Sunday, 19 November 2023

    ಅದು 1970 ದಶಕ...ಧಾರವಾಡದ
ಗಲ್ಲಿಗಲ್ಲಿಗಳಲ್ಲಿ/ ಪುಟ್ಟ ಪುಟ್ಟ ಬಯಲು ಗಳಲ್ಲಿ ಮೂರು ಕೋಲುಗಳನ್ನು ಊರಿ
ಇಲ್ಲವೇ ಊಟಕ್ಕೆ ಕೂಡುವ ಮಣೆಗಳ ನ್ನು ಹೇಗೋ ಆಸರೆ ಕೊಟ್ಟು ನಿಲ್ಲಿಸಿ ಮಕ್ಕಳು cricket ಆಡುತ್ತಿದ್ದರು.ಸ್ವಲ್ಪ- ಸ್ವಲ್ಪವೇ ಆ ಆಟ ಜನಪ್ರಿಯವಾಗತೊ ಡಗಿತ್ತು.TV ಇನ್ನೂ ಬಂದಿರಲಿಲ್ಲವಾಗಿ
ಅದರ ಪ್ರಭಾವ ಕೆಲವೇ ಮಕ್ಕಳ ಮೇಲೆ ಮಿತಿಯೊಳಗಿತ್ತು...
                ನನ್ನ ಮಗ ಸ್ನಾನ ಮಾಡಲು
ತೆಗೆದ ಬನಿಯನ್ ಅನ್ನು  ಉಂಡೆ ಕಟ್ಟಿ
ಓಡಿ ಬಂದು ಬಾಲ್ ಹಾಕುವಂತೆ ಬಕೆಟ್ಟಿನೊಳಗೆ ಹಾಕಿ ಕೇಕೆ ಹಾಕುತ್ತಿದ್ದ.
ಯಾರಾದರೂ ಏನಾದರೂ ಕೊಡಲು ಹೋದರೆ ಅದನ್ನು ಎಸೆಯಲು ಹೇಳಿ ಎದ್ದು/ಬಿದ್ದು/ಕೆಳಗೆ ಮಲಗಿ ಕಠಿಣ Catchವೊಂದನ್ನು ಹಿಡಿದಂತೆ ಅದನ್ನು ತೆಗೆದುಕೊಂಡು ಸುಖಿಸುತ್ತಿದ್ದ.೧೯೮೪ ರಲ್ಲಿ TV ಬಂದ ಮೇಲೆ  ನಮ್ಮ Black and White T Vಯಲ್ಲಿಯ Match ಗಳನ್ನೇ ಈಗಿನ‌ WORLD CUP ರೇಂಜ ನಲ್ಲಿ ವೈಭವೀಕರಣಗೊಳಿಸಲಾ ಗುತ್ತಿತ್ತು.ಚಹಾ/juice/ಚುರುಮರಿ/ ಮಿರ್ಚಿಗಳ ಸಮಾರಾಧನೆ, ಗಂಟಲು  ಹರಿಯುವಂತೆ ಕೇಕೆ/ಬೇಕಾದ ಟೀಮ್  ಗೆದ್ದರೆ ನಿಬ್ಬಣದ ಮುಂದಿನ ಕುಣಿತದ
ಗದ್ದಲ...ಉಫ್ ಮನೆ - ಮನಸ್ಸುಗಳ
ತುಂಬಾ ನವಿಲ ನರ್ತನ.ನಿರೀಕ್ಷೆಗಳು
ಕಡಿಮೆ ಹೀಗಾಗಿ ಶುದ್ಧ ಆನಂದಕ್ಕೇನೇ
ಸಿಂಹಪಾಲು...ನಾವು ಹಿರಿಯರು
ಮಕ್ಕಳನ್ನು ಕಾಡಿ/ಕೇಳಿ ಆ ಆಟವನ್ನು 
ತಿಳಿದುಕೊಂಡು ಅವರು ನಕ್ಕಾಗ ನಕ್ಕು,
