ಹಾಗೇ ಸುಮ್ಮನೇ...
ಜಾನೇ ಕಹಾ ಗಯೇ ವೊ ದಿನ....
ಒಂದು ವಾರವಾಯಿತು ಮೂರೂ ಮಕ್ಕಳ ಮನೆಯಲ್ಲಿ ಹಬ್ಬದ ಸಡಗರ..ಪರೀಕ್ಷಾ ಫಲಿತಾಂಶ, admission ಗಲಾಟೆ,ಪುಸ್ತಕ ಖರೀದಿ...ಶಾಲೆಯ ಶಿಕ್ಷಕರೊಂದಿಗೆ ಪಾಲಕರ ಭೇಟಿ,ಅದೂ ಇದೂ shopping...ನನಗೆ ತಿಳಿದಂತೆ ನನ್ನ ಮಕ್ಕಳ ಮದುವೆಗೂ ಇಷ್ಟು tension ನಲ್ಲಿದ್ದೆ ಎಂಬಂತೆ ನೆನಪಿಲ್ಲ...ಬಹುಶಃ ಜವಾಬ್ದಾರಿಯನ್ನು ಇತರರಿಗೂ ಹಂಚಿಕೊಂಡ ಕಾರಣವಿರಬೇಕು...ಏಳುಗಂಟೆಯಿಂದ ಎಂಟರ ವರೆಗೆ ಎಲ್ಲರೂ ತಮ್ಮತಮ್ಮ ಶಾಲೆ,ಕಾಲೇಜು, ಆಫೀಸು ಎಂದು ಹೋದಮೇಲೇಯೇ ಮನೆ ಹೆಚ್ಚುಕಡಿಮೆ ಖಾಲಿಯಾದಂತೆ...ಒಂದರ್ಧ ಗಂಟೆ ಸಾಡೇದ ಮನೆಯಿದ್ದ ಹಾಗೇ...ಉಶ್ಶಪ್ಪಾ ಎಂದು
ಆರಾಮಾಗಿ ಸಿಗುವ ಕೆಲ ಗಳಿಗೆಗಳನ್ನು ಆನಂದಿಸಿದ ಮೇಲೆ ಮಧ್ಯಂತರ ನಂತರದ ಶೋ...ಇದು ದೊಡ್ಡ class ನ ಮಕ್ಕಳಿದ್ದರೆ ಮಾತ್ರ ಎಂಬ ಭ್ರಮೆ ಖಂಡಿತ ಬೇಡ..ನರ್ಸರಿ,ಎಲ್ಲ K.G classಗಳು,day careಗಳು,baby sitting ಮಕ್ಕಳು , ನೌಕರಿಗೆ ಹೋಗುವ daddy/ mummy ಗಳು ಇವರೆಲ್ಲರದ್ದೂ ಕುಣಿತ... ಕುಳಿತು ನೋಡುವವರಿಗೂ ಒಂಥರ ಒತ್ತಡ...ಮಾತಿಗೆಲ್ಲಿದೆ ಪುರಸೊತ್ತು? ಹಾ,ಹೂ,ಹಿಡಿ,ತೊಗೋ,ಹೊರಡು,ರೆಡಿನಾ? ಬಂದೆ...ಎಷ್ಟೊತ್ತು? ಲಗೂಲಗೂ, ಇಂಥವೇ ಆಣತಿಗಳು.. ಉದ್ಗಾರಗಳು..warning ಗಳು...ಧಡಧಡ ಹೆಜ್ಜೆಗಳು..ಬೂಟಿನ ಸಪ್ಪಳ...ಕಾರು ಸರಿದು ಹೋದ ಸದ್ದು....
ಇಂಥದೆಲ್ಲ ಏನೇನೋ ನೋಡಿದಾಗ ನಾವು ಶಾಲೆಗೆ ಹೋಗುವ ಹಂತ ನೆನಸಿಯೇ "ನಗೆಯು ಬರುತಿದೆ ಎನಗೆ" ಹಾಡು ಹುಟ್ಟಿರಬೇಕು ಅನಿಸುತ್ತದೆ...ಪ್ರತಿಯೊಬ್ಬರ ಮನೆಯಲ್ಲೂ
ಎಂಟು ಹತ್ತು ಮಕ್ಕಳು...ಹೋದವರು ಹೋದರು..ಬಿಟ್ಟವರು ಬಿಟ್ಟರು...ಮನೆಯಲ್ಲಿ ಹಿರಿಯಣ್ಣ,ಹಿರಿಯಕ್ಕ ಇಲ್ಲ ಅಂದರೆ ಮಾತ್ರ ಹೊಸ ಉಡುಪು ಖರೀದಿ..ಇದ್ದರೆ ಕೊನೆಯವರು ಮುಗಿಯುವವರೆಗೆ ಅದನ್ನು ಹಿಗ್ಗಿಸಿ ,ಕುಗ್ಗಿಸಿ ಅಂತೂ ಹೊಂದಿಸಿ ಹಾಕುವದು..
