Friday, 31 August 2018

ಹಾಗೇ ಸುಮ್ಮನೇ....

               ಒಬ್ಬ ಬಾಲಕ ಹದಿಮೂರು ವರ್ಷದವನಾದಾಗ ಅವನ ತಂದೆ ಅವನ ಕೈಗೆ
ಒಂದು ಮಲಿನವಾದ ಬಟ್ಟೆ ಕೊಟ್ಟು ಹೇಗಾದರೂ ಅದನ್ನು ಮಾರಿ ರೂ,200/- ತರಲು ಹೇಳಿದ.ಆ
ಬಾಲಕ ಒಂದು ಗಂಟೆ ಸ್ವಚ್ಛ ಗೊಳಿಸಿ,ಇಸ್ತ್ರಿ ತೀಡಿ ಒಂದು plastic coverನಲ್ಲಿ pack ಮಾಡಿ ರೇಲ್ವೇ ನಿಲ್ದಾಣ ಬಳಿ ಒಂದೆರಡು ಗಂಟೆ ನಿಂತು ಆ ಬಟ್ಟೆಯನ್ನು ಎರಡುನೂರು ರೂಪಾಯಿಗೆ ಮಾರಿದ..
               ಮರುದಿನವೂ ಅವನ ತಂದೆ ಅಂತಹದೇ ಇನ್ನೊಂದು ಬಟ್ಟೆ ಕೊಟ್ಟು ರೂ,೫೦೦/- ತರಲು ಹೇಳಿದ...ಚತುರ ಮಗ ಅದನ್ನು ಸ್ವಚ್ಛ ಗೊಳಿಸಿ ತನ್ನೊಬ್ಬ ಬಣ್ಣಗಾರನ ಮಗನ ಸ್ನೇಹದ ಸಹಾಯದಿಂದ ಅದಕ್ಕೆ ಬಣ್ಣಹಾಕಿಸಿ ಕಲಾಕಾರನಾದ ಇನ್ನೊಬ್ಬ ಗೆಳೆಯನ
ಸಹಾಯದಿಂದ ಒಂದು ಅತ್ಯಂತ ಸುಂದರ ಚಿತ್ರ ಬಿಡಿಸಿ ಅದಕ್ಕೆ    ಬೇರೆಯೇ ರೂಪ ಕೊಟ್ಟಾಗ ಸಹಜವಾಗಿ ರೂ,೫೦೦ ಕ್ಕೆಮಾರಾಟವಾಯಿತು..
                      ಅವನ ತಂದೆಗೆ ಖುಶಿಯಾದರೂ ತೋರಗೊಡದೇ ಮೂರನೇ ದಿನವೂ ಅಂತಹದೇ ಇನ್ನೊಂದು ಬಟ್ಟೆ ಕೊಟ್ಟು ರೂ,೨೦೦೦/- ತರಲು ಹೇಳಿದ...ಅದು ಅಷ್ಟು ಸುಲಭವಲ್ಲ ಅಂದುಕೊಂಡ ಬಾಲಕ ಅರ್ಧ ದಿನಯೋಚನೆ ಮಾಡಿ film shootingನಲ್ಲಿ ಚಿಲ್ಲರೆ ಕೆಲಸ ಮಾಡಿಕೊಂಡಿದ್ದ ಗೆಳೆಯನೊಂದಿಗೆ shooting spot ಗೆ ಹೋಗಿ ತನ್ನ ನಡತೆ,ಮಾತುಗಳಿಂದ ನಾಯಕಿಯ ವಿಶ್ವಾಸಗಳಿಸಿ ಆ ಬಟ್ಟೆಯ ಮೇಲೆ ಅವಳ ಅಂದದ autograph  ಪಡೆದ.ನಂತರ ಅದನ್ನು ಇನ್ನಷ್ಟು ಅಂದಗೊಳಿಸಿ ಹರಾಜಿಗೆ ಹಾಕಿದ.ಬೆಲೆ ಏರುತ್ತ ಏರುತ್ತ    ರೂ,೧೦,೦೦೦ ಕ್ಕೆ ಏರಿದಾಗ ತಂದೆಗೆ ಹೇಳುವದೇನೂ ಉಳಿಯಲಿಲ್ಲ..
     ‌           " ಈ ಮೂರುದಿನಗಳಲ್ಲಿ ನೀನು ಏನನ್ನು ಕಲಿತೆ?"
   ‌‌‌             ‌‌‌‌  ಇದು ತಂದೆಯ ಪ್ರಶ್ನೆ ಮಗನಿಗೆ...
ಮಗ ಹೇಳಿದ..
      " ಉದ್ದೇಶವಿಲ್ಲದೇ ನನಗೆ ಈ ಕೆಲಸ ಹೇಳಿಲ್ಲ ಎಂಬುದು ತಿಳಿದಾಗ ಅದರ ಅನುಷ್ಠಾನವನ್ನೇ ಗುರಿಯಾಗಿಸಿ ಪ್ರಾಮಾಣಿಕ ಪ್ರಯತ್ನ  ಮಾಡಿದೆ..ಫಲಸಿಕ್ಕಿತು...ಎಂದ ಮಗ..
       ‌‌‌        ಹಾಗೆಯೇ ನಮ್ಮ ಬದುಕು ಕೂಡ...ಆ ದೇವರು ಒಂದು ಉದ್ದೇಶ ಇಟ್ಟುಕೊಂಡೇ ಎಲ್ಲರಿಗೂ ಒಂದು ಕಚ್ಚಾ ಬದುಕನ್ನು(ಒಂದು ಹಳೆಯ ಬಟ್ಟೆಯನ್ನು) ಕೊಟ್ಟಿರುತ್ತಾನೆ...ಅದನ್ನು ನಮ್ಮ ವಿವೇಕ ಬಳಸಿ, ಸಾಣೆ ಹಿಡಿದು ,ಹೊಳಪು ತರಿಸಿ,ಮೌಲ್ಯಹೆಚ್ಚಿಸಿಕೊಳ್ಳುವದು ನಮಗೆ ಬಿಟ್ಟ ವಿಷಯ..

( WhatsApp ಸಂದೇಶದ ಕನ್ನಡ ಅನುವಾದ )

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...