ಇದೂ ಒಂದು ರೀತಿಯ
ಪ್ರೀತಿಯೇ ಅಲ್ಲವೇ?
ಚಹವನ್ನು ತನ್ನೊಳಗೆ ತುಂಬಿ ಹಿಡಿದಿಟ್ಟುಕೊಳ್ಳುವ ಕಪ್ಪಿನದು...
ನಾಲ್ಕೂ ಕಾಲುಗಳನ್ನೂರಿ ಗಟ್ಟಿಯಾಗಿ ನಿಲ್ಲುವ, ನಿಲ್ಲಿಸುವ ಕುರ್ಚಿಯದು...
ಕಾಲ್ಬೆರಳುಗಳನ್ನೋ, ಬೂಟುಗಳ ತಳವನ್ನೋ ಕಚ್ಚಿ ಹಿಡಿಯುವ ನೆಲದ್ದು.
ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯುವ ಬೀರುಗಳೊಳಗಣ ಬಟ್ಟೆಗಳದ್ದು...
ಇಟ್ಟ ಬಟ್ಟಲಲ್ಲೇ ನಿಧಾನವಾಗಿ ಒಣಗುವ ಸೋಪಿನದು...
ಬೆನ್ನಿನ ತೇವವನ್ನು ನಿಧಾನವಾಗಿ ಹೀರುವ ಟಾವೆಲ್ಲಿನದು...
ಒಂದರ ಹಿಂದೆ ಇನ್ನೊಂದು ಆತುಕೊಂಡು
ಸರದಿ ನಿಲ್ಲುವ ಆ ಮೆಟ್ಟಿಲುಗಳದು...
ಅಖಂಡವಾಗಿ ತೆರೆದುನಿಂತು ಬದುಕು/ ಬವಣೆ ತೋರಿಸುತ್ತಲೇ ಇರುವ ಆ ಉದಾರ ಕಿಟಕಿಗಳದು???
ಸಾಮಾನ್ಯಕ್ಕಿಂತ ಸಾಮಾನ್ಯವಾಗಿರುವ
ಎಷ್ಟೊಂದು ಸಂಗತಿಗಳಿಗೆ - ಅಸಾಮಾನ್ಯ ತಾಳ್ಮೆಯಿದೆ ಎಂಬುದು
ನನಗೆ ಅಚ್ಚರಿಯೋ ಅಚ್ಚರಿ...
No comments:
Post a Comment