Monday, 27 August 2018

ಕರ್ಮಕಾಂಡ- ಹಣ್ಣುಹಣ್ಣು- ತಾಯಿಬೇರು-ಎಲೆಲೆ

ತಮ್ಮೆಲ್ಲ ಉತ್ಥಾನ - ಉಡಾನಗಳಿಗೆ
ತಾಯಿಬೇರೇ ಕಾರಣವೆಂದು
ಊರ್ಧ್ವ ಶಾಖೆಗಳಿಗೆ
ಯಾರು ತಿಳಿಹೇಳಬೇಕು???

ಏನೇ  ಹೇಗೇ ಹೇಳಿದರೂ
ಹಣ್ಣುಹಣ್ಣು ಮುದುಕ- ಮುದುಕಿಯರ
ವ್ಯರ್ಥಾಲಾಪದ labelಅಂಟಿಸಿದರೆ
ಸಹಿಸುವದಾದರೂ ಹೇಗೇ??

ಇದು ನಮ್ಮ ಕರ್ಮಕಾಂಡ
ನಾವೇ ಅನುಭವಿಸಬೇಕು ಎಂದುಕೊಂಡರೂ
ಮೈಯಲ್ಲಿ ಹರಿಯುವದು ರಕ್ತ ಅಂದಮೇಲೆ
ಭಾವನೆಗಳಿಗೆ ಅಂಕುಶ ಸಾಧ್ಯವೇ....????

ಎಲೆಲೆ ಭಾವನೆಗಳೇ,  
ಹಣ್ಣಾಗಿರುವ ದೇಹಗಳಲ್ಲಿಯೇ
 ಇಷ್ಟು ಮಿಡಿಯುವ ನೀವು

ಹದಿ- ಹೃದಯಗಳಲ್ಲೇಕೆ ಕಲ್ಲಾಗುತ್ತೀರಾ???

No comments:

Post a Comment

   ನನ್ನ ಕೊನೆಯ ಮೊಮ್ಮಗ foot ball ಆಟಗಾರ.ಏಳು ವರ್ಷಗಳಿಂದ ಸತತ ವಾಗಿ ವಿವಿಧ age group ನಡಿ ಆಡಿದ್ದಾನೆ.ಸಧ್ಯ ಶ್ರೀನಗರದಲ್ಲಿ  CBSC ಗುಂಪಿನ‌ captain ನಾಗಿ (Nati...