಯತೆ/
ಸಧ್ಯಕ್ಕೆ ಹೆಚ್ಚಿನ ಅನಾಹುತವಾಗಲಿಲ್ಲ ವಲ್ಲ- ಎಂಬುದೊಂದು ಸಮಾಧಾನ/ 'ಇನ್ನೊಮ್ಮೆ  ಹೀಗೇನಾದರೂ ಮತ್ತೆ ಮಾಡಿದರೆ ನೋಡಿ'- ಎಂಬ ಬಾಂಬ್ ನ
ಸದ್ದನ್ನೂ ಮೀರಿಸಿದ ಅಪ್ಪನ ಗುಡುಗಿನ ಎಚ್ಚರಿಕೆ- ಇವೆಲ್ಲವುಗಳೊಂದಿಗೆ ಆ ವರ್ಷದ ದೀಪಾವಳಿ ಸಾಂಗವಾಗಿ ನಡೆದದ್ದು ಎಪ್ಪತ್ತು ವರ್ಷಗಳ ನಂತರ ವೂ ಇಂದೇ ಎನ್ನುವಂತೆ ನೆನಪಾಗಿ ಉಳಿದಿದೆ...

   
        







             
               

Wednesday 8 November 2023

ಕಂಚುಗಾರರ ಅಂಗಡಿಯಂದದಿ---
ಕಂಚು- ಹಿತ್ತಾಳೆಯ ಪಾತ್ರೆಗಳ್ಹರಡಿ...        
    ‌‌   ಧಾರವಾಡದ ನಮ್ಮ ಮನೆ ಒಂದು ಚಿಕ್ಕ ವಾಡೆಯಂತಿತ್ತು.'ಮೂಡಲ
ಮನೆ'ಯ ಧಾರಾವಾಹಿಯ ಮನೆಯಂತೆ.ನಮ್ಮತ್ತೆ/ಇಬ್ಬರೇ ಮಕ್ಕಳು
ಆದ್ದರಿಂದ ಒಂದುಭಾಗವನ್ನು ಬಾಡಿಗೆಗೆ
ಕೊಡುವುದು ಅವಶ್ಯಕ/ಅನಿವಾರ್ಯ
ಎರಡೂ ಆಗಿದ್ದು ನಾನು ಬಂದಮೇಲೂ
ಅದು ಮುಂದುವರೆದಿತ್ತು.
                ಮನೆಯಲ್ಲಿ ತಾಮ್ರ/ ಹಿತ್ತಾಳೆಯ ಪಾತ್ರೆಗಳ ಅಂಗಡಿಯನ್ನೇ 
ಇಡುವಷ್ಟುಸಾಮಾನು.ಕಡಿಮೆಯಂದರೆ
ಇನ್ನೂರು ಜನರಿಗೆ ಅಡಿಗೆ ಮಾಡಿ ಬಡಿಸುವಷ್ಟು; ಹಂಡೆ/ತಪ್ಪಲೆ/ಕೊಳಗ/
 ಡಬರಿಗಳು/ಪರಾತಗಳು ಏನೆಲ್ಲಾ...
ಆಗ ಮನೆಯ ಮುಂದೆಯೇ ಮದುವೆ ಮಾಡುವ ಪದ್ಧತಿ ಹೆಚ್ಚಿತ್ತು.ಹಾಗೆ ಮಾಡುವವರಿಗೆಲ್ಲ ನಮ್ಮಲ್ಲಿಂದಲೇ 
ಪಾತ್ರೆಗಳ ಸರಬರಾಜು.ಅದರಲ್ಲೂ
ಪುಕ್ಕಟೆ ಎಂದರೆ ನನಗೂ/ ನಮ್ಮಪ್ಪನಿ
ಗೂ ಆದೀತು ಎಂಬ ಭಾವ.ನಾಲ್ಕು ದಿನಗಳ ಮೊದಲೇ ಒಯ್ದು ಕಾರ್ಯ ಕ್ರಮಗಳು ಮುಗಿದು ವಾರವಾದರೂ ವಾಪಸ್ ಬರುತ್ತಿರಲಿಲ್ಲ.ಮನೆಯಲ್ಲಿ
ಜನರಿದ್ದರು/ಸಮಯ ಸಿಗಲಿಲ್ಲ/ ಮತ್ತೊಮ್ಮೆ ಸ್ವಚ್ಛಗೊಳಿಸಬೇಕಿತ್ತು
ದಂಥಹ ಹೊಸಹೊಸ ನೆಪಗಳು. ಸಾಮಾನುಗಳ ಎರಡು ಲಿಸ್ಟ್ ತಯಾರಿಸಿ, ನಾವು ಒಂದಿಟ್ಟುಕೊಂಡು/
ಇನ್ನೊಂದು ಅವರಿಗೆ ಕೊಟ್ಟಮೇಲೂ
ಪರತ ಪಡೆಯುವಾಗ ಯಾದಿ ಇದ್ದರೆ ಇತ್ತು, ಇಲ್ಲದಿದ್ದರೆ ಇಲ್ಲ.ನಮ್ಮದನ್ನು ಎದುರಿಗೆ ಹಿಡಿದರೂ ಅವರಿವರನ್ನು 
ಕೇಳುತ್ತೇನೆ ಎಂದು ದೊಣ್ಣೆ ಬೀಸದ ಹಾಗೊಂದು ಉಪಾಯ ಮಾಡಿ ಪಾರಾಗಿ ಹೋಗಿಬಿಟ್ಟರೆ ಕಥೆ ಮುಗಿದ ಹಾಗೆ...ಬಂದ ಪಾತ್ರೆಗಳೂ ಸ್ವಚ್ಛವಿರುವ ಹಾಗೇ ಇಲ್ಲ, ಅಲ್ಲಲ್ಲಿ ನೆಗ್ಗು/ ತಗ್ಗು... ಕಲಾಯಿ ಇಲ್ಲವೇ ಇಲ್ಲ ಎನ್ನುವಷ್ಟು ಬಳಸುವುದು.ಪ್ರತಿ ಬಾರಿಯೂ ' ಇನ್ನು ಸಾಕು,ಇನ್ನುಮೇಲೆ 'ಕೊಡುವುದಿಲ್ಲ'
ಎಂದೇ ಹೇಳುವದು ಎನ್ನುವ ಭೀಷ್ಮನನ್ನು ಮೀರಿಸಿದ ಪ್ರತಿಜ್ಞೆ. ಯಾರಾದರೂ ಪುನಃ ಬಂದಾಗ 'ಪಾಪ! 
ಅವರಿಗೆ ಅನುಕೂಲವಿದ್ದರೆ ನಮ್ಮ ಕಡೆ
ಯಾಕೆ ಬರುತ್ತಿದ್ದರು ಎಂಬ ಭಾವ+ ಹಾಗೆ ಮಾಡುವುದರಿಂದ ನಮಗೆ ವಿಪರೀತ 'ಪುಣ್ಯಸಂದಾಯ'ವಾಗಿ
ಆ ಸ್ವರ್ಗದಲ್ಲಿ ಆ ದೇವರು ನಮ್ಮನ್ನು
ಒಮಿಲ್ಲ ಒಮ್ಮೆ ತನ್ನ ಪಕ್ಕದ ಸೀಟಿನಲ್ಲೇ
ಕೂಡಿಸಿಕೊಳ್ಳುತ್ತಾನೆ ಎಂಬಂಥ‌ ಭ್ರಮೆ.
ಆದರೆ ಅದು ಅತಿಯಾಗಿ ಆಗಾಗ ನಾವಿದ್ದಲ್ಲೇ ಬದುಕು ' ನರಕವಾಗುತ್ತಿದೆ'
ಅನಿಸತೊಡಗಿದಾಗ ನಾವು ಜಾಣರಾಗ
ತೊಡಗಿದರೂ ಸಮಯ ಮೀರಿಹೋಗಿ ತ್ತು.ಪಾತ್ರೆಗಳ ಸಂಖ್ಯೆ ಗೊತ್ತಾಗದಂತೆ
ಕಡಿಮೆಯಾಗಿತ್ತು.ಒಂದಕ್ಕೂ ಕಲಾಯಿ
ಇರಲಿಲ್ಲ.ನನ್ನ ಮಕ್ಕಳದೂ ಮದುವೆ
ಮುಗಿದಿತ್ತು .ಆಗ ದೊಡ್ಡ ಪಾತ್ರೆಗಳನ್ನು
ಅಂಗಡಿಗೆ ಹಾಕಿ ಸಂಕಷ್ಟದಿಂದ ಪಾರಾಗುವ ಒಂದೇ ದಾರಿಯನ್ನು ಕಂಡು ಕೊಂಡಾಯಿತು.ಚಿಕ್ಕ ಪುಟ್ಟವುಗಳನ್ನು ಉಳಿಸಿಕೊಂಡು ನಾವು ಧಾರವಾಡದ ಮನೆ ತೆಗೆಯುವ ವರೆಗೆ ಇಟ್ಟುಕೊಂಡು ಬರುವಾಗ ಒಂದು ಗುಡಿಗೆ ದಾನ ಕೊಟ್ಟು ಬಂದೆವು.
            ಈಗ ನಮ್ಮಣ್ಣನ ತೊಟ್ಟಿಯ ಮನೆಯಲ್ಲಿ ತಾಮ್ರ/ ಹಿತ್ತಾಳೆಗಳು 
ಬಂಗಾರದ ಮೌಲ್ಯವನ್ನೂ ಮೀರಿ ಸ್ಥಾನ ಪಡೆದದ್ದು/ಇಡೀ ಮನೆಗೆ ಅದರಿಂದ ಬಂದ ಶೋಭೆ ನೋಡಿದಾಗ ಎಲ್ಲೋ ಎದೆಯ ಮೂಲೆಯಲ್ಲಿ ' ಚಳಕು' ಹಿಡಿದ ಅನುಭವವಾಗುತ್ತದೆ...
             ಎಂದೋ ಮಳೆಯಾಗಿ ಭೂಮಿ ಸಮೃದ್ಧವಾಗಬಹುದೆಂಬ ಹಗಲುಗನಸಿನಲ್ಲಿ ಭೂಮಿ ಹದಗೊಳಿಸಿ
ಬೀಜ ಕಾಯ್ದಿಟ್ಟು/ ಮುಗಿಲುನೋಡುತ್ತ
ದಿನ- ರಾತ್ರಿಗಳನ್ನು ಕಳೆಯುವ‌ ರೈತ ನಾಗಬಾರದೆಂದು ತೆಗೆದುಕೊಂಡ
ಒಂದು ನಿರ್ಧಾರದಿಂದ ನಾವು ಪಡೆದು ಕೊಂಡೆವೋ ಕಳೆದುಕೊಂಡೆವೋ ಎಂಬುದು ನನಗಿನ್ನೂ ಸ್ಪಷ್ಟವಾಗಿ ತಿಳಿಯಲಾಗಿಲ್ಲ...

