ನಾನು ನನ್ನ ಪದವಿ ಹಾಗೂ ಪದವಿಯೋತ್ತರ ಪರೀಕ್ಷೆಗಳಲ್ಲಿ ಭಾಷೆಗಳನ್ನು ಅಭ್ಯಸಿಸಿದವಳು ಎಂಬ
ಕಾರಣಕ್ಕೋ ಏನೋ ಭಾಷೆಗಳ ಮೇಲೆ
ಅತೀವ ಪ್ರೇಮ...ನಮ್ಮನೆಯಲ್ಲಿ ಅಪ್ಪ
ನನ್ನು ಹಿಡಿದು ಎಲ್ಲರಿಗೂ ಪುಸ್ತಕ ಪ್ರೀತಿ
ಅತಿಯಾಗಿ ಇದ್ದ ಕಾರಣಕ್ಕೆ ಕೊಂಡೋ/
ಕೆಲವೊಮ್ಮೆ ಪುಸ್ತಕಗಳನ್ನು ಬೇರೆಯವರಿಂದ ಎರವಲು ಪಡೆದೋ ಓದಿನ ಗೀಳು ಹಚ್ಚಿಕೊಂಡವರು ನಾವೆಲ್ಲ... ಬರೆಯುವ ಸಾಮರ್ಥ್ಯ ವಿದ್ದರೂ ನನ್ನ ಮೊದಲ ತಂಗಿಯನ್ನು ಬಿಟ್ಟು,ಯಾಕೋ ಬೇರೆ ಯಾರೂ ಆ ಕಡೆ ಒಲವು ತೋರಿಸಿರಲಿಲ್ಲ.ನಾನು ಮಾತ್ರ ಶಿಕ್ಷಕಿಯಾದ ವೇಳೆಯಲ್ಲಿ ಆಕಾಶವಾಣಿ ಧಾರವಾಡದಲ್ಲಿ ಹೆಚ್ಚು ಕಡಿಮೆ ಎಲ್ಲ ವಿಭಾಗಗಳಿಗೂ ಕಾರ್ಯಕ್ರಮಗಳನ್ನು ಸತತವಾಗಿ ಕೊಡುತ್ತಿದ್ದೆ.ಕಾರಣ ಅದಕ್ಕೆ ಸಿಗುತ್ತಿದ್ದ ಹೆಚ್ಚಿನ ಆದಾಯ ಹಾಗೂ single parent ಆಗಿ ಮೈಮೇಲೆ ಬಿದ್ದ ಮೂರು ಮಕ್ಕಳ ಜವಾಬ್ದಾರಿಗೊಂದು ಆಧಾರ ವಾದೀತೆಂದು...ಅದು ಒಂದು ಸತತ ಅಭ್ಯಾಸವಾಗಿ ಬದಲಾದದ್ದು- ನಾನು ವೃತ್ತಿಯಿಂದ retire ಆಗಿ/ ಮಕ್ಕಳೆಲ್ಲ ಬದುಕಿನಲ್ಲಿ Settle ಆದಮೇಲೆಯೇ...
ಆಗಲೇ Android phone ನ ಬಳಕೆ ಹೆಚ್ಚಾದ ಕಾರಣ face book ನ ಪರಿಚಯವಾಗಿ ಹೆಚ್ಚು ಸುಲಭವಾಗಿ ಟೈಪಿಸಲು ಕಲಿತದ್ದು, ಹುರುಪಿಗೆದ್ದು ದಿನಾಲೂ ಅದು- ಇದು ಎಂದುಕೊಂಡು ಬರೆಯುತ್ತಲೇ ಹೋದದ್ದು, ಒಂದು ಪುಸ್ತಕವಾಗುವಷ್ಟು ಸರಕು ತಯಾರಾದಾಗ ವಾಶಿಂಗ್ಟನ್ ಡಿಸಿ ಯ
ಪ್ರಸಿದ್ಧ ಅಂಕಣಕಾರರಾದ ಶ್ರೀವತ್ಸ ಜೋಶಿಯವರ ವಿಶೇಷ ಸಹಕಾರದಿಂದ ನನ್ನ ಮೊದಲ ಕೃತಿ 'ನೀರ ಮೇಲೆ ಅಲೆಯ ಉಂಗುರ'- ಪ್ರಕಟಗೊಂಡದ್ದು ಎಲ್ಲವೂ ಇದೀಗ ಇತಿಹಾಸ...
