Wednesday, 22 November 2023

 ಸಿಂಹದ ಮರಿ ಕುರಿಮರಿಯಾದ ಕಥೆ..
            
             ‌‌‌   ಒಂದು ಸುಂದರ ಬೆಳಗು... Walking ಮುಗಿಸಿ ಮನೆಗೆ ಬಂದ ಆ ಮನೆಯವರಿಗೆ  ಮನೆಯಂಗಳದಲ್ಲಿ ಕಂಡದ್ದು ಕಾಲು ಗಾಯಮಾಡಿಕೊಂಡು
ಮುದುಡಿ ಮಲಗಿ ' ಒಂದೇ ಸವನೇ ಕುಯ್ ಕುಯ್ಗುಡುತ್ತಿದ್ದ ಒಂದು ನಾಯಿ ಮರಿ.ನೋಡಿದರೆ ಗಾಯ ತೀವ್ರವಾಗಿ ತ್ತು.ಮನೆಯೊಳಗೆ ಕೊಂಡೊಯ್ದು
ಪ್ರಥಮೋಪಚಾರ ಮುಗಿಸಿ ತಕ್ಷಣ ದವಾಖಾನೆಗೆ ಕರೆದೊಯ್ದು ಉಪಚಾರ ಮಾಡಿಸಿಯಾಯ್ತು.ಸ್ವಲ್ಪಮಟ್ಟಿಗೆ ಪರವಾಗಿಲ್ಲ‌ ಅನಿಸಿದಾಗ ಅದರ ಫೋಟೋ ತೆಗೆದು face book ಗೂ
ಹಾಕಿ ಅದರ ಮಾಲಿಕರ ಗಮನ ಸೆಳೆಯಲು ಮಾಡಿದ ಪ್ರಯತ್ನವೂ ಫಲ
ಕಾಣಲಿಲ್ಲ.ಯಾರಿಗಾದರೂ ಬೇಕಿದ್ದರೆ
ಕೊಂಡೊಯ್ಯಬಹುದೆಂಬ ವಿನಂತಿಗೂ
ಪ್ರತಿಕ್ರಿಯೆ ಬರಲಿಲ್ಲ.ಅಷ್ಟು ಹೊತ್ತಿಗಾಗ ಲೇ ಮನೆಯವರಿಗೆ ಅದೂ ಕುಟುಂಬದ ಒಂದು ಭಾಗವೇ-ಅನಿಸತೊಡಗಿ ಆಪ್ತತೆ
ಬೆಳೆದಿತ್ತು.ಮುಖ್ಯವಾಗಿ ಆ ಮರಿಯೇ
ಹಾಗೆಂದುಕೊಂಡಾಗಿತ್ತು.ಸಣಕಲಾಗಿದ್ದ
ಆ ಮರಿ ಮನೆಯವರ 'ರಾಜಾತಿಥ್ಯ' ದಿಂದ ಮುದ್ದು ಮುದ್ದಾಗಿ ಬೆಳೆದು, ಬೆಳ್ಳಗೆ ನೋಡಿದವರ ಕಣ್ಣು ಕುಕ್ಕುತ್ತಿತ್ತು.
ಕೈಯಲ್ಲಿ ಹಿಡಿದರೆ ಮೃದುವಾಗಿ,ತುಂಬ
ಹಿತವಾಗಿ feel ಆಗುತ್ತಿದ್ದುದಕ್ಕೋ ಏನೋ ಎಲ್ಲರೂ ಅದನ್ನು ' ಮೊಮೊ'
ಎಂದು ಕರೆಯಲಾರಂಭಿಸಿದ್ದರು ಕೂಡ.
ಹೊರ ಗೇಟಿನಿಂದ ಇಂಚು ಇಂಚೂ ತನ್ನದೇ ಎಂಬಂತೆ, ಮನೆಗೆ ಬರುವವರು
ತನ್ನಪ್ಪಣೆಯಿಲ್ಲದೇ ಒಳಗೆ ಬರಲಾಗದು
ಎಂಬಂತೆ ನಡೆದುಕೊಳ್ಳುತ್ತಿತ್ತು.ಗೊತ್ತಿದ್ದ ವರೇ ಬಂದರೂ ಯಾರಾದರೊಬ್ಬರು
ಅದನ್ನು ಎತ್ತಿಕೊಂಡು ಅದರ ಜಾಗ ಸೇರಿಸಿ ಕಬ್ಬಿಣದ ಬಾಗಿಲ ಹಿಂದೆ ಕೂಡಿ ಹಾಕಿದರೂ ಅದರ ಧ್ವನಿಯೇ ಎದೆ
ನಡುಗಿಸುತ್ತಿತ್ತು.ಮನೆ ಬಿಟ್ಟು ಬರುವ ವರೆಗೂ ಅಂಗೈಯಲ್ಲಿಯೇ ಜೀವ ಹ ಹಿಡಿದು ಕೊಂಡ ಭಾವ...
     ‌ ‌          ಯಾವು ಯಾವುದೋ ಕಾರಣಕ್ಕೆ ಇತ್ತೀಚೆಗೆ ಅವರ ಮನೆಗೆ
ನನಗೆ ಹೋಗಲಾಗಿರಲಿಲ್ಲ.ಮೊನ್ನೆ
ಅವಕಾಶ ಒದಗಿ ಬಂತು.ಹೋದಾಗ
ಅಚ್ಚರಿಯಾದದ್ದು ಅಲ್ಲಿ ಬೇರೆಯದೇ
ನಾಯಿ ಇದ್ದ ಹಾಗೆ ಅನಿಸಿದ್ದು.ತುಂಬ ಬೆಳೆದು/ಮೈತುಂಬ ಕೂದಲುಗಳುಳ್ಳ
