ನಾನು ಹದಿನೆಂಟು ವರ್ಷದವಳಾ ಗುವವರೆಗೂ ರೆಡಿಯೋ ಪದ ಕೇಳಿ ಮಾತ್ರ ಗೊತ್ತಿತ್ತು.ಊರ ಹಬ್ಬ/ ಜಾತ್ರೆ/ ಸರ್ಕಸ್ ಟೆಂಟ್ ಬಂದಾಗಲೆಲ್ಲ ಗ್ರಾಮೋಫೋನ ರಿಕಾರ್ಡಿನ ಹಾಡುಗಳ
ಕಿರಿಚುವಿಕೆ ಕಿರಿಕಿರಿಯಾದದ್ದೇ ಹೆಚ್ಚು...
ಕಲಿಯಲೆಂದು ಧಾರವಾಡಕ್ಕೆ ಬಂದಾಗ
ಮಾಲಿಕರ ಮನೆಯಲ್ಲಿ Kreft ರೆಡಿಯೋ ಮೊದಲ ಬಾರಿ ನೋಡಿದೆ.ಅವರ ಮಗಳು ನನಗಿಂತ ನಾಲ್ಕು ವರ್ಷ ಹಿರಿಯಳಾದ್ದರಿಂದಲೂ
ನಾನು ನನ್ನ ಪಾಡಿಗೆ ಬೆಳಿಗ್ಗೆ ಎದ್ದು ಕಾಲೇಜಿಗೆ ಹೋಗುತ್ತಿದ್ದರಿಂದ ಹಾಡು ಕೇಳುವುದು ಒಮ್ಮೆಲೇ ಚಟವೆಂದೇನೂ
ಆಗಲಿಲ್ಲ.ಆದರೆ ಸಾಯಂಕಾಲ ರಾತ್ರಿಯ ಹಾಡುಗಳು ಗಮನ ಸೆಳೆಯುತ್ತಿದ್ದವು.ರೇಡಿಯೋ ಅಟ್ಟದ ಮೇಲಿನ ರೂಮಿನಲ್ಲಿರುತ್ತಿದ್ದುದರಿಂದ ಸದ್ದಾಗದೇ ಮೆಟ್ಟಲ ಮೇಲೆ ಕುಳಿತು
ಒಮ್ಮೊಮ್ಮೆ ಕೇಳುತ್ತಿದ್ದೆ.ಆದರೆ ನನ್ನ ಆಯ್ಕೆಯವಲ್ಲ.ಅನಿವಾರ್ಯವಾಗಿ ಬರುತ್ತಿದ್ದುದನ್ನೇ ಕೇಳಬೇಕಿತ್ತು.ಮದುವೆ
ಯಾದ ಮೇಲೆ/ನಾದಿನಿಯೂ ಅತ್ತೆಮನೆಗೆ ಹೋದ ಕಾರಣಕ್ಕೆ ರೇಡಿಯೋ ಏನೋ ನನ್ನದಾಗಿತ್ತು. ಆದರೆ ಹೆಚ್ಚಿನ ಕಾರ್ಯಬಾಹುಲ್ಯದಿಂದ ಅಷ್ಟು ಹೊತ್ತಿಗೆ ಅದರ ಮೇಲಿನ
ಆಸಕ್ತಿ ಅಷ್ಟಾಗಿ ಉಳಿದುಕೊಳ್ಳಲಿಲ್ಲ.
