ಉಡಲು ಒಂದು ಸೀರೆಯಿಲ್ಲ...
ಈ ತಿಂಗಳು ಎರಡು ವಾರದಲ್ಲಿ
ಎರಡು ಕಾರ್ಯಕ್ರಮಗಳಿವೆ.ಬಿಡಲಾ ರದವು...ಇತ್ತೀಚೆಗೆ ನನ್ನದೇ ಕಾರಣಗಳಿ ಗಾಗಿ ಹೊರಗೆ ಹೋಗುವುದು ಕಡಿಮೆ ಮಾಡಿದ್ದೇನೆ.ಹೀಗಾಗಿ ಧಿಡೀರೆಂದು
ಹೊರ ಹೊರಡುವುದೆಂದರೆ ಆಗದ ಮಾತು...
ಆ ಕಾರಣಕ್ಕೆ ಉಡಬಹುದಾ
ದ ಸೀರೆಗಳ ಕಡೆಗೊಮ್ಮೆ ದೃಷ್ಟಿ ಹಾಯಿ ಸುವುದು ಅನಿವಾರ್ಯವಾಯಿತು. ಕೊನೆಗಳಿಗೆಯ ಗೊಂದಲ ತಪ್ಪಿಸುವು
ದಷ್ಟೇ ಉದ್ದೇಶ.
ಸರಿ, ಮೊದಲನೇಯದು ತೆಗೆದೆ.ಅಂಚು ದಪ್ಪ ಅನಿಸಿತು.ನಿರಿಗೆ ಗಳು ದಪ್ಪವಾಗಿ ಹೊಟ್ಟೆ ಉಬ್ಬು ಕಾಣಿ ಸಬಹುದು.ತೆಗೆದಿಟ್ಟೆ.ನಂತರದ್ದು ಹೆಚ್ಚು
ತಿಳುವೆನಿಸಿತು.ಮುಜುಗರವೆನಿಸಿ ಮೂಲೆ ಕಂಡಿತು.ಮೂರನೆಯದು ಅತಿ
ದಟ್ಟ ಬಣ್ಣ, ದೊಡ್ಡ ದೊಡ್ಡ ಹೂಗಳು. ಯಾರೋ ಕೊಟ್ಟದ್ದು.ಚನ್ನಾಗಿಯೇನೋ ಇದೆ.ಆದರೆ ನನಗೆ ಅಷ್ಟು ರೂಢಿಯಿಲ್ಲ.
ಆಮೇಲಿನದು ಸರಿಯಿದೆ ಎಂದು ಬಿಚ್ಚಿದೆ.ಜರಿಯ ಅಂಚು/ ಸೆರಗು... ಸಾದಾ ಭೇಟಿಗೆ ಇಷ್ಟು ಭರ್ಜರಿ ಕೂಡದು ಅನಿಸಬೇಕೆ? ಅನುಮಾನ ಕೆಟ್ಟದು.ಕೆಲಸ ಪುನಃ ಕೆಟ್ಟಿತು.dismiss
ಮಾಡಿದೆ.ಮುಂದಿನ ಸರದಿ ಕಂದು ಬಿಳಿ
ಬಣ್ಣ. ಹಳೆಯ look ಆಯಿತಾ?ಮತ್ತೆ
ತಲೆಯಲ್ಲಿ ಹುಳ...ಮನಸ್ಸು ಸರಿಯಿಲ್ಲ
ಎಂದಾದರೆ ತಲೆಯೂ ಸರಿ ಇರುವುದಿ ಲ್ಲ.Vice-versa ಕೂಡ ನಿಜ...ತಲೆ ಭರ್ತಾ ಕೂಡ ಮಾಡಲಾರದಷ್ಟು ಕೆಟ್ಟು
ಹೋಯ್ತು...It was not well begun.Hence not even half done...postponement was the only possible solution...
ಇನ್ನು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಾಯಿತು.ಮೂರು ತಾಸಿನ ಸಿನೆಮಾಕ್ಕೇ ಎರಡು/ ಮೂರು
Sequels ಇರುತ್ತವೆ.ಸೀರೆ ಆಯ್ಕೆಯ
ಮಹತ್ವದ ವಿಷಯಕ್ಕೆ ಇನ್ನೊಂದಾದರೂ
ಬೇಡವಾ?- ಎಂದು ನನ್ನನ್ನು ನಾನೇ
ಸಮರ್ಥಿಸಿಕೊಂಡೆ.' ಮೀಸೆ ಇಲ್ಲವಲ್ಲ- ಬಿದ್ದರೂ ಮಣ್ಣಾಗಲಿಲ್ಲ' ಎಂದು ಬೆನ್ನು ತಟ್ಟಿಕೊಳ್ಳೋಕೆ...
ಕೊನೆಗೆ ಅನಿಸಿದ್ದು-: ನಮ್ಮ ಬಗ್ಗೆ ನಾವು ಏನೆಲ್ಲ ಕೊಚ್ಗೊಳ್ತೇವೆ...
ಆದರೆ ನಿಜದಲ್ಲಿ ಒಂದು ದಿನ ಉಡೋ ಸೀರೆ ಆರಿಸೋಕೂ ಬಿಚ್ಚಿ ಬೆವರ್ತೇವೆ
ಯಾಕೇಂತ???!!!
No comments:
Post a Comment