Friday 3 November 2023

ಪನ್ನು ಎಂಬ ಹುಡುಗನೂ...
ಯಶೋದಾ ಎಂಬ ತಾಯಿಯೂ...
              
              ಇದು ಒಂದು ವಿಭಿನ್ನ ರೀತಿಯ ಕಥೆ...ಮುಖ್ಯವಾಗಿ ಎರಡೇ ಪಾತ್ರಗಳು...ಯಶೋದಾ...ಅವಳ ಮಾನಸ ಪುತ್ರ ಪ್ರಣೀತ್...ಕಥಾವಸ್ತು
ಕೂಡ ಜಟಿಲವಾಗಿಲ್ಲ.ಅರ್ಥೈಸಿಕೊಳ್ಳ ಲೂ ತುಂಬ ಸರಳ: ಮೆದುಳಿಗೆ ಹೆಚ್ಚಿನ ಕೆಲಸವಿಲ್ಲ, ಹೃದಯ ಬಿಚ್ಚಿ ಹರಡಿದರೆ
ಸಾಕು,ನೇರವಾಗಿ ತುಂಬಿಕೊಳ್ಳಬಹು ದು.
              ಒಂದು ಕೌಟುಂಬಿಕ ಉಚಿತ
ಸಲಹಾ ಕೇಂದ್ರ.ಕೌಟುಂಬಿಕ ಸ್ವಾಸ್ಥ್ಯ
ಕಾಪಾಡುವುದೇ ಅದರ ಗುರಿ...ಹೀಗಾಗಿ
ಯಾರೇ ಕರೆ ಮಾಡಿದರೂ ಹಾರ್ದಿಕ
ಸ್ವಾಗತ...ಹೆಸರು ಕೂಡ ಬೇಕಿಲ್ಲ. ಸಮಸ್ಯೆ/ ಪರಿಹಾರಕ್ಕೆ ನೇರ ಸಂಬಂಧ.
ಇಂಥದೇ ಒಂದು ಫೋನ್ ಕರೆ ಒಂದು
ಮಗುವಿನಿಂದ ಬಂದಾಗ ಇತ್ತಕಡೆ ಯಿದ್ದ ಇದ್ದವಳಿಗೆ ಆನಂದ/ ಆಶ್ಚರ್ಯ/ ಕುತೂಹಲ ದಿಂದಾಗಿ ಮಾತು ಮುಂದುವರಿಯುತ್ತದೆ.ಸ್ವಂತದ್ದೊಂದು
ಕುಟುಂಬದ ಆಸರೆಯಿಲ್ಲದ ಏಕಾಕಿ
ಮಹಿಳೆ ಬಹುಶಃ ತನಗೂ ಅತ್ಯವಶ್ಯಕ ವಾದ ಸಂವಹನಕ್ಕೆಂತಲೇ ತೆರೆದ ಸೇವೆಯದು-ಹಾಗೇ ಇರಬಹುದಾದ ಇನ್ನೊಬ್ಬ ಗೆಳತಿಯ ಸಹಯೋಗ ದೊಂದಿಗೆ...
  ‌‌‌              ಮನೆಯಲ್ಲಿ ಯಾರೂ ಇಲ್ಲದೇ ಬೇಸರವೆನಿಸಿದ ಎಂಟು ವರ್ಷಗಳ‌ ಮಗುವೊಂದು ಅಮ್ಮ ಆಗಾಗ ಕರೆ ಮಾಡುವ ನಂಬರಿಗೆ ಮೋಜಿಗೆಂದು ಕರೆ ಮಾಡುತ್ತಾನೆ.
ಅವನಿಗೆ ಸಿಕ್ಕ ಪ್ರೋತ್ಸಾಹ/ಪ್ರೀತಿಗೆ
ಮರುಳಾಗಿ ದಿನಾಲೂ ಮಾಡತೊಡಗಿ
ಅವರಿಬ್ಬರ ಮಧ್ಯೆ ಅವಿನಾಭಾವ ಸಂಬಂಧವೊಂದು ಬೆಳೆಯುತ್ತದೆ. ನಂತರ ಅವರ ಕುಟುಂಬ ವಿದೇಶಕ್ಕೆ
ನೌಕರಿಗಾಗಿ ದೇಶ ಬಿಟ್ಟು ಹೋಗಿ ಮತ್ತೆ ಮರಳಿ ಬಂದಾಗ ಹನ್ನೆರಡು ವರ್ಷಗಳು ಉರುಳಿ ಇಪ್ಪತ್ತರ ಯುವಕನಾದ ಹುಡುಗನಿಗೆ ಎಲ್ಲವೂ ನೆನಪಿಗೆ ಬಂದು
ಆ ಸಲಹಾ ಕೇಂದ್ರಕ್ಕೆ ಹೋದಾಗ ಅವನ ಆಂಟಿಯ ಬದಲಿಗೆ ಅವಳ ಪತ್ರ
ಅವನಿಗೆ ಕಾದಿರುತ್ತದೆ.
  ‌       ‌‌‌‌‌   ‌ಸಂಬಂಧಗಳ ಕೊಡುಕೊಳ್ಳು ವಿಕೆಗೆ ಸಂಬಂಧಿತ ಅತ್ಯಂತ ಸರಳ ಸೂತ್ರವನ್ನಾಧರಿಸಿದ/ ಹೃದಯ ಹೃದಯಗಳ ಭಾಷೆ ಬಳಸಿದ/ನಾವೂ
ಸೇರಿದಂತೆ ಯಾರೂ ಕಥೆಯ ಪಾತ್ರಗಳಾಗಬಹುದಾದ ಪವಾಡರೂಪಿ
ಕಥಾವಸ್ತುವಿದು...
                   ತಾಯಿಯಲ್ಲದೆಯೂ
ಒಬ್ಬ ತಾಯಿ ಕೊಡಬಹುದಾದ ವಾತ್ಸಲ್ಯವನ್ನು ಮೊಗೆಮೊಗೆದು ಕೊಟ್ಟ ಪಾತ್ರಕ್ಕೆ ಅನ್ವರ್ಥಕ ಹೆಸರು 'ಯಶೋದಾ'. ಮಗುವಿನ ಹೆಸರೂ 
' ನಂದನ'-ಆಗಿದ್ದರೆ ಅಲ್ಲೊಂದು ಪುಟ್ಟ
ಗೋಕುಲವೇ ಸೃಷ್ಟಿಯಾಗಬಹುದಿತ್ತು...


