ಕೇಳಿದ್ದೀರಾ?...ಧೂಳಿನ ಒಂದು ಪದರು ಕೆಳಗಿನ ಕಟ್ಟಿಗೆಯನ್ನು ಕಾಯುತ್ತದೆ.
'' HOUSE' ಒಂದು HOME ಅನಿಸಿಕೊಳ್ಳಲು ಅಲ್ಲಲ್ಲಿ I LOVE YOU, 'MY HOME 'ಅಂತ ಬರೆದಿರಬೇಕು. ಮೊದಲೆಲ್ಲ ನಾನು ಯಾರಾದರೂ ಆಕಸ್ಮಾತ್ ಮನೆಗೆ ಬಂದರೆ - ಎಂದು ವಾರದ ಕೊನೆಯ ಎಂಟಕ್ಕೂ ಮಿಕ್ಕಿ ಗಂಟೆಗಳನ್ನು ಮನೆಯನ್ನು ಅಚ್ಚುಕಟ್ಟಾಗಿ ಇರಿಸುವದರಲ್ಲೇ ಕಳೆಯುತ್ತಿದ್ದೆ... ಕೊನೆಗೆ ನನಗೆ ಅನಿಸಿದ್ದು,' ಯಾರೂ ಬರುವದಿಲ್ಲ..ಅವರೇನೂ ಹುಚ್ಚರಲ್ಲ. ಅವರೆಲ್ಲ ಮನೆಯಿಂದ ಹೊರಗೆ,WEEK END ಮಸ್ತಿಯಲ್ಲಿದ್ದಾರೆ....ಬದುಕನ್ನು ತೀವ್ರವಾಗಿ ಅನುಭವಿಸುವದಕ್ಕಾಗಿ"
ಈಗ ಅಕಸ್ಮಿಕವಾಗಿ ಮನೆಗೆಯಾರಾದರೂ ಬಂದರೆ ಅವರಿಗೆ ಮನೆಯ ಬಗ್ಗೆ ಏನೂ ವಿವರಣೆ ಕೊಡುವದಿಲ್ಲ.ಬಹಳಷ್ಟು ಜನರಿಗೆ ಅದರಲ್ಲಿ ಆಸಕ್ತಿಯೂ ಇರುವದಿಲ್ಲ..
ನಾನು ಹೇಗೆ ಸಮಯ ಕಳೆಯುತ್ತೇನೆ, ಏನು ಖರೀದಿಸಿದ್ದೇನೆ, ಎಲ್ಲೆಲ್ಲಿ ತಿರುಗಾಡಿದ್ದೇನೆ ಇದರಲ್ಲಿ ಕುತೂಹಲ ಜಾಸ್ತಿ... ಬದುಕು ತುಂಬಾ ಚಿಕ್ಕದು. ಅದನ್ನು ಇನ್ನಿಲ್ಲದಂತೆ ಆನಂದಿಸಿ..
ಅತಿ ಅವಶ್ಯವಿದ್ದರೆ ಆಗಾಗ ಮನೆಯನ್ನು ಚೊಕ್ಕಟಗೊಳಿಸಿ..ಆದರೆ ಅದನ್ನೇ ಖಂಡಿತ ತಲೆಗೇರಿಸಿಕೊಳ್ಳ ಬೇಡಿ. ಅದರ ಬದಲು ಆತ್ಮೀಯರಿಗೆ -
* ಚಂದದೊಂದು ಓಲೆ ಬರೆಯಿರಿ...
* ಪದ್ಯವೊಂದು ರಚಿಸಿ.
* ಯಾವುದೋ ಚಿತ್ರ ಬಿಡಿಸಿ...
* ಮಕ್ಕಳೊಂದಿಗೆ ಸಿಹಿತಿಂಡಿ ಮಾಡಿ. * ಒಂದೆರಡು ಗಿಡ ಬೆಳೆಸಿ...
' ಇದಾಗಬೇಕು' _ಮತ್ತು ಇದಾಗಲೇಬೇಕು_ ಗಳ ನಡುವಿನ ವ್ಯತ್ಯಾಸ ಅರಿಯಿರಿ...
' ಧೂಳು ಒರೆಸಿ...ಆದರೆ ಆ ಧೂಳು ನಿಮ್ಮ ಬದುಕಿಗೆ ಹಾರುವದು ಬೇಡ...
ಕಣ್ಬಿಟ್ಟು ನೋಡಿ...
*ಹೊರಗೆ ಸೂರ್ಯೋದಯ, ಸೂರ್ಯಾಸ್ತಗಳಿವೆ...
* ಕುಡಿಯಲು ಎಳೆನೀರಿನಂಥ ಪಾನೀಯಗಳಿವೆ...
* ಸ್ವಚ್ಛಂದವಾಗಿ ಕೂದಲನ್ನು ಗಾಳಿಯಲ್ಲಿ ಹಾರಲು ಬಿಟ್ಟು ನೀವೇ ನೀವಾಗುವ ನೂರಾರು ಅವಕಾಶಗಳಿವೆ.
*ಈಜಲು Poolಗಳಿವೆ.
* ಮನದಣಿಯೇ ನೀರಿನಲ್ಲಿ ತೊಯ್ದು ಸುಖಿಸಲು ಮಳೆ ಸೆಳಕುಗಳು, ಕಾರಂಜಿಗಳು ಇವೆ..
*ಕೇಳಲು ಸಂಗೀತ, ಓದಲು ಸಾಹಿತ್ಯ, ಬದುಕು ಸುಂದರಗೊಳಿಸುವ ಸ್ನೇಹಿತ ಬಳಗವಿರುತ್ತದೆ...
*ಬಂಧು ಬಾಂಧವರ ಕಿರಿ ಜಗತ್ತೊಂದು ಹಾಸಿಕೊಂಡಿದೆ..
ನೆನಪಿಡಿ...ಈ ಗಳಿಗೆಗಳು ಒಮ್ಮೆ ಕಳೆದುಕೊಂಡರೆ ಮತ್ತೆ ಮರಳಿ ಬರುವದಿಲ್ಲ..ವೃದ್ಧಾಪ್ಯ ಬರಲು ತಡವಾಗುವದಿಲ್ಲ...ಬಂದಾಗ ಅದು ತುಂಬಾ ತುಂಬಾ ನಿರ್ದಯಿ,ನಿಷ್ಕರುಣಿ. ಕಾರಣ ಧೂಳು ಹೊಡೆಯುತ್ತ ಮನೆ ಹಿಡಿಯಬೇಡಿ...ಸಾದ್ಧ್ಯವಾದಾಗಲೆಲ್ಲ ಅದಷ್ಟೂ ಬದುಕನ್ನು ಬಹುಮುಖವಾಗಿ ಬಹುಮೂಲ್ಯವೆಂಬಂತೆ ಕಳೆದು ಸುಖವಾಗಿರಿ..ಇತರರನ್ನೂ ಸುಖವಾಗಿಡಿ.
ಇಲ್ಲದಿದ್ದರೆ ಮನೆ ಚಂದಕಾಣುತ್ತದೆ ಆದರೆ ನಿಮ್ಮ ಬದುಕು ಧೂಳು ತಿನ್ನುತ್ತದೆ...
( ಪ್ರಾಚಿ ಮಿಸ್ತ್ರಿ_ ಇವರ ಇಂಗ್ಲಿಷಮೂಲ...ಅನುವಾದ ಕೃಷ್ಣಾ ಕೌಲಗಿ)
No comments:
Post a Comment