Friday, 3 November 2023

ಪನ್ನು ಎಂಬ ಹುಡುಗನೂ...
ಯಶೋದಾ ಎಂಬ ತಾಯಿಯೂ...
              
              ಇದು ಒಂದು ವಿಭಿನ್ನ ರೀತಿಯ ಕಥೆ...ಮುಖ್ಯವಾಗಿ ಎರಡೇ ಪಾತ್ರಗಳು...ಯಶೋದಾ...ಅವಳ ಮಾನಸ ಪುತ್ರ ಪ್ರಣೀತ್...ಕಥಾವಸ್ತು
ಕೂಡ ಜಟಿಲವಾಗಿಲ್ಲ.ಅರ್ಥೈಸಿಕೊಳ್ಳ ಲೂ ತುಂಬ ಸರಳ: ಮೆದುಳಿಗೆ ಹೆಚ್ಚಿನ ಕೆಲಸವಿಲ್ಲ, ಹೃದಯ ಬಿಚ್ಚಿ ಹರಡಿದರೆ
ಸಾಕು,ನೇರವಾಗಿ ತುಂಬಿಕೊಳ್ಳಬಹು ದು.
              ಒಂದು ಕೌಟುಂಬಿಕ ಉಚಿತ
ಸಲಹಾ ಕೇಂದ್ರ.ಕೌಟುಂಬಿಕ ಸ್ವಾಸ್ಥ್ಯ
ಕಾಪಾಡುವುದೇ ಅದರ ಗುರಿ...ಹೀಗಾಗಿ
ಯಾರೇ ಕರೆ ಮಾಡಿದರೂ ಹಾರ್ದಿಕ
ಸ್ವಾಗತ...ಹೆಸರು ಕೂಡ ಬೇಕಿಲ್ಲ. ಸಮಸ್ಯೆ/ ಪರಿಹಾರಕ್ಕೆ ನೇರ ಸಂಬಂಧ.
ಇಂಥದೇ ಒಂದು ಫೋನ್ ಕರೆ ಒಂದು
ಮಗುವಿನಿಂದ ಬಂದಾಗ ಇತ್ತಕಡೆ ಯಿದ್ದ ಇದ್ದವಳಿಗೆ ಆನಂದ/ ಆಶ್ಚರ್ಯ/ ಕುತೂಹಲ ದಿಂದಾಗಿ ಮಾತು ಮುಂದುವರಿಯುತ್ತದೆ.ಸ್ವಂತದ್ದೊಂದು
ಕುಟುಂಬದ ಆಸರೆಯಿಲ್ಲದ ಏಕಾಕಿ
ಮಹಿಳೆ ಬಹುಶಃ ತನಗೂ ಅತ್ಯವಶ್ಯಕ ವಾದ ಸಂವಹನಕ್ಕೆಂತಲೇ ತೆರೆದ ಸೇವೆಯದು-ಹಾಗೇ ಇರಬಹುದಾದ ಇನ್ನೊಬ್ಬ ಗೆಳತಿಯ ಸಹಯೋಗ ದೊಂದಿಗೆ...
  ‌‌‌              ಮನೆಯಲ್ಲಿ ಯಾರೂ ಇಲ್ಲದೇ ಬೇಸರವೆನಿಸಿದ ಎಂಟು ವರ್ಷಗಳ‌ ಮಗುವೊಂದು ಅಮ್ಮ ಆಗಾಗ ಕರೆ ಮಾಡುವ ನಂಬರಿಗೆ ಮೋಜಿಗೆಂದು ಕರೆ ಮಾಡುತ್ತಾನೆ.
ಅವನಿಗೆ ಸಿಕ್ಕ ಪ್ರೋತ್ಸಾಹ/ಪ್ರೀತಿಗೆ
ಮರುಳಾಗಿ ದಿನಾಲೂ ಮಾಡತೊಡಗಿ
ಅವರಿಬ್ಬರ ಮಧ್ಯೆ ಅವಿನಾಭಾವ ಸಂಬಂಧವೊಂದು ಬೆಳೆಯುತ್ತದೆ. ನಂತರ ಅವರ ಕುಟುಂಬ ವಿದೇಶಕ್ಕೆ
ನೌಕರಿಗಾಗಿ ದೇಶ ಬಿಟ್ಟು ಹೋಗಿ ಮತ್ತೆ ಮರಳಿ ಬಂದಾಗ ಹನ್ನೆರಡು ವರ್ಷಗಳು ಉರುಳಿ ಇಪ್ಪತ್ತರ ಯುವಕನಾದ ಹುಡುಗನಿಗೆ ಎಲ್ಲವೂ ನೆನಪಿಗೆ ಬಂದು
ಆ ಸಲಹಾ ಕೇಂದ್ರಕ್ಕೆ ಹೋದಾಗ ಅವನ ಆಂಟಿಯ ಬದಲಿಗೆ ಅವಳ ಪತ್ರ
ಅವನಿಗೆ ಕಾದಿರುತ್ತದೆ.
  ‌       ‌‌‌‌‌   ‌ಸಂಬಂಧಗಳ ಕೊಡುಕೊಳ್ಳು ವಿಕೆಗೆ ಸಂಬಂಧಿತ ಅತ್ಯಂತ ಸರಳ ಸೂತ್ರವನ್ನಾಧರಿಸಿದ/ ಹೃದಯ ಹೃದಯಗಳ ಭಾಷೆ ಬಳಸಿದ/ನಾವೂ
ಸೇರಿದಂತೆ ಯಾರೂ ಕಥೆಯ ಪಾತ್ರಗಳಾಗಬಹುದಾದ ಪವಾಡರೂಪಿ
ಕಥಾವಸ್ತುವಿದು...
                   ತಾಯಿಯಲ್ಲದೆಯೂ
ಒಬ್ಬ ತಾಯಿ ಕೊಡಬಹುದಾದ ವಾತ್ಸಲ್ಯವನ್ನು ಮೊಗೆಮೊಗೆದು ಕೊಟ್ಟ ಪಾತ್ರಕ್ಕೆ ಅನ್ವರ್ಥಕ ಹೆಸರು 'ಯಶೋದಾ'. ಮಗುವಿನ ಹೆಸರೂ 
' ನಂದನ'-ಆಗಿದ್ದರೆ ಅಲ್ಲೊಂದು ಪುಟ್ಟ
ಗೋಕುಲವೇ ಸೃಷ್ಟಿಯಾಗಬಹುದಿತ್ತು...


No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...