ವಿಲೋಮ...
                  ‌"ಹೂಗಳ ಪಕಳೆಗಳನ್ನು ಉದುರಲು ಬಿಡಬಾರದು...ಹಾಗಾದರೆ
ಹಾರ ಬೇಗನೇ ಒಣಗುತ್ತದೆ"- ಎಂದು ಗಾಢವಾಗಿ ನಂಬಿದವರು 'ದೊಡ್ಡಮನೆ' ಯ ಆಯಿ.ಆ ಕಾರಣಕ್ಕೇನೆ ಸ್ವತಃ ಮಾಲೆ ಕಟ್ಟುವಾಗ ಇನ್ನಿಲ್ಲದ ಮುತುವರ್ಜಿ...ಅವರ ಲೆಕ್ಕದಲ್ಲಿ ಕೂಡು ಕುಟುಂಬದ ಸಾರವೂ ಅದೇ. ಹಾಗೆಂತಲೇ ಇಳಿವಯಸ್ಸಿನ ವರೆಗೂ ತುಂಬಿದ ಮನೆಯ ಜವಾಬ್ದಾರಿ ಹೆಗಲಿಗೇರಿಸಿಕೊಂಡು ಹಣ್ಣಾದವರು.. ಆದರೆ ಕಾಲಕ್ಕೆಲ್ಲಿಯ ಕರುಣೆ?! ಅದರ 
ಮುಂದೆ ಯಾವ ತರ್ಕಗಳೂ ಲೆಕ್ಕಕ್ಕಿಲ್ಲ. ಅದು ಬದುಕಿನ 'ಬಾಗಿನ' ಆಗಾಗ 
ಬದಲಿಸುತ್ತದೆ.ಅದನ್ನು ಅನುಸರಿಸಿ
ಬಾಗಬೇಕೋ/ಎದುರಿಸಿ ನಿಂತು ಬಾಳಬೇಕೋ ಅವರವರಿಗೆ ಬಿಟ್ಟದ್ದು...
           'ವಿಲೋಮ'-ಈ ಎರಡೂ ನಿಲುವುಗಳ/ಎರಡು ತಲೆಮಾರುಗಳ
ಕಥೆ. ಕಾಲಮಾನ ೧೯೭೯ ಹಾಗೂ ೨೦೨೦ ರದು...ಅಂದರೆ ಸುಮಾರು 
ನಲವತ್ತು ವರ್ಷಗಳ ಅಂತರದ ವಿದ್ಯಮಾನಗಳದು...ಅಷ್ಟು ಅವಧಿಯ
ವರೆಗೆ ತಾಳಿ ಬಾಳುವ ' ಮಾಲೆ ಕಟ್ಟುವುದು' ಯಾವ ಆಯಿಯಿಂದಲೂ ಆಗದ  ಮಾತು.ಹೀಗಾಗಿ ಪಕಳೆಗಳು 
ಉದುರುವುದೇ ವಿಧಿನಿಯಮವಾಗುವ
ಅನಿವಾರ್ಯವೇ ಕಥೆಯ ಸಾರ...
              ಆದದ್ದೂ ಅದೇ... ಮನೆಮಕ್ಕ ಳು ದೊಡ್ಡವರಾಗಿ,ಅವರ ನಿಲುವುಗಳು ಬದಲಾಗಿ,ಆಗಬಹುದಾದ ಪರಿಣಾಮ ಗಳಿಗನುಗುಣವಾಗಿ ಘಟನೆಗಳು ಘಟಿಸುತ್ತ ಹೋಗುವುದಕ್ಕಮೂಕಸಾಕ್ಷಿ
ಯಾಗುವದರ ಹೊರತು ಬೇರೆ ದಾರಿ ಇಲ್ಲದಿರುವುದು...
               ಮೀರಾಕಾಕು ಹೆರಿಗೆಯ ನಂತರದ ' ಬಾಣಂತಿ ಸನ್ನಿ'ಗೆ ಒಳಗಾಗುವುದು/ ನಾನಿಕಾಕಾ ಅಹಮದಾಬಾದಿಗೆ ನೌಕರಿಗೆ ಹೋಗಿ,ಹೇಗೋ ತಾರಾಳ ಸುಳಿಯೊಳ ಗೆ  ಸಿಕ್ಕು ಒದ್ದಾಡುವುದು/ಅವರಿವರ ಆರೈಕೆಯಲ್ಲಿ ಮುದ್ದಿನಲ್ಲಿ ಬೆಳೆದು, ಜಾಣಳಾಗಿ ಸಾಧನೆ/ಮಹತ್ವಾಕಾಂಕ್ಷೆ ಯ ಮಾಯಾಮೃಗದ ಬೆನ್ನು ಹತ್ತಿ, 
ನ್ಯೂಯಾರ್ಕ್ ನ ಅಪರಿಚಿತ ನೆಲದಲ್ಲಿ ತನ್ನವರಿಲ್ಲದೇ ಮಾನಸಿಕ ದೌರ್ಬಲ್ಯಕ್ಕೆ
ಒಳಗಾಗಿ, ಚನ್ನಾಗಿ ಪರಕಿಸದೇ ಇದ್ದ ಮೂರ್ಖತನದಿಂದಾಗಿ/ದಿನೇಶನ ಅವಕಾಶವಾದಿತನಕ್ಕೆ  ಬಲಿಯಾಗಿ ಅವನ ಪಿಂಡವನ್ನು ಹೊಟ್ಟೆಯಲ್ಲಿಟ್ಟು ಕೊಂಡು ಭಾರತೀಪುರಕ್ಕೆಮರಳುವಲ್ಲಿಗೆ
ಕಥೆ ಮುಗಿಯುತ್ತದೆ.
    ‌ ‌            ಬದುಕಿನಲ್ಲಿ ಸವ್ಯ/ ಅಪಸವ್ಯಗಳೆರಡೂ ಇರುವುದು ಸ್ವಾಭಾವಿಕ.ಅಂದಮೇಲೆ ಅನುಲೋಮ -ವಿಲೋಮಗಳೆರಡೂ
ಇರುವದೂ ಅಚ್ಚರಿಯೇನೂ ಅಲ್ಲ... ಬಂದುದನ್ನು ಸ್ವೀಕರಿಸಲೇಬೇಕು-
ಎನ್ನುವುದೊಂದು 'ಅಲಿಖಿತ ಒಪ್ಪಂದವಷ್ಟೇ...

    ‌‌‌‌   

               

ದೇವರಂಥ ಹುಡುಗರು...

ದೇವರಂಥ ಹುಡುಗರು...
   ‌‌‌        ' ಜಿಂದಗಿ ಏಕ ಸಫರ ಹೈ
ಸುಹಾನಾ, ಯಹಾ ಕಲ್ ಕ್ಯಾ ಹೋ ಕಿಸನೆ ಜಾನಾ' - ಎಂಬ ಹಾಡು ನೆನಪಿಸಿಕೊಳ್ಳುತ್ತಲೇ ಈ ಕತೆಯನ್ನು ಓದುತ್ತಾ ಹೋದೆ.ಒಮ್ಮೆ ಹೃದಯಾ ಘಾತವಾಗಿ, ಹದಗೆಟ್ಟ ಆರೋಗ್ಯದ 
ವಯಸ್ಕ ತಾಯಿಯ ಮಾನಸಿಕ ತುಮುಲವನ್ನು ಕಟ್ಟಿಕೊಡುವ ಮುಖ್ಯ 
ವಿಷಯವಸ್ತುವನ್ನು ಆಯ್ದುಕೊಂಡಾಗ
ಸಹಜವಾಗಿಯೇ ಅವಳ ಗತ ಜೀವನ/ ಮಕ್ಕಳ ಬದುಕು/ ಜೀವನದಲ್ಲಿಯ   
ಸವಾಲುಗಳು/ಅವುಗಳನ್ನು ಎದುರಿಸಲಾಗದ ಅಸಹಾಯಕತೆ ಅಷ್ಟಿಷ್ಟು  ಇರಬಹುದಾದ ಆತ್ಮವಿಶ್ವಾಸ ವನ್ನೂ  ಆಪೋಶನ ತೆಗೆದುಕೊಂಡು
ಬಿಡುತ್ತವೆ ಎಂಬುದನ್ನು ಒಂದು ರೈಲಿನ
ಕೂಪೆಯಲ್ಲಿ ಆರಂಭವಾಗಿ ಗಮ್ಯ ತಲುಪಿದೊಡನೇ ಮುಗಿಯುವ ಈ ಕಥೆ
ಕಟ್ಟಿಕೊಟ್ಟ ರೀತಿ ಮಾತ್ರ ಮನಸ್ಸನ್ನು
ಒದ್ದೆಯಾಗಿಸುತ್ತದೆ.ಪಯಣದ ಉದ್ದಕ್ಕೂ ತನ್ನದೇ ಬೋಗಿ ಹತ್ತಿದ ಇಬ್ಬರು ಯುವಕರ ಸಹಪಯಣದ ಜೊತೆಜೊತೆಗೇನೇ ಅವರೊಂದಿಗೇನೆ ಸಮೀಕರಣಗೊಂಡ, ತಾನು ಈಗಾಗಲೇ ಕಳೆದುಕೊಂಡ ಒಬ್ಬ ಮದ್ಯ
ವ್ಯಸನಿ ಮಗನ ಬದುಕು ತಾಳೆಯಾಗುತ್ತ ಹೋಗಿ ಕೊನೆಯಲ್ಲಿ
ಅದೇ ಮದ್ಯ ಸಾಗಾಣಿಕೆಯ ವಿಷಯವಾಗಿ ಅವರಿಬ್ಬರ ಬಂಧನವಾದದ್ದು ನೂರಕ್ಕೆ ನೂರು ಅನಿರೀಕ್ಷಿತವಾದದ್ದು..ಕಲ್ಪನೆಗೂ  ಮೀರಿದ್ದು... ಕಾರಣ, ಪ್ರಯಾಣ ಸಂದರ್ಭದಲ್ಲಿ, ಅನಿರೀಕ್ಷಿತವಾಗಿ ಅಸ್ವಸ್ಥಳಾದ ಆ ಮಹಿಳೆಗೆ, ಮಕ್ಕಳು
ಜೊತೆಗಿದ್ದರೆ ತೆಗೆದುಕೊಳ್ಳಬಹುದಾದ
ಕಾಳಜಿಯನ್ನು ಮೀರಿ ಕಾಳಜಿ ಮಾಡಿ
ಬದುಕಿಸಿಕೊಂಡವರು ಒಂದು ಸಮಾಜ ನಿಷೇಧಿತ ಕಾರಣಕ್ಕೆ ಬಂಧಿತರಾಗುವು ದು ಓದುಗರನ್ನೂ ದಂಗು ಬಡಿಸುವುದು
ಸಹಜವೇ...
            ಒಬ್ಬ ವಯಸ್ಕ ‌ಪ್ರತಿಭಾವಂತ ಮಗನನ್ನು ಅನ್ಯಾಯವಾಗಿ ಕಳೆದು ಕೊಂಡ ತಾಯಿಯ ದುಃಖ/ ದೀರ್ಘ ಪ್ರವಾಸದ ಆಕಸ್ಮಿಕ ಆಗುಹೋಗುಗಳು
 ಮಕ್ಕಳ ಕುರಿತಾಗಿ ತಾಯಿಯ ಅಂತಃಕರಣ/ಮನುಷ್ಯನ ಸ್ವಭಾವದ
ಆಳ, ವೈಚಿತ್ರ್ಯಗಳು/ ಶೀಘ್ರ ಗತಿಯಲ್ಲಿ
ಬದಲಾಗುತ್ತಿರುವ ಸಮಾಜದ ರೀತಿ ನೀತಿಗಳು/ಸರಿಯಾದ ಮಾರ್ಗದರ್ಶನ ವಿಲ್ಲದ ಇಂದಿನ ಯುವ ಪೀಳಿಗೆಯ 
ಹಾದಿಯ ತೊಡಕುಗಳು ಹೀಗೆ ಹತ್ತು ಹಲವು ಸಮಕಾಲೀನ ಸಮಸ್ಯೆಗಳಿಗೆ
ಹಿಡಿದ ಕನ್ನಡಿ ಈ ಕತೆ ಅಂದರೆ ಹೆಚ್ಚು
ಸಮಂಜಸವೇನೋ!!!


