Thursday, 26 December 2024



 ಜಪಾನ್‌ನಲ್ಲಿ ಶಿಕ್ಷಕರ ದಿನಾಚರಣೆ ಇಲ್ಲ.

  ಒಂದು ದಿನ, ನಾನು ನನ್ನ ಜಪಾನಿನ ಸಹೋದ್ಯೋಗಿ, ಶಿಕ್ಷಕ ಯಮಮೋಟಾ ಅವರನ್ನು ಕೇಳಿದೆ:  "ಜಪಾನ್‌ನಲ್ಲಿ ನೀವು ಶಿಕ್ಷಕರ ದಿನವನ್ನು ಹೇಗೆ ಆಚರಿಸುತ್ತೀರಾ?" ಎಂದು.

ನನ್ನ ಪ್ರಶ್ನೆಯಿಂದ ಆಶ್ಚರ್ಯಗೊಂಡ ಅವರು ಉತ್ತರಿಸಿದರು: "ನಮಗೆ ಶಿಕ್ಷಕರ ದಿನವಿಲ್ಲ" ಎಂದರು.

 ಅವರ ಉತ್ತರವನ್ನು ಕೇಳಿದಾಗ, ನನಗೆ ಅವರನ್ನು ನಂಬಬೇಕೋ ಬೇಡವೋ ಎಂದು ಗೊತ್ತಾಗಲಿಲ್ಲ.

  ನನ್ನ ಮನಸ್ಸಿನಲ್ಲಿ ಒಂದು ಆಲೋಚನೆ ಹಾದುಹೋಯಿತು: "ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇಷ್ಟು ಮುಂದುವರಿದ ದೇಶವು, ಶಿಕ್ಷಕರು ಮತ್ತು ಅವರ ಕೆಲಸದ ಬಗ್ಗೆ ಏಕೆ ಅಗೌರವ ತೋರುತ್ತಿದೆ?" ಎಂದು.

 ಒಮ್ಮೆ, ಕೆಲಸದ ಮುಗಿದ ಅನಂತರ ಸಂಜೆ, ಯಮಮೋಟಾ ನನ್ನನ್ನು ಅವರ ಮನೆಗೆ ಆಹ್ವಾನಿಸಿದರು.  

ಅವರ ಮನೆ ದೂರ ಇದ್ದುದರಿಂದ ಮೆಟ್ರೋ ಹತ್ತಿದೆವು .  ಅದು ಸಂಜೆಯ ಪೀಕ್ ಅವರ್ ಆಗಿತ್ತು.  ಮೆಟ್ರೋ ರೈಲಿನಲ್ಲಿನ ವ್ಯಾಗನ್‌ಗಳು ತುಂಬಿ ತುಳುಕುತ್ತಿದ್ದವು.  ನಾನು ಓವರ್ಹೆಡ್ ರೈಲನ್ನು ಬಿಗಿಯಾಗಿ ಹಿಡಿದುಕೊಂಡು ನಿಲ್ಲಲು, ಜಾಗವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ. 

 ಇದ್ದಕ್ಕಿದ್ದಂತೆ, ನನ್ನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾದ ಹಿರಿಯ ವ್ಯಕ್ತಿ,  ನನಗೆ ತನ್ನ ಸ್ಥಾನವನ್ನು ನೀಡಿದರು.  

ವಯಸ್ಸಾದ ವ್ಯಕ್ತಿಯ ಈ ಗೌರವಾನ್ವಿತ ನಡವಳಿಕೆಯನ್ನು ಅರ್ಥಮಾಡಿಕೊಳ್ಳದೆ, ನಾನು ನಿರಾಕರಿಸಿದೆ.

 ಆದರೆ ಅವರು ನನ್ನನ್ನು ಕುಳಿತುಕೊಳ್ಳಲು ಒತ್ತಾಯಿಸಿದರು.  

ಅನಂತರ ನಾನು ಮೆಟ್ರೋದಿಂದ ಇಳಿದು ಹೊರಬಂದಾಗ, ಬಿಳಿಗಡ್ಡದ ಆ ಹಿರಿಯ ವ್ಯಕ್ತಿಯ ವರ್ತನೆಯ ಬಗ್ಗೆ ಯಮಮೋಟಾರನ್ನು ವಿವರಿಸಲು ಕೇಳಿದೆ. 

  ಯಮಮೋಟಾ ಮುಗುಳ್ನಗುತ್ತಾ ನಾನು ಧರಿಸಿದ್ದ ಟೀಚರ್‌ನ ಟ್ಯಾಗ್‌ನ ಕಡೆಗೆ ತೋರಿಸಿ ಹೇಳಿದರು :
 "ಆ ಹಿರಿಯ ವ್ಯಕ್ತಿ ನಿಮ್ಮ  ಬಳಿಯಲ್ಲಿರುವ,  ಶಿಕ್ಷಕರ ಟ್ಯಾಗ್ ಅನ್ನು ನೋಡಿದ್ದಾರೆ.  ನಿಮ್ಮ ಸ್ಥಾನಮಾನವನ್ನು ಅರಿತು ಗೌರವದ ಸಂಕೇತವಾಗಿ ತಾವು ಕುಳಿತಿರುವ ಸ್ಥಾನವನ್ನು ನಿಮಗೆ ನೀಡಿದ್ದಾರೆ' ಎಂದರು.

