ತಮ್ಮ ದಿಗ್ಗಜ ಪಟ್ಟಕ್ಕೆ ಒಂದು ಸ್ಥಾಯೀ ಸ್ಥಾನ ಒದಗಿಸಿ ಕೊಟ್ಟವರು.ಅವರು ಕೈಯಾಡಿಸದ ಸಾಹಿತ್ಯ ಕ್ಷೇತ್ರವೇ ಇಲ್ಲವೆನ್ನಬಹುದು.ಕಾದಂಬರಿ/ ಕವನ/
ಕಥೆಗಳು/ ಪ್ರವಾಸ ಕಥನಗಳು/ಲಘು ಹಾಸ್ಯದ ಬರಹಗಳು/ ಕಾಕಾ- ಉವಾಚ ಗಳು/ಮನೆತನದ ಹಿರಿಯರು ನಡೆದು ಬಂದ ಹಾದಿಯ ಹೆಗ್ಗುರುತುಗಳನ್ನು ಬಿಂಬಿಸುವ ಲಘು ಬರಹಗಳ ಸಂಗ್ರಹಗಳು...ಏನುಂಟು!!ಏನಿಲ್ಲ!!!
ಅವರ ಅಗಾಧ ಪ್ರತಿಭೆಯ ಆಳವಾದ ಗಣಿಯನ್ನು ಅಗೆದಷ್ಟೂ ಶ್ರೀಮಂತ...!!! ಎಲ್ಲ ಸ್ತರದ ಓದುಗರನ್ನೂ ಸಂತುಷ್ಟ ಗೊಳಿಸುವ ತಾಕತ್ತು ಅವರ ಪೆನ್ನಿಗಿದೆ.
ಒಂದೇ ಲೇಖನದಲ್ಲಿ ಹಲವು ದೇಶಗಳನ್ನು/ ವಿವಿಧ ಭಾಷೆಗಳನ್ನು/
ವಿವಿಧ ಬದುಕಿನ ಮಜಲುಗಳನ್ನು/
ಬದುಕಿನ ಹೊಸಹೊಸ ಬಣ್ಣಗಳನ್ನು
ಚಿತ್ರಿಸಿ ಅದನ್ನು ಅದ್ಭುತವಾಗಿ ಅಂದ ಗೊಳಿಸುವ ಅವರ ಪರಿ ನನಗೊಂದು ತೀರದ ಅಚ್ಚರಿ.ಮನುಷ್ಯ ಪಾತ್ರಗಳ ನ್ನೂ ಮೀರಿ ನಿಲ್ಲುವ ಪ್ರಾಣಿ ಪ್ರಪಂಚ ಅವರ ಲೇಖನಿಗಳಲ್ಲಿ ಬಿಚ್ಚಿಕೊಳ್ಳುವ ಪವಾಡ ನೋಡಬೇಕು.ಪ್ರಪಂಚದ ಮೂಲೆ ಮೂಲೆಗಳು/ ಬಸ್ಸು ,ರೇಲ್ವೆಗಳು,ಗದ್ದಲ- ಮೌನಗಳೂ
ಒಟ್ಟಿನಲ್ಲಿ ಕಣ್ಣಿಗೆ ಬೀಳುವ ಒಂದು ಕಡ್ಡಿ
ಕೂಡ ಅವರ ಅಚ್ಚಿನಲ್ಲಿ ಹೊಕ್ಕು ಏನೋ ಹೊಸ ರೂಪದಲ್ಲಿ/ಹೊಸ ವೇಷದಲ್ಲಿ ನಮ್ಮ ಮುಂದೆ ಬಂದು ನಿಲ್ಲುತ್ತವೆ.