ದೊಡ್ಡ ಗಾತ್ರದ ಜಾತಿಯ ನಾಯಿಯ
ರೂಪ.ಆದರೆ ಸದ್ದೇಯಿಲ್ಲ.ಸದಾ ಯಾರಾದರೂ ಒಬ್ಬರ ಹಿಂದೆ ಅಂಟಿ ಕೊಂಡೇ ನಡೆಯುವುದು ಯಾರೂ ಇಲ್ಲದಿದ್ದರೆ ಕಂಗಾಲಾದಂತೆ ಹುಡುಕಾಡುವುದು/ ಇಲ್ಲವೇ ಕುರ್ಚಿ/
ಸೋಫಾ ಹುಡುಕಿ ಭಯಭೀತ ಕಣ್ಣುಗಳಿಂದ ಮುದುಡಿ ಮಲಗುವದು
ನೋಡಿ ನನಗೋ ಒಗಟು...ಅಂಗೂಲಿ ಮಾಲ ' ಬೌದ್ಧ ಬಿಕ್ಷು'ವಾದ feeilngಉ
                ನನ್ನಿಂದ ಸುಮ್ಮನಾಗಿರಲಾ ರದೇ ಕೇಳಿಯೇ ಬಿಟ್ಟೆ.ಕೇಳಿದ ನಂತರ
ಕಸಿವಿಸಿಯಾಯ್ತು.ಕಳೆದ ದೀಪಾವಳಿ ಯಲ್ಲಿ ಒಂದು ವಾರಕ್ಕೂ ಮೀರಿ
ಯಾವುದೇ ಅಂಕೆಯಿಲ್ಲದೇ ಹಾರಿದ 
ಸಿಡಿ ಮದ್ದುಗಳು/ಆಟಂಬಾಂಬ್ಗಳ
ಎದೆ ನಡುಗಿಸುವ ಸದ್ದುಗಳು ಅದರ ಧ್ವನಿಯನ್ನೂ ಅಡಗಿಸಿಬಿಟ್ಟಿದ್ದವು.
ಆ ಅವಧಿ ಮುಗಿಯುವವರೆಗೂ ಬೆಚ್ಚಿ ಬೆದರಿ ಮುದುಡಿಕೊಂಡು,ಮನೆಯಲ್ಲಿ
ಇದ್ದೂ ಇಲ್ಲದ ಹಾಗೇ ಇದ್ದು, ಹಬ್ಬದ ನಂತರವೂ ಆ ಭಯ ಎಷ್ಟು ಬೇರು ಬಿಟ್ಟಿತ್ತೆಂದರೆ ಇಂದಿಗೂ ಅದು ಅದರಿಂದ ಹೊರ ಬರಲಾಗಿಲ್ಲ.ಅಲ್ಲದೇ ಮನೆಯವರೆಲ್ಲರ ಸಾಂಘಿಕ ಪ್ರಯತ್ನದ ನಂತರವೂ ಅದು  ಮೊದಲಿನ 'ಮೊಮೊ' ಆಗಿಯೇಯಿಲ್ಲ...
              ಅದರದಿನ್ನು ಹೆದರಿಕೆಯಿಲ್ಲ
ಎಂಬ ನಿರಾಳ ಭಾವ ಬರಬೇಕಿತ್ತು. ಆದರೆ ಹಾಗಾಗಲೇಯಿಲ್ಲ.ಪ್ರತಿ ದೀಪಾವಳಿಗೂ ಮೂರು ವರ್ಷಗಳ ವರೆಗೆ ಮಗನನ್ನು ಬಗಲಲ್ಲೆತ್ತಿ/ಸೆರಗು
ಮುಚ್ಚಿ/ಮನೆಯ ಮೂಲೆಯೊಂದರಲ್ಲಿ
ಹೆದರಿಕೆಯಿಂದ ನಡುಗುತ್ತಿದ್ದ ನನ್ನ ಈಗಿನ ಐವತ್ತೆರಡು ವರ್ಷದ ಮಗನ
ಬಾಲ್ಯದ ದಿನಗಳಿಗೆ ಇದನ್ನು ಸಮೀಕರಿಸಿಕೊಂಡು ಸಂಕಟವಾಯಿತು
ಒಮ್ಮೆ, ಕೇವಲ ಒಂದೇ ಒಂದು ಸಲ ಮೋಮೋದ ಆ ಮೊದಲಿನ ಸಿಂಹಧ್ವನಿ
ಕೇಳುವ ತವಕದೊಂದಿಗೇ ಮನೆಗೆ ವಾಪಸ್ ಆದೆ.
          ‌ಎಷ್ಟೊಂದು ಮಕ್ಕಳ/ಹಿರಿಯರ,
ಅಶಕ್ತರ/ ಮೂಕ ಪ್ರಾಣಿಗಳ ಪ್ರತಿನಿಧಿ ಯೋ ಈ 'ಮೊಮೋ' ಅನಿಸಿತು ನನಗೆ.
ಎಲ್ಲವೂ ಅತಿರೇಕಕ್ಕಿಟ್ಟುಕೊಂಡ ಈ
ಆಡಂಬರದ ಜಗತ್ತಿನಲ್ಲಿ 'ಮೊಮೊ'ದ
ಈ ನೋವನ್ನು 'ಬುದ್ಧಿವಂತ'ರೆನಿಸಿಕೊಂ ಡವರಿಗೆ ತಿಳಿಯ ಪಡಿಸುವದಾದರೂ ಹೇಗೆ???
     





No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...