ದೇವರಂಥ ಹುಡುಗರು...

ದೇವರಂಥ ಹುಡುಗರು...
   ‌‌‌        ' ಜಿಂದಗಿ ಏಕ ಸಫರ ಹೈ
ಸುಹಾನಾ, ಯಹಾ ಕಲ್ ಕ್ಯಾ ಹೋ ಕಿಸನೆ ಜಾನಾ' - ಎಂಬ ಹಾಡು ನೆನಪಿಸಿಕೊಳ್ಳುತ್ತಲೇ ಈ ಕತೆಯನ್ನು ಓದುತ್ತಾ ಹೋದೆ.ಒಮ್ಮೆ ಹೃದಯಾ ಘಾತವಾಗಿ, ಹದಗೆಟ್ಟ ಆರೋಗ್ಯದ 
ವಯಸ್ಕ ತಾಯಿಯ ಮಾನಸಿಕ ತುಮುಲವನ್ನು ಕಟ್ಟಿಕೊಡುವ ಮುಖ್ಯ 
ವಿಷಯವಸ್ತುವನ್ನು ಆಯ್ದುಕೊಂಡಾಗ
ಸಹಜವಾಗಿಯೇ ಅವಳ ಗತ ಜೀವನ/ ಮಕ್ಕಳ ಬದುಕು/ ಜೀವನದಲ್ಲಿಯ   
ಸವಾಲುಗಳು/ಅವುಗಳನ್ನು ಎದುರಿಸಲಾಗದ ಅಸಹಾಯಕತೆ ಅಷ್ಟಿಷ್ಟು  ಇರಬಹುದಾದ ಆತ್ಮವಿಶ್ವಾಸ ವನ್ನೂ  ಆಪೋಶನ ತೆಗೆದುಕೊಂಡು
ಬಿಡುತ್ತವೆ ಎಂಬುದನ್ನು ಒಂದು ರೈಲಿನ
ಕೂಪೆಯಲ್ಲಿ ಆರಂಭವಾಗಿ ಗಮ್ಯ ತಲುಪಿದೊಡನೇ ಮುಗಿಯುವ ಈ ಕಥೆ
ಕಟ್ಟಿಕೊಟ್ಟ ರೀತಿ ಮಾತ್ರ ಮನಸ್ಸನ್ನು
ಒದ್ದೆಯಾಗಿಸುತ್ತದೆ.ಪಯಣದ ಉದ್ದಕ್ಕೂ ತನ್ನದೇ ಬೋಗಿ ಹತ್ತಿದ ಇಬ್ಬರು ಯುವಕರ ಸಹಪಯಣದ ಜೊತೆಜೊತೆಗೇನೇ ಅವರೊಂದಿಗೇನೆ ಸಮೀಕರಣಗೊಂಡ, ತಾನು ಈಗಾಗಲೇ ಕಳೆದುಕೊಂಡ ಒಬ್ಬ ಮದ್ಯ
ವ್ಯಸನಿ ಮಗನ ಬದುಕು ತಾಳೆಯಾಗುತ್ತ ಹೋಗಿ ಕೊನೆಯಲ್ಲಿ
ಅದೇ ಮದ್ಯ ಸಾಗಾಣಿಕೆಯ ವಿಷಯವಾಗಿ ಅವರಿಬ್ಬರ ಬಂಧನವಾದದ್ದು ನೂರಕ್ಕೆ ನೂರು ಅನಿರೀಕ್ಷಿತವಾದದ್ದು..ಕಲ್ಪನೆಗೂ  ಮೀರಿದ್ದು... ಕಾರಣ, ಪ್ರಯಾಣ ಸಂದರ್ಭದಲ್ಲಿ, ಅನಿರೀಕ್ಷಿತವಾಗಿ ಅಸ್ವಸ್ಥಳಾದ ಆ ಮಹಿಳೆಗೆ, ಮಕ್ಕಳು
ಜೊತೆಗಿದ್ದರೆ ತೆಗೆದುಕೊಳ್ಳಬಹುದಾದ
ಕಾಳಜಿಯನ್ನು ಮೀರಿ ಕಾಳಜಿ ಮಾಡಿ
ಬದುಕಿಸಿಕೊಂಡವರು ಒಂದು ಸಮಾಜ ನಿಷೇಧಿತ ಕಾರಣಕ್ಕೆ ಬಂಧಿತರಾಗುವು ದು ಓದುಗರನ್ನೂ ದಂಗು ಬಡಿಸುವುದು
ಸಹಜವೇ...
            ಒಬ್ಬ ವಯಸ್ಕ ‌ಪ್ರತಿಭಾವಂತ ಮಗನನ್ನು ಅನ್ಯಾಯವಾಗಿ ಕಳೆದು ಕೊಂಡ ತಾಯಿಯ ದುಃಖ/ ದೀರ್ಘ ಪ್ರವಾಸದ ಆಕಸ್ಮಿಕ ಆಗುಹೋಗುಗಳು
 ಮಕ್ಕಳ ಕುರಿತಾಗಿ ತಾಯಿಯ ಅಂತಃಕರಣ/ಮನುಷ್ಯನ ಸ್ವಭಾವದ
ಆಳ, ವೈಚಿತ್ರ್ಯಗಳು/ ಶೀಘ್ರ ಗತಿಯಲ್ಲಿ
ಬದಲಾಗುತ್ತಿರುವ ಸಮಾಜದ ರೀತಿ ನೀತಿಗಳು/ಸರಿಯಾದ ಮಾರ್ಗದರ್ಶನ ವಿಲ್ಲದ ಇಂದಿನ ಯುವ ಪೀಳಿಗೆಯ 
ಹಾದಿಯ ತೊಡಕುಗಳು ಹೀಗೆ ಹತ್ತು ಹಲವು ಸಮಕಾಲೀನ ಸಮಸ್ಯೆಗಳಿಗೆ
ಹಿಡಿದ ಕನ್ನಡಿ ಈ ಕತೆ ಅಂದರೆ ಹೆಚ್ಚು
ಸಮಂಜಸವೇನೋ!!!


