Wednesday, 5 June 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೆ...

Think before you act....

              ‌ಇಂದು ವಿಶ್ವಪರಿಸರ ದಿನವಂತೆ...ಅದರ ಪ್ರಯುಕ್ತ ಸಾಕಷ್ಟು postಗಳು,ಭಾಷಣಗಳ ಮುಖಾಂತರ ಜಾಗ್ರತಿ  ಮೂಡಿಸುವ ಕಾರ್ಯಕ್ರಮಗಳು,  ಸ್ವಚ್ಛತಾ ಕಾರ್ಯಕ್ರಮಗಳ ಆಯೋಜನೆಗಳು,
ಸಾಮಾಜಿಕ ಸೇವೆ ,ಹೀಗೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದರ ಬಗ್ಗೆ ಓದಲು ಸಿಗುತ್ತದೆ...ಒಳ್ಳೆಯ ಬೆಳವಣಿಗೆ...ಇಂಥ ಧನಾತ್ಮಕ ವಿಚಾರಗಳು ಇಂದಿಲ್ಲದಿರೆ ನಾಳೆ ಅಪೇಕ್ಷಿತ ಬದಲಾವಣೆಯ ಕಡೆ ಮುಖ ಮಾಡಿಯೇ ಮಾಡುತ್ತವೆ...
          ‌ಇಂಥದೇ ಬದಲಾವಣೆಯೊಂದನ್ನು ಗುರಿಯಾಗಿಸಿಕೊಂಡು ಫೇಸಬುಕ್ಕಿನ  developers' meeting ನಲ್ಲಿ ಶ್ರೀ ಆಡಮ್ ಮೆಸ್ಸೋರಿ ಯವರು ಮಾನಸಿಕ ಪರಿಸರ ಸ್ವಚ್ಛವಾಗಿರಿಸುವ ಒಂದು ವಿಷಯವನ್ನು ಪ್ರಸ್ತಾಪಿಸಿದ್ದಾರೆ..ಆ್ಯಪ್ ಡೆವಲಪ್ ಮಾಡುವದು ಸರಿ...ಬೇಕಾದ ಹಾಗೆ ಮಾಡೋಣ ಆದರೆ ಅನಾರೋಗ್ಯಕರ ಸ್ಪರ್ಧೆ ಉಂಟುಮಾಡುತ್ತಿರುವ, like options ಗಳನ್ನು ತೆಗೆದುಹಾಕೋಣ ಎಂಬುದಾಗಿ ಚರ್ಚಿಸುತ್ತಿದ್ದಾರೆ...ಮೂಗಿಗಿಂತ ಮೂಗುತಿ ಭಾರ ಎಂಬಂತೆ ವಿಷಯ ಪ್ರಧಾನವಾಗಿರಬೇಕಾದಲ್ಲಿ likes, commentsಗಳು ಪ್ರಧಾನವಾಗಿ ದಾರಿ ತಪ್ಪಿಸುತ್ತಿವೆ...ಇದರಿಂದ ಯಾವುದೇ ವಿಷಯದ ಸರಿಯಾದ ಮೌಲ್ಯ ಮಾಪನವಾಗುವದಿಲ್ಲ...ಜ್ಞಾನ ಪ್ರಧಾನ ವಿಷಯಗಳು ಜನಪರವಾಗಿದ್ದರೂ ಜನಪ್ರಿಯ ವಾಗಿರಲಿಕ್ಕಿಲ್ಲ..
ಮನುಷ್ಯನ ಸೈಕಾಲಜಿ ವೈಯಕ್ತಿಕ- personal ಆಗಿ ಬೇರೆಯೇ ಯಿರುತ್ತದೆ,ಸಾಮೂಹಿಕವಾಗಿ ಬೇರೆಯೇ ಇರುತ್ತದೆ..ಅಂತೆಯೇ ಒಬ್ಬ ವಿದ್ಯಾರ್ಥಿ ಒಬ್ಬನೇ ಭೇಟಿಯಾದಾಗ ಇದ್ದ ನಡವಳಿಕೆ ಗುಂಪಿನಲ್ಲಿ ಇರುವದಿಲ್ಲ.ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣವೂ ವಿಶ್ವಸಾರ್ಹವಲ್ಲ...ಅದರಲ್ಲಿರುವ ಎಲ್ಲವನ್ನೂ ಸಾರಾಸಗಟಾಗಿ ಒಪ್ಪಲಾಗುವದಿಲ್ಲ...ಎಂಬುದು ಅವರು ಅಂಬೋಣ...ಒಬ್ಬ ಉದಯೋನ್ಮುಖ ಬರಹಗಾರನಿಗೆ  ಒಬ್ಬ ನುರಿತ ಬರಹಗಾರನ ಆತ್ಮಸ್ಥೈರ್ಯ,ಜನಬೆಂಬಲ, ತನ್ನನ್ನೇ ತಾನು ಪ್ರಸ್ತುತ