ಆದರೂ ಮತ್ತೊಮ್ಮೆ ಹೇಳುತ್ತೇನೆ, ನಾನು ಸಾಹಿತಿಯಲ್ಲ, ಸಾಹಿತ್ಯ ಪ್ರೇಮಿ.ಓದಿನ ಹುಚ್ಚು ನನ್ನನ್ನಿಲ್ಲಿಯವರೆಗೂ ಕರೆದುಕೊಂಡು ಬಂದದ್ದು.ನನ್ನ ಲೇಖನಗಳೂ ಸಹ ಕುಟುಂಬ - ಸಮಾಜ- ಪರಿಸರ-ದಿನ ನಿತ್ಯದ ಆಗು ಹೋಗುಗಳ ಸುತ್ತಲೇ ಗಿರಕಿ ಹೊಡೆಯುತ್ತವೆ.ಒಬ್ಬರ ಅನುಭವ ' ಆ ಒಬ್ಬರದೇ ಆಗಬೇಕಿಲ್ಲ'- ಎಂಬ ಕಾರಣಕ್ಕೆ ಹಲವರಿಗೆ ತಮ್ಮವೂ ಆಗಿ ಬಿಡುತ್ತವೆ.'ಸಹಿ ಹಾಕಿದರೆ ನನ್ನದೇ'. 'ಇದು ನನ್ನದೂ ಅನುಭವ', 'ಹೌದು, ಇದನ್ನು ನಾವೂ ಬದುಕಿನಲ್ಲಿ ಅನುಭವಿಸಿದ್ದೇವೆ'- ಎನ್ನುವವರ ಅನುಮೋದನೆ ನನ್ನಿಂದ ಮತ್ತೆ ಮತ್ತೆ
ಹೆಚ್ಚು ಹೆಚ್ಚು ಬರೆಸುತ್ತದೆ.ಅತಿ ವಾದ- ವಿವಾದಗಳ, ಹೆಚ್ಚು ನಿಖರ ಮಾಹಿತಿ ಗಳನ್ನು ಬೇಡುವ, ಒಂದು ವಿಷಯಕ್ಕೆ
ಹಲವಾರು ಆಯಾಮಗಳಿರುವ, ಉಪದೇಶದ ಧಾಟಿಯ ಬರಹಗಳ
ಗೋಜಿಗೆ ನಾನು ಹೋಗುವುದಿಲ್ಲ. ನನ್ನದೇ ಅನುಭವಕ್ಕೆ ಬಂದ,ಅದು ಇನ್ನುಳಿದವರದೂ ಆಗುವಂಥ social
Canvas ಹೊಂದಿದ ವಿಷಯಗಳಲ್ಲಿ
ನನಗೆ ಆಸಕ್ತಿ. ಅದಕ್ಕೆಂದೇ ಯಾವಾಗಲೂ ನನ್ನ ಬರಹಗಳಿಗೆ Chat centre ಎನ್ನುವುದುಂಟು ನಾನು. ಯಾವಾಗೆಂದರೆ ಆವಾಗ, ಯಾರೆಂದರೆ ಅವರು, ಎಲ್ಲೆಂದರಲ್ಲಿ ರುಚಿ ನೋಡಬೇಕೆಂದಾಗ,ನೋಡಿ ಕೈ ತೊಳೆದು ಹೊರಟುಬಿಡಬಹುದು. ಅದಕ್ಕೂ ಹೆಚ್ಚಿನ ಸಾಮರ್ಥ್ಯ /ಜ್ಞಾನ/ವಿಷಯ ಸಂಗ್ರಹ/ ಬರೆಯುವ ತಾಳ್ಮೆ/ನನ್ನದು ಖಂಡಿತ ಅಲ್ಲ...
' ಹಾಯಿ ದೋಣಿಯ ಪಯಣ'
ನನ್ನ ಮೂರನೇ ಲಘು ಬರಹ ಸಂಗ್ರಹ.