ಪರೀಕ್ಷೆಗೆ ಮೊದಲೇ ಮೇಲಿನ class ನವರ ಪುಸ್ತಕಗಳು ಬೇಕು ಎಂದು ಹೇಳಿಟ್ಟಿರಬೇಕು...second hand..
ಅರ್ಧ ಬೆಲೆಗೆ...ರೂ ಇಪ್ಪತೈದು ಬೆಲೆ ಮೀರಿದ ನೆನಪೇಯಿಲ್ಲ...ಹಿಂದಿನ ವರ್ಷದ _notebooks ಗಳ ಖಾಲಿಹಾಳೆಗಳನ್ನು ಹರಿದು cover ಹಾಕಿ ಹೊಲಿದಿಟ್ಟುಕೊಳ್ಳಬೇಕಿತ್ತು..ಅವು ಮುಗಿದಮೇಲೆಯೇ ಹೊಸ ಖರೀದಿ...ಯಾವ ಕ್ಲಾಸ್?,ಅಭ್ಯಾಸ ಹೇಗೆ?marks ಎಷ್ಟು?ರ್ಯಾಂಕಗಳು ಬಂದವೇ? ಇಂಥ ಮಾತುಗಳು ಎಲ್ಲೋ ಒಬ್ಬಿಬ್ಬರ ಮನೆಯಲ್ಲಿ ನಡೆಯುತ್ತಿದ್ದವು...pass/ fail ಎರಡೇ ...ಆದರೆ ಆಗ ಮಕ್ಕಳೇ ಹೆಚ್ಚು ಚುರುಕು...ಆಟ,ಓಟ,ಹುಡುಗಾಟ,ಓಡಾಟ ಎಲ್ಲವನ್ನೂ ಸಾಂಗವಾಗಿ ನಡೆಸಿಕೊಂಡೂ ಚನ್ನಾಗಿ ಪಾಸಾಗುತ್ತಿದ್ದರು..ಫಲಿತಾಂಶ ದಿನಪತ್ರಿಕೆಯಲ್ಲಿ ಬರುತ್ತಿದ್ದ ಕಾಲ...ಯಾರೋ ಒಬ್ಬಿಬ್ಬರು ಹೋಗಿ ನೋಡಿ ಬರಕೊಂಡು ಬಂದು ಇತರರಿಗೆ ತಿಳಿಸುತ್ತಿದ್ದರು.ನನ್ನಣ್ಣ SSLC first class ನಲ್ಲಿ ಪಾಸಾದ್ದಕ್ಕೆ ಇಡೀ ಕೇರಿ
ಗೇ ಉಪ್ಪಿಟ್ಟಿನ ಪಾರ್ಟಿ ಕೊಟ್ಟದ್ದು ಈಗಲೂ ನೆನಪಿದೆ...ರೆಡಿಯೋ,ಟೀವಿ,ಸಿನೇಮಾ ದಂಥ ಆಕರ್ಷಣೆಗಳಿರಲಿಲ್ಲ..ರ್ಯಾಂಕ ,ಗ್ರೇಡ್,ಇವುಗಳ ಜಂಜಾಟವಿರಲಿಲ್ಲ...ಮಕ್ಕಳೂ ಸೀದಾ ಸಾದಾ ಶಾಲೆಗೆ ತಪ್ಪದೇ ಹೋಗುವದು,ಹೇಳಿದ್ದನ್ನು ಏಕಚಿತ್ತದಿಂದ ಕೇಳಿ,ಬರೆದು ಪರೀಕ್ಷೆ ಪಾಸಾಗುವದು ಅತಿ ಸಾಮಾನ್ಯ ವಿಷಯ...ಬಹುಶಃ ಕಡ್ಡಾಯ ಸಾಮೂಹಿಕ ಶಿಕ್ಷಣ ಪದ್ಧತಿ ಇರಲಿಲ್ಲವಾದ್ದರಿಂದ ಆಸಕ್ತಿ,ಯೋಗ್ಯತೆ,ಒಲವು ಇದ್ದವರೇ ಕಲಿಯುತ್ತಿದ್ದುದು ಕಾರಣವಿತ್ತೇನೋ ಎಂಬ ಅನಿಸಿಕೆ ನನ್ನದು..
ಆ ನಂತರ ನಮ್ಮ ಮಕ್ಕಳ ಸರದಿ ಬರುವಹೊತ್ತಿಗಾಗಲೇ ಸಾಕಷ್ಟು ಬದಲಾವಣೆಯಾಗಿತ್ತು .ಸಾಮೂಹಿಕ ಕಡ್ಡಾಯ ಶಿಕ್ಷಣದಿಂದಾಗಿ ಓದುವ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿತ್ತು..