ಅವರ ಕಥೆ 'ಸೀಮಾಂತರ' ದಲ್ಲಿ ಬರುವ generation gap ನ ಸಮಸ್ಯೆಗಳು/ಇರುವುದೆಲ್ಲವ ಬಿಟ್ಟು
ಇರದಿರುವದರ ಕಡೆಗಿನ ತುಡಿತದ
ಪಾರ್ಶ್ವಪರಿಣಾಮಗಳು/ ಹಳೆಯದ ನ್ನು ಧಿಕ್ಕರಿಸಿ ,ಬೇಕೆಂದುದನ್ನು ಬೆನ್ನಟ್ಟಿ
ಆಯ್ದ ದಾರಿಯಲ್ಲೇ ನಡೆದರೂ ಸಿಗದ ತೃಪ್ತಿ,ಪರಿಣಾಮವಾಗಿ ನಿರಂತರವಾದ
' ಹುಡುಕಾಟ'/ ಅಸಹಾಯಕತೆ/ ಹೊಂದಾಣಿಕೆಯ ಕೊರತೆ/ ಕಾಣದ
ಪ್ರೀತಿಯ ಒರತೆ/ ಗಳಿಗೆ ಗಳಿಗೆಗೂ ಸಡಿಲಾಗುವ ' ಬಂಧ' ಗಳೂ ಎಲ್ಲವೂ ಸೇರಿ ಬದುಕೇ ' ಪ್ರಪಂಚ ಪಾಣಿಪತ್' ಆಗುವ ದುರಂತ...
ಒಟ್ಟಿನಲ್ಲಿ ಪುಟ್ಟ ಕೃಷ್ಣನ ತೆರೆದ ಬಾಯಲ್ಲಿ ಯಶೋದೆಗೆ ವಿಶ್ವದ ವಿರಾಟ ದರ್ಶನವಾದಂತೆ ಮೂರು- ನಾಲ್ಕು ಪುಟಗಳ 'ಸೀಮಾಂತರ' ಕಥೆ
ಬಿಚ್ಚಿಟ್ಟ ಹರಹು ಮುಗಿಲಗಲ/ ಮನದಗಲ/ಜಗದಗಲವಾಗಿದೆ.
' ಬಿಂಬ'- ಪ್ರಚಲಿತ ಜಗತ್ತಿನ
ಒಂದು ಕ್ಷ - ಕಿರಣ-X Ray ಕಥೆ. ..Things are not what they seem to be ಅಂತಾರಲ್ಲಾ ಹಾಗೆ.ಕೆಲವೊಮ್ಮೆ ಕನ್ನಡಿಯೂ ಇದ್ದುದನ್ನು ಇದ್ದಂತೆ ತೋರಿಸುವುದಿಲ್ಲ, ಅದೂ ಮನಸ್ಸನ್ನು ಭೇದಿಸಿ ಆಳದ ಗಾಯಗಳನ್ನೇ ವೈಭೀಕರಿಸುತ್ತದೆ. ಭೂಮಿ,ಅವನು ಸಮೀರ.ಒಬ್ಬರಿಗೆ
ಇನ್ನೊಬ್ಬರು ದೂರವೇನಲ್ಲ.ಆದರೆ ಈ ಯಾಂತ್ರಿಕ ಬದುಕಿನಲ್ಲಿ,ಯಂತ್ರಗಳ ಜಗತ್ತಿನಲ್ಲಿ ಮಶಿನ್ಗಳಂತೆಯೇ ಕೂಡಬಲ್ಲರು/ ಮುರಿಯಬಲ್ಲರು. ಅವರಷ್ಟೇ ಏಕೆ ಶಮಾ/ ಈಶಾ/ ಎಲ್ಲರದೂ ಒಂದು ರೀತಿಯಲ್ಲಿ ಅನಾಥ ಬದುಕೇ...ನಿತ್ಯದ ಕೀ ಬೋರ್ಡ್/ ತಿಂಗಳಿನ ಕೊನೆಗಿನ ಚೆಕ್- ಇವುಗಳ ನಡುವಣ ನಿಲ್ದಾಣವೆಂದರೆ ವಿಸ್ಕಿಯ ಗ್ಲಾಸುಗಳೊಂದಿಗಿನ ಜನ್ಮಾಂತರದ
