ಸಾಕಷ್ಟು ಜನರಿದ್ದರು...ಅವರಿಗೆ ಕನ್ನಡ ಮಾತ್ರ ಗೊತ್ತಿರುವ ಕೆಲಸದವರೊಂದಿಗೆ
ವ್ಯವಹರಿಸಲು ದಿನ ಬಳಕೆಯ ಕನ್ನಡ
ಕಲಿಯುವದು ಅವಶ್ಯಕವಾಗಿತ್ತು.ಆಗ ನಾನು/ ಶಾಲಿನಿ ಮೂರ್ತಿ ಸೇರಿಕೊಂಡು
Park ನ ಒಂದು area ದಲ್ಲಿ ಉಚಿತ ಕನ್ನಡ class ಗಳನ್ನು ಪ್ರಾರಂಭಿಸಿದಾಗ
ಅತ್ಯುತ್ತಮ ಪ್ರತಿಕ್ರಿಯೆ ಬಂದು ಎಲ್ಲರೂ ನಮ್ಮಿಬ್ಬರನ್ನೂ ' ಕನ್ನಡಿಗರು' ಎಂದು ವಿಶೇಷವಾಗಿ ಗುರುತಿಸಲು ಪ್ರಾರಂಭಿಸಿ ದರು.
ಹೀಗಿರುವಾಗ ಒಂದು ದಿನ
ಏಳನೇ ವರ್ಗದ convent ನ ಕೆಲವು ಮಕ್ಕಳು ನಮ್ಮನೆ ಬಾಗಿಲು ಬಡಿದರು. ತಮಗೆ ಕನ್ನಡ ಕಲಿಯುವುದು ಕಡ್ಡಾಯ ವಾದ ಕಾರಣ ನಾನು ಅವರಿಗೆ ಕನ್ನಡ special class ತೆಗೆದುಕೊಳ್ಳಬೇಕೆಂ ಬುದು ಅವರ ತೀವ್ರ ಆಶಯವಾಗಿತ್ತು.
ಈ ವರೆಗೆ ಏನು ಮಾಡಿದಿರಿ? ಎಂಬ ಪ್ರಶ್ನೆಗೆ 'ಒಬ್ಬರ' ಹೆಸರು ಹೇಳಿ ಅವರ ಬಳಿ ಮೂರು ವರ್ಷಗಳಿಂದ ಕನ್ನಡ ಕಲಿಯುತ್ತಿದ್ದುದಾಗಿಯೂ, ಈಗ ಅವರು ಮದ್ರಾಸ್ ಗೆ shift ಆಗುತ್ತಿ ರುವುದಾಗಿಯೂ ಹೇಳಿದಾಗ ನಾನು ತೆರೆದ ಬಾಯಿ ಮುಚ್ಚಲಿಲ್ಲ.ಕಾರಣ ಆ ಕನ್ನಡ ಟೀಚರ್ ಮಗ ಹಾಗೂ ನನ್ನ ಮೊಮ್ಮಗ ಪರಮಾಪ್ತ ಗೆಳೆಯರು...
ದಿನಾಲೂ ದಿನದ ಅರ್ಧ ಭಾಗ ನಮ್ಮನೆ ಯಲ್ಲಿಯೇ ಕಳೆಯುತ್ತಿದ್ದ.ಅವರಮ್ಮನ ದೂ ತುಂಬಾ ಚನ್ನಾಗಿ ಪರಿಚಯ.ಆದರೆ
ಎರಡು/ಮೂರು ವರ್ಷಗಳ ಅವಧಿಯ ಲ್ಲಿ ಒಂದೇ ಒಂದು ಕನ್ನಡ ಶಬ್ದವನ್ನು
ಅವರು ಬಳಸಿರಲಿಲ್ಲ.ಅವರಿಗೆ ಕನ್ನಡ ಬರುತ್ತದೆ ಎಂಬ ಸುಳಿವೂ ಕೊಟ್ಟಿರಲೇ ಇಲ್ಲ.ಅಂಥವರು ಕನ್ನಡ ಕಲಿಸಿ ಹಣ ಸಂಪಾದನೆ ಮಾಡುತ್ತಿದ್ದರು!!!
ಮರುದಿನ ಅವರ ಮಗ ಮನೆಗೆ ಬಂದ...ನಿಮ್ಮಮ್ಮನಿಗೆ ಕನ್ನಡ ಬರುತ್ತಾ?- ಎಂದು ಸಹಜವೆಂಬಂತೆ
ಕೇಳಿದೆ..."ಹಾ! ಆಂಟಿ ಚನ್ನಾಗಿಯೇ ಬರುತ್ತದೆ.ನಮ್ಮಮ್ಮ ಮೈಸೂರಿನವರು. ಮನೆಯಲ್ಲಿ ಕನ್ನಡ class ಗಳನ್ನು ತೆಗೆದುಕೊಳ್ಳುತ್ತಾರೆ-" ಎಂದು ಮುಗ್ಧವಾಗಿ ಉತ್ತರಿಸಿದ!!!
No comments:
Post a Comment