    ನಾನು ಮೊದಲ ಬಾರಿಗೆ ಜಪಾನಿಗೆ ಭೇಟಿ ನೀಡಿದ್ದರಿಂದ, ಖಾಲಿ ಕೈಗಳಿಂದ ಯಮಮೋಟಾರ ಮನೆಗೆ ಹೋಗುವುದು ನನಗೆ ಸರಿಯಲ್ಲವೆನಿಸಿತು.  ಆದ್ದರಿಂದ ಉಡುಗೊರೆಯನ್ನು ಖರೀದಿಸಲು ನಿರ್ಧರಿಸಿದೆ. 

 ನಾನು ಯಮಮೋಟಾ ಅವರೊಂದಿಗೆ ನನ್ನ ಉಡುಗೊರೆಯ ಆಲೋಚನೆಯನ್ನು ಹಂಚಿಕೊಂಡೆ. ಅವರು ನನ್ನ ಕಲ್ಪನೆಯನ್ನು ಬೆಂಬಲಿಸಿದರು. ಮತ್ತು "ಸ್ವಲ್ಪ ಮುಂದೆ ಶಿಕ್ಷಕರಿಗಾಗಿಯೇ ಒಂದು ಅಂಗಡಿ ಇದೆ.  ಅಲ್ಲಿ ಶಿಕ್ಷಕರು ಮಾತ್ರ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಖರೀದಿಸಬಹುದು" ಎಂದು ಹೇಳಿದರು.  

'ಶಿಕ್ಷಕರಿಗಾಗಿಯೇ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡುವ ಅಂಗಡಿಗಳಿವೆ' ಎಂದು ಯಮಮೋಟಾ ಹೇಳಿದಾಗ, ನನಗೆ ನನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಕೇಳಿದೆ
 "ಶಿಕ್ಷಕರಿಗಾಗಿಯೇ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಅಂಗಡಿಗಳಿವೆಯೇ?" ಎಂದೆ.

 ನನ್ನ ಮಾತುಗಳನ್ನು ದೃಢೀಕರಿಸುತ್ತಾ, ಯಮಮೋಟಾ ಹೇಳಿದರು: "ಜಪಾನ್‌ನಲ್ಲಿ ಬೋಧನೆಯು, ಅತ್ಯಂತ ಗೌರವಾನ್ವಿತ ವೃತ್ತಿಯಾಗಿದೆ. ಇಲ್ಲಿ ಶಿಕ್ಷಕ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿರುತ್ತಾನೆ.  ಶಿಕ್ಷಕರು ತಮ್ಮ ಅಂಗಡಿಗಳಿಗೆ ಬಂದಾಗ ಜಪಾನಿನ ವಾಣಿಜ್ಯೋದ್ಯಮಿಗಳು ತುಂಬಾ ಸಂತೋಷಪಡುತ್ತಾರೆ. ಅವರು ಅದನ್ನು ತಮ್ಮ ಗೌರವವೆಂದು ಪರಿಗಣಿಸುತ್ತಾರೆ" ಎಂದರು.

 ನಾನು ಜಪಾನ್‌ನಲ್ಲಿದ್ದಾಗ, ಶಿಕ್ಷಕರ ಬಗ್ಗೆ ಜಪಾನೀಯರಿಗೆ ಇರುವ, ಅಪಾರ  ಗೌರವವನ್ನು ನಾನು ಗಮನಿಸಿದ್ದೇನೆ.  

*ಮೆಟ್ರೋದಲ್ಲಿ ಅವರಿಗೆ ವಿಶೇಷ ಆಸನಗಳನ್ನು ನಿಗದಿಪಡಿಸಲಾಗಿದೆ.*

 *ಅವರಿಗಾಗಿ ವಿಶೇಷ ಅಂಗಡಿಗಳಿವೆ.*

ಅಲ್ಲಿ *ಶಿಕ್ಷಕರು ಯಾವುದೇ ರೀತಿಯ ಸಾರಿಗೆಗೆ, ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.*

 ಅದಕ್ಕಾಗಿಯೇ ಜಪಾನಿನಲ್ಲಿ ಶಿಕ್ಷಕರಿಗೆ ವಿಶೇಷ ದಿನದ ಅಗತ್ಯವಿಲ್ಲ.

*ಜಪಾನೀಯರ ಜೀವನದಲ್ಲಿ ಪ್ರತಿ ದಿನವೂ ಶಿಕ್ಷಕರ ದಿನ.* 

  

No comments:

Post a Comment

Smt. Veena Nayak  Flat no 402, 4th floor  Presidency Crown Court Apts, C.G.Kamath Road, Karagalapady, Mangalore 575003 Mobile: 7760774037