Friday, 3 November 2023

ವಿಲೋಮ...
                  ‌"ಹೂಗಳ ಪಕಳೆಗಳನ್ನು ಉದುರಲು ಬಿಡಬಾರದು...ಹಾಗಾದರೆ
ಹಾರ ಬೇಗನೇ ಒಣಗುತ್ತದೆ"- ಎಂದು ಗಾಢವಾಗಿ ನಂಬಿದವರು 'ದೊಡ್ಡಮನೆ' ಯ ಆಯಿ.ಆ ಕಾರಣಕ್ಕೇನೆ ಸ್ವತಃ ಮಾಲೆ ಕಟ್ಟುವಾಗ ಇನ್ನಿಲ್ಲದ ಮುತುವರ್ಜಿ...ಅವರ ಲೆಕ್ಕದಲ್ಲಿ ಕೂಡು ಕುಟುಂಬದ ಸಾರವೂ ಅದೇ. ಹಾಗೆಂತಲೇ ಇಳಿವಯಸ್ಸಿನ ವರೆಗೂ ತುಂಬಿದ ಮನೆಯ ಜವಾಬ್ದಾರಿ ಹೆಗಲಿಗೇರಿಸಿಕೊಂಡು ಹಣ್ಣಾದವರು.. ಆದರೆ ಕಾಲಕ್ಕೆಲ್ಲಿಯ ಕರುಣೆ?! ಅದರ 
ಮುಂದೆ ಯಾವ ತರ್ಕಗಳೂ ಲೆಕ್ಕಕ್ಕಿಲ್ಲ. ಅದು ಬದುಕಿನ 'ಬಾಗಿನ' ಆಗಾಗ 
ಬದಲಿಸುತ್ತದೆ.ಅದನ್ನು ಅನುಸರಿಸಿ
ಬಾಗಬೇಕೋ/ಎದುರಿಸಿ ನಿಂತು ಬಾಳಬೇಕೋ ಅವರವರಿಗೆ ಬಿಟ್ಟದ್ದು...
           'ವಿಲೋಮ'-ಈ ಎರಡೂ ನಿಲುವುಗಳ/ಎರಡು ತಲೆಮಾರುಗಳ
ಕಥೆ. ಕಾಲಮಾನ ೧೯೭೯ ಹಾಗೂ ೨೦೨೦ ರದು...ಅಂದರೆ ಸುಮಾರು 
ನಲವತ್ತು ವರ್ಷಗಳ ಅಂತರದ ವಿದ್ಯಮಾನಗಳದು...ಅಷ್ಟು ಅವಧಿಯ
ವರೆಗೆ ತಾಳಿ ಬಾಳುವ ' ಮಾಲೆ ಕಟ್ಟುವುದು' ಯಾವ ಆಯಿಯಿಂದಲೂ ಆಗದ  ಮಾತು.ಹೀಗಾಗಿ ಪಕಳೆಗಳು 
ಉದುರುವುದೇ ವಿಧಿನಿಯಮವಾಗುವ
ಅನಿವಾರ್ಯವೇ ಕಥೆಯ ಸಾರ...
              ಆದದ್ದೂ ಅದೇ... ಮನೆಮಕ್ಕ ಳು ದೊಡ್ಡವರಾಗಿ,ಅವರ ನಿಲುವುಗಳು ಬದಲಾಗಿ,ಆಗಬಹುದಾದ ಪರಿಣಾಮ ಗಳಿಗನುಗುಣವಾಗಿ ಘಟನೆಗಳು ಘಟಿಸುತ್ತ ಹೋಗುವುದಕ್ಕಮೂಕಸಾಕ್ಷಿ
ಯಾಗುವದರ ಹೊರತು ಬೇರೆ ದಾರಿ ಇಲ್ಲದಿರುವುದು...
               ಮೀರಾಕಾಕು ಹೆರಿಗೆಯ ನಂತರದ ' ಬಾಣಂತಿ ಸನ್ನಿ'ಗೆ ಒಳಗಾಗುವುದು/ ನಾನಿಕಾಕಾ ಅಹಮದಾಬಾದಿಗೆ ನೌಕರಿಗೆ ಹೋಗಿ,ಹೇಗೋ ತಾರಾಳ ಸುಳಿಯೊಳ ಗೆ  ಸಿಕ್ಕು ಒದ್ದಾಡುವುದು/ಅವರಿವರ ಆರೈಕೆಯಲ್ಲಿ ಮುದ್ದಿನಲ್ಲಿ ಬೆಳೆದು, ಜಾಣಳಾಗಿ ಸಾಧನೆ/ಮಹತ್ವಾಕಾಂಕ್ಷೆ ಯ ಮಾಯಾಮೃಗದ ಬೆನ್ನು ಹತ್ತಿ, 
ನ್ಯೂಯಾರ್ಕ್ ನ ಅಪರಿಚಿತ ನೆಲದಲ್ಲಿ ತನ್ನವರಿಲ್ಲದೇ ಮಾನಸಿಕ ದೌರ್ಬಲ್ಯಕ್ಕೆ
ಒಳಗಾಗಿ, ಚನ್ನಾಗಿ ಪರಕಿಸದೇ ಇದ್ದ ಮೂರ್ಖತನದಿಂದಾಗಿ/ದಿನೇಶನ ಅವಕಾಶವಾದಿತನಕ್ಕೆ  ಬಲಿಯಾಗಿ ಅವನ ಪಿಂಡವನ್ನು ಹೊಟ್ಟೆಯಲ್ಲಿಟ್ಟು ಕೊಂಡು ಭಾರತೀಪುರಕ್ಕೆಮರಳುವಲ್ಲಿಗೆ
ಕಥೆ ಮುಗಿಯುತ್ತದೆ.
    ‌ ‌            ಬದುಕಿನಲ್ಲಿ ಸವ್ಯ/ ಅಪಸವ್ಯಗಳೆರಡೂ ಇರುವುದು ಸ್ವಾಭಾವಿಕ.ಅಂದಮೇಲೆ ಅನುಲೋಮ -ವಿಲೋಮಗಳೆರಡೂ
ಇರುವದೂ ಅಚ್ಚರಿಯೇನೂ ಅಲ್ಲ... ಬಂದುದನ್ನು ಸ್ವೀಕರಿಸಲೇಬೇಕು-
ಎನ್ನುವುದೊಂದು 'ಅಲಿಖಿತ ಒಪ್ಪಂದವಷ್ಟೇ...

    ‌‌‌‌   

               

No comments:

Post a Comment

ನಾವು ಒಟ್ಟು ಏಳು ಜನ ಅಣ್ಣತಂಗಿ- ಅಕ್ಕ ತಮ್ಮಂದಿರು...ನಮ್ಮ ಮಕ್ಕಳೆಲ್ಲ ಸೇರಿದರೆ ಹತ್ತೊಂಬತ್ತು...ಅವರವು ಇಪ್ಪತ್ತೆಂಟು...ಕೆಲವರ್ಷಗಳ ಹಿಂದೆ ಮಕ್ಕಳ ದಿನಾಚರಣೆಯ ದಿನ ಆ ...