Monday, 27 August 2018

ಹಾಗೇ ಸುಮ್ಮನೇ.....

ರಾಜಕಾರಣ ನನ್ನ ಆಸಕ್ತಿಯ ವಿಷಯವಲ್ಲ...ಯಾವುದೇ ಪಕ್ಷದ ಅತಿಯಾದ ಅಭಿಮಾನವಿಲ್ಲ...ಅರ್ಹತೆಯುಳ್ಳ, ಜನಹಿತಪರವಾದ, ಸ್ವಾರ್ಥವಿದ್ದರೂ ಅದಕ್ಕೊಂದು ಮಿತಿಯುಳ್ಳ ಯಾವುದೇ ರಾಜಕಾರಣಿಯ ಬಗ್ಗೆ ಅಭಿಮಾನವಿದೆ..
ಹಾಗೆಯೇ ಭಿನ್ನ ಜನರಿದ್ದಲ್ಲಿ ಭಿನ್ನ ಅಭಿಪ್ರಾಯಗಳಿರುವದು ಸಹಜ ಎಂಬ ಅರಿವಿದೆ...ಅದನ್ನು ಪರಸ್ಪರ ಒಪ್ಪಿತವಾಗುವ ರೀತಿಯಲ್ಲಿ ರಚನಾತ್ಮಕವಾಗಿ ವಿರೋಧಿಸುವ ಇಲ್ಲವೇ ಅನುಮೋದಿಸುವ ಹಕ್ಕುಗಳ ಬಗೆಗೆ ಒಲವಿದೆ...ಬಹುಶಃ ನಾನು ಹೊಸದೇನನ್ನೂ ಹೇಳುತ್ತಿಲ್ಲ..ಎಲ್ಲ ಗೊತ್ತಿದ್ದದ್ದೆ ಎಂಬುದೂ ಮರೆತಿಲ್ಲ...
            ‌‌  ‌ನನ್ನ ಅಸಮಾಧಾನ ಈ ಭಿನ್ನಾಭಿಪ್ರಾಯವನ್ನು face book ನ post ಗಳಲ್ಲಿ ಕೆಲವರು ವ್ಯಕ್ತ ಪಡಿಸುವ ವಿಧಾನದ ಬಗ್ಗೆ..
ಒಬ್ಬ ವ್ಯಕ್ತಿಗೆ,ಒಂದು ಪಕ್ಷಕ್ಕೆ,ಒಂದು ideologyಗೆ ನಿಷ್ಠರಾಗಿರುವವರು ಖಂಡಿತ ತಮ್ಮ ಅಭಿಮಾನವನ್ನು ಜಾಹೀರು ಪಡಿಸಲಿ .ಆದರೆ ತಮ್ಮಗಾಗದ,ವ್ಯಕ್ತಿ,ಪಕ್ಷಗಳ ಬಗೆಗಿನ ಅಭಿಪ್ರಾಯಗಳನ್ನು ಒಂದು ನಾಗರಿಕ,ಸುಶಿಕ್ಷಿತ,ಯಾರಿಗೂ ಮುಜುಗರವಾಗದ ರೀತಿಯಲ್ಲಿ ಪ್ರತಿಪಾದಿಸುವದನ್ನು ನಾವೀಗ ಎಲ್ಲಿಯೂ ಕಾಣುವದಿಲ್ಲ..ಬಳಸುವ ಭಾಷೆಯಂತೂ ದೇವರಿಗೇ ಪ್ರೀತಿ...ಎಷ್ಟೋಸಲ ಇಂಥ ಅನುಯಾಯಿಗಳಿಂದಲೇ ಅವರ ವ್ಯಕ್ತಿಯ, ಪಕ್ಷದ ಮೌಲ್ಯಮಾಪನವಾಗುವ ಅಪಾಯವಿಲ್ಲದಿಲ್ಲ....ಎಷ್ಟೋಸಲ ಒಳಜಗಳಗಳು ತಾರಕಕ್ಕೇರಿ ಓದುಗರ ಸಹನೆಯ ಪರೀಕ್ಷೆಯಾಗುವದೂ ಉಂಟು..
            ‌ ‌  ‌  ‌    ನಮ್ಮ ಬರಹ,ಭಾಷೆ, ನಮ್ಮ ವ್ಯಕ್ತಿತ್ವದ ಕನ್ನಡಿ...ಯಾರದೋ ಅವಹೇಳನ ಅಂದುಕೊಂಡದ್ದು ನಮ್ಮದೇ ವ್ಯಕ್ತಿತ್ವಕ್ಕೆ ಹತ್ತಿದ ಗೆದ್ದಲು ಎಂದು ತಿಳಿಯುವ ಹೊತ್ತಿಗೆ ಆಗಬೇಕಾದ ಹಾನಿ ಆಗಿಹೋಗುವದೂ ಸಾಧ್ಯ..  
                   ಭಿನ್ನಾಭಿಪ್ರಾಯ ಬೇಕು.ಅದು ನಮ್ಮನ್ನು ಬೆಳೆಸುತ್ತದೆ,ಉಳಿಸುತ್ತದೆ.ನಮ್ಮ ನಿಲುವನ್ನೂ ಸಶಕ್ತಗೊಳಿಸುತ್ತದೆ.ಆದರೆ ಅದನ್ನು ಅಶ್ಲೀಲವಾಗಿ,ಅನಾಗರಿಕವಾಗಿ,ರೋಷ, ದ್ವೇಷಗಳಿಂದಲೇ ಪ್ರತಿಪಾದಿಸುವದನ್ನು post ಗಳಲ್ಲಿ ಕಂಡಾಗ ನೋವಾಗುತ್ತದೆ...ಎಲ್ಲಿ ತಪ್ಪುತ್ತಿದ್ದೇವೆ ಎಂದು ವಿಚಾರಿಸ ಹತ್ತುತ್ತದೆ.
                     ಕೆಲವೇಕ್ಷಣ ನಮ್ಮ ಉದ್ವಿಗ್ನತೆಯನ್ನು ಅಂಕಿತದಲ್ಲಿಟ್ಟು ಅಭಿಪ್ರಾಯ ವ್ಯಕ್ತ ಪಡಿಸಿದಲ್ಲಿ ಸ್ವಂತಕ್ಕೂ,ಇತರರಿಗೂ ಹಿತವೆನಿಸಬಹುದಲ್ಲವೇ...???
.

No comments:

Post a Comment

How to treat wet cough?

🟣 How to Treat Wet Cough (Productive Cough) A wet cough is a cough that produces mucus or phlegm. It is the body’s natural way of clearing ...