Thursday 2 November 2023

     ಶ್ರೀಮತಿ ಜಯಶ್ರೀ ದೇಶಪಾಂಡೆ ಯವರು ಸಾಹಿತ್ಯ ಕ್ಷೇತ್ರದ ಹಳೆಯ ಹುಲಿ.ಎಷ್ಟೋ ವರ್ಷಗಳ ಹಿಂದೆಯೇ
ತಮ್ಮ ದಿಗ್ಗಜ ಪಟ್ಟಕ್ಕೆ ಒಂದು ಸ್ಥಾಯೀ ಸ್ಥಾನ ಒದಗಿಸಿ ಕೊಟ್ಟವರು.ಅವರು ಕೈಯಾಡಿಸದ ಸಾಹಿತ್ಯ ಕ್ಷೇತ್ರವೇ ಇಲ್ಲವೆನ್ನಬಹುದು.ಕಾದಂಬರಿ/ ಕವನ/ 
ಕಥೆಗಳು/ ಪ್ರವಾಸ ಕಥನಗಳು/ಲಘು ಹಾಸ್ಯದ ಬರಹಗಳು/ ಕಾಕಾ- ಉವಾಚ ಗಳು/ಮನೆತನದ ಹಿರಿಯರು ನಡೆದು ಬಂದ ಹಾದಿಯ ಹೆಗ್ಗುರುತುಗಳನ್ನು ಬಿಂಬಿಸುವ ಲಘು ಬರಹಗಳ ಸಂಗ್ರಹಗಳು...ಏನುಂಟು!!ಏನಿಲ್ಲ!!!
ಅವರ ಅಗಾಧ ಪ್ರತಿಭೆಯ ಆಳವಾದ ಗಣಿಯನ್ನು ಅಗೆದಷ್ಟೂ ಶ್ರೀಮಂತ...!!! ಎಲ್ಲ ಸ್ತರದ ಓದುಗರನ್ನೂ ಸಂತುಷ್ಟ ಗೊಳಿಸುವ ತಾಕತ್ತು ಅವರ ಪೆನ್ನಿಗಿದೆ.
ಒಂದೇ ಲೇಖನದಲ್ಲಿ ಹಲವು ದೇಶಗಳನ್ನು/ ವಿವಿಧ ಭಾಷೆಗಳನ್ನು/ 
ವಿವಿಧ ಬದುಕಿನ ಮಜಲುಗಳನ್ನು/ 
ಬದುಕಿನ ಹೊಸಹೊಸ ಬಣ್ಣಗಳನ್ನು
ಚಿತ್ರಿಸಿ ಅದನ್ನು ಅದ್ಭುತವಾಗಿ ಅಂದ ಗೊಳಿಸುವ ಅವರ ಪರಿ ನನಗೊಂದು ತೀರದ ಅಚ್ಚರಿ.ಮನುಷ್ಯ ಪಾತ್ರಗಳ ನ್ನೂ ಮೀರಿ ನಿಲ್ಲುವ ಪ್ರಾಣಿ ಪ್ರಪಂಚ ಅವರ ಲೇಖನಿಗಳಲ್ಲಿ ಬಿಚ್ಚಿಕೊಳ್ಳುವ ಪವಾಡ ನೋಡಬೇಕು.ಪ್ರಪಂಚದ ಮೂಲೆ ಮೂಲೆಗಳು/ ಬಸ್ಸು ,ರೇಲ್ವೆಗಳು,ಗದ್ದಲ- ಮೌನಗಳೂ
ಒಟ್ಟಿನಲ್ಲಿ ಕಣ್ಣಿಗೆ ಬೀಳುವ ಒಂದು ಕಡ್ಡಿ
ಕೂಡ ಅವರ ಅಚ್ಚಿನಲ್ಲಿ ಹೊಕ್ಕು ಏನೋ ಹೊಸ ರೂಪದಲ್ಲಿ/ಹೊಸ ವೇಷದಲ್ಲಿ ನಮ್ಮ ಮುಂದೆ ಬಂದು ನಿಲ್ಲುತ್ತವೆ.

          ‌‌‌   ಅವರ ಕಥೆ 'ಸೀಮಾಂತರ' ದಲ್ಲಿ ಬರುವ  generation gap ನ ಸಮಸ್ಯೆಗಳು/ಇರುವುದೆಲ್ಲವ ಬಿಟ್ಟು
ಇರದಿರುವದರ ಕಡೆಗಿನ ತುಡಿತದ
ಪಾರ್ಶ್ವಪರಿಣಾಮಗಳು/  ಹಳೆಯದ ನ್ನು ಧಿಕ್ಕರಿಸಿ ,ಬೇಕೆಂದುದನ್ನು ಬೆನ್ನಟ್ಟಿ
ಆಯ್ದ ದಾರಿಯಲ್ಲೇ ನಡೆದರೂ ಸಿಗದ ತೃಪ್ತಿ,ಪರಿಣಾಮವಾಗಿ ನಿರಂತರವಾದ
' ಹುಡುಕಾಟ'/ ಅಸಹಾಯಕತೆ/ ಹೊಂದಾಣಿಕೆಯ ಕೊರತೆ/ ಕಾಣದ
ಪ್ರೀತಿಯ ಒರತೆ/ ಗಳಿಗೆ ಗಳಿಗೆಗೂ ಸಡಿಲಾಗುವ ' ಬಂಧ' ಗಳೂ ಎಲ್ಲವೂ ಸೇರಿ ಬದುಕೇ ' ಪ್ರಪಂಚ ಪಾಣಿಪತ್' ಆಗುವ ದುರಂತ...
               ಒಟ್ಟಿನಲ್ಲಿ ಪುಟ್ಟ ಕೃಷ್ಣನ ತೆರೆದ ಬಾಯಲ್ಲಿ ಯಶೋದೆಗೆ ವಿಶ್ವದ ವಿರಾಟ ದರ್ಶನವಾದಂತೆ ಮೂರು- ನಾಲ್ಕು ಪುಟಗಳ 'ಸೀಮಾಂತರ' ಕಥೆ
ಬಿಚ್ಚಿಟ್ಟ ಹರಹು ಮುಗಿಲಗಲ/ ಮನದಗಲ/ಜಗದಗಲವಾಗಿದೆ.

        ‌ ‌  ' ಬಿಂಬ'- ಪ್ರಚಲಿತ ಜಗತ್ತಿನ 
ಒಂದು ಕ್ಷ - ಕಿರಣ-X Ray ಕಥೆ. ..Things are not what they seem to be ಅಂತಾರಲ್ಲಾ ಹಾಗೆ.ಕೆಲವೊಮ್ಮೆ ಕನ್ನಡಿಯೂ ಇದ್ದುದನ್ನು ಇದ್ದಂತೆ ತೋರಿಸುವುದಿಲ್ಲ, ಅದೂ ಮನಸ್ಸನ್ನು ಭೇದಿಸಿ ಆಳದ ಗಾಯಗಳನ್ನೇ ವೈಭೀಕರಿಸುತ್ತದೆ. ಭೂಮಿ,ಅವನು ಸಮೀರ.ಒಬ್ಬರಿಗೆ 
ಇನ್ನೊಬ್ಬರು ದೂರವೇನಲ್ಲ.ಆದರೆ ಈ ಯಾಂತ್ರಿಕ ಬದುಕಿನಲ್ಲಿ,ಯಂತ್ರಗಳ ಜಗತ್ತಿನಲ್ಲಿ ಮಶಿನ್ಗಳಂತೆಯೇ ಕೂಡಬಲ್ಲರು/ ಮುರಿಯಬಲ್ಲರು. ಅವರಷ್ಟೇ ಏಕೆ ಶಮಾ/ ಈಶಾ/ ಎಲ್ಲರದೂ ಒಂದು ರೀತಿಯಲ್ಲಿ ಅನಾಥ ಬದುಕೇ...ನಿತ್ಯದ ಕೀ ಬೋರ್ಡ್/ ತಿಂಗಳಿನ ಕೊನೆಗಿನ ಚೆಕ್- ಇವುಗಳ ನಡುವಣ ನಿಲ್ದಾಣವೆಂದರೆ ವಿಸ್ಕಿಯ ಗ್ಲಾಸುಗಳೊಂದಿಗಿನ ಜನ್ಮಾಂತರದ
ನೋವುಗಳ ಅನಾವರಣ... ಸಂಪೂರ್ಣವಾಗಿ drain out ಆದ/ ಸದಾ tension ಗಳಿಗೆ ಪಕ್ವವಾಗಿ ಇದ್ದ ಬದುಕನ್ನೂ ಆಸ್ವಾದಿಸಲಾಗದ,ಇಂಥ ನತದೃಷ್ಟ  ಬದುಕಿಗೊಂದು ಸಾಂತ್ವನದ ರೂಪದಲ್ಲಿ ಒಂದು ಮಗುವನ್ನೂ ಮಡಿಲು ತುಂಬಿಕೊಳ್ಳಲಾಗದ /
ಲಿವ್ ಇನ್ ರೆಲೇಶನ್ ಶಿಪ್ನಲ್ಲೇ ಸುಖದ ಭ್ರಮೆಯರಸುವ ಅನಿವಾರ್ಯ ಬದುಕಿನಲ್ಲಿ ಮಾನಸಿಕ ಸಮತೋಲನ ಕಳೆದುಕೊಳ್ಳುವಂತಾಗುವ ದುರಂತ, ಇವುಗಳನ್ನು ಕಂಡಾಗ ' ಕ್ಷಣಕಾಲ ಉಬ್ಬಿ
,ಬಣ್ಣಬಣ್ಣದ ಲೋಕದ ಭ್ರಮೆ ಹುಟ್ಟಿಸಿ,ಅದರಲ್ಲೇ ಮುಳುಗಿ ನಕ್ಕ ನಗೆ
ಮಾಸುವ ಮೊದಲೇ ಕರಗಿ ,ಕಾಣದಾಗುವ ಸೋಪು ನೀರಿನ ' ಗುಳ್ಳೆಗಳಂತೆ ಬದುಕು ಅನಿಸಿ ಬಿಡುತ್ತದೆ.

