Friday, 3 November 2023

ದೇವರಂಥ ಹುಡುಗರು...

ದೇವರಂಥ ಹುಡುಗರು...
   ‌‌‌        ' ಜಿಂದಗಿ ಏಕ ಸಫರ ಹೈ
ಸುಹಾನಾ, ಯಹಾ ಕಲ್ ಕ್ಯಾ ಹೋ ಕಿಸನೆ ಜಾನಾ' - ಎಂಬ ಹಾಡು ನೆನಪಿಸಿಕೊಳ್ಳುತ್ತಲೇ ಈ ಕತೆಯನ್ನು ಓದುತ್ತಾ ಹೋದೆ.ಒಮ್ಮೆ ಹೃದಯಾ ಘಾತವಾಗಿ, ಹದಗೆಟ್ಟ ಆರೋಗ್ಯದ 
ವಯಸ್ಕ ತಾಯಿಯ ಮಾನಸಿಕ ತುಮುಲವನ್ನು ಕಟ್ಟಿಕೊಡುವ ಮುಖ್ಯ 
ವಿಷಯವಸ್ತುವನ್ನು ಆಯ್ದುಕೊಂಡಾಗ
ಸಹಜವಾಗಿಯೇ ಅವಳ ಗತ ಜೀವನ/ ಮಕ್ಕಳ ಬದುಕು/ ಜೀವನದಲ್ಲಿಯ   
ಸವಾಲುಗಳು/ಅವುಗಳನ್ನು ಎದುರಿಸಲಾಗದ ಅಸಹಾಯಕತೆ ಅಷ್ಟಿಷ್ಟು  ಇರಬಹುದಾದ ಆತ್ಮವಿಶ್ವಾಸ ವನ್ನೂ  ಆಪೋಶನ ತೆಗೆದುಕೊಂಡು
ಬಿಡುತ್ತವೆ ಎಂಬುದನ್ನು ಒಂದು ರೈಲಿನ
ಕೂಪೆಯಲ್ಲಿ ಆರಂಭವಾಗಿ ಗಮ್ಯ ತಲುಪಿದೊಡನೇ ಮುಗಿಯುವ ಈ ಕಥೆ
ಕಟ್ಟಿಕೊಟ್ಟ ರೀತಿ ಮಾತ್ರ ಮನಸ್ಸನ್ನು
ಒದ್ದೆಯಾಗಿಸುತ್ತದೆ.ಪಯಣದ ಉದ್ದಕ್ಕೂ ತನ್ನದೇ ಬೋಗಿ ಹತ್ತಿದ ಇಬ್ಬರು ಯುವಕರ ಸಹಪಯಣದ ಜೊತೆಜೊತೆಗೇನೇ ಅವರೊಂದಿಗೇನೆ ಸಮೀಕರಣಗೊಂಡ, ತಾನು ಈಗಾಗಲೇ ಕಳೆದುಕೊಂಡ ಒಬ್ಬ ಮದ್ಯ
ವ್ಯಸನಿ ಮಗನ ಬದುಕು ತಾಳೆಯಾಗುತ್ತ ಹೋಗಿ ಕೊನೆಯಲ್ಲಿ
ಅದೇ ಮದ್ಯ ಸಾಗಾಣಿಕೆಯ ವಿಷಯವಾಗಿ ಅವರಿಬ್ಬರ ಬಂಧನವಾದದ್ದು ನೂರಕ್ಕೆ ನೂರು ಅನಿರೀಕ್ಷಿತವಾದದ್ದು..ಕಲ್ಪನೆಗೂ  ಮೀರಿದ್ದು... ಕಾರಣ, ಪ್ರಯಾಣ ಸಂದರ್ಭದಲ್ಲಿ, ಅನಿರೀಕ್ಷಿತವಾಗಿ ಅಸ್ವಸ್ಥಳಾದ ಆ ಮಹಿಳೆಗೆ, ಮಕ್ಕಳು
ಜೊತೆಗಿದ್ದರೆ ತೆಗೆದುಕೊಳ್ಳಬಹುದಾದ
ಕಾಳಜಿಯನ್ನು ಮೀರಿ ಕಾಳಜಿ ಮಾಡಿ
ಬದುಕಿಸಿಕೊಂಡವರು ಒಂದು ಸಮಾಜ ನಿಷೇಧಿತ ಕಾರಣಕ್ಕೆ ಬಂಧಿತರಾಗುವು ದು ಓದುಗರನ್ನೂ ದಂಗು ಬಡಿಸುವುದು
ಸಹಜವೇ...
            ಒಬ್ಬ ವಯಸ್ಕ ‌ಪ್ರತಿಭಾವಂತ ಮಗನನ್ನು ಅನ್ಯಾಯವಾಗಿ ಕಳೆದು ಕೊಂಡ ತಾಯಿಯ ದುಃಖ/ ದೀರ್ಘ ಪ್ರವಾಸದ ಆಕಸ್ಮಿಕ ಆಗುಹೋಗುಗಳು
 ಮಕ್ಕಳ ಕುರಿತಾಗಿ ತಾಯಿಯ ಅಂತಃಕರಣ/ಮನುಷ್ಯನ ಸ್ವಭಾವದ
ಆಳ, ವೈಚಿತ್ರ್ಯಗಳು/ ಶೀಘ್ರ ಗತಿಯಲ್ಲಿ
ಬದಲಾಗುತ್ತಿರುವ ಸಮಾಜದ ರೀತಿ ನೀತಿಗಳು/ಸರಿಯಾದ ಮಾರ್ಗದರ್ಶನ ವಿಲ್ಲದ ಇಂದಿನ ಯುವ ಪೀಳಿಗೆಯ 
ಹಾದಿಯ ತೊಡಕುಗಳು ಹೀಗೆ ಹತ್ತು ಹಲವು ಸಮಕಾಲೀನ ಸಮಸ್ಯೆಗಳಿಗೆ
ಹಿಡಿದ ಕನ್ನಡಿ ಈ ಕತೆ ಅಂದರೆ ಹೆಚ್ಚು
ಸಮಂಜಸವೇನೋ!!!


No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...