ಬರಹಗಳ ಸಂಕಲನಕ್ಕೆ ಈ ಹೆಸರು ಕೊಟ್ಟುದಕ್ಕೂ ಕಾರಣವಿದೆ.ಬದುಕಿನ ಯಾನ ತುಂಬ ದೀರ್ಘ, ಕಷ್ಟಕರ... ಅದಕ್ಕೆ ಯಾವುದೂ ತರ್ಕಸಿದ್ಧಾಂತ ಸುಲಭ ಸಾಧ್ಯವಲ್ಲ.ಯಾವುದೋ ಅದೃಶ್ಯ ಶಕ್ತಿ ದಿಕ್ಸೂಚಿಯಾಗಿ ಬದುಕಿನ ಹಡಗಕ್ಕೆ ' ಹಾಯೀ ಪಟ(ಧ್ವಜ)ದ ಕೆಲಸ ಮಾಡುತ್ತದೆ.ಗಾಳಿಯೊಂದಿಗೆ ಸೇರಿ ದಡ ಮುಟ್ಟಿಸುತ್ತದೆ.ಕಡಲ ಏರಿಳಿತಗಳನ್ನು ಗುರುತಿಸುತ್ತದೆ.ಹಾಗೇ ಬದುಕು ಕೂಡ...ಅದರ ಅನೇಕ ಸಂಗತಿಗಳು ತರ್ಕಕ್ಕೆ ನಿಲುಕುವುದಿಲ್ಲ.
ದೈವ ಚಿತ್ತವೆಂದು ಬಂದುದಕ್ಕೆಲ್ಲ ಎದೆಯೊಡ್ಡುವುದು, ಪ್ರಸಾದದಂತೆ ಕೈಮುಗಿದು ಸ್ವೀಕರಿಸುವುದು ಮಾತ್ರ
ನಮಗಿದ್ದ ಸ್ವಾತಂತ್ರ್ಯ...
'ನೀರಮೇಲೆ ಅಲೆಯ ಉಂಗುರ' ' ತುಂತುರು ಇದು ನೀರ ಹಾಡು'- ಈ ಮೊದಲಿನವು... ನೀರಿನ ಚಲನಶೀಲತೆ/ನಿರಂತರ ಹರಿವು/ ಪಾತ್ರ/ ಆಕಾರಕ್ಕೆ ಸರಿ ಹೊಂದುಕೊಳ್ಳು ವ ಅದರ ಗುಣ ಸುಂದರ ಬದುಕಿಗೂ ಬೇಕಾಗುವ ಮೂಲಸತ್ವಗಳು. ಹೀಗಾಗಿ ನನ್ನ ಬರಹ ಸಂಕಲನಗಳಿಗೆ ' ನೀರು' ಅಮೃತಮಯವಾಗಿದೆ...ಅಗಲ- ಉದ್ದ- ಆಳಗಳನ್ನು ದೊರಕಿಸಿಕೊಟ್ಟಿದೆ. ನಿರಂತರವಾಗಿ ದಿನಕ್ಕೊಂದು ವಿಷಯ ದೊರಕುವಷ್ಟು ಸಮೃದ್ಧವಾಗಿದೆ. ಮುಖ್ಯವಾಗಿ ನನ್ನ ಅಳವಿಗೆ
( ಸಾಮರ್ಥ್ಯ)ಕ್ಕೆ ತಕ್ಕುದಾಗಿದೆ
ಎಂಬ ಬಲವಾದ ಅನಿಸಿಕೆ ನನ್ನದು...
ಮೊದಲಿನ ಎರಡು ಕೃತಿಗಳನ್ನು
ಹಾಗೂ ಐವತ್ತು ಇಂಗ್ಲಿಷ್ ಕವಿತೆಗಳ ಅನುವಾಧ ಪುಸ್ತಕ ' ಭಾವವೆಂಬ ಹೂವು ಅರಳಿ'-ಸ್ವಾಗತಿಸಿದಂತೆ ಇದನ್ನೂ ಓದಿ ಮೆಚ್ಚುವಿರೆಂಬ ಆಶಯದೊಂದಿಗೆ.
ನಿಮ್ಮ ಪ್ರೀತಿಯ,
ಶ್ರೀಮತಿ ಕೃಷ್ಣಾ ಕೌಲಗಿ...
'
No comments:
Post a Comment