ಹಾಗೇ ಸುಮ್ಮನೆ ಒಂದು ದೃಶ್ಯ ಕಲ್ಪಿಸಿಕೊಳ್ಳಿ..ಮೂರು ನೀರು ತುಂಬಿದ ಗಾಜಿನ ತೊಟ್ಟಿಗಳು..ಅವುಗಳಲ್ಲಿ ಅರ್ಧಕ್ಕೂ ಮಿಕ್ಕಿ ನೀರು ತುಂಬಿದೆ..ಮೂರೂ ತೊಟ್ಟಿಗಳಲ್ಲಿ ಹತ್ತು, ಹತ್ತು ಮೀನುಗಳು ಇವೆ.ಅವೆಲ್ಲವಕ್ಕೂ ವಿದ್ಯುತ್ ತಂತಿಗಳಿಂದ ವಿದ್ಯುತ್ ಹರಿಸಿ ತೀವೃ ಕಂಪನಗಳನ್ನು ಉಂಟು ಮಾಡಬಹುದು...
ಮೊದಲ ತೊಟ್ಟಿಯ ಮೀನುಗಳಿಗೆ ಸತತ ವಿದ್ಯುತ್ ಹರಿಸುತ್ತ ಸದಾ vibrations ಉಂಟು ಮಾಡಿ disturb ಮಾಡಲಾಗುತ್ತಿದೆ...
ಎರಡನೇ ತೊಟ್ಟಿಯ ಮೀನುಗಳಿಗೆ ಒಂದು ಗಂಟೆಯವರೆಗೆ ವಿದ್ಯುತ್ ಹರಿಸಿ ಮುಂದಿನ ಒಂದು ಗಂಟೆ ಬಿಡುವು..ಮತ್ತೆ ವಿದ್ಯುತ್...ಮತ್ತೆ gap...
ಮೂರನೇ ತೊಟ್ಟಿಯ ಮೀನುಗಳಿಗಿನ್ನೂ ಪ್ರಯೋಗ ಮಾಡಿಯೇಯಿಲ್ಲ... ಯಾವಾಗ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ...
ಈಗ ಹೇಳಿ..ಯಾವ ತೊಟ್ಟಿಯ ಮೀನುಗಳು ಅತಿ ಹೆಚ್ಚು ಒತ್ತಡಸ್ಥಿತಿಯಲ್ಲಿವೆ?
ಮೊದಲನೇಯ ತೊಟ್ಟಿಯ ಮೀನುಗಳು ಮೊದಮೊದಲಿಗೆ ಗಾಬರಿಯಾದರೂ ನಂತರ ಪರಿಸ್ಥಿತಿಗೆ ಹೊಂದಿಕೊಂಡು ' ಇದೇ ಜೀವನ ಇದರಿಂದ ಬಹುಶಃ ಬಿಡುಗಡೆ ಇಲ್ಲ' ಎಂಬ ನಿರ್ಧಾರಕ್ಕೆ ಬರುತ್ತವೆ...
ಎರಡನೆ ತೊಟ್ಟಿಯ ಮೀನುಗಳು,' "ಒಂದು ಗಂಟೆಯ ನಂತರ ಮತ್ತೆ ಒಂದು ಗಂಟೆಯಾದರೂ ನಿರಾಳ ವಾಗಿರ ಬಹುದು..ದೇವರೇ ಅಂದಾವು...
ಆದರೆ ಮೂರನೇ ತೊಟ್ಟಿಯ ಮೀನುಗಳದು ಅತಂತ್ರ ಸ್ಥಿತಿ,ತಮಗೂ ವಿದ್ಯುತ್ ಹಾಯಿಸಿ ಕಂಪನ ಉಂಟು ಮಾಡಬಹುದೇ? ಮಾಡಿದರೆ ಪ್ರಮಾಣ ಎಷ್ಟು? ಎಷ್ಟು ಹೊತ್ತಿನ ವರೆಗೆ? ಅದನ್ನು ನಾವು ತಾಳಿಕೊಳ್ಳಬಹುದೆ? ಸಹಿಸಲಾಗದಿದ್ದರೆ ನಮ್ಮ ನಡೆಯೇನು? ಏನೆಲ್ಲ ಪ್ರಶ್ನೆಗಳಿಂದಾಗಿ ಅವಕ್ಕೆ ಎಲ್ಲಿಲ್ಲದ ಮಾನಸಿಕ ಒತ್ತಡ....
ಬದುಕಿನಲ್ಲೂ ಥೇಟ್ ಹೀಗೆ....ಕಷ್ಟಗಳನ್ನು ನಿರಂತರವಾಗಿ ಒಂದರ ಮೇಲೆ ಒಂದು ಅನುಭವಿಸುತ್ತ ಬಂದವರು ಅದನ್ನು ಒಗ್ಗಿಸಿಕೊಂಡು ಬದುಕಿನ ಭಾಗವಾಗಿಸಿ ದಿನಗಳನ್ನು ದೂಡುತ್ತಿರುತ್ತಾರೆ...ಅವರದು ಮೊದಲ ತೊಟ್ಟಿ...
ಕಷ್ಟ ಸುಖ ಗಳೆರಡನ್ನೂ ಕಂಡವರು This also passes ಎಂಬ ಆಶಾಭಾವದೊಂದಿಗೆ ಒಳ್ಳೆಯ ದಿನಗಳ ನಿರೀಕ್ಷಣೆಯಲ್ಲಿ ಕಾಲವನ್ನು ಸಹ್ಯವಾಗಿಸಿಕೊಂಡು ದಿನಗಳನ್ನು ದೂಡುತ್ತಾರೆ...ಇವರದು ಎರಡನೇ ತೊಟ್ಟಿ...
"ಹಚ್ಚಗಿದ್ದಲ್ಲಿ ಮೇದು, ಬೆಚ್ಚಗಿದ್ದಲ್ಲಿ ಮಲಗಿ ತಮ್ಮ ಸುಖದ ಕಡೆಗೆ ಮಾತ್ರ ಲಕ್ಷಕೊಡುವ ,ಒಂದು ಗುಂಪು ಮೂರನೇ ತೊಟ್ಟಿಯದು..ಆದರೂ ಅವರಿಗೂ ಒಂದು ಅಭದ್ರತೆಯ ಭಾವ ಇದ್ದೇ ಇರುತ್ತದೆ..ದಕ್ಕಿದ ಸುಖ ಕಾಯಮ್ಮೇ,? ಇದನ್ನಾರೂ ಕಸಿಯುವದಿಲ್ಲ ತಾನೇ? ಒಂದು ವೇಳೆ ಏನಾದರೂ ಅನಾಹುತವಾದರೆ? ಎಂಬ ದುಗುಡ,ಒತ್ತಡ,ಅವರನ್ನೂ ನೆಮ್ಮದಿಯಾಗಿರಲು ಬಿಡದೇ ಒಂದು ವಿಲಕ್ಷಣ ಮಾನಸಿಕ ಒತ್ತಡವನ್ನುಂಡು ಮಾಡುತ್ತದೆ...ಇಂಥವರದು ಮೂರನೇ ತೊಟ್ಟಿ....
ಈಗ ನಿಮ್ಮ ತೊಟ್ಟಿ ನೀವು ಕಂಡುಕೊಳ್ಳಿ...
(ಹಿಂದೆ ಎಲ್ಲೋ ಕೇಳಿದ್ದು... ಎಲ್ಲಿ ನೆನಪಿಲ್ಲ...)
No comments:
Post a Comment