ದೇವರಂಥ ಹುಡುಗರು...

   ‌‌‌        ' ಜಿಂದಗಿ ಏಕ ಸಫರ ಹೈ
ಸುಹಾನಾ, ಯಹಾ ಕಲ್ ಕ್ಯಾ ಹೋ ಕಿಸನೆ ಜಾನಾ' - ಎಂಬ ಹಾಡು ನೆನಪಿಸಿಕೊಳ್ಳುತ್ತಲೇ ಈ ಕತೆಯನ್ನು ಓದುತ್ತಾ ಹೋದೆ.ಒಮ್ಮೆ ಹೃದಯಾ ಘಾತವಾಗಿ, ಹದಗೆಟ್ಟ ಆರೋಗ್ಯದ 
ವಯಸ್ಕ ತಾಯಿಯ ಮಾನಸಿಕ ತುಮುಲವನ್ನು ಕಟ್ಟಿಕೊಡುವ ಮುಖ್ಯ 
ವಿಷಯವಸ್ತುವನ್ನು ಆಯ್ದುಕೊಂಡಾಗ
ಸಹಜವಾಗಿಯೇ ಅವಳ ಗತ ಜೀವನ/ ಮಕ್ಕಳ ಬದುಕು/ ಜೀವನದಲ್ಲಿಯ   
ಸವಾಲುಗಳು/ಅವುಗಳನ್ನು ಎದುರಿಸಲಾಗದ ಅಸಹಾಯಕತೆ ಅಷ್ಟಿಷ್ಟು  ಇರಬಹುದಾದ ಆತ್ಮವಿಶ್ವಾಸ ವನ್ನೂ  ಆಪೋಶನ ತೆಗೆದುಕೊಂಡು
ಬಿಡುತ್ತವೆ ಎಂಬುದನ್ನು ಒಂದು ರೈಲಿನ
ಕೂಪೆಯಲ್ಲಿ ಆರಂಭವಾಗಿ ಗಮ್ಯ ತಲುಪಿದೊಡನೇ ಮುಗಿಯುವ ಈ ಕಥೆ
ಕಟ್ಟಿಕೊಟ್ಟ ರೀತಿ ಮಾತ್ರ ಮನಸ್ಸನ್ನು
ಒದ್ದೆಯಾಗಿಸುತ್ತದೆ.ಪಯಣದ ಉದ್ದಕ್ಕೂ ತನ್ನದೇ ಬೋಗಿ ಹತ್ತಿದ ಇಬ್ಬರು ಯುವಕರ ಸಹಪಯಣದ ಜೊತೆಜೊತೆಗೇನೇ ಅವರೊಂದಿಗೇನೆ ಸಮೀಕರಣಗೊಂಡ, ತಾನು ಈಗಾಗಲೇ ಕಳೆದುಕೊಂಡ ಒಬ್ಬ ಮದ್ಯ
ವ್ಯಸನಿ ಮಗನ ಬದುಕು ತಾಳೆಯಾಗುತ್ತ ಹೋಗಿ ಕೊನೆಯಲ್ಲಿ
ಅದೇ ಮದ್ಯ ಸಾಗಾಣಿಕೆಯ ವಿಷಯವಾಗಿ ಅವರಿಬ್ಬರ ಬಂಧನವಾದದ್ದು ನೂರಕ್ಕೆ ನೂರು ಅನಿರೀಕ್ಷಿತವಾದದ್ದು..ಕಲ್ಪನೆಗೂ  ಮೀರಿದ್ದು... ಕಾರಣ, ಪ್ರಯಾಣ ಸಂದರ್ಭದಲ್ಲಿ, ಅನಿರೀಕ್ಷಿತವಾಗಿ ಅಸ್ವಸ್ಥಳಾದ ಆ ಮಹಿಳೆಗೆ, ಮಕ್ಕಳು
ಜೊತೆಗಿದ್ದರೆ ತೆಗೆದುಕೊಳ್ಳಬಹುದಾದ
ಕಾಳಜಿಯನ್ನು ಮೀರಿ ಕಾಳಜಿ ಮಾಡಿ
ಬದುಕಿಸಿಕೊಂಡವರು ಒಂದು ಸಮಾಜ ನಿಷೇಧಿತ ಕಾರಣಕ್ಕೆ ಬಂಧಿತರಾಗುವು ದು ಓದುಗರನ್ನೂ ದಂಗು ಬಡಿಸುವುದು
ಸಹಜವೇ...
            ಒಬ್ಬ ವಯಸ್ಕ ‌ಪ್ರತಿಭಾವಂತ ಮಗನನ್ನು ಅನ್ಯಾಯವಾಗಿ ಕಳೆದು ಕೊಂಡ ತಾಯಿಯ ದುಃಖ/ ದೀರ್ಘ ಪ್ರವಾಸದ ಆಕಸ್ಮಿಕ ಆಗುಹೋಗುಗಳು
 ಮಕ್ಕಳ ಕುರಿತಾಗಿ ತಾಯಿಯ ಅಂತಃಕರಣ/ಮನುಷ್ಯನ ಸ್ವಭಾವದ
ಆಳ, ವೈಚಿತ್ರ್ಯಗಳು/ ಶೀಘ್ರ ಗತಿಯಲ್ಲಿ
ಬದಲಾಗುತ್ತಿರುವ ಸಮಾಜದ ರೀತಿ ನೀತಿಗಳು/ಸರಿಯಾದ ಮಾರ್ಗದರ್ಶನ ವಿಲ್ಲದ ಇಂದಿನ ಯುವ ಪೀಳಿಗೆಯ 
ಹಾದಿಯ ತೊಡಕುಗಳು ಹೀಗೆ ಹತ್ತು ಹಲವು ಸಮಕಾಲೀನ ಸಮಸ್ಯೆಗಳಿಗೆ
ಹಿಡಿದ ಕನ್ನಡಿ ಈ ಕತೆ ಅಂದರೆ ಹೆಚ್ಚು
ಸಮಂಜಸವೇನೋ!!!