ಪಡಿಸಿಕೊಳ್ಳುವ ಚಾಣಾಕ್ಷತೆ,ಅದಕ್ಕೆ ಬೇಕಾಗಬಹುದಾದ ಕೌಶಲ್ಯ ಅಥವಾ ಮನಸ್ಸು ಇರದಿರುವಿಕೆಯ ಸಾಧ್ಯತೆಯ ಅಭಾವ ಕಾರಣವಾಗಿರಬಹುದು...ಸ್ವಂತಕ್ಕೆ ಟಾಂಟಾಂ ಬೇಕಿಲ್ಲದಿರಬಹುದು...ತನ್ನ ಪಾಡಿಗೆ ತಾನೇ ಏನನ್ನೋ ಮಾಡಿಕೊಂಡಿರುವ  ಹಂಬಲದವರಿರಬಹುದು...ಹೀಗಾಗಿ ಉಳಿದವರ ಗಮನಕ್ಕೆ ಬರುವದು ತಡವಾಗಬಹುದು...ಜನರೂ ತಲೆಗೆ ವಿಚಾರಮಾಡಲು ಹಚ್ಚುವದಕ್ಕಿಂತ, ಹೃದಯ ಹಚ್ಚಗೆ,ಬೆಚ್ಚಗಿರುವ post ಗಳ ಪರವಾಗಿರಬಹುದು..
ಒಬ್ಬರ ಆಹಾರ ಬೇರೊಬ್ಬರಿಗೆ ವಿಷವಾಗವ ಸಾಧ್ಯತೆಯನ್ನೂ ಅಲ್ಲಗಳೆಯುಂತಿಲ್ಲ...ಕೆಲ.   ‌‌  ಓದುಗರು ಓದದೇ like ಒತ್ತುವಂತೆ,ಕೆಲವುಸಲ ನಿಯಮಿತವಾಗಿ ಓದುವವರು ವಿಷಯಕ್ಕೆ ಮಹತ್ವಕೊಡುವವರಾಗಿದ್ದರೆ ಎರಡುಸಲ ಓದಿದರೂ  likes ಗಳಿಗೆ ಗಮನಕೊಡದಿರಬಹುದು...
     ‌‌‌‌              ಬರೆಯುವವರಿಗೆ ಇಂಥ ವಿಷಯಗಳ ಸೂಕ್ಷ್ಮತೆ ಅರಿವಿರಬೇಕು..
ಇಲ್ಲದಿದ್ದರೆ ತಮ್ಮನ್ನು ಇತರರೊಂದಿಗೆ ಹೋಲಿಸಿಕೊಂಡು ಮಾನಸಿಕ ಒತ್ತಡ ಅನುಭವಿಸುತ್ತಾರೆ ಎಂಬುದು Adam mosseri ಯವರ ಅನಿಸಿಕೆ..ಇದೇ ಪ್ರವೃತ್ತಿ ಮುಂದುವರೆದರೆ ಮಾರ್ಕೆಂಟಿಂಗ್ / sale ವಿಭಾಗದ ಮೇಲೂ ಇದು ನಕಾರಾತ್ಮಕ ಪರಿಣಾಮ ಬೀರಬಹುದು..ಕಾರಣ likes/ dislikes ಗೊಡವೆಯನ್ನೇ ಕಿತ್ತು ಹಾಕುವ ಯೋಚನೆ ನಡೆದಿದೆ ಎಂಬುದು ಸುದ್ದಿ ಸಂಕ್ಷೇಪ...
                 ಇದರ ಸತ್ಯಾಸತ್ಯತೆ ಏನೇ ಇರಲಿ, ಬದುಕಿನ likes,/dislikes ಳ ಬಗ್ಗೆಯೂ ಈ ನಿಲುವು ಅತ್ಯುತ್ತಮ ಅನಿಸುತ್ತದೆ ನನಗೆ....ಒಬ್ಬರ ಬಗೆಗಿನ ಇನ್ನೊಬ್ಬರ ಅನಿಸಿಕೆ ಸಂಪೂರ್ಣ ವೈಯಕ್ತಿಕ ನೆಲೆಗಟ್ಟಿನಲ್ಲಿ ಬೇರೆಯಾಗಿ ಇರುವದೇ ಹೆಚ್ಚು...ಆದರೆ ಸಮೂಹ ಸನ್ನಿ ಒಮ್ಮೆ ಏರಿತೋ  ಅದು ಪ್ರಳಯಾಂತಕ...ಜಗನ್ಮಾನ್ಯರಾದ ಅನೇಕ  ಮಹಾನುಭಾವರನ್ನು ಅತ್ಯಂತ ಹೀನಾಯವಾಗಿ ಈ ಜಗತ್ತು ನಡೆಸಿಕೊಂಡಿದೆ..ಗಾಂಧೀಜಿ/ ಇಂದಿರಾಜಿಗೆ ಗುಂಡು,ರಾಜೀವ ಗಾಂಧಿಯವರಿಗೆ ಬಾಂಬ್  ಸ್ಫೋಟ, ಸಾಕ್ರೆಟಿಸ್ ಗೆ ವಿಷಪ್ರಾಸನ, ಜೋನ್ ಆಪ್ ಆರ್ಕ ಇವಳಿಗೆ ಜೀವಂತ ದಹನದ ಶಿಕ್ಷೆ,ಏಸುವನ್ನು ಶಿಲುಬೆಗೇರಿಸಿದ್ದು _ ಇವೆಲ್ಲ ಜನಸಮೂಹದ ' ಸನ್ನಿಯ'
ಪರಿಣಾಮಗಳೇ... ಕಾರಣ  ವಿಶ್ವ ಪರಿಸರಕ್ಕೆ ಕೊಡುವ ಗಮನ,ಮಾನ್ಯತೆಯನ್ನು ಮನುಷ್ಯನ  ಮಾನಸಿಕ ಪರಿಸರಕ್ಕೂ ಅನ್ವಯ ಇರಬೇಕಾದ ಅನಿವಾರ್ಯತೆ ಬಹುಶಃ  ಈ ಕಾಲದಲ್ಲಿ ಅತಿ ಹೆಚ್ಚಾಗಿದೆ...ಆ ನಿಟ್ಟಿನಲ್ಲಿ ಆ್ಯಡಮ್ ಮೆಸ್ಸೊರಿಯ ಈ ಪುಟ್ಟ ಹೆಜ್ಜೆ ಪ್ರಶಂಸಾರ್ಹ....

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...