ಮತ್ತೆ ನಮ್ಮ ನಂಟು ಸುರುವಾದದ್ದು ನಾನು ಶಿಕ್ಷಕಿಯಾದ ನಂತರವೇ.ನನಗೆ ಆಕಾಶವಾಣಿಯಲ್ಲಿ
ಕೆಲಸ ಮಾಡುವ ಅನೇಕರ ಪರಿಚಯ ವಿದ್ದದ್ದು/ನಾನು ಅದಾಗಲೇ ಅಷ್ಟಿಷ್ಟು
ಬರಹವನ್ನು ಸುರುಮಾಡಿದ್ದು ಕಾಕತಾಳೀಯವಾಗಿ ಕಾರ್ಯಕ್ರಮದ
Offers ಬರತೊಡಗಿದವು/ಆಸಕ್ತಿಯೂ ಇತ್ತು/ ಅವಶ್ಯಕತೆಯೂ ಇತ್ತು. ಅಷ್ಟರಲ್ಲಾಗಲೇ ಸಂಸಾರದ ಜವಾಬ್ದಾರಿ ನನ್ನೊಬ್ಬಳ ಮೇಲೇಯೇ
ಬಿದ್ದಾಗಿತ್ತು.ಆದಾಯಕ್ಕೂ/ಖರ್ಚಿಗೂ
ತಾಳೆ ಹೊಂದಿಸಲು ಎಂದು ಒಪ್ಪುತ್ತಿದ್ದ
ಕಾರ್ಯಕ್ರಮಗಳು ಬದುಕಿನ ಅನಿವಾರ್ಯ ಭಾಗಗಳಾಗತೊಡಗಿದ ವು. ಬೆಳಗಿನ ಚಿಂತನ/ ಗಿಳಿವಿಂಡು/ ಮಹಿಳಾರಂಗ/ ಶಾಲೆಯ ಪಠ್ಯಾಧಾರಿತ
ಎಲ್ಲ ಕಾರ್ಯಕ್ರಮಗಳು/ ಸ್ವರಚಿತ ಕವನಗಳ ಓದು- ಹೀಗೆ ಒಂದಿಲ್ಲೊಂದು
ಕಾರ್ಯಕ್ರಮವಿರುತ್ತಿದ್ದ ಕಾರಣಕ್ಕೆ ಆರ್ಥಿಕವಾಗಿಯೂ ಸಹಾಯವಾಗು ತ್ತಿದ್ದರಿಂದ ಮನೆಗೆಲಸ/ ಶಾಲಾ ಕೆಲಸ ಗಳು ಎಷ್ಟೇ ಇರಲಿ ಒಪ್ಪಂದಗಳನ್ನು
ತಪ್ಪಿಸುತ್ತಿರಲಿಲ್ಲ.
ಹೀಗಾಗಿ ಈ ರೆಡಿಯೋ ಕಾರ್ಯಕ್ರಮಗಳು ನನ್ನ ವೇಳೆಯ ಸದುಪಯೋಗ/ ಹೆಚ್ಚಿನ ಆದಾಯ/ ಬರಹದ ಆಸಕ್ತಿಯನ್ನು ನಿರಂತರವಾಗಿ
ಸಜೀವವಾಗಿಟ್ಟು ಆಗ ಕಾದದ್ದಲ್ಲದೇ
ಅದನ್ನು ನಿಯಮಿತಗೊಳಿಸಿ ಈಗ
ವೃದ್ಧಾಪ್ಯದಲ್ಲಿಯೂ ಸಹ ನನ್ನ ಸದಾಕಾಲದ ಸಂಗಾತಿಯನ್ನಾಗಿ ಉಳಿಸಿಕೊಂಡಿದೆ... ರಟ್ಟೀಹಳ್ಳಿಯಿಂದ ಧಾರವಾಡ/ ಧಾರವಾಡದಿಂದ ಬೆಂಗಳೂರು/ಆಗಾಗ ನಿರಂತರವಾಗಿ
ಎಲ್ಲಿ ಮಕ್ಕಳು ಕರೆಯುತ್ತರೋ ಅಲ್ಲಿಗೆ
ವಾಸ್ತವ್ಯ ಬದಲಾಯಿಸುತ್ತಲೇ ಹೋದರೂ ಎಲ್ಲಿಯೂ ' ನಾನು ಏಕಾಕಿ'- ಎನಿಸದಂತೆ ನನ್ನನ್ನು ಕಾದಿದೆ.
ಈಗಂತೂ ನಾನಾರೀತಿಯ ರೇಡಿಯೋ ಸರಕಾರದ ಪರವಾಗಿ/ಖಾಸಗಿಯಾಗಿ
ಅಸಂಖ್ಯಾತ ಚಾನೆಲ್ಗಳು ಲಭ್ಯವಿದ್ದು
ಸುಧಾರಿತ ಫೋನಗಳ ಆವಿಭಾಜ್ಯ
ಅಂಗಗಳಾಗಿ ಅಂಗೈ ನೆಲ್ಲಿಯಾಗಿವೆ...
ಈಗೆಷ್ಟು ಬಳಸುತ್ತೇವೆ ಅನ್ನುವದಕ್ಕಿಂತಲೂ ಅತಿ ಅವಶ್ಯಕತೆ ಇದ್ದಾಗ ನಮ್ಮನ್ನು ಅದು ಬೆಳಸಿದ ರೀತಿ / ನಮ್ಮ ವ್ಯಕ್ತಿತ್ವದ ಭಾಗವೇ ಆಗಿ
ನಮ್ಮೊಳಗೇನೇ ಇಳಿದು ಹೋದ ರೀತಿ
ಯೊಂದು ನಿಜಕ್ಕೂ ಅದ್ಭುತ.ಇದೊಂದು
ಕಾರಣಕ್ಕೆ ನಾನು ಆಕಾಶವಾಣಿಗೆ/ ರೆಡಿಯೋಗಳ ವಿವಿಧ ವಾಹಿನಿಗಳಿಗೆ
ಆ ಜೀವ ಋಣಿ...
No comments:
Post a Comment