ವಿಲೋಮ...
                  ‌"ಹೂಗಳ ಪಕಳೆಗಳನ್ನು ಉದುರಲು ಬಿಡಬಾರದು...ಹಾಗಾದರೆ
ಹಾರ ಬೇಗನೇ ಒಣಗುತ್ತದೆ"- ಎಂದು ಗಾಢವಾಗಿ ನಂಬಿದವರು 'ದೊಡ್ಡಮನೆ' ಯ ಆಯಿ.ಆ ಕಾರಣಕ್ಕೇನೆ ಸ್ವತಃ ಮಾಲೆ ಕಟ್ಟುವಾಗ ಇನ್ನಿಲ್ಲದ ಮುತುವರ್ಜಿ...ಅವರ ಲೆಕ್ಕದಲ್ಲಿ ಕೂಡು ಕುಟುಂಬದ ಸಾರವೂ ಅದೇ. ಹಾಗೆಂತಲೇ ಇಳಿವಯಸ್ಸಿನ ವರೆಗೂ ತುಂಬಿದ ಮನೆಯ ಜವಾಬ್ದಾರಿ ಹೆಗಲಿಗೇರಿಸಿಕೊಂಡು ಹಣ್ಣಾದವರು.. ಆದರೆ ಕಾಲಕ್ಕೆಲ್ಲಿಯ ಕರುಣೆ?! ಅದರ 
ಮುಂದೆ ಯಾವ ತರ್ಕಗಳೂ ಲೆಕ್ಕಕ್ಕಿಲ್ಲ. ಅದು ಬದುಕಿನ 'ಬಾಗಿನ' ಆಗಾಗ 
ಬದಲಿಸುತ್ತದೆ.ಅದನ್ನು ಅನುಸರಿಸಿ
ಬಾಗಬೇಕೋ/ಎದುರಿಸಿ ನಿಂತು ಬಾಳಬೇಕೋ ಅವರವರಿಗೆ ಬಿಟ್ಟದ್ದು...
           'ವಿಲೋಮ'-ಈ ಎರಡೂ ನಿಲುವುಗಳ/ಎರಡು ತಲೆಮಾರುಗಳ
ಕಥೆ. ಕಾಲಮಾನ ೧೯೭೯ ಹಾಗೂ ೨೦೨೦ ರದು...ಅಂದರೆ ಸುಮಾರು 
ನಲವತ್ತು ವರ್ಷಗಳ ಅಂತರದ ವಿದ್ಯಮಾನಗಳದು...ಅಷ್ಟು ಅವಧಿಯ
ವರೆಗೆ ತಾಳಿ ಬಾಳುವ ' ಮಾಲೆ ಕಟ್ಟುವುದು' ಯಾವ ಆಯಿಯಿಂದಲೂ ಆಗದ  ಮಾತು.ಹೀಗಾಗಿ ಪಕಳೆಗಳು 
ಉದುರುವುದೇ ವಿಧಿನಿಯಮವಾಗುವ
ಅನಿವಾರ್ಯವೇ ಕಥೆಯ ಸಾರ...
              ಆದದ್ದೂ ಅದೇ... ಮನೆಮಕ್ಕ ಳು ದೊಡ್ಡವರಾಗಿ,ಅವರ ನಿಲುವುಗಳು ಬದಲಾಗಿ,ಆಗಬಹುದಾದ ಪರಿಣಾಮ ಗಳಿಗನುಗುಣವಾಗಿ ಘಟನೆಗಳು ಘಟಿಸುತ್ತ ಹೋಗುವುದಕ್ಕಮೂಕಸಾಕ್ಷಿ
ಯಾಗುವದರ ಹೊರತು ಬೇರೆ ದಾರಿ ಇಲ್ಲದಿರುವುದು...
               ಮೀರಾಕಾಕು ಹೆರಿಗೆಯ ನಂತರದ ' ಬಾಣಂತಿ ಸನ್ನಿ'ಗೆ ಒಳಗಾಗುವುದು/ ನಾನಿಕಾಕಾ ಅಹಮದಾಬಾದಿಗೆ ನೌಕರಿಗೆ ಹೋಗಿ,ಹೇಗೋ ತಾರಾಳ ಸುಳಿಯೊಳ ಗೆ  ಸಿಕ್ಕು ಒದ್ದಾಡುವುದು/ಅವರಿವರ ಆರೈಕೆಯಲ್ಲಿ ಮುದ್ದಿನಲ್ಲಿ ಬೆಳೆದು, ಜಾಣಳಾಗಿ ಸಾಧನೆ/ಮಹತ್ವಾಕಾಂಕ್ಷೆ ಯ ಮಾಯಾಮೃಗದ ಬೆನ್ನು ಹತ್ತಿ, 
ನ್ಯೂಯಾರ್ಕ್ ನ ಅಪರಿಚಿತ ನೆಲದಲ್ಲಿ ತನ್ನವರಿಲ್ಲದೇ ಮಾನಸಿಕ ದೌರ್ಬಲ್ಯಕ್ಕೆ
ಒಳಗಾಗಿ, ಚನ್ನಾಗಿ ಪರಕಿಸದೇ ಇದ್ದ ಮೂರ್ಖತನದಿಂದಾಗಿ/ದಿನೇಶನ ಅವಕಾಶವಾದಿತನಕ್ಕೆ  ಬಲಿಯಾಗಿ ಅವನ ಪಿಂಡವನ್ನು ಹೊಟ್ಟೆಯಲ್ಲಿಟ್ಟು ಕೊಂಡು ಭಾರತೀಪುರಕ್ಕೆಮರಳುವಲ್ಲಿಗೆ
ಕಥೆ ಮುಗಿಯುತ್ತದೆ.
    ‌ ‌            ಬದುಕಿನಲ್ಲಿ ಸವ್ಯ/ ಅಪಸವ್ಯಗಳೆರಡೂ ಇರುವುದು ಸ್ವಾಭಾವಿಕ.ಅಂದಮೇಲೆ ಅನುಲೋಮ -ವಿಲೋಮಗಳೆರಡೂ
ಇರುವದೂ ಅಚ್ಚರಿಯೇನೂ ಅಲ್ಲ... ಬಂದುದನ್ನು ಸ್ವೀಕರಿಸಲೇಬೇಕು-
ಎನ್ನುವುದೊಂದು 'ಅಲಿಖಿತ ಒಪ್ಪಂದವಷ್ಟೇ...

    ‌‌‌‌ಪನ್ನು ಎಂಬ ಹುಡುಗನೂ...
ಯಶೋದಾ ಎಂಬ ತಾಯಿಯೂ...
              
              ಇದು ಒಂದು ವಿಭಿನ್ನ ರೀತಿಯ ಕಥೆ...ಮುಖ್ಯವಾಗಿ ಎರಡೇ ಪಾತ್ರಗಳು...ಯಶೋದಾ...ಅವಳ ಮಾನಸ ಪುತ್ರ ಪ್ರಣೀತ್...ಕಥಾವಸ್ತು
ಕೂಡ ಜಟಿಲವಾಗಿಲ್ಲ.ಅರ್ಥೈಸಿಕೊಳ್ಳ ಲೂ ತುಂಬ ಸರಳ: ಮೆದುಳಿಗೆ ಹೆಚ್ಚಿನ ಕೆಲಸವಿಲ್ಲ, ಹೃದಯ ಬಿಚ್ಚಿ ಹರಡಿದರೆ
ಸಾಕು,ನೇರವಾಗಿ ತುಂಬಿಕೊಳ್ಳಬಹು ದು.
              ಒಂದು ಕೌಟುಂಬಿಕ ಉಚಿತ
ಸಲಹಾ ಕೇಂದ್ರ.ಕೌಟುಂಬಿಕ ಸ್ವಾಸ್ಥ್ಯ
ಕಾಪಾಡುವುದೇ ಅದರ ಗುರಿ...ಹೀಗಾಗಿ
ಯಾರೇ ಕರೆ ಮಾಡಿದರೂ ಹಾರ್ದಿಕ
ಸ್ವಾಗತ...ಹೆಸರು ಕೂಡ ಬೇಕಿಲ್ಲ. ಸಮಸ್ಯೆ/ ಪರಿಹಾರಕ್ಕೆ ನೇರ ಸಂಬಂಧ.
ಇಂಥದೇ ಒಂದು ಫೋನ್ ಕರೆ ಒಂದು
ಮಗುವಿನಿಂದ ಬಂದಾಗ ಇತ್ತಕಡೆ ಯಿದ್ದ ಇದ್ದವಳಿಗೆ ಆನಂದ/ ಆಶ್ಚರ್ಯ/ ಕುತೂಹಲ ದಿಂದಾಗಿ ಮಾತು ಮುಂದುವರಿಯುತ್ತದೆ.ಸ್ವಂತದ್ದೊಂದು
ಕುಟುಂಬದ ಆಸರೆಯಿಲ್ಲದ ಏಕಾಕಿ
ಮಹಿಳೆ ಬಹುಶಃ ತನಗೂ ಅತ್ಯವಶ್ಯಕ ವಾದ ಸಂವಹನಕ್ಕೆಂತಲೇ ತೆರೆದ ಸೇವೆಯದು-ಹಾಗೇ ಇರಬಹುದಾದ ಇನ್ನೊಬ್ಬ ಗೆಳತಿಯ ಸಹಯೋಗ ದೊಂದಿಗೆ...
  ‌‌‌              ಮನೆಯಲ್ಲಿ ಯಾರೂ ಇಲ್ಲದೇ ಬೇಸರವೆನಿಸಿದ ಎಂಟು ವರ್ಷಗಳ‌ ಮಗುವೊಂದು ಅಮ್ಮ ಆಗಾಗ ಕರೆ ಮಾಡುವ ನಂಬರಿಗೆ ಮೋಜಿಗೆಂದು ಕರೆ ಮಾಡುತ್ತಾನೆ.
ಅವನಿಗೆ ಸಿಕ್ಕ ಪ್ರೋತ್ಸಾಹ/ಪ್ರೀತಿಗೆ
ಮರುಳಾಗಿ ದಿನಾಲೂ ಮಾಡತೊಡಗಿ
ಅವರಿಬ್ಬರ ಮಧ್ಯೆ ಅವಿನಾಭಾವ ಸಂಬಂಧವೊಂದು ಬೆಳೆಯುತ್ತದೆ. ನಂತರ ಅವರ ಕುಟುಂಬ ವಿದೇಶಕ್ಕೆ
ನೌಕರಿಗಾಗಿ ದೇಶ ಬಿಟ್ಟು ಹೋಗಿ ಮತ್ತೆ ಮರಳಿ ಬಂದಾಗ ಹನ್ನೆರಡು ವರ್ಷಗಳು ಉರುಳಿ ಇಪ್ಪತ್ತರ ಯುವಕನಾದ ಹುಡುಗನಿಗೆ ಎಲ್ಲವೂ ನೆನಪಿಗೆ ಬಂದು
ಆ ಸಲಹಾ ಕೇಂದ್ರಕ್ಕೆ ಹೋದಾಗ ಅವನ ಆಂಟಿಯ ಬದಲಿಗೆ ಅವಳ ಪತ್ರ
ಅವನಿಗೆ ಕಾದಿರುತ್ತದೆ.
  ‌       ‌‌‌‌‌   ‌ಸಂಬಂಧಗಳ ಕೊಡುಕೊಳ್ಳು ವಿಕೆಗೆ ಸಂಬಂಧಿತ ಅತ್ಯಂತ ಸರಳ ಸೂತ್ರವನ್ನಾಧರಿಸಿದ/ ಹೃದಯ ಹೃದಯಗಳ ಭಾಷೆ ಬಳಸಿದ/ನಾವೂ
ಸೇರಿದಂತೆ ಯಾರೂ ಕಥೆಯ ಪಾತ್ರಗಳಾಗಬಹುದಾದ ಪವಾಡರೂಪಿ
ಕಥಾವಸ್ತುವಿದು...
                   ತಾಯಿಯಲ್ಲದೆಯೂ
ಒಬ್ಬ ತಾಯಿ ಕೊಡಬಹುದಾದ ವಾತ್ಸಲ್ಯವನ್ನು ಮೊಗೆಮೊಗೆದು ಕೊಟ್ಟ ಪಾತ್ರಕ್ಕೆ ಅನ್ವರ್ಥಕ ಹೆಸರು 'ಯಶೋದಾ'. ಮಗುವಿನ ಹೆಸರೂ 
' ನಂದನ'-ಆಗಿದ್ದರೆ ಅಲ್ಲೊಂದು ಪುಟ್ಟ
ಗೋಕುಲವೇ ಸೃಷ್ಟಿಯಾಗಬಹುದಿತ್ತು...