ನೋವುಗಳ ಅನಾವರಣ... ಸಂಪೂರ್ಣವಾಗಿ drain out ಆದ/ ಸದಾ tension ಗಳಿಗೆ ಪಕ್ವವಾಗಿ ಇದ್ದ ಬದುಕನ್ನೂ ಆಸ್ವಾದಿಸಲಾಗದ,ಇಂಥ ನತದೃಷ್ಟ ಬದುಕಿಗೊಂದು ಸಾಂತ್ವನದ ರೂಪದಲ್ಲಿ ಒಂದು ಮಗುವನ್ನೂ ಮಡಿಲು ತುಂಬಿಕೊಳ್ಳಲಾಗದ /
ಲಿವ್ ಇನ್ ರೆಲೇಶನ್ ಶಿಪ್ನಲ್ಲೇ ಸುಖದ ಭ್ರಮೆಯರಸುವ ಅನಿವಾರ್ಯ ಬದುಕಿನಲ್ಲಿ ಮಾನಸಿಕ ಸಮತೋಲನ ಕಳೆದುಕೊಳ್ಳುವಂತಾಗುವ ದುರಂತ, ಇವುಗಳನ್ನು ಕಂಡಾಗ ' ಕ್ಷಣಕಾಲ ಉಬ್ಬಿ
,ಬಣ್ಣಬಣ್ಣದ ಲೋಕದ ಭ್ರಮೆ ಹುಟ್ಟಿಸಿ,ಅದರಲ್ಲೇ ಮುಳುಗಿ ನಕ್ಕ ನಗೆ
ಮಾಸುವ ಮೊದಲೇ ಕರಗಿ ,ಕಾಣದಾಗುವ ಸೋಪು ನೀರಿನ ' ಗುಳ್ಳೆಗಳಂತೆ ಬದುಕು ಅನಿಸಿ ಬಿಡುತ್ತದೆ.
ದೇವರಂಥ ಹುಡುಗರು...
' ಜಿಂದಗಿ ಏಕ ಸಫರ ಹೈ
ಸುಹಾನಾ, ಯಹಾ ಕಲ್ ಕ್ಯಾ ಹೋ ಕಿಸನೆ ಜಾನಾ' - ಎಂಬ ಹಾಡು ನೆನಪಿಸಿಕೊಳ್ಳುತ್ತಲೇ ಈ ಕತೆಯನ್ನು ಓದುತ್ತಾ ಹೋದೆ.ಒಮ್ಮೆ ಹೃದಯಾ ಘಾತವಾಗಿ, ಹದಗೆಟ್ಟ ಆರೋಗ್ಯದ
ವಯಸ್ಕ ತಾಯಿಯ ಮಾನಸಿಕ ತುಮುಲವನ್ನು ಕಟ್ಟಿಕೊಡುವ ಮುಖ್ಯ
ವಿಷಯವಸ್ತುವನ್ನು ಆಯ್ದುಕೊಂಡಾಗ
ಸಹಜವಾಗಿಯೇ ಅವಳ ಗತ ಜೀವನ/ ಮಕ್ಕಳ ಬದುಕು/ ಜೀವನದಲ್ಲಿಯ
ಸವಾಲುಗಳು/ಅವುಗಳನ್ನು ಎದುರಿಸಲಾಗದ ಅಸಹಾಯಕತೆ ಅಷ್ಟಿಷ್ಟು ಇರಬಹುದಾದ ಆತ್ಮವಿಶ್ವಾಸ ವನ್ನೂ ಆಪೋಶನ ತೆಗೆದುಕೊಂಡು
ಬಿಡುತ್ತವೆ ಎಂಬುದನ್ನು ಒಂದು ರೈಲಿನ