ಪಾಲಕರಲ್ಲಿಯೂ awareness ಸಾಕಷ್ಟು ಬಂದು ಮಕ್ಕಳ ಕಡೆ ಹೆಚ್ಚು ಲಕ್ಷ್ಯ ಹಾಗೂ ಕಾಳಜಿ ಕಾಣತೊಡಗಿತ್ತು..ನಾವಿಬ್ಬರು..ನಮಗೆ ಇಬ್ಬರು...ಘೋಷಣೆಗಳು ಮಹತ್ವ ಪಡೆದುದರ ಕಾರಣದಿಂದ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿ ಆರ್ಥಿಕ ಸ್ಥಿತಿ ಗಣನೀಯವಾಗಿ ಸುಧಾರಿಸಿತ್ತು...ಶ್ರೇಣಿ,ರ್ಯಾಂಕಗಳ ಪರಿಕಲ್ಪನೆಯಿಂದಾಗಿ ಸ್ಪರ್ಧಾತ್ಮಕ ಮನೋಭಾವನೆ ಹೆಚ್ಚಾಗಿತ್ತು...ಆದರೂ ವಿದ್ಯಾರ್ಥಿಗಳು ಪಾಲಕರ ಮೇಲೆ ಅತಿಯಾಗಿ ಅವಲಂಬಿತವಾಗುತ್ತಿರಲಿಲ್ಲ..
ಬೇಕೆಂದಾಗ,ಬೇಕಾದಷ್ಟೇ ಪಾಲ್ಗೊಂಡು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಪಾಲಕರು ಶ್ರಮಿಸುವ ಹಂತದಲ್ಲಿತ್ತು..ಅವರಿಗೆ ಬೇಕಾಗುವ ಸಕಲ ಅನುಕೂಲ ಮಾಡಿಕೊಟ್ಟರೆ ಗೆಳೆಯರೊಡಗೂಡಿ ತಮ್ಮನ್ನು ತಾವು ನಿಭಾಯಿಸಿಕೊಳ್ಳುತ್ತಿದ್ದರು.
ಹಾಗೆ ನೋಡಿದರೆ ಅಷ್ಟುಹೊತ್ತಿಗಾಗಲೇ ಟಿವಿ
ಬಂದಿದ್ದರೂ ಖಾಸಗಿ ಚಾನೆಲ್ ಗಳ ಹಾವಳಿ ಇರಲಿಲ್ಲವಾಗಿ ಅದು ಈಗಿನಷ್ಟು ಗೀಳು ಎಂಬಂತಾಗಿರಲಿಲ್ಲ....ಮಕ್ಕಳು,ಕೆಲವರನ್ನು ಹೊರತುಪಡಿಸಿ, ವಿವೇಕದಿಂದ ಸ್ಪರ್ಧಾತ್ಮಕ ವಾತಾವರಣದಲ್ಲಿಯೂ ತಮ್ಮನೆಲೆ ತಾವು ಕಂಡುಕೊಂಡುದು ಕಾಲ ಮಹಿಮೆಯೇ ಸರಿ...
ಅದರ ಮುಂದಿನ ತಲೆಮಾರೇ ಇಂದಿನದು...software ಕ್ರಾಂತಿಯಿಂದಾಗಿ ಇಡಿ ವಿಶ್ವವೇ global village ಎಂದು ಗುರುತಿಸಿಕೊಂಡಾಗಿದೆ..ಮಕ್ಕಳ ಸಂಖ್ಯೆ ಬಹುತೇಕ ಒಂದಕ್ಕೇ ನೆಲೆನಿಂತು standard of living ಸಿಕ್ಕಾಪಟ್ಟೆ ಏರಿದೆ..ಅರ್ಧಕ್ಕಿಂತ ಹೆಚ್ಚುಜನ ವಿದೇಶವಾಸಿಗಳಾಗಿದ್ದಾರೆ..ಮಧ್ಯಮ ವರ್ಗ ಮೇಲ್ವರ್ಗವಾಗಿ ಬದಲಾವಣೆಯಾಗಿ ಜೀವನ ಮಟ್ಟ ಸುಧಾರಿಸಿದ್ದನ್ನು ಜನ ಹಾಗೂ ಜಗತ್ತು ಸರಿಯಾಗಿಯೇ ಬಳಸಿಕೊಂಡು ಸಹಜ ಜೀವನದಿಂದ ದೂರವಾಗಿ ಪಾಶ್ಚಾತ್ಯ ಜೀವನ ಶೈಲಿಗೆ ಹೆಚ್ಚು ಹತ್ತಿರವಾಗುತ್ತಿದ್ದಾರೆ ....ಮಕ್ಕಳಪಾಲನೆ ಪೋಷಣೆಯಲ್ಲಿ ಹಿಂದೆಂದೂ ಇಲ್ಲದ ವಿಪರೀತವೆನಿಸುವ ಕಾಳಜಿ ಹೆಚ್ಚುತ್ತಿದೆ...
ನಾಲ್ಕು ತಲೆಮಾರುಗಳಿಗೆ ಸಾಕ್ಷಿಯಾದ ನನಗೆ ಅವನ್ನೆಲ್ಲ ನೆನೆದಾಗ,ಹಳಹಳಿಸಬೇಕೋ...ಸಂಭ್ರಮಿಸಬೇಕೋ,ಕಾಲಾಯ ತಸ್ಮೈ ನಮಃ ಎಂದು ಶರಣಾಗಬೇಕೋ ತಿಳಿಯದಷ್ಟು ಗೊಂದಲ...
No comments:
Post a Comment