      

Wednesday 1 November 2023

           ನಾನು ಬೆಂಗಳೂರಿಗೆ ಬಂದ ಹೊಸತು...ಇದ್ದದ್ದು ಒಂದು ದೊಡ್ಡ Gated community ಯಲ್ಲಿ.ಹೀಗಾಗಿ ಸಹಜವಾಗಿಯೇ ಕನ್ನಡೇತರರೂ
ಸಾಕಷ್ಟು ಜನರಿದ್ದರು...ಅವರಿಗೆ ಕನ್ನಡ ಮಾತ್ರ ಗೊತ್ತಿರುವ ಕೆಲಸದವರೊಂದಿಗೆ
ವ್ಯವಹರಿಸಲು ದಿನ ಬಳಕೆಯ ಕನ್ನಡ
ಕಲಿಯುವದು ಅವಶ್ಯಕವಾಗಿತ್ತು.ಆಗ ನಾನು/ ಶಾಲಿನಿ ಮೂರ್ತಿ ಸೇರಿಕೊಂಡು
Park ನ ಒಂದು area ದಲ್ಲಿ ಉಚಿತ ಕನ್ನಡ class ಗಳನ್ನು ಪ್ರಾರಂಭಿಸಿದಾಗ
ಅತ್ಯುತ್ತಮ ಪ್ರತಿಕ್ರಿಯೆ ಬಂದು ಎಲ್ಲರೂ ನಮ್ಮಿಬ್ಬರನ್ನೂ ' ಕನ್ನಡಿಗರು' ಎಂದು  ವಿಶೇಷವಾಗಿ ಗುರುತಿಸಲು ಪ್ರಾರಂಭಿಸಿ ದರು.
              ಹೀಗಿರುವಾಗ ಒಂದು ದಿನ
ಏಳನೇ ವರ್ಗದ convent ನ ಕೆಲವು ಮಕ್ಕಳು ನಮ್ಮನೆ ಬಾಗಿಲು ಬಡಿದರು. ತಮಗೆ ಕನ್ನಡ ಕಲಿಯುವುದು ಕಡ್ಡಾಯ ವಾದ ಕಾರಣ ನಾನು ಅವರಿಗೆ ಕನ್ನಡ special class ತೆಗೆದುಕೊಳ್ಳಬೇಕೆಂ ಬುದು ಅವರ ತೀವ್ರ ಆಶಯವಾಗಿತ್ತು.
ಈ ವರೆಗೆ ಏನು ಮಾಡಿದಿರಿ? ಎಂಬ ಪ್ರಶ್ನೆಗೆ 'ಒಬ್ಬರ' ಹೆಸರು ಹೇಳಿ ಅವರ ಬಳಿ ಮೂರು ವರ್ಷಗಳಿಂದ ಕನ್ನಡ ಕಲಿಯುತ್ತಿದ್ದುದಾಗಿಯೂ, ಈಗ ಅವರು ಮದ್ರಾಸ್ ಗೆ shift ಆಗುತ್ತಿ ರುವುದಾಗಿಯೂ ಹೇಳಿದಾಗ ನಾನು ತೆರೆದ ಬಾಯಿ ಮುಚ್ಚಲಿಲ್ಲ.ಕಾರಣ ಆ ಕನ್ನಡ ಟೀಚರ್ ಮಗ ಹಾಗೂ ನನ್ನ ಮೊಮ್ಮಗ ಪರಮಾಪ್ತ ಗೆಳೆಯರು...
ದಿನಾಲೂ ದಿನದ ಅರ್ಧ ಭಾಗ ನಮ್ಮನೆ ಯಲ್ಲಿಯೇ  ಕಳೆಯುತ್ತಿದ್ದ.ಅವರಮ್ಮನ ದೂ ತುಂಬಾ ಚನ್ನಾಗಿ ಪರಿಚಯ.ಆದರೆ
ಎರಡು/ಮೂರು ವರ್ಷಗಳ ಅವಧಿಯ ಲ್ಲಿ ಒಂದೇ ಒಂದು ಕನ್ನಡ ಶಬ್ದವನ್ನು
ಅವರು ಬಳಸಿರಲಿಲ್ಲ.ಅವರಿಗೆ ಕನ್ನಡ ಬರುತ್ತದೆ ಎಂಬ ಸುಳಿವೂ ಕೊಟ್ಟಿರಲೇ ಇಲ್ಲ.ಅಂಥವರು ಕನ್ನಡ ಕಲಿಸಿ ಹಣ ಸಂಪಾದನೆ ಮಾಡುತ್ತಿದ್ದರು!!!
                ಮರುದಿನ ಅವರ ಮಗ ಮನೆಗೆ ಬಂದ...ನಿಮ್ಮಮ್ಮನಿಗೆ ಕನ್ನಡ ಬರುತ್ತಾ?- ಎಂದು ಸಹಜವೆಂಬಂತೆ
ಕೇಳಿದೆ..."ಹಾ! ಆಂಟಿ ಚನ್ನಾಗಿಯೇ ಬರುತ್ತದೆ.ನಮ್ಮಮ್ಮ ಮೈಸೂರಿನವರು. ಮನೆಯಲ್ಲಿ ಕನ್ನಡ class ಗಳನ್ನು ತೆಗೆದುಕೊಳ್ಳುತ್ತಾರೆ-" ಎಂದು ಮುಗ್ಧವಾಗಿ ಉತ್ತರಿಸಿದ!!!

        ನಮ್ಮ ಕನ್ನಡ ಭಾಷೆಯ ಒಂದು ವಿಶೇಷತೆ ಗೊತ್ತಾ? ಕನ್ನಡದ ಅಂಕಿಗಳಿ ಗೂ ಕನ್ನಡದ ಅಕ್ಷರಗಳಿಗೂ ನೇರಾ ನೇರ ಸಂಬಂಧವಿದೆ.ಅವೆರಡೂ ಸೇರದೇ ಒತ್ತಕ್ಷರಗಳಾಗುವುದಿಲ್ಲ...

೧ - ಹಗ್ಗ/ ಮಗ್ಗ/ ಕಗ್ಗ. (ಗ್ ಒತ್ತು)
೨- ಹತ್ತು/ ಮುತ್ತು/ ಕುತ್ತು.( ತ್ ಒತ್ತು)
೩- ಅನ್ನ/ ಕನ್ನ/ ರನ್ನ.( ನ್)
೪- ಕಳ್ಳ/ ಸುಳ್ಳ/ ಹಳ್ಳ.( ಳ್ ಒತ್ತು)
೫- 
೬- ಅಮ್ಮ/ ತಮ್ಮ/ ನಮ್ಮ.( ಮ್ ಒತ್ತು)
೭- ಕಶ್ಯಪ/ ಉಶ್ಯಾಪ/ ( ಶ್ ಒತ್ತು)
೮ - ಕೈ/ಮೈ/ ನೈ( ಜ)..( ಐ ಒತ್ತು)
೯- ಕಾರ್ಯ/ ಸೂರ್ಯ/ ಆರ್ಯ...

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...