ಕೂಪೆಯಲ್ಲಿ ಆರಂಭವಾಗಿ ಗಮ್ಯ ತಲುಪಿದೊಡನೇ ಮುಗಿಯುವ ಈ ಕಥೆ
ಕಟ್ಟಿಕೊಟ್ಟ ರೀತಿ ಮಾತ್ರ ಮನಸ್ಸನ್ನು
ಒದ್ದೆಯಾಗಿಸುತ್ತದೆ.ಪಯಣದ ಉದ್ದಕ್ಕೂ ತನ್ನದೇ ಬೋಗಿ ಹತ್ತಿದ ಇಬ್ಬರು ಯುವಕರ ಸಹಪಯಣದ ಜೊತೆಜೊತೆಗೇನೇ ಅವರೊಂದಿಗೇನೆ ಸಮೀಕರಣಗೊಂಡ, ತಾನು ಈಗಾಗಲೇ ಕಳೆದುಕೊಂಡ ಒಬ್ಬ ಮದ್ಯ
ವ್ಯಸನಿ ಮಗನ ಬದುಕು ತಾಳೆಯಾಗುತ್ತ ಹೋಗಿ ಕೊನೆಯಲ್ಲಿ
ಅದೇ ಮದ್ಯ ಸಾಗಾಣಿಕೆಯ ವಿಷಯವಾಗಿ ಅವರಿಬ್ಬರ ಬಂಧನವಾದದ್ದು ನೂರಕ್ಕೆ ನೂರು ಅನಿರೀಕ್ಷಿತವಾದದ್ದು..ಕಲ್ಪನೆಗೂ ಮೀರಿದ್ದು... ಕಾರಣ, ಪ್ರಯಾಣ ಸಂದರ್ಭದಲ್ಲಿ, ಅನಿರೀಕ್ಷಿತವಾಗಿ ಅಸ್ವಸ್ಥಳಾದ ಆ ಮಹಿಳೆಗೆ, ಮಕ್ಕಳು
ಜೊತೆಗಿದ್ದರೆ ತೆಗೆದುಕೊಳ್ಳಬಹುದಾದ
ಕಾಳಜಿಯನ್ನು ಮೀರಿ ಕಾಳಜಿ ಮಾಡಿ
ಬದುಕಿಸಿಕೊಂಡವರು ಒಂದು ಸಮಾಜ ನಿಷೇಧಿತ ಕಾರಣಕ್ಕೆ ಬಂಧಿತರಾಗುವು ದು ಓದುಗರನ್ನೂ ದಂಗು ಬಡಿಸುವುದು
ಸಹಜವೇ...
ಒಬ್ಬ ವಯಸ್ಕ ಪ್ರತಿಭಾವಂತ ಮಗನನ್ನು ಅನ್ಯಾಯವಾಗಿ ಕಳೆದು ಕೊಂಡ ತಾಯಿಯ ದುಃಖ/ ದೀರ್ಘ ಪ್ರವಾಸದ ಆಕಸ್ಮಿಕ ಆಗುಹೋಗುಗಳು
ಮಕ್ಕಳ ಕುರಿತಾಗಿ ತಾಯಿಯ ಅಂತಃಕರಣ/ಮನುಷ್ಯನ ಸ್ವಭಾವದ
ಆಳ, ವೈಚಿತ್ರ್ಯಗಳು/ ಶೀಘ್ರ ಗತಿಯಲ್ಲಿ
ಬದಲಾಗುತ್ತಿರುವ ಸಮಾಜದ ರೀತಿ ನೀತಿಗಳು/ಸರಿಯಾದ ಮಾರ್ಗದರ್ಶನ ವಿಲ್ಲದ ಇಂದಿನ ಯುವ ಪೀಳಿಗೆಯ
ಹಾದಿಯ ತೊಡಕುಗಳು ಹೀಗೆ ಹತ್ತು ಹಲವು ಸಮಕಾಲೀನ ಸಮಸ್ಯೆಗಳಿಗೆ
ಹಿಡಿದ ಕನ್ನಡಿ ಈ ಕತೆ ಅಂದರೆ ಹೆಚ್ಚು
ಸಮಂಜಸವೇನೋ!!!
ವಿಲೋಮ...
