ಹಾಗೇ ಸುಮ್ಮನೇ..
MAN AND THE MACHINE...
ನನಗೆ ಚನ್ನಾಗಿ ನೆನಪಿದೆ, ಈ ಹೆಸರಿನದೊಂದು ಪಾಠ ಎಂಟನೇ ವರ್ಗದ ಇಂಗ್ಲಿಷ ಪಠ್ಯದಲ್ಲಿತ್ತು...ಇವೆರಡರ ನಡುವಿನ ಸಾಮ್ಯಗಳನ್ನು ಅನೇಕ ಉದಾಹರಣೆಗಳನ್ನು ಕೊಟ್ಟು ಮನುಷ್ಯನೂ ಒಂದು ಯಂತ್ರವೇ ಎಂದು
ಪ್ರತಿಪಾದಿಸಿದ ಪಾಠವದು...
ಮೆದುಳು- computer, ಕಣ್ಣು- camera, ಕೈಗಳು- levers, ಕಾಲುಗಳು,- wheels, ಹೊಟ್ಟೆ- ಪೆಟ್ರೋಲ್ tank, ಹೀಗೆ ಸಮಾನ ಅಂಶಗಳನ್ನು ವಿಶದವಾಗಿ ವಿವರಿಸಿ ಹೇಳಲಾಗಿತ್ತು..ಮನುಷ್ಯನ ಜೀವನಶೈಲಿ machine maintenance ಗೆ ಸಮ...ಚನ್ನಾಗಿ ಆರೋಗ್ಯಸೂತ್ರಗಳನ್ನು ಅನುಸರಿಸಿ ಬದುಕಿದರೆ ಶರೀರ ನಿರ್ವಹಣೆ ಅತ್ಯುತ್ತಮವಾದಂತೆ..
ಅದನ್ನು ಅಲಕ್ಷಿಸಿ ಯರ್ರಾ ಬಿರ್ರಿ ನಿರ್ವಹಣೆ, ಯಂತ್ರಗಳನ್ನು ಶೀಘ್ರ ಗರಾಜು ಸೇರಿಸುವಂತೆ, ದೇಹಾರೋಗ್ಯ ಕಡೆಗಣಿಸಿ ಬದುಕಿನ ಹಳಿ ತಪ್ಪಿಸಿಕೊಂಡರೆ ಅಂಥವರಿಗೆ ಆಸ್ಪತ್ರೆಯೇ ಗತಿ...ಒಂದು ವಾಹನವನ್ನು ಅದರ ಮಾಲಿಕನೊಬ್ಬನೇ ಸರಿಯಾಗಿ ನೋಡಿಕೊಂಡು ಓಡಿಸಿದರೆ/ servicing ಮಾಡಿಸುತ್ತಿದ್ದರೆ ಅದರ ಬಾಳಿಕೆ ಹೆಚ್ಚು...ಹೆಚ್ಚು ಹೆಚ್ಚು ಅವಧಿಯವರೆಗೆ ಅದು ನಿಮಗೆ ಸೇವೆ ಕೊಟ್ಟು ಒಂದು ತರಹದ attachment ಬೆಳೆಯುವಂತೆ ಮಾಡುವ ಸಾಧ್ಯತೆಯಿದೆ...ಅದೇ ರೀತಿ ನಮ್ಮ ಶರೀರವೂ ಒಂದು ರೀತಿಯಲ್ಲಿ ಅದೇ ತರಹದ ನಿರ್ವಹಣೆ ಬಯಸುತ್ತದೆ...' ಹಿತ ಭುಕ್..ಮಿತ ಭುಕ್' ಅಂದರೆ ಹಿತವಾದ ಮಿತವಾದ ಆಹಾರಸೇವನೆ
ಆರೋಗ್ಯವರ್ಧನೆಗೆ ಪೂರಕ.. ಸಹಾಯಕ...ಸಮಯ ಸಿಕ್ಕಾಗ ಕೈಲಾದಷ್ಟು ಯೋಗ/ ಪ್ರಾಣಾಯಾಮ/ walking ಗಳಂಥ ನಿಯಮಿತ ಚಟುವಟಿಕೆಗಳು , ಶಾಂತ,ಶುಭ್ರ ಮನಸ್ಥಿತಿ ದೇಹವೆಂಬ ಯಂತ್ರವನ್ನು ಸುರಕ್ಷಿತ, ಸುಭದ್ರ ಸ್ಥಿತಿಯಲ್ಲಿ ಉಳಿಸುತ್ತವೆ...ಪ್ರತಿಯೊಬ್ಬರೂ ತಮಗೆ ಸರಿಯನಿಸಿದ ರೀತಿಯಲ್ಲಿ ಗಾಡಿ ಓಡಿಸಿದರೆ ಅದಕ್ಕೆ ಆಗಬಹುದಾದ ಧಕ್ಕೆಗಳೇ
ಮನಬಂದಂತೆ ಬದುಕಿದರೆ
ಶರೀರಕ್ಕೂ ಆಗುವ ಸಾಧ್ಯತೆ ಹೆಚ್ಚು..