ಖಿನ್ನರಾದಾಗ ಚು.ಚು.ಚು ಲೊಚಗುಟ್ಟಿ ಅವರನ್ನು ಬೆಂಬಲಿಸುವುದಿತ್ತು. Innocence is Bliss- ಅನ್ನುವುದು ಅದಕ್ಕೇ ಇರಬೇಕು
           ಈಗ ಎಲ್ಲೆಲ್ಲೂ ಜ್ಞಾನ ಸ್ಫೋಟ,
ಕಿರುಬೆರಳಿನಲ್ಲಿ ಮಾಹಿತಿ ಕಣಜ.ಅದೇ
ಮಾತನಾಡಲು ಕಲಿತ ಮಕ್ಕಳಿಗೂ
ತಮ್ಮವೇ ಅಭಿಪ್ರಾಯಗಳು.ತಮ್ಮದೇ
ರೀತಿಯಲ್ಲಿ ಅವುಗಳನ್ನು ವ್ಯಕ್ತ ಪಡಿಸುವ ಚಾಕಚಕ್ಯತೆ...ಆಟವನ್ನು ಆಟವಾಗಿ ನೋಡದೇ ಅಭಿಮಾನದ
ಅತಿರೇಕ, ಅತಿರೇಕದ ಪ್ರತಿಕ್ರಿಯೆಗಳು,
ಅಭಿಪ್ರಾಯ ಭೇದಗಳನ್ನೇ ಮೂಲಕ್ಕೆ ಗಂಭೀರವಾಗಿಸಿ - ವಾದ-ವಿವಾದಗಳು,
ಔಚಿತ್ಯವನ್ನು ಮೀರಿದ‌ ಪದ ಬಳಕೆ, ಅನವಶ್ಯಕ ಮಾನಸಿಕ ಕ್ಲೇಶಗಳು,
ಇವುಗಳನ್ನೇ ಕಾಣುತ್ತೇವೆ.ಆದರೆ ಅಲ್ಲಿ ಕೆಲಸ ಮಾಡುವುದು AAA( ಅರ್ಹತೆ- ಅವಕಾಶ- ಅದೃಷ್ಟ)ಗಳೇ ಹೊರತು
ಮಿಕ್ಕ ಯಾವ ವಿಷಯಗಳೂ ಅಲ್ಲ.
ಹತ್ತಾರು ಟೀಮ್ ಗಳು ಆಡಲು ಬಂದಾಗ ಎಲ್ಲರೂ ಚನ್ನಾಗಿ ಆಡಲೆಂ ದೇ,ಗೆಲ್ಲಲೆಂದೇ,ಬಂದಿರುತ್ತಾರೆ.
ಅದೃಷ್ಟ ಕೈಕೊಟ್ಟರೆ ಯಾವ ಅರ್ಹತೆ ಯೂ ಏನೂ ಮಾಡಲಾಗುವುದಿಲ್ಲ. ಕರ್ಣನ‌ ಕೌಶಲ್ಯದಂತೆ ಕೊನೆ ಗಳಿಗೆ ಯಲ್ಲಿ ನೆನಪು ಕೈಕೊಟ್ಟು ದುರಂತಕ್ಕೆ ಏನೋ ಒಂದು ಕೊನೆಗೆ ಕಾರಣೀಭೂತ ವಾಗುತ್ತದೆ...ಆಗ ಯಾವ ಸಚಿನ್/ ಯಾವ ಕೊಹಲಿಯೂ ಏನನ್ನೂ ಮಾಡಲಾಗದೇ ನಡೆಯುತ್ತಿರುವುದಕ್ಕೆ 
ಮೂಕ ಸಾಕ್ಷಿಯಾಗಯತ್ತಾರೆ...
ನಿನ್ನೆಯಾದದ್ದೂ ಅಂಥ ಪ್ರಸಂಗಗಳಲ್ಲಿ ಒಂದು...

ಅಷ್ಟೇ...

.


       ‌

                      

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...