"ಹೂಗಳ ಪಕಳೆಗಳನ್ನು ಉದುರಲು ಬಿಡಬಾರದು...ಹಾಗಾದರೆ
ಹಾರ ಬೇಗನೇ ಒಣಗುತ್ತದೆ"- ಎಂದು ಗಾಢವಾಗಿ ನಂಬಿದವರು 'ದೊಡ್ಡಮನೆ' ಯ ಆಯಿ.ಆ ಕಾರಣಕ್ಕೇನೆ ಸ್ವತಃ ಮಾಲೆ ಕಟ್ಟುವಾಗ ಇನ್ನಿಲ್ಲದ ಮುತುವರ್ಜಿ...ಅವರ ಲೆಕ್ಕದಲ್ಲಿ ಕೂಡು ಕುಟುಂಬದ ಸಾರವೂ ಅದೇ. ಹಾಗೆಂತಲೇ ಇಳಿವಯಸ್ಸಿನ ವರೆಗೂ ತುಂಬಿದ ಮನೆಯ ಜವಾಬ್ದಾರಿ ಹೆಗಲಿಗೇರಿಸಿಕೊಂಡು ಹಣ್ಣಾದವರು.. ಆದರೆ ಕಾಲಕ್ಕೆಲ್ಲಿಯ ಕರುಣೆ?! ಅದರ
ಮುಂದೆ ಯಾವ ತರ್ಕಗಳೂ ಲೆಕ್ಕಕ್ಕಿಲ್ಲ. ಅದು ಬದುಕಿನ 'ಬಾಗಿನ' ಆಗಾಗ
ಬದಲಿಸುತ್ತದೆ.ಅದನ್ನು ಅನುಸರಿಸಿ
ಬಾಗಬೇಕೋ/ಎದುರಿಸಿ ನಿಂತು ಬಾಳಬೇಕೋ ಅವರವರಿಗೆ ಬಿಟ್ಟದ್ದು...
'ವಿಲೋಮ'-ಈ ಎರಡೂ ನಿಲುವುಗಳ/ಎರಡು ತಲೆಮಾರುಗಳ
ಕಥೆ. ಕಾಲಮಾನ ೧೯೭೯ ಹಾಗೂ ೨೦೨೦ ರದು...ಅಂದರೆ ಸುಮಾರು
ನಲವತ್ತು ವರ್ಷಗಳ ಅಂತರದ ವಿದ್ಯಮಾನಗಳದು...ಅಷ್ಟು ಅವಧಿಯ
ವರೆಗೆ ತಾಳಿ ಬಾಳುವ ' ಮಾಲೆ ಕಟ್ಟುವುದು' ಯಾವ ಆಯಿಯಿಂದಲೂ ಆಗದ ಮಾತು.ಹೀಗಾಗಿ ಪಕಳೆಗಳು
ಉದುರುವುದೇ ವಿಧಿನಿಯಮವಾಗುವ
ಅನಿವಾರ್ಯವೇ ಕಥೆಯ ಸಾರ...
ಆದದ್ದೂ ಅದೇ... ಮನೆಮಕ್ಕ ಳು ದೊಡ್ಡವರಾಗಿ,ಅವರ ನಿಲುವುಗಳು ಬದಲಾಗಿ,ಆಗಬಹುದಾದ ಪರಿಣಾಮ ಗಳಿಗನುಗುಣವಾಗಿ ಘಟನೆಗಳು ಘಟಿಸುತ್ತ ಹೋಗುವುದಕ್ಕಮೂಕಸಾಕ್ಷಿ
ಯಾಗುವದರ ಹೊರತು ಬೇರೆ ದಾರಿ ಇಲ್ಲದಿರುವುದು...