ಯಂತ್ರಗಳಿಗೆ ಗರಾಜು, ಮನುಷ್ಯನಿಗೆ ದವಾಖಾನೆಗಳು ...ಅಷ್ಟೇ ವ್ಯತ್ಯಾಸ...ಅವು ತಕ್ಕಮಟ್ಟಿಗೆ ಸಮಸ್ಯೆಗಳಿಗೆ ಪರಿಹಾರ ಕೊಡುತ್ತವೆ ನಿಜ...ಆದರೆ ಎಷ್ಟೇ ಪ್ರಯತ್ನಿಸಿದರೂ,ಎಷ್ಟೇ ಹಣ ಸುರಿದರೂ ಯಂತ್ರಗಳಗಲೀ,ಶರೀರವಾಗಲೀ ಒಮ್ಮೆ ಶಿಥಿಲಗೊಂಡರೆ ಪೂರ್ವ ಸ್ಥಿತಿಗೆ ಮರಳಲಾರವು...
ಮೇಲೆ ಹೇಳಿದ್ದಾವದೂ ಹೊಸದಿಲ್ಲ..ಯಾರಿಗೂ ತಿಳಿಯದ್ದಿಲ್ಲ...ಆದರೆ ಅವೂ ಸಹ ಎಲ್ಲ ಹಿತನುಡಿಗಳಂತೆ ಒಂದು ರೀತಿ ಒಗರು...ಕಹಿ...ಸುಲಭದಲ್ಲಿ ಪಚನವಾಗುವದಿಲ್ಲ...ಹೊಸ ಗಾಡಿಕೊಂಡವನಿಗೆ ಕಾಣುವದು ಮುಂದೆ ಚಾಚಿದ ಬ್ರಹತ್ ರಸ್ತೆಗಳು...ತಾನು plan ಮಾಡಿದ Ride ಗಳು...ತತ್ಷಣಕ್ಕೆ ರೋಡುಗಳ ಉಬ್ಬು ತಗ್ಗುಗಳಾಗಲೀ, rideಗೆ ಬೇಕಾದ ವೇಗವಾಗಲೀ ಮನಸ್ಸಿನಲ್ಲಿರುವದಿಲ್ಲ..ಬೇರೆಯವರ ಸೂಚನೆಗಳಿಗೂ ದಿವ್ಯ ನಿರ್ಲಕ್ಷ್ಯ.... ಹಾಗೆಯೇ ಹದಿಹರೆಯದ ಭರದಲ್ಲಿ ಯಾವುದೇ ಹಿತನುಡಿಗಳಿಗೆ NO ENTRY board..ಏನಾದರೊಂದು ಅಪಸವ್ಯ ನಡೆದಾಗಲೇ ಗಾಡಿಯ break fail ಆಗುವಂತೆ ,ಮನುಷ್ಯನೂ ಹತಾಶನೂ ಕಂಗಾಲೂ ಆಗುವದನ್ನು ಕಾಣುತ್ತೇವೆ..
ಇದೆಲ್ಲ ಆ MAN AND THE MACHINE ಪಾಠದಲ್ಲಿತ್ತು...ಅದನ್ನು ಮಕ್ಕಳಿಗೆ ಕಲಿಸುವಾಗ ನಾನೂ serious ಇರಲಿಲ್ಲ..ಅದು ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಕೆಲ marks ಗಳನ್ನು ಕೊಡಿಸುವ ಒಂದು ಪಾಠ/ chapter ಮಾತ್ರವಾಗಿತ್ತು...ಬದುಕಿನಲ್ಲಿ ಮುಂದುವರಿದಂತೆ ತಲೆಗೆ ಬಡಿದ ಅನುಭವಗಳ ತೂಕ ಎಷ್ಟಿದೆ ಅಂದರೆ ಈಗ ನಾನೆಂದೋ ಕಲಿಸಿದ ಪಾಠಗಳನ್ನು ಬದುಕು ನನಗೆ ಕಲಿಸುತ್ತಿದೆ ನಿರ್ದಾಕ್ಷಿಣ್ಯವಾಗಿ....ಹೌದು ಆದರೆ ತಡವಾಗಿ...
YESSSS! ಮಾನವ ಬರಿ ಮೂಳೆ,ಮಾಂಸದ ತಡಿಕೆ ಮಾತ್ರವಲ್ಲ... ದೇವ ನಿರ್ಮಿತ ಅತ್ಯದ್ಭುತ ಯಂತ್ರ...
No comments:
Post a Comment