Thursday, 30 November 2023

ಹೇಳು, ಸಾಕು...

ನೀನು ಹೇಗೆ ಬದುಕುತ್ತಿ- ಹೇಳಬೇಡ,
ಇತರರ ನೋವು ನಿನ್ನನ್ನೂ ನೋಯಿಸುತ್ತಾ? ಹೇಳು,ಸಾಕು...
ನಿನ್ನ ವಯಸ್ಸೆಷ್ಟು-ನನಗೆ ಬೇಡ,
ನಿನ್ನ ಪ್ರೀತಿ,ಕನಸಿಗೆ'ನಿಜದ ಬದುಕು' ಬದುಕುವ 'ಹುಂಬ'ಎನಿಸಿಕೊಳ್ಳುವ  ಧೈರ್ಯ ಉಂಟಾ?- ಹೇಳು ಸಾಕು...

ನಿನ್ನ ಬದುಕಿನ ಪರಿಭ್ರಮಣದ 
ಕಥೆ ನನಗೆ ಬೇಡ..
ನಿನ್ನ ಮನದಾಳದ ದುಃಖದ ಮೂಲ ಅರಿತಿದ್ದೀಯಾ,?
ಬದುಕಿನ ಕಷ್ಟಗಳ ಎದುರಿಸಬಲ್ಲೆಯಾ- ಹೇಳು ಸಾಕು...

ದುಃಖ ನನ್ನದಿರಲಿ,ನಿನ್ನದೇ ಇರಲಿ,
ಅಡಗಿಸದೇ,ಕಂಗೆಡಿಸದೇ,
ಸಂತೋಷದ ಗಳಿಗೆ, 
ನಿನ್ನದಿರಲಿ,ನನ್ನದೇ ಇರಲಿ,
ಮಾನವ ಮಿತಿಗಳ ಉಪದೇಶಿಸದೇ
ಟೊಳ್ಳು- ಗಟ್ಟಿಗಳ ನಿರ್ದೇಶಿಸದೇ ನನ್ನೊಡನೆ ಇರಬಲ್ಲೆಯಾ?
ಹೇಳು ಸಾಕು...

ನೀ ಹೇಳುವ ಮಾತು ಸತ್ಯವಾ?
ಸುಳ್ಳಾ?-ನನಗೆ ಬೇಕಿಲ್ಲ...
ನೀನು ನಿನ್ನಾತ್ಮವನ್ನು ವಂಚಿಸಿ
ನಿನ್ನದಲ್ಲದ ರೂಪ ತಾಳುವುದಿಲ್ಲ ತಾನೇ ಹೇಳು,ಸಾಕು...

ಎಲ್ಲ ದಿನಗಳೂ ನಮ್ಮವೇ ಆಗಿರಲಿಕ್ಕಿಲ್ಲ
ಎಲ್ಲ ಗೆಲುವೂ ಸದಾ ಜೊತೆಗಿರಲಿಕ್ಕಿಲ್ಲ
ಈ ಎಲ್ಲ ಜಯಾಪಜಯಗಳ ಮೀರಿ
ನನ್ನೊಡನಿರಬಲ್ಲೆಯಾ? 
ಹೇಳು,ಸಾಕು...

ಕೆಲವೊಮ್ಮೆ ಏಕಾಕಿಯಾಗಿಯೂ
ಖುಶಿಯಿಂದಿರಬಲ್ಲೆಯಾ?
'ಶೂನ್ಯಗಳಿಗೆ'-ಗಳಲ್ಲೂ ನಿನ್ನನ್ನು
ನೀನು ಸಂಭಾಳಿಸಬಲ್ಲೆಯಾ?
ಹೇಳು ಸಾಕು...


No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...