ಮೀರಾಕಾಕು ಹೆರಿಗೆಯ ನಂತರದ ' ಬಾಣಂತಿ ಸನ್ನಿ'ಗೆ ಒಳಗಾಗುವುದು/ ನಾನಿಕಾಕಾ ಅಹಮದಾಬಾದಿಗೆ ನೌಕರಿಗೆ ಹೋಗಿ,ಹೇಗೋ ತಾರಾಳ ಸುಳಿಯೊಳ ಗೆ ಸಿಕ್ಕು ಒದ್ದಾಡುವುದು/ಅವರಿವರ ಆರೈಕೆಯಲ್ಲಿ ಮುದ್ದಿನಲ್ಲಿ ಬೆಳೆದು, ಜಾಣಳಾಗಿ ಸಾಧನೆ/ಮಹತ್ವಾಕಾಂಕ್ಷೆ ಯ ಮಾಯಾಮೃಗದ ಬೆನ್ನು ಹತ್ತಿ,
ನ್ಯೂಯಾರ್ಕ್ ನ ಅಪರಿಚಿತ ನೆಲದಲ್ಲಿ ತನ್ನವರಿಲ್ಲದೇ ಮಾನಸಿಕ ದೌರ್ಬಲ್ಯಕ್ಕೆ
ಒಳಗಾಗಿ, ಚನ್ನಾಗಿ ಪರಕಿಸದೇ ಇದ್ದ ಮೂರ್ಖತನದಿಂದಾಗಿ/ದಿನೇಶನ ಅವಕಾಶವಾದಿತನಕ್ಕೆ ಬಲಿಯಾಗಿ ಅವನ ಪಿಂಡವನ್ನು ಹೊಟ್ಟೆಯಲ್ಲಿಟ್ಟು ಕೊಂಡು ಭಾರತೀಪುರಕ್ಕೆಮರಳುವಲ್ಲಿಗೆ
ಕಥೆ ಮುಗಿಯುತ್ತದೆ.
ಬದುಕಿನಲ್ಲಿ ಸವ್ಯ/ ಅಪಸವ್ಯಗಳೆರಡೂ ಇರುವುದು ಸ್ವಾಭಾವಿಕ.ಅಂದಮೇಲೆ ಅನುಲೋಮ -ವಿಲೋಮಗಳೆರಡೂ
ಇರುವದೂ ಅಚ್ಚರಿಯೇನೂ ಅಲ್ಲ... ಬಂದುದನ್ನು ಸ್ವೀಕರಿಸಲೇಬೇಕು-
ಎನ್ನುವುದೊಂದು 'ಅಲಿಖಿತ ಒಪ್ಪಂದವಷ್ಟೇ...
ಪನ್ನು ಎಂಬ ಹುಡುಗನೂ...
ಯಶೋದಾ ಎಂಬ ತಾಯಿಯೂ...
ಇದು ಒಂದು ವಿಭಿನ್ನ ರೀತಿಯ ಕಥೆ...ಮುಖ್ಯವಾಗಿ ಎರಡೇ ಪಾತ್ರಗಳು...ಯಶೋದಾ...ಅವಳ ಮಾನಸ ಪುತ್ರ ಪ್ರಣೀತ್...ಕಥಾವಸ್ತು
ಕೂಡ ಜಟಿಲವಾಗಿಲ್ಲ.ಅರ್ಥೈಸಿಕೊಳ್ಳ ಲೂ ತುಂಬ ಸರಳ: ಮೆದುಳಿಗೆ ಹೆಚ್ಚಿನ ಕೆಲಸವಿಲ್ಲ, ಹೃದಯ ಬಿಚ್ಚಿ ಹರಡಿದರೆ
ಸಾಕು,ನೇರವಾಗಿ ತುಂಬಿಕೊಳ್ಳಬಹು ದು.
ಒಂದು ಕೌಟುಂಬಿಕ ಉಚಿತ
ಸಲಹಾ ಕೇಂದ್ರ.ಕೌಟುಂಬಿಕ ಸ್ವಾಸ್ಥ್ಯ
ಕಾಪಾಡುವುದೇ ಅದರ ಗುರಿ...ಹೀಗಾಗಿ
ಯಾರೇ ಕರೆ ಮಾಡಿದರೂ ಹಾರ್ದಿಕ
ಸ್ವಾಗತ...ಹೆಸರು ಕೂಡ ಬೇಕಿಲ್ಲ. ಸಮಸ್ಯೆ/ ಪರಿಹಾರಕ್ಕೆ ನೇರ ಸಂಬಂಧ.
ಇಂಥದೇ ಒಂದು ಫೋನ್ ಕರೆ ಒಂದು
ಮಗುವಿನಿಂದ ಬಂದಾಗ ಇತ್ತಕಡೆ ಯಿದ್ದ ಇದ್ದವಳಿಗೆ ಆನಂದ/ ಆಶ್ಚರ್ಯ/ ಕುತೂಹಲ ದಿಂದಾಗಿ ಮಾತು ಮುಂದುವರಿಯುತ್ತದೆ.ಸ್ವಂತದ್ದೊಂದು
ಕುಟುಂಬದ ಆಸರೆಯಿಲ್ಲದ ಏಕಾಕಿ
ಮಹಿಳೆ ಬಹುಶಃ ತನಗೂ ಅತ್ಯವಶ್ಯಕ ವಾದ ಸಂವಹನಕ್ಕೆಂತಲೇ ತೆರೆದ ಸೇವೆಯದು-ಹಾಗೇ ಇರಬಹುದಾದ ಇನ್ನೊಬ್ಬ ಗೆಳತಿಯ ಸಹಯೋಗ ದೊಂದಿಗೆ...
ಮನೆಯಲ್ಲಿ ಯಾರೂ ಇಲ್ಲದೇ ಬೇಸರವೆನಿಸಿದ ಎಂಟು ವರ್ಷಗಳ ಮಗುವೊಂದು ಅಮ್ಮ ಆಗಾಗ ಕರೆ ಮಾಡುವ ನಂಬರಿಗೆ ಮೋಜಿಗೆಂದು ಕರೆ ಮಾಡುತ್ತಾನೆ.
ಅವನಿಗೆ ಸಿಕ್ಕ ಪ್ರೋತ್ಸಾಹ/ಪ್ರೀತಿಗೆ
ಮರುಳಾಗಿ ದಿನಾಲೂ ಮಾಡತೊಡಗಿ
ಅವರಿಬ್ಬರ ಮಧ್ಯೆ ಅವಿನಾಭಾವ ಸಂಬಂಧವೊಂದು ಬೆಳೆಯುತ್ತದೆ. ನಂತರ ಅವರ ಕುಟುಂಬ ವಿದೇಶಕ್ಕೆ
ನೌಕರಿಗಾಗಿ ದೇಶ ಬಿಟ್ಟು ಹೋಗಿ ಮತ್ತೆ ಮರಳಿ ಬಂದಾಗ ಹನ್ನೆರಡು ವರ್ಷಗಳು ಉರುಳಿ ಇಪ್ಪತ್ತರ ಯುವಕನಾದ ಹುಡುಗನಿಗೆ ಎಲ್ಲವೂ ನೆನಪಿಗೆ ಬಂದು
ಆ ಸಲಹಾ ಕೇಂದ್ರಕ್ಕೆ ಹೋದಾಗ ಅವನ ಆಂಟಿಯ ಬದಲಿಗೆ ಅವಳ ಪತ್ರ
ಅವನಿಗೆ ಕಾದಿರುತ್ತದೆ.
ಸಂಬಂಧಗಳ ಕೊಡುಕೊಳ್ಳು ವಿಕೆಗೆ ಸಂಬಂಧಿತ ಅತ್ಯಂತ ಸರಳ ಸೂತ್ರವನ್ನಾಧರಿಸಿದ/ ಹೃದಯ ಹೃದಯಗಳ ಭಾಷೆ ಬಳಸಿದ/ನಾವೂ
ಸೇರಿದಂತೆ ಯಾರೂ ಕಥೆಯ ಪಾತ್ರಗಳಾಗಬಹುದಾದ ಪವಾಡರೂಪಿ
ಕಥಾವಸ್ತುವಿದು...
ತಾಯಿಯಲ್ಲದೆಯೂ
ಒಬ್ಬ ತಾಯಿ ಕೊಡಬಹುದಾದ ವಾತ್ಸಲ್ಯವನ್ನು ಮೊಗೆಮೊಗೆದು ಕೊಟ್ಟ ಪಾತ್ರಕ್ಕೆ ಅನ್ವರ್ಥಕ ಹೆಸರು 'ಯಶೋದಾ'. ಮಗುವಿನ ಹೆಸರೂ
' ನಂದನ'-ಆಗಿದ್ದರೆ ಅಲ್ಲೊಂದು ಪುಟ್ಟ
ಗೋಕುಲವೇ ಸೃಷ್ಟಿಯಾಗಬಹುದಿತ್ತು